ಟಾಸ್ಕ್ ಅಂತ ಬಂದಾಗ ದಿವ್ಯಾಗೆ ಯಾರೂ ಸಪೋರ್ಟ್ ಮಾಡಲ್ವಂತೆ- ಹಾಗಾದ್ರೆ ಬಿಗ್‌ ಬಾಸ್‌ ಮನೆಯಲ್ಲಿ ನಡೆಯುತ್ತಿ ರುವುದಾದರೂ ಏನು ?

ಬಿಗ್‌ಬಾಸ್‌ ಮನೆ ದಿನೇ ದಿನೆ ಸುದ್ದಿ ಆಗುತ್ತಿದೆ. ನಿತ್ಯವೂ ಒಂದಲ್ಲೊಂದು ಕುತೂಹಲಕಾರಿ ವಿಷಯಗಳು ರಿವೀಲ್‌ ಆಗುತ್ತಿವೆ. ವಿಭಿನ್ನವಾದ ವ್ಯಕ್ತಿತ್ವ, ವಿಭಿನ್ನವಾದ ಮನಸ್ಥಿತಿ ಜನರೆಲ್ಲಾ ಒಂದೆಡೆ ಸೇರಿಕೊಂಡರೆ ಅಲ್ಲಿ ಜಗಳ, ಕಿತ್ತಾಟ ಇದ್ದದ್ದೆ. ಹೌದು, ಈಗ ಬಿಗ್‌ ಬಾಸ್‌ ಮನೆ ಕೂಡ ಹಾಗೆ ಆಗಿದೆ. ಅಲ್ಲೀಗ ಹಾವು ಮುಂಗುಸಿಯಂತಾಡುವ ಆಟ ಅಲ್ಲೀಗ ಜೋರಾಗಿದೆ. ಸದ್ಯಕ್ಕೆ ಬಿಗ್‌ ಬಾಸ್‌ ಮನೆಯಲ್ಲಿ ವೀಕ್ಷಕರ ಕೇಂದ್ರ ಬಿಂದುವಾಗಿರುವ ದಿವ್ಯಾ ಸುರೇಶ್‌, ಮನೆಯಲ್ಲಿರುವ ಹಲವರ ಮೇಲೆ ಮುನಿಸಿಕೊಂಡಿದ್ದಾರೆ. ದಿವ್ಯಾ ಮಹಾ ಕೋಷಿಷ್ಟೆ ಎನ್ನುವುದು ಬಯಲಾಗ ತೊಡಗಿದೆ.

ಗುರುವಾರದ ಎಪಿಸೋಡ್‌ ನಲ್ಲಿ ದಿವ್ಯಾ ಸುರೇಶ್‌ ಹಾಗೂ ಧನುಶ್ರೀ ನಡುವೆ ಮಹಾ ಸಮರವೇ ನಡೆದು ಹೋಯಿತು. ಅವರಿಬ್ಬರ ಪೈಪೋಟಿಯಂತೂ ನೋಡುಗರಿಗೆ ಅಚ್ಚರಿ ಎಬ್ಬಿಸಿತು. ಇವರಿಬ್ಬರ ಕಾಂಬಿನೇಷನ್ ನಲ್ಲಿ, ಒಬ್ಬರನ್ಬೊಬ್ಬರು ಬಿಟ್ಟೇ ಕೊಡದೆ ಆಟ ಆಡಿದರು. ಇದರಲ್ಲಿ ಧನುಶ್ರೀಗೆ ಒಂದು ಅಂಕವಾದರೆ, ದಿವ್ಯಾ ಸುರೇಶ್ ಗೆ ನಾಲ್ಕು ಅಂಕ ದೊರೆಯಿತು. ಟಾಸ್ಕ್ ನಲ್ಲಿ ದಿವ್ಯಾ ಸುರೇಶ್‌ ಗೆ ಸುಲಭವಾದ ಜಯ ದೊರೆಯಿತು. ಆದಾ ಮೇಲೆ ಬಿಗ್‌ ಬಾಸ್‌ ನ ಲಿವಿಂಗ್‌ ಏರಿಯಾದಲ್ಲಿ ಗುಸು ಗುಸು ಶುರುವಾಯಿತು. ಅದೇನಪ್ಪಾ ಅಂದ್ರೆ, ನಾವಿಬ್ಬರು ಸ್ಪರ್ಧೆಯಲ್ಲಿ ಚೆನ್ನಾಗಿಯೇ ಆಡಿದ್ದೀವಿ ಅನ್ನುತ್ತಾ, ಮೊದಲು ದಿವ್ಯಾ ಸುರೇಶ್ ಮಾತು ಶುರುಮಾಡಿದರು.

” ನನಗೆ ಕೋಪ ಬಲು ಬೇಗ ಬಂದುಬಿಡುತ್ತದೆ. ಅದ್ಯಾವುದೇ ಸಮಯದಲ್ಲೂ ನನಗೆ ನೋವಾದರೆ ಕೋಪದಲ್ಲಿ ರೇಗಿ ಬಿಡುವ ಮನೋಭಾವ ನನ್ನದು. ಇವತ್ತಿನ ಟಾಸ್ಕ್ ನಲ್ಲಿ ನನಗನಿಸಿತು, ಅಲ್ಲಿ ನಾವು ಆಡುತ್ತಿದ್ದಾಗ, ಒಬ್ಬರೂ ನನ್ನ ಹೆಸರು ಕೂಗಲಿಲ್ಲ. ಆಟಗಳಲ್ಲಿ ಆಟಗಾರನಿಗೆ ಪ್ರೋತ್ಸಾಹ ಕೊಡುವುದು ಸಂಸ್ಕ್ರತಿ.‌ ಇದರಿಂದ ನಮಗೆ ಆಟವಾಡಲು ಇನ್ನೂ ಜೋಶ್ ಬರುತ್ತದೆ. ಆದರೆ ಕೇವಲ ಧನುಶ್ರೀ ಅಂತಾನೆ ಕೂಗುತ್ತಿದ್ದರು‌. ಇದು ನನಗೆ ಸಿಕ್ಕಾಪಟ್ಟೆ ನೋವಾಯಿತು‌‌. ಇದರಿಂದ ನನಗೆ ನನ್ನಲ್ಲೇ, ಇಲ್ಲ ನಾನು ಗೆಲ್ಲಬೇಕು ಅಂತೆನಿಸಿ ಛಲ ಬಂತು. ಸೋ ಗೆಲುವು ನನ್ನದಾಯಿತುʼ ಅಂತ ಪ್ರತಿಸ್ಪರ್ಧಿ ಧನುಶ್ರೀ ಜೊತೆ ಹೇಳಿಕೊಂಡರು.


ದಿವ್ಯಾ ಮಾತನ್ನು ಗಂಭೀರವಾಗಿ ಆಲಿಸಿದ ಧನುಶ್ರೀ, ಮಾತು ಶುರು ಮಾಡಿದರು.” ನನ್ನ ಮುಖಕ್ಕೂ ನೀನಉ ಹೊಡೆದು, ತುಂಬಾ ನೋವಾಯಿತು. ಆದರೆ ಅದು ಗೇಮ್. ಅದು ಗೇಮ್ ತರಹನೇ ತಗೊಂಡು ಹೋಗಬೇಕುʼ ಅಂದರು. ಇದಕ್ಕೆ ದಿವ್ಯಾ ಸುರೇಶ್ ಇನ್ನಷ್ಟು ತನ್ನ ಭಾವನೆಗಳನ್ನು ಹೊರ ಹಾಕಲು ಪ್ರಯತ್ನಿಸಿ,” ನನಗೂ ನೀನು ಮುಖಕ್ಕೆ ಹೊಡೆದಿರುವೆ.‌ ಸಡನ್ ಆಗಿ ಕೋಪ ಬಂತುʼ ಅಂತ ಬಿಡದ ಮಾತನ್ನು ಮುಂದುವರಿಸುತ್ತಾ ಹೋದರು. ಇದನ್ನು ಗಮನಿಸಿದ ಟಿಕ್ ಟಾಕ್ ಬೆಡಗಿ ಧನುಶ್ರೀ, ನಿಮ್ಮ ಮನಸ್ಸು ನನಗೆ ಅರ್ಥ ಆಗುತ್ತೆ, ನಾ ಸದಾ ನಿಮ್ಮ ಜೊತೆಯಲ್ಲಿರುವ ಅಂತ ಹೊಗಳಿಕೆಯ ಮಾತುಗಳನ್ನಾಡಿ ಸುಮ್ಮನಾದರು.
……………………

Related Posts

error: Content is protected !!