ನಟಿಯಾಗಿ ನೀನು ನ್ಯಾಷನಲ್ ಅವಾರ್ಡ್ ತಗೋಬೇಕಮ್ಮ- ಹೀಗಂತ ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಹಾರೈಸಿದ್ದುಯಾರಿಗೆ ಗೊತ್ತಾ?

ನಟ ರಾಮ್ ಕುಮಾರ್ ಪುತ್ರ ಧೀರೇನ್ ರಾಮ್ ಕುಮಾರ್ ಹೀರೋ ಆಗಿ ಎಂಟ್ರಿಯಾಗುತ್ತಿದ್ದಾರೆ. ಅದೇ ಕಾರಣಕ್ಕೀಗ ಜಯಣ್ಣ ಕಂಬೈನ್ಸ್ ನಿರ್ಮಾಣದ‌ ಅದ್ದೂರಿ ವೆಚ್ವದ ‘ಶಿವ 143 ‘ ಚಿತ್ರ ಚಂದನವನದಲ್ಲಿ ತೀವ್ರ ಕುತೂಹಲ ಹುಟ್ಟಿಸಿರೋದು ನಿಮಗೂ ಗೊತ್ತು. ಹಾಗಂತ ರಾಮ್‌ ಕುಮಾರ್‌ ಪುತ್ರಿ ಧನ್ಯಾ ರಾಮ್‌ ಕುಮಾರ್‌ ಅವರೇನು ಕಮ್ಮಿ ಇಲ್ಲ. ಈಗಾಗಲೇ ಮಾಡೆಲಿಂಗ್‌ ನಲ್ಲಿ ಮಿಂಚಿದವರು. ಈಗ ಅವರು ಕೂಡ” ನಿನ್ನ ಸನಿಹಕೆʼ ಹೆಸರಿನ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಎಂಟ್ರಿಯಾಗುತ್ತಿದ್ದಾರೆ.

ಈಗಾಗಲೇ ಆ ಚಿತ್ರದ ಚಿತ್ರೀಕರಣವು ಮುಗಿದಿದೆ. ಹಾಡುಗಳ ಮೂಲಕ ಈಗ ಸೋಷಲ್ ಮೀಡಿಯಾದಲ್ಲಿ ” ನಿನ್ನ ಸನಿಹಕೆʼ ಚಿತ್ರ ಸಖತ್ ಸದ್ದು ಮಾಡಿದೆ. ಈ ಚಿತ್ರದ ಮೂಲಕ ನಟಿಯಾಗಿ ಬೆಳ್ಳಿತೆರೆಗೆ ಗ್ರಾಂಡ್ ಎಂಟ್ರಿಯಾಗುತ್ತಿರುವ ಧನ್ಯಾ ರಾಮ್ ಕುಮಾರ್ ಮೇಲೆ ರಾಜ್‌ ಕುಟುಂಬ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದೆ. ತಮ್ಮ ಕುಟುಂಬದ ಮತ್ತೊಂದು ಕುಡಿ ಇದೇ ಮೊದಲು ನಾಯಕಿಯಾಗಿ ಎಂಟ್ರಿ ಆಗುತ್ತಿರುವುದು ಅವರಿಗೂ ಖುಷಿ ಇದೆ. ಧನ್ಯಾ ರಾಮ್‌ ಕುಮಾರ್‌ ನಾಯಕಿಯಾಗಿ ನಟಿಸಿರುವ .’ನಿನ್ನ ಸನಿಹಕೆ ‘ಚಿತ್ರದ ಪ್ರಮೊಷನ್ ಕಾರ್ಯಕ್ರಮವೊಂದರಲ್ಲಿ ನಟ ಹಾಗೂ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಶುಭ ಹಾರೈಸಿದ ರೀತಿಯೇ ವಿಶೇಷ ವಾಗಿತ್ತು.

‘ಧನ್ಯಾ ನಮ್ಮನೆ ಕುಡಿ. ಮಗಳೆ, ನಿನ್ನ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ.‌ ನಿನ್ನಮ್ಮ ಪೂರ್ಣಿಮಾ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ನೀನು ಕೂಡ ನಟಿಯಾಗಿ ನ್ಯಾಷನಲ್ ಅವಾರ್ಡ್ ತಗೊಬೇಕಮ್ಮ. ಅವಾರ್ಡ್ ಬಂದೇ ಬರುತ್ತೆ ಅನ್ನೋ‌ ನಂಬಿಕೆ ನಂಗಿದೆ. ಒಳ್ಳೆಯದಾಗಲಿ. ನಿಮ್ಮ ಸಿನಿಮಾ ದೊಡ್ಡ ಸಕ್ಸಸ್ ಕಾಣಲಿ’ ಅಂತ ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಶುಭ ಹಾರೈಸಿದರು. ಅವರಂತೆಯೇ ನಟ ಪುನೀತ್‌ ರಾಜ್‌ ಕುಮಾರ್‌ ಕೂಡ ಸೋಷಲ್‌ ಮೀಡಿಯಾದ ಲೈವ್‌ ನಲ್ಲಿ ಧನ್ಯಾ ರಾಮ್‌ ಕುಮಾರ್‌ ಅವರಿಗೆ ಶುಭ ಹಾರೈಸಿದರು.

ಕಲಾ ಕುಟುಂಬದಲ್ಲಿ ಹುಟ್ಟಿ ಬೆಳೆದ ಧನ್ಯ ರಾಮ್‌ ಕುಮಾರ್‌ ಅವರಿಗೆ ನಟಿಯಾಗಿ ಗುರುತಿಸಿಕೊಳ್ಳಲು ದೊಡ್ಡ ಅವಕಾಶವಿದೆ. ಅವರ ಸುತ್ತ ದೊಡ್ಡ ಕಲಾವಿದರ ಬಳಗವೇ ಇದೆ. ಹಾಗಂತ ಅದನ್ನೇ ನಂಬಿಕೊಂಡು ಧನ್ಯಾ ರಾಮ್‌ ಕುಮಾರ್‌ ನಟಿಯಾಗಲು ಹೊರಟಿಲ್ಲ. ನಟನೆ ಮೇಲೆ ದೊಡ್ಡ ಆಸಕ್ತಿ ಇಟ್ಟುಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ನಟನೆಯ ಎಲ್ಲಾ ಪಟ್ಟುಗಳನ್ನು ಕಲಿತುಕೊಂಡಿದ್ದಾರೆ. ಆ ಮೂಲಕವೇ ನಟಿಯಾಗಿ ಸಿನಿಮಾ ಪ್ರಪಂಚಕ್ಕೆ ಕಾಲಿಡುತ್ತಿದ್ದಾರೆ. ಅವರ ಮಾವಂದಿರು ನಿರೀಕ್ಷೆ ಮಾಡಿದಂತೆ ಧನ್ಯಾ ರಾಮ್‌ ಕುಮಾರ್‌ ಪ್ರಶಸ್ತಿ ಅರಸಿ ಬರುವಂತೆ ನಟಿಯಾಗಿ ಗುರುತಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವೂ ಇಲ್ಲ.

Related Posts

error: Content is protected !!