ಇಮ್ರಾನ್ ಸರ್ದಾರಿಯಾ ನಿರ್ದೇಶನದಲ್ಲಿ ಹಾಡಿ ಕುಣಿಯಲಿದೆ ಇಶಾನ್- ಆಶಿಕಾ ಜೋಡಿ
ಪವನ್ ಒಡೆಯರ್ ನಿರ್ದೇಶನ ಹಾಗೂ ನಿರ್ಮಾಪಕ ಸಿ.ಆರ್. ಮನೋಹರ್ ನಿರ್ಮಾಣದ ಅದ್ದೂರಿ ವೆಚ್ಚದ ಚಿತ್ರ ” ರೆಮೋʼ ಚಿತ್ರೀಕರಣ ಬಹುತೇಕ ಕ್ಲೈಮಾಕ್ಸ್ ತಲುಪಿದೆ. ಸದ್ಯಕ್ಕೆ ಹಾಡುಗಳ ಚಿತ್ರೀಕರಣ ಬಾಕಿಯಿದೆ. ಅದರಲ್ಲೂ ಚಿತ್ರದಲ್ಲಿ ಹೀರೋ ಇಂಟ್ರೋಡಕ್ಷನ್ ಸಾಂಗ್ ಅನ್ನು ಅದ್ದೂರಿ ಸೆಟ್ ನಲ್ಲಿಯೇ ಶೂಟ್ ಮಾಡಲು ಚಿತ್ರ ತಂಡ ಪ್ಲಾನ್ ಹಾಕಿಕೊಂಡಿದೆ.
ಚಿತ್ರ ತಂಡ ರಿವೀಲ್ ಮಾಡಿರುವ ತಾಜಾ ನ್ಯೂಸ್ ಪ್ರಕಾರ, ಚಿತ್ರದಲ್ಲಿನ ಹೀರೋ ಇಂಟ್ರೂಡುಕ್ಷನ್ ಸಾಂಗ್ ನ ಚಿತ್ರೀಕರಣಕ್ಕೆ ಬೆಂಗಳೂರಿನ ಕಂಗೇರಿ ಉಲ್ಲಾಳ ಬಳಿಯಿರುವ ಸನ್ ಸೆಟ್ ಪಾಯಿಂಟ್‌ನ ಬೃಹತ್ ಗ್ರೌಂಡ್ ನಲ್ಲಿ ಅಂದಾಜು ೧.೫ ಕೋಟಿ ರೂ. ವೆಚ್ಚದಲ್ಲಿ ಅದ್ದೂರಿ ಸೆಟ್ ಹಾಕಲು ಚಿತ್ರ ತಂಡ ಮುಂದಾಗಿದೆ. ಸೆಟ್ ನಿರ್ಮಾಣಕ್ಕೂ ಈಗ ಚಾಲನೆ ಸಿಕ್ಕಿದೆ. ಆರ್ಟ್ ಡೈರೆಕ್ಟರ್ ಗುಣಶೇಖರನ್ ಸೆಟ್ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದು, ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ತುಂಬಾ ಹೊಸತೆನಿಸುವ ಹಾಗೆ ಹೊಸ ತಾಂತ್ರಿಕತೆ ಮೂಲಕ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ. ಅದ್ದೂರಿಯ ಈ ಸೆಟ್ ನಲ್ಲಿ ೨೦ಕ್ಕೂ ಹೆಚ್ಚು ಕ್ಯಾಮೆರಾ ಹಾಗೂ ಅಷ್ಟೇ ಸಂಖ್ಯೆಯ ಛಾಯಾಗ್ರಾಹಕರ ಮೂಲಕ ಇಂಟ್ರೋಡಕ್ಷನ್ ಸಾಂಗ್ ಶೂಟಿಂಗ್ ನಡೆಯುತ್ತಿದೆ ಎನ್ನುತ್ತಿದೆ ಚಿತ್ರತಂಡ.
ಈಗಾಗಲೇ ರೆಮೋ ಚಿತ್ರಕ್ಕೆ ವಿಶೇಷವಾದ ಸಂಗೀತ ನೀಡಿರುವ ಮೆಲೋಡಿ ಮಾಂತ್ರಿಕ ಅರ್ಜುನ್ ಜನ್ಯಾ, ಚಿತ್ರದ ಇಂಟ್ರೋಡಕ್ಷನ್ ಸಾಂಗ್ ಮೂಲಕವೂ ದೊಡ್ಡ ಸಂಚಲನ ಮೂಡಿಸುವುದು ಖಾತರಿ. ಕರ್ನಾಟಕ ಮಾತ್ರವಲ್ಲ ಭಾರತೀಯ ಚಿತ್ರರಂಗವೇ ಕಿವಿ ಆಲಿಸಿ ಕೇಳುವಂತಹ ಸಂಗೀತ ಈ ಚಿತ್ರದಲ್ಲಿದೆ. ವೇದಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮಾತಿನ ಭಾಗದ ಚಿತ್ರೀಕರಣದ ಹಾಗೆಯೇ ಹಾಡುಗಳ ಚಿತ್ರೀಕರಣಕ್ಕೂ ಹೆಚ್ಚಿನ ಅದ್ಯತೆ ತೆಗೆದುಕೊಂಡೇ ಕ್ಯಾಮೆರಾ ವರ್ಕ್ ಮಾಡಿದ್ದಾರೆ ವೈದಿ.
ಹಾಡುಗಳು ಕೇಳುವುದಕ್ಕೆ ಇಂಪೆನಿಸುವ ಹಾಗೆ ಮೂಡಿ ಬಂದಿರುವುದು ಒಂದೆಡೆಯಾದರೆ, ಅವುಗಳಿಗೆ ಅಷ್ಟೇ ಸೊಗಸಾಗಿ ನೃತ್ಯ ಸಂಯೋಜನೆ ಮಾಡಿದ್ದಾರೆ ಕೊರಿಯೋಗ್ರಾಫರ್ ಇಮ್ರಾನ್ ಸರ್ದಾರಿಯಾ. ಹಾಗೆಯೇ ಇಂಟ್ರೋಡಕ್ಷನ್ ಸಾಂಗ್ ಕೂಡ ಅಷ್ಟೇ ವಿಶೇಷವಾಗಿ ಮೂಡಿ ಬರುತ್ತಿದೆ. ನಾಯಕ ನಟ ಇಶಾನ್ ಹಾಗೂ ನಾಯಕಿ ಆಶಿಕಾ ಚಿತ್ರದ ಹಾಡುಗಳಲ್ಲಿ ಭರ್ಜರಿಯಾಗಿಯೇ ಕುಣಿದಿದ್ದಾರೆರ. ಅದರ ಅಷ್ಟು ಕ್ರೆಡಿಟ್ ಇಮ್ರಾನ್ ಅವರಿಗೆ ಸಲ್ಲುತ್ತದೆ .
ಅಷ್ಟೇ ಆಲ್ಲ, ಕಲೆ, ಸಂಕಲನ, ಸಂಗೀತದ ಜತೆಗೆ ಅದ್ದೂರಿ ವೆಚ್ಚದಲ್ಲಿಯೇ ನಿರ್ಮಾಣವಾಗಿರುವ ರೆಮೋ ಚಿತ್ರ ಕಾಲಕ್ಕೆ ತಕ್ಕಂತೆ ಟ್ರೆಂಡ್‌ಶೆಟ್ ಮಾಡುವಂತೆ ಸಿನಿ ಪ್ರಿಯರಿಗೆ ರಸದೌತಣ ನೀಡುವುದು ಗ್ಯಾರಂಟಿ ಎನ್ನುವ ವಿಶ್ವಾಸ ಚಿತ್ರದ ತಂಡದ್ದು. ನಿರ್ದೇಶನ ಪವನ್ ಒಡೆಯರ್ ಅವರ ಮಾತಿನಲ್ಲಿ ಹೇಳೋದಾದ್ರೆ, ಹಲವು ವಿಭಿನ್ನತೆ, ವಿಶಿಷ್ಟತೆ ಹೊಂದಿದ ಚಿತ್ರ ಇದಾಗಿದ್ದು, ಗೂಗ್ಲಿ ತರಹದ ಮತ್ತೊಂದು ಲವ್ ಸ್ಟೋರಿ ಗಿಫ್ಟ್ ಸಿನಿಮಾ ಪ್ರೇಕ್ಷಕರಿಗೆ ಖಚಿತ.