ಅಖಾಡಕ್ಕಿಳಿಯಲು `ರಾಣ’ ಸಜ್ಜು; ಆ ದಿವ್ಯಜಾಗಕ್ಕೆ ಕೆ.ಮಂಜು-ನಂದಕಿಶೋರ್ ಭೇಟಿ !

ಸ್ಯಾಂಡಲ್‌ವುಡ್‌ನ ಹೆಸರಾಂತ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಮಂಜು ಗಂಧದಗುಡಿಯಲ್ಲಿ ಪಡ್ಡೆಹುಲಿಯಾಗಿ ಘರ್ಜಿಸಿದ್ದನ್ನ ಇಡೀ ಕರುನಾಡು ನೋಡಿದೆ. ಬೆಳ್ಳಿಪರದೆ ಹಾಗೂ ಬಾಕ್ಸ್ಆಫೀಸ್ ಕೂಡ ಸಂತಸಪಟ್ಟಿದೆ. ಶ್ರೇಯಸ್ ಮಗದೊಮ್ಮೆ ಸಿಲ್ವರ್‌ಸ್ಕ್ರೀನ್ ಮೇಲೆ ಧಗಧಗಿಸುವ ಗಳಿಗೆಗಾಗಿ ಅವರ ಅಭಿಮಾನಿಗಳು ಕೂಡ ಕಾತುರದಿಂದ ಕಾಯ್ತಿದ್ದಾರೆ. ವಿಷ್ಣುಪ್ರಿಯನಾಗಿ ಮೆರವಣಿಗೆ ಹೊರಡುವ ಮುನ್ನವೇ ಶ್ರೇಯಸ್ `ರಾಣ’ ಚಿತ್ರದ ಶೂಟಿಂಗ್ ಅಖಾಡಕ್ಕೆ ಧುಮುಕುತ್ತಿದ್ದಾರೆ. ಅದಕ್ಕೂ ಮುನ್ನ ರಾಣ ಟೈಟಲ್ ಸ್ಟೋರಿಯನ್ನೊಮ್ಮೆ ನೋಡಿಬಿಡೋಣ.

ರಾಣಾ' ಚಿತ್ರ ರಾಕಿಂಗ್‌ಸ್ಟಾರ್ ಯಶ್ ಮಾಡ್ತಾರೆನ್ನುವ ಸುದ್ದಿಯಿತ್ತು. ಆದರೆ, ಕೆಜಿಎಫ್ ಮೂಲಕ ರಾಕಿ ಧೂಳೆಬ್ಬಿಸಿದ ಮೇಲೆರಾಣ’ ಚಿತ್ರದ ಸುದ್ದಿಗೆ ಪರ್ಮನೆಂಟಾಗಿ ಫುಲ್‌ಸ್ಟಾಪ್ ಬಿತ್ತು. ಇದ್ರಿಂದ ರಾಣಾ ಟೈಟಲ್‌ಗೂ ಬೇಜಾರಾಗಿತ್ತು ಆದರೆ ಅಪ್ನಾ ಟೈಮ್ ಆಯೇಗಾ' ಅಂತ ಕಾದುಕುಳಿತಿದ್ದ ರಾಣ ಟೈಟಲ್‌ಗೆ ಒಂದೊಳ್ಳೆ ಟೈಮ್ ಬಂತು. ನಿರ್ದೇಶಕ ನಂದಕಿಶೋರ್ ಮಾಡಿಟ್ಟುಕೊಂಡಿದ್ದ ಕಥೆಗೆರಾಣ’ ಟೈಟಲ್ ಫರ್ಪೆಕ್ಟ್ ಮ್ಯಾಚ್ ಆಯ್ತು. ನಾಯಕನಟರಾಗಿ ಶ್ರೇಯಸ್ ಮಂಜು ಫೈನಲ್ ಆದರು, ನಿರ್ಮಾಪಕ ಕೆ ಮಂಜು ತಮ್ಮ ಬಳಿಯಿಟ್ಟುಕೊಂಡಿದ್ದ `ರಾಣ’ ಟೈಟಲ್‌ನ ಮಗನಿಗಾಗಿ ಬಿಟ್ಟುಕೊಟ್ಟರು.

ಕಳೆದೊಂದು ತಿಂಗಳ ಹಿಂದೆ ಬಂಡಿಮಹಾಕಾಳಮ್ಮನ ಸನ್ನಿಧಿಯಲ್ಲಿ ರಾಣಾ' ಸಿನಿಮಾ ಸೆಟ್ಟೇರ್ತು. ರಿಯಲ್‌ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರರಾಣ’ ಮೊದಲ ದೃಶ್ಯಕ್ಕೆ ಚಾಲನೆ ಕೊಟ್ಟಿದ್ದರು. ತಾಯಿಯ ಸನ್ನಿಧಿಯಲ್ಲಿ ಮುಹೂರ್ತ ನೆರವೇರಿಸಿಕೊಂಡ ಚಿತ್ರತಂಡ ಶೀಘ್ರದಲ್ಲೇ ಚಿತ್ರೀಕರಣಕ್ಕೆ ಹೊರಡೋದಾಗಿ ಹೇಳಿಕೊಂಡಿತ್ತು. ಫೈನಲೀ, ಫಿಲ್ ಟೀಮ್ ಶೂಟಿಂಗ್ ಅಖಾಡಕ್ಕೆ ಧುಮ್ಕೊದಕ್ಕೆ ಸಿದ್ದತೆ ನಡೆಸಿದೆ.

ಈ ಮಧ್ಯೆ ರಾಣ ಡೈರೆಕ್ಟರ್ ನಂದಕಿಶೋರ್ ಹಾಗೂ ಪ್ರೊಡ್ಯೂಸರ್ ಮಂಜಣ್ಣ ಕುರುಡು ಮಲೆಯ
ಶ್ರೀ ವಿನಾಯಕ ಸ್ವಾಮಿ ಸನ್ನಿಧಿಗೆ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ. `ರಾಣ’ ಚಿತ್ರಕ್ಕೆ ಒಳಿತಾಗಲೆಂದು ಆಶೀರ್ವಾದ ಬೇಡಿದ್ದಾರೆ.

ರಾಣ' ಟೈಟಲ್‌ನಲ್ಲೇ ಒಂದು ಫೈಯರ್ ಇದೆ. ಪಡ್ಡೆಹುಲಿಯ ಖದರ್ ಜೊತೆಗೆ ಪೊಗರು ಪವರ್ ಇರೋದ್ರಿಂದರಾಣ’ ಮೇಲೆ ಒಂದಿಷ್ಟು ನಿರೀಕ್ಷೆಯಿದೆ. ಇದೊಂದು ಪವರ್‌ಪ್ಯಾಕ್ಡ್ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಶ್ರೇಯಸ್ ಮೈ ಹುರಿಗೊಳಿಸಿಕೊಂಡಿದ್ದಾರೆ. ಪೊಗದಸ್ತಾದ ಬಾಡಿಬಿಲ್ಡ್ ಮಾಡಿಕೊಂಡಿರುವ ಶ್ರೇಯಸ್‌ಗೆ ರೀಷ್ಮಾ ನಾಣಯ್ಯ, ರಜಿನಿ ಭಾರದ್ವಾಜ್ ಸಾಥ್ ನೀಡಲಿದ್ದಾರೆ. ಪೊಗರು ಸಿನಿಮಾದ ತಂತ್ರಜ್ಞರು ಈ ಚಿತ್ರಕ್ಕೆ ಬೆವರು ಸುರಿಸಲಿದ್ದು, ಗುಜ್ಜಾಲ್ ಪುರುಷೋತ್ತಮ್ ಜೊತೆಗೆ ಕೆ. ಮಂಜು ಕೂಡ ಬಂಡವಾಳ ಸುರಿಯಲಿದ್ದಾರೆ. `ರಾಣ’ ಚಿತ್ರವನ್ನ ಅದ್ದೂರಿಯಾಗಿ ತೆರೆಮೇಲೆ ತರೋದಕ್ಕೆ ತಯ್ಯಾರಿ ಮಾಡಿಕೊಂಡಿದ್ದಾರೆ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!