Categories
ಸಿನಿ ಸುದ್ದಿ

ಭಾಸ್ಕರ್ ಮನೆ ಹೋಳಿಗೆ ಕುರುಕ್ ತಿಂಡಿ ಮಳಿಗೆಯಲ್ಲಿ ನಟ ಶೈನ್‌ ಶೆಟ್ಟಿ…!

ಸಿನಿಮಾ ಮಂದಿಗೆ  ಹೋಳಿಗೆ ರುಚಿ ತೋರಿಸಿದ ಭಾಸ್ಕರ್‌ ಮನೆ ಹೋಳಿಗೆ ಹಾಗೂ ಕುರುಕ್‌ ತಿಂಡಿ ಮಳಿಗೆ 

ಬಿಗ್‌ಬಾಸ್‌ ಖ್ಯಾತಿಯ ನಟ ಶೈನ್‌ಶೆಟ್ಟಿ, ಎಲ್ಲಾ ಬಿಟ್ಟು ಮನೆ ಹೋಳಿಗೆ ಕುರುಕ್‌ ತಿಂಡಿ ಮಾರಾಟ ಮಳಿಗೆ ತೆರೆದ್ರಾ ? ಬೆಂಗಳೂರಿನ ಬನಶಂಕರಿಯಲ್ಲಿ ಮೊನ್ನೆ ” ಭಾಸ್ಕರ್‌ ಮನೆ ಹೋಳಿಗೆ ಹಾಗೂ ಕುರುಕ್‌ ತಿಂಡಿʼ ಮಾರಾಟ ಮಳಿಗೆ ಮುಂದೆ ನಟ ಶೈನ್‌ ಶೆಟ್ಟಿ ಅವರನ್ನು ಕಂಡಾಗ ಎಲ್ಲರೂ ಅಂದುಕೊಂಡಿದ್ದೇ ಹಾಗೆ. ಆದರೆ ಅದು ಹಾಗಲ್ಲ. ʼಭಾಸ್ಕರ್‌ ಮನೆ ಹೋಳಿಗೆ ಹಾಗೂ ಕುರುಕ್‌ ತಿಂಡಿʼ ಮಾರಾಟ ಮಳಿಗೆಯ ಹತ್ತನೇ ಶಾಖೆ ಅಂದು ಉದ್ಘಾಟನೆ ಗೊಂಡಿತು. ಅಲ್ಲಿಗೆ ಮುಖ್ಯ ಅತಿಥಿಯಾಗಿ ಬಂದಿದ್ದು ಬಿಗ್‌ ಬಾಸ್‌ ಖ್ಯಾತಿಯ ಶೈನ್‌ ಶೆಟ್ಟಿ. ಅವರೊಂದಿಗೆ ಒಗ್ಗರಣೆ ಡಬ್ಬಿ ಖ್ಯಾತಿಯ ಮುರುಳಿ, ಬಿಜೆಪಿ ಮುಖಂಡ ಉಮೇಶ್‌ (ಕಟ್ಟಾಳ್), ಬಿಬಿಎಂಪಿ ವಿರೋಧ ಪಕ್ಷದ ನಾಯಕ ಬಸವರಾಜ್‌, ಧರ್ಮಗಿರಿ ದೇವಸ್ಥಾನದ ಸ್ಥಾಪಕ ವೆಂಕಟೇಶ್‌ ಗೆಸ್ಟ್‌ ಆಗಿ ಬಂದಿದ್ದರು. ಅವರೆಲ್ಲ ಭಾಸ್ಕರ್‌ ಮನೆ ಹೋಳಿಗೆ ಹಾಗೂ ಕುರುಕ್‌ ತಿಂಡಿ ಹೊಸ ಶಾಖೆಗೆ ಶುಭ ಕೋರಿದರು.

ಇನ್ನು ಭಾಸ್ಕರ್‌ ಮನೆ ಹೋಳಿಗೆ ಹಾಗೂ ಕುರುಕ್‌ ತಿಂಡಿ ಮಾರಾಟ ಮಳಿಗೆಗೂ ಸಿನಿಮಾ ಮಂದಿಗೂ ಅಪಾರವಾದ ನಂಟು. ಅದಕ್ಕೆ ಕಾರಣ ಅದರ ಗುಣಮಟ್ಟ. ಬೆಂಗಳೂರು, ಹುಬ್ಬಳ್ಳಿ, ಮಂಗಳೂರಿನಲ್ಲಿ ಅದು ಶಾಖೆಗಳನ್ನು ಹೊಂದಿದ್ದು, ಗ್ರಾಹಕರ ಪಾಲಿಗೆ ಮನೆ ಮಾತು. ನೂತನ ಶಾಖೆಯ ಆರಂಭದ ನೆನಪಿಗಾಗಿ ಅಂದು ಒಂದು ರೂಪಾಯಿಗೆ ಒಂದು ಹೋಳಿಗೆ ಮಾರಾಟ ‌ಮಾಡಿದ್ದು ವಿಶೇಷವಾಗಿತ್ತು.

Categories
ಸಿನಿ ಸುದ್ದಿ

ಸಿಎಂಗೆ ಆಹ್ವಾನ ನೀಡಿದ ನಟ ರಮೇಶ್‌ ಅರವಿಂದ್‌-ಅರ್ಚನಾ ದಂಪತಿ

ಜನವರಿ ಎರಡನೇ ವಾರದಲ್ಲಿ ಮಗಳ ಮದುವೆ ಆರತಕ್ಷತೆ

ಬಹುಭಾಷಾ ನಟ ರಮೇಶ್‌ ಅರವಿಂದ್‌ ಪುತ್ರಿ ನಿಹಾರಿಕಾ ಅವರ ವಿವಾಹ ಕಾರ್ಯಕ್ರಮ ಡಿಸೆಂಬರ್‌ 28 ರಂದು ನಡೆಯಿತು. ಗೆಳೆಯ ಅಕ್ಷಯ್‌ ಅವರನ್ನು ನಿಹಾರಿಕಾ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ. ಎರಡು ಕುಟುಂಬದವರ ಸಮ್ಮುಖದಲ್ಲಿ ಅಕ್ಷಯ್‌ ಹಾಗೂ ನಿಹಾರಿಕಾ ವಿವಾಹ ಕಾರ್ಯಕ್ರಮ ನಡೆಯಿತು. ಇದೀಗ ಈ ನವ ದಂಪತಿಯ ಆರತಕ್ಷತೆ ಕಾರ್ಯಕ್ರಮ ಜನವರಿ ಎರಡನೇ ವಾರ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರಮೇಶ್‌ ಅರವಿಂದ್‌ ಹಾಗೂ ಅರ್ಚನಾ ದಂಪತಿ ಈಗ ಗಣ್ಯರನ್ನು ಆಹ್ವಾನಿಸುವುದರಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರೋದ್ಯಮ, ರಾಜಕೀಯ ಸೇರಿದಂತೆ ಎಲ್ಲಾ ವಿಭಾಗದ ಸ್ನೇಹಿತರು, ಹಿತೈಷಿಗಳಿಗೂ ಆಹ್ವಾನ ನೀಡಲಾಗುತ್ತಿದೆ. ವಿಶೇಷವಾಗಿ ರಮೇಶ್‌ ಅರವಿಂದ್‌ ಹಾಗೂ ಅರ್ಚನಾ ದಂಪತಿ, ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಗಳ ಆರತಕ್ಷತೆ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸಿದ್ದಾರೆ.

” ನಾವು ಅವರನ್ನು ನಿಗದಿತ ಸಮಯದಲ್ಲಿ ಭೇಟಿ ಮಾಡಿದ ಸಂದರ್ಭ ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡ ಮುಖ್ಯಮಂತ್ರಿ ಅವರು, ಉಭಯ ಕುಶಲೋಹಾರಿ ಮಾತುಗಳ ನಂತರ ನಮ್ಮ ಆಹ್ವಾನ ಸ್ವೀಕರಿಸಿ, ಪ್ರೀತಿಯಿಂದ ಬರುವುದಾಗಿ ಹೇಳಿದ್ದಾರೆ. ಅವರು ಬರುವ ನಿರೀಕ್ಷೆ ನಮಗಿದೆʼ ಎಂದು ನಟ ರಮೇಶ್‌ ಅರವಿಂದ್‌ ಪ್ರತಿಕ್ರಿಯಿಸಿದ್ದಾರೆ.

Categories
ಸಿನಿ ಸುದ್ದಿ

ಕಡ್ಡಿ ಅಲ್ಲಾಡಿಸಲು ರೆಡಿಯಾದ ಚಡ್ಡಿದೋಸ್ತ್!‌ ಇದು ಕೌಂಡಿನ್ಯರ ಮೈ ಡಿಯರ್‌ ಫ್ರೆಂಡ್‌ ಕಾದಂಬರಿ ಆಧರಿತ

ಆಸ್ಕರ್‌ ಕೃಷ್ಣ ಜೊತೆ ಲೋಕೇಂದ್ರ ಸೂರ್ಯ ಸಾಥ್‌

ಕನ್ನಡದಲ್ಲಿ ಈಗಾಗಲೇ “ಚಡ್ಡಿದೋಸ್ತ್”‌ ಸಿನಿಮಾ ಬಂದು ಹೋಗಿದ್ದು ಎಲ್ಲರಿಗೂ ಗೊತ್ತಿದೆ. ಈಗ “ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಚಿತ್ರದ ಸರದಿ. ಹೌದು, ಈಗಾಗಲೇ ಈ ಸಿನಿಮಾ ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿ, ತೆರೆಗೆ ಬರಲು ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇಷ್ಟರಲ್ಲೇ ಚಿತ್ರ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸುತ್ತಿದೆ.


ಅಂದಹಾಗೆ, ಈ “ಚಡ್ಡಿದೋಸ್ತ್”ಗಳು ಬೇರಾರೂ ಅಲ್ಲ, “ಆಸ್ಕರ್‌” ಕೃಷ್ಣ ಮತ್ತು ಲೋಕೇಂದ್ರ ಸೂರ್ಯ. ಈ ಪೈಕಿ “ಆಸ್ಕರ್”‌ ಕೃಷ್ಣ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ “ಆಸ್ಕರ್‌”, “ಮನಸಿನ ಮರೆಯಲಿ”, “ಮಿಸ್‌ ಮಲ್ಲಿಗೆ”,”ಮೋನಿಕಾ ಈಸ್‌ ಮಿಸ್ಸಿಂಗ್‌” ಸಿನಿಮಾಗಳನ್ನು ನಿರ್ದೇಶಿಸಿದ್ದ “ಆಸ್ಕರ್‌” ಕೃಷ್ಣ ಈಗ “ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಸಿನಿಮಾ ಮಾಡಿದ್ದಾರೆ. ಇದೊಂದು ಕಾಮಿಡಿ ಥ್ರಿಲ್ಲರ್ ಕಥಾಹಂದರ ಹೊಂದಿದೆ.

ಇನ್ನು ಚಿತ್ರವನ್ನು ರೆಡ್ ಅಂಡ್ ವೈಟ್ ಖ್ಯಾತಿಯ ಸೆವೆನ್‍ರಾಜ್ ಅವರು ನಿರ್ಮಿಸಿದ್ದಾರೆ. ನಿರ್ದೇಶಕ “ಆಸ್ಕರ್” ಕೃಷ್ಣ ಅವರು ಇಲ್ಲಿ ಹೀರೋ ಆಗಿಯೂ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ಲೋಕೇಂದ್ರ ಸೂರ್ಯ ಕೂಡ ಸಾಥ್‌ ನೀಡಿದ್ದಾರೆ. “ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಚಿತ್ರ ಈಗಾಗಲೇ ಡಬ್ಬಿಂಗ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲವನ್ನೂ ಮುಗಿಸಿಕೊಂಡು ಬಿಡುಗಡೆಗೆ ರೆಡಿಯಾಗಿದೆ. ಇತ್ತೀಚೆಗೆ ಚಿತ್ರದ ಸೆನ್ಸಾರ್ ಕೂಡ ಆಗಿದೆ.

ಸದ್ಯದಲ್ಲೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಸಿನಿಮಾ ರಿಲೀಸ್‌ ಮಾಡುವ ಯೋಚನೆ ನಿರ್ದೇಶಕರದ್ದು. ಅಂದಹಾಗೆ, ಇದು ಕೌಂಡಿನ್ಯ ಅವರ “ಮೈ ಡಿಯರ್ ಫ್ರೆಂಡ್” ಎನ್ನುವ ಕಾದಂಬರಿಯನ್ನು ಆಧರಿಸಿದೆ. ಮತ್ತೊಬ್ಬ ನಾಯಕ ಲೋಕೇಂದ್ರ ಸೂರ್ಯ ಅವರು ಇದಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ಈ ಸಿನಿಮಾಗೆ ಮಲಯಾಳಿ ಬೆಡಗಿ ಗೌರಿನಾಯರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಅನಂತ್ ಆರ್ಯನ್ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಗಗನ್‍ಕುಮಾರ್ ಅವರ ಛಾಯಾಗ್ರಹಣ, ಮರಿಸ್ವಾಮಿ ಅವರ ಸಂಕಲನ, ಅಕುಲ್ ಅವರ ನೃತ್ಯ ನಿರ್ದೇಶನ ಹಾಗೂ ವೈಲೆಂಟು ವೇಲು ಅವರ ಸಾಹಸ ನಿರ್ದೇಶನವಿದೆ.

ಸದ್ಯಕ್ಕೆ ಕೊರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಶುರುವಾಗಿಲ್ಲ. ಕೆಲವು ಚಿತ್ರಮಂದಿರಗಳು ಬಾಗಿಲು ತೆರೆದಿವೆ. ಬಹುತೇಕ ಚಿತ್ರಮಂದಿರಗಳು ಬಾಗಿಲು ತೆರೆಯುತ್ತಿದ್ದಂತೆಯೇ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಇಡದೆ.

ಚಿತ್ರದಲ್ಲಿ ರೆಡ್ ಅಂಡ್ ವೈಟ್ ಸೆವೆನ್‍ರಾಜ್, ಸಿ.ವಿ.ಜಿ. ಅವರು ಖಳನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲಾ ಸರಿ, ಇಲ್ಲಿ ಯಾವ ದೋಸ್ತ್‌ ಏನೆಲ್ಲಾ ಮಾಡ್ತಾನೆ ಎಂಬ ವಿಷಯ ತಿಳಿದುಕೊಳ್ಳಬೇಕಾದರೆ, ಚಿತ್ರ ಬರುವವರೆಗೆ ಕಾಯಲೇಬೇಕು.

Categories
ಸಿನಿ ಸುದ್ದಿ

ಸಾಮ್ರಾಜ್ಯದ ಬಾಗಿಲು ತೆರೆಯಲು ಕ್ಷಣಗಣನೆ ಶುರು…! ಕೆಜಿಎಫ್-‌2 ಫೋಟೋ ಹಾಕಿ ಕ್ಯಾಪ್ಷನ್‌ ಕೊಟ್ಟ ಪ್ರಶಾಂತ್‌ ನೀಲ್‌

ಹೊಂಬಾಳೆ ಯುಟ್ಯೂಬ್‌ ಚಾನೆಲ್‌ನಲ್ಲಿ ಜನವರಿ 8ರಂದು ಯಶ್‌ ಬರ್ತ್‌ಡೇಗೆ ಟೀಸರ್‌ ಬಿಡುಗಡೆ

 

ಕನ್ನಡ ಚಿತ್ರರಂಗದಲ್ಲಿ “ಕೆಜಿಎಫ್‌” ಬಹುದೊಡ್ಡ ಬಜೆಟ್‌ ಸಿನಿಮಾ. ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಜೋರು ಸುದ್ದಿಯಾದ ಚಿತ್ರವೂ ಹೌದು. ಈಗ “ಕೆಜಿಎಫ್‌ -೨” ಮೇಲೆ ಎಲ್ಲರಿಗೂ ಸಾಕಷ್ಟು ನಿರೀಕ್ಷೆಯಂತೂ ಇದೆ. ಅದಕ್ಕೆ ಕಾರಣ, ಮೊದಲ ಭಾಗ ಮಾಡಿದ ಮೋಡಿ. ಈಗ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ.

ಯಶ್‌ ಅವರ ಹುಟ್ಟುಹಬ್ಬಕ್ಕೆ ಚಿತ್ರತಂಡ ಚಿತ್ರದ ಟೀಸರ್ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ. ಜನವರಿ 8 ರಂದು ಯಶ್‌ ಅವರ ಹುಟ್ಟುಹಬ್ಬ ಇರುವದರಿಂದ, ಅಂದೇ ಚಿತ್ರದ ಟೀಸರ್‌ ಬಿಡುಗಡೆ ಮಾಡಲು ಚಿತ್ರತಂಡ ಜೋರು ತಯಾರಿ ನಡೆಸುತ್ತಿದೆ. ಈ ಟೀಸರ್‌ ಹೊಂಬಾಳೆ ಫಿಲಂಸ್‌ ಯುಟ್ಯೂಬ್‌ ಚಾನೆಲ್‌ನಲ್ಲೇ ಬಿಡುಗಡೆಯಾಗುತ್ತಿದೆ. ಸದ್ಯಕ್ಕೆ “ಕೆಜಿಎಫ್-‌೨” ಸಾಕಷ್ಟು ಕುತೂಹಲ ಕೆರಳಿಸಿರುವುದಂತೂ ನಿಜ.

ಆ ಕುತೂಹಲಕ್ಕೆ ಕಾರಣವೆಂದರೆ, ನಿರ್ದೇಶಕ ಪ್ರಶಾಂತ್ ನೀಲ್ ಅವರು, “ಕೆಜಿಎಫ್-೨” ಚಿತ್ರದ ಹೊಸದೊಂದು ಫೋಟೋ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆ ಫೋಟೋದೊಂದಿಗೆ “ಸಾಮ್ರಾಜ್ಯದ ಬಾಗಿಲು ತೆರೆಯಲು ಕ್ಷಣಗಣನೆ ಪ್ರಾರಂಭವಾಗಿದೆ” ಎಂಬ ಕ್ಯಾಪ್ಷನ್‌ ಕೂಡ ಹಾಕಿದ್ದಾರೆ. “ಕೆಜಿಎಫ್ -2” ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಒಂದಷ್ಟು ಬಾಕಿ ದೃಶ್ಯಗಳು, ಕೆಲ ಕೆಲಸಗಳನ್ನು ಮಾತ್ರ ಚಿತ್ರತಂಡ ಉಳಿಸಿಕೊಂಡಿದ್ದು, ಅದರ ಕಡೆ ಗಮನಹರಿಸಿದೆ.

 

ಚಿತ್ರದಲ್ಲಿ ಬಾಲಿವುಡ್‌ ನಟ ಸಂಜಯ್‌ದತ್‌ ಅಭಿನಯಿಸಿರುವುದರಿಂದ ಇನ್ನಷ್ಟು ನಿರೀಕ್ಷೆಯನ್ನೂ ಹೆಚ್ಚಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಯಶ್‌ ಹುಟ್ಟುಹಬ್ಬದ ಬಳಿಕ ಚಿತ್ರಕ್ಕೆ ಕುಂಬಳಕಾಯಿ ಹೊಡೆಯುವ ಯೋಚನೆ ತಂಡದ್ದು. ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಕಾಣುತ್ತಿರುವುದು ವಿಶೇಷತೆಗಳಲ್ಲೊಂದು.

ಇನ್ನು, ಹೊಂಬಾಳೆ ಫಿಲಂಸ್ ಬ್ಯಾನರ್‌ನಡಿ ವಿಜಯ್‌ ಕಿರಗಂದೂರು ಈ ಅದ್ಧೂರಿ ಚಿತ್ರಕ್ಕೆ ನಿರ್ಮಾಪಕರು. ಭುವನ್‌ ಗೌಡ ಕ್ಯಾಮೆರಾ ಹಿಡಿದರೆ, ರವಿಬಸ್ರೂರು ಸಂಗೀತವಿದೆ.

 

Categories
ಸಿನಿ ಸುದ್ದಿ

ಭಕ್ತ ಕುಂಬಾರದ ಜ್ಞಾನೇಶ್ವರ ಇನ್ನಿಲ್ಲ , ಹಿರಿಯ ಕಲಾವಿದ ಶನಿ ಮಹದೇವಪ್ಪ ಇನ್ನು ನೆನಪು ಮಾತ್ರ

ಹಿರಿಯ ನಟ ಶನಿ‌ಮಹದೇವಪ್ಪ ವಿಧಿ ವಶರಾಗಿದ್ದಾರೆ. ದೀರ್ಘ ಕಾಲದ ಅನಾರೋಗ್ಯ ದ ಜತೆಗೆ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರು, ಭಾನುವಾರ ಸಂಜೆ ನಗರದ ಕೆ.ಸಿ.ಜನರಲ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.


88ವರ್ಷದ ಹಿರಿಯ ನಟ ಶನಿ ಮಹದೇವಪ್ಪ. ಕನ್ನಡ, ತೆಲುಗು, ತಮಿಳು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಮೇರು ನಟ ಡಾ ರಾಜ್​ಕುಮಾರ್ ಜೊತೆಯಲ್ಲಿ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಹ ನಟಿಸಿದ್ದರು. ಕವಿರತ್ನ ಕಾಳಿದಾಸ, ಭಕ್ತ ಕುಂಬಾರ, ಶ್ರೀನಿವಾಸ ಕಲ್ಯಾಣ ಸೇರಿದಂತೆ ಇತರೆ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದರು.
ನಾಳೆ( ಜ.೪) ಸುಮನಹಳ್ಳಿಯ ಚಿತಾಗಾರದಲ್ಲಿ ಮಹದೇವಪ್ಪರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಬೆಳಕವಾಡಿ ಶನಿಮಹದೇವಪ್ಪರ ಹುಟ್ಟೂರು. ಅವರ ತಂದೆ ಕೆಂಚಪ್ಪ ಹಳ್ಳಿಯ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ತಂದೆ ನಟಿಸುತ್ತಿದ್ದ ನಾಟಕಗಳನ್ನು ನೋಡುತ್ತಾ ಬೆಳೆದ ಅವರು ರಂಗಭೂಮಿಯತ್ತ ಆಕರ್ಷಿತರಾದರು. ‘ರಾಜಾ ವಿಕ್ರಮ’ ನಾಟಕದೊಂದಿಗೆ ಬಣ್ಣ ಹಚ್ಚಿದ ಅವರಿಗೆ ‘ಶನೀಶ್ವರ ಮಹಾತ್ಮೆ’ಯ ಶನಿದೇವನ ಪಾತ್ರ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು. ಈ ಯಶಸ್ಸಿನೊಂದಿಗೆ ‘ಮಹದೇವಪ್ಪ’ ಮುಂದೆ ‘ಶನಿಮಹದೇವಪ್ಪ’ ಎಂದೇ ಹೆಸರಾದರು. ಕನ್ನಡ ಥಿಯೇಟರ್ಸ್ ಮತ್ತು ಗುಬ್ಬಿ ಕಂಪನಿಯ ‘ಬಡವನ ಬಾಳು’, ‘ಅತ್ತೆ ಸೊಸೆ’, ‘ಬಿಡುಗಡೆ’, ‘ಸತ್ಯವಿಜಯ’, ‘ಚಂದ್ರಹಾಸ’ ನಾಟಕಗಳಲ್ಲಿ ನಾಯಕನಾಗಿ ಅಭಿನಯಿಸಿದರು.

 


‘ಧರ್ಮಸ್ಥಳ ಮಹಾತ್ಮೆ’ (1962) ಚಿತ್ರದ ಬ್ರಹ್ಮನ ಪಾತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದ ಶನಿಮಹದೇವಪ್ಪ ಮುಂದೆ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುತ್ತಾ ಬಂದರು. ‘ಭಕ್ತ ಕುಂಬಾರ’ ಚಿತ್ರದಲ್ಲಿ ಜ್ಞಾನೇಶ್ವರನಾಗಿ, ‘ಮೂರೂವರೆ ವಜ್ರಗಳು’ ಚಿತ್ರದಲ್ಲಿ ಶಕುನಿಯಾಗಿ, ‘ಕವಿರತ್ನ ಕಾಳಿದಾಸ’ ಚಿತ್ರದಲ್ಲಿ ಡಿಂಡಿಮ ಕವಿಯಾಗಿ… ಹೀಗೆ ಹತ್ತಾರು ಪಾತ್ರಗಳಲ್ಲಿ ಶನಿಮಹದೇವಪ್ಪ ಸಿನಿಪ್ರೇಮಿಗಳಿಗೆ ನೆನಪಾಗುತ್ತಾರೆ. ವರನಟ ರಾಜಕುಮಾರ್ ಅವರಿಗೆ ಆಪ್ತರಾಗಿದ್ದ ಅವರು ರಾಜ್ ಅಭಿನಯದ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಳೆದೊಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶನಿಮಹದೇವಪ್ಪ ಇಂದು ಇಹಲೋಕ ತ್ಯಜಿಸಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Categories
ಸಿನಿ ಸುದ್ದಿ

ರಾತ್ರೋರಾತ್ರಿ ಸ್ಟಾರ್ ಆದ ಪವನ್ ಕುಮಾರ್!

ರಾತ್ರೋರಾತ್ರಿ ಏನಾಗಬಹುದು? ಸುಮ್ಮನೆ ಉಹಿಸಿಕೊಂಡರೆ, ನೂರೆಂಟು ಘಟನೆಗಳು ನೆನಪಾಗಬಹುದು. ದರ್ಘಟನೆಗಳು ನಡೆಯಬಹುದು, ಸರ್ಕಾರಗಳೇ ಬದಲಾಗಬಹುದು, ಅಪರಿಚಿತ ಕೂಡ ರಾತ್ರೋರಾತ್ರಿ ಸ್ಟಾರ್ ಆಗಬಹುದು, ಇಲ್ಲವೇ ರಾತ್ರೋರಾತ್ರಿ ಒಂದು ದೇಶ ಬಿಟ್ಟು ಇನ್ನೊಂದು ದೇಶಕ್ಕೆ ಪಯಣ ಬೆಳಿಸಿಬಿಡಬಹುದು, ಇಲ್ಲವೇ ರಾತ್ರೋರಾತ್ರಿ ದರೋಡೆಗಳು,ಕೊಲೆ – ಸುಲಿಗೆಗಳು..ಹೀಗೆ ಏನೇನೋ‌ಆಗಬಹುದು. ಸದ್ಯಕ್ಕೆ ಇದರಲ್ಲಿ ಇಲ್ಲಿ ಯಾವುದು ಘಟಿಸುತ್ತೋ ಗೊತ್ತಿಲ್ಲ. ನಿರ್ಮಾಪಕ ಪವನ್ ಕುಮಾರ್ ಮಾತ್ರ ‘ರಾತ್ರೋರಾತ್ರಿ’ ಎನ್ನುವ ಹೆಸರಲ್ಲಿ ಒಂದು ಸಿನಿಮಾ ಮಾಡಲು ಹೊರಟಿದ್ದಾರೆ.

ಚಿತ್ರಕ್ಕೆ ಅವರು ನಿರ್ಮಾಪಕ ಕಮ್ ನಾಯಕ‌ ನಟ. ಡೀಲ್ ಮುರುಳಿ ಇದರ ನಿರ್ದೇಶಕ‌. ಶ್ರೀಧರ್ ನರಸಿಂಹನ್ ಇದರ ಸಂಗೀತ ನಿರ್ದೇಶಕ. ಹಾಗೆಯೇ, ಕಿರಣ್ ಗಜ, ಅರುಣ್ ಥಾಮಸ್, ಹರೀಶ್ ನಟರಾಜನ್, ಸುನೀಲ್ ಮಂಡ್ಯ ಚಿತ್ರದ ತಾಂತ್ರಿಕ ವಿಭಾಗದಲ್ಲಿದ್ದಾರೆ. ಉಳಿದಂತೆ ಚಿತ್ರದ ತಾರಾಗಣದ ಜತೆಗೆ ಪವನ್ ಕುಮಾರ್ ಪ್ರಕಾರ ರಾತ್ರೋರಾತ್ರಿ ಏನ್ ನಡೆಯುತ್ತೆ ಅಂತ ಜ.4 ರಂದು ಚಿತ್ರ ತಂಡ ಸುದ್ದಿ ಗೋಷ್ಠಿಯಲ್ಲಿ ಎಲ್ಲವನ್ನು ರಿವೀಲ್ ಮಾಡಲಿದೆ.

Categories
ಸಿನಿ ಸುದ್ದಿ

ಪೆಟ್ರೋಮ್ಯಾಕ್ಸ್ ಶೂಟಿಂಗ್ ಮುಕ್ತಾಯ – ನೀನಾಸಂ ಸತೀಶ್ ಅಭಿನಯದ ಚಿತ್ರ

ತೊಂದರೆ ಇಲ್ಲದೆ ನಡೀತು ಚಿತ್ರೀಕರಣ

ನಿರ್ದೇಶಕ ವಿಜಯ್ ಪ್ರಸಾದ್ ಇತ್ತೀಚೆಗಷ್ಟೇ “ಪೆಟ್ರೋಮ್ಯಾಕ್ಸ್” ಸಿನಿಮಾ ಕೈಗೆತ್ತಿಕೊಂಡಿದ್ದರು.

 

ಯಶಸ್ವಿ 36 ದಿನಗಳ ಚಿತ್ರೀಕರಣ ನಡೆಸಿ ಕೊನೆಯ ಚಿತ್ರೀಕರಣದ ದಿನದಂದು ಕುಂಬಳಕಾಯಿ ಹೊಡೆದಿದೆ.

ಇಷ್ಟು ದಿನಗಳ ಕಾಲ ನಡೆದ ಸಿನಿಮಾ ಚಿತ್ರೀಕರಣವು ಯಾವುದೇ ತೊಂದರೆಯಿಲ್ಲದೇ ಸುಸೂತ್ರವಾಗಿ ಮುಕ್ತಾಯಗೊಂಡಿರುವ ಬಗ್ಗೆ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

Categories
ಸಿನಿ ಸುದ್ದಿ

ವಸಿಷ್ಠ ಸಿಂಹ ಈಗ ಸೌತ್‌ ಸ್ಟಾರ್‌ !

ಕನ್ನಡದಾಚೆಗೂ ಶುರುವಾಗಿದೆ ʼಚಿಟ್ಟೆʼಯ ಹಾರಾಟ

ವಸಿಷ್ಠ ಸಿಂಹ ಎಂಬ ವಿಶಿಷ್ಟ ಮ್ಯಾನರಿಸಂನ ನಟ ಈಗ ಸೌತ್‌ ಸ್ಟಾರ್‌ ! ಹೌದು, ಈಗವರು ಕನ್ನಡದಾಚೆ ತೆಲುಗು, ತಮಿಳು ಹಾಗೂ ಮಲಯಾಳಂಗೂ ಹೀರೋ ಆಗಿ ಎಂಟ್ರಿ ಆಗುತ್ತಿದ್ದಾರೆ. ಆ ಮೂಲಕ ಕನ್ನಡದ ಸ್ಟಾರ್‌ ನಟರ ಹಾಗೆ ವಸಿಷ್ಠ ಕೂಡ ಈಗ ತಮ್ಮದೇ ವಿಶಿಷ್ಟ ಮ್ಯಾನರಿಸಂ ಮೂಲಕ ವಸಿಷ್ಠ ಸಿಂಹ, ಸೌತ್‌ ಇಂಡಸ್ಟ್ರಿಗೆ ಹೀರೋ ಆಗಿ ಪರಿಚಯವಾಗುತ್ತಿರುವುದು ವಿಶೇಷ.

 

ಕನ್ನಡದಾಚೆ ಅವರೀಗ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿರುವುದನ್ನು ಅಧಿಕೃತವಾಗಿಯೇ ರಿವೀಲ್‌ ಮಾಡಿದ್ದಾರೆ. ಹಾಗೆಯೇ 2020 ಎನ್ನುವ ಕರಾಳ ವರ್ಷ ತಮ್ಮ ಸಿನಿ ಕರಿಯರ್‌ ದೃಷ್ಟಿಯಿಂದ ಹೇಗೆಲ್ಲ ವರವಾಯಿತು ಅಂತಲೂ ಹೇಳಿಕೊಂಡಿದ್ದಾರೆ. ಹೊಸ ವರ್ಷದ ಆರಂಭದ ದಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಂಹದ ಮರಿಯನ್ನು ದತ್ತು ಪಡೆದ ನಂತರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವೀಗ ಸೌತ್‌ ಸ್ಟಾರ್‌ ಎನ್ನುವುದರ ವಿವರ ಕೊಟ್ಟರು.

“ಹೊಸ ವರ್ಷದ ಮೊದಲ ದಿನವಿದು. 2020 ಕಳೆದು ಹೋಯಿತು. ಬರೀ ಸಿನಿಮಾ ಮಂದಿಗೆ ಮಾತ್ರವಲ್ಲ, ಇಡೀ ಜಗತ್ತಿನ ಪಾಲಿಗೆ ಇದೊಂದು ಕರಾಳ ವರ್ಷ. ಆದರೆ ನನಗೆ ೨೦೨೦ ಅನೇಕ ಆವಕಾಶಗಳನ್ನು ತಂದ ವರ್ಷ. ತೆಲುಗಿನಲ್ಲೀಗ ಎರಡು ಸಿನಿಮಾಗಳ ಚಿತ್ರೀಕರಣ ಮುಗಿಸಿದ್ದೇನೆ. ಇನ್ನೊಂದು ಸಿನಿಮಾದ ಚಿತ್ರೀಕರಣ ಶುರುವಾಗಬೇಕಿದೆ. ಇನ್ನೇರೆಡು ಸಿನಿಮಾಗಳ ಮಾತುಕತೆ ಫೈನಲ್‌ ಆಗಿದೆ. ಹಾಗೆಯೇ ತಮಿಳಿನಲ್ಲೂ ಎರಡು ಸಿನಿಮಾಗಳಿಗೆ ಮಾತುಕತೆ ಶುರುವಾಗಬೇಕಿದೆ. “ಕಾಲಚಕ್ರʼ ದೊಂದಿಗೆ ಮಲಯಾಳಂನಲ್ಲೂ ಒಂದು ಸಿನಿಮಾದ ಆವಕಾಶ ಸಿಕ್ಕಿದೆʼ ಎನ್ನುತ್ತಾ ಹೊಸ ವರ್ಷಕ್ಕೆ ಭರ್ಜರಿ ಅವಕಾಶಗಳ ಸುದ್ದಿ ರಿವೀಲ್‌ ಮಾಡಿದರು. ಹಾಗಾದ್ರೆ ಸೌತ್‌ ಇಂಡಿಯಾ ಒಂದು ಸುತ್ತು ಹಾಕಿದ್ರೀ ಅಂತನ್ನಿ, ಅಂತೆನ್ನುವ ಮಾಧ್ಯಮದವರ ಪ್ರಶ್ನೆಗೆ , ಸೌತ್‌ ಇಂಡಿಯಾವೇ ಯಾಕೆ, ಇಡೀ ವಿಶ್ವವನ್ನೇ ಒಂದ್‌ ರೌಂಡ್‌ ಹಾಕೋಣ ಬಿಡಿ ಅಂತ ನಗು ಬೀರಿದರು ವಸಿಷ್ಠ.

ತೆಲುಗಿನಲ್ಲಿ ಈಗಾಗಲೇ ʼಒದೆಲಾ ರೈಲ್ವೆಸ್ಟೇಷನ್‌ʼ ಸಾಕಷ್ಟು ಸದ್ದು ಮಾಡಿದೆ. ಹೊಸ ವರ್ಷಕ್ಕೆ ಅದರ ಹೊಸ ಪೋಸ್ಟರ್‌ ಕೂಡ ಲಾಂಚ್‌ ಆಗಿದೆ. ಮತ್ತೊಂದೆಡೆ ತಲ್ವಾರ್‌ ಪೇಟೆ ಕೂಡ ಕನ್ನಡದ ಜತೆಗೆ ತೆಲುಗಿನಲ್ಲೂ ನಿರ್ಮಾಣ ವಾಗಿದೆ. ಈ ಸಿನಿಮಾಗಳ ಜತೆಗೆ ಮತ್ತೇರೆಡು ಸಿನಿಮಾ ಸೆಟ್ಟೇರುತ್ತಿವೆ. ಅದರ ಜತೆಗೆ ಎರಡು ತಮಿಳು ಸಿನಿಮಾ ಕೂಡ ಶುರುವಾಗುತ್ತಿರುವುದು ವಿಶೇಷ. ಕನ್ನಡದ ಮಟ್ಟಿಗೆ ವಸಿಷ್ಠ ಸಿಂಹ, ಒಂದೆಡೆ ಹೀರೋ, ಮತ್ತೊಂದೆಡೆ ವಿಲನ್.‌ ಎರಡು ಕಡೆ ಕೂಡ ಬ್ಯುಸಿ. ಹೀರೋ ಆಗಿ ʼಕಾಲಚಕ್ರʼ,ʼ ತಲ್ವಾರ್‌ ಪೇಟೆʼ, “ಪಂತʼ ಚಿತ್ರಗಳ ಜತೆಗೀಗ ಕಿಶೋರ್‌ ಕಾಂಬಿನೇಷ್‌ನಲ್ಲೂ ಒಂದು ಸಿನಿಮಾ ಶುರುವಾಗುತ್ತಿದೆಯಂತೆ. ಅದರ ಜತೆಗೆ ವಿಲನ್‌ ಆಗಿ” ಕೆಜಿಎಫ್‌ ೨ʼ ನಲ್ಲೂ ವಸಿಷ್ಠ ಅಬ್ಬರಿಸಲು ರೆಡಿಯಾಗಿದ್ದಾರೆ. ಆದರೆ ಇಲ್ಲಿ ಅವರಿಗೆ ಬಾಲಿವುಡ್‌ ನಟ ಸಂಜಯ್‌ ದತ್‌ ಜತೆಗೆ ಮುಖಾಮುಖಿ ಆಗಿಲ್ಲ ಎನ್ನುವ ಬೇಸರ ಇದೆಯಂತೆ. ಇನ್ನು “ಯುವರತ್ನʼ ಚಿತ್ರದಲ್ಲೂ  ವಸಿಷ್ಠ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಏರಿಯಾದಲ್ಲೊಂದ್‌ ಕಲರ್‌ಫುಲ್ ಸ್ಟೋರಿ – ವಾರ್ಡ್‌ ನಂ-11ರಲ್ಲಿ ಎಲ್ಲವೂ ಇದೆ!

ರಾಘಣ್ಣನ ಮತ್ತೊಂದು  ಸಿನ್ಮಾ ಶೂಟಿಂಗ್‌ ಜೋರು

ಕನ್ನಡ ಚಿತ್ರರಂಗದಲ್ಲಿ ದಿನಕಳೆದಂತೆ ಹೊಸಬರ ಕಲರವ ಹೆಚ್ಚುತ್ತಲೇ ಇದೆ. ಈಗ ಹೊಸಬರು ಹೊಸ ಆಸೆ-ಆಕಾಂಕ್ಷೆಗಳೊಂದಿಗೆ ಸಿನಿಮಾರಂಗವನ್ನು ಸ್ಪರ್ಶಿಸುತ್ತಿದ್ದಾರೆ. ಆ ಸಾಲಿಗೆ “ವಾರ್ಡ್‌ ನಂ-11” ಚಿತ್ರತಂಡವೂ ಸೇರಿದೆ. ಹೌದು, ಸಿನಿಮಾರಂಗದಲ್ಲೇ ಹಲವು ವರ್ಷಗಳ ಕಾಲ ಕೆಲಸ ಮಾಡಿ, ಅನುಭವ ಪಡೆದು ಆ ಅನುಭವದ ಆಧಾರದ ಮೇಲೆ ಈಗ “ವಾರ್ಡ್‌ ನಂ-೧೧” ಚಿತ್ರಕ್ಕೆ ಕೈ ಹಾಕಿದ್ದಾರೆ ನಿರ್ದೇಶಕ ಶ್ರೀಕಾಂತ್.‌ ಯಶ್‌ ಅಭಿನಯದ “ಮೊದಸ ಸಲ” ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಶ್ರೀಕಾಂತ್‌, ಆ ನಂತರದ ದಿನಗಳಲ್ಲಿ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

ಜೊತೆ ಜೊತೆಯಲ್ಲಿ ಒಂದಷ್ಟು ಕಿರುಚಿತ್ರಗಳನ್ನೂ ಕೂಡ ನಿರ್ದೇಶಿಸಿದ ಅನುಭವ ಪಡೆದುಕೊಂಡಿದ್ದಾರೆ. ಅದಾದ ಬಳಿಕ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಈಗ “ವಾರ್ಡ್‌ ನಂ-೧೧” ಚಿತ್ರಕ್ಕೆ ಕೈ ಹಾಕಿದ್ದಾರೆ.
ತಮ್ಮ ಚೊಚ್ಚಲ ಚಿತ್ರದ ಕುರಿತು‌ “ಸಿನಿಲಹರಿ” ಜೊತೆ ಮಾತಿಗಿಳಿದ ನಿರ್ದೇಶಕ ಶ್ರೀಕಾಂತ್ ಹೇಳಿದ್ದಿಷ್ಟು.

ಶ್ರೀಕಾಂತ್‌, ನಿರ್ದೇಶಕ

 

“ಇದು ನನ್ನ ಮೊದಲ ಪ್ರಯತ್ನ. ಇಲ್ಲಿ ಪ್ರಯೋಗವೂ ಇದೆ. ಕಮರ್ಷಿಯಲ್‌ ಅಂಶಗಳೂ ಇವೆ. ಇಲ್ಲಿ ರಾಘವೇಂದ್ರ ರಾಜಕುಮಾರ್ ಅವರು ಹೈಲೆಟ್.‌ ಅವರೊಂದಿಗೆ ಸುಮನ್‌ನಗರ್‌ಕರ್‌ ಕೂಡ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ತುಂಬಿದೆ. ಸಿನಿಮಾ ಕುರಿತು ಹೇಳುವುದಾದರೆ, ಇದೊಂದು ಏರಿಯಾದಲ್ಲಿ ನಡೆಯುವ ಕಥೆ. ಈ ಕಥೆಯಲ್ಲಿ ಪ್ರೀತಿ ತುಂಬಿದೆ, ದ್ವೇಷವೂ ಇದೆ. ರಾಜಕಾರಣಿಗಳ ಎಂಟ್ರಿಯೂ ಇದೆ.

ಸಂದೀಪ್‌, ನಿರ್ಮಾಪಕರು

ಗೆಳೆತನ ತುಂಬಿದೆ. ಒಟ್ಟಾರೆ, ಇದೊಂದು ಕಮರ್ಷಿಯಲ್‌ ಸಿನಿಮಾ. ಬಹುತೇಕ ಬೆಂಗಳೂರಲ್ಲೇ ಚಿತ್ರೀಕರಣಗೊಂಡಿದೆ. ಶೇ.೭೦ರಷ್ಟು ಚಿತ್ರೀಕರಣಗೊಂಡಿರುವ ಸಿನಿಮಾ ಇನ್ನಷ್ಟು ಭಾಗ ಚಿತ್ರೀಕರಣಗೊಂಡರೆ ಮುಗಿಯಲಿದೆ” ಎಂದು ವಿವರ ಕೊಡುತ್ತಾರೆ.

ರಾಘವೇಂದ್ರ ರಾಜಕುಮಾರ್‌ ಅವರ ನಟನೆ ಬಗ್ಗೆ ಎಷ್ಟು ಹೇಳಿದರೂ ಸಾಲದು. ತುಂಬಾನೇ ಕಂಫರ್ಟಬಲ್‌ ವ್ಯಕ್ತಿ. ಅಂಥವರ ಜೊತೆ ನಾನು ಕೆಲಸ ಮಾಡಿದ್ದೇನೆ ಎನ್ನುವುದೇ ಖುಷಿಯ ವಿಷಯ. ಅವರಿಗಿರುವ ಸಿನಿಮಾ ಪ್ರೀತಿ, ಎನರ್ಜಿ ನೋಡಿ, ನಾವಿನ್ನೂ ಕಲಿಯಬೇಕಾಗಿದ್ದು ಸಾಕಷ್ಟು ಇದೆ ಎನಿಸುತ್ತದೆ. ದೊಡ್ಡ ದೊಡ್ಡ ಕಲಾವಿದರ ಜೊತೆ ನಾನು ಕೆಲಸ ಮಾಡಿದ್ದು ಮರೆಯದ ಅನುಭವ ಅನ್ನುತ್ತಾರೆ ಶ್ರೀಕಾಂತ್.‌

ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರ ಜೊತೆಯಲ್ಲಿ ಸುಮನ್‌ ನಗರ್‌ಕರ್‌ ಮುಖ್ಯವಾಗಿ ಕಾಣಿಸಿಕೊಂಡಿದ್ದಾರೆ. “ದಶರಥ” ಹಾಗೂ “ಕೃಷ್ಣ ತುಳಸಿ” ಸಿನಿಮಾದ ನಾಯಕಿ ಮೇಘಶ್ರೀ ಅವರು ಈ ಚಿತ್ರದ ನಾಯಕಿಯಾಗಿದ್ದಾರೆ. ಉಳಿದಂತೆ ಕಬೀರ್‌ ಸಿಂಗ್, ಅಚ್ಯುತ್‌ಕುಮಾರ್‌, ಸುಧಾಬೆಳವಾಡಿ, ಪ್ರಮೋದ್‌ ಶೆಟ್ಟಿ, ಪ್ರಕಾಶ್‌ ತುಮಿನಾಡು, ಉಗ್ರಂ ಮಂಜು, “ಕಾಮಿಡಿ ಕಿಲಾಡಿಗಳುʼ ಖ್ಯಾತಿಯ ಗೋವಿಂದೇ ಗೌಡ ಇತರರು ನಟಿಸಿದ್ದಾರೆ. ಚಿತ್ರಕ್ಕೆ ರಾಕೇಶ್‌ ಸಿ.ತಿಲಕ್‌ ಛಾಯಾಗ್ರಹಣವಿದೆ.

“ಕಿನಾರೆ” ಸಿನಿಮಾ ಸಂಗೀತ ನಿರ್ದೇಶಕ ಸುರೇಂದ್ರನಾಥ್‌ ಅವರು ಸಂಗೀತ ನೀಡಿದ್ದಾರೆ. ನಾಲ್ಕು ಹಾಡುಗಳಿದ್ದು, ಅರ್ಮಾನ್‌ ಮಲ್ಲಿಕ್‌, “ವಿಕ್ರಂ ವೇದ” ಗಾಯಕ ಶಿವಂ, ಅನುರಾಧ ಭಟ್‌, ಮೆಹಬೂಬ್‌ ಸಾಬ್‌ ಹಾಡಿದ್ದಾರೆ. ಇನ್ನು, ಚಿತ್ರದಲ್ಲಿ ನಾಲ್ಕು ಭರ್ಜರಿ ಫೈಟ್ಸ್‌ಗಳಿವೆ. ವಿಕ್ರಮ್‌ ಮೋರ್‌, “ಮದಗಜ”, “ಸೂಪರ್‌ ಸ್ಟಾರ್‌” ಹಾಗೂ “ಬಂಪರ್‌” ಸಿನಿಮಾಗಳಿಗೆ ಸಾಹಸ ಸಂಯೋಜಿಸಿರುವ ಅರ್ಜುನ್‌ ಕೂಡ ಸಾಹಸ ನಿರ್ದೇಶನ ಮಾಡಿದ್ದಾರೆ.

ರಾಕೇಶ್‌ ‌, ಸಿ.ತಿಲಕ್‌ ಛಾಯಾಗ್ರಾಹಕ

ಒಂದು ಕಮರ್ಷಿಯಲ್‌ ಚಿತ್ರಕ್ಕೆ ಏನೆಲ್ಲಾ ಇರಬೇಕೋ ಅದೆಲ್ಲವೂ ಇಲ್ಲಿದೆ ಎನ್ನುತ್ತಾರೆ ನಿರ್ದೇಶಕ ಶ್ರೀಕಾಂತ್. ಚಿತ್ರವನ್ನು ಸಂದೀಪ್‌ ಶಿವಮೊಗ್ಗ ನಿರ್ಮಾಣ ಮಾಡಿದ್ದಾರೆ. ಇವರ ಜೊತೆಗೆ ಗುರುರಾಜ ಎ ಮತ್ತು ಹೇಮಂತ್‌ ಕುಮಾರ್‌ ಸಹ ನಿರ್ಮಾಪಕರಾಗಿ ಸಾಥ್‌ ನೀಡಿದ್ದಾರೆ. ಚಿತ್ರಕ್ಕೆ  ಏನೆಲ್ಲಾ ಬೇಕೋ ಎಲ್ಲವನ್ನೂ ಕಲ್ಪಿಸಿಕೊಡುವ ಮೂಲಕ ಒಂದೊಳ್ಳೆಯ ಸಿನಿಮಾ ತಯಾರಾಗಲು ಪ್ರೋತ್ಸಾಹಿಸುತ್ತಿದ್ದಾರೆ. ನನ್ನ ಜೊತೆಗಿರುವ ತಂಡ ಕೂಡ ಒಳ್ಳೆಯ ಸಹಕಾರ ನೀಡಿದೆ. ಹಾಗಾಗಿ ಸಿನಿಮಾ ನಾನು ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಮೂಡಿಬರುತ್ತಿದೆ ಎಂಬುದು ಶ್ರೀಕಾಂತ್‌ ಮಾತು.

ಗಣೇಶ್‌ ಮಲ್ಲಯ್ಯ, ಸಂಕಲನಕಾರ

 

Categories
ಸಿನಿ ಸುದ್ದಿ

ದತ್ತು ಸ್ವೀಕಾರದ’ ಸಿಂಹ’ ಹೆಜ್ಜೆ, ರೀಲ್ ಅಲ್ಲ ಈಗ ರಿಯಲ್‌ ಸಿಂಹ!

ವಸಿಷ್ಠ , ಬಲು ವಿಶಿಷ್ಟ

ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನದಲ್ಲಿ ಅಂದು ‘ಸಿಂಹ’ ಓಡಾಡಿತು. ಅದನ್ನು ಹಿಂಬಾಲಿಸಿ ನಾವು ನಡೆದವು. ಒಂದು ಕಾಳಜಿಗಾಗಿ ನಡೆದ ಮ್ಯಾರಥಾನ್ ಅದಾಗಿತ್ತು. ಹೊಸ ವರ್ಷ 2021 ರ ಮೊದಲ ದಿ‌ನ ಒಂದೆಡೆ ‘ಸಿಂಹ’, ಮತ್ತೊಂದೆಡೆ ನಾವು ಒಟ್ಟಾಗಿಯೇ ಹೆಜ್ಜೆ ಹಾಕಿದ ಪರಿಯೇ ಅತ್ಯಾದ್ಬುತವಾಗಿತ್ತು. ಹೆಚ್ಚು ಕಡಿಮೆ ಒಂದೀಡಿ ದಿನ ಅದರಲ್ಲಿಯೇ ಕಳೆದು ಹೋಯಿತು. ಅರೆ, ಇದೇನು ಸಿಂಹದ ಜತೆಗಿನ ನಡಿಗೆಯಾ ಅಂತಂದು ಭಾವಿಸಬೇಡಿ. ಅದು ಹಾಗಲ್ಲ, ನಾವು ಜತೆಯಾಗಿ ಸಾಗಿದ್ದು ಬನ್ನೇರುಘಟ್ಟ ಉದ್ಯಾನವನದೊಳಗಿನ ಸಿಂಹದ ಜತೆಗಲ್ಲ, ಬದಲಿಗೆ ನಟ ವಸಿಷ್ಠ ಸಿಂಹ ಅವರ ಜತೆ. ಅದು ಕೂಡ ಒಂದು “ಸಿಂಹʼ ದ ಕಾರಣಕ್ಕೆ…

ಹೊಸ ವರ್ಷದ ಹೊಸ ಹೆಜ್ಜೆ 

ಹೊಸ ವರ್ಷ ಬಂದ್ರೆ, ಬದುಕಿಗೊಂದಿಷ್ಟು ರೆಸ್ಯೂಲೇಷನ್ ಮಾಡ್ಕೊಂಡು ಹೊಸ ವರ್ಷವನ್ನು ಹೊಸದಾಗಿ ಸ್ವಾಗತಿಸೋಣ ಅಂದುಕೊಳ್ಳುವರೆ ಹೆಚ್ಚು‌. ನಾವು- ನೀವೂ ಕೂಡ ಹೀಗೆಲ್ಲ ಅಂದುಕೊಂಡವರೆ ಅನ್ನಿ, ಆದ್ರೆ ಅವೆಲ್ಲ ಎಷ್ಟರ ಮಟ್ಟಿಗೆ ಅನುಷ್ಟಾನಗೊಂಡವು ಅಂತಂದುಕೊಂಡಾಗ, ಥಟ್ಟಂತ ನೆನಪಾಗೋದು ಅದೇ ರಾಗ, ಅದೇ ಹಾಡು.‌ ಹೊಸ ವರ್ಷ 2021ಕ್ಕೂ ಅಂತಹ ರೆಸ್ಯೂಲೇಷನ್ ಎಷ್ಟು ಜನ ಮಾಡ್ಕೊಂಡ್ರೋ ಗೊತ್ತಿಲ್ಲ, ಆದ್ರೆ ಕನ್ನಡದ ಸ್ಟಾರ್ ಗಳ ಪೈಕಿ ನಟ ವಸಿಷ್ಠ ಸಿಂಹ, 2021ಕ್ಕೆ ಹಾಗೊಂದಿಷ್ಟು ರೆಸ್ಯೂಲೇಷನ್ ಮಾಡ್ಕೊಂಡು, ಆ ಪೈಕಿ ಒಂದು ಯೋಜನೆಯನ್ನು ಹೊಸ ವರ್ಷದ ದಿನವೇ ಕಾರ್ಯಗತಕ್ಕೆ ತಂದು, ಗಮನ ಸೆಳೆದಿದ್ದು ಮಾತ್ರ ವಿಶೇಷ ಮತ್ತು ವಿಭಿನ್ನ.

ನಟನೆಯಾಚೆಯ ಇನ್ನೊಂದು ಮುಖ

ಚಿಟ್ಟೆ ಖ್ಯಾತಿಯ ವಿಲನ್ ವಸಿಷ್ಠ ಸಿಂಹ, ನಟರಾಗಿ ಹೇಗೆಲ್ಲ ವಿಭಿನ್ನ ಅನ್ನೋದು ನಿಮಗೆಲ್ಲ ಗೊತ್ತಿರುವ ವಿಚಾರ. ಕಂಚಿನ ಕಂಠ, ಖಡಕ್ ಲುಕು, ಮನೋಜ್ಞ ಅಭಿನಯದ ಮೂಲಕ ಕನ್ನಡ ಪ್ರೇಕ್ಷಕರನ್ನು ಭರಪೂರ ರಂಜಿಸುವ ವಿಶಿಷ್ಟ ಮ್ಯಾನರಿಸಂನ ನಟ. ಈಗವರು ಬರೀ ವಿಲನ್ ಅಲ್ಲ, ‘ಇಂಡಿಯಾ ವರ್ಸಸ್‌ ಇಂಗ್ಲೆಂಡ್ ‘ಚಿತ್ರದ ಮೂಲಕ ಶುರುವಾದ ಅವರ ಹೀರೋಯಿಸಂ ಈಗ ಟಾಲಿವುಡ್, ಮಾಲಿವುಡ್ ಗೂ ತಲುಪಿದೆ. ಸಾಲು ಸಾಲು ಸಿನಿಮಾಗಳೀಗ ಅವರು ಹೀರೋ. ಜತೆಗೆ ಗಾಯಕ ಕೂಡ. ಇದೆಲ್ಲ ಅವರ ಸಿನಿಮಾ ಜರ್ನಿಯ ವಿಶೇಷ. ಇದರಾಚೆ ಅವರು ಒಬ್ಬ ಪರಿಸರ ಪ್ರೇಮಿ. ಹಾಗೆಯೇ ಸಾಮಾಜಿಕ ಕಾರ್ಯಕರ್ತ.‌ ಅದನ್ನೀಗ ಅಧಿಕೃತವಾಗಿ ರಿವೀಲ್‌ ಮಾಡಿದ್ದಾರೆ. ಅದರ ಒಂದು ಸ್ಯಾಂಪಲ್ ಸಿಂಹ, ಅಂದ್ರೆ ಹೆಸರಿಗೆ ತಕ್ಕಂತೆ ಅವರು ಸಿಂಹವನ್ನೇ ದತ್ತು ಪಡೆದು ಸಾಕಲು ಹೊರಟಿದ್ದು‌.ಅದು ಹೊಸ ವರ್ಷದ ಹೊಸ ರೆಸ್ಯೂಲೇಷನ್.

ಇದೇ ಮೊದಲ ರೆಸ್ಯೂಲೇಷನ್

ನಾನು ಯಾವ ವರ್ಷ ಕೂಡ ರೆಸ್ಯೂಲೇಷನ್ ಮಾಡ್ಕೊಂಡು ಹೊಸ ವರ್ಷ ಸ್ವಾಗತಿಸಿದ್ದಿಲ್ಲ. ಆದ್ರೆ ಈ ವರ್ಷ ಅಂತಹದೊಂದು ರೆಸ್ಯೂಲೇಷನ್ ಮಾಡ್ಕೊಂಡೆ .ಅದು ಸಿಂಹದ ದತ್ತು ಪ್ರಕ್ರಿಯೆ ಮೂಲಕಲೇ ಶುರುವಾಗಲಿ ಅಂತಂದುಕೊಂಡೆ. ಆಗಲೇ ಶರುವಾಗಿದ್ದು ಈ ಸಿಂಹದ ಮರಿ ದತ್ತು ಪ್ರಕ್ರಿಯೆ. ಖುಷಿ ಆಗ್ತಿದೆ. ಲೈಫ್‌ ಗೆ ಇಂತಹ ರೆಸ್ಯೂಲೇಷನ್ ಬೇಕು. ಯಾಕಂದ್ರೆ ಹಾಗೊಂದುಕೊಂಡಾಗಲೇ ಏನಾದ್ರೂ ಮಾಡ್ಲಿಕ್ಕೆ ಸಾಧ್ಯ ಅಂತ ನಂಗೆ ಈಗಲೇ ಗೊತ್ತಾಗಿದೆ ಎನ್ನುತ್ತಾ ಮೊದಲ ಮಾತಿಗೆ ಅಡಿಯಿಟ್ಟರು ವಸಿಷ್ಠ ಸಿಂಹ.

 

ಬನ್ನೇರುಘಟ್ಟದಲ್ಲಿದೆ ಆ ಮರಿ ಸಿಂಹ

ನಟ ವಸಿಷ್ಠ ಸಿಂಹ ದತ್ತು ಪಡೆದಿರುವ ಸಿಂಹದ ಮರಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿದೆ. ಇದು ಎಂಟು ತಿಂಗಳ ಸಿಂಹದ ಮರಿ. ವಿಶೇಷ ಅಂದ್ರೆ ಇದು ಡಾ. ರಾಜ್‌ ಕುಮಾರ್‌ ಹುಟ್ಟಿದ ದಿನದಂದೇ ಹುಟ್ಟಿದ್ದಂತೆ. ಹಾಗೊಂದು ವಿಶೇಷತೆ ಈ ಸಿಂಹದ ಮರಿಗಿದೆ. ಒಂದು ವರ್ಷದ ಮಟ್ಟಿಗೆ ಅದನ್ನು ಸಾಕುವ ಜವಾಬ್ದಾರಿಯನ್ನು ಈಗ ನಟ ವಸಿಷ್ಠ ಸಿಂಹ ವಹಿಸಿಕೊಂಡಿದ್ದಾರೆ. ಹೊಸ ವರ್ಷದ ದಿನವೇ ಅವರು ಬನ್ನೇರುಘಟ್ಟಕ್ಕೆ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿ ಜತೆಗೆ ಮಾತುಕತೆ ನಡೆಸಿದರು. ಹಾಗೆಯೇ ದತ್ತು ಪ್ರಕ್ರಿಯೆಯ ದಾಖಲೆಗಳನ್ನು ಅಲ್ಲಿನ ಸಿಬ್ಬಂದಿಯಿಂದ ಪಡೆದುಕೊಂಡರು. ಜತೆಗೆ ತಾವು ಜವಾಬ್ದಾರಿ ಹೊತ್ತುಕೊಂಡಂತೆ ವರ್ಷಕ್ಕೆ ೧ ಲಕ್ಷ ರೂ. ಗಳ ಚೆಕ್‌ ಅನ್ನು ಅಲ್ಲಿನ ಸಿಬ್ಬಂದಿಗೆ ಹಸ್ತಾಂತರಿಸಿದರು.

ಮರಿ ಸಿಂಹಕ್ಕಿಟ್ಟ ಹೆಸರು ವಿಜಯನರಸಿಂಹ

ದತ್ತು ಸ್ವೀಕಾರ ಪ್ರಕ್ರಿಯೆ ಸಂದರ್ಭದಲ್ಲೇ ನಿನ್ನೆ ಮರಿ ಸಿಂಹಕ್ಕೆ ನಾಮಕರಣ ಪ್ರಕ್ರಿಯೆ ಕೂಡ ನಡೆಯಿತು. ವಿಜಯ ನರಸಿಂಹ ಅಂತ ಹೆಸರಿಡಲಾಯಿತು. ವಸಿಷ್ಠ ಸಿಂಹ ಹಾಗೂ ಉದ್ಯಾವನದ ಹಿರಿಯ ಅಧಿಕಾರಿ ವನಶ್ರೀ ನಾಮಕರಣದ ಫಲಕ ಆನಾವರಣ ಗೊಳಿಸಿದರು.ವಿಜಯ ನರಸಿಂಹ ಎನ್ನುವುದು ವಸಿಷ್ಠ ಅವರ ತಂದೆಯ ಹೆಸರು ಹೌದು. ಅದನ್ನೇ ದತ್ತು ಪಡೆದ ಸಿಂಹದ ಮರಿಗೆ ನಾಮಕರಣ ಮಾಡಿ, ಸಂತಸ ವ್ಯಕ್ತಪಡಿಸಿದ್ದು, ನಿಜಕ್ಕೂ ವಿಶೇಷ ಎನಿಸಿತು. ವಿಜಯ ನರಸಿಂಹ ಎನ್ನುವುದು ನನ್ನ ತಂದೆ ಹೆಸರು, ಅದರ ಮೇಲಿನ ಸೆಂಟಿಮೆಂಟ್‌ ಗೆ ಅದನ್ನೇ ಫೈನಲ್‌ ಮಾಡಿಕೊಂಡಿದ್ದೇನೆ, ಇದು ನನಗೂ ಖುಷಿ ಆಗಿದೆ ಎನ್ನುತ್ತಾ ನಾಮಕರಣ ಪ್ರಕ್ರಿಯೆಯ ವಿವರ ಬಹಿರಂಗ ಪಡಿಸಿದರು ನಟ ವಸಿಷ್ಠ ಸಿಂಹ.

ಬನ್ನೇರುಘಟ್ಟದಲ್ಲಿ ಇದೇ ಮೊದಲು

ಉದ್ಯಾನವನ ಅಥವಾ ಮೃಗಾಲಯದಲ್ಲಿನ ಪ್ರಾಣಿ- ಪಕ್ಷಿಗಳನ್ನು ಸಿನಿಮಾ ಮಂದಿ ದತ್ತು ಪಡೆಯುವುದು ಹೊಸದಲ್ಲ. ಈಗಾಗಲೇ ಶಿವರಾಜ್‌ ಕುಮಾರ್‌, ದರ್ಶನ್‌, ವಿನೋದ್‌ ಪ್ರಭಾಕರ್‌ ಸೇರಿದಂತೆ ಅನೇಕರು ಪ್ರಾಣಿ ಹಾಗೂ ಪಕ್ಷಿಗಳನ್ನು ದತ್ತು ಪಡೆದು, ಅವುಗಳನ್ನು ಸಾಕುವ ಹೊಣೆ ಹೊತ್ತುಕೊಂಡಿದ್ದು ನಿಮಗೂ ಗೊತ್ತು. ಆದರೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಿನಿಮಾ ಮಂದಿ ಕಡೆಯಿಂದ ಪ್ರಾಣಿ ದತ್ತು ಪಡೆದಿದ್ದು ಇದೇ ಮೊದಲು.ಆ ಸಾಲಿನಲ್ಲಿ ವಸಿಷ್ಠ ಅವರ ನಡೆ ವಿಭಿನ್ನ ಹಾಗೂ ವಿಶೇಷ.

ವಸಿಷ್ಠ ಅವರ ಕಾರ್ಯ ಹೆಮ್ಮೆ ತಂದಿದೆ..

“ರಾಜಕಾರಣಿಗಳು, ಅಧಿಕಾರಿಗಳು, ಪರಿಸರ ಪ್ರೇಮಿಗಳು ಈಗಾಗಲೇ ಇಲ್ಲಿನ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದಿದ್ದಾರೆ. ಆದರೆ ಸಿನಿಮಾ ಕಡೆಯಿಂದ ಇಲ್ಲಿನ ಪ್ರಾಣಿಯನ್ನು ದತ್ತು ಪಡೆದಿದ್ದು ಇದೇ ಮೊದಲು. ಆ ಕಾರಣಕ್ಕಾಗಿ ನಾವು ನಟ ವಸಿಷ್ಠ ಅವರಿಗೆ ಧನ್ಯವಾದ ಸಲ್ಲಿಸುತ್ತೇವೆ. ಈ ಸಂಖ್ಯೆ ಇನ್ನು ಹೆಚ್ಚಲಿ, ಬೇರೆಯವರು ಕೂಡ ಆಸಕ್ತಿ ತೆಗೆದುಕೊಂಡರೆ ಒಳ್ಳೆಯದುʼ ಅಂತ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಹಿರಿಯ ಅಧಿಕಾರಿ ವನಶ್ರೀ ಸುದ್ದಿ ಗೋಷ್ಠಿಯಲ್ಲಿ ವಿವರಿಸಿದರು. ಹಾಗಾದ್ರೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲೇ ಸಿಂಹದ ಮರಿ ದತ್ತು ಪಡೆದಿದ್ದು ಯಾಕೆ?

ಪ್ರಾಣಿ ರಕ್ಷಣೆ ನಮ್ಮ ಕರ್ತವ್ಯ..

ಕಾಡು ಅಂದ್ರೆ ನಂಗೆ ತುಂಬಾ ಇಷ್ಟ. ಅಲ್ಲಿನ ಪ್ರಾಣಿಗಳಂದ್ರು ಕೂಡ ಅಷ್ಟೇ ಇಷ್ಟ. ಅದೇ ಕಾರಣಕ್ಕೆ ನಾನು ರಾಜ್ಯದ ಅನೇಕ ಕಾಡುಗಳನ್ನು ಸುತ್ತಿದ್ದೇನೆ. ಈ ಸುತ್ತಾಟದ ನಡುವೆ ಕಳೆದ ಬಾರಿ ಒಮ್ಮ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಬಂದಿದ್ದೆ. ಆಗ ಇಲ್ಲಿನ ಸಿಬ್ಬಂದಿ ಜತೆ ಮಾತನಾಡುತ್ತಿದ್ದಾಗ, ಇಲ್ಲಿನ ಪ್ರಾಣಿ, ಪಕ್ಷಿಗಳನ್ನು ಸಾಕುವುದು ಎಷ್ಟು ಕಷ್ಟ ಅಂತ ಗೊತ್ತಾಯಿತು. ಹಾಗೆಯೇ ಮಾತನಾಡುತ್ತಿದ್ದಾಗ ಒಂದು ಪ್ಲಾನ್‌ ಹೊಳೆಯಿತು. ಅಧಿಕಾರಿಗಳೇ ಪ್ರಾಣಿ ದತ್ತು ಸ್ವೀಕಾರದ ಬಗ್ಗೆ ಹೇಳಿದರು. ಆಗ ನಂಗೆ ಹೊಳೆದಿದ್ದು ಸಿಂಹದ ಮರಿ ದತ್ತು ಪಡೆಯುವುದು. ಯಾಕಂದ್ರೆ, ಪ್ರಕೃತಿ ಅಥವಾ ಪ್ರಾಣಿ ರಕ್ಷಣೆ ನಮ್ಮ ಹೊಣೆ. ಅದೇ ಕಾರಣಕ್ಕೆ ಸಿಂಹದ ಮರಿ ದತ್ತು ಪಡೆದಿದ್ದೇನೆ ಎಂದರು ನಟ ನಟ ವಸಿಷ್ಠ.

error: Content is protected !!