ವೀಣೆ ಪ್ರಣೀತಾ – ಹೊಸ ಲುಕ್‌ನಲ್ಲಿ ಬೆಡಗಿ

ನಟಿ ಪ್ರಣಿತಾ ಸುಭಾಷ್‌, ವೀಣಾವಾದನ ಮಾಡುತ್ತಿದ್ದಾರೆ! ಅರೇ, ಹಾಗಂತ ಅವರೇನು ವೀಣೆ ನುಡಿಸೋಕೆ ಮುಂದಾಗಿದ್ದಾರಾ ಅಂದುಕೊಳ್ಳುವಂತಿಲ್ಲ. ಸದ್ಯಕ್ಕೆ ಪ್ರಣೀತಾ ಸಿನಿಮಾಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ತಮ್ಮ ಸಾಮಾಜಿಕ ಕಾರ್ಯಕ್ರಮಗಳ ಕಡೆ ಗಮನಹರಿಸುತ್ತಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಪ್ರಣೀತಾ, ಆಗಾಗ ತಮ್ಮ ಚಂದದ ಫೋಟೋಗಳನ್ನು ಹಾಕಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆಯೂ ಮಾತಾಡುತ್ತಿರುತ್ತಾರೆ. ಪ್ರಣೀತಾ ಮಾಡರ್ನ್ ಹುಡುಗಿಯಾದರೂ ,ಸಂಪ್ರದಾಯಸ್ಥಳಾಗಿಯೂ ಅವಾಗವಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಸಾಮಾಜಿಕವಾಗಿ ತನ್ನದೇ ಆದ ರೀತಿಯಲ್ಲಿ ಸಮಾಜಕಾರ್ಯಗಳ ಜೊತೆಯಲ್ಲಿ ಜನರ ಅಪಾರ ಪ್ರೀತಿಯನ್ನೂ ಗಳಿಸಿದ್ದಾರೆ. ಕಳೆದ ಮಹಿಳಾ ದಿನಾಚರಣೆ ಇವರಿಗೆ ವಿಶೇಷವಾಗಿತ್ತು‌. ಯಾಕೆ ಅಂದರೆ, ಸೀರೆ ಅಂದರಂತೂ ಯಾರಿಗೆ ಇಷ್ಟವಿಲ್ಲ ಹೇಳಿ? ಹೆಣ್ಣು ಮಕ್ಕಳಿಗಂತೂ ಸೀರೆ ಧರಿಸಿ ಮಿಂಚುವುದು ಒಂಥರಾ ಎಲ್ಲಿಲ್ಲದ ಆನಂದ. ಇದಕ್ಕೆ ನಟಿ ಪ್ರಣೀತಾ ಸುಭಾಷ್ ಕೂಡ ಹೊರತಲ್ಲ. ಇತ್ತೀಚೆಗೆ ಕಸೂತಿ ಕಲೆಯಂತೂ ನ್ಯೂ ಟ್ರೆಂಡ್ ಆಗಿದೆ‌. ಎಂಬ್ರಾಯಿಡರಿ ಡಿಸೈನ್ ಹೊಂದಿರುವ ಸಾರಿಗಳನ್ನು ತಯಾರಿಸುವ ವರ್ಗಗಳೇ ಇವೆ. ಮಹಿಳೆಯರಿಗೆ ಬೇಕಾಗುವ ವಸ್ತುಗಳನ್ನು ಕೂಡ ಹ್ಯಾಂಡ್ ಮೇಡ್ ಆಗಿ ತಯಾರಿಸಲಾಗುತ್ತಿದೆ.

ನಟಿ ಪ್ರಣೀತಾ ಸುಭಾಷ್ ಅವರು ಒಂದು ಎಂಬ್ರಾಯಿಡರಿ ಸಾರಿ ತಯಾರಿಸುವ ಕಂಪನಿಗೆ ಬ್ರಾಂಡ್‌ ಅಂಬಾಸಡರ್ ಆಗಿದ್ದಾರೆ. ಪ್ರಣೀತಾ ಹಳದಿ ಮಿಶ್ರಿತ ಕೆಂಪು ಬಣ್ಣದ ಸಾರಿಯುಟ್ಟು ಸಿಂಪಲ್ ಆಗಿ ವೀಣೆ ಹಿಡಿದು ಕುಳಿತಿರುವ ಫೋಟೊ ಟ್ವೀಟರ್ ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಅದೀಗ ಎಲ್ಲೆಡೆ ವೈರಲ್‌ ಕೂಡ ಆಗಿದೆ.

Related Posts

error: Content is protected !!