ನಟ “ಡಾಲಿ” ಧನಂಜಯ್ ಸದ್ಯ ಫುಲ್ ಬಿಝಿ. ಹೌದು, “ಟಗರು” ಮೂಲಕ “ಡಾಲಿ” ಅಂತಾನೇ ಗುರುತಿಸಿಕೊಂಡ ಧನಂಜಯ್ ಆ ಬಳಿಕ ಸಾಲು ಸಾಲು ಸಿನಿಮಾಗಳಿಗೆ ಹೀರೋ ಆಗಿಬಿಟ್ಟರು. ಅದರಲ್ಲೂ ಧನಂಜಯ್ ಅವರು ಕೆ.ಆರ್.ಜಿ ಸ್ಟುಡಿಯೋಸ್ ಜೊತೆ ಒಂದು ದೀರ್ಘಕಾಲಿಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಅನ್ನೋದು ವಿಶೇಷ. ಅವರಿಬ್ಬರೂ ಜೊತೆಗೂಡಿ ಹಲವಾರು ಚಿತ್ರಗಳನ್ನು ಸಾಲಾಗಿ ಮಾಡಲಿದ್ದಾರೆ ಎಂಬ ಸುದ್ದಿ ಜೋರಾಗಿದೆ.
ಒಟ್ಟಾರೆ, ಧನಂಜಯ್ ಅಭಿಮಾನಿಗಳಿಗೆ ಕೆ.ಆರ್.ಜಿ ಸ್ಟುಡಿಯೋ ಭರ್ಜರಿ ರಸದೌತಣ ನೀಡಲು ಸಿದ್ದವಾಗಿದೆ. ಸದ್ಯದಲ್ಲೇ ನೂತನ ಚಿತ್ರಗಳ ಶೀರ್ಷಿಕೆ ಹಾಗೂ ತಾಂತ್ರಿಕವರ್ಗದ ಮಾಹಿತಿ ಹೊರ ಬರುವ ನಿರೀಕ್ಷೆಯಿದೆ. ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ.ರಾಜ್ ನಿರ್ಮಾಣ ಮಾಡಿರುವ, “ಡಾಲಿ” ಧನಂಜಯ ನಾಯಕನಾಗಿ ಅಭಿನಯಿಸಿರುವ “ರತ್ನನ ಪ್ರಪಂಚ” ಚಿತ್ರ ಸಹ ಸದ್ಯದಲ್ಲೇ ತೆರೆಗೆ ಬರಲಿದೆ.
ರೋಹಿತ್ ಪದಕಿ ನಿರ್ದೇಶಿಸಿರುವ ಈ ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಉತ್ತಮ ಮಾತುಗಳು ಕೇಳಿ ಬರುತ್ತಿದೆ. ಅಜನೀಶ್ ಲೋಕನಾಥ್ “ರತ್ನನ ಪ್ರಪಂಚ”ಕ್ಕೆ ಸಂಗೀತ ನೀಡಿದ್ದಾರೆ. ಶ್ರೀಶ ಛಾಯಾಗ್ರಾಹಣವಿದೆ. ಡಾಲಿಗೆ ನಾಯಕಿಯಾಗಿ ರೆಬಾ ಜಾನ್ ಕಾಣಿಸಿಕೊಂಡಿದ್ದಾರೆ. ಉಮಾಶ್ರೀ, ಅನು ಪ್ರಭಾಕರ್ ಇತರರು ಚಿತ್ರದ ಚಿತ್ರದಲ್ಲಿದ್ದಾರೆ.