ದಾಖಲೆ ಸೃಷ್ಟಿಸುವುದು ಖಾತರಿ ಆಯಿತು ರಾಬರ್ಟ್‌- ಧೂಳ್ಳೆಬಿಸಲು ರೆಡಿಯಾದರು ಚಾಲೆಂಜಿಂಗ್‌ ಸ್ಟಾರ್‌

ಕನ್ನಡ ಚಿತ್ರರಂಗ ಈ ದಿನಕ್ಕಾಗಿ ಕಾಯುತ್ತಿತ್ತು. ಲಾಕ್‌ ಡೌನ್‌ ನಂತರ ಚಿತ್ರರಂಗಕ್ಕೆ ಮತ್ತೆ ಚೇತರಿಕೆ ಬರಬೇಕಾದರೆ ದರ್ಶನ್‌ ಅಭಿನಯದ ʼರಾಬರ್ಟ್‌ʼ ತೆರೆಗೆ ಬರಲೇಬೇಕು ಅಂತ ಅಭಿಮಾನಿಗಳು ಮಾತ್ರವಲ್ಲ, ಚಿತ್ರರಂಗ ಕೂಡ ಬಯಸಿತ್ತು. ಆ ಕ್ಷಣ ಈಗ ಬಂದೇ ಬಿಟ್ಟಿದೆ. ಕರ್ನಾಟಕದಲ್ಲಿ ದರ್ಶನ್‌ ಅಭಿಮಾನಿಗಳ ಅಬ್ಬರಕ್ಕೆ ಕೊರೋನಾ ಭಯ ಕಿತ್ತುಕೊಂಡು ಹಾರುವುದು ಗ್ಯಾರಂಟಿ ಆಗಿದೆ. ಲಾಕ್‌ ಡೌನ್‌ ನಂತರ ಮಾತ್ರವಲ್ಲ ಇದುವರೆಗಿನ ಚಿತ್ರ ರಂಗದ ದಾಖಲೆಯೇ ಮುರಿದು ಹೋಗುವ ಹಾಗೆ ದರ್ಶನ್‌ ಅಭಿನಯದ ʼ ರಾಬರ್ಟ್‌ʼ ಚಿತ್ರ ನಾಳೆ (ಮಾ.11) ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ.

ರಾಜ್ಯದಲ್ಲಿ ಒಟ್ಟು ಈ ಚಿತ್ರ 656 ಚಿತ್ರ ಮಂದಿರಗಳಲ್ಲಿ ಗ್ರಾಂಡ್‌ ಎಂಟ್ರಿ ಪಡೆಯುತ್ತಿದೆ. ಇನ್ನೊಂದು ದಾಖಲೆ ಎನ್ನುವ ಹಾಗೆ ನಾಳೆ ಬೆಳಗಿನ ಜಾವದಿಂದಲೇ ಸರಿ ಸುಮಾರು 50 ಕ್ಕೂ ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆ ಕಾಣುತ್ತಿರುವುದು ವಿಶೇಷ ಅಂತ ಚಿತ್ರ ತಂಡ ಹೇಳಿದೆ.

ಕೇರಳ, ದೆಹಲಿ, ತಮಿಳುನಾಡು ಸೇರಿದಂತೆ ಪ್ರಮುಖ ರಾಜ್ಯಗಳಲ್ಲೂ ʼರಾಬರ್ಟ್ʼ ದರ್ಶನ ಆಗಲಿದೆಯಂತೆ. ಈಗಾಗಲೇ ರಾಬರ್ಟ್‌ ಪ್ರೀ ರಿಲೀಸ್‌ ಮಾರ್ಕೆಟ್‌ ನಲ್ಲೂ ದಾಖಲೆ ಸೃಷ್ಟಿಸಿದೆ. ಟಿವಿ ರೈಟ್ಸ್‌ ಹಾಗೂ ಡಿಜಿಟಲ್‌ ರೈಟ್ಸ್‌ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಚಿತ್ರ ತಂಡದ ಮೂಲಗಳ ಪ್ರಕಾರ 100 ಕೋಟಿಗೆ ರಾಬರ್ಟ್‌ ಡಿಜಿಟಲ್‌ ರೈಟ್ಸ್‌ ಸೇಲ್‌ ಆಗಿದೆಯಂತೆ. ಹಾಗಾಗಿ ರಿಲೀಸ್‌ ಮುಂಚಿನಾ ಬಿಸಿನೆಸ್‌ ವಿಚಾರದಲ್ಲೂ ರಾಬರ್ಟ್‌ ದೊಡ್ಡ ಸುದ್ದಿಯಲ್ಲಿದೆ. ಅದರ ಜತೆಗೀಗ ಮೊದಲ ದಿನದ ಬಿಡುಗಡೆಯಲ್ಲೂ ʼರಾಬರ್ಟ್ʼ ಹೊಸ ದಾಖಲೆ ಸೃಷ್ಟಿಸಿದೆ.

ಚಿತ್ರ ತಂಡದ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ಕನ್ನಡ ಸಿನಿಮಾವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವುದು ಇದೇ ಮೊದಲು. ಇನ್ನೊಂದು ವಿಶೇಷ ಅಂದ್ರೆ “ಪೊಗರುʼ ಹಾಗೂ “ಹೀರೋʼ ಸಿನಿಮಾ ಪ್ರದರ್ಶನವಾಗುತ್ತಿದ್ದ ಹಲವು ಚಿತ್ರಮಂದಿರಗಳು “ರಾಬರ್ಟ್ʼ ಪಾಲಾಗಿವೆ. ಹಾಗೆಯೇ ಮೊದಲ ದಿನವೇ ಅತಿ ಹೆಚ್ಚು ಶೋ ಕಾಣುತ್ತಿದೆ ʼರಾಬರ್ಟ್‌ʼ ಚಿತ್ರ. ಚಿತ್ರ ತಂಡದ ಮೂಲಗಳ ಪ್ರಕಾರ 100 ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್‌ಗಳಲ್ಲಿ ರಾಬರ್ಟ್‌ ಸಿನಿಮಾ ರಿಲೀಸ್ ಆಗುತ್ತಿದೆ. ಮೊದಲ ದಿನ ಎಲ್ಲ ಚಿತ್ರಮಂದಿರಗಳಲ್ಲಿ ಸೇರಿ 2786 ಶೋಗಳು ರಾಬರ್ಟ್ ಸಿನಿಮಾ ಪ್ರದರ್ಶನ ಕಾಣಲಿದೆ. ಇದು ಸ್ಯಾಂಡಲ್‌ವುಡ್ ಪಾಲಿಗೆ ನೂತನ ದಾಖಲೆ.

Related Posts

error: Content is protected !!