ಗ್ಯಾಂಗ್‌ ಕಟ್ಟಿಕೊಂಡ ಅಭಿಗೆ ಸಿಕ್ತು ಭರ್ಜರಿ ಬಿರುದು – ನ್ಯಾಚುರಲ್‌ ಸ್ಟಾರ್‌ ಬಿರುದು ಪಡೆದರು ಬಿಕಾಂ ಶೆಟ್ರು!

ಒಂದು ಸಿನಿಮಾ ನಿರ್ಮಾಣ ಮಾಡುವುದು ಸುಲಭದ ಮಾತಲ್ಲ. ಅದರಲ್ಲೂ ಹೊಸಬರನ್ನು ನಂಬಿ ಹಣ ಹಾಕುವುದಂತೂ ತೀರಾ ಸವಾಲಿನ ಕೆಲಸವೇ ಸರಿ. ಅಂಥದ್ದೊಂದು ಸವಾಲು ಸ್ವೀಕರಿಸಿ, ಸಂಪೂರ್ಣ ಹೊಸಬರನ್ನು ನಂಬಿ ಹಣ ಹಾಕುವ ಮೂಲಕ ಸುದ್ದಿಯಾಗಿದ್ದು, “ನಮ್‌ ಗಣಿ ಬಿಕಾಂ ಪಾಸ್‌” ಚಿತ್ರ ನಿರ್ಮಾಪಕ ನಾಗೇಶ್‌ ಕುಮಾರ್.‌

ನಟನೆ ಹಾಗೂ ನಿರ್ದೇಶನ‌ ಈ ಎರಡರಲ್ಲೂ ಅದ್ಭುತ ಕೆಲಸಗಾರ ಎಂಬ ನಂಬಿಕೆಯ ಜೊತೆ ಭವ್ಯ ನಿರೀಕ್ಷೆ ಹುಟ್ಟಿಸಿದ ನಿರ್ದೇಶಕ ಅಭಿಷೇಕ್ ಶೆಟ್ಟಿ ಅವರಿಗಿರುವ ಸಿನಿಮಾ ಅಭಿಮಾನ, ಪ್ರೀತಿ ಕಂಡು ನಿರ್ಮಾಪಕರು “ಗಜಾನನ ಗ್ಯಾಂಗ್‌” ಎಂಬ ಭರವಸೆಯ ಸಿನಿಮಾ ಮಾಡಿದ್ದಾರೆ

ಹೌದು, “ನಮ್‌ ಗಣಿ ಬಿಕಾಂ ಪಾಸ್” ಸಿನಿಮಾ ಗಳಿಕೆಯಲ್ಲಿ ದೊಡ್ಡ ಮಟ್ಟದ ಸದ್ದು ಮಾಡದಿದ್ದರೂ, ಒಂದೊಳ್ಳೆಯ ಸಂದೇಶದ ಸಿನಿಮಾ ಅನ್ನುವ ಮಾತು ಜೋರಾಗಿಯೇ ಕೇಳಿಬಂತು. ಸಿನಿಮಾ ಹಣ ಮಾಡದಿದ್ದರೂ, ಹೆಸರು ತಂದು ಕೊಟ್ಟಿದೆ. ಆ ಖುಷಿಯಲ್ಲೇ ಇದ್ದ ನಿರ್ಮಾಪಕ ಪುನಃ, ಅದೇ ತಂಡದೊಂದಿಗೆ ಮತ್ತೊಂದು ಸಿನಿಮಾ ನಿರ್ಮಾಣಕ್ಕೂ ಮುಂದಾದರು.‌ ಅದಕ್ಕೆ ಕಾರಣ, ಒಳ್ಳೆಯ ಕಥೆ. ನಂಬಿಕೆ ಉಳಿಸಿಕೊಂಡಿದ್ದ ಚಿತ್ರತಂಡ. ಹಾಗಾಗಿ “ಗಜಾನನ ಅಂಡ್‌ ಗ್ಯಾಂಗ್‌” ಹೆಸರಿನ ಸಿನಿಮಾ ನಿರ್ಮಾಣ ಕೈಗೆತ್ತಿಕೊಂಡ ನಾಗೇಶ್‌ ಕುಮಾರ್‌, ಅದನ್ನು ಯಶಸ್ವಿಯಾಗಿ ಮುಗಿಸಿದ್ದಾರೆ ಕೂಡ.

ಅಭಿಷೇಕ್‌ ಶೆಟ್ಟಿ ನಿರ್ದೇಶನದ “ನಮ್‌ ಗಣಿ ಬಿಕಾಂ ಪಾಸ್‌” ಒಳ್ಳೆಯ ಸಿನಿಮಾ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ, ನಿರ್ಮಾಪಕರು ಮತ್ತದೇ ತಂಡದೊಂದಿಗೆ “ಗಜಾನನ ಅಂಡ್‌ ಗ್ಯಾಂಗ್‌” ನಿರ್ಮಿಸಿ, ಮುಗಿಸಿದ್ದು, ಸಹಜವಾಗಿಯೇ ಅವರಿಗೂ ಖುಷಿಕೊಟ್ಟಿದೆ. ಇನ್ನು, ಮೊದಲ ನಿರ್ಮಾಣದ “ನಮ್‌ ಗಣಿ ಬಿಕಾಂ ಪಾಸ್‌” ಸಿನಿಮಾ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಸಿಕ್ಕಾಪಟ್ಟೆ ವೀಕ್ಷಣೆ ಪಡೆದಿದ್ದು ವಿಶೇಷ.

ನಟನೆ ಹಾಗೂ ನಿರ್ದೇಶನ‌ ಈ ಎರಡರಲ್ಲೂ ಅದ್ಭುತ ಕೆಲಸಗಾರ ಎಂಬ ನಂಬಿಕೆಯ ಜೊತೆ ಭವ್ಯ ನಿರೀಕ್ಷೆ ಹುಟ್ಟಿಸಿದ ನಿರ್ದೇಶಕ ಅಭಿಷೇಕ್ ಶೆಟ್ಟಿ ಅವರಿಗಿರುವ ಸಿನಿಮಾ ಅಭಿಮಾನ, ಪ್ರೀತಿ ಕಂಡು ನಿರ್ಮಾಪಕರು “ಗಜಾನನ ಗ್ಯಾಂಗ್‌” ಎಂಬ ಭರವಸೆಯ ಸಿನಿಮಾ ಮಾಡಿದ್ದಾರೆ.”ಗಜಾನನ ಅಂಡ್‌ ಗ್ಯಾಂಗ್‌” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹೊರ ಬಂದಾಗಲೇ ಒಂದೊಳ್ಳೆಯ ನಿರೀಕ್ಷೆ ಹುಟ್ಟಿಸಿತ್ತು. ಅಷ್ಟೇ ಒಳ್ಳೆಯ ತಂಡ ಕಟ್ಟಿಕೊಂಡ ನಿರ್ದೇಶಕ ಅಭಿಷೇಕ್‌ ಶೆಟ್ಟಿ, ಚಿತ್ರದ ಮೊದಲ ಲುಕ್‌ನಲ್ಲೇ ಮಜಾ ಎನಿಸುವ ಸಿನಿಮಾ ಇದು ಎಂಬ ನಿರೀಕ್ಷೆ ಹೆಚ್ಚಿಸಿದ್ದೂ ಉಂಟು.

ಅವರ “ಗ್ಯಾಂಗ್‌” ಈಗ ಕಂಪ್ಲೀಟ್‌ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗುತ್ತಿದೆ. ಈಗಿನ ಟ್ರೆಂಡ್‌ಗೆ ತಕ್ಕಂತಹ ಸಿನಿಮಾ ಮಾಡಿರುವ ನಿರ್ದೇಶಕರು, ಯೂಥ್‌ ಟಾರ್ಗೆಟ್‌ ಮಾಡಿಯೇ ಸಿನಿಮಾ ಮಾಡಿದ್ದಾರೆ. ಎಲ್ಲಾ ವರ್ಗಕ್ಕೂ ಈ ಚಿತ್ರ ಇಷ್ಟವಾಗುತ್ತೆ ಎಂಬ ನಂಬಿಕೆಯೂ ಚಿತ್ರತಂಡಕ್ಕಿದೆ.

ಅಭಿಷೇಕ್‌ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಶ್ರೀ ಮತ್ತು ಅದಿತಿ ಪ್ರಭುದೇವ ಪ್ರಮುಖ ಆಕರ್ಷಣೆ. ನಿರ್ಮಾಪಕ ನಾಗೇಶ್ ಕುಮಾರ್ ಯುಎಸ್ ಅವರೊಂದಿಗೆ ಪ್ರಶಾಂತ್ ಕುಮಾರ್ ಶೆಟ್ಟಿ ಕೂಡ ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ. ಈಗಾಗಲೇ ಚಿತ್ರದ ಆಡಿಯೋ ಹಕ್ಕು ಆನಂದ್ ಆಡಿಯೋ ಖರೀದಿಸಿದ್ದು, ಪ್ರೇಮಿಗಳ ದಿನದಂದು ಬಿಡುಗಡೆಯಾದ “ಲವ್ ಡೇ ” ಸಾಂಗ್ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ.

ಸಹಜವಾಗಿಯೇ ಈ ಬೆಳವಣಿಗೆ ಚಿತ್ರತಂಡದ ಖುಷಿ ಹೆಚ್ಚಿಸಿದೆ. ಇತ್ತೀಚೆಗೆ ನಟ ಕಮ್‌ ನಿರ್ದೇಶಕ ಅಭಿಷೇಕ್ ಶೆಟ್ಟಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.ಈ ವೇಳೆ ಅರಸ್ ಸಿನಿಮಾಸ್ ಮೂಲಕ ನಾಗೇಂದ್ರ ಅರಸ್‌ ಅವರು “ನ್ಯಾಚುರಲ್ ಸ್ಟಾರ್”‌ ಎಂಬ ಬಿರುದು ನೀಡಿ, ಅಭಿಷೇಕ್ ಶೆಟ್ಟಿ ಅವರನ್ನು ಗೌರವಿಸಿದ್ದಾರೆ. ಸಿನಿಮಾ ತಂಡ ಈ ವೇಳೆ ಸಂಭ್ರಮಿಸುವುದರ ಜೊತೆಯಲ್ಲಿ, “ಗ್ಯಾಂಗ್” ಫಲಿತಾಂಶ ನೋಡಲು ಕಾತರರಾಗಿದ್ದಾರೆ. ಈಗಾಗಲೇ ಯಶಸ್ವಿಯಾಗಿ “ಬಿಕಾಂ ಪಾಸ್‌” ಮಾಡಿದ ಅಭಿಷೇಕ್‌ ಶೆಟ್ಟಿ ಮತ್ತು ತಂಡ, ಈಗ “ಗ್ಯಾಂಗ್‌” ಮೂಲಕ ಡಿಸ್ಟಿಂಕ್ಷನ್ ಪಡೆಯುವಂತಾಗಲಿ.

Related Posts

error: Content is protected !!