ಕನ್ನಡದ ಇಬ್ಬರು ನಟರ ಹುಟ್ಟು ಹಬ್ಬ; ಬರ್ತ್‌ ಡೇ ಗುಂಗಲ್ಲಿ ಶ್ರೀನಗರ ಕಿಟ್ಟಿ, ಧರ್ಮ ಕೀರ್ತಿರಾಜ್‌

ಕೊರೊನಾ- ಗ್ರಾಂಡ್‌ ಸೆಲೆಬ್ರೆಷನ್ಸ್‌ ಗೆ ಬ್ರೇಕ್‌
ಸಿಂಪಲ್‌ ಬರ್ತ್‌ ಡೇ ಆಚರಿಸಿಕೊಂಡ ನಟರು
ಬುದ್ಧಿವಂತ 2 ನಲ್ಲಿಬಣ್ಣ ಹಚ್ಚಿ
ಉಪೇಂದ್ರ ಎದುರು ನಿಂತ್ರ ಶ್ರೀನಗರ ಕಿಟ್ಟಿ
ನವಗ್ರಹ ಮೂಲಕ ಬಂದ ಧರ್ಮ
ಟಕಿಲಾ ಗುಂಗಲ್ಲಿ ರಂಜಿಸಲು ರೆಡಿ


ಇಂದು ಕನ್ನಡದ ಇಬ್ಬರು ನಟರ ಹುಟ್ಟು ಹಬ್ಬ. ಭರವಸೆಯ ಯುವ ನಟರಾದ ಧರ್ಮ ಕೀರ್ತಿರಾಜ್‌ ಜುಲೈ 7 ಹಾಗೂ ಶ್ರೀನಗರ ಕಿಟ್ಟಿ ಜುಲೈ 8 ಹುಟ್ಟು ಹಬ್ಬ. ಆದರೆ ಕೊರೋನಾ ಕಾರಣಕ್ಕೆ ಈ ಇಬ್ಬರು ನಟರ ಗ್ರಾಂಡ್‌ ಸೆಲೆಬ್ರೆಷನ್‌ ನಿಂದ ದೂರವೇ ಉಳಿದಿದ್ದಾರೆ. ಕಳೆದ ವರ್ಷದಂತೆಯೇ ಈ ವರ್ಷ ಕೂಡ ಸಿಂಪಲ್‌ ಸೆಲೆಬ್ರೆಷನ್‌ಗೆ ಆದ್ಯತೆ ಕೊಟ್ಟಿರುವುದು ವಿಶೇಷ.


ಸ್ಯಾಂಡಲ್‌ವುಡ್‌ ನಲ್ಲಿ ದುನಿಯಾ ಸೂರಿ ನಿರ್ದೇಶನದ ʼಇಂತಿ ನಿನ್ನ ಪ್ರೀತಿಯʼ ಹಾಗೂ ನಾಗಶೇಖರ್‌ ನಿರ್ದೇಶನದʼ ಸಂಜು ವೆಡ್ಸ್‌ ಗೀತಾʼ ಚಿತ್ರಗಳ ಮೂಲಕ ಮನೆ ಮಾತಾದ ನಟ ಶ್ರೀನಗರ ಕಿಟ್ಟಿ. ಸದ್ಯಕ್ಕೀಗ ಅವರು ಉಪೇಂದ್ರ ಅಭಿನಯದ ʼಬುದ್ದಿವಂತ ೨ʼ ಚಿತ್ರದಲ್ಲಿ ವಿಶೇಷ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಅದರಲ್ಲಿ ಕಿಟ್ಟಿ ಅವರದ್ದು ವಿಶೇಷವಾದ ಲುಕ್.‌ ಅದೇ ಕಾರಣಕ್ಕೆ ಸಾಕಷ್ಟು ಕುತೂಹಲ ಹುಟ್ಟಿಸಿದೆ ಈ ಚಿತ್ರದಲ್ಲಿನ ಕಿಟ್ಟಿ ಅವರ ಪಾತ್ರ.

ಕಿಟ್ಟಿ ಅವರ ಹುಟ್ಟುಹಬ್ಬಕ್ಕೆ ಬುದ್ದಿವಂತ 2 ಚಿತ್ರ ತಂಡ ಸ್ಪೆಷಲ್‌ ಗಿಫ್ಟ್‌ ಕೊಟ್ಟಿದೆ. ಬುದ್ಧಿವಂತ ೨ ಚಿತ್ರದಲ್ಲಿನ ಕಿಟ್ಟಿ ಅವರ ಪಾತ್ರದ ಒಂದು ಲುಕ್‌ ರಿವೀಲ್‌ ಮಾಡುವುದರ ಜತೆಗೆ ಹುಟ್ಟು ಹಬ್ಬಕ್ಕೆ ವಿಶ್‌ ಮಾಡಿದೆ. ಹಾಗೆಯೇ ಸೋಷಲ್‌ ಮೀಡಿಯಾದಲ್ಲಿ ಅಭಿಮಾನಿಗಳಿಂದ ನಟ ಕಿಟ್ಟಿ ಅವರಿಗೆ ಹುಟ್ಟು ಹಬ್ಬದ ಶುಭಾಶದ ಮಹಾಪೂರವೇ ಹರಿದು ಬಂದಿದೆ.


ಇನ್ನು ದರ್ಶನ್‌ ಅಭಿನಯದ ʼನವಗ್ರಹ ʼಚಿತ್ರದೊಂದಿಗೆ ಬೆಳ್ಳಿತೆರೆಗೆ ಎಂಟ್ರಿಯಾದವರು ನಟ ಧರ್ಮ್‌ ಕೀರ್ತಿರಾಜ್. ಹೆಸರಾಂತ ಖಳನಟ ಕಿರ್ತೀರಾಜ್‌ ಪುತ್ರ. ಆ ಹಿನ್ನೆಲೆಯಲ್ಲಿಯೇ ಚಿತ್ರರಂಗಕ್ಕೆ ಎಂಟ್ರಿಯಾದರೂ, ತಮ್ಮದೇ ಛಾಪು ಮೂಡಿಸಲು ಸಾಕಷ್ಟು ಶ್ರಮ ಪಡುತ್ತಿದ್ದಾರೆ. ʼನವಗ್ರಹʼ ಚಿತ್ರದ ನಂತರ ಸಾಕಷ್ಟು ಸಿನಿಮಾಗಳಲ್ಲಿ ನಾಯಕರಾಗಿ ಅಭಿನಯಿಸಿ, ಭರವಸೆಯ ನಟ ಎಂದು ಗುರುತಿಸಿಕೊಂಡವರು. ಸದ್ಯಕ್ಕೀಗ ʼಟಕೀಲಾʼ ಚಿತ್ರದಲ್ಲಿ ನಾಯಕರಾಗಿ ಅಭಿನಯಸಿದ್ದಾರೆ. ಚಿತ್ರ ತಂಡ ಅವರ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ವಿಶ್‌ ಮಾಡಿದೆ. ಅಭಿಮಾನಿಗಳು ಕೂಡ ಸೋಷಲ್‌ ಮೀಡಿಯಾದಲ್ಲಿ ನಟ ಧರ್ಮಕೀರ್ತಿರಾಜ್‌ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.

Related Posts

error: Content is protected !!