ಒಬ್ಬ ಹಳ್ಳಿಗ. ಒಂದು ನಾಯಿ ಮತ್ತು ಬಯಲು. ಇದಿಷ್ಟು ಸಾಕು ʼ ಗುರ್ರ್ʼ ಎನ್ನುವ ಈ ಕಿರುಚಿತ್ರದ ಕಥೆ ಗುಟ್ಟು. ಇದಿಷ್ಟು ಪಾತ್ರದ ಮೂಲ ಕ ಜನರಿಗೆ ಜಾಗೃತಿ ಮೂಡಿಸುವಂತಹ ಒಂದು ಪ್ರಯತ್ನ ಮಾತ್ರ ಸಾಕಷ್ಟು ಪರಿಣಾಮಕಾರಿ ಆಗಿ ಬಂದಿದೆ. ಅದೇ ಕಾರಣಕ್ಕೆ ಈಗ ಅದು ಸೋಷಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಅಂದ ಹಾಗೆ ಇದೊಂದು ಸಣ್ಣ ಕಿರುಚಿತ್ರ. ಒಂದು ಹಳ್ಳಿಗ, ಒಂದು ನಾಯಿ, ಅಲ್ಲೊಂ ದು ಬಯಲು ಅಂದಾಕ್ಷಣ ನಿಮಗೂ ಅರ್ಥವಾಗಿರಬಹುದು, ʼಬಯಲು ಶೌಚʼದ ಸಂಕಷ್ಟ ಇಲ್ಲಿದೆ ಅಂತ. ಅದು ನಿಜವೂ ಹೌದು. ಆ ಕುರಿತ ಒಂದು ಸಂದೇಶವನ್ನು ಎಲ್ಲರಿಗೂ ತಲುಪುವ ಹಾಗೆ ಶಿವಮೊಗ್ಗದ ಹೊಂಗಿರಣ ರಂಗ ತಂಡದ ಸದಸ್ಯರು ಅತ್ಯಂತ ಸೃಜನಾತ್ಮಕವಾಗಿ ಸೃಷ್ಟಿಸಿದ ಕಿರುಚಿತ್ರವೇ ʼಗುರ್ರ್ʼ.
ನಾಲ್ಕು ನಿಮಿಷದ ಈ ಕಿರುಚಿತ್ರದಲ್ಲಿ ಮಾತಿಲ್ಲ. ಸಣ್ಣದ್ದೊಂದು ಹಾಸ್ಯದ ಜೊತೆ ಒಂದೊಳ್ಳೆ ಕಥೆ ಇದೆ. ಸಂದೇಶವೂ ಇದೆ. ಒಂದೂರು. ಒಬ್ಬ ಹಳ್ಳಿಗ. ಒಂದು ನಾಯಿ ಮತ್ತು ಬಯಲು. ಇದಿಷ್ಟು ಸಾಕು ಈ ಕಿರುಚಿತ್ರದ ಕಥೆ ಗುಟ್ಟು ಹೇಳೋಕೆ. ಆದರೆ ಇಷ್ಟರಲ್ಲಿ ಅದೆಂಥಾ ಕಥೆ ಗುರು? ಆದರೂ ಇಲ್ಲಿ ಅರ್ಥಪೂರ್ಣ ಎನಿಸೋ ಸಂದೇಶವಿದೆ. ಅದನ್ನು ನಾಜೂಕಾಗಿಯೇ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ. ಶಿವಮೊಗ್ಗದ ಹೊಂಗಿರಣ ರಂಗ ತಂಡ ಅಂದ್ರೆ ಅದೊಂದು ಕ್ರೀಯಾ ಶೀಲ ರಂಗ ತಂಡ ಅನ್ನೋದು ರಾಜ್ಯಕ್ಕೇ ಗೊತ್ತಿರುವ ಸಂಗತಿ. ವೃತ್ತಿಯ ಲ್ಲಿ ಅಧ್ಯಾಪಕರಾಗಿರುವ ಸಾಸ್ವೆ ಹಳ್ಳಿ ಸತೀಶ್, ಪ್ರವೃತ್ತಿಯಲ್ಲಿ ರಂಗ ನಿರ್ದೇಶಕರಾಗಿ, ಲೇಖಕರಾಗಿ ಹೆಸರು ಮಾಡಿದವರು. ಅವರ ನೇತೃತ್ವದ ʼಹೊಂಗಿರಣ ರಂಗʼ ತಂಡದಲ್ಲಿ ಸಕ್ರಿಯವಾಗಿರುವ ಚಂದ್ರಶೇಖರ್ ಹಿರೇಗೊಣಿಗೆರೆ, ಸುರೇಂದ್ರ ಕೆ.ಎಸ್. ಇದರ ಸೂತ್ರಧಾರರು.
ರಂಗಕರ್ಮಿ ಸಾಸ್ವೆಹಳ್ಳಿ ಸತೀಶ್ ಅವರ ಪರಿಕಲ್ಪನೆಗೆ ʼಕಾಮಿಡಿ ಕಿಲಾಡಿಗಳುʼ ರಿಯಾಲಿಟಿ ಶೋ ಖ್ಯಾತಿಯ ನಟ ಚಂದ್ರಶೇಖರ್ ಹಿರೇಗೊಣಿಗೆರೆ ಚಿತ್ರಕತೆ ಬರೆದಿದ್ದಾರೆ. ಸುರೇಂದ್ರ ಕೆ.ಎನ್. ನಿರ್ದೇಶನ ಮಾಡಿದ್ದು, ಚಂದ್ರಶೇಖರ್ ಹಿರೇಗೊಣಿಗೆರೆ ಅವರೇ ಈ ಕಿರುಚಿತ್ರದಲ್ಲಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮನುಕುಮಾರ್ ಸಂಕಲನ ಹಾಗೂ ಛಾಯಾಗ್ರಹಣ ಮಾಡಿದ್ದಾರೆ. ನಟ, ನಿರ್ದೇಶಕ ನವೀನ್ ಕೃಷ್ಣ ಧ್ವನಿ ನೀಡಿದ್ದಾರೆ.ಗ್ರೀನ್ ರೂಮ್ ಪ್ರೊಡಕ್ಷನ್ ಮೂಲಕ ಈ ಕಿರುಚಿತ್ರ ನಿರ್ಮಾಣವಾಗಿದೆ. ಹೊಂಗಿರಣದ ಸದಸ್ಯರಾದ ಶಿವಕುಮಾರ ಮಾವಲಿ, ರಮೇಶ್ ಎಚ್.ಕೆ. ಸುಬ್ರಮಣ್ಯ, ಹರೀಶ್, ಚಂದ್ರಶೇಖರ್ ಶಾಸ್ತ್ರಿ ಮತ್ತಿತರರು ಸಾಥ್ ನೀಡಿದ್ದಾರೆ.ಈ ಕಿರುಚಿತ್ರದೊಳಗಿನ ವಿಷಯ ಏನು, ಕಥೆ ಹೇಗಿದೆ, ಪಾತ್ರಗಳು ಹೇಗಿವೆ ಅಂತ ಡಿಟೇಲ್ಸ್ ಹೇಳುವುದಕ್ಕಿಂತ ಹೊಂಗಿರಣ ಸದಸ್ಯರು ಮಾಡಿರುವ ನಾಲ್ಕುವರೆ ನಿಮಿಷದ ಈ ಕಿರುಚಿತ್ರ ನೋಡಿದರೆ ನೀವು ನಗುತ್ತೀರಿ, ಹಾಗೆಯೇ ಒಂದು ಕ್ಷಣ ಆ ಕಿರುಚಿತ್ರದ ಹಿಂದಿನ ಆಶಯ ನಿಮಗೂ ಅರ್ಥವಾಗುತ್ತೆ. ಇದನ್ನು ನೋಡಿ, ಬೆಂಬಲಿಸಿ ಅಂತೆನ್ನುವುದು ಸಿನಿಲಹರಿ ಕಳಕಳಿಯೂ ಹೌದು.