-ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ರಿಷಬ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳೊದಿಕ್ಕೆ ರೆಡಿ ಆಗಿದ್ದಾರೆ. ಈಗಾಗಲೇ ನಟ ರಕ್ಷಿತ್ ಶೆಟ್ಟಿ ಕೂಡ ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ‘ರಿಚರ್ಡ್ ಆಂಟನಿ’ ಹೆಸರಿನ ಸಿನಿಮಾದ ನಿರ್ದೇಶನ ಹಾಗೂ ನಟನೆಗೆ ಇಳಿದಿದ್ದಾರೆ. ಅದರ ಬೆನ್ನಲೇ ಈಗ ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ರಿಷಬ್ ಶೆಟ್ಟಿ ಅವರಿಗೂ ಆ್ಯಕ್ಷನ್ ಕಟ್ ಹೇಳುವುದಕ್ಕೆ ಅವಕಾಶ ಸಿಕ್ಕಿದೆ.
ಕಳೆದ ಎರಡು ದಿನಗಳ ಹಿಂದಷ್ಟೇ ಹೊಂಬಾಳೆ ಫಿಲಂಸ್ ಮುಂದಿನ ಹೊಸ ಸಿನಿಮಾ ಟೈಟಲ್ ಲಾಂಚ್ ಕುರಿತಂತೆ ಕುತೂಹಲದ ಸಂಗತಿಯೊಂದನ್ನು ಸೋಷಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ಅದೀಗ ರಿವೀಲ್ ಆಗಿದೆ. ರಿಷಬ್ ಶೆಟ್ಟಿ ನಿರ್ದೇಶನ ‘ಕಾಂತಾರ’ ಹೆಸರಿನ ಸಿನಿಮಾ ಅನೌನ್ಸ್ ಆಗಿದೆ. ರಿಷಬ್ ಶೆಟ್ಟಿ ನಿರ್ದೇಶನದ ಜತೆಗೆ ಈ ಚಿತ್ರದ ನಾಯಕ ನಟ ಕೂಡ ಅವರೇ. ಕಾಂತಾರ ಚಿತ್ರದ ಫಸ್ಟ್ ಪೋಸ್ಟರ್ ಕುತೂಹಲಕಾರಿ ಆಗಿದೆ. ಕರಾವಳಿಯ ಅತೀ ಜನಪ್ರಿಯ ಕ್ರೀಡೆ ಕೋಣನ ಓಟ ಕಿಚ್ಚು ಪೋಸ್ಟರ್ ನಲ್ಲಿ ಆವರಿಸಿಕೊಂಡಿದೆ.