Categories
ಸಿನಿ ಸುದ್ದಿ

ದಾಖಲೆ ಸೃಷ್ಟಿಸುವುದು ಖಾತರಿ ಆಯಿತು ರಾಬರ್ಟ್‌- ಧೂಳ್ಳೆಬಿಸಲು ರೆಡಿಯಾದರು ಚಾಲೆಂಜಿಂಗ್‌ ಸ್ಟಾರ್‌

ಕನ್ನಡ ಚಿತ್ರರಂಗ ಈ ದಿನಕ್ಕಾಗಿ ಕಾಯುತ್ತಿತ್ತು. ಲಾಕ್‌ ಡೌನ್‌ ನಂತರ ಚಿತ್ರರಂಗಕ್ಕೆ ಮತ್ತೆ ಚೇತರಿಕೆ ಬರಬೇಕಾದರೆ ದರ್ಶನ್‌ ಅಭಿನಯದ ʼರಾಬರ್ಟ್‌ʼ ತೆರೆಗೆ ಬರಲೇಬೇಕು ಅಂತ ಅಭಿಮಾನಿಗಳು ಮಾತ್ರವಲ್ಲ, ಚಿತ್ರರಂಗ ಕೂಡ ಬಯಸಿತ್ತು. ಆ ಕ್ಷಣ ಈಗ ಬಂದೇ ಬಿಟ್ಟಿದೆ. ಕರ್ನಾಟಕದಲ್ಲಿ ದರ್ಶನ್‌ ಅಭಿಮಾನಿಗಳ ಅಬ್ಬರಕ್ಕೆ ಕೊರೋನಾ ಭಯ ಕಿತ್ತುಕೊಂಡು ಹಾರುವುದು ಗ್ಯಾರಂಟಿ ಆಗಿದೆ. ಲಾಕ್‌ ಡೌನ್‌ ನಂತರ ಮಾತ್ರವಲ್ಲ ಇದುವರೆಗಿನ ಚಿತ್ರ ರಂಗದ ದಾಖಲೆಯೇ ಮುರಿದು ಹೋಗುವ ಹಾಗೆ ದರ್ಶನ್‌ ಅಭಿನಯದ ʼ ರಾಬರ್ಟ್‌ʼ ಚಿತ್ರ ನಾಳೆ (ಮಾ.11) ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ.

ರಾಜ್ಯದಲ್ಲಿ ಒಟ್ಟು ಈ ಚಿತ್ರ 656 ಚಿತ್ರ ಮಂದಿರಗಳಲ್ಲಿ ಗ್ರಾಂಡ್‌ ಎಂಟ್ರಿ ಪಡೆಯುತ್ತಿದೆ. ಇನ್ನೊಂದು ದಾಖಲೆ ಎನ್ನುವ ಹಾಗೆ ನಾಳೆ ಬೆಳಗಿನ ಜಾವದಿಂದಲೇ ಸರಿ ಸುಮಾರು 50 ಕ್ಕೂ ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆ ಕಾಣುತ್ತಿರುವುದು ವಿಶೇಷ ಅಂತ ಚಿತ್ರ ತಂಡ ಹೇಳಿದೆ.

ಕೇರಳ, ದೆಹಲಿ, ತಮಿಳುನಾಡು ಸೇರಿದಂತೆ ಪ್ರಮುಖ ರಾಜ್ಯಗಳಲ್ಲೂ ʼರಾಬರ್ಟ್ʼ ದರ್ಶನ ಆಗಲಿದೆಯಂತೆ. ಈಗಾಗಲೇ ರಾಬರ್ಟ್‌ ಪ್ರೀ ರಿಲೀಸ್‌ ಮಾರ್ಕೆಟ್‌ ನಲ್ಲೂ ದಾಖಲೆ ಸೃಷ್ಟಿಸಿದೆ. ಟಿವಿ ರೈಟ್ಸ್‌ ಹಾಗೂ ಡಿಜಿಟಲ್‌ ರೈಟ್ಸ್‌ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಚಿತ್ರ ತಂಡದ ಮೂಲಗಳ ಪ್ರಕಾರ 100 ಕೋಟಿಗೆ ರಾಬರ್ಟ್‌ ಡಿಜಿಟಲ್‌ ರೈಟ್ಸ್‌ ಸೇಲ್‌ ಆಗಿದೆಯಂತೆ. ಹಾಗಾಗಿ ರಿಲೀಸ್‌ ಮುಂಚಿನಾ ಬಿಸಿನೆಸ್‌ ವಿಚಾರದಲ್ಲೂ ರಾಬರ್ಟ್‌ ದೊಡ್ಡ ಸುದ್ದಿಯಲ್ಲಿದೆ. ಅದರ ಜತೆಗೀಗ ಮೊದಲ ದಿನದ ಬಿಡುಗಡೆಯಲ್ಲೂ ʼರಾಬರ್ಟ್ʼ ಹೊಸ ದಾಖಲೆ ಸೃಷ್ಟಿಸಿದೆ.

ಚಿತ್ರ ತಂಡದ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ಕನ್ನಡ ಸಿನಿಮಾವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವುದು ಇದೇ ಮೊದಲು. ಇನ್ನೊಂದು ವಿಶೇಷ ಅಂದ್ರೆ “ಪೊಗರುʼ ಹಾಗೂ “ಹೀರೋʼ ಸಿನಿಮಾ ಪ್ರದರ್ಶನವಾಗುತ್ತಿದ್ದ ಹಲವು ಚಿತ್ರಮಂದಿರಗಳು “ರಾಬರ್ಟ್ʼ ಪಾಲಾಗಿವೆ. ಹಾಗೆಯೇ ಮೊದಲ ದಿನವೇ ಅತಿ ಹೆಚ್ಚು ಶೋ ಕಾಣುತ್ತಿದೆ ʼರಾಬರ್ಟ್‌ʼ ಚಿತ್ರ. ಚಿತ್ರ ತಂಡದ ಮೂಲಗಳ ಪ್ರಕಾರ 100 ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್‌ಗಳಲ್ಲಿ ರಾಬರ್ಟ್‌ ಸಿನಿಮಾ ರಿಲೀಸ್ ಆಗುತ್ತಿದೆ. ಮೊದಲ ದಿನ ಎಲ್ಲ ಚಿತ್ರಮಂದಿರಗಳಲ್ಲಿ ಸೇರಿ 2786 ಶೋಗಳು ರಾಬರ್ಟ್ ಸಿನಿಮಾ ಪ್ರದರ್ಶನ ಕಾಣಲಿದೆ. ಇದು ಸ್ಯಾಂಡಲ್‌ವುಡ್ ಪಾಲಿಗೆ ನೂತನ ದಾಖಲೆ.

Categories
ಸಿನಿ ಸುದ್ದಿ

ದುಡ್ಡು ಮಾಡೋದಾದ್ರೆ ಬೆಂಗಳೂರಲ್ಲೇ ಮಾಡಬಹುದು! ನಾವೂ ಅಪ್ಪ ಅಮ್ಮಂಗೆ ಹುಟ್ಟಿದ ಮಕ್ಕಳೇ- ಯಶ್‌ ಸಿಟ್ಟಾಗಿದ್ದೇಕೆ?

ಕನ್ನಡ ಚಿತ್ರರಂಗದ ಸ್ಟಾರ್‌ ನಟ ಯಶ್‌ ಅವರ ತಂದೆ-ತಾಯಿಯೊಂದಿಗೆ ಗ್ರಾಮಸ್ಥರು ಜಮೀನು ಕಾಂಪೌಂಡ್‌ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಎಬ್ಬಿಸಿದ್ದು, ಈ ಸಂಬಂಧ ಯಶ್‌ ಅವರು ಮಂಗಳವಾರ ಹಾಸನ ಜಿಲ್ಲೆಯ ದುದ್ದ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ತಾವು ಖರೀದಿಸಿದ್ದ ಜಮೀನಿಗೆ ರಸ್ತೆ ನಿರ್ಮಿಸುವ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಮತ್ತು ಯಶ್ ಕುಟುಂಬದ ನಡುವೆ ಗದ್ದಲ ಎದ್ದಿತ್ತು. ಈ ವಿಚಾರವಾಗಿ ಯಶ್ ಬೆಂಬಲಿಗರು ಮತ್ತು ಗ್ರಾಮಸ್ಥರ ನಡುವೆ ಜಗಳ ದೊಡ್ಡದ್ದಾಗಿತ್ತು. ಈ ಬಗ್ಗೆ ಅಸಮಾಧಾನಗೊಂಡ ಯಶ್‌ ಅವರು, ಹಾಸನ ಪೊಲೀಸ್ ಠಾಣೆಗೆ ಭೇಟಿ ಕೊಟ್ಟಿದ್ದರು. ಪೊಲೀಸರೊಂದಿಗೆ ಚರ್ಚೆ ಮಾಡಿದ ನಂತರ ಮಾಧ್ಯಮ ಎದುರು ಮಾತನಾಡಿದ ಯಶ್‌, “ನಾವು ಕಷ್ಟಪಟ್ಟು ಜಮೀನು ಖರೀದಿಸಿದ್ದೇವೆ. ಈಗ ಕಾಂಪೌಂಡ್ ಹಾಕಿಸುತ್ತಿದ್ದೇವೆ. ಕೆಲಸ ಮಾಡುತ್ತಿದ್ದ ಹುಡುಗರ ಮೇಲೆ ಕೈ ಮಾಡಲಾಗುತ್ತಿದೆ ಇದು ಸರಿಯಲ್ಲ. ರಸ್ತೆ ವಿಚಾರವಾಗಿ ಮಾತುಕತೆ ನಡೆದಿದೆ. ಮಾತುಕತೆಯಲ್ಲೇ ಬಗಹರಿಸಿಕೊಳ್ಳಬೇಕು. ಕೆಲಸ ಮಾಡುವ ಹುಡುಗರ ಮೇಲೆ ಕೈ ಮಾಡಿದ್ರೆ ಸುಮ್ಮನೆ ಇರಲಿಕ್ಕೆ ಆಗಲ್ಲ. ನಮ್ಮ‌ ಜೊತೆ ಕೆಲಸ ಮಾಡೋರು ಅಂದರೆ ನಮ್ಮ ಮನೆಯವರ ರೀತಿ. ತಂದೆ-ತಾಯಿ ಬಗ್ಗೆಯೂ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಹಾಗಾಗಿ ಬಂದಿದ್ದೇನೆ.

ದುಡ್ಡು ಮಾಡಬೇಕು ಅಂದರೆ ಬೆಂಗಳೂರಲ್ಲೇ ಮಾಡಬಹುದು ‘ರಸ್ತೆಯನ್ನು ದೇವಸ್ಥಾನಕ್ಕೆ ಹೋಗಲು ಮಾಡಿದ್ದಾರೆ. ಅದು ನಮಗೆ ಬೇಕು ಎಂದು ಮಾಡಿಲ್ಲ. ಹಾಸನಕ್ಕೆ ಬಂದು ನಾನ್ಯಾಕೆ ಜಮೀನು ಮಾಡಬೇಕು. ದುಡ್ಡು ಮಾಡಬೇಕು ಎಂದರೆ ಬೆಂಗಳೂರಲ್ಲೇ ಆಸ್ತಿ ಮಾಡಬಹುದಲ್ವಾ. ನಾವು ಕೃಷಿ ಮಾಡಬೇಕು. ಅದು ನನ್ನ ಆಸೆ. ಅವರು ಹಳ್ಳಿ ಜನ, ನಮ್ಮ ತಂದೆ ತಾಯಿಯೂ ಹಳ್ಳಿ ಜನ. ಮಾತುಕತೆ ನಡೆದಿದೆ. ಹೇಗೆ ಮಾತಾಡಬೇಕು ಅನ್ನೋದೇ ಗೊತ್ತಿಲ್ಲ. ‘ಮೀಡಿಯಾ ಇದೆ ಅಂತಾರೆ, ಎಲ್ಲರದೂ ಅದೇ ಆಗಿದೆ. ಮೀಡಿಯಾ ಇದ್ದರೆ ಇರಲಿ ಬಿಡಿ. ನಾವೂ ಅಪ್ಪ ಅಮ್ಮನಿಗೆ ಹುಟ್ಟಿರುವ ಮಕ್ಕಳೆ. ತಂದೆ ತಾಯಿ ಬಗ್ಗೆ ಮಾತನಾಡಿದಾಗ ನಮ್ಮ‌ ಇಮೇಜ್ ನೋಡಿಕೊಂಡು ಕೂರಲು ಆಗಲ್ಲ. ಎಲ್ಲಿಂದಲೋ ಬಂದವರು, ಇಲ್ಲಿಗೆ ಬಂದಿದ್ದಾರೆ ಅಂತ ಕೇಳ್ತಾರಂತೆ ಎಂದಿದ್ದಾರೆ ಯಶ್. ಏನಿದು ಘಟನೆ ? ಯಶ್ ಅವರ ತಂದೆ ಅರುಣ್ ಕುಮಾರ್ ಮತ್ತು ತಾಯಿ ಪುಷ್ಪ ಇಬ್ಬರು ತಮ್ಮ ಜಮೀನಿನಲ್ಲಿ ಕೆಲಸ ಮಾಡಿಸುತ್ತಿರುವಾಗ ಗ್ರಾಮಸ್ಥರ ನಡುವೆ ಮಾತಿಗೆ ಮಾತು ಬೆಳೆದಿದೆ. ಜಮೀನಿಗೆ ರಸ್ತೆ ನಿರ್ಮಾಣ ಮಾಡಲು ಜೆಸಿಬಿಯಲ್ಲಿ ಕೆಲಸ ಮಾಡಿಸುತ್ತಿದ್ದ ವೇಳೆ ಗ್ರಾಮಸ್ಥರು ಅಡ್ಡಿ ಪಡಿಸಿದ್ದರು. ಈ ವೇಳೆ ಶುರುವಾದ ಗಲಾಟೆ ಮಾತಿಗೆ ಮಾತು ಬೆಳೆದು ಯಶ್ ಬೆಂಬಲಿಗರು ಮತ್ತು ಗ್ರಾಮಸ್ಥರ ನಡುವೆ ದೊಡ್ಡ ಜಗಳವಾಗಿದೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರನ್ನು ಸಮಾಧಾನ ಪಡಿಸಿದ್ದಾರೆ.

Categories
ಸಿನಿ ಸುದ್ದಿ

‘ಹಾನಗಲ್ ಕುಮಾರೇಶ’ ಚಿತ್ರದೊಂದಿಗೆ ಮತ್ತೆ ಒಂದಾದ ಹಂಸಲೇಖ – ಚಿಂದೋಡಿ ಜೋಡಿ

ಚಿಂದೋಡಿ ಬಂಗಾರೇಶ್ ನಿರ್ದೇಶನದಲ್ಲಿ ತಯಾರಾಗಿದ್ದ ‘ಗಾನಯೋಗಿ ಪಂಚಾಕ್ಷರ ಗವಾಯಿ’ ಕನ್ನಡದ ಮಹತ್ವದ ಚಿತ್ರಗಳಲ್ಲೊಂದು. ಈ ಸಿನಿಮಾದ ಅತ್ಯುತ್ತಮ ಸಂಗೀತಕ್ಕೆ ಹಂಸಲೇಖ ಮತ್ತು ಗಾಯನಕ್ಕೆ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಆನಂತರ ‘ದಾನಮ್ಮದೇವಿ’ ಚಿತ್ರದೊಂದಿಗೆ ಮತ್ತೊಮ್ಮೆ ಚಿಂದೋಡಿ ಮತ್ತು ಹಂಸಲೇಖ ಸಂಗೀತದ ಮೋಡಿ ಮಾಡಿದ್ದರು. ಈಗ ‘ಹಾನಗಲ್‌ ಶ್ರೀ ಕುಮಾರೇಶ’ ಚಿತ್ರದಲ್ಲಿ ಮತ್ತೆ ಸಂಗೀತ ಸುಧೆ ಹರಿಸಲಿದ್ದಾರೆ. ಈಗಾಗಲೇ ಸಂಗೀತದ ಮಟ್ಟುಗಳು ತಯಾರಾಗುತ್ತಿದ್ದು, ಸದ್ಯದಲ್ಲೇ ಚಿತ್ರದ ಬಗ್ಗೆ ಇತರೆ ಮಾಹಿತಿ ನೀಡಲಿದ್ದಾರೆ ಚಿಂದೋಡಿ ಬಂಗಾರೇಶ್‌.

ಹಾನಗಲ್ ಕುಮಾರೇಶರು ಸಂಗೀತಗಾರ ಪಂಚಾಕ್ಷರ ಗವಾಯಿ ಅವರ ಗುರುಗಳು. “ಪಂಚಾಕ್ಷರ ಗವಾಯಿಗಳ ಚಿತ್ರ ಮಾಡುವಾಗ ಕುಮಾರಸ್ವಾಮಿಗಳ ಬಗ್ಗೆ ಓದಿದ್ದೆ. ಈಗ ಅವರದೇ ಜೀವನ ಚರಿತ್ರೆ ಮಾಡುವ ಯೋಗ ಬಂದಿದ್ದು ಪುಣ್ಯವೆಂದೇ ಭಾವಿಸುತ್ತೇನೆ. ಈ ಬಗ್ಗೆ ಸಾಕಷ್ಟು ಮಾಹಿತಿ ಕಲೆಹಾಕಿ, ಸ್ವಾಮೀಜಿ, ಮಠಾದೀಶರನ್ನು ಸಂಪರ್ಕಿಸಿದ್ದೇನೆ. ಈಗ ಅಗಡೀಶ ಪ್ರೊಡಕ್ಷನ್ಸ್‌ ಅಡಿ ಸಿನಿಮಾ ಸೆಟ್ಟೇರುತ್ತಿದೆ” ಎನ್ನುತ್ತಾರೆ ನಿರ್ದೇಶಕ ಚಿಂದೋಡಿ ಬಂಗಾರೇಶ್‌.

‘ಗಾನಯೋಗಿ ಪಂಚಾಕ್ಷರ ಗವಾಯಿ’ ಚಿತ್ರದಲ್ಲಿ ಲೋಕೇಶ್‌

ಹಂಸಲೇಖ ಅವರ ಸಂಗೀತ ಸಂಯೋಜನೆಯಲ್ಲಿ ಈಗಾಗಲೇ ಹಾಡುಗಳು ಸಿದ್ಧವಾಗುತ್ತಿವೆ. ಭಕ್ತಿಪ್ರಧಾನ ಹಾಡುಗಳನ್ನು ಅವರು ಸೊಗಸಾಗಿ ಸಂಯೋಜಿಸುತ್ತಾರೆ ಎನ್ನುವುದು ಈಗಾಗಲೇ ಸಾಬೀತಾಗಿದೆ. ‘ಹಾನಗಲ್ ಕುಮಾರೇಶ’ ಚಿತ್ರಕ್ಕಾಗಿ ಭೀಮಕವಿ ವಿರಚಿತ ಬಸವ ಪುರಾಣ 3500 ಸಾಲುಗಳ ಭಾಮಿನಿ ಷಟ್ಪದಿಯಲ್ಲಿರುವ ಪುರಾಣ ಆಧರಿಸಿ ಎಂಟು ನಿಮಿಷಗಳ ಹಾಡೊಂದನ್ನು ಹಂಸಲೇಖ ಸಂಯೋಜಿಸಲಿದ್ದಾರೆ. ಖಂಡಿತವಾಗಿ ಕನ್ನಡಕ್ಕೆ ಇದೊಂದು ಅತ್ಯುತ್ತಮ ಸಂಗೀತಮಯ ಚಿತ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಚಿಂದೋಡಿ. ಕಲಾವಿದರ ಆಯ್ಕೆ ನಡೆದಿದ್ದು, ಜುಲೈನಲ್ಲಿ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.

Categories
ಸಿನಿ ಸುದ್ದಿ

ರಾಬರ್ಟ್‌ ಬಂದ ನಂತರವೇ ಮುಂದಿನ ಸಿನಿಮಾದ ಬಗ್ಗೆ ಮಾತನಾಡುವೆ _ ಆಶಾ ಭಟ್‌

ಜಗ ಮೆಚ್ಚಿದ ಸುಂದರಿ ಭದ್ರಾವತಿಯ ಚೆಲುವೆ ಆಶಾಭಟ್‌ ದೊಡ್ಡದೊಂದು ತವಕದಲ್ಲಿದ್ದಾರೆ. “ರಾಬರ್ಟ್‌’ ಚಿತ್ರದ ಮೂಲಕ ಇದೇ ಮೊದಲು ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಮಾರ್ಚ್‌ 11 ಕ್ಕೆ ರಾಬರ್ಟ್‌ ಭರ್ಜರಿ ಆಗಿ ಬಿಡುಗಡೆ ಆಗುತ್ತಿದೆ. ಮೊದಲ ಚಿತ್ರವಾದರೂ ದರ್ಶನ್‌ ಅವರಂತಹ ಸ್ಟಾರ್‌ ಜತೆಗೆ ಇದೇ ಮೊದಲು ತೆರೆ ಹಂಚಿಕೊಂಡಿದ್ದು ಮಾತ್ರವಲ್ಲ, ಮೊದಲ ಚಿತ್ರದಲ್ಲೇ ಕನ್ನಡದ ಜತೆಗೆ ತೆಲುಗಿಗೂ ಎಂಟ್ರಿ ಆಗುತ್ತಿದ್ದಾರೆ ಮಾಡೆಲ್‌ ಆಶಾ ಭಟ್.‌ ಫಸ್ಟ್‌ ಟೈಮ್‌ ನಟಿಯಾಗಿ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿರುವ ಆಶಾ ಭಟ್‌ “ರಾಬರ್ಟ್‌ʼ ಕುರಿತು ಹೇಳುವುದಿಷ್ಟು….

  • ಕೊನೆಗೂ ನೀವು ತೆರೆ ಕಾಣಸಿಕೊಳ್ಳುವ ಕ್ಷಣ ಬಂದೇ ಬಿಟ್ಟಿದೆ, ಹೇಗನಿಸುತ್ತೆ ?
  • ಹೌದು, ಬಾಳಾ ಖುಷಿ ಆಗ್ತಿದೆ. ಈ ದಿನಕ್ಕಾಗಿ ನಾವೆಲ್ಲ ಕಾಯ್ತ ಇದ್ದೇವು. ಅಂತೂ ಆ ದಿನ ಬಂದೇ ಬಿಟ್ಟಿದೆ. ನಂಗಂತೂ ತುಂಬಾ ಎಕ್ಸೈಟ್‌ ಆಗ್ತಿದೆ. ಇಷ್ಟು ದೊಡ್ಡ ಜನರ ಪ್ರೀತಿ, ನಿರೀಕ್ಷೆ, ಅಭಿಮಾನ ಕಂಡು ನಾನೇ ನರ್ವಸ್‌ ಆಗಿಬಿಟ್ಟಿದ್ದೇನೆ. ಆದ್ರೂ ತುಂಬಾ ಹೋಪ್‌ ಇದೆ. ಈ ಸಿನಿಮಾ ದರ್ಶನ್‌ ಅವರ ಫ್ಯಾನ್ಸಿಗೆ, ಪ್ರೇಕ್ಷಕರಿಗೆ ಭರಪೂರ ರಂಜಿಸುತ್ತದೆ ಎನ್ನುವ ವಿಶ್ವಾಸ, ನಂಬಿಕೆ ನಂಗಂತೂ ಬಲವಾಗಿದೆ
  • ಕನ್ನಡದವರೇ ಆದ ನಿಮಗೆ ಇದು ಮೊದಲ ಸಿನಿಮಾ, ಈ ಬಗ್ಗೆ ಏನ್‌ ಹೇಳ್ತೀರಾ?
  • ಒಹೋ.. ನಿಜಕ್ಕೂ ಭಯ ಆಗ್ತಿದೆ. ಹಾಗೆಯೇ ಬಾಳಾ ಖುಷಿಯೂ ಇದೆ. ದರ್ಶನ್‌ ಅವರಂತಹ ಸ್ಟಾರ್‌ ನಟರ ಜತೆಗೆ ಅಭಿನಯಿಸುವ ಅವಕಾಶ ಸಿಗಬಹುದು ಅಂತ ನಾನು ಕನಸಲ್ಲೂ ಕಂಡಿರಲಿಲ್ಲ. ಅದೃಷ್ಟ ಎನ್ನುವಂತೆ ರಾಬರ್ಟ್‌ ಸಿನಿಮಾದ ಅವಕಾಶ ನನ್ನನ್ನೇ ಹುಡುಕಿಕೊಂಡು ಬಂತು. ನಿರ್ದೇಶಕರಾದ ತರುಣ್‌ ಸುಧೀರ್‌ ಸರ್‌, ನನ್ನನ್ನೇ ಆಯ್ಕೆ ಮಾಡಿಕೊಂಡಿದ್ದು ಅದೃಷ್ಟವೇ ಅಲ್ಲದೆ ಇನ್ನೇನು ಅಲ್ಲ. ಮೊದಲ ಸಿನಿಮಾ ಅಂತ ನಾನೇನು ನಿರೀಕ್ಷೆ ಮಾಡಿದ್ದೇನೋ ಅದಕ್ಕಿಂತ ದುಪ್ಪಟ್ಟು, ಮೂರು ಪಟ್ಟು ಈ ಸಿನಿಮಾದಲ್ಲಿ ಅಭಿನಯಿಸಿದ ಖುಷಿ ಇದೆ.
  • ಮಾಡೆಲಿಂಗ್‌ನಲ್ಲಿ ನೀವು ಬ್ಯುಸಿ ಆಗಿ ಮುಂಬೈನಲ್ಲಿದ್ದಾಗ ಕನ್ನಡದ ಅವಕಾಶಗಳ ಬಗ್ಗೆ ಯೋಚಿಸಿದ್ರಾ?
  • ಖಂಡಿತಾ ಹೌದು. ನಾನು ಕನ್ನಡತಿ. ಇಲ್ಲಿ ನನ್ನನ್ನು ನಾನು ಗುರುತಿಸಿಕೊಂಡಾಗಲೇ ಅದಕ್ಕೊಂದು ಗೌರವ. ಹಾಗೆಯೇ ನನಗೂ ಖುಷಿ. ಅದಕ್ಕಾಗಿ ನಾನು ಕನ್ನಡದಲ್ಲಿನ ಸಿನಿಮಾ ಅವಕಾಶಗಳನ್ನು ಎದುರು ನೋಡುತ್ತಿದ್ದೆ. ಆದ್ರೆ ಒಳ್ಳೆಯ ಅವಕಾಶಗಳು ಸಿಗಲಿ ಅಂತ ಕಾಯುತ್ತಿದ್ದಾಗ, ಅದೃಷ್ಟವೇ ಅಂತ ಸಿಕ್ಕಿದ್ದು ರಾಬರ್ಟ್.‌ ತರುಣ್‌ ಸರ್‌ ಫಸ್ಟ್‌ ಟೈಮ್‌ ಭೇಟಿ ಮಾಡಿ ಕಥೆ ಹೇಳಿದಾಗ ನಾನು ಮರು ಮಾತನಾಡದೆ ಉಪ್ಪಿಕೊಂಡಿದ್ದಕ್ಕೆ ಎರಡು ಕಾರಣ ಇದ್ದವು. ದೊಡ್ಡ ಪ್ರೊಡಕ್ಷನ್‌ ಹೌಸ್‌ ಅನ್ನೋದು ಒಂದು ಕಾರಣವಾದರೆ, ದರ್ಶನ್‌ ಹಾಗೂ ತರುಣ್‌ ಸುಧೀರ್‌ ಜೋಡಿಯ ಸಿನಿಮಾ ಅನ್ನೋದು ಮತ್ತೊಂದು ಕಾರಣ.
  • ʼರಾಬರ್ಟ್ʼ ಅದೃಷ್ಟ ಅಂತಿದ್ದೀರಿ, ಮತ್ತೊಂದು ಅದೃಷ್ಟ ಎನ್ನುವ ಹಾಗೆ ಇದು ತೆಲುಗಿನಲ್ಲೂ ರಿಲೀಸ್‌ ಆಗುತ್ತಿದೆ, ಈ ಬಗ್ಗೆ ಹೇಳಿ ?
  • ಇದೊಂಥರ ನಂಗೆ ಡಬಲ್‌ ಧಮಾಕಾ. ಯಾರಿಗುಂಟು ಯಾರಿಗಿಲ್ಲ ಈ ಅವಕಾಶ ಎನ್ನುವ ಹಾಗೆ. ಆರಂಭದಲ್ಲಿ ಇದು ಕನ್ನಡದಲ್ಲಿ ಮಾತ್ರವೇ ಎನ್ನುವಂತಿತ್ತು. ಆ ನಂತರ ತೆಲುಗಿನಲ್ಲೂ ರಿಲೀಸ್‌ ಮಾಡೋದಿಕ್ಕೆ ಪ್ಲಾನ್‌ ಮಾಡಲಾಯಿತು. ನನ್ನ ಮಟ್ಟಿಗೆ ಮೊದಲು ಸಿನಿಮಾವೇ ಈ ರೀತಿ ಬಹು ಭಾಷೆಯಲ್ಲಿ ಬರುತ್ತಿರುವುದು ದೊಡ್ಡ ಖುಷಿ ತಂದಿದೆ. ಅಷ್ಟಾಗಿಯೂ ನಂಗೆ ಕನ್ನಡ ಮುಖ್ಯ. ಇಲ್ಲಿಯ ಜನರಿಗೆ ನಾನು ಇಷ್ಟ ಆಗಬೇಕು. ಅವರು ನನ್ನ ಅಭಿನಯ ಒಪ್ಪಿಕೊಳ್ಳಬೇಕು. ಆಗಲೇ ನಮ್ಮಂತಹವರ ಶ್ರಮಕ್ಕೆ ಬೆಲೆ.
  • ದರ್ಶನ್‌ ಅವರೊಂದಿಗೆ ಅಭಿನಯಿಸಿದ ಅನುಭವ ಹೇಗಿತ್ತು ?
  • ವಂಡರ್‌ಫುಲ್.‌ ಅವರ ಜತೆಗೆ ಎಷ್ಟು ಸಿನಿಮಾದಲ್ಲಾದರೂ ಅಭಿನಯಿಸಬಹುದು. ಯಾಕಂದ್ರೆ, ಕ್ಯಾಮೆರಾ ಮುಂದೆ ಅಷ್ಟು ಕಂಫರ್ಟ್‌ ಆರ್ಟಿಸ್ಟ್‌ ಅವರು. ನಮಗೆ ಗೊತ್ತಿಲ್ಲದನ್ನು ಹಾಗಲ್ಲ, ಹೀಗೆ ಮಾಡಿ ಅಂತ ಅತ್ಯಂತ ತಾಳ್ಮೆಯಿಂದಲೇ ಹೇಳಿಕೊಡುತ್ತಾರೆ. ಸಿನಿಮಾ ಅಂತ ಬಂದಾಗ ನಂಗೆ ಇದೇ ಮೊದಲ ಅನುಭವವೇ ಆಗಿದ್ದರೂ, ಯಾವುದೇ ತೊಂದರೆ ಆಗಿಲ್ಲ. ಅದಕ್ಕೆ ಕಾರಣ ಚಿತ್ರ ತಂಡ. ಹಾಗೆಯೇ ಕೋ ಸ್ಟಾರ್ ದರ್ಶನ್‌ ಸರ್.

  • ದರ್ಶನ್‌ ಅವರ ವ್ಯಕ್ತಿತ್ವದ ಬಗ್ಗೆ ಏನ್‌ ಹೇಳ್ತೀರಾ?
  • ಅಯ್ಯೂ.. ಅವರ ಬಗ್ಗೆ ನಾವು ಮಾತನಾಡುವಷ್ಟು ದೊಡ್ಡವಳಲ್ಲ ನಾನು. ಒಂದೇ ಮಾತಿನಲ್ಲಿ ಹೇಳೋದಾದ್ರೆ, ಅವರು ತಾಳ್ಮೆಯಲಿ ಶ್ರೀರಾಮ, ಮಾತ್ಕೊಟ್ರೆ ದಶರಥ ರಾಮ, ಪ್ರೀತಿಯಲಿ ಜಾನಕಿ ರಾಮ.
  • ರಾಬರ್ಟ್‌ ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ?
  • ಪಾತ್ರ ತುಂಬಾ ಚೆನ್ನಾಗಿದೆ. ನಂಗೆ ಇದೊಂದು ತುಂಬಾ ಡಿಫೆರೆಂಟ್.‌ ಫಸ್ಟ್‌ ಟೈಮ್‌ ನಾನಿಲ್ಲಿ ಪರಿಚಯವಾಗುತ್ತಿರುವುದರಿಂದ ಅಭಿನಯಕ್ಕೆ ಹೆಚ್ಚು ಅವಕಾಶ ಇರುವಂತಹ ಪಾತ್ರ ಬೇಕೆಂದು ಕಾಯುತ್ತಿದ್ದೆ. ಅಂತಹ ಪಾತ್ರವೇ ಇಲ್ಲಿ ಸಿಕ್ಕಿದೆ. ಗ್ಲಾಮರ್‌, ರೊಮಾನ್ಸ್‌, ಪರ್ಫಾಮೆನ್ಸ್‌ ಹೀಗೆ ಎಲ್ಲದಕ್ಕೂ ಇಲ್ಲಿದೆ ಅವಕಾಶ. ಒಂದು ಪಾತ್ರಕ್ಕೆ ಇದಕ್ಕಿಂತ ಇನ್ನೇನು ಬೇಕು ನೀವೇ ಹೇಳಿ? ನಂಗಂತೂ ಒಂದೊಳ್ಳೆಯ ಪಾತ್ರದಲ್ಲಿ ಅಭಿನಯಿಸಿದ ಖುಷಿ ಇದೆ.
  • ನಿಮಗೀಗ ಸಿನಿಮಾ ಅವಕಾಶ ಹೇಗಿವೆ? ರಾಬರ್ಟ್‌ ನಂತರ ಯಾವ ಸಿನಿಮಾ ?
  • ಆ ಬಗ್ಗೆ ನಾನು ಈಗಲೇ ಏನನ್ನು ಹೇಳಲಾರೆ. ನಂಗೀಗ ರಾಬರ್ಟ್‌ ಸಿನಿಮಾವೇ ಮುಖ್ಯ. ಆದಾದ ಮೇಲೆ ಮುಂದಿನ ಸಿನಿಮಾದ ಬಗ್ಗೆ ಆಲೋಚನೆ. ಹಾಗಂತ ನಂಗೀಗ ಅವಕಾಶ ಬಂದಿಲ್ಲ ಅಂತಲ್ಲ, ಆ ಬಗ್ಗೆ ನಾನಿನ್ನು ತಲೆ ಕೆಡಿಸಿಕೊಂಡಿಲ್ಲ. ಅದನ್ನು ರಾಬರ್ಟ್‌ ತೆರೆ ಕಂಡ ನಂತರದ ದಿನಗಳಲ್ಲಿ ರಿವೀಲ್‌ ಮಾಡುವೆ.

Categories
ಸಿನಿ ಸುದ್ದಿ

ವೀಣೆ ಪ್ರಣೀತಾ – ಹೊಸ ಲುಕ್‌ನಲ್ಲಿ ಬೆಡಗಿ

ನಟಿ ಪ್ರಣಿತಾ ಸುಭಾಷ್‌, ವೀಣಾವಾದನ ಮಾಡುತ್ತಿದ್ದಾರೆ! ಅರೇ, ಹಾಗಂತ ಅವರೇನು ವೀಣೆ ನುಡಿಸೋಕೆ ಮುಂದಾಗಿದ್ದಾರಾ ಅಂದುಕೊಳ್ಳುವಂತಿಲ್ಲ. ಸದ್ಯಕ್ಕೆ ಪ್ರಣೀತಾ ಸಿನಿಮಾಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ತಮ್ಮ ಸಾಮಾಜಿಕ ಕಾರ್ಯಕ್ರಮಗಳ ಕಡೆ ಗಮನಹರಿಸುತ್ತಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಪ್ರಣೀತಾ, ಆಗಾಗ ತಮ್ಮ ಚಂದದ ಫೋಟೋಗಳನ್ನು ಹಾಕಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆಯೂ ಮಾತಾಡುತ್ತಿರುತ್ತಾರೆ. ಪ್ರಣೀತಾ ಮಾಡರ್ನ್ ಹುಡುಗಿಯಾದರೂ ,ಸಂಪ್ರದಾಯಸ್ಥಳಾಗಿಯೂ ಅವಾಗವಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಸಾಮಾಜಿಕವಾಗಿ ತನ್ನದೇ ಆದ ರೀತಿಯಲ್ಲಿ ಸಮಾಜಕಾರ್ಯಗಳ ಜೊತೆಯಲ್ಲಿ ಜನರ ಅಪಾರ ಪ್ರೀತಿಯನ್ನೂ ಗಳಿಸಿದ್ದಾರೆ. ಕಳೆದ ಮಹಿಳಾ ದಿನಾಚರಣೆ ಇವರಿಗೆ ವಿಶೇಷವಾಗಿತ್ತು‌. ಯಾಕೆ ಅಂದರೆ, ಸೀರೆ ಅಂದರಂತೂ ಯಾರಿಗೆ ಇಷ್ಟವಿಲ್ಲ ಹೇಳಿ? ಹೆಣ್ಣು ಮಕ್ಕಳಿಗಂತೂ ಸೀರೆ ಧರಿಸಿ ಮಿಂಚುವುದು ಒಂಥರಾ ಎಲ್ಲಿಲ್ಲದ ಆನಂದ. ಇದಕ್ಕೆ ನಟಿ ಪ್ರಣೀತಾ ಸುಭಾಷ್ ಕೂಡ ಹೊರತಲ್ಲ. ಇತ್ತೀಚೆಗೆ ಕಸೂತಿ ಕಲೆಯಂತೂ ನ್ಯೂ ಟ್ರೆಂಡ್ ಆಗಿದೆ‌. ಎಂಬ್ರಾಯಿಡರಿ ಡಿಸೈನ್ ಹೊಂದಿರುವ ಸಾರಿಗಳನ್ನು ತಯಾರಿಸುವ ವರ್ಗಗಳೇ ಇವೆ. ಮಹಿಳೆಯರಿಗೆ ಬೇಕಾಗುವ ವಸ್ತುಗಳನ್ನು ಕೂಡ ಹ್ಯಾಂಡ್ ಮೇಡ್ ಆಗಿ ತಯಾರಿಸಲಾಗುತ್ತಿದೆ.

ನಟಿ ಪ್ರಣೀತಾ ಸುಭಾಷ್ ಅವರು ಒಂದು ಎಂಬ್ರಾಯಿಡರಿ ಸಾರಿ ತಯಾರಿಸುವ ಕಂಪನಿಗೆ ಬ್ರಾಂಡ್‌ ಅಂಬಾಸಡರ್ ಆಗಿದ್ದಾರೆ. ಪ್ರಣೀತಾ ಹಳದಿ ಮಿಶ್ರಿತ ಕೆಂಪು ಬಣ್ಣದ ಸಾರಿಯುಟ್ಟು ಸಿಂಪಲ್ ಆಗಿ ವೀಣೆ ಹಿಡಿದು ಕುಳಿತಿರುವ ಫೋಟೊ ಟ್ವೀಟರ್ ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಅದೀಗ ಎಲ್ಲೆಡೆ ವೈರಲ್‌ ಕೂಡ ಆಗಿದೆ.

Categories
ಸಿನಿ ಸುದ್ದಿ

ಬಾತ್ ರೂಂ ಗೆ ಹೋಗುವ ಮುನ್ನ ಧನುಶ್ರೀ ಮೇಕಪ್ ಹಚ್ಚೋದು ಯಾಕೆ ?

ನಟಿ ಧನುಶ್ರೀ ಮೇಕಪ್ ಕಥೆ ಮಜಾವಾಗಿದೆ‌. ಅದರಲ್ಲೂ ಅವರು ಮೇಕಪ್ ಮಾಡ್ಕೊಂಡ್ ಸ್ನಾನಕ್ಕೆ ಹೋಗುವ ಕಥೆ ಇನ್ನೂ ಮಜಾವಾಗಿದೆ. ಹೌದು, ಬಾತ್ ರೂಂಗೆ ಹೋಗಿ ಪ್ರೆಶ್ ಆಗಿ ಬಂದು ಎಲ್ಲರೂ ಮೇಕಪ್ ಮಾಡ್ಕೊಳ್ಳೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ಧನುಶ್ರೀ ಮೇಕಪ್ ಮಾಡ್ಕೊಂಡು ಸ್ನಾನಕ್ಕೆ ಹೋಗಿ ಬರ್ತಾರಂತೆ. ಇಂತಹ ಕಥೆ ನೀವೇನಾದ್ರೂ ಕೇಳಿದುಂಟಾ? ಖಂಡಿತಾ ಕೇಳಿರೋದಿಕ್ಕೆ ಸಾಧ್ಯವೇ ಇಲ್ಲ.ಬಟ್, ಧನುಶ್ರೀ ಇರೋದೇ ಹಾಗಂತ. ಅವರಿಗೆ ಅದೇ ಅಭ್ಯಾಸವಂತೆ. ಹಾಗಂತ ಬಿಗ್ ಬಾಸ್ ಮನೆಯೊಳಗಡೆ ಒಂದಷ್ಟು ಸ್ವಾರಸ್ಯಕರ ಸಂಗತಿಗಳನ್ನು ರಿವೀಲ್ ಮಾಡಿದ್ದಾರೆ.

‘ಸೂಪರ್ ಸಂಡೆ ಸುದೀಪ್’ ಭಾನುವಾರದ ಎಪಿಸೋಡ್ ನಲ್ಲಿ ನಟಿ ಧನುಶ್ರೀ ಅವರ ಈ ವಿಚಾರ ಬಹಿರಂಗ ಗೊಂಡಿತು. ಅದು ಬಯಲಾಗಿದ್ದು ಹಾಸ್ಯ ನಟ ಪಾವಗಡ ಮಂಜು ಮೂಲಕ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಪಾವಗಡ ಮಂಜು ಸಖತ್ ಮಜಾ ಕೊಡುತ್ತಿದ್ದಾರೆ. ಹಿಂದಿನ ಸರಣಿಯಲ್ಲಿ ಕುರಿ ಪ್ರತಾಪ್ ಇದ್ದ ಜಾಗವನ್ನೀಗ ಪಾವಗಡ ಮಂಜು ತುಂಬಿದ್ದಾರೆ. ಹಾಗೊಂದು ಸ್ಟ್ರಾಟಜಿ ಇಟ್ಕೊಂಡೆ ಅವರು ಬಿಗ್ ಬಾಸ್ ಮನೆಯಲ್ಲಿ ಆಟ ಆಡುತ್ತಿದ್ದಾರೆ‌. ಅವರು ಗಮನಸಿದ ಸಂಗತಿಗಳಲ್ಲಿ ನಟಿ‌ಧನುಶ್ರೀ ಮೇಕಪ್ ಕಥೆ ಕೂಡ ಒಂದು.

Categories
ಸಿನಿ ಸುದ್ದಿ

ಸಿನಿಮಾ ನಿರ್ಮಾಣಕ್ಕೆ ಬಂದರು ಸುಧಾರಾಜು ಎಂಬ ಬಹುಮುಖ ಪ್ರತಿಭೆ- ಚಿ.ತು. ಯುವಕರ ಸಂಘದಲ್ಲಿ ಇವರೂ ಒಬ್ಬರು !

ನಾನು ಸಿನಿಮಾ ನಿರ್ಮಾಣಕ್ಕೆ ಬಂದಿದ್ದು ಹಣ ಮಾಡೋದಿಕ್ಕೆ ಅಲ್ಲ. ಪ್ರೇಕ್ಷಕರಿಗೆ ಸದಭಿರುಚಿಯ ಸಿನಿಮಾ ಕೊಡಬೇಕು ಅನ್ನೋದು. ಅದರಲ್ಲೂ ಮಹಿಳೆಯ ಕುರಿತು ವಿಶೇಷವಾದ ಸಿನಿಮಾ ಮಾಡಬೇಕೆನ್ನುವುದು ನನ್ನ ಕನಸು. ನಾನು ನೋಡಿದಂತೆ ಸಿನಿಮಾದಲ್ಲಿ ಮಹಿಳೆ ಒಂದ್ರೀತಿ ಎರಡನೇ ದರ್ಜೆಯ ಪ್ರಜೆ. ಇದು ಯಾಕೆ ಎನ್ನುವುದು ನನ್ನ ಪ್ರಶ್ನೆ ಎನ್ನುತ್ತಾರೆ ಸಮಾಜ ಸೇವಕಿ ಸುಧಾರಾಜು.

ಸಿನಿಮಾ ರಂಗಕ್ಕೆ ನಟರಾಗಲು ಬಂದ ಅನೇಕ ಕಲಾವಿದರಿಗೆ ವರನಟ ಡಾ. ರಾಜ್ ಕುಮಾರ್ ಸ್ಪೂರ್ತಿ ಆದ ಹಾಗೆಯೇ ಸಿನಿಮಾ ನಿರ್ಮಾಣಕ್ಕೆ ಬಂದ ಹಲವು ಮಹಿಳಾ ನಿರ್ಮಾಪಕಿಯರಿಗೆ ಶ್ರೀಮತಿ ಡಾ. ಪಾರ್ವತಮ್ಮ ರಾಜ್ ಕುಮಾರ್ ಕೂಡ ದೊಡ್ಡ ಸ್ಪೂರ್ತಿಯೇ ಹೌದು. ಅದಕ್ಕೆ ಸಾಕ್ಷಿ ಯುವ ನಿರ್ಮಾಪಕಿ ಸುಧಾರಾಜು ಕೂಡ ಒಬ್ಬರು.

ಮೂಲತಃ ತಮುಕೂರಿನವರಾದ ಸುಧಾ ರಾಜು ಅವರು, ವೃತ್ತಿಯಲ್ಲಿ ಉಪನ್ಯಾಸಕಿ. ಪ್ರವೃತ್ತಿಯಲ್ಲಿ ಸಮಾಜ ಸೇವಕಿ, ರಾಜಕಾರಣಿ ಹಾಗೆಯೇ ಈಗ ಸಿನಿಮಾ ಸಹ ನಿರ್ಮಾಪಕಿ. ಹೌದು, ಅವರೀಗ ʼ ಚಿ. ತು. ಯುವಕರ ಸಂಘʼ ಚಿತ್ರದೊಂದಿಗೆ ಸಹ ನಿರ್ಮಾಪಕಿಯಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಇದೊಂದು ವಿಭಿನ್ನ ಶೀರ್ಷಿಕೆಯ ಚಿತ್ರ. ಚಿಂತೆ ಇಲ್ಲದ ತುಂಡ ಹೈಕ್ಳ ಯುವಕರ ಸಂಘ ಎನ್ನುವುದು ಈ ಚಿತ್ರದ ಶೀರ್ಷಿಕೆ ಫುಲ್ಫಾರ್ಮ್.

ಶಿವು ರಾಮನಗರ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದು, ಚೇತನ್ ರಾಜ್ ಚಿತ್ರದ ಮುಖ್ಯ ನಿರ್ಮಾಪಕರು. ಸಹ ನಿರ್ಮಾಪಕಿಯಾಗಿ ಇವರಿಗೆ ಸಾಥ್ ನೀಡುವ ಮೂಲಕ ಸುಧಾ ರಾಜು ಸಿನಿ ದುನಿಯಾಕ್ಕೆ ಎಂಟ್ರಿ ಪಡೆಯುತ್ತಿದ್ದಾರೆ. ಬೆಸಿಕಲಿ ಇವರು ಉಪನ್ಯಾಸಕಿ. ತುಮಕೂರು ವಿಶ್ವವಿದ್ಯಾಲದಲ್ಲಿ ಒಂದಷ್ಟು ಕಾಲ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲಿಂದ ಗುಬ್ಬಿಯ ಶುಭೋದಯ ಕಾಲೇಜಿನಲ್ಲಿ ಒಂದೆರೆಡು ವರ್ಷ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದರು. ಕೊನೆಗೆ ಅದೆಲ್ಲ ಸಾಕು ಅಂತ ಸುಧೆ ಸೇವಾ ಟ್ರಸ್ಟ್ ಮೂಲಕ ಸಮಾಜ ಸೇವೆಯತ್ತ ಗಮನ ಹರಿಸಿದರು.

ಸುಧಾರಾಜು ಅವರದ್ದು ಬಹುಮುಖ ಪ್ರತಿಭೆ. ಚಿತ್ರಕಲೆ ಹಾಗೂ ಸಾಹಿತ್ಯದಲ್ಲೂ ವಿಶೇಷ ಆಸಕ್ತಿ ಹೊಂದಿರುವರು. ಇತ್ತೀಚೆಗಷ್ಟೇ ‘ಚಿತ್ತ ಕದಡಿದ ಬಯಲು’ ಹೆಸರಿನ ಕವನ ಸಂಕಲನ ಹೊರತಂದಿದ್ದರು. ಈ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಸಿಎಂ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಆಗಮಿಸಿ, ಕವನ ಸಂಕಲನ ಬಿಡುಗಡೆ ಮಾಡಿದ್ದರು. ಇದಕ್ಕೆ ಕಾರಣ ಸುಧಾರಾಜು ಅವರು ಕೂಡ ಬಿಜೆಪಿ ಮುಖಂಡರಾಗಿದ್ದು. ಹಾಲಿ ಈಗ ಅವರು ತುಮಕೂರು ಜಿಲ್ಲಾ ಬಿಜೆಪಿ ಮಹಿಳಾ ವಿಭಾಗದ ಅಧ್ಯಕ್ಷೆ. ಹಾಗೆಯೇ ಇಂಟರ್ ನ್ಯಾಷನಲ್ ಚಿತ್ರಕಲಾ ಪ್ರಮೋಟ ರ್ ಕೂಡ ಆಗಿದ್ದು, ಈಗ ಅವೆಲ್ಲವುದರ ಜತೆಗೆ ಸಿನಿಮಾ ಸಹ ನಿರ್ಮಾಪಕಿಯೂ ಆಗಿದ್ದಾರೆ. ಹಾಗಾದ್ರೆ ರಾಜಕಾರಣಿಯೂ ಆಗಿ ಸಿನಿಮಾದತ್ತ ಅವರ ಒಲವು ಯಾಕೆ ?

“ ಸಿನಿಮಾ, ರಾಜಕಾರಣ, ಸಾಹಿತ್ಯ, ಚಿತ್ರಕಲೆ ಎಲ್ಲವೂ ಒಟ್ಟೊಟ್ಟಿಗೆ ಇರುವ ಕ್ಷೇತ್ರಗಳು. ನನ್ನ ಪ್ರಕಾರ ಇವೆಲ್ಲ ಬೇರೆ ಬೇರೆ ಅಂತ ಹೇಳೋದಿಕ್ಕೆ ಸಾಧ್ಯವೇ ಇಲ್ಲ. ಅದೇ ಕಾರಣಕ್ಕೆ ನನಗೆ ಸಿನಿಮಾ ಕೂಡ ಮೊದಲಿನಿಂದಲೂ ಒಂದು ಆಸಕ್ತಿಯ ಕ್ಷೇತ್ರವೇ ಆಗಿತ್ತು. ವಿಶೇಷವಾಗಿ ನನಗೆ ಇಲ್ಲಿಗೆ ಬರಲು ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಅವರೇ ಸ್ಫೂರ್ತಿ. ಅವರು ನಿರ್ಮಾಣ ಮಾಡಿದ ಚಿತ್ರಗಳು, ನಿರ್ಮಾಪಕಿಯಾಗಿ ಬೆಳೆದ ಪರಿ, ಅಲ್ಲಿಯೇ ಸಕ್ಸಸ್ ಕಂಡ ರೀತಿಗಳೆಲ್ಲ ನನಗೆ ಕುತೂಹಲದ ವಿಷಯ. ಅವರ ಬಗ್ಗೆ ಕೇಳಿ ತಿಳಿಯುತ್ತಾ ಹೋದಂತೆ ನನಗೂ ಸಿನಿಮಾ ನಿರ್ಮಾಣದತ್ತ ಒಲವು ಮೂಡಿದ್ದು ಸುಳ್ಳಲ್ಲʼ ಎನ್ನುತ್ತಾರೆ ಸಹ ನಿರ್ಮಾಪಕಿ ಸುಧಾರಾಜು.

ಶಿವು ರಾಮನಗರ ನಿರ್ದೇಶನದ “ ಚಿ. ತು. ಯುವಕರ ಸಂಘʼ ಚಿತ್ರವು ಈಗಾಗಲೇ ಚಿತ್ರೀಕರಣ ಮುಗಿಸಿದೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಕಾಲಿಟ್ಟಿದೆ. ಒಂದು ವಿಶೇಷ ಕಥಾ ಹಂದರದ ಚಿತ್ರ ಇದು. ಹಾಸ್ಯ ಪ್ರಧಾನ ಚಿತ್ರವಾದರೂ, ಸಮಾಜಕ್ಕೆ ಒಂದು ಸಂದೇಶ ನೀಡುವ ಆಶಯ ಹೊಂದಿದೆಯಂತೆ. ಸಿನಿಮಾದ ಬಗ್ಗೆ ಅಪಾರ ನಿರೀಕ್ಷೆ ಹೊಂದಿರುವ ಸಹ ನಿರ್ಮಾಪಕಿ ಸುಧಾರಾಜು ಅವರು, ಪ್ರೇಕ್ಷಕರ ಪಾಲಿಗೆ ಇದೊಂದು ಒಳ್ಳೆಯ ಸಿನಿಮಾ ಅಗುವುದರಲ್ಲಿ ಅನುಮಾನ ಇಲ್ಲ. ಒಂದೊಳ್ಳೆಯ ಕಥೆ ಎನ್ನುವ ಕಾರಣಕ್ಕೆ ನಾನು ಈ ಸಿನಿಮಾದಲ್ಲಿ ಭಾಗಿಯಾಗಿದ್ದೇನೆ. ಈ ಸಿನಿಮಾದ ಮೂಲಕ ನನ್ನ ಸಿನಿ ಪಯಣ ಶುರುವಾಗುತ್ತಿದೆ. ಮುಂದೆ ಸಿನಿಮಾ ನಿರ್ಮಾಣದ ಜತೆಗೆ ನಿರ್ದೇಶನಕ್ಕೂ ತೊಡಗಿಸಿಕೊಳ್ಳುವ ಆಲೋಚನೆ ಇದೆʼ ಎನ್ನುತ್ತಾರೆ ಸುಧಾರಾಜು.

Categories
ಸಿನಿ ಸುದ್ದಿ

ಗ್ಯಾಂಗ್‌ ಕಟ್ಟಿಕೊಂಡ ಅಭಿಗೆ ಸಿಕ್ತು ಭರ್ಜರಿ ಬಿರುದು – ನ್ಯಾಚುರಲ್‌ ಸ್ಟಾರ್‌ ಬಿರುದು ಪಡೆದರು ಬಿಕಾಂ ಶೆಟ್ರು!

ಒಂದು ಸಿನಿಮಾ ನಿರ್ಮಾಣ ಮಾಡುವುದು ಸುಲಭದ ಮಾತಲ್ಲ. ಅದರಲ್ಲೂ ಹೊಸಬರನ್ನು ನಂಬಿ ಹಣ ಹಾಕುವುದಂತೂ ತೀರಾ ಸವಾಲಿನ ಕೆಲಸವೇ ಸರಿ. ಅಂಥದ್ದೊಂದು ಸವಾಲು ಸ್ವೀಕರಿಸಿ, ಸಂಪೂರ್ಣ ಹೊಸಬರನ್ನು ನಂಬಿ ಹಣ ಹಾಕುವ ಮೂಲಕ ಸುದ್ದಿಯಾಗಿದ್ದು, “ನಮ್‌ ಗಣಿ ಬಿಕಾಂ ಪಾಸ್‌” ಚಿತ್ರ ನಿರ್ಮಾಪಕ ನಾಗೇಶ್‌ ಕುಮಾರ್.‌

ನಟನೆ ಹಾಗೂ ನಿರ್ದೇಶನ‌ ಈ ಎರಡರಲ್ಲೂ ಅದ್ಭುತ ಕೆಲಸಗಾರ ಎಂಬ ನಂಬಿಕೆಯ ಜೊತೆ ಭವ್ಯ ನಿರೀಕ್ಷೆ ಹುಟ್ಟಿಸಿದ ನಿರ್ದೇಶಕ ಅಭಿಷೇಕ್ ಶೆಟ್ಟಿ ಅವರಿಗಿರುವ ಸಿನಿಮಾ ಅಭಿಮಾನ, ಪ್ರೀತಿ ಕಂಡು ನಿರ್ಮಾಪಕರು “ಗಜಾನನ ಗ್ಯಾಂಗ್‌” ಎಂಬ ಭರವಸೆಯ ಸಿನಿಮಾ ಮಾಡಿದ್ದಾರೆ

ಹೌದು, “ನಮ್‌ ಗಣಿ ಬಿಕಾಂ ಪಾಸ್” ಸಿನಿಮಾ ಗಳಿಕೆಯಲ್ಲಿ ದೊಡ್ಡ ಮಟ್ಟದ ಸದ್ದು ಮಾಡದಿದ್ದರೂ, ಒಂದೊಳ್ಳೆಯ ಸಂದೇಶದ ಸಿನಿಮಾ ಅನ್ನುವ ಮಾತು ಜೋರಾಗಿಯೇ ಕೇಳಿಬಂತು. ಸಿನಿಮಾ ಹಣ ಮಾಡದಿದ್ದರೂ, ಹೆಸರು ತಂದು ಕೊಟ್ಟಿದೆ. ಆ ಖುಷಿಯಲ್ಲೇ ಇದ್ದ ನಿರ್ಮಾಪಕ ಪುನಃ, ಅದೇ ತಂಡದೊಂದಿಗೆ ಮತ್ತೊಂದು ಸಿನಿಮಾ ನಿರ್ಮಾಣಕ್ಕೂ ಮುಂದಾದರು.‌ ಅದಕ್ಕೆ ಕಾರಣ, ಒಳ್ಳೆಯ ಕಥೆ. ನಂಬಿಕೆ ಉಳಿಸಿಕೊಂಡಿದ್ದ ಚಿತ್ರತಂಡ. ಹಾಗಾಗಿ “ಗಜಾನನ ಅಂಡ್‌ ಗ್ಯಾಂಗ್‌” ಹೆಸರಿನ ಸಿನಿಮಾ ನಿರ್ಮಾಣ ಕೈಗೆತ್ತಿಕೊಂಡ ನಾಗೇಶ್‌ ಕುಮಾರ್‌, ಅದನ್ನು ಯಶಸ್ವಿಯಾಗಿ ಮುಗಿಸಿದ್ದಾರೆ ಕೂಡ.

ಅಭಿಷೇಕ್‌ ಶೆಟ್ಟಿ ನಿರ್ದೇಶನದ “ನಮ್‌ ಗಣಿ ಬಿಕಾಂ ಪಾಸ್‌” ಒಳ್ಳೆಯ ಸಿನಿಮಾ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ, ನಿರ್ಮಾಪಕರು ಮತ್ತದೇ ತಂಡದೊಂದಿಗೆ “ಗಜಾನನ ಅಂಡ್‌ ಗ್ಯಾಂಗ್‌” ನಿರ್ಮಿಸಿ, ಮುಗಿಸಿದ್ದು, ಸಹಜವಾಗಿಯೇ ಅವರಿಗೂ ಖುಷಿಕೊಟ್ಟಿದೆ. ಇನ್ನು, ಮೊದಲ ನಿರ್ಮಾಣದ “ನಮ್‌ ಗಣಿ ಬಿಕಾಂ ಪಾಸ್‌” ಸಿನಿಮಾ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಸಿಕ್ಕಾಪಟ್ಟೆ ವೀಕ್ಷಣೆ ಪಡೆದಿದ್ದು ವಿಶೇಷ.

ನಟನೆ ಹಾಗೂ ನಿರ್ದೇಶನ‌ ಈ ಎರಡರಲ್ಲೂ ಅದ್ಭುತ ಕೆಲಸಗಾರ ಎಂಬ ನಂಬಿಕೆಯ ಜೊತೆ ಭವ್ಯ ನಿರೀಕ್ಷೆ ಹುಟ್ಟಿಸಿದ ನಿರ್ದೇಶಕ ಅಭಿಷೇಕ್ ಶೆಟ್ಟಿ ಅವರಿಗಿರುವ ಸಿನಿಮಾ ಅಭಿಮಾನ, ಪ್ರೀತಿ ಕಂಡು ನಿರ್ಮಾಪಕರು “ಗಜಾನನ ಗ್ಯಾಂಗ್‌” ಎಂಬ ಭರವಸೆಯ ಸಿನಿಮಾ ಮಾಡಿದ್ದಾರೆ.”ಗಜಾನನ ಅಂಡ್‌ ಗ್ಯಾಂಗ್‌” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹೊರ ಬಂದಾಗಲೇ ಒಂದೊಳ್ಳೆಯ ನಿರೀಕ್ಷೆ ಹುಟ್ಟಿಸಿತ್ತು. ಅಷ್ಟೇ ಒಳ್ಳೆಯ ತಂಡ ಕಟ್ಟಿಕೊಂಡ ನಿರ್ದೇಶಕ ಅಭಿಷೇಕ್‌ ಶೆಟ್ಟಿ, ಚಿತ್ರದ ಮೊದಲ ಲುಕ್‌ನಲ್ಲೇ ಮಜಾ ಎನಿಸುವ ಸಿನಿಮಾ ಇದು ಎಂಬ ನಿರೀಕ್ಷೆ ಹೆಚ್ಚಿಸಿದ್ದೂ ಉಂಟು.

ಅವರ “ಗ್ಯಾಂಗ್‌” ಈಗ ಕಂಪ್ಲೀಟ್‌ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗುತ್ತಿದೆ. ಈಗಿನ ಟ್ರೆಂಡ್‌ಗೆ ತಕ್ಕಂತಹ ಸಿನಿಮಾ ಮಾಡಿರುವ ನಿರ್ದೇಶಕರು, ಯೂಥ್‌ ಟಾರ್ಗೆಟ್‌ ಮಾಡಿಯೇ ಸಿನಿಮಾ ಮಾಡಿದ್ದಾರೆ. ಎಲ್ಲಾ ವರ್ಗಕ್ಕೂ ಈ ಚಿತ್ರ ಇಷ್ಟವಾಗುತ್ತೆ ಎಂಬ ನಂಬಿಕೆಯೂ ಚಿತ್ರತಂಡಕ್ಕಿದೆ.

ಅಭಿಷೇಕ್‌ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಶ್ರೀ ಮತ್ತು ಅದಿತಿ ಪ್ರಭುದೇವ ಪ್ರಮುಖ ಆಕರ್ಷಣೆ. ನಿರ್ಮಾಪಕ ನಾಗೇಶ್ ಕುಮಾರ್ ಯುಎಸ್ ಅವರೊಂದಿಗೆ ಪ್ರಶಾಂತ್ ಕುಮಾರ್ ಶೆಟ್ಟಿ ಕೂಡ ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ. ಈಗಾಗಲೇ ಚಿತ್ರದ ಆಡಿಯೋ ಹಕ್ಕು ಆನಂದ್ ಆಡಿಯೋ ಖರೀದಿಸಿದ್ದು, ಪ್ರೇಮಿಗಳ ದಿನದಂದು ಬಿಡುಗಡೆಯಾದ “ಲವ್ ಡೇ ” ಸಾಂಗ್ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ.

ಸಹಜವಾಗಿಯೇ ಈ ಬೆಳವಣಿಗೆ ಚಿತ್ರತಂಡದ ಖುಷಿ ಹೆಚ್ಚಿಸಿದೆ. ಇತ್ತೀಚೆಗೆ ನಟ ಕಮ್‌ ನಿರ್ದೇಶಕ ಅಭಿಷೇಕ್ ಶೆಟ್ಟಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.ಈ ವೇಳೆ ಅರಸ್ ಸಿನಿಮಾಸ್ ಮೂಲಕ ನಾಗೇಂದ್ರ ಅರಸ್‌ ಅವರು “ನ್ಯಾಚುರಲ್ ಸ್ಟಾರ್”‌ ಎಂಬ ಬಿರುದು ನೀಡಿ, ಅಭಿಷೇಕ್ ಶೆಟ್ಟಿ ಅವರನ್ನು ಗೌರವಿಸಿದ್ದಾರೆ. ಸಿನಿಮಾ ತಂಡ ಈ ವೇಳೆ ಸಂಭ್ರಮಿಸುವುದರ ಜೊತೆಯಲ್ಲಿ, “ಗ್ಯಾಂಗ್” ಫಲಿತಾಂಶ ನೋಡಲು ಕಾತರರಾಗಿದ್ದಾರೆ. ಈಗಾಗಲೇ ಯಶಸ್ವಿಯಾಗಿ “ಬಿಕಾಂ ಪಾಸ್‌” ಮಾಡಿದ ಅಭಿಷೇಕ್‌ ಶೆಟ್ಟಿ ಮತ್ತು ತಂಡ, ಈಗ “ಗ್ಯಾಂಗ್‌” ಮೂಲಕ ಡಿಸ್ಟಿಂಕ್ಷನ್ ಪಡೆಯುವಂತಾಗಲಿ.

Categories
ಸಿನಿ ಸುದ್ದಿ

ಶಶಿ ಹಿಡಿದ ಚಿತ್ರಪಥ – ಚಾಲನೆ ಕೊಡಲಿದ್ದಾರೆ ಗಿರೀಶ್‌ ಕಾಸರವಳ್ಳಿ- ಕೈಯಲ್ಲೇ ಅಪರೂಪ ಫೋಟೋ ಮಾಹಿತಿ

“ಚಿತ್ರಪಥ”…

– ಇದು ಅಪರೂಪದಲ್ಲಿ ಅಪರೂಪ ಎನ್ನುವ ಸಿನಿಮಾ ಆರ್ಕೈವ್ ಪೋರ್ಟಲ್‌. ಇದರ ಹಿಂದೆ ನಿಂತಿರೋದು ಶಶಿಧರ ಚಿತ್ರದುರ್ಗ. ದಶಕಗಳ ಕಾಲ ಪತ್ರಕರ್ತರಾಗಿ, ಸಿನಿಮಾ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದ ಶಶಿ ಚಿತ್ರದುರ್ಗ, ಇದೀಗ ಹೊಸದೇನನ್ನೋ ಮಾಡಬೇಕೆಂದು ಹೊರಟಿದ್ದಾರೆ. “ಚಿತ್ರಪಥ” ಅವರ ಕನಸು. ಇದರಲ್ಲಿ ಸಿನಿಮಾ ಇತಿಹಾಸ, ಮಾಹಿತಿ, ಫೋಟೋಗಳನ್ನು ದಾಖಲಿಸುವುದರ ಜೊತೆಗೆ ಇಂದಿನ ಪೀಳಿಗೆಗೆ ಸಿನಿಮಾರಂಗದ ದಶಕಗಳ ಹಿಂದಿನ ಅಪೂರ್ವ ಮಾಹಿತಿ ಫೋಟೋಗಳನ್ನು ತಲುಪಿಸುವುದು, ಸಿನಿಮಾ ಕುರಿತಾಗಿ ಉತ್ತಮ ಅಭಿರುಚಿ ರೂಪಿಸುವುದು ‘ಚಿತ್ರಪಥ’ ಪೋರ್ಟಲ್‌ನ ಆಶಯ.

ಹಿರಿಯ ಸಿನಿಮಾ ಕಲಾವಿದರು ಹಾಗೂ ತಂತ್ರಜ್ಞರನ್ನು ಸ್ಮರಿಸುವುದರ ಜೊತೆಗೆ ಅಪರೂಪದ ಫೋಟೋ, ಪತ್ರ, ಮಾಹಿತಿಗಳನ್ನು ದಾಖಲಿಸುವುದು, ಉತ್ತಮ ಬರಹ, ಲೇಖನ ವಿಶ್ಲೇಷಣೆಗಳ ಮೂಲಕ ಸಿನಿಮಾ ಕುರಿತಾಗಿ ಒಳನೋಟಗಳನ್ನು ನೀಡುವ ನಿಟ್ಟಿನಲ್ಲಿ ‘ಚಿತ್ರಪಥ’ ಕೆಲಸ ಮಾಡಲಿದೆ.

ಇಲ್ಲಿ ಪ್ರಮುಖವಾಗಿ ಕನ್ನಡ ಸಿನಿಮಾ ಹಾಗೂ ಭಾರತದ ಇತರೆ ಪ್ರಾದೇಷಿಕ ಭಾಷಾ ಸಿನಿಮಾ ಸೇರಿದಂತೆ ಜಾಗತಿಕ ಸಿನಿಮಾ ಕುರಿತಾಗಿಯೂ ಫೋಟೋ ಮಾಹಿತಿ ಇರಲಿದೆ. ಜಾಗತಿಕ ಸಿನಿಮಾದ ವಸ್ತು, ವಿಷಯವನ್ನು ಕನ್ನಡಿಗರಿಗೆ ತಲುಪಿಸುವ ಪುಟ್ಟ ವಾಹಕವಾಗಿಯೂ ‘ಚಿತ್ರಪಥ’ ಆರ್ಕೈವ್ ಪೋರ್ಟಲ್ ಕಾರ್ಯನಿರ್ವಹಿಸಲಿದೆ ಎಂಬುದು ವಿಶೇಷ.

ಚಿತ್ರರಂಗ ನಡೆದುಬಂದ ಹಾದಿಯನ್ನು ದಾಖಲಿಸುವ, ಅಲ್ಲಿನ ಶ್ರೀಮಂತಿಕೆ, ಬೆರಗು, ಪನ್ನು ಹೇಳುವ, ಚಿತ್ರರಂಗದ ಅಂದಿನ ಕಾರ್ಯವೈಖರಿ, ಶೂಟಿಂಗ್ ಸ್ಟುಡಿಯೋಗಳು ಹಾಗೂ ಪರಿಕರಗಳ ವಿವರಗಳನ್ನು ನೀಡುವುದು, ಶ್ರೇಷ್ಠ ತಂತ್ರಜ್ಞರು ಹಾಗೂ ಕಲಾವಿದರ ಕುರಿತ ಮಾಹಿತಿ ನೀಡುವ ನಿಟ್ಟಿನಲ್ಲಿ ಹೆಜ್ಜೆ
ಇಡುವ ಒಂದು ಪ್ರಯತ್ನ. ಚಿತ್ರರಂಗದ ದಂತಕಥೆಗಳು ಎನಿಸಿದ ತಂತ್ರಜ್ಞರು ಮತ್ತು ಕಲಾವಿದರು ಅಪರೂಪದ ಫೋಟೋಗಳೊಂದಿಗಿನ ಮಾಹಿತಿ, ಪ್ರತಿಭಾವಂತರ ಕುರಿತ ಟಿಪ್ಪಣಿಗಳು ಕೂಡ ಇದರಲ್ಲಿರಲಿದೆ. ‘ನಾಸ್ಟಾಲ್ಜಿಯಾ”, “‘ಚಿತ್ರ-ಕಥೆ”, “ಶೂಟಿಂಗ್ ಸೋಜಿಗ”, “ಮಾಹಿತಿ– ವಿಶೇಷ”, “‘ನೆನಪು”, “ಪೋಸ್ಟರ್ ಮಾಹಿತಿ”, ” ಅತಿಥಿ ಅಕ್ಷರ” ವಿಭಾಗಗಳ ಮೂಲಕ ತೀರಾ ಅಕಾಡೆಮಿಕ್ ಧಾಟಿಯಲ್ಲಿ ಸಾಗದೆ, ಓದುಗರೊಂದಿಗೆ ಇಂಟರಾಕ್ಟೀವ್‌ ಆಗಿ ಮಾಹಿತಿ ನೀಡುವ ಪ್ರಯತ್ನ ಇಲ್ಲಾಗಲಿದೆ.


ಇನ್ನು, ಫೋಟೋಗಳ ಹಿಂದಿನ ಕತೆ, ಸಂದರ್ಭಗಳನ್ನು ಸ್ವತಃ ಫೋಟೋಗಳನ್ನು ಸೆರೆಹಿಡಿದ ಸ್ಥಿರಚಿತ್ರ ಛಾಯಾಗ್ರಾಹಕರು ನಿರೂಪಿಸಿದ್ದು, ಈ ವೀಡಿಯೋಗಳನ್ನು ’ಚಿತ್ರಪಥ’ ಯೂಟ್ಯೂಬ್ ಚಾನೆಲ್‌ನಲ್ಲಿ ನೋಡಬಹುದು. ‘ಚಿತ್ರಪಥ’ದಲ್ಲಿ ಪ್ರಮುಖವಾಗಿ ಕನ್ನಡ ಚಿತ್ರರಂಗದ ಬಗ್ಗೆ ಹೆಚ್ಚಿನ ಮಾಹಿತಿ
ಇರಲಿದೆ. ಕನ್ನಡ ಚಿತ್ರರಂಗದ ಹಿರಿಯ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರಾದ ಭವಾನಿ ಲಕ್ಷ್ಮೀನಾರಾಯಣ ಮತ್ತು ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ಫೋಟೋಗಳು ಪ್ರಮುಖವಾಗಿ ಪೋರ್ಟಲ್‍ನಲ್ಲಿ ಬಳಕೆಯಾಗಲಿವೆ.

ಭವಾನಿ ಲಕ್ಷ್ಮೀನಾರಾಯಣ
ಕನ್ನಡ ಸಿನಿಮಾಗಳು ಮದರಾಸಿನ ಸ್ಟುಡಿಯೋಗಳಲ್ಲಿ ಚಿತ್ರೀಕರಣಗೊಳ್ಳುತ್ತಿದ್ದ ಕಾಲ ಅದು. ಅಲ್ಲಿನ ಸಿನಿಮಾ ಸುದ್ದಿಗಳನ್ನು ತಮ್ಮ ಫೋಟೋಗಳೊಂದಿಗೆ ಕನ್ನಡನಾಡಿಗೆ ಮುಟ್ಟಿಸುತ್ತಿದ್ದವರು ಭವಾನಿ ಲಕ್ಷ್ಮೀನಾರಾಯಣ. ಆಗ ನಟ, ನಟಿಯರು, ತಂತ್ರಜ್ಞರಿಗೆ ಅವರು ಸ್ಟಾರ್ ಫೋಟೋಗ್ರಾಫರ್! ಕನ್ನಡ ಬೆಳ್ಳಿಪರದೆ ಪ್ರವೇಶಿಸಿದ ಬಹುತೇಕ ಕಲಾವಿದರ ಭಾವಚಿತ್ರಗಳನ್ನು ಕ್ಲಿಕ್ಕಿಸಿದ ಹೆಗ್ಗಳಿಕೆ ಅವರದು.

ಫೋಟೋ ಜರ್ನಲಿಸ್ಟ್ ಆಗಿ ಸುಮಾರು ಎರಡೂವರೆ ದಶಕಗಳ ಕಾಲ (1955ರಿಂದ 1980) ಅವರು ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಐವತ್ತರ ದಶಕದಲ್ಲಿ ಹೆಚ್ಚಿನ ಸಂಖ್ಯೆಯ ಸಿನಿಮಾ ಸ್ಟಿಲ್ ಛಾಯಾಗ್ರಾಹಕರು ಇರಲಿಲ್ಲ. ಹಾಗಾಗಿ ಭವಾನಿಯವರ ಸಿನಿಮಾ ಸ್ಟಿಲ್‍ಗಳಿಗೆ ಬಹುಬೇಡಿಕೆ ಇತ್ತು. ಚಲನಚಿತ್ರ ಇತಿಹಾಸ ಗ್ರಂಥ ಸೇರಿದಂತೆ ಹತ್ತಾರು ಸಿನಿಮಾ ಪುಸ್ತಕಗಳು, ಪತ್ರಿಕೆಗಳಲ್ಲಿ ಭವಾನಿಯವರು ಸೆರೆಹಿಡಿದ ಅಸಂಖ್ಯ ಛಾಯಾಚಿತ್ರಗಳು ಬಳಕೆಯಾಗಿವೆ. ರಾಜ್ಯೋತ್ಸವ ಪುರಸ್ಕಾರ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ, ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಸೇರಿದಂತೆ ಅವರಿಗೆ ಹತ್ತುಹಲವು ಗೌರವ ಸಂದಿವೆ.

ಪ್ರಗತಿ ಅಶ್ವತ್ಥನಾರಾಯಣ
ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಪ್ರಗತಿ ಸ್ಟುಡಿಯೋ ಹೆಸರು ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ. ಸ್ಥಿರಚಿತ್ರ ಛಾಯಾಗ್ರಹಣದ ಮೂಲಕ ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರಜಗತ್ತಿನ ಭಾಗವಾಗಿದ್ದು ಹೆಮ್ಮೆ. ಸಿನಿಮಾ ಸ್ಥಿರಚಿತ್ರ ಛಾಯಾಗ್ರಹಣದಲ್ಲಿ ಅಶ್ವತ್ಥ ಅವರದ್ದು ನಾಲ್ಕು ದಶಕಗಳ ಅನುಭವ. ಅಧಿಕೃತವಾಗಿ ಅಶ್ವತ್ಥರ ಸ್ಥಿರಚಿತ್ರ ಛಾಯಾಗ್ರಹಣ ವೃತ್ತಿ ಆರಂಭವಾಗಿದ್ದು ಮದರಾಸಿನಲ್ಲಿ ಬೆಳ್ಳಿಮೋಡ" ಚಿತ್ರದೊಂದಿಗೆ. ಅವರು ಸ್ಥಿರಚಿತ್ರ ಛಾಯಾಗ್ರಹಣ ಮಾಡಿದ ಕೊನೆಯ ಚಿತ್ರಪ್ರೇಮ ಪ್ರೇಮ ಪ್ರೇಮ”.`”ಪ್ರಗತಿ” ಸ್ಟುಡಿಯೋ ಆರಂಭಿಸಿದ ನಂತರ ಸುಮಾರು 275 ಸಿನಿಮಾಗಳಿಗೆ ಅಶ್ವತ್ಥರು ಸ್ಟಿಲ್ ಫೋಟೋಗ್ರಫಿ ಮಾಡಿದ್ದಾರೆ.

ಮದರಾಸಿನಲ್ಲಿದ್ದಾಗ ಮಲಯಾಳಂ ಚಿತ್ರಗಳೂ ಸೇರಿದಂತೆ 25ಕ್ಕೂ ಹೆಚ್ಚು ಚಿತ್ರಗಳಿಗೆ ದುಡಿದಿದ್ದರು. ಒಟ್ಟಾರೆ ಸ್ಟಿಲ್ ಫೋಟೋಗ್ರಾಫರ್ ಆಗಿ ಅವರು ಕೆಲಸ ಮಾಡಿದ ಚಿತ್ರಗಳ ಸಂಖ್ಯೆ 300 ದಾಟುತ್ತದೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಹನ್ನೊಂದು, ಸಿದ್ದಲಿಂಗಯ್ಯನವರ ಹದಿನಾಲ್ಕು ಸಿನಿಮಾಗಳಿಗೆ ಅಶ್ವತ್ಥರು ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮೈಲುಗಲ್ಲು ಎನಿಸಿದ ಹಲವಾರು ಕನ್ನಡ ಚಿತ್ರಗಳಿಗೆ ಕಾರ್ಯನಿರ್ವಹಿಸಿರುವ ಅಶ್ವತ್ಥರ ಸಂಗ್ರಹದಲ್ಲಿ ಸಹಸ್ರಾರು ಫೋಟೋ ನೆಗೆಟಿವ್ ಇವೆ. ಸಿನಿಮಾ ಸ್ಥಿರಚಿತ್ರ, ಸಿನಿಮಾಗೆ ಸಂಬಂಧಿಸಿದ ಇತರೆ ಫೋಟೋ, ಚಿತ್ರೀಕರಣದ ಸಂದರ್ಭದ ಕ್ಲಿಪಿಂಗ್, ಚಿತ್ರೋದ್ಯಮದ ಕಾರ್ಯಕ್ರಮ, ನಟ- ನಟಿಯರ ಭಾವಚಿತ್ರ, ಕಲಾವಿದರ ಕುಟುಂಬಗಳ ವೈಯಕ್ತಿಕ ಸಮಾರಂಭಗಳು… ಹೀಗೆ ಅವರ ಸಂಗ್ರಹದಲ್ಲಿನ ಅಸಂಖ್ಯಾತ ಫೋಟೋಗಳು ಕನ್ನಡ ಚಿತ್ರರಂಗದ ಇತಿಹಾಸ ದಾಖಲಿಸುತ್ತವೆ.

ಚಿತ್ರಪಥ ಸಂಪಾದಕ – ಶಶಿಧರ ಚಿತ್ರದುರ್ಗ
ಹದಿಮೂರು ವರ್ಷಗಳ ಕಾಲ ಕನ್ನಡಪ್ರಭ, ವಿಜಯ ಕರ್ನಾಟಕ, ದಿ ಸ್ಟೇಟ್‌ ವೆಬ್‌ ಪೋರ್ಟಲ್‌ನಲ್ಲಿ ಸಿನಿಮಾ ಪತ್ರಕರ್ತನಾಗಿ ಕೆಲಸ ಮಾಡಿದ್ದಾರೆ. ಸಿನಿಮಾಗೆ ಸಂಬಂಧಿಸಿದಂತೆ ಏಳು ಪುಸ್ತಕಗಳನ್ನು ಪ್ರಕಟಿಸಿದ್ದು, 2015ನೇ ಸಾಲಿನ ರಾಜ್ಯಸರ್ಕಾರದ ಸಿನಿಮಾ ಸಬ್ಸಿಡಿ ಕಮಿಟಿ ಸದಸ್ಯರಾಗೊ ಕಾರ್ಯನಿರ್ವಹಿಸಿದ್ದಾರೆ.

ಸದ್ಯ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಅಂದಹಾಗೆ, ‘ಚಿತ್ರಪಥ’ ಪೋರ್ಟಲ್ ವಿನ್ಯಾಸವನ್ನು ಕೃಷ್ಣೇಗೌಡ ಎನ್‌.ಎಲ್‌ ಮಾಡಿದರೆ, ಶೀರ್ಷಿಕೆ, ಲೋಗೋ ವಿನ್ಯಾಸವನ್ನು ರಂಜಿತ್ ರಾಮಚಂದ್ರನ್‌ ಮಾಡಿದ್ದಾರೆ.

‘ಚಿತ್ರಪಥ’ ಲಾಂಚ್
(www.chithrapatha.com)
ಮಾರ್ಚ್‌ 6ರಂದು ಶನಿವಾರ ರೇಣುಕಾಂಬ ಸ್ಟುಡಿಯೋದಲ್ಲಿ ಕನ್ನಡದ ಹೆಮ್ಮೆಯ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ‘ಚಿತ್ರಪಥ’ ಅನಾವರಣಗೊಳಿಸಲಿದ್ದಾರೆ.

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್‌, ಚಿತ್ರಸಾಹಿತಿ ಕವಿರಾಜ್‌ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕರಾದ ಭವಾನಿ ಲಕ್ಷ್ಮೀನಾರಾಯಣ ಮತ್ತು ಪ್ರಗತಿ ಅಶ್ವತ್ಥ ನಾರಾಯಣ ಅವರನ್ನು ಸನ್ಮಾನಿಸಲಾಗುವುದು.

Categories
ಸಿನಿ ಸುದ್ದಿ

ಟಾಸ್ಕ್ ಅಂತ ಬಂದಾಗ ದಿವ್ಯಾಗೆ ಯಾರೂ ಸಪೋರ್ಟ್ ಮಾಡಲ್ವಂತೆ- ಹಾಗಾದ್ರೆ ಬಿಗ್‌ ಬಾಸ್‌ ಮನೆಯಲ್ಲಿ ನಡೆಯುತ್ತಿ ರುವುದಾದರೂ ಏನು ?

ಬಿಗ್‌ಬಾಸ್‌ ಮನೆ ದಿನೇ ದಿನೆ ಸುದ್ದಿ ಆಗುತ್ತಿದೆ. ನಿತ್ಯವೂ ಒಂದಲ್ಲೊಂದು ಕುತೂಹಲಕಾರಿ ವಿಷಯಗಳು ರಿವೀಲ್‌ ಆಗುತ್ತಿವೆ. ವಿಭಿನ್ನವಾದ ವ್ಯಕ್ತಿತ್ವ, ವಿಭಿನ್ನವಾದ ಮನಸ್ಥಿತಿ ಜನರೆಲ್ಲಾ ಒಂದೆಡೆ ಸೇರಿಕೊಂಡರೆ ಅಲ್ಲಿ ಜಗಳ, ಕಿತ್ತಾಟ ಇದ್ದದ್ದೆ. ಹೌದು, ಈಗ ಬಿಗ್‌ ಬಾಸ್‌ ಮನೆ ಕೂಡ ಹಾಗೆ ಆಗಿದೆ. ಅಲ್ಲೀಗ ಹಾವು ಮುಂಗುಸಿಯಂತಾಡುವ ಆಟ ಅಲ್ಲೀಗ ಜೋರಾಗಿದೆ. ಸದ್ಯಕ್ಕೆ ಬಿಗ್‌ ಬಾಸ್‌ ಮನೆಯಲ್ಲಿ ವೀಕ್ಷಕರ ಕೇಂದ್ರ ಬಿಂದುವಾಗಿರುವ ದಿವ್ಯಾ ಸುರೇಶ್‌, ಮನೆಯಲ್ಲಿರುವ ಹಲವರ ಮೇಲೆ ಮುನಿಸಿಕೊಂಡಿದ್ದಾರೆ. ದಿವ್ಯಾ ಮಹಾ ಕೋಷಿಷ್ಟೆ ಎನ್ನುವುದು ಬಯಲಾಗ ತೊಡಗಿದೆ.

ಗುರುವಾರದ ಎಪಿಸೋಡ್‌ ನಲ್ಲಿ ದಿವ್ಯಾ ಸುರೇಶ್‌ ಹಾಗೂ ಧನುಶ್ರೀ ನಡುವೆ ಮಹಾ ಸಮರವೇ ನಡೆದು ಹೋಯಿತು. ಅವರಿಬ್ಬರ ಪೈಪೋಟಿಯಂತೂ ನೋಡುಗರಿಗೆ ಅಚ್ಚರಿ ಎಬ್ಬಿಸಿತು. ಇವರಿಬ್ಬರ ಕಾಂಬಿನೇಷನ್ ನಲ್ಲಿ, ಒಬ್ಬರನ್ಬೊಬ್ಬರು ಬಿಟ್ಟೇ ಕೊಡದೆ ಆಟ ಆಡಿದರು. ಇದರಲ್ಲಿ ಧನುಶ್ರೀಗೆ ಒಂದು ಅಂಕವಾದರೆ, ದಿವ್ಯಾ ಸುರೇಶ್ ಗೆ ನಾಲ್ಕು ಅಂಕ ದೊರೆಯಿತು. ಟಾಸ್ಕ್ ನಲ್ಲಿ ದಿವ್ಯಾ ಸುರೇಶ್‌ ಗೆ ಸುಲಭವಾದ ಜಯ ದೊರೆಯಿತು. ಆದಾ ಮೇಲೆ ಬಿಗ್‌ ಬಾಸ್‌ ನ ಲಿವಿಂಗ್‌ ಏರಿಯಾದಲ್ಲಿ ಗುಸು ಗುಸು ಶುರುವಾಯಿತು. ಅದೇನಪ್ಪಾ ಅಂದ್ರೆ, ನಾವಿಬ್ಬರು ಸ್ಪರ್ಧೆಯಲ್ಲಿ ಚೆನ್ನಾಗಿಯೇ ಆಡಿದ್ದೀವಿ ಅನ್ನುತ್ತಾ, ಮೊದಲು ದಿವ್ಯಾ ಸುರೇಶ್ ಮಾತು ಶುರುಮಾಡಿದರು.

” ನನಗೆ ಕೋಪ ಬಲು ಬೇಗ ಬಂದುಬಿಡುತ್ತದೆ. ಅದ್ಯಾವುದೇ ಸಮಯದಲ್ಲೂ ನನಗೆ ನೋವಾದರೆ ಕೋಪದಲ್ಲಿ ರೇಗಿ ಬಿಡುವ ಮನೋಭಾವ ನನ್ನದು. ಇವತ್ತಿನ ಟಾಸ್ಕ್ ನಲ್ಲಿ ನನಗನಿಸಿತು, ಅಲ್ಲಿ ನಾವು ಆಡುತ್ತಿದ್ದಾಗ, ಒಬ್ಬರೂ ನನ್ನ ಹೆಸರು ಕೂಗಲಿಲ್ಲ. ಆಟಗಳಲ್ಲಿ ಆಟಗಾರನಿಗೆ ಪ್ರೋತ್ಸಾಹ ಕೊಡುವುದು ಸಂಸ್ಕ್ರತಿ.‌ ಇದರಿಂದ ನಮಗೆ ಆಟವಾಡಲು ಇನ್ನೂ ಜೋಶ್ ಬರುತ್ತದೆ. ಆದರೆ ಕೇವಲ ಧನುಶ್ರೀ ಅಂತಾನೆ ಕೂಗುತ್ತಿದ್ದರು‌. ಇದು ನನಗೆ ಸಿಕ್ಕಾಪಟ್ಟೆ ನೋವಾಯಿತು‌‌. ಇದರಿಂದ ನನಗೆ ನನ್ನಲ್ಲೇ, ಇಲ್ಲ ನಾನು ಗೆಲ್ಲಬೇಕು ಅಂತೆನಿಸಿ ಛಲ ಬಂತು. ಸೋ ಗೆಲುವು ನನ್ನದಾಯಿತುʼ ಅಂತ ಪ್ರತಿಸ್ಪರ್ಧಿ ಧನುಶ್ರೀ ಜೊತೆ ಹೇಳಿಕೊಂಡರು.


ದಿವ್ಯಾ ಮಾತನ್ನು ಗಂಭೀರವಾಗಿ ಆಲಿಸಿದ ಧನುಶ್ರೀ, ಮಾತು ಶುರು ಮಾಡಿದರು.” ನನ್ನ ಮುಖಕ್ಕೂ ನೀನಉ ಹೊಡೆದು, ತುಂಬಾ ನೋವಾಯಿತು. ಆದರೆ ಅದು ಗೇಮ್. ಅದು ಗೇಮ್ ತರಹನೇ ತಗೊಂಡು ಹೋಗಬೇಕುʼ ಅಂದರು. ಇದಕ್ಕೆ ದಿವ್ಯಾ ಸುರೇಶ್ ಇನ್ನಷ್ಟು ತನ್ನ ಭಾವನೆಗಳನ್ನು ಹೊರ ಹಾಕಲು ಪ್ರಯತ್ನಿಸಿ,” ನನಗೂ ನೀನು ಮುಖಕ್ಕೆ ಹೊಡೆದಿರುವೆ.‌ ಸಡನ್ ಆಗಿ ಕೋಪ ಬಂತುʼ ಅಂತ ಬಿಡದ ಮಾತನ್ನು ಮುಂದುವರಿಸುತ್ತಾ ಹೋದರು. ಇದನ್ನು ಗಮನಿಸಿದ ಟಿಕ್ ಟಾಕ್ ಬೆಡಗಿ ಧನುಶ್ರೀ, ನಿಮ್ಮ ಮನಸ್ಸು ನನಗೆ ಅರ್ಥ ಆಗುತ್ತೆ, ನಾ ಸದಾ ನಿಮ್ಮ ಜೊತೆಯಲ್ಲಿರುವ ಅಂತ ಹೊಗಳಿಕೆಯ ಮಾತುಗಳನ್ನಾಡಿ ಸುಮ್ಮನಾದರು.
……………………

error: Content is protected !!