Categories
ಸಿನಿ ಸುದ್ದಿ

ವಿನೋದ್ ಪ್ರಭಾಕರ್ ತಟ್ಟೆಯಲ್ಲಿರುವ ಅನ್ನ ಕಿತ್ತುಕೊಳ್ಳೋ ಪ್ರಯತ್ನ? 1 ಕೋಟಿ ಸಂಭಾವನೆ- ನೆತ್ತಿಗೇರಿದೆ ರಾಬರ್ಟ್ ಯಶಸ್ಸು- ಹಿಂಗೆ ಕುಟುಕಿದವರಿಗೆ ಟೈಸನ್‌ ಕೊಟ್ರು ಉತ್ತರ

ತಮ್ಮ ತಟ್ಟೆಯಲ್ಲಿ ಹೈದ್ರಬಾದ್ ಬಿರಿಯಾನಿ ಇದ್ದರೂ, ಪಕ್ಕದ ತಟ್ಟೆಯಲ್ಲಿರುವ ನಾಟಿಕೋಳಿ ಸಾರು ರಾಗಿಮುದ್ದೆ ಮೇಲೆ ಕಣ್ಣು ಹಾಕ್ತಾರೆ. ಎಲ್ಲರೂ ಹಂಚಿಕೊಂಡು ತಿನ್ನೋಕೆ ಅವಕಾಶ ಇರುತ್ತೆ. ಆದರೆ, ಕಿತ್ತುಕೊಂಡು ತಿನ್ನೋರಿಗೆ ಹಂಚಿಕೊಂಡು ತಿನ್ನೋ ಗುಣ ಎಲ್ಲಿಂದ ಬರಬೇಕು. ಇದನ್ನಿಲ್ಲಿ ಹೇಳುವುದಕ್ಕೂ ಒಂದು ಕಾರಣವಿದೆ.
ಬೆವರು ಸುರಿಸಿ ದುಡಿದು ತಿನ್ನುವವರು ಎಷ್ಟು ಮಂದಿ ಇದ್ದಾರೋ‌ಅಷ್ಟೇ ಮಂದಿ ಬೇರೆಯವರ ಹೊಟ್ಟೆ ಮೇಲೆ ಹೊಡೆದು, ಬೇರೆಯವರ ತಟ್ಟೆಯ ಅನ್ನ ಕಿತ್ಕೊಂಡು ಬದುಕುವವರು ಇದ್ದಾರೆ. ಬೆಳೆಯುತ್ತಿದ್ದಾರೆ ಅಂದರೆ, ತುಳಿಯೋಕೆ‌ ನೋಡ್ತಾರೆ, ಹೆಸರು ಮಾಡ್ತಿದ್ದಾರೆ ಅಂದರೆ ತೇಜೋವಧೆ ಮಾಡುವ ಕಾರ್ಯಕ್ಕೆ ಚಾಲನೆ ಕೊಡ್ತಾರೆ. ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ಇಂತಹದ್ದೊಂದು ಸನ್ನಿವೇಶವನ್ನ‌ ಎದುರಿಸಿದ್ದಾರಂತೆ.‌


ಹೌದು, ವಿನೋದ್ ಪ್ರಭಾಕರ್ ತಮ್ಮ ಸ್ವಂತ ಪರಿಶ್ರಮದಿಂದ ಯಶಸ್ಸಿನ ಒಂದೊಂದೇ ಮೆಟ್ಟಿಲೇರಿದ್ದಾರೆ. ಅವಮಾನ, ಅಪಮಾನ, ನಿಂದನೆ ಎಲ್ಲವನ್ನೂ ಸಹಿಸಿಕೊಂಡು, ಅದೆಲ್ಲವನ್ನೂ ದಾಟಿಕೊಂಡು ಬಂದಿದ್ದಾರೆ. ಸ್ವಂತ ಬ್ರ್ಯಾಂಡ್ ಕಟ್ಟುವ ಹಾದಿಯಲ್ಲಿ ಎದುರಾಗುವ ಸವಾಲುಗಳಿಗೆ ಸೆಡ್ಡು ಹೊಡೆದು ಬೆವರು ಪ್ಲಸ್ ಬ್ಲಡ್ ಒಟ್ಟೊಟ್ಟಿಗೆ
ಸುರಿಸಿ ಗಂಧದಗುಡಿಯಲ್ಲಿ ತಮ್ಮ “ರಗಡ್” ಅವತಾರ ತೋರಿಸಿ ಎದ್ದು ನಿಂತಿದ್ದಾರೆ.

ಇವತ್ತಿಗೆ ಟೈಸನ್ ಬಹು ಬೇಡಿಕೆಯ ಯಶಸ್ವಿ ನಟರೂ ಆಗಿದ್ದಾರೆ. ವಿನೋದ್ ಪ್ರಭಾಕರ್ ಅವರ ಈ ಸಕ್ಸಸ್ ನ ಅದ್ಯಾರ ಕಣ್ಣಲ್ಲಿ ನೋಡೋದಕ್ಕೆ ಆಗ್ತಿಲ್ಲವೋ ಗೊತ್ತಿಲ್ಲ. ಟೈಗರ್ ಪುತ್ರನ ಹೊಟ್ಟೆ ಮೇಲೆ ಹೊಡೆಯುವ, ಟೈಸನ್ ತಟ್ಟೆಯಲ್ಲಿರುವ ಅನ್ನ ಕಿತ್ತು ಕೊಳ್ಳುವ ಪ್ರಯತ್ನಗಳಾಗಿವೆಯಂತೆ.


“ರಾಬರ್ಟ್” ನಂತರ ವಿನೋದ್ ಸಂಭಾವನೆ ಹೆಚ್ವಿಸಿಕೊಂಡಿದ್ದಾರೆ, ಒಂದು ಸಿನಿಮಾಗೆ ಒಂದು ಕೋಟಿ ‌ಡಿಮ್ಯಾಂಡ್ ಮಾಡ್ತಾರೆ ಎನ್ನುವ ಸುದ್ದಿ ಹಬ್ಬಿಸುವ ಮೂಲಕ ವಿನೋದ್ ಹೊಟ್ಟೆ ಮೇಲೆ ಹೊಡೆಯುವ, ವಿನೋದ್ ತಟ್ಟೆಯಲ್ಲಿರುವ ಅನ್ನ ಕಿತ್ತುಕೊಳ್ಳುವ‌ಕೆಲಸ ಮಾಡಿದ್ದಾರಂತೆ. ಈ ಬಗ್ಗೆ ತಮ್ಮ “ವರದ” ಚಿತ್ರದ‌ ಪ್ರಮೋಷನ್ ಪೋಸ್ಟರ್ ರಿಲೀಸ್ ಸಂದರ್ಭದಲ್ಲಿ ಮಾತನಾಡಿದ ವಿನೋದ್ ಪ್ರಭಾಕರ್, “ಯಾವತ್ತೂ ಯಾರ ಹತ್ತಿರ ರೆಮ್ಯೂನರೇಷನ್ ಡಿಮ್ಯಾಂಡ್ ಮಾಡಿಲ್ಲ. ನನ್ನ ಸ್ಟೇಟಸ್ ಏನು, ನನ್ನ ಸಿನಿಮಾಗೆ ಮಾರ್ಕೆಟ್ ನಲ್ಲಿ ಎಷ್ಟು ವ್ಯಾಲ್ಯೂ ಇದೆ ಅನ್ನೋದು ನನಗೆ ಚೆನ್ನಾಗಿ ಗೊತ್ತಿದೆ.

ನನ್ನಿಂದ ಅನ್ನದಾತನಿಗೆ ನಷ್ಟ ಆಗೋದಕ್ಕೆ ನಾನು ಬಿಡೋದಿಲ್ಲ. ಅಗತ್ಯಕ್ಕಿಂತ ಹೆಚ್ಚಾಗಿ ‌ಬಂಡವಾಳ‌ ಹಾಕಿಸೋದು ಇಲ್ಲ. ಹೀಗಿರುವಾಗ ಸುಖಾ ಸುಮ್ಮನೇ ಸಂಭಾವನೆ ಕೋಟಿ ಹೆಚ್ಚಿಸಿಕೊಂಡಿದ್ದಾರೆ ಅಂತ ಸುಳ್ಳು ಸುದ್ದಿ ಹಬ್ಬಿಸಿ ಬರುವ ಅವಕಾಶಗಳ ಕೈ ತಪ್ಪಿಸಬೇಡಿ, ನನ್ನ ಹೊಟ್ಟೆಯ ಮೇಲೆ ಹೊಡೆದು, ನನ್ನ ತಟ್ಟೆಯಲ್ಲಿರುವ ಕಿತ್ಕೊಬೇಡಿ ಅಂತ ವಿನೋದ್ ಕೇಳಿಕೊಂಡಿದ್ದಾರೆ. ಇಲ್ಲಿವರೆಗಿನ ಯಾವ ಸಕ್ಸಸ್ ಕೂಡ ನನ್ನ ನೆತ್ತಿಗೇರಿಲ್ಲ, ಏರೋದು ಇಲ್ಲ.‌ ಕಾಲನ್ನ ಭೂಮಿ ಮೇಲೆ ಬಿಟ್ಟು ಆಕಾಶದ ಮೇಲೆ ಇಡಲ್ಲ ಅಂತಾರೇ ಟೈಗರ್ ಸನ್.

Categories
ಸಿನಿ ಸುದ್ದಿ

ಟೇಶಿ ವೆಂಕಟೇಶ್‌ ವಿರುದ್ಧ ಮಾನನಷ್ಠ ಮೊಕದ್ದಮೆ ಹಾಕಿದ ರೂಪ ಅಯ್ಯರ್‌ ; ವೈಯಕ್ತಿಕ ನಿಂದನೆ ಮಾಡಿದ್ದಕ್ಕೆ ಒಂದು ಕೋಟಿ ಮಾನನಷ್ಠ ಮೊಕದ್ದಮೆ

ನಿರ್ದೇಶಕರ ಸಂಘ ಬೀದಿಗೆ ಬಂದಿದ್ದು ಗೊತ್ತೇ ಇದೆ. ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್ ವಿರುದ್ಧ ಹಲವರು ಕಿಡಿಕಾರಿದ್ದು ಗೊತ್ತು. ಈಗ ಟೇಶಿ ಟೇಶಿ ವೆಂಕಟೇಶ್ ವಿರುದ್ಧ ನಿರ್ದೇಶಕಿ ಕಮ್‌ ನಿರ್ಮಾಪಕಿ ರೂಪ ಅಯ್ಯರ್‌ ಅವರು ಗುಡುಗಿದ್ದಾರೆ. ಅಷ್ಟೇ ಅಲ್ಲ, ಅವರು ಮಾನನಷ್ಠ ಮೊಕದ್ದಮೆ ಹಾಕುವುದಾಗಿ ಹೇಳಿದ್ದಾರೆ. ಹೌದು, ರೂಪ ಅಯ್ಯರ್‌ ಅವರು ಟೇಶಿ ವೆಂಕಟೇಶ್ ವಿರುದ್ಧ 1 ಕೋಟಿ‌ ಮಾನನಷ್ಠ ಮೊಕದ್ದಮೆ ಕೇಸ್ ಹಾಕಿದ್ದಾರೆ.

ವೈಯಕ್ತಿಕ ವಿಚಾರವನ್ನು ಕೆದಕಿದ್ದ ಹಿನ್ನೆಲೆಯಲ್ಲಿ ರೂಪ ಅಯ್ಯರ್‌ ಅವರು ಇದೀಗ ಟೇಶಿ‌ ವೆಂಕಟೇಶ್ ಅವರ ಮೇಲೆ ದೂರಿದ್ದು, ಕೇಸ್‌ ಹಾಕಿದ್ದಾರೆ.

“ರೂಪ ಅಯ್ಯರ್ ಅಕೌಂಟ್ ನಲ್ಲಿ‌ ಎಷ್ಟು ದುಡ್ಡು ಇದೆ, ಯಾವ್ ರೀತಿ‌ ಸಂಪಾದನೆ ಮಾಡ್ತಾರೆ ಅಂತ ಗೊತ್ತಿದೆ” ಅಂತ ಈ‌ ಹಿಂದೆ ಟೇಶಿ ವೆಂಕಟೇಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದಉರ. ಹೀಗೆ ವೈಯಕ್ತಿಕವಾಗಿ ಪ್ರಶ್ನೆ ಮಾಡಿದ್ದಕ್ಕೆ ರೂಪ ಅಯ್ಯರ್ ಕಾನೂನಿನ ಮೊರೆ ಹೋಗಿರುವ ರೂಪ ಅಯ್ಯರ್‌,

ಕೋರ್ಟ್ ನಲ್ಲಿ ಈ ಕೇಸ್ ಗೆದ್ದೇ ಗೆಲ್ತೀನಿ ಎಂದಿದ್ದಾರೆ. ಅಷ್ಟೇ ಅಲ್ಲ, ಈ ಕೇಸ್‌ನಿಂದ ಬರುವ 1 ಕೋಟಿ ರೂಪಾಯಿ ಮಾನನಷ್ಠ ಹಣವನ್ನು ನಿರ್ದೇಶಕರ ಸಂಘದ ಅಭಿವೃದ್ಧಿಗೆ ಕೊಡ್ತೀನಿ ಅಂತ ಹೇಳಿದ್ದಾರೆ.

Categories
ಸಿನಿ ಸುದ್ದಿ

ನಟ ದುನಿಯಾ ವಿಜಯ್ ತಾಯಿ ನಾರಾಯಣಮ್ಮ ನಿಧನ

ನಟ ದುನಿಯಾ ವಿಜಯ್‌ ಅವರ ತಾಯಿ ನಾರಾಯಣಮ್ಮ ನಿಧನರಾದರು. ಅನಾರೋಗ್ಯದಲ್ಲಿ ಅವರಿಗೆ ಕಳೆದ ೨೦ ದಿನಗಳಿಂದಲೂ ಮನೆಯಲ್ಲೇ ಚಿಕಿತ್ಸೆ ಕೊಡಿಸುತ್ತಿದ್ದರು ನಟ ದುನಿಯಾ ವಿಜಯ್.‌ ಬ್ರೈನ್‌ ಸ್ಟ್ರೋಕ್‌ ಆದ ಕಾರಣ ನಾರಾಯಣಮ್ಮ ತೀವ್ರ ಅನಾರೋಗ್ಯಕ್ಕೆ ಒಳಾಗಿದ್ದರು. ದಿನ ನಿತ್ಯವೂ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಗುರುವಾರ ಚಿಕಿತ್ಸೆ ಫಲಿಸದೆ ನಾರಾಯಣಮ್ಮ ನಿಧನರಾಗಿದ್ದು, ಈ ವಿಚಾರವನ್ನು ನಟ ದುನಿಯಾ ವಿಜಯ್‌ ಅವರೇ ಖಚಿತ ಪಡಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಕೊವಿಡ್ ನಿಂದ ಚೇತರಿಸಿಕೊಂಡಿದ್ದ ದುನಿಯಾ ವಿಜಯ್ ತಾಯಿ ನಾರಾಯಣಮ್ಮ, ಇನ್ನೇನು ಸಮಸ್ಯೆ ಬಗೆಹರಿಯಿತು ಎನ್ನುತ್ತಿರುವಾಗಲೇ ನಿಧನರಾಗಿದ್ದು, ನಟ ವಿಜಯ್‌ ಅವರನ್ನು ತೀವ್ರ ದುಃಖಕ್ಕೆ ತಳ್ಳಿದೆ. ಆಸ್ಪತ್ರೆಗೆ ಹೋಗದೆ ಮನೆಯಲ್ಲೇ ಚಿಕಿತ್ಸೆ ಕೊಡಿಸುತ್ತಿದ್ದಕ್ಕೂ ಕಾರಣ ಇದೆ ಅಂತ ದುನಿಯಾ ವಿಜಯ್‌ ಹೇಳಿದ್ದರು. ʼ ಅಮ್ಮನಿಗೆ ಆಸ್ಪತ್ರೆಗೆ ಹೋಗಲು ಇಷ್ಟವಿರಲಿಲ್ಲ.

ಹೀಗಾಗಿ ಮನೆಯಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸುತ್ತಿದ್ದೇನೆʼ ಅಂತ ಹೇಳಿಕೊಂಡಿದ್ದರು. ಆದರೆ ಗುರುವಾರ ಅವರು ನಿಧನರಾಗಿದ್ದಾರೆಂದು ಮಾಹಿತಿ ನೀಡಿದ್ದಾರೆ. ದುನಿಯಾ ವಿಜಯ್ ಅವರ ತಾಯಿ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ ನಡೆಯಲಿದೆ. ಆನೇಕಲ್ ನ ಕುಂಬಾರ ಹಳ್ಳಿಯಲ್ಲಿ ಅಂತಿಮ ವಿಧಿವಿಧಾನ ಮಾಡಲು ನಿರ್ಧಾರ ಮಾಡಿದ್ದಾಗಿ ಅವರು ತಿಳಿಸಿದ್ದಾರೆ

Categories
ಸಿನಿ ಸುದ್ದಿ

ಕನ್ನಡದ ಇಬ್ಬರು ನಟರ ಹುಟ್ಟು ಹಬ್ಬ; ಬರ್ತ್‌ ಡೇ ಗುಂಗಲ್ಲಿ ಶ್ರೀನಗರ ಕಿಟ್ಟಿ, ಧರ್ಮ ಕೀರ್ತಿರಾಜ್‌

ಕೊರೊನಾ- ಗ್ರಾಂಡ್‌ ಸೆಲೆಬ್ರೆಷನ್ಸ್‌ ಗೆ ಬ್ರೇಕ್‌
ಸಿಂಪಲ್‌ ಬರ್ತ್‌ ಡೇ ಆಚರಿಸಿಕೊಂಡ ನಟರು
ಬುದ್ಧಿವಂತ 2 ನಲ್ಲಿಬಣ್ಣ ಹಚ್ಚಿ
ಉಪೇಂದ್ರ ಎದುರು ನಿಂತ್ರ ಶ್ರೀನಗರ ಕಿಟ್ಟಿ
ನವಗ್ರಹ ಮೂಲಕ ಬಂದ ಧರ್ಮ
ಟಕಿಲಾ ಗುಂಗಲ್ಲಿ ರಂಜಿಸಲು ರೆಡಿ


ಇಂದು ಕನ್ನಡದ ಇಬ್ಬರು ನಟರ ಹುಟ್ಟು ಹಬ್ಬ. ಭರವಸೆಯ ಯುವ ನಟರಾದ ಧರ್ಮ ಕೀರ್ತಿರಾಜ್‌ ಜುಲೈ 7 ಹಾಗೂ ಶ್ರೀನಗರ ಕಿಟ್ಟಿ ಜುಲೈ 8 ಹುಟ್ಟು ಹಬ್ಬ. ಆದರೆ ಕೊರೋನಾ ಕಾರಣಕ್ಕೆ ಈ ಇಬ್ಬರು ನಟರ ಗ್ರಾಂಡ್‌ ಸೆಲೆಬ್ರೆಷನ್‌ ನಿಂದ ದೂರವೇ ಉಳಿದಿದ್ದಾರೆ. ಕಳೆದ ವರ್ಷದಂತೆಯೇ ಈ ವರ್ಷ ಕೂಡ ಸಿಂಪಲ್‌ ಸೆಲೆಬ್ರೆಷನ್‌ಗೆ ಆದ್ಯತೆ ಕೊಟ್ಟಿರುವುದು ವಿಶೇಷ.


ಸ್ಯಾಂಡಲ್‌ವುಡ್‌ ನಲ್ಲಿ ದುನಿಯಾ ಸೂರಿ ನಿರ್ದೇಶನದ ʼಇಂತಿ ನಿನ್ನ ಪ್ರೀತಿಯʼ ಹಾಗೂ ನಾಗಶೇಖರ್‌ ನಿರ್ದೇಶನದʼ ಸಂಜು ವೆಡ್ಸ್‌ ಗೀತಾʼ ಚಿತ್ರಗಳ ಮೂಲಕ ಮನೆ ಮಾತಾದ ನಟ ಶ್ರೀನಗರ ಕಿಟ್ಟಿ. ಸದ್ಯಕ್ಕೀಗ ಅವರು ಉಪೇಂದ್ರ ಅಭಿನಯದ ʼಬುದ್ದಿವಂತ ೨ʼ ಚಿತ್ರದಲ್ಲಿ ವಿಶೇಷ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಅದರಲ್ಲಿ ಕಿಟ್ಟಿ ಅವರದ್ದು ವಿಶೇಷವಾದ ಲುಕ್.‌ ಅದೇ ಕಾರಣಕ್ಕೆ ಸಾಕಷ್ಟು ಕುತೂಹಲ ಹುಟ್ಟಿಸಿದೆ ಈ ಚಿತ್ರದಲ್ಲಿನ ಕಿಟ್ಟಿ ಅವರ ಪಾತ್ರ.

ಕಿಟ್ಟಿ ಅವರ ಹುಟ್ಟುಹಬ್ಬಕ್ಕೆ ಬುದ್ದಿವಂತ 2 ಚಿತ್ರ ತಂಡ ಸ್ಪೆಷಲ್‌ ಗಿಫ್ಟ್‌ ಕೊಟ್ಟಿದೆ. ಬುದ್ಧಿವಂತ ೨ ಚಿತ್ರದಲ್ಲಿನ ಕಿಟ್ಟಿ ಅವರ ಪಾತ್ರದ ಒಂದು ಲುಕ್‌ ರಿವೀಲ್‌ ಮಾಡುವುದರ ಜತೆಗೆ ಹುಟ್ಟು ಹಬ್ಬಕ್ಕೆ ವಿಶ್‌ ಮಾಡಿದೆ. ಹಾಗೆಯೇ ಸೋಷಲ್‌ ಮೀಡಿಯಾದಲ್ಲಿ ಅಭಿಮಾನಿಗಳಿಂದ ನಟ ಕಿಟ್ಟಿ ಅವರಿಗೆ ಹುಟ್ಟು ಹಬ್ಬದ ಶುಭಾಶದ ಮಹಾಪೂರವೇ ಹರಿದು ಬಂದಿದೆ.


ಇನ್ನು ದರ್ಶನ್‌ ಅಭಿನಯದ ʼನವಗ್ರಹ ʼಚಿತ್ರದೊಂದಿಗೆ ಬೆಳ್ಳಿತೆರೆಗೆ ಎಂಟ್ರಿಯಾದವರು ನಟ ಧರ್ಮ್‌ ಕೀರ್ತಿರಾಜ್. ಹೆಸರಾಂತ ಖಳನಟ ಕಿರ್ತೀರಾಜ್‌ ಪುತ್ರ. ಆ ಹಿನ್ನೆಲೆಯಲ್ಲಿಯೇ ಚಿತ್ರರಂಗಕ್ಕೆ ಎಂಟ್ರಿಯಾದರೂ, ತಮ್ಮದೇ ಛಾಪು ಮೂಡಿಸಲು ಸಾಕಷ್ಟು ಶ್ರಮ ಪಡುತ್ತಿದ್ದಾರೆ. ʼನವಗ್ರಹʼ ಚಿತ್ರದ ನಂತರ ಸಾಕಷ್ಟು ಸಿನಿಮಾಗಳಲ್ಲಿ ನಾಯಕರಾಗಿ ಅಭಿನಯಿಸಿ, ಭರವಸೆಯ ನಟ ಎಂದು ಗುರುತಿಸಿಕೊಂಡವರು. ಸದ್ಯಕ್ಕೀಗ ʼಟಕೀಲಾʼ ಚಿತ್ರದಲ್ಲಿ ನಾಯಕರಾಗಿ ಅಭಿನಯಸಿದ್ದಾರೆ. ಚಿತ್ರ ತಂಡ ಅವರ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ವಿಶ್‌ ಮಾಡಿದೆ. ಅಭಿಮಾನಿಗಳು ಕೂಡ ಸೋಷಲ್‌ ಮೀಡಿಯಾದಲ್ಲಿ ನಟ ಧರ್ಮಕೀರ್ತಿರಾಜ್‌ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.

Categories
ಸಿನಿ ಸುದ್ದಿ

ಕೆಆರ್‌ಜಿ ಸ್ಟುಡಿಯೋಸ್‌ನ ಸಾಲು ಸಾಲು ಚಿತ್ರಗಳಲ್ಲಿ ಡಾಲಿ ಧನಂಜಯ್ ನಟನೆ ; ಈ ಸಂಸ್ಥೆಯ ರತ್ನನ ಪ್ರಪಂಚ ಸದ್ಯದಲ್ಲೇ ತೆರೆಗೆ

ನಟ “ಡಾಲಿ” ಧನಂಜಯ್‌ ಸದ್ಯ ಫುಲ್‌ ಬಿಝಿ. ಹೌದು, “ಟಗರು” ಮೂಲಕ “ಡಾಲಿ” ಅಂತಾನೇ ಗುರುತಿಸಿಕೊಂಡ ಧನಂಜಯ್‌ ಆ ಬಳಿಕ ಸಾಲು ಸಾಲು ಸಿನಿಮಾಗಳಿಗೆ ಹೀರೋ ಆಗಿಬಿಟ್ಟರು. ಅದರಲ್ಲೂ ಧನಂಜಯ್‌ ಅವರು ಕೆ.ಆರ್.ಜಿ ಸ್ಟುಡಿಯೋಸ್ ಜೊತೆ ಒಂದು ದೀರ್ಘಕಾಲಿಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಅನ್ನೋದು ವಿಶೇಷ. ಅವರಿಬ್ಬರೂ ಜೊತೆಗೂಡಿ ಹಲವಾರು ಚಿತ್ರಗಳನ್ನು ಸಾಲಾಗಿ ಮಾಡಲಿದ್ದಾರೆ ಎಂಬ ಸುದ್ದಿ ಜೋರಾಗಿದೆ.

ಒಟ್ಟಾರೆ, ಧನಂಜಯ್ ಅಭಿಮಾನಿಗಳಿಗೆ ಕೆ.ಆರ್.ಜಿ ಸ್ಟುಡಿಯೋ ಭರ್ಜರಿ ರಸದೌತಣ ನೀಡಲು ಸಿದ್ದವಾಗಿದೆ. ಸದ್ಯದಲ್ಲೇ ನೂತನ ಚಿತ್ರಗಳ ಶೀರ್ಷಿಕೆ ಹಾಗೂ ತಾಂತ್ರಿಕವರ್ಗದ ಮಾಹಿತಿ ಹೊರ ಬರುವ ನಿರೀಕ್ಷೆಯಿದೆ. ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ.ರಾಜ್ ನಿರ್ಮಾಣ ‌ಮಾಡಿರುವ, “ಡಾಲಿ” ಧನಂಜಯ ನಾಯಕನಾಗಿ ಅಭಿನಯಿಸಿರುವ “ರತ್ನನ ಪ್ರಪಂಚ” ಚಿತ್ರ ಸಹ ಸದ್ಯದಲ್ಲೇ ತೆರೆಗೆ ಬರಲಿದೆ.

ರೋಹಿತ್ ಪದಕಿ ನಿರ್ದೇಶಿಸಿರುವ ಈ ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಉತ್ತಮ ಮಾತುಗಳು ಕೇಳಿ ಬರುತ್ತಿದೆ. ಅಜನೀಶ್ ಲೋಕನಾಥ್ “ರತ್ನನ‌ ಪ್ರಪಂಚ”ಕ್ಕೆ ಸಂಗೀತ ನೀಡಿದ್ದಾರೆ. ಶ್ರೀಶ ಛಾಯಾಗ್ರಾಹಣವಿದೆ. ಡಾಲಿಗೆ ನಾಯಕಿಯಾಗಿ ರೆಬಾ ಜಾನ್ ಕಾಣಿಸಿಕೊಂಡಿದ್ದಾರೆ. ಉಮಾಶ್ರೀ, ಅನು ಪ್ರಭಾಕರ್ ಇತರರು ಚಿತ್ರದ ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಸಿಂಗಲ್ ಸ್ಕ್ರೀನ್‌ ಚಿತ್ರಮಂದಿರಗಳ ಆಸ್ತಿ ತೆರಿಗೆ ಮನ್ನಾ; ಟಾಕೀಸ್ ಮಾಲೀಕರಿಗೆ ಕೊನೆಗೂ ಸಿಕ್ತು ಒಂದಷ್ಟು ರಿಲ್ಯಾಕ್ಸ್


ರಾಜ್ಯದಲ್ಲಿರುವ 630ಕ್ಕೂ ಹೆಚ್ಚು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ಸಿಕ್ಕಿದೆ. ಈ ಕುರಿತು ವಾರ್ತಾ ಇಲಾಖೆ ಬುಧವಾರ ಆದೇಶ ಹೊರಡಿಸಿದೆ. ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದ ಮನವಿ ಮೇರೆಗೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಕಳೆದ ವರ್ಷದಿಂದಲೂ ಚಿತ್ರಮಂದಿರಗಳು ಬಹುತೇಕ ಬಂದ್ ಆಗಿದ್ದವು.

ರಾಜ್ಯದಲ್ಲಿ 14 ತಿಂಗಳಿನಿಂದ ಬಹುತೇಕ ಚಿತ್ರಮಂದಿರಗಳ ಬಾಗಿಲು ತೆರೆದಿಲ್ಲ. ಆದರೆ ಆಸ್ತಿ ತೆರಿಗೆ, ವಿದ್ಯುತ್ ಶುಲ್ಕ ಇನ್ನಿತರೆ ಶುಲ್ಕಗಳನ್ನು ಪಾವತಿಸಲೇ ಬೇಕಿತ್ತು. ಈ ಹಿನ್ನೆಲೆಯಲ್ಲಿ ಕಂಗಲಾಗಿದ್ದ ಚಿತ್ರ ಮಂದಿರ ಮಾಲೀಕರಿಗೆ ಈಗ ಒಂದಷ್ಟು ರಿಲ್ಯಾಕ್ಸ್ ಸಿಕ್ಕಿದೆ.

ಸಂಕಷ್ಟದಲ್ಲಿರುವ ಚಿತ್ರಮಂದಿರಗಳಿಗೆ ಆಸ್ತಿ ತೆರಿಗೆ, ವಿದ್ಯುತ್ ಶುಲ್ಕ ಪಾವತಿ ರದ್ದು ಮಾಡಬೇಕು ಎಂದು ರ್ನಾಟಕ ಚಿತ್ರ ಪ್ರದರ್ಶಕರ ಸಂಘ, ಏಕ ಪರದೆ (ಸಿಂಗಲ್ ಸ್ಕ್ರೀನ್) ಚಿತ್ರಮಂದಿರಗಳಿಗೆ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತ್ತು. ಅದಕ್ಕೆ ಸರ್ಕಾರ ಸ್ಪಂದಿಸಿದೆ. ಏಕ ಪರದೆಯ ಚಿತ್ರಮಂದಿರಗಳ ಪ್ರಸಕ್ತ ವರ್ಷದ ಆಸ್ತಿ ತೆರಿಗೆಯನ್ನು ಮನ್ನಾ ಮಾಡಿದೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 9 ಕೋಟಿ ಹೊರೆಯಾಗಲಿದೆ ಎಂದು ವಾರ್ತಾ ಇಲಾಖೆ ಆದೇಶದಲ್ಲಿ ತಿಳಿಸಿದೆ.

Categories
ಸಿನಿ ಸುದ್ದಿ

ನಿರ್ದೇಶಕ ಕಮ್ ನಿರ್ಮಾಪಕ ದಯಾಳ್ ಪದ್ಮನಾಭನ್ ಕೂಡ ಜಾತಿ ಅವಮಾನ ಅನುಭವಿಸಿದ್ರಾ?

ನನ್ನ ಜಾತಿ ಹಾಗೂ ಭಾಷೆ ನಿಮಗೆ ಸಮಸ್ಯೆ ಎನಿಸಿತು ಹಾಗಾಗಿ ನನಗೆ ಎಫ್‌ಯುಸಿ ಪ್ರವೇಶ ನಿರಾಕರಿಸಿದ್ರಿ..….
ಇದು ನಿರ್ದೇಶಕ ದಯಾಳ್‌ ಪದ್ಮನಾಭನ್‌ ಅವರ ನೋವಿನ ನುಡಿ. ಅಂದ ಹಾಗೆ, ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್‌ ಕುಮಾರ್‌ ನೇತೃತ್ವದಲ್ಲಿ ಈ ಹಿಂದೆ ಶುರುವಾದ ಎಫ್‌ಯುಸಿ ಗೆ ನಿರ್ದೇಶಕರಾದ ತಾವು ಸೇರ ಬಯಸಿದಾಗ ನಿರಾಕರಿಸಿದ್ದರ ಹಿಂದಿನ ಕಾರಣವನ್ನು ದಯಾಳ್‌ ಈಗ ಬಿಚ್ಚಿಟ್ಟಿದ್ದಾರೆ. ನಿರ್ದೇಶಕರಾದ ಪವನ್‌ ಕುಮಾರ್‌ ಹಾಗೂ ದಯಾಳ್‌ ಪದ್ಮಾನಾಭನ್‌ ನಡುವೆ ಅದ್ಯಾಕೆ ಈಗ ಚರ್ಚೆಗೆ ಬಂದಿದೆಯೋ ಗೊತ್ತಿಲ್ಲ. ಆದರೆ ಪವನ್‌ ಕುಮಾರ್‌ ನೇತೃತ್ವದ ಎಫ್‌ಯುಸಿ ಗೆ ತಮ್ಮನ್ನು ನಿರಾಕರಿಸಿದ್ದರ ಹಿಂದಿನ ಕಾರಣ ಏನು ಅಂತ ಈಗ ಸೋಷಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಅದನ್ನು ಪವನ್‌ ಕುಮಾರ್‌ ಅವರಿಗೆ ಉತ್ತರ ರೂಪದಲ್ಲಿ ಬಿಚ್ಚಿಟ್ಟಿದ್ದಾರೆ.

ʼ ನನ್ನ ಜಾತಿ ಹಾಗೂ ಭಾಷೆ ನಿಮಗೆ ಸಮಸ್ಯೆ ಎನಿಸಿತು ಹಾಗಾಗಿ ನನಗೆ ಎಫ್‌ಯುಸಿ ಪ್ರವೇಶ ನಿರಾಕರಿಸಿದಿರ ನನ್ನ, ಹೋರಾಡುವ ಛಾತಿ, ಎತ್ತರಕ್ಕೆ ಬೆಳೆಯುವ ಹಂಬಲ, ನೇರ, ನಿಷ್ಠುರ ಮಾತು, ನನ್ನ ಸ್ವತಂತ್ರ ಚಿಂತನೆಗಳು ಸಹ ನಿಮಗೆ ಸಹಿಸಲಾಗದೆ ನನ್ನನ್ನು ಹೊರಗಿಟ್ಟಿರಿ” ಎಂದಿದ್ದಾರೆ. ”ಎಫ್‌ಯುಸಿಯ ಆಹ್ವಾನವನ್ನು ನೀವೇ ನನಗೆ ಕಳಿಸಿದಿರಿ. ಈಗ ಅದನ್ನು ‘ಪ್ರೊಪೋಸಲ್’ ಎಂದು ನೀವು ಕರೆಯುತ್ತಿದ್ದೀರಿ. ನಾನಾಗಿಯೇ ಬಂದು ನನ್ನನ್ನು ತಂಡದಲ್ಲಿ ಸೇರಿಸಿಕೊಳ್ಳಿ ಎಂದು ಕೇಳಿರಲಿಲ್ಲ.

https://m.facebook.com/story.php?story_fbid=10159268455612158&id=597452157

ಇದಕ್ಕಿಂತಲೂ ಉತ್ತಮವಾದ ಕೆಲಸಗಳು ನನ್ನ ಬಳಿ ಇದ್ದವು” ಎಂದು ಪವನ್‌ಗೆ ಉತ್ತರಿಸಿದ್ದಾರೆ ದಯಾಳ್.ಸದ್ಯಕ್ಕೆ ಇದು ಹವನ್‌ ಅವರಿಗೆ ನೀಡಿದ ಉತ್ತರ ಆಗಿರಬಹುದು, ಆದರೆ ಈಗ ಚಿತ್ರರಂಗದಲ್ಲಿ ಜಾತಿ ವಿಚಾರ ತೀವ್ರ ಚರ್ಚೆಯಲ್ಲಿದೆ. ಅದೇ ಹೊತ್ತಿಗೆ ದಯಾಳ್‌ ಅವರ ಹೇಳಿಕೆ ಕೂಡ ತೀವ್ರ ಗಮನ ಸೆಳೆದಿದಿದೆ.

ಕನ್ನಡ ಚಿತ್ರರಂಗದಲ್ಲಿ ಜಾತಿ ಇದೆ ಇಲ್ಲವೋ ಗೊತ್ತಿಲ್ಲ, ಆದರೆ ಈಗ ಚಿತ್ರರಂಗದಲ್ಲಿ ಜಾತಿ ವಿಚಾರ ಮನ್ನೆಲೆಗೆ ಬಂದಿದೆ ಎನ್ನುವುದಕ್ಕೆ ಇತ್ತೀಚಿನ ಕೆಲವು ವಿವಾದಗಳು ಸಾಕ್ಷಿ. ಯಾವುದೋ ಚರ್ಚೆಯ ವಿಚಾರದಲ್ಲಿ ನಟ ಉಪೇಂದ್ರ ಅವರು, ಮಹಾ ನಾಯಕ ಅಂಬೇಡ್ಕರ್‌ ಹೇಳಿಕೆಯೊಂದನ್ನು ಇನ್ನಾರೋ ಹೇಳಿದ್ದು ಅಂತ ಹೇಳಿದ್ದೆ ಸಿನಿಮಾದೊಳಗಡೆಯೂ ಜಾತಿ ಚರ್ಚೆ ಹುಟ್ಟು ಹಾಕಿದ್ದು ನಿಮಗೂ ಗೊತ್ತು. ಉಪೇಂದ್ರ ಅವರ ಮಾತಿಗೆ ಆ ದಿನಗಳು ಖ್ಯಾತಿಯ ನಟ ಚೇತನ್‌ ನೀಡಿದ ಪ್ರತಿಕ್ರಿಯೆ ದೊಡ್ಡ ವಿವಾದ ಹುಟ್ಟು ಹಾಕಿತು. ಮುಂದೆ ಯುವ ನಟ ಕಿರಣ್‌ ಶ್ರೀನಿವಾಸ್‌ ಕೂಡ ಚಿತ್ರರಂಗದೊಳಗಡೆಯ ಜಾತಿ ಕುರಿತು ಮಾತನಾಡಿದರು. ಕೊನೆಗೆ ನಟ ಸಂಚಾರಿ ನಿಧನದ ನಂತರ ಅವರ ಜಾತಿಯ ಅವಮಾನದ ಕುರಿತು ನಟ ಸತೀಶ್‌ ನೀನಾಸಂ ಆಡಿದ ಮಾತು ಕೂಡ ಸಂಚಲನ ಸೃಷ್ಟಿಸಿತು. ಈಗ ನಿರ್ದೇಶಕ ದಯಾಳ್‌ ಪದ್ಮನಾಭನ್‌ ಕೂಡ ಜಾತಿ ಅವಮಾನ ಕುರಿತು ಮಾತನಾಡಿದ್ದಾರೆ.

ಎಫ್‌ಯುಸಿಯ ಆಹ್ವಾನವನ್ನು ನೀವೇ ನನಗೆ ಕಳಿಸಿದಿರಿ. ಈಗ ಅದನ್ನು ‘ಪ್ರೊಪೋಸಲ್’ ಎಂದು ನೀವು ಕರೆಯುತ್ತಿದ್ದೀರಿ. ನಾನಾಗಿಯೇ ಬಂದು ನನ್ನನ್ನು ತಂಡದಲ್ಲಿ ಸೇರಿಸಿಕೊಳ್ಳಿ ಎಂದು ಕೇಳಿರಲಿಲ್ಲ. ಇದಕ್ಕಿಂತಲೂ ಉತ್ತಮವಾದ ಕೆಲಸಗಳು ನನ್ನ ಬಳಿ ಇದ್ದವು” ಎಂದು ಪವನ್‌ಗೆ ಉತ್ತರಿಸಿದ್ದಾರೆ ದಯಾಳ್. ”ನನಗೆ ಅವಮಾನ ಮಾಡಿದ್ದಕ್ಕೆ ನೀವು ಮತ್ತು ನಿಮ್ಮ ಎಫ್‌ಯುಸಿ ಸದಸ್ಯರು ತಕ್ಕ ಶಾಸ್ತಿ ಅನುಭವಿಸಿಯೇ ತೀರುತ್ತೀರ. ನಿಮಗೆ ಹಾಗೂ ನಿಮ್ಮ ತಂಡದ ಸದಸ್ಯರಿಗೆ ಸಮಯವೇ ಸೂಕ್ತ ಪಾಠ ಕಲಿಸಲಿದೆ. ಯಾವುದು ಸಹ ನನ್ನನ್ನು ಬದಲಾವಣೆ ಮಾಡಲಾರದು. ಏನಾದರೂ ಎದುರು ಬರಲಿ, ನಾನು ಕೊನೆಯವರೆಗೆ ಕನ್ನಡ ಸಿನಿಮಾ ನಿರ್ದೇಶಕನಾಗಿ ಇರುತ್ತೇನೆ” ಎಂದಿದ್ದಾರೆ ದಯಾಳ್.

Categories
ಸಿನಿ ಸುದ್ದಿ

ದಯವಿಟ್ಟು ಬೇಸರ ಪಟ್ಟುಕೊಳ್ಳಬೇಡಿ- ಅಭಿಮಾನಿ ದೇವರಿಗೆ ಸೆಂಚುರಿ ಸ್ಟಾರ್‌ ಮನವಿ ಮಾಡಿಕೊಂಡಿದ್ದು ಯಾಕೆ ?

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ತಮ್ಮ ಅಭಿಮಾನಿ ದೇವರುಗಳಿಗೆ ವಿಶೇಷ ಸಂದೇಶ ರವಾನಿಸಿದ್ದಾರೆ. ಸಂಕಷ್ಟದ ಸಮಯದಲ್ಲಿ ಸಂಭ್ರಮಾಚರಣೆ ಬೇಡವೆಂದು ನಿರ್ಧರಿಸಿರುವ ಶಿವಣ್ಣ ತಮ್ಮ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ್ದಾರೆ. ತಮ್ಮ ಬರ್ತ್ಡೇ ಸೆಲಬ್ರೇಷನ್‌ಗಿಂತ ನಿಮ್ಮೆಲ್ಲರ ಆರೋಗ್ಯ ಮುಖ್ಯವೆಂದು ತೀರ್ಮಾನಿಸಿರುವ ಶಿವಣ್ಣ ವಿಡಿಯೋ ಮೂಲಕ ದೊಡ್ಮನೆ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

“ಹುಟ್ಟುಹಬ್ಬಕ್ಕಿಂತ ನಿಮ್ಮೆಲ್ಲರ ಆರೋಗ್ಯ ತುಂಬಾ ಮುಖ್ಯ. ದೇವರ ದಯೆಯಿಂದ ಕೊರೊನಾ ಕಮ್ಮಿ ಆಗಿದೆ. ಹಾಗಂತ ಎಚ್ಚರಿಕೆಯಿಂದ ಇರುವ ಸಮಯ ಮುಗಿದಿಲ್ಲ. ಮುಂದೆ ಇನ್ನೂ ಎಚ್ಚರಿಕೆಯಿಂದ ಇರಬೇಕು. ಜುಲೈ 12 ನನ್ನ ಹುಟ್ಟಿದ ದಿನ ಎಲ್ಲರಿಗೂ ಗೊತ್ತಿದೆ. ಕೆಲವು ಕಾರಣಗಳಿಂದ ನಾನು ಬೆಂಗಳೂರಿನಲ್ಲಿ ಇರಲ್ಲ. ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ನಿಮಗೆ ಎಷ್ಟು ಬೇಸರ ಆಗುತ್ತಿದೆಯೋ ನನಗೂ ಅಷ್ಟೇ ಆಗುತ್ತಿದೆ. ನಿಮ್ಮ ವಿಶ್‌ಗಳನ್ನ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿ. ನಿಮ್ಮ ಪ್ರೀತಿ, ವಿಶ್ವಾಸ ಪ್ರೋತ್ಸಾಹ ಯಾವಾಗಲೂ ಇರಬೇಕು. ದಯವಿಟ್ಟು ಕೊರೊನಾ ನಿಯಮ ಫಾಲೋ ಮಾಡಿ ಮಾಸ್ಕ್ ಹಾಕಿಕೊಳ್ಳಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಲ್ಲರೂ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಿ ದಯವಿಟ್ಟು ಯಾರು ಬೇಜಾರ್ ಮಾಡಿಕೊಳ್ಳಬೇಡಿ. ಆದಷ್ಟು ಬೇಗ ಕೊರೊನಾ ದೂರವಾಗಿ ಎಲ್ಲರೂ ಒಟ್ಟಾಗಿ ಸೇರುವ ದಿನ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳೋಣ. ಮನೆಯಲ್ಲೇ ಇರಿ ಎಲ್ಲರೂ ಸೇಫ್ ಆಗಿರಿ ಎಲ್ಲರನ್ನೂ ಸೇಫಾಗಿಡಿ ಹೀಗಂತ ಶಿವಣ್ಣ ಅಭಿಮಾನಿ ದೇವರುಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಆರಾಧ್ಯದೈವನ ಮನವಿಯಂತೆ ನಡೆದುಕೊಳ್ಳೋಕೆ ದೊಡ್ಮನೆ ಭಕ್ತರು ನಿರ್ಧರಿಸಿದ್ದಾರೆ. ಕಾಮನ್ ಡಿಪಿ ಜೊತೆಗೆ ಶಿವಣ್ಣನ ಅಪ್‌ಕಮ್ಮಿಂಗ್ ಸಿನಿಮಾಗಳ ಪೋಸ್ಟರ್ ಹಾಗೂ ಟೀಸರ್‌ಗಳನ್ನ ಸೋಷಿಯಲ್ ಲೋಕದಲ್ಲಿ ಹಂಚಿಕೊಳ್ಳುವ ಮೂಲಕ ಬ್ರ್ಯಾಂಡ್ ಮಾಡಲಿಕ್ಕೆ ಅಭಿಮಾನಿಗಳು ಸಜ್ಜಾಗಿದ್ದಾರೆ. ಅಭಿನಯ ಚಕ್ರವರ್ತಿಯ ಹುಟ್ಟುಹಬ್ಬದಂದು ಪೋಸ್ಟರ್‌ ಹಾಗೂ ಟೀಸರ್ ಜೊತೆ ಹೊಸ ಸಿನಿಮಾಗಳು ಅನೌನ್ಸ್ ಆಗುವ ನಿರೀಕ್ಷೆಯಿದೆ. ಭಜರಂಗಿ 2 ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು123 ನೇ ಸಿನಿಮಾದಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ. ಅಂದ್ಹಾಗೇ ಈ ಚಿತ್ರಕ್ಕೆ ವಿಜಯ್ ಮಿಲ್ಟನ್ ನಿರ್ದೇಶನವಿದ್ದು,ಶಿವಪ್ಪ ಅಂತ ಟೈಟಲ್ ಫಿಕ್ಸ್ ಮಾಡಲಾಗಿತ್ತು, ಆದರೆ, ಶಿವಪ್ಪ ಟೈಟಲ್ ಮ್ಯಾಚ್ ಆಗ್ತಿಲ್ಲ ಎನ್ನುವ ಕಾರಣಕ್ಕೆ ಚೇಂಜ್ ಮಾಡ್ತಿದ್ದಾರೆ. ಬರ್ತ್ಡೇ ದಿನ ಹೊಸ ಟೈಟಲ್ ಅನಾವರಣಗೊಳ್ಳಲಿದೆ

Categories
ಸಿನಿ ಸುದ್ದಿ

ಡ್ಯಾನ್ಸರ್ಸ್ ಕಷ್ಟಕ್ಕೆ ಮಿಡಿಯಿತು ನಿಖಿಲ್ ಮನ !

ಸ್ಯಾಂಡಲ್ ವುಡ್‌ ನ ಯುವರಾಜ ನಿಖಿಲ್ ಕುಮಾರ್ ರೀಲ್ ನಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಹೀರೋ ಅನ್ನೋದನ್ನ ಪ್ರೂ ಮಾಡಿದ್ದಾರೆ. ಈಗ ಮತ್ತೊಬ್ಬ ರಿಯಲ್ ಹೀರೋ ಅಂತ ಸಾಬೀತುಪಡಿಸಿದ್ದಾರೆ.

ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಬೆಂಗಳೂರಿನ ಡಾನ್ಸರ್ಸ್ ಅಸೋಸಿಯೇಷನ್ ಸದಸ್ಯರಿಗೆ ಫುಡ್ ಕಿಡ್ ವಿತರಣೆ ಮಾಡಿದ್ದಾರೆ.
ಡಾನ್ಸ್ ಮಾಸ್ಟರ್ ಭೂಷಣ್ ಜೊತೆ ಸೇರಿ ಆಹಾರ ಕಿಟ್ ವಿತರಿಸಿದ್ದಾರೆ. ಇನ್ನು ರಾಮನಗರದಲ್ಲಿ ಅಂಗನವಾಡಿ ಸಿಬ್ಬಂದಿ, ದಾದಿಯರು ಹಾಗೂ ಕೊರೋನಾ ವಾರಿಯರ್ಸ್‌ ಗೂ ನಟ ನಿಖಿಲ್ ಕುಮಾರ್‌ , ಫುಡ್‌ ಕಿಟ್‌ ವಿತರಣೆ ಮಾಡಿದ್ದರು.

Categories
ಸಿನಿ ಸುದ್ದಿ

ಅದ್ಧೂರಿ ಕಾಂಬಿನೇಷನ್‌ಗೆ ಬಿಗ್ ಸ್ಕ್ರೀನ್ ಹೊಡೀತು ಕೇಕೆ!

ಅದ್ದೂರಿ ಜೋಡಿ ಮತ್ತೆ ಒಂದಾಗಬೇಕು ಅನ್ನೋದು ಆಕ್ಷನ್ ಪ್ರಿನ್ಸ್ ಅಭಿಮಾನಿಗಳ ಬಹುದೊಡ್ಡ ಕನಸು. ಆ ಮಹಾಕನಸು ಕೊನೆಗೂ ಈಡೇರಿದೆ. ಧ್ರುವ ಹಾಗೂ ಎ.ಪಿ ಅರ್ಜುನ್ ಮತ್ತೆ ಒಂದಾಗಿದ್ದಾರೆ. ಒಂಭತ್ತು ವರ್ಷಗಳ ನಂತರ ಇಬ್ಬರು ಕೈ‌ ಜೋಡಿಸಿದ್ದಾರೆ. ಅಭಿಮಾನಿ ದೇವರುಗಳ ಕನಸನ್ನ ಈಡೇರಿಸಿದ್ದಾರೆ.


ಅದ್ದೂರಿ ಧ್ರುವ ಡೆಬ್ಯೂ ಚಿತ್ರ. ನಾಯಕ ನಟನಾಗಿ ಬೆಳ್ಳಿ ಭೂಮಿ ಮೇಲೆ ಮೆರವಣಿಗೆ ಹೊರಟ ಮೊದಲ ಸಿನಿಮಾ. ಚೊಚ್ಚಲ ಚಿತ್ರದಲ್ಲೇ ಭರವಸೆ ಮೂಡಿಸಿ ನಾಯಕನಟನ ಪಟ್ಟಕ್ಕೇರಿದ, ಸ್ಟಾರ್ ಸಿನಿಮಾಗಳಿಗೆ ಸೆಡ್ಡು ಹೊಡೆದು ಬೆಳ್ಳಿ ತೆರೆಮೇಲೆ ಗುಡುಗಿ ಸ್ಟಾರ್ ನಟ ಎನಿಸಿಕೊಳ್ಳೋಕೆ ಸಾಧ್ಯವಾಗಿಸಿದ ಮೊದಲ ಸಿನಿಮಾ.

ಇಂತಹ ಅದ್ಬುತ ಚಿತ್ರದ ಸಾರಥಿ ಎ. ಪಿ ಅರ್ಜುನ್. ಧ್ರುವ- ಅರ್ಜುನ್ ಕಾಂಬೋ ಮತ್ತೆ ಒಂದಾಗಿದೆ ಅಂದರೆ ನಿರೀಕ್ಷೆಗಳು ಗರಿಗೆದರುತ್ತವೆ.

ಅಭಿಮಾನಿ ವಲಯದಲ್ಲಿ ಮಾತ್ರವಲ್ಲ ಗಾಂಧಿ ನಗರದ ಮಂದಿ‌ ಕೂಡ ಇವರಿಬ್ಬರ ಜುಗಲ್ ಬಂಧಿಯ ಮೇಲೆ‌ ಕೂತೂಹಲ ಕೆರಳಿರುತ್ತೆ. ಬೆಳ್ಳಿತೆರೆ ಮಾತ್ರವಲ್ಲ ಬಾಕ್ಸ್ ಆಫೀಸ್ ಕೂಡ ಇವರಿಬ್ಬರು ಜೊತೆಯಾಗಿರುವ ಸುದ್ದಿಕೇಳಿ ಥ್ರಿಲ್ಲಾಗಿರುತ್ತೆ. ಆಕ್ಷನ್ ಪ್ರಿನ್ಸ್ ದುಬಾರಿಯಾಗೋದಕ್ಕೆ ಹೊರಟ್ದಿದ್ದರು. “ಪೊಗರು” ಡೈರೆಕ್ಟರ್ ಜೊತೆ ಮತ್ತೆ ಖದರ್ ತೋರಿಸುವುದಕ್ಕೆ ಹೊರಟಿದ್ದರು.

ಈ ನಡುವೆ ದುಬಾರಿಗೆ ಬ್ರೇಕ್ ಹಾಕಿ ಅದ್ದೂರಿ ಸಾರಥಿಯ ಜೊತೆ ಹೊರಟಿದ್ದಾರೆ. ಅಂದ್ಹಾಗೇ ಮತ್ತೆ ಒಂದಾಗಿರೋ ಅದ್ದೂರಿ ಜೋಡಿಗೆ ಉದಯ್ ಕೆ‌ ಮೆಹ್ತಾ ಬಂಡವಾಳ‌ ಹೂಡುತ್ತಿದ್ದಾರೆ. ಇವತ್ತು ಸಿನಿಮಾದ ಮುಹೂರ್ತ ನೆರವೇರಿದೆ. ಚಿತ್ರದ ನಾಯಕಿ ಸೇರಿದಂತೆ ಉಳಿದ ಪಾತ್ರವರ್ಗ, ಚಿತ್ರದ ತಂತ್ರಜ್ಞರ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

error: Content is protected !!