Categories
ಸಿನಿ ಸುದ್ದಿ

ಗ್ರೂಫಿ ಸಾಂಗ್‌ ಹೊರಬಂತು;‌ ಹೊಸಬರಿಗೆ ಅರ್ಜುನ್‌ ಜನ್ಯ ಸಾಥ್ -‌ ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರ ರಿಲೀಸ್


“ಗ್ರೂಫಿ”… ಇದು ಹೊಸಬರ ಸಿನಿಮಾ. ಏನಿದು ಗ್ರೂಫಿ? ಸಾಮಾನ್ಯವಾಗಿ ಎಲ್ಲರಿಗೂ ಇದೊಂದೇ ಈ ಪ್ರಶ್ನೆ. ಒಬ್ಬರೇ ಫೋಟೋ ಕ್ಲಿಕ್ಕಿಸಿಕೊಂಡರೆ ಸೆಲ್ಫಿ. ಅದೇ ಗುಂಪಾಗಿ ತೆಗೆದುಕೊಳ್ಳುವುದಕ್ಕೆ ಗ್ರೂಫಿ ಅಂತಾರೆ. ಅಂದಹಾಗೆ, ಈ ಚಿತ್ರವನ್ನು ರವಿ ಅರ್ಜುನ್‌ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅರ್ಯನ್‌ ಹೀರೋ. ಪದ್ಮಶ್ರೀ ಸಿ.ಜೈನ್‌ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಅರ್ಜುನ್‌ ಜನ್ಯ ಅವರು ಸಾಂಗ್‌ ರಿಲೀಸ್‌ ಮಾಡಿ ಶುಭಹಾರೈಸಿದರು. ಈ ವೇಳೆ ಮಾತಿಗಿಳಿದ ಅವರು, ಸಿನಿಮಾ ಹಾಡುಗಳು ಚೆನ್ನಾಗಿವೆ. ನನ್ನ ಪ್ರಕಾರ ಗ್ರೂಫಿ ಅಂದರೆ ಹೆಮ್ಮೆ ಅಂತ. ಸಂಗೀತ ನಿರ್ದೇಶಕ ವಿಜೇತ್ ಕೃಷ್ಣ ಹಾಗೂ ನಿರ್ದೇಶಕ ರವಿ ಅರ್ಜುನ್ ಸ್ನೇಹಿತರು. ಇಪ್ಪತ್ತು ವರ್ಷದ ಹಿಂದೆ ಇದೇ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ವಿ.ಮನೋಹರ್ ಅವರ ಬಳಿ ನನ್ನ ಸಂಗೀತ ಪಯಣ ಆರಂಭವಾಗಿತ್ತು. ನನ್ನ ಸ್ನೇಹಿತನ ಮೊದಲ ಸಿನಿಮಾ ಆಡಿಯೋ ರಿಲೀಸ್ ಇಲ್ಲೇ ಆಗುತ್ತಿರುವುದು ಕಾಕತಾಳೀಯ. ಇಡೀ ತಂಡಕ್ಕೆ ಶುಭವಾಗಲಿ ಎಂಬುದು ಅರ್ಜುನ್‌ ಜನ್ಯ ಮಾತು.


ನಿರ್ದೇಶಕ ರವಿ ಅರ್ಜುನ್‌ ಹೇಳುವಂತೆ, “ಗ್ರೂಫಿ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಧಾರಿತ ಸಿನಿಮಾ. ಒಬ್ಬರೆ ಫೋಟೋ ತೆಗೆದುಕೊಂಡರೆ ಸೆಲ್ಫಿ. ಗುಂಪಾಗಿ ತೆಗೆದುಕೊಳ್ಳುವುದನ್ನು “ಗ್ರೂಫಿ” ಎನ್ನುತ್ತಾರೆ ಈಗಿನ ಯುವಪೀಳಿಗೆ. ಚಿತ್ರದ ಶೀರ್ಷಿಕೆಗೆ ಹಾಗೂ ಕಥೆಗೆ ಸಂಬಂಧವಿದೆ ಹಾಗಾಗಿ ಈ ಹೆಸರಿಟ್ಟಿದ್ದೇವೆ. ಈ ಚಿತ್ರದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ ಮಾಡಿದ್ದೇವೆ. ಬೆಂಗಳೂರು, ಹೊನ್ನಾವರ, ಮಡಿಕೇರಿ ಹಾಗೂ ಪಶ್ಚಿಮ ಘಟ್ಟಗಳ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ ಎಂಬುದು ರವಿ ಅರ್ಜುನ್ ಮಾತು.


ನಾಯಕ ಆರ್ಯನ್‌ ಇಲ್ಲಿ ಛಾಯಾಗ್ರಾಹಕನ ಪಾತ್ರ ಮಾಡಿದ್ದಾರಂತೆ. ಚಿತ್ರ ನೋಡಿ ಹರಸಿ ಅನ್ನುತ್ತಾರೆ ನಾಯಕ ಆರ್ಯನ್. ನಾಯಕಿ ಪದ್ಮಶ್ರೀ ಸಿ.ಜೈನ್‌ ಅವರಿಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅವರು ಎಲ್ಲರೊಂದಿಗೆ ಸೆಲ್ಫಿ ತೆಗೆದುಕೊಂಡು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು. ಎಷ್ಟು ಲೈಕ್ ಹಾಗೂ ಕಾಮೆಂಟ್ ಬರುತ್ತದೆ ಎಂದು ಕಾಯುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ.
ಸಂಗೀತ ನಿರ್ದೇಶಕ ವಿಜೇತ್‌ ಕೃಷ್ಣ ಅವರಿಗೆ ಅವರ ಗುರು ಅರ್ಜುನ್‌ ಜನ್ಯ ಅವರು ಸಾಂಗ್‌ ರಿಲೀಸ್‌ ಮಾಡಿದ್ದು ಖುಷಿ ಕೊಟ್ಟಿದೆಯಂತೆ.

ಇನ್ನು ನಿರ್ಮಾಪಕ ಕೆ.ಜಿ.ಸ್ವಾಮಿ ಅವರಿಗೆ ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತಂತೆ. ವರಮಹಾಲಕ್ಷ್ಮೀ ಹಬ್ಬದಂದು ಸುಮಾರು ನೂರಿಪ್ಪತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಮ್ಮ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ಉತ್ತಮ ಸಂದೇಶ ಇರುವ ಈ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ಅವರು.
ಅಜಯ್ ಲಕ್ಷ್ಮೀಕಾಂತ್ ಛಾಯಾಗ್ರಹಣ ಮಾಡಿದರೆ, ವಿಜೇತ್ ಚಂದ್ರ ಸಂಕಲನ ಮತ್ತು ಇಮ್ರಾನ್ ಸರ್ದಾರಿಯಾ, ಮೋಹನ್ ನೃತ್ಯ ನಿರ್ದೇಶನವಿದೆ. ಚಿತ್ರದಲ್ಲಿ ಗಗನ್, ಉಮಾ ಮಯೂರಿ, ಪ್ರಜ್ವಲ್, ಸಂಧ್ಯಾ, ಶ್ರೀಧರ್, ಹನುಮಂತೇಗೌಡ, ಸಂಗೀತ, ರಜನಿಕಾಂತ್ ನಟಿಸಿದ್ದಾರೆ.

ಚಿತ್ರದ ನಾಲ್ಕು ಹಾಡುಗಳಿಗೆ ಜಯಂತ ಕಾಯ್ಕಿಣಿ, ಹೃದಯ ಶಿವ, ಚೇತನ್ ಕುಮಾರ್, ರವಿ ಅರ್ಜುನ್ ಬರೆದಿದ್ದಾರೆ. ಸಂತೋಷ್ ವೆಂಕಿ, ಮಾನಸ ಹೊಳ್ಳ, ಅನಿರುದ್ಧ ಶಾಸ್ತ್ರಿ, ವಿಜೇತ್ ಕೃಷ್ಣ ಹಾಗೂ ರಕ್ಷ ಹಾಡಿದ್ದಾರೆ.

Categories
ಸಿನಿ ಸುದ್ದಿ

ಗುರ್‌ ಅಂತಂದ್ರೂ, ಏನ್ ಮೆಸೇಜ್ ಗುರು…!

ಒಬ್ಬ ಹಳ್ಳಿಗ. ಒಂದು ನಾಯಿ ಮತ್ತು ಬಯಲು. ಇದಿಷ್ಟು ಸಾಕು ʼ ಗುರ್ರ್ʼ ಎನ್ನುವ ಈ ಕಿರುಚಿತ್ರದ ಕಥೆ ಗುಟ್ಟು. ಇದಿಷ್ಟು ಪಾತ್ರದ ಮೂಲ ಕ ಜನರಿಗೆ ಜಾಗೃತಿ ಮೂಡಿಸುವಂತಹ ಒಂದು ಪ್ರಯತ್ನ ಮಾತ್ರ ಸಾಕಷ್ಟು ಪರಿಣಾಮಕಾರಿ ಆಗಿ ಬಂದಿದೆ. ಅದೇ ಕಾರಣಕ್ಕೆ ಈಗ ಅದು ಸೋಷಲ್‌ ಮೀಡಿಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ. ಅಂದ ಹಾಗೆ ಇದೊಂದು ಸಣ್ಣ ಕಿರುಚಿತ್ರ. ಒಂದು ಹಳ್ಳಿಗ, ಒಂದು ನಾಯಿ, ಅಲ್ಲೊಂ ದು ಬಯಲು ಅಂದಾಕ್ಷಣ ನಿಮಗೂ ಅರ್ಥವಾಗಿರಬಹುದು, ʼಬಯಲು ಶೌಚʼದ ಸಂಕಷ್ಟ ಇಲ್ಲಿದೆ ಅಂತ. ಅದು ನಿಜವೂ ಹೌದು. ಆ ಕುರಿತ ಒಂದು ಸಂದೇಶವನ್ನು ಎಲ್ಲರಿಗೂ ತಲುಪುವ ಹಾಗೆ ಶಿವಮೊಗ್ಗದ ಹೊಂಗಿರಣ ರಂಗ ತಂಡದ ಸದಸ್ಯರು ಅತ್ಯಂತ ಸೃಜನಾತ್ಮಕವಾಗಿ ಸೃಷ್ಟಿಸಿದ ಕಿರುಚಿತ್ರವೇ ʼಗುರ್ರ್ʼ.

ನಾಲ್ಕು ನಿಮಿಷದ ಈ ಕಿರುಚಿತ್ರದಲ್ಲಿ ಮಾತಿಲ್ಲ. ಸಣ್ಣದ್ದೊಂದು ಹಾಸ್ಯದ ಜೊತೆ ಒಂದೊಳ್ಳೆ ಕಥೆ ಇದೆ. ಸಂದೇಶವೂ ಇದೆ. ಒಂದೂರು. ಒಬ್ಬ ಹಳ್ಳಿಗ. ಒಂದು ನಾಯಿ ಮತ್ತು ಬಯಲು. ಇದಿಷ್ಟು ಸಾಕು ಈ ಕಿರುಚಿತ್ರದ ಕಥೆ ಗುಟ್ಟು ಹೇಳೋಕೆ. ಆದರೆ ಇಷ್ಟರಲ್ಲಿ ಅದೆಂಥಾ ಕಥೆ ಗುರು? ಆದರೂ ಇಲ್ಲಿ ಅರ್ಥಪೂರ್ಣ ಎನಿಸೋ ಸಂದೇಶವಿದೆ. ಅದನ್ನು ನಾಜೂಕಾಗಿಯೇ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ. ಶಿವಮೊಗ್ಗದ ಹೊಂಗಿರಣ ರಂಗ ತಂಡ ಅಂದ್ರೆ ಅದೊಂದು ಕ್ರೀಯಾ ಶೀಲ ರಂಗ ತಂಡ ಅನ್ನೋದು ರಾಜ್ಯಕ್ಕೇ ಗೊತ್ತಿರುವ ಸಂಗತಿ. ವೃತ್ತಿಯ ಲ್ಲಿ ಅಧ್ಯಾಪಕರಾಗಿರುವ ಸಾಸ್ವೆ ಹಳ್ಳಿ ಸತೀಶ್‌, ಪ್ರವೃತ್ತಿಯಲ್ಲಿ ರಂಗ ನಿರ್ದೇಶಕರಾಗಿ, ಲೇಖಕರಾಗಿ ಹೆಸರು ಮಾಡಿದವರು. ಅವರ ನೇತೃತ್ವದ ʼಹೊಂಗಿರಣ ರಂಗʼ ತಂಡದಲ್ಲಿ ಸಕ್ರಿಯವಾಗಿರುವ ಚಂದ್ರಶೇಖರ್‌ ಹಿರೇಗೊಣಿಗೆರೆ, ಸುರೇಂದ್ರ ಕೆ.ಎಸ್. ಇದರ ಸೂತ್ರಧಾರರು.

ರಂಗಕರ್ಮಿ ಸಾಸ್ವೆಹಳ್ಳಿ ಸತೀಶ್‌ ಅವರ ಪರಿಕಲ್ಪನೆಗೆ ʼಕಾಮಿಡಿ ಕಿಲಾಡಿಗಳುʼ ರಿಯಾಲಿಟಿ ಶೋ ಖ್ಯಾತಿಯ ನಟ ಚಂದ್ರಶೇಖರ್‌ ಹಿರೇಗೊಣಿಗೆರೆ ಚಿತ್ರಕತೆ ಬರೆದಿದ್ದಾರೆ. ಸುರೇಂದ್ರ ಕೆ.ಎನ್.‌ ನಿರ್ದೇಶನ ಮಾಡಿದ್ದು, ಚಂದ್ರಶೇಖರ್‌ ಹಿರೇಗೊಣಿಗೆರೆ ಅವರೇ ಈ ಕಿರುಚಿತ್ರದಲ್ಲಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮನುಕುಮಾರ್‌ ಸಂಕಲನ ಹಾಗೂ ಛಾಯಾಗ್ರಹಣ ಮಾಡಿದ್ದಾರೆ. ನಟ, ನಿರ್ದೇಶಕ ನವೀನ್‌ ಕೃಷ್ಣ ಧ್ವನಿ ನೀಡಿದ್ದಾರೆ.ಗ್ರೀನ್‌ ರೂಮ್‌ ಪ್ರೊಡಕ್ಷನ್‌ ಮೂಲಕ ಈ ಕಿರುಚಿತ್ರ ನಿರ್ಮಾಣವಾಗಿದೆ. ಹೊಂಗಿರಣದ ಸದಸ್ಯರಾದ ಶಿವಕುಮಾರ ಮಾವಲಿ, ರಮೇಶ್‌ ಎಚ್.ಕೆ. ಸುಬ್ರಮಣ್ಯ, ಹರೀಶ್‌, ಚಂದ್ರಶೇಖರ್‌ ಶಾಸ್ತ್ರಿ ಮತ್ತಿತರರು ಸಾಥ್‌ ನೀಡಿದ್ದಾರೆ.ಈ ಕಿರುಚಿತ್ರದೊಳಗಿನ ವಿಷಯ ಏನು, ಕಥೆ ಹೇಗಿದೆ, ಪಾತ್ರಗಳು ಹೇಗಿವೆ ಅಂತ ಡಿಟೇಲ್ಸ್‌ ಹೇಳುವುದಕ್ಕಿಂತ ಹೊಂಗಿರಣ ಸದಸ್ಯರು ಮಾಡಿರುವ ನಾಲ್ಕುವರೆ ನಿಮಿಷದ ಈ ಕಿರುಚಿತ್ರ ನೋಡಿದರೆ ನೀವು ನಗುತ್ತೀರಿ, ಹಾಗೆಯೇ ಒಂದು ಕ್ಷಣ ಆ ಕಿರುಚಿತ್ರದ ಹಿಂದಿನ ಆಶಯ ನಿಮಗೂ ಅರ್ಥವಾಗುತ್ತೆ. ಇದನ್ನು ನೋಡಿ, ಬೆಂಬಲಿಸಿ ಅಂತೆನ್ನುವುದು ಸಿನಿಲಹರಿ ಕಳಕಳಿಯೂ ಹೌದು.

Categories
ಸಿನಿ ಸುದ್ದಿ

ನಟ ಬಿರಾದಾರ್‌ ಮೈಲಿಗಲ್ಲು! ವೈಜನಾಥ್ ಅಭಿನಯದ ಐನೂರನೇ ಸಿನಿಮಾ‌ ಬಿಡುಗಡೆಗೆ ಸಜ್ಜು!!

ಒಬ್ಬ ನಟನ ವೃತ್ತಿ ಬದುಕಲ್ಲಿ ಐನೂರನೇ ಸಿನಿಮಾ ಅನ್ನೋದು ನಿಜಕ್ಕೂ ಮೈಲಿಗಲ್ಲು. ಅದರಲ್ಲೂ ಅಪರೂಪದ ನಟರಾಗಿ ಗುರುತಿಸಿಕೊಂಡಿರುವ ಹಾಸ್ಯ ನಟ ವೈಜನಾಥ್‌ ಬಿರಾದಾರ್‌ ಅವರು ಯಶಸ್ವಿ ಐನೂರನೇ ಸಿನಿಮಾಗೆ ಬಣ್ಣ ಹಚ್ಚಿ ದಾಖಲೆ ಬರೆದಿದ್ದಾರೆ. ಅಷ್ಟೇ ಅಲ್ಲ, ಆ ಸಿನಿಮಾ ಇತ್ತೀಚೆಗೆ ಡಬ್ಬಿಂಗ್‌ ಕಾರ್ಯವನ್ನೂ ಮುಗಿಸಿದೆ. ಹೌದು, “ನೈಂಟಿ ಹೊಡಿ ಮನೀಗ್‌ ನಡಿ” ಸಿನಿಮಾ ಈಗ ಬಿಡುಗಡೆಯತ್ತ ಸಾಗಿದೆ. ಅಂದಹಾಗೆ, ಅಮ್ಮಾ ಟಾಕೀಸ್ ಬಾಗಲಕೋಟೆ ಬ್ಯಾನರಿನಡಿ ನಿರ್ಮಾಣವಾಗಿರುವ “ನೈಂಟಿ ಹೊಡಿ ಮನೀಗ್ ನಡಿ” ಚಿತ್ರ ಇತ್ತೀಚೆಗಷ್ಟೇ ಡಬ್ಬಿಂಗ್ ಮುಗಿಸಿದೆ.

ಈ ಸಿನಿಮಾ ನಟ ವೈಜನಾಥ ಬಿರದಾರ್ ಅವರ ಐನೂರನೇ ಚಿತ್ರ ಅನ್ನೋದು ವಿಶೇಷ. ಇತ್ತೀಚೆಗೆ ಬೆಂಗಳೂರಿನ ಸುತ್ತಮುತ್ತ ಕೊನೆಯ ಹಂತದ ಚಿತ್ರೀಕರಣ ಮುಗಿಸಿತ್ತು. ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಔಟ್ ಆಂಡ್ ಔಟ್ ಕಮರ್ಷಿಯಲ್ ಕಾಮಿಡಿ ಥ್ರಿಲ್ಲರ್ ಚಿತ್ರವಾಗಿದ್ದು, ರತ್ನಮಾಲಾ ಬಾದರದಿನ್ನಿ ಅವರು ಚಿತ್ರದ ನಿರ್ಮಾಪಕರು.

ಚಿತ್ರದಲ್ಲಿ ವೈಜನಾಥ ಬಿರಾದರ್ ಅವರಿಗೆ ಜೋಡಿಯಾಗಿ ನೀತು ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಪ್ರೀತು ಪೂಜಾ, ಹಿರಿಯ ನಟರಾದ ಕರಿಸುಬ್ಬು, ಧರ್ಮ, ಪ್ರಶಾಂತ್ ಸಿದ್ಧಿ, ಅಭಯ್ ವೀರ್, ಆರ್.ಡಿ. ಬಾಬು, ವಿವೇಕ್ ಜಂಬಗಿ, ರುದ್ರಗೌಡ ಬಾದರದಿನ್ನಿ, ಹೊಸಕೋಟೆ ಮುರುಳಿ, ಸಂತು ಸೊಕನಾದಗಿ, ರಾಜು ಗೂಗವಾಡ, ಎಲ್ಐಸಿ ಲೋಕೇಶ್ ಸೇರಿದಂತೆ ಇತರರು ನಟಿಸಿದ್ದಾರೆ.

ಚಿತ್ರಕ್ಕೆ ಕೃಷ್ಣ ನಾಯ್ಕರ್ ಛಾಯಾಗ್ರಹಣ ಮಾಡಿದರೆ, ರಾಕಿ ರಮೇಶ್ ಸಾಹಸವಿದೆ. ಯುಡಿವಿ ವೆಂಕಿ ಸಂಕಲನ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ಕಿರಣ್ ಶಂಕರ್ ಸಂಗೀತ ನೀಡಿದ್ದಾರೆ. ರಾಜೇಶ್ ಕೃಷ್ಣನ್ ಹಾಡಿದ್ದಾರೆ. ಉತ್ತರ ಕರ್ನಾಟಕದ ನಾಟಿ ಶೈಲಿಯ ಹಾಡಿಗೆ “ಚುಟು ಚುಟು” ಖ್ಯಾತಿಯ ಶಿವು ಭೆರ್ಗಿ ಸಾಹಿತ್ಯ ಬರೆದು, ಸಂಗೀತ ನೀಡಿದದಾರೆ. ಆ ಹಾಡಿಗೆ ರವೀಂದ್ರ ಸೋರಗಾಂವಿ ಮತ್ತು ಶಮಿತಾ ಮಲ್ನಾಡ್ ಧ್ವನಿಯಾಗಿದ್ದಾರೆ. ಭೂಷಣ್ ನೃತ್ಯ ನಿರ್ದೇಶನವಿದೆ. ಸದ್ಯ ಬಾಲಾಜಿ ಡಿಜಿ ಸ್ಟುಡಿಯೋದಲ್ಲಿ ಡಬ್ಬಿಂಗ್ ಮುಗಿಸಿ, ಬಿಡುಗಡೆ ಕೆಲಸದತ್ತ ಚಿತ್ರತಂಡ ತೊಡಗಿಕೊಂಡಿದೆ.

Categories
ಸಿನಿ ಸುದ್ದಿ

ಹೊಂಬಾಳೆ ಫಿಲ್ಮ್ಸ್‌ ಹೊಸ ಚಿತ್ರ; ರಿಷಬ್ ಶೆಟ್ಟಿ ನಿರ್ದೇಶನ -ಕಾಂತಾರ ಟೈಟಲ್‌ ಲಾಂಚ್

-ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ರಿಷಬ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳೊದಿಕ್ಕೆ ರೆಡಿ ಆಗಿದ್ದಾರೆ. ಈಗಾಗಲೇ ನಟ ರಕ್ಷಿತ್ ಶೆಟ್ಟಿ ಕೂಡ ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ‘ರಿಚರ್ಡ್ ಆಂಟನಿ’ ಹೆಸರಿನ ಸಿನಿಮಾದ ನಿರ್ದೇಶನ ಹಾಗೂ ನಟನೆಗೆ ಇಳಿದಿದ್ದಾರೆ. ಅದರ ಬೆನ್ನಲೇ ಈಗ ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ರಿಷಬ್ ಶೆಟ್ಟಿ ಅವರಿಗೂ ಆ್ಯಕ್ಷನ್ ಕಟ್ ಹೇಳುವುದಕ್ಕೆ ಅವಕಾಶ ಸಿಕ್ಕಿದೆ.

ಕಳೆದ ಎರಡು ದಿನಗಳ ಹಿಂದಷ್ಟೇ ಹೊಂಬಾಳೆ ಫಿಲಂಸ್ ಮುಂದಿನ ಹೊಸ ಸಿನಿಮಾ ಟೈಟಲ್ ಲಾಂಚ್ ಕುರಿತಂತೆ ಕುತೂಹಲದ ಸಂಗತಿಯೊಂದನ್ನು ಸೋಷಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ಅದೀಗ ರಿವೀಲ್ ಆಗಿದೆ. ರಿಷಬ್ ಶೆಟ್ಟಿ ನಿರ್ದೇಶನ ‘ಕಾಂತಾರ’ ಹೆಸರಿನ ಸಿನಿಮಾ ಅನೌನ್ಸ್ ಆಗಿದೆ. ರಿಷಬ್ ಶೆಟ್ಟಿ ನಿರ್ದೇಶನದ ಜತೆಗೆ ಈ ಚಿತ್ರದ ನಾಯಕ ನಟ ಕೂಡ ಅವರೇ. ಕಾಂತಾರ ಚಿತ್ರದ ಫಸ್ಟ್ ಪೋಸ್ಟರ್ ಕುತೂಹಲಕಾರಿ ಆಗಿದೆ. ಕರಾವಳಿಯ ಅತೀ ಜನಪ್ರಿಯ ಕ್ರೀಡೆ ಕೋಣನ ಓಟ ಕಿಚ್ಚು ಪೋಸ್ಟರ್ ನಲ್ಲಿ ಆವರಿಸಿಕೊಂಡಿದೆ.

Categories
ಸಿನಿ ಸುದ್ದಿ

ಅಖಾಡಕ್ಕಿಳಿಯಲು `ರಾಣ’ ಸಜ್ಜು; ಆ ದಿವ್ಯಜಾಗಕ್ಕೆ ಕೆ.ಮಂಜು-ನಂದಕಿಶೋರ್ ಭೇಟಿ !

ಸ್ಯಾಂಡಲ್‌ವುಡ್‌ನ ಹೆಸರಾಂತ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಮಂಜು ಗಂಧದಗುಡಿಯಲ್ಲಿ ಪಡ್ಡೆಹುಲಿಯಾಗಿ ಘರ್ಜಿಸಿದ್ದನ್ನ ಇಡೀ ಕರುನಾಡು ನೋಡಿದೆ. ಬೆಳ್ಳಿಪರದೆ ಹಾಗೂ ಬಾಕ್ಸ್ಆಫೀಸ್ ಕೂಡ ಸಂತಸಪಟ್ಟಿದೆ. ಶ್ರೇಯಸ್ ಮಗದೊಮ್ಮೆ ಸಿಲ್ವರ್‌ಸ್ಕ್ರೀನ್ ಮೇಲೆ ಧಗಧಗಿಸುವ ಗಳಿಗೆಗಾಗಿ ಅವರ ಅಭಿಮಾನಿಗಳು ಕೂಡ ಕಾತುರದಿಂದ ಕಾಯ್ತಿದ್ದಾರೆ. ವಿಷ್ಣುಪ್ರಿಯನಾಗಿ ಮೆರವಣಿಗೆ ಹೊರಡುವ ಮುನ್ನವೇ ಶ್ರೇಯಸ್ `ರಾಣ’ ಚಿತ್ರದ ಶೂಟಿಂಗ್ ಅಖಾಡಕ್ಕೆ ಧುಮುಕುತ್ತಿದ್ದಾರೆ. ಅದಕ್ಕೂ ಮುನ್ನ ರಾಣ ಟೈಟಲ್ ಸ್ಟೋರಿಯನ್ನೊಮ್ಮೆ ನೋಡಿಬಿಡೋಣ.

ರಾಣಾ' ಚಿತ್ರ ರಾಕಿಂಗ್‌ಸ್ಟಾರ್ ಯಶ್ ಮಾಡ್ತಾರೆನ್ನುವ ಸುದ್ದಿಯಿತ್ತು. ಆದರೆ, ಕೆಜಿಎಫ್ ಮೂಲಕ ರಾಕಿ ಧೂಳೆಬ್ಬಿಸಿದ ಮೇಲೆರಾಣ’ ಚಿತ್ರದ ಸುದ್ದಿಗೆ ಪರ್ಮನೆಂಟಾಗಿ ಫುಲ್‌ಸ್ಟಾಪ್ ಬಿತ್ತು. ಇದ್ರಿಂದ ರಾಣಾ ಟೈಟಲ್‌ಗೂ ಬೇಜಾರಾಗಿತ್ತು ಆದರೆ ಅಪ್ನಾ ಟೈಮ್ ಆಯೇಗಾ' ಅಂತ ಕಾದುಕುಳಿತಿದ್ದ ರಾಣ ಟೈಟಲ್‌ಗೆ ಒಂದೊಳ್ಳೆ ಟೈಮ್ ಬಂತು. ನಿರ್ದೇಶಕ ನಂದಕಿಶೋರ್ ಮಾಡಿಟ್ಟುಕೊಂಡಿದ್ದ ಕಥೆಗೆರಾಣ’ ಟೈಟಲ್ ಫರ್ಪೆಕ್ಟ್ ಮ್ಯಾಚ್ ಆಯ್ತು. ನಾಯಕನಟರಾಗಿ ಶ್ರೇಯಸ್ ಮಂಜು ಫೈನಲ್ ಆದರು, ನಿರ್ಮಾಪಕ ಕೆ ಮಂಜು ತಮ್ಮ ಬಳಿಯಿಟ್ಟುಕೊಂಡಿದ್ದ `ರಾಣ’ ಟೈಟಲ್‌ನ ಮಗನಿಗಾಗಿ ಬಿಟ್ಟುಕೊಟ್ಟರು.

ಕಳೆದೊಂದು ತಿಂಗಳ ಹಿಂದೆ ಬಂಡಿಮಹಾಕಾಳಮ್ಮನ ಸನ್ನಿಧಿಯಲ್ಲಿ ರಾಣಾ' ಸಿನಿಮಾ ಸೆಟ್ಟೇರ್ತು. ರಿಯಲ್‌ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರರಾಣ’ ಮೊದಲ ದೃಶ್ಯಕ್ಕೆ ಚಾಲನೆ ಕೊಟ್ಟಿದ್ದರು. ತಾಯಿಯ ಸನ್ನಿಧಿಯಲ್ಲಿ ಮುಹೂರ್ತ ನೆರವೇರಿಸಿಕೊಂಡ ಚಿತ್ರತಂಡ ಶೀಘ್ರದಲ್ಲೇ ಚಿತ್ರೀಕರಣಕ್ಕೆ ಹೊರಡೋದಾಗಿ ಹೇಳಿಕೊಂಡಿತ್ತು. ಫೈನಲೀ, ಫಿಲ್ ಟೀಮ್ ಶೂಟಿಂಗ್ ಅಖಾಡಕ್ಕೆ ಧುಮ್ಕೊದಕ್ಕೆ ಸಿದ್ದತೆ ನಡೆಸಿದೆ.

ಈ ಮಧ್ಯೆ ರಾಣ ಡೈರೆಕ್ಟರ್ ನಂದಕಿಶೋರ್ ಹಾಗೂ ಪ್ರೊಡ್ಯೂಸರ್ ಮಂಜಣ್ಣ ಕುರುಡು ಮಲೆಯ
ಶ್ರೀ ವಿನಾಯಕ ಸ್ವಾಮಿ ಸನ್ನಿಧಿಗೆ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ. `ರಾಣ’ ಚಿತ್ರಕ್ಕೆ ಒಳಿತಾಗಲೆಂದು ಆಶೀರ್ವಾದ ಬೇಡಿದ್ದಾರೆ.

ರಾಣ' ಟೈಟಲ್‌ನಲ್ಲೇ ಒಂದು ಫೈಯರ್ ಇದೆ. ಪಡ್ಡೆಹುಲಿಯ ಖದರ್ ಜೊತೆಗೆ ಪೊಗರು ಪವರ್ ಇರೋದ್ರಿಂದರಾಣ’ ಮೇಲೆ ಒಂದಿಷ್ಟು ನಿರೀಕ್ಷೆಯಿದೆ. ಇದೊಂದು ಪವರ್‌ಪ್ಯಾಕ್ಡ್ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಶ್ರೇಯಸ್ ಮೈ ಹುರಿಗೊಳಿಸಿಕೊಂಡಿದ್ದಾರೆ. ಪೊಗದಸ್ತಾದ ಬಾಡಿಬಿಲ್ಡ್ ಮಾಡಿಕೊಂಡಿರುವ ಶ್ರೇಯಸ್‌ಗೆ ರೀಷ್ಮಾ ನಾಣಯ್ಯ, ರಜಿನಿ ಭಾರದ್ವಾಜ್ ಸಾಥ್ ನೀಡಲಿದ್ದಾರೆ. ಪೊಗರು ಸಿನಿಮಾದ ತಂತ್ರಜ್ಞರು ಈ ಚಿತ್ರಕ್ಕೆ ಬೆವರು ಸುರಿಸಲಿದ್ದು, ಗುಜ್ಜಾಲ್ ಪುರುಷೋತ್ತಮ್ ಜೊತೆಗೆ ಕೆ. ಮಂಜು ಕೂಡ ಬಂಡವಾಳ ಸುರಿಯಲಿದ್ದಾರೆ. `ರಾಣ’ ಚಿತ್ರವನ್ನ ಅದ್ದೂರಿಯಾಗಿ ತೆರೆಮೇಲೆ ತರೋದಕ್ಕೆ ತಯ್ಯಾರಿ ಮಾಡಿಕೊಂಡಿದ್ದಾರೆ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕಿರುತೆರೆಯತ್ತ ಹರಿಪ್ರಿಯಾ! ಡ್ಯಾನ್ಸ್‌ ರಿಯಾಲಿಟಿ ಶೋಗೆ ಅವರೇ ಜಡ್ಜ್!!

ಕನ್ನಡದ ಕಿರುತೆರೆಯಲ್ಲಿ ಈಗಂತೂ ನಟ,ನಟಿಯರದ್ದೇ ಕಲರವ! ಹಾಗಂತ, ಅವರೆಲ್ಲರೂ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ ಅಂದುಕೊಳ್ಳುವಂತಿಲ್ಲ. ಅಲ್ಲಿ ನಡೆಯೋ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ ಹಲವು ಸ್ಟಾರ್‌ ನಟರು, ನಟಿಯರು ಕೂಡ ಭಾಗವಹಿಸಿದ್ದಾಗಿದೆ. ಈಗಲೂ ಕೆಲ ರಿಯಾಲಿಟಿ ಶೋಗಳನ್ನು ನಟ, ನಟಿಯರು ನಡೆಸಿಕೊಡುತ್ತಿದ್ದಾರೆ. ಆ ಸಾಲಿಗೆ ಈಗ ಹರಿಪ್ರಿಯಾ ಕೂಡ ಸೇರುತ್ತಿದ್ದಾರೆ. ಹೌದು, ಸದ್ಯದ ಮಟ್ಟಿಗೆ ಸಿನಿಮಾಗಳಲ್ಲೇ ಬಿಝಿಯಾಗಿರುವ ಹರಿಪ್ರಿಯಾ, ಅದ್ಯಾಕೆ ಕಿರುತೆರೆ ಕಡೆ ಮುಖ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಕಾಡಬಹುದು. ಅದಕ್ಕೆ ಉತ್ತರ, ಅದೊಂದು ಡ್ಯಾನ್ಸ್‌ ಶೋ.

ಹೌದು, ಹರಿಪ್ರಿಯಾ ಅವರು ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಲಿದ್ದಾರೆ ಎಂಬುದು ಈ ಹೊತ್ತಿನ ಸುದ್ದಿ. ಆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಹರಿಪ್ರಿಯಾ ಅವರೊಂದಿಗೆ ಇನ್ನೂ ಇಬ್ಬರು ಪ್ರಮುಖರು ಕಾಣಿಸಿಕೊಳ್ಳುತ್ತಿದ್ದು, ಅವರೂ ನಟ ಮತ್ತು ನಿರ್ದೇಶಕ ಅನ್ನೋದು ವಿಶೇಷ.
‘ಡ್ಯಾನ್ಸ್ ಡ್ಯಾನ್ಸ್’ ಹೆಸರಿನ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಹರಿಪ್ರಿಯಾ ಜಡ್ಜ್ ಆಗಿ ಭಾಗವಹಿಸುತ್ತಿದ್ದು, ಆ ರಿಯಾಲಿಟಿ ಶೋ ಒಳಾಂಗಣ ಮಾತ್ರವಲ್ಲ, ಹೊರಾಂಗಣ ಚಿತ್ರೀಕರಣವೂ ನಡೆಯಲಿದೆ. ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಹರಿಪ್ರಿಯಾ ಜೊತೆಗೆ ನಟ ಪ್ರಜ್ವಲ್ ದೇವರಾಜ್ ಮತ್ತು ನೃತ್ಯ ನಿರ್ದೇಶಕ ಹರ್ಷ ಕೂಡ ಈ ಶೋನ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಈ ರಿಯಾಲಿಟಿ ಶೋಗೆ ಶೈನ್ ಶೆಟ್ಟಿ ಅವರ ನಿರೂಪಣೆ ಇರಲಿದೆ.


ಹರಿಪ್ರಿಯಾ ಕೇವಲ ನಟಿ ಮಾತ್ರವಲ್ಲ, ಅವರೊಬ್ಬ ಒಳ್ಳೆಯ ಡ್ಯಾನ್ಸರ್‌ ಕೂಡ. ಈ ಕಾರಣದಿಂದಾಗಿಯೇ ರಿಯಾಲಿಟಿ ಶೋ ಮುಖ್ಯಸ್ಥರು ಹರಿಪ್ರಿಯಾ ಅವರನ್ನು ತೀರ್ಪುಗಾರರನ್ನಾಗಿ ಆಯ್ಕೆ ಮಾಡಿದ್ದಾರೆ. ಆ ರಿಯಾಲಿಟಿ ಶೋ ಬಗ್ಗೆ ಹೇಳುವ ಹರಿಪ್ರಿಯಾ, “ಈ ಹಿಂದೆ ಕೂಡ ಹಲವು ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳಲು ಅವಕಾಶ ಬಂದಿದ್ದವು. ಆದರೆ, ಸಾಧ್ಯವಾಗಿರಲಿಲ್ಲ. ಈ “ಡ್ಯಾನ್ಸ್ ಡ್ಯಾನ್ಸ್’ ಶೋನ ಪರಿಕಲ್ಪನೆ ವಿಶೇಷ ಎನಿಸಿದೆ. ಹಾಗಾಗಿ ಒಪ್ಪಿದೆ. ಇನ್ನು, ಇಲ್ಲಿ ನಟ-ನಟಿಯರೇ ಸ್ಪರ್ಧಿಗಳಾಗಿರುತ್ತಾರೆ ಅನ್ನೋದು ಇನ್ನೊಂದು ವಿಶೇಷʼ ಎನ್ನುತ್ತಾರೆ. ಅದೇನೆ ಇರಲಿ, ಈಗಾಗಲೇ ಕನ್ನಡದ ಒಂದಷ್ಟು ನಟ,ನಟಿಯರು, ಕಿರುತೆರೆಗೆ ಎಂಟ್ರಿ ಕೊಟ್ಟು, ರಿಯಾಲಿ ಶೋ ನಡೆಸಿಕೊಡುತ್ತಿದ್ದಾರೆ. ಅವರ ಸಾಲಿಗೆ ಈಗ ಹರಿಪ್ರಿಯಾ ಕೂಡ ಸೇರಿದ್ದಂತಾಗಿದೆ.

Categories
ಸಿನಿ ಸುದ್ದಿ

ವೈರಲ್‌ ಆಗಿದೆ ಸಲಗ ಪ್ರಮೋಷನಲ್‌ ಸಾಂಗ್‌ -‌ಟಿನಿಂಗಾ ..ಮಿನಿಂಗಾ ಟಿಸ್ಸಾ…ಹೀಗೆಂದಿದ್ದು ಯಾರು ಗೊತ್ತಾ ?

ನಟ ದುನಿಯಾ ವಿಜಯ್‌ ನಿರ್ದೇಶನ ಹಾಗೂ ಅಭಿನಯದ ಬಹು ನಿರೀಕ್ಷಿತ ಚಿತ್ರ ʼಸಲಗʼ ಶೀಘ್ರದಲ್ಲಿಯೇ ತೆರೆ ಕಾಣಲಿದೆ. ಈಗಾಗಲೇ ಅದರ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿತ್ತಾದರೂ, ಸದ್ಯಕ್ಕೆ ಕೊರೋನಾ ಮತ್ತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ರಿಲೀಸ್‌ ಡೇಟ್‌ ಮುಂದಕ್ಕೆ ಹೋಗಿದೆ. ನಿರ್ಮಾಪಕ ಕೆ.ಪಿ. ಶ್ರೀಕಾಂತ್‌ ಪ್ರಕಾರ, ಮುಂದಿನ ವಾರದಲ್ಲಿ ರಿಲೀಸ್‌ ಡೇಟ್‌ ಫಿಕ್ಸ್‌ ಆಗಲಿದೆಯಂತೆ. ಆದರೆ ರಿಲೀಸ್‌ಗೂ ಮುನ್ನ ಚಿತ್ರದ ಬಗ್ಗೆ ಸಖತ್‌ ಪ್ರಚಾರ ನಡೆಸಲು ಮುಂದಾಗಿರುವ ಚಿತ್ರ ತಂಡ ಗುರುವಾರ ಚಿತ್ರದ ಪ್ರಮೋಷನಲ್‌ ಸಾಂಗ್‌ ವೊಂದನ್ನು ರಿಲೀಸ್‌ ಮಾಡಿದೆ.

ಸಖತ್‌ ಕಿಕ್‌ ನೀಡುವ ಈ ಸಾಂಗ್‌ ನಲ್ಲಿ ಅಷ್ಟೇ ಖಡಕ್‌ ಆದ ಡೈಲಾಗ್‌ ಕೂಡ ಇವೆ. ಅದೇ ಕಾರಣಕ್ಕೆ ಈಗ ಈ ಪ್ರಮೋಷನಲ್‌ ಸಾಂಗ್‌ ರಿಲೀಸ್‌ ಆದ ಕೇವಲೇ ಕ್ಷಣಗಳಲ್ಲಿ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಅಗಿದ್ದು, ಚಿತ್ರದ ಬಗ್ಗೆ ದೊಡ್ಡ ಕ್ರೇಜ್‌ ಹುಟ್ಟು ವಂತೆ ಮಾಡಿದೆ. ಪ್ರಮೋಷನಲ್‌ ಸಾಂಗ್‌ ಗುರುವಾರ ಗ್ರಾಂಡ್‌ ಆಗಿಯೇ ರಿಲೀಸ್‌ ಆಗಿದೆ.

ದುನಿಯಾ ವಿಜಯ್‌ ಅಭಿಮಾನಿಗಳು ಗೌರಿಬಿದನೂರಿನಲ್ಲಿ ಚಿತ್ರದ ರಿಲೀಸ್‌ ಸಂಭ್ರಮದಂತೆಯೇ ಪೋಸ್ಟರ್‌ , ಕಟೌಟ್‌ ಗಳು ಮೂಲಕ ಪಟಾಕಿ ಸಿಡಿಸಿ, ಸಾಂಗ್‌ ರಿಲೀಸ್‌ ಮಾಡಿದ್ದಾರೆ. ಸಿದ್ದಿ ಸಮುದಾಯದ ಜನರು ಹಾಡುವ ಹಾಡಿನ ಒಂದಷ್ಟು ಸನ್ನಿವೇಶಗಳನ್ನು ಈ ಪ್ರಮೋಷನಲ್‌ ಸಾಂಗ್‌ ನಲ್ಲಿ ತೋರಿಸಲಾಗಿದೆ. ಹಾಗೆಯೇ ದುನಿಯಾ ವಿಜಯ್‌, ಧನಂಜಯ್‌, ಕಾಕ್ರೋಚ್‌ ಸುಧೀ ಹಾಗೂ ಯಶ್‌ ಶೆಟ್ಟಿ ಪಾತ್ರಗಳನ್ನು ರಿವೀಲ್‌ ಮಾಡಲಾಗಿದೆ. ಪಾತ್ರಗಳು, ಅಲ್ಲಿ ಡೈಲಾಗ್‌ ಗಳು ತೀವ್ರ ಕುತೂಹಲ ಹುಟ್ಟಿಸುತ್ತವೆ. ದುನಿಯಾ ವಿಜಯ್‌ ಅವರ ಸಿನಿ ಜರ್ನಿಯಲ್ಲಿ ಇದೊಂದು ಪಕ್ಕಾ ಮಾಸ್‌ ಸಿನಿಮಾ ಎನ್ನುವ ಲುಕ್‌ ಈ ಪ್ರಮೋಷನಲ್‌ ಸಾಂಗ್‌ ನಲ್ಲಿ ಕಾಣಿಸಿಕೊಂಡಿದೆ. ನಿರ್ಮಾಪಕ ಕೆ.ಪಿ. ಶ್ರೀಕಾಂತ್‌ ಸಿನಿಮಾವನ್ನು ರಿಚ್‌ ಆಗಿಯೇ ತೆರೆಗೆ ತಂದಿದ್ದು, ಸಿನಿಮಾ ಎಲ್ಲದರಲ್ಲೂ ಅದ್ದೂರಿತನ ತುಂಬಿಕೊಂಡಿದೆ.

Categories
ಸಿನಿ ಸುದ್ದಿ

ಹೊಂಬಾಳೆ ಹವಾ ಹಿಂಗೈತಿ ನೋಡು ಗುರು ;ಸ್ಪೋಟಕ ಸುದ್ದಿ ಬಿಚ್ಚಿಟ್ರಲ್ಲ ನಿರ್ಮಾಪಕ ವಿಜಯ್ ಕಿರಗಂದೂರ್ !

ಹೊಂಬಾಳೆ.. ಹೊಂಬಾಳೆ..ಹೊಂಬಾಳೆ.. ಎಲ್ಲಿ ನೋಡಿದ್ರೂ ಇವ್ರದ್ದೇ ಹವಾ.. ಎಲ್ಲಿ ನೋಡಿದ್ರೂ ಇವ್ರದ್ದೇ ಕಾರುಬಾರು.. ಅದ್ಯಾವ ದಿವ್ಯಕ್ಷಣದಲ್ಲಿ ಹೊಂಬಾಳೆ‌ ಎನ್ನುವ ಮೂರಕ್ಷರದ ಸಂಸ್ಥೆ ಹುಟ್ಟುಹಾಕಿದ್ರೋ ಏನೋ ಗೊತ್ತಿಲ್ಲ. ಇವತ್ತು ಈ ಫಿಲ್ಮ್ ಸಂಸ್ಥೆಗೆ ಭೂಮಿತೂಕದ ಬೆಲೆಬಂದಿದೆ.‌ ಗಂಧದ ಗುಡಿ ಮಾತ್ರವಲ್ಲ ಸಮಸ್ತ ಏಳುಕೋಟಿ ಕನ್ನಡಿಗರು ಹೆಮ್ಮೆಪಡುವ ನಿರ್ಮಾಣ ಸಂಸ್ಥೆಯಾಗಿದೆ.

ಸೌತ್ ಸಿನಿಮಾ ಇಂಡಸ್ಟ್ರಿ ಸ್ಟಾರ್ಸ್ ಡೈರೆಕ್ಟರ್ಸ್ ಹಾಗೂ ಹೀರೋಸ್ ಮಾತ್ರವಲ್ಲ ಭಾರತೀಯ ಚಿತ್ರರಂಗವೇ ಹೊಂಬಾಳೆ ಮೇಲೆ ಕಣ್ಣಿಟ್ಟಿದೆ.
ಒಂದೇ ಒಂದು ಭಾರಿ ಈ ಸಂಸ್ಥೆ ತಮ್ಮ ಚಿತ್ರಕ್ಕೆ ಬಂಡವಾಳ ಹೂಡಿದರೆ ಸಾಕು ಎನ್ನುವ ಮಹಾದಾಸೆ ಇಟ್ಟುಕೊಂಡಿದ್ದಾರೆ. ಆ ಮಹಾಕನಸಿನ‌ ಸಾಕಾರಕ್ಕಾಗಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹರಸಾಹಸ ಪಡ್ತಿದ್ದಾರೆ. ಆದರೆ ಒಂದು ಮಾತ್ರ ಸತ್ಯ ಗಾಳಿಯಲ್ಲಿ‌ ಗುಂಡು ಹಾರಿಸೋರಿಗೆ, ಸಿನಿಮಾ ನನ್ನ ಪ್ಯಾಷನ್ ಬುಟಾಟಿಕೆ ಬಿಡುವವರಿಗೆ ಹೊಂಬಾಳೆ ಸೊಪ್ಪು ಹಾಕಲ್ಲ ಅಷ್ಟೇ ಯಾಕೇ ಅಂತವರನ್ನ ಹತ್ತಿರಕ್ಕೂ ಸೇರಿಸಲ್ಲ.

ಅದೊಂದು ಕಾಲ ಇತ್ತು ಸ್ಟಾರ್ ಡೈರೆಕ್ಟರ್ ಮನೆ ಕದ ತಟ್ಟಬೇಕಿತ್ತು, ಡಿಮ್ಯಾಂಡಿಂಗ್ ಹೀರೋ ಕಾಲ್ ಶೀಟ್ ಗಿಟ್ಟಿಸಿಕೊಳ್ಳೋದಕ್ಕೆ ಹರಸಾಹಸ ಪಡಬೇಕಿತ್ತು ಆದ್ರೀಗ ಕಾಲ ಬದಲಾಗಿದೆ ಸ್ಟಾರ್ ಡೈರೆಕ್ಟರ್ ಗೆ ಹಾಗೂ ಹೀರೋಗೆ ಕೋಟಿ ಖಜಾನೆ ತೆರೆದಿಡುವ ನಿರ್ಮಾಣ ಸಂಸ್ಥೆಯ ಕಾಲ್ ಶೀಟ್ ಸಿಗಬೇಕಿದೆ. ಈ ಹೊತ್ತಿಗೆ ಇದು ಸುಲಭವಾಗಿಲ್ಲ ಅದು ಹೊಂಬಾಳೆಯಂತಹ ಸಂಸ್ಥೆಯ ಕಾಲ್ ಶೀಟ್ ಪಡೆಯುವುದು ಅಸಾಧ್ಯ. ಹಾಗಂತ ಅನ್ಯಥಾ ಭಾವಿಸಬಾರದು. ಯಾಕಂದ್ರೆ, ಯಶ್ ರಾಜ್, ಈರೋಸ್, ರೆಡ್‌ ಚಿಲ್ಲೀಸ್, ಆರ್ಕಾ ಮೀಡಿಯಾ, ಅನ್ನಪೂರ್ಣ, ಮೈತ್ರಿ, ಹೀಗೆ ಪ್ರತಿಷ್ಟಿತ ನಿರ್ಮಾಣ ಸಂಸ್ಥೆಗಳಿಗೆ ಸೆಡ್ಡು ಹೊಡೆಯುವ ಲೆವೆಲ್ಲಿಗೆ ಹೊಂಬಾಳೆ ಬೆಳೆದು ನಿಂತಿದೆ.

ಕೆಜಿಎಫ್ ಮೂಲಕ ಪ್ಯಾನ್ ಇಂಡಿಯಾ ತಲುಪಿ ಕನ್ನಡ ಚಿತ್ರರಂಗಕ್ಕೆ ಚಿನ್ನದ ಕಿರೀಟ ತೊಡಿಸಿದೆ.ಅಷ್ಟಕ್ಕೂ ನಾವು ಇವತ್ತು ಹೊಂಬಾಳೆ ಎನ್ನುವ ಹೆಮ್ಮೆಯ ಸಂಸ್ಥೆ ಬಗ್ಗೆ ಬರೆಯುತ್ತಿರುವುದಕ್ಕೆ ಕಾರಣ ಹನ್ನೊಂದನೇ ಸಿನಿಮಾ.ಇತ್ತೀಚಿಗಷ್ಟೇ 9 ಹಾಗೂ 10 ನೇ‌ ಸಿನಿಮಾ ಬಗ್ಗೆ ಅನೌನ್ಸ್ ಮೆಂಟ್ ಮಾಡಿದ್ದರು. ಪವರ್ ಸ್ಟಾರ್ ಹಾಗೂ ಲೂಸಿಯಾ ಪವನ್ ಕಾಂಬಿನೇಷನ್ ನಲ್ಲಿ ದ್ವಿತ್ವ ಬರಲಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರಿಚರ್ಡ್ ಆಂಟನಿಯಾಗಿ ಬರಲಿದ್ದಾರೆ ಅಂತ ಅಧಿಕೃತವಾಗಿ ಅನೌನ್ಸ್ ಕೂಡ ಮಾಡಿದ್ದರು. ಇತ್ತೀಚೆಗಷ್ಟೇ, ಸೌತ್ ಸುಂದರಿ ತ್ರಿಷಾʼ ದ್ವಿತ್ವʼ ಗೆ ಜಾಯಿನ್ ಆಗಿದ್ದಾರೆ. ಹೊಂಬಾಳೆಯ ಹತ್ತನೇ ಚಿತ್ರದ ಹೊಣೆ ಹೊತ್ತಿರುವ ಶೆಟ್ಟರು ಅದ್ಯಾವ ಸುಂದರಿಯನ್ನು ಕರೆತರುತ್ತಾರೋ ಕಾದುನೋಡಬೇಕು.‌ಆದರೆ, ಈ ಮಧ್ಯೆ ಹೊಂಬಾಳೆ ಚಿತ್ರತಂಡ ಹನ್ನೊಂದನೇ ಸಿನಿಮಾಗೆ ಕೈಹಾಕಿದೆ.

ರಾಜ್ಯರಾಜಕಾರಣ ಧಗಧಗಿಸುತ್ತಿರುವಾಗ ಹನ್ನೊಂದನೇ ಸಿನಿಮಾ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿರುವ ಹೊಂಬಾಳೆ, ಚಿತ್ರದ ಹೀರೋ ಹಾಗೂ ನಿರ್ದೇಶಕರ ಬಗ್ಗೆ ಹಿಂಟ್ ನ ಬಿಟ್ಟುಕೊಟ್ಟಿಲ್ಲ. ಆಗಸ್ಟ್ 06ರಂದು ಸಮಯ 11.43ಕ್ಕೆ ಸರಿಯಾಗಿ ಟೈಟಲ್ ಲಾಂಚ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಲಿದ್ದೇನೆ ಎನ್ನುವ ಸುದ್ದಿ ರಿವೀಲ್ ಮಾಡಿದ್ದಾರೆ ಅಷ್ಟೇ.‌ಆದರೆ, ಪೋಸ್ಟರ್ ನಲ್ಲಿರುವ ‘ನಿನ್ನೊಳಗಿನ ಕಿಚ್ಚು ನಿನ್ನನ್ನು ಸುಡದಿರಲಿ’ ಎನ್ನುವ ಕ್ಯಾಪ್ಶನ್ ಇದೆಯಲ್ಲ ಅದು ಸಾಕಷ್ಟು ಕೂತೂಹಲ ಕೆರಳಿಸಿದೆ. ಕಿಚ್ಚು ಅಂದಾಕ್ಷಣ ಕಣ್ಣಲ್ಲೇ ಕೆಂಡ ಉಗುಳುವ ಹಲವು ನಾಯಕರು ಕಣ್ಮುಂದೆ ಬರುತ್ತಾರೆ. ನಿರ್ದಿಷ್ಟವಾಗಿ ಇವರಿಗೆ ಹೊಂಬಾಳೆ ದುಡ್ಡು ಹಾಕುತ್ತಿದೆ ಎಂದು ಪ್ರಿಡಿಕ್ಟ್ ಮಾಡುವುದು ಈ‌ಕ್ಷಣಕ್ಕೆ ಅಸಾಧ್ಯ. ಒಂದು ವೇಳೆ ಮಾಡಿದರೂ ಅಂತೆ- ಕಂತೆ ಅಂತ ಬಣ್ಣಬಣ್ಣದ ಟೋಪಿ ಹಾಕಿ ಮ್ಯಾಟರ್ ಸೇಲ್ ಮಾಡ್ಬೇಕು ಅಷ್ಟೇ. ಹಿಂಗ್ ಮಾಡೋದಕ್ಕಿಂತ ನಾಳೆವರೆಗೂ ಕಾಯೋಣ ಹೊಂಬಾಳೆ ಅನೌನ್ಸ್ ಮಾಡುವ ಹನ್ನೊಂದನೇ ಸಿನಿಮಾದ ನಾಯಕ ಹಾಗೂ ನಿರ್ದೇಶಕನನ್ನು ತಲೆಮೇಲೆ ಹೊತ್ತು ಮೆರೆಸೋಣ

  • ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಈ ಕ್ಯೂಟ್‌ ಜೋಡಿಯ ವಿರುದ್ಧ ಷಡ್ಯಂತ್ರ ನಡೆಸಿದವರು ಬಿಗ್‌ ಬಾಸ್‌ ಮನೆಯೊಳಗೆ ಇರುವ ಗುಮಾನಿ !!?

ಬಿಗ್‌ ಬಾಸ್‌ ಸೀಸನ್‌ 8 ಫಿನಾಲೆ ಹಂತಕ್ಕೆ ಬಂದಿದೆ. ಈಗಲೂ ಅಲ್ಲಿರುವ ಈ ಕ್ಯೂಟ್‌ ಜೋಡಿ, ತಮ್ಮ ಮೋಹಕ ನೋಟ, ಮುತ್ತಿನಂತಹ ಮಾತು, ಕಚಗುಳಿ ಇಡುವ ನಗುವಿನ ಮೂಲಕ ಕನ್ನಡ ಕಿರುತೆರೆಯ ಕೋಟ್ಯಾಂತರ ವೀಕ್ಷಕರ ಮನೆ ಗೆಲ್ಲುತ್ತಿದೆ. ಇವರಲ್ಲಿಯೇ ಒಬ್ಬರು ಫಿನಾಲೆಯ ವೇದಿಕೆ ಮೇಲೆ ನಿಂತು ಟ್ರೋಫಿ ಗೆಲ್ಲೋದು ಖಚಿತ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ನಡುವೆಯೇ ಈ ಜೋಡಿಯ ಬಗ್ಗೆ ಬಿಗ್‌ ಬಾಸ್‌ ಮನೆಯಾಚೆ ಅಂದ್ರೆ ಸಾರ್ವಜನಿಕ ವಲಯದಲ್ಲಿ ಕೆಟ್ಟ ಅಭಿಪ್ರಾಯ ಬರುವಂತೆ ಮಾಡುವ ಹುನ್ನಾರವೊಂದು ಸೋಷಲ್‌ ಮೀಡಿಯಾದಲ್ಲಿ ನಡೆದಿದೆ. ಇತ್ತೀಚೆಗೆ ಅಂದರೆ ಒಂದು ವಾರದ ಹಿಂದೆ ನಟಿ ದಿವ್ಯಾ ಉರುಡುಗ ಅವರ ಜತೆಗೆ ಇನ್ನಾರೋ ಹುಡುಗ ಇದ್ದ ಒಂದು ಫೋಟೋ ವೈರಲ್‌ ಆಯಿತು. ಮತ್ತೊಂದೆಡೆ ಅರವಿಂದ್‌ ಕೆ.ಪಿ. ಜತೆಗೆ ಇನ್ನಾರೋ ಒಂದು ಹುಡುಗಿ ಜತೆಗಿದ್ದ ಫೋಟೋ ಕೂಡ ವೈರಲ್‌ ಆಯಿತು. ಇಷ್ಟು ದಿನ ಎಲ್ಲೂ ಹರಿದಾಡದ ಈ ಫೋಟೋಗಳು ಈಗೇಕೆ ಸೋಷಲ್‌ ಮೀಡಿಯಾದಲ್ಲಿ ಹರಿದಾಡಿದವು? ಈ ಫೋಟೋಗಳಲ್ಲಿ ಇದ್ದಂತೆ ದಿವ್ಯಾ ಉರುಡುಗ ಅವರಿಗೆ ಬ್ರಾಯ್‌ ಫ್ರೆಂಡ್‌ ಇದ್ದದ್ದು ನಿಜವೇ? ಅತ್ತ ಅರವಿಂದ್‌ ಕೆ.ಪಿ. ಅವರಿಗೆ ಒಬ್ಬ ಗರ್ಲ್‌ ಫ್ರೆಂಡ್‌ ಇದ್ದದ್ದು ನಿಜವೇ? ಸೋಷಲ್‌ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್‌ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಇಂತಹ ಪ್ರಶ್ನೆಗಳು ಹುಟ್ಟಿದ್ದು ಅಷ್ಟೇ ಸಹಜ. ಆದರೆ ಅದರ ಹಿಂದಿನ ಅಸಲಿ ಕಹಾನಿ ಈಗ ಬಯಲಾಗಿದೆ.

ಒಂದು ಮೂಲಗಳ ಪ್ರಕಾರ ಈ ಫೋಟೋಗೆಳೆರೆಡು ಯಾರೋ ಕ್ರಿಯೇಟ್‌ ಮಾಡಿದ್ದೇ ಆಗಿದೆ. ಹಾಗೆಯೇ ಮತ್ತೊಂದು ಇಂಟರೆಸ್ಟಿಂಗ್‌ ಸಂಗತಿ ಅಂದ್ರೆ ಬಿಗ್‌ ಬಾಸ್‌ ಮನೆಯೊಳಗಡೆ ಇರುವ ಒಬ್ಬ ಕಂಟೆಸ್ಟೆಂಡ್‌ ಪರವಾದ ವ್ಯಕ್ತಿಗಳೇ ಈ ಫೋಟೋಗಳನ್ನು ಎಡಿಟ್‌ ಮೂಲಕ ಕ್ರಿಯೇಟ್‌ ಮಾಡಿ, ಅರವಿಂದ್‌ ಹಾಗೂ ದಿವ್ಯಾ ಉರುಡುಗ ಜೋಡಿಯ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಲು ಹೊರಟಿರುವ ಸಂಗತಿಯನ್ನು ಮೂಲಗಳು ಬಹಿರಂಗ ಪಡಿಸಿವೆ. ಸದ್ಯಕ್ಕೆ ಈ ಎಡಿಟ್‌ ಫೋಟೋ ಹಿಂದಿನ ಸೂತ್ರಧಾರಿ ಯಾರು ಅಂತ ಖಚಿತವಾಗಿ ಗೊತ್ತಿಲ್ಲ. ಆದರೆ ಅಲ್ಲಿರುವ ವ್ಯಕ್ತಿಯೇ ಈ ಎಡಿಟ್‌ ಫೋಟೋಗಳ ಹಿಂದಿನ ಸೂತ್ರಧಾರಿ ಎನ್ನುವ ಸುದ್ದಿ ಮಾತ್ರ ಹರಿದಾಡುತ್ತಲೇ ಇದೆ.

Categories
ಸಿನಿ ಸುದ್ದಿ

ಬಿಗ್‌ ಬಾಸ್‌ : ಅರವಿಂದ್‌ ಕೆ.ಪಿ, ಮಂಜು ಪಾವಗಡ, ವೈಷ್ಣವಿ ಗೌಡ ಈ ಮೂವರಲ್ಲಿ ಯಾರು ವಿನ್ನರ್‌ ?

ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಫಿನಾಲೆ ಹಂತಕ್ಕೆ ಬಂದಿದೆ. ಇದೇ ವಾರ ಅದರ ಫಿನಾಲೆ ಎಪಿಸೋಡ್‌ ಪ್ರಸಾರವಾಗುತ್ತಿದೆ. ಸದ್ಯಕ್ಕೆ ಬಿಗ್‌ ಬಾಸ್‌ ಬಗ್ಗೆ ದೊಡ್ಡ ಕುತೂಹಲ ಇರೋದು ʼಸೀಸನ್‌ ೮ʼ ವಿನ್ನರ್‌ ಯಾರು ಅಂತ. ಸಾಮಾನ್ಯವಾಗಿ ಬಿಗ್‌ ಬಾಸ್‌ ಫಲಿತಾಂಶ ವೀಕ್ಷಕರ ವೊಟಿಂಗ್‌ ವ್ಯವಸ್ಥೆ ಮೇಲೆ ನಡೆಯೋ ದ್ರಿಂದ ತಕ್ಷಣಕ್ಕೆ ಅದರ ವಿನ್ನರ್‌ ಯಾರು ಅಂತ ನಿಖರವಾಗಿ ಹೇಳುವುದು ಕಷ್ಟ. ಆದರೆ ಈಗ ಬಿಗ್‌ಬಾಸ್‌ ಫೈನಲ್‌ಗೆ ಬಹುತೇಕ ಅರವಿಂದ್‌ ಕೆ.ಪಿ., ಮಂಜು ಪಾವಗಡ ಹಾಗೂ ವೈಷ್ಣವಿ ಗೌಡ ಬರುವುದು ಗ್ಯಾರಂಟಿ.

ಉಳಿದಂತೆ ಇದರಲ್ಲಿ ಗೆಲ್ಲೋದು ಯಾರು ಅನ್ನೋದೇ ದೊಡ್ಡ ಕುತೂಹಲ. ಈಗ ಬಿಗ್‌ ಬಾಸ್‌ ಮನೆಯಲ್ಲಿ ಐವರು ಸ್ಪರ್ಧಿಗಳಿದ್ದಾರೆ. ಪ್ರಶಾಂತ್‌ ಸಂಬರಗಿ, ವೈಷ್ಣವಿ ಗೌಡ, ಮಂಜು ಪಾವಗಡ, ಅರವಿಂದ್‌ ಕೆ.ಪಿ ಹಾಗೂ ದಿವ್ಯಾ ಉರುಡುಗ. ಈ ಪೈಕಿ ಫಿನಾಲೆಯಲ್ಲಿ ಎಲಿಮಿನೇಟ್‌ ಆಗುವವರು ಯಾರು ಎನ್ನುವುದು ಕೂಡ ಅಷ್ಟೇ ಕುತೂಹಲ ಹುಟ್ಟಿಸಿದೆ.
ಬಿಗ್‌ ಬಾಸ್‌ ರಿಯಾಲಿಟಿ ಶೋ ಅನ್ನು ಆರಂಭದಿಂದ ವೀಕ್ಷಿಸುತ್ತಾ ಬಂದವರಿಗೆ ಅರವಿಂದ್‌ ಕೆ.ಪಿ, ಮಂಜು ಪಾವಗಡ ಹಾಗೂ ವೈಷ್ಣವಿ ಗೌಡ ಅವರ ಪರ್‌ಫಾರ್ಮೆನ್ಸ್‌ ಬಗ್ಗೆ ಗೊತ್ತೇ ಇದೆ. ಆರಂಭದಿಂದಲೂ ಇಲ್ಲಿ ತನಕ ಈ ಮೂವರು ಯಾವುದೇ ಅಬ್ಬರ ಇಲ್ಲದೆ, ಯಾವುದೇ ವಿವಾದಕ್ಕೂ ಸಿಲುಕದೆ ಅತ್ಯಂತ ಜಾಣ ತನದಿಂದ ಆಟ ಆಡುತ್ತಾ ಬಂದಿದ್ದಾರೆ. ಸಹಜವಾಗಿಯೇ ಇವರ ಬಗ್ಗೆ ಸಾರ್ವಜನಿಕ ವಲಯದಲ್ಲೂ ಒಳ್ಳೆಯ ಅಭಿಪ್ರಾಯಗಳೇ ಇವೆ. ಹಾಗೆಯೇ ಇವರ ಆಟದ ವೈಖರಿಗೂ ಕಿಚ್ಚ ಸುದೀಪ್‌ ಕಡೆಯಿಂದಲೂ ಸಾಕಷ್ಟು ಮೆಚ್ಚುಗೆಯೂ ಸಿಕ್ಕಿದೆ. ಹಾಗಾಗಿ ಈ ಮೂವರಲ್ಲಿ ಒಬ್ಬರ ಬಿಗ್‌ ಬಾಸ್‌ ʼಸೀಸನ್‌ ೮ʼ ರ ಟ್ರೋಫಿ ಎತ್ತುವುದು ಗ್ಯಾರಂಟಿ ಎನ್ನುವ ಮಾತು ಸಾರ್ವಜನಿಕ ವಲಯದಲ್ಲೂ ಇದೆ. ಹಾಗಂತ ಪ್ರಶಾಂತ್‌ ಸಂಬರಗಿ, ದಿವ್ಯ ಉರುಡುಗ ಅವರೇನು ಕಮ್ಮಿ ಇಲ್ಲ. ಆರಂಭದಿಂದ ಇಲ್ಲಿ ತನಕ ಬಿಗ್‌ ಬಾಸ್‌ ಮನೆಯಲ್ಲಿ ಎಲಿಮಿನೇಟ್‌ ಆಗದೆ ಉಳಿದುಕೊಂಡಿದ್ದಾರೆಂದರೆ, ಅವರನ್ನು ಅಷ್ಟು ಸುಲಭವಾಗಿ ಕಡೆಗಣಿಸುವಂತಿಲ್ಲ. ಅವರು ಕೂಡ ಫಿನಾಲೆಗೆ ಕಾಲಿಟ್ಟು ಸುದೀಪ್‌ ಅವರ ಅಕ್ಕ-ಪಕ್ಕ ನಿಂತರೂ ಅಚ್ಚರಿ ಇಲ್ಲ.

error: Content is protected !!