ರಾಬರ್ಟ್‌ ತೆಲುಗು ಟೀಸರ್‌ ಲಾಂಚ್‌ ಡೇಟ್‌ ಫಿಕ್ಸ್‌, ಫೆ. 3 ಕ್ಕೆ ಹೊರ ಬರಲಿದೆ ʼರಾಬರ್ಟ್‌ʼ ತೆಲುಗು ಫಸ್ಟ್‌ ಲುಕ್‌

ಆನಂದ್‌ ಆಡಿಯೋ ಮೂಲಕ ಗ್ರಾಂಡ್‌ ಆಗಿ ಲಾಂಚ್‌ ಆಗುತ್ತಿದೆ ‌ ಟೀಸರ್‌

ನಟ ದರ್ಶನ್‌ ಅಭಿನಯದ ಬಹು ನಿರಿಕ್ಷೀತ ʼರಾಬರ್ಟ್‌ʼ ಎಂಟ್ರಿಗೆ ಟಾಲಿವುಡ್‌ ಓಕೆ ಅಂದಿದೆ. ಅದರ ಬೆನ್ನಲೇ ಚಿತ್ರ ತಂಡ ಫೆ. ೩ ಕ್ಕೆ ಫಸ್ಟ್‌ ಲುಕ್‌ ತೆಲುಗು ಟೀಸರ್‌ ಲಾಂಚ್‌ ಮಾಡಲು ರೆಡಿ ಆಗಿದೆ. ಅಂದು ಸಂಜೆ ೪.೧೫ಕ್ಕೆ ಆನಂದ್‌ ಅಡಿಯೋ ಮೂಲಕ ಟೀಸರ್‌ ಲಾಂಚ್‌ ಆಗಲಿದೆ ಅಂತ ಚಿತ್ರ ತಂಡ ಅನೌನ್ಸ್‌ ಮಾಡಿದೆ. ತೆಲುಗು ಟೀಸರ್‌ ಹೇಗಿರುತ್ತೆ ಅನ್ನೋದು ಕೇವಲ ಕನ್ನಡದವರಿಗೆ ಮಾತ್ರವಲ್ಲ, ತೆಲುಗು ಇಂಡಸ್ಟ್ರಿ ನಲ್ಲೂ ಕುತೂಹಲ ಮೂಡಿಸಿದೆ.

ತೆಲುಗು ನಿರ್ಮಾಪಕರು ” ರಾಬರ್ಟ್‌ʼ ರಿಲೀಸ್‌ ಗೆ ಅಡ್ಡಿಯಾಗಿದ್ದರ ವಿರುದ್ಧ ದರ್ಶನ್‌ ಗುಡುಗಿದ್ದು ಟಾಲಿವುಡ್‌ ನಲ್ಲೂ ದೊಡ್ಡ ಸುದ್ದಿ ಆಗಿತ್ತು. ಅದು ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆಯಲ್ಲಿ ಇತ್ಯರ್ಥವಾಗಿ, ಕೊನೆಗೂ ಟಾಲಿವುಡ್‌ ಎಂಟ್ರಿಗೆ ಅನುಮತಿ ಸಿಕ್ಕಿದ್ದು, ದರ್ಶನ್‌ ಗುಡುಗಿದ್ದಕ್ಕೆ ಸಿಕ್ಕ ಜಯವೇ ಆಗಿದೆ. ಅದೇ ರೀತಿ ರಾಬರ್ಟ್‌ ಸಿನಿಮಾ ಹೇಗಿದೆ ಎನ್ನುವುದನ್ನ ಈಗ ಟಾಲಿವುಡ್‌ ಕೂಡ ಎದುರು ನೋಡುತ್ತಿದೆ.

ಬಹು ನಿರೀಕ್ಷಿತ ʼರಾಬರ್ಟ್‌ʼ ಮಾರ್ಚ್‌ ೧೧ ಕ್ಕೆ ಗ್ರಾಂಡ್‌ ಆಗಿ ತೆರೆಗೆ ಬರುತ್ತಿದೆ. ಕನ್ನಡದ ಜತೆಗೆ ತೆಲುಗಿನಲ್ಲೂ ಅಬ್ಬರಿಸಲು ರೆಡಿ ಆಗಿದೆ. ಅಂದು ಜಗತ್ತಿನಾದ್ಯಂತ ರಿಲೀಸ್‌ ಆಗುವುದು ಗ್ಯಾರಂಟಿ ಆಗಿದೆ. ದರ್ಶನ್‌ ಅಭಿಮಾನಿಗಳಂತೂ ತುದಿಗಾಲ ಮೇಲೆ ನಿಂತಿದ್ದಾರೆ. ತಮ್ಮ ನೆಚ್ಚಿನ ನಟ ಸಿನಿಮಾ ನೋಡದೆ ವರ್ಷ ಕಳೆದಿದೆ. ʼಒಡೆಯʼ ನಂತರದ ದೊಡ್ಡ ಗ್ಯಾಪ್‌ ನಂತರ ʼರಾಬರ್ಟ್‌ʼ ರಿಲೀಸ್‌ ಆಗುತ್ತಿದೆ. ಈ ಚಿತ್ರರ ದರ್ಶನ್‌ ಸಿನಿ ಕರಿಯರ್‌ ನಲ್ಲಿ ಮಹತ್ವದ ಚಿತ್ರ ಎನ್ನುವುದಕ್ಕೆ ಚಿತ್ರದಲ್ಲಿನ ಅವರ ಪಾತ್ರ ಗೆಟಪ್‌ ಕಾರಣ. ಮೂರು ವಿಭಿನ್ನ ಪಾತ್ರ ಮತ್ತು ಗೆಟಪ್‌ ನಲ್ಲಿ ದರ್ಶನ್‌ ಕಾಣಿಸಿಕೊಂಡಿದ್ದಾರೆ. ಇಲ್ಲಿ ಅವರಿಗೆ ಮಾಡೆಲ್‌ ಆಶಾಭಟ್‌ ನಾಯಕಿಯಾಗಿ ಅಭಿನಯಿಸಿದ್ದಾರೆ. ಹಾಗೆಯೇ ದೊಡ್ಡ ತಾರಗಣವೇ ಚಿತ್ರದಲ್ಲಿದೆ.

Related Posts

error: Content is protected !!