ವೈರಲ್‌ ಆಗಿದೆ ಸಲಗ ಪ್ರಮೋಷನಲ್‌ ಸಾಂಗ್‌ -‌ಟಿನಿಂಗಾ ..ಮಿನಿಂಗಾ ಟಿಸ್ಸಾ…ಹೀಗೆಂದಿದ್ದು ಯಾರು ಗೊತ್ತಾ ?

ನಟ ದುನಿಯಾ ವಿಜಯ್‌ ನಿರ್ದೇಶನ ಹಾಗೂ ಅಭಿನಯದ ಬಹು ನಿರೀಕ್ಷಿತ ಚಿತ್ರ ʼಸಲಗʼ ಶೀಘ್ರದಲ್ಲಿಯೇ ತೆರೆ ಕಾಣಲಿದೆ. ಈಗಾಗಲೇ ಅದರ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿತ್ತಾದರೂ, ಸದ್ಯಕ್ಕೆ ಕೊರೋನಾ ಮತ್ತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ರಿಲೀಸ್‌ ಡೇಟ್‌ ಮುಂದಕ್ಕೆ ಹೋಗಿದೆ. ನಿರ್ಮಾಪಕ ಕೆ.ಪಿ. ಶ್ರೀಕಾಂತ್‌ ಪ್ರಕಾರ, ಮುಂದಿನ ವಾರದಲ್ಲಿ ರಿಲೀಸ್‌ ಡೇಟ್‌ ಫಿಕ್ಸ್‌ ಆಗಲಿದೆಯಂತೆ. ಆದರೆ ರಿಲೀಸ್‌ಗೂ ಮುನ್ನ ಚಿತ್ರದ ಬಗ್ಗೆ ಸಖತ್‌ ಪ್ರಚಾರ ನಡೆಸಲು ಮುಂದಾಗಿರುವ ಚಿತ್ರ ತಂಡ ಗುರುವಾರ ಚಿತ್ರದ ಪ್ರಮೋಷನಲ್‌ ಸಾಂಗ್‌ ವೊಂದನ್ನು ರಿಲೀಸ್‌ ಮಾಡಿದೆ.

ಸಖತ್‌ ಕಿಕ್‌ ನೀಡುವ ಈ ಸಾಂಗ್‌ ನಲ್ಲಿ ಅಷ್ಟೇ ಖಡಕ್‌ ಆದ ಡೈಲಾಗ್‌ ಕೂಡ ಇವೆ. ಅದೇ ಕಾರಣಕ್ಕೆ ಈಗ ಈ ಪ್ರಮೋಷನಲ್‌ ಸಾಂಗ್‌ ರಿಲೀಸ್‌ ಆದ ಕೇವಲೇ ಕ್ಷಣಗಳಲ್ಲಿ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಅಗಿದ್ದು, ಚಿತ್ರದ ಬಗ್ಗೆ ದೊಡ್ಡ ಕ್ರೇಜ್‌ ಹುಟ್ಟು ವಂತೆ ಮಾಡಿದೆ. ಪ್ರಮೋಷನಲ್‌ ಸಾಂಗ್‌ ಗುರುವಾರ ಗ್ರಾಂಡ್‌ ಆಗಿಯೇ ರಿಲೀಸ್‌ ಆಗಿದೆ.

ದುನಿಯಾ ವಿಜಯ್‌ ಅಭಿಮಾನಿಗಳು ಗೌರಿಬಿದನೂರಿನಲ್ಲಿ ಚಿತ್ರದ ರಿಲೀಸ್‌ ಸಂಭ್ರಮದಂತೆಯೇ ಪೋಸ್ಟರ್‌ , ಕಟೌಟ್‌ ಗಳು ಮೂಲಕ ಪಟಾಕಿ ಸಿಡಿಸಿ, ಸಾಂಗ್‌ ರಿಲೀಸ್‌ ಮಾಡಿದ್ದಾರೆ. ಸಿದ್ದಿ ಸಮುದಾಯದ ಜನರು ಹಾಡುವ ಹಾಡಿನ ಒಂದಷ್ಟು ಸನ್ನಿವೇಶಗಳನ್ನು ಈ ಪ್ರಮೋಷನಲ್‌ ಸಾಂಗ್‌ ನಲ್ಲಿ ತೋರಿಸಲಾಗಿದೆ. ಹಾಗೆಯೇ ದುನಿಯಾ ವಿಜಯ್‌, ಧನಂಜಯ್‌, ಕಾಕ್ರೋಚ್‌ ಸುಧೀ ಹಾಗೂ ಯಶ್‌ ಶೆಟ್ಟಿ ಪಾತ್ರಗಳನ್ನು ರಿವೀಲ್‌ ಮಾಡಲಾಗಿದೆ. ಪಾತ್ರಗಳು, ಅಲ್ಲಿ ಡೈಲಾಗ್‌ ಗಳು ತೀವ್ರ ಕುತೂಹಲ ಹುಟ್ಟಿಸುತ್ತವೆ. ದುನಿಯಾ ವಿಜಯ್‌ ಅವರ ಸಿನಿ ಜರ್ನಿಯಲ್ಲಿ ಇದೊಂದು ಪಕ್ಕಾ ಮಾಸ್‌ ಸಿನಿಮಾ ಎನ್ನುವ ಲುಕ್‌ ಈ ಪ್ರಮೋಷನಲ್‌ ಸಾಂಗ್‌ ನಲ್ಲಿ ಕಾಣಿಸಿಕೊಂಡಿದೆ. ನಿರ್ಮಾಪಕ ಕೆ.ಪಿ. ಶ್ರೀಕಾಂತ್‌ ಸಿನಿಮಾವನ್ನು ರಿಚ್‌ ಆಗಿಯೇ ತೆರೆಗೆ ತಂದಿದ್ದು, ಸಿನಿಮಾ ಎಲ್ಲದರಲ್ಲೂ ಅದ್ದೂರಿತನ ತುಂಬಿಕೊಂಡಿದೆ.

Related Posts

error: Content is protected !!