ನನ್ನ ಜಾತಿ ಹಾಗೂ ಭಾಷೆ ನಿಮಗೆ ಸಮಸ್ಯೆ ಎನಿಸಿತು ಹಾಗಾಗಿ ನನಗೆ ಎಫ್‌ಯುಸಿ ಪ್ರವೇಶ ನಿರಾಕರಿಸಿದ್ರಿ..….
ಇದು ನಿರ್ದೇಶಕ ದಯಾಳ್ ಪದ್ಮನಾಭನ್ ಅವರ ನೋವಿನ ನುಡಿ. ಅಂದ ಹಾಗೆ, ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ನೇತೃತ್ವದಲ್ಲಿ ಈ ಹಿಂದೆ ಶುರುವಾದ ಎಫ್‌ಯುಸಿ ಗೆ ನಿರ್ದೇಶಕರಾದ ತಾವು ಸೇರ ಬಯಸಿದಾಗ ನಿರಾಕರಿಸಿದ್ದರ ಹಿಂದಿನ ಕಾರಣವನ್ನು ದಯಾಳ್ ಈಗ ಬಿಚ್ಚಿಟ್ಟಿದ್ದಾರೆ. ನಿರ್ದೇಶಕರಾದ ಪವನ್ ಕುಮಾರ್ ಹಾಗೂ ದಯಾಳ್ ಪದ್ಮಾನಾಭನ್ ನಡುವೆ ಅದ್ಯಾಕೆ ಈಗ ಚರ್ಚೆಗೆ ಬಂದಿದೆಯೋ ಗೊತ್ತಿಲ್ಲ. ಆದರೆ ಪವನ್ ಕುಮಾರ್ ನೇತೃತ್ವದ ಎಫ್‌ಯುಸಿ ಗೆ ತಮ್ಮನ್ನು ನಿರಾಕರಿಸಿದ್ದರ ಹಿಂದಿನ ಕಾರಣ ಏನು ಅಂತ ಈಗ ಸೋಷಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಅದನ್ನು ಪವನ್ ಕುಮಾರ್ ಅವರಿಗೆ ಉತ್ತರ ರೂಪದಲ್ಲಿ ಬಿಚ್ಚಿಟ್ಟಿದ್ದಾರೆ.
ʼ ನನ್ನ ಜಾತಿ ಹಾಗೂ ಭಾಷೆ ನಿಮಗೆ ಸಮಸ್ಯೆ ಎನಿಸಿತು ಹಾಗಾಗಿ ನನಗೆ ಎಫ್‌ಯುಸಿ ಪ್ರವೇಶ ನಿರಾಕರಿಸಿದಿರ ನನ್ನ, ಹೋರಾಡುವ ಛಾತಿ, ಎತ್ತರಕ್ಕೆ ಬೆಳೆಯುವ ಹಂಬಲ, ನೇರ, ನಿಷ್ಠುರ ಮಾತು, ನನ್ನ ಸ್ವತಂತ್ರ ಚಿಂತನೆಗಳು ಸಹ ನಿಮಗೆ ಸಹಿಸಲಾಗದೆ ನನ್ನನ್ನು ಹೊರಗಿಟ್ಟಿರಿ” ಎಂದಿದ್ದಾರೆ. ”ಎಫ್‌ಯುಸಿಯ ಆಹ್ವಾನವನ್ನು ನೀವೇ ನನಗೆ ಕಳಿಸಿದಿರಿ. ಈಗ ಅದನ್ನು ‘ಪ್ರೊಪೋಸಲ್’ ಎಂದು ನೀವು ಕರೆಯುತ್ತಿದ್ದೀರಿ. ನಾನಾಗಿಯೇ ಬಂದು ನನ್ನನ್ನು ತಂಡದಲ್ಲಿ ಸೇರಿಸಿಕೊಳ್ಳಿ ಎಂದು ಕೇಳಿರಲಿಲ್ಲ.
https://m.facebook.com/story.php?story_fbid=10159268455612158&id=597452157
ಇದಕ್ಕಿಂತಲೂ ಉತ್ತಮವಾದ ಕೆಲಸಗಳು ನನ್ನ ಬಳಿ ಇದ್ದವು” ಎಂದು ಪವನ್‌ಗೆ ಉತ್ತರಿಸಿದ್ದಾರೆ ದಯಾಳ್.ಸದ್ಯಕ್ಕೆ ಇದು ಹವನ್ ಅವರಿಗೆ ನೀಡಿದ ಉತ್ತರ ಆಗಿರಬಹುದು, ಆದರೆ ಈಗ ಚಿತ್ರರಂಗದಲ್ಲಿ ಜಾತಿ ವಿಚಾರ ತೀವ್ರ ಚರ್ಚೆಯಲ್ಲಿದೆ. ಅದೇ ಹೊತ್ತಿಗೆ ದಯಾಳ್ ಅವರ ಹೇಳಿಕೆ ಕೂಡ ತೀವ್ರ ಗಮನ ಸೆಳೆದಿದಿದೆ.
ಕನ್ನಡ ಚಿತ್ರರಂಗದಲ್ಲಿ ಜಾತಿ ಇದೆ ಇಲ್ಲವೋ ಗೊತ್ತಿಲ್ಲ, ಆದರೆ ಈಗ ಚಿತ್ರರಂಗದಲ್ಲಿ ಜಾತಿ ವಿಚಾರ ಮನ್ನೆಲೆಗೆ ಬಂದಿದೆ ಎನ್ನುವುದಕ್ಕೆ ಇತ್ತೀಚಿನ ಕೆಲವು ವಿವಾದಗಳು ಸಾಕ್ಷಿ. ಯಾವುದೋ ಚರ್ಚೆಯ ವಿಚಾರದಲ್ಲಿ ನಟ ಉಪೇಂದ್ರ ಅವರು, ಮಹಾ ನಾಯಕ ಅಂಬೇಡ್ಕರ್ ಹೇಳಿಕೆಯೊಂದನ್ನು ಇನ್ನಾರೋ ಹೇಳಿದ್ದು ಅಂತ ಹೇಳಿದ್ದೆ ಸಿನಿಮಾದೊಳಗಡೆಯೂ ಜಾತಿ ಚರ್ಚೆ ಹುಟ್ಟು ಹಾಕಿದ್ದು ನಿಮಗೂ ಗೊತ್ತು. ಉಪೇಂದ್ರ ಅವರ ಮಾತಿಗೆ ಆ ದಿನಗಳು ಖ್ಯಾತಿಯ ನಟ ಚೇತನ್ ನೀಡಿದ ಪ್ರತಿಕ್ರಿಯೆ ದೊಡ್ಡ ವಿವಾದ ಹುಟ್ಟು ಹಾಕಿತು. ಮುಂದೆ ಯುವ ನಟ ಕಿರಣ್ ಶ್ರೀನಿವಾಸ್ ಕೂಡ ಚಿತ್ರರಂಗದೊಳಗಡೆಯ ಜಾತಿ ಕುರಿತು ಮಾತನಾಡಿದರು. ಕೊನೆಗೆ ನಟ ಸಂಚಾರಿ ನಿಧನದ ನಂತರ ಅವರ ಜಾತಿಯ ಅವಮಾನದ ಕುರಿತು ನಟ ಸತೀಶ್ ನೀನಾಸಂ ಆಡಿದ ಮಾತು ಕೂಡ ಸಂಚಲನ ಸೃಷ್ಟಿಸಿತು. ಈಗ ನಿರ್ದೇಶಕ ದಯಾಳ್ ಪದ್ಮನಾಭನ್ ಕೂಡ ಜಾತಿ ಅವಮಾನ ಕುರಿತು ಮಾತನಾಡಿದ್ದಾರೆ.
ಎಫ್‌ಯುಸಿಯ ಆಹ್ವಾನವನ್ನು ನೀವೇ ನನಗೆ ಕಳಿಸಿದಿರಿ. ಈಗ ಅದನ್ನು ‘ಪ್ರೊಪೋಸಲ್’ ಎಂದು ನೀವು ಕರೆಯುತ್ತಿದ್ದೀರಿ. ನಾನಾಗಿಯೇ ಬಂದು ನನ್ನನ್ನು ತಂಡದಲ್ಲಿ ಸೇರಿಸಿಕೊಳ್ಳಿ ಎಂದು ಕೇಳಿರಲಿಲ್ಲ. ಇದಕ್ಕಿಂತಲೂ ಉತ್ತಮವಾದ ಕೆಲಸಗಳು ನನ್ನ ಬಳಿ ಇದ್ದವು” ಎಂದು ಪವನ್‌ಗೆ ಉತ್ತರಿಸಿದ್ದಾರೆ ದಯಾಳ್. ”ನನಗೆ ಅವಮಾನ ಮಾಡಿದ್ದಕ್ಕೆ ನೀವು ಮತ್ತು ನಿಮ್ಮ ಎಫ್‌ಯುಸಿ ಸದಸ್ಯರು ತಕ್ಕ ಶಾಸ್ತಿ ಅನುಭವಿಸಿಯೇ ತೀರುತ್ತೀರ. ನಿಮಗೆ ಹಾಗೂ ನಿಮ್ಮ ತಂಡದ ಸದಸ್ಯರಿಗೆ ಸಮಯವೇ ಸೂಕ್ತ ಪಾಠ ಕಲಿಸಲಿದೆ. ಯಾವುದು ಸಹ ನನ್ನನ್ನು ಬದಲಾವಣೆ ಮಾಡಲಾರದು. ಏನಾದರೂ ಎದುರು ಬರಲಿ, ನಾನು ಕೊನೆಯವರೆಗೆ ಕನ್ನಡ ಸಿನಿಮಾ ನಿರ್ದೇಶಕನಾಗಿ ಇರುತ್ತೇನೆ” ಎಂದಿದ್ದಾರೆ ದಯಾಳ್.