ನಶೆ ಸಿನಿಮಾ ನೋಡಿದವರಿಗೋ, ಸಿನಿಮಾ ಮಾಡಿದವರಿಗೋ…?
ನಿರ್ದೇಶಕರಾದ ಮರಡಿಹಳ್ಳಿ ನಾಗಚಂದ್ರ ಹಾಗೂ ಪ್ರವೀಣ್ ನಾಯಕ್ ಜೋಡಿಯ “ಟಕಿಲಾ ʼಸೆಟ್ಟೇರಿದೆ. ಅವತ್ತು ಬೆಂಗಳೂರಿನ ಸ್ಟಾರ್ ಹೊಟೇಲ್ ಶೆರಾಟನ್ ಗ್ರಾಂಡ್ ನಾಲ್ಕನೇ ಮಹಡಿಯಲ್ಲಿ ಕನ್ನಡ ಟಕೀಲಾಗೆ ಮುಹೂರ್ತ. ನಿರ್ದೇಶಕರಾದ ನಾಗಚಂದ್ರ ಹಾಗೂ ಪ್ರವೀಣ್ ನಾಯಕ್ ಇಬ್ಬರೂ ಸಿಕ್ಕಾಪಟ್ಟೆ ಜನ ಬಳಕೆ ಮನುಷ್ಯರು. ಅದು ಅವತ್ತು ಅಲ್ಲಿ ಕಾಣುತ್ತಿತ್ತು. ಈ ಜೋಡಿಯ ಹೊಸ ಸಾಹಸಕ್ಕೆ ಶುಭ ಕೋರಲು ಗೆಳೆಯರು, ಹಿತೈಷಿಗಳು ಭರ್ಜರಿ ಸಂಖ್ಯೆಯಲ್ಲೇ ಸೇರಿದ್ದರು. ಅ ಮಧ್ಯೆಯೇ “ಟಕಿಲಾʼ ಸಿನಿಮಾಕ್ಕೆ ಚಾಲನೆ ಸಿಕ್ಕಿತು.
ಅಂದ ಹಾಗೆ, ನಿರ್ದೇಶಕ ನಾಗಚಂದ್ರ ನಿರ್ಮಾಣದ ಚೊಚ್ಚಲ ಚಿತ್ರ ಇದು. ನಿರ್ದೇಶನದಾಚೆ ಈಗ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಹಾಗೆಯೇ ಅವರ ಸ್ನೇಹಿತರೇ ಅದ ಪ್ರವೀಣ್ ನಾಯಕ್ ಎಂದಿನಂತೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೂಲತಃ ಛಾಯಾಚಿತ್ರ ಪತ್ರಕರ್ತರಾದ ಪ್ರವೀಣ್ ನಾಯಕ್, ‘ಜೆಡ್’ ‘ಮೀಸೆ ಚಿಗುರಿದಾಗ’, ಹೂ ಅಂತೀಯಾ ಊಹೂ ಅಂತೀಯಾ’ ಚಿತ್ರಗಳ ನಿರ್ದೇಶನದ ಒಂದಷ್ಟು ಗ್ಯಾಪ್ ನಂತರ ಟಕಿಲಾ ಮೂಲಕ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಧರ್ಮ ಕೀರ್ತೀರಾಜ್ ಹಾಗೂ ನಿಖಿಲಾ ಸ್ವಾಮಿ ಈ ಚಿತ್ರದ ಪ್ರಮುಖ ಪಾತ್ರಧಾರಿಗಳು. ಅವರೊಂದಿಗೆ ನಾಗೇಂದ್ರ ಅರಸ್, ಸುಮನ್, ಅಂಕಿತ ಬಾಲ, ಕೋಟೆ ಪ್ರಭಾಕರ್ ಮತ್ತಿತರರು ತಾರಾಗಣದಲ್ಲಿದ್ದಾರೆ.
ಆ ದಿನ ಮುಹೂರ್ತ ನಂತರ ಮಾತಿಗೆ ಕುಳಿತ ಚಿತ್ರತಂಡ ಚಿತ್ರದ ವಿಶೇಷತೆ ಹೇಳಿಕೊಂಡಿತು. ಇದು ನಶೆ ಕುರಿತ ಚಿತ್ರ. ನಶೆ ಅಂದ್ರೆ ಬರೀ ಡ್ರಗ್ಸ್ ಮಾತ್ರವಲ್ಲ, ಪ್ರೀತಿ ಕೂಡ ಒಂದು ನಶೆ. ಅತಿಯಾದ ‘ಅಡಿಕ್ಷನ್ ’ ಸಹ ದೊಡ್ಡ ನಶೆ. ಅ ರೀತಿಯ ಎಳೆಗಳು ಚಿತ್ರದಲ್ಲಿ ಎಂದರು. ಚಿತ್ರದಲ್ಲಿ ಕೆಲವು ಕಡೆ ಮಾನಶಾಸ್ತ್ರದ ಛಾಯೆ ಸಹ ಚಿತ್ರದಲ್ಲಿ ಕಂಡು ಬರುವುದು ನಿರ್ದೇಶಕ ಪ್ರವೀಣ್ ನಾಯಕ್ ಅವರು ಜೀವನದಲ್ಲಿ ಕಂಡಿರುವುದನ್ನೇ ಹೇಳಲು ಹೊರಟಿದ್ದಾರಂತೆ.
ಚಿತ್ರಕ್ಕೆ . 30 ದಿವಸಗಳ ಕಾಲ ಬೆಂಗಳೂರು, ಸಕಲೆಶಪುರ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆಯಂತೆ. ನಾಯಕ ಧರ್ಮ ಕೀರ್ತಿರಾಜ್. ಅನುಭವಿಗಳ ಜೊತೆ ಕೆಲಸ ಮಾಡುವುದು ಖುಷಿಯ ವಿಚಾರ. ಇದೊಂದು ಕ್ರೈಂ ಥ್ರಿಲ್ಲರ್ ಜೊತೆಗೆ ಸಸ್ಪೆನ್ಸ್ ಸಹ ಒಳಗೊಂಡಿದೆ. 12 ವರ್ಷಗಳ ಬಳಿಕ ಸ್ನೇಹಿತ ನಾಗೇಂದ್ರ ಅರಸ್ ಜೊತೆ (ನವಗ್ರಹ ನಂತರ) ಜೊತೆ ಸಿನಿಮಾದಲ್ಲಿ ಮಾಡುತ್ತಿರುವುದು ಮತ್ತೊಂದು ಖುಷಿ ತಂದಿದೆ ಎನ್ನುವ ಮಾತು ಧರ್ಮ ಕೀರ್ತಿರಾಜ್ ಅವರದ್ದು.
ಶೀರ್ಷಿಕೆಯಲ್ಲಿ ಒಂದು ಕಿಕ್ ಎಂದು ಹೇಳುವ ನಾಯಕಿ ನಿಖಿತಾ ಸ್ವಾಮಿ, ಇಲ್ಲಿ ಅಭಿನಯಕ್ಕೆ ಬಹಳ ಅವಕಾಶವಿದೆ. ಒಳ್ಳೆಯ ಸಸ್ಪೆನ್ಸ್ ಸಹ ಒಳಗೊಂಡಿದೆ ಎಂದು ಹೇಳಿಕೊಂಡರು. ಶ್ರೀ ಸಿದ್ದಿವಿನಾಯಕ ಫಿಲ್ಮ್ಸ್ ಅಡಿಯಲ್ಲಿ ತಾಯರಾಗುತ್ತಿರುವ ಈ ಸಿನಿಮಾಕ್ಕೆ ಪಿ ಕೆ ಎಚ್ ದಾಸ್ ಅವರ ಛಾಯಾಗ್ರಹಣವಿದೆ, ಟಾಪ್ ಸ್ಟಾರ್ ರೇಣು ಅವರು ನಾಲ್ಕನೇ ಸಂಗೀತ ನಿರ್ದೇಶನದಲ್ಲಿ ಮೂರು ಹಾಡುಗಳಿಗೆ ರಾಗ ಸಂಯೋಜನೆ ಮಾಡಲಿದ್ದಾರೆ.