ವಿನೋದ್ ಪ್ರಭಾಕರ್ ತಟ್ಟೆಯಲ್ಲಿರುವ ಅನ್ನ ಕಿತ್ತುಕೊಳ್ಳೋ ಪ್ರಯತ್ನ? 1 ಕೋಟಿ ಸಂಭಾವನೆ- ನೆತ್ತಿಗೇರಿದೆ ರಾಬರ್ಟ್ ಯಶಸ್ಸು- ಹಿಂಗೆ ಕುಟುಕಿದವರಿಗೆ ಟೈಸನ್‌ ಕೊಟ್ರು ಉತ್ತರ

ತಮ್ಮ ತಟ್ಟೆಯಲ್ಲಿ ಹೈದ್ರಬಾದ್ ಬಿರಿಯಾನಿ ಇದ್ದರೂ, ಪಕ್ಕದ ತಟ್ಟೆಯಲ್ಲಿರುವ ನಾಟಿಕೋಳಿ ಸಾರು ರಾಗಿಮುದ್ದೆ ಮೇಲೆ ಕಣ್ಣು ಹಾಕ್ತಾರೆ. ಎಲ್ಲರೂ ಹಂಚಿಕೊಂಡು ತಿನ್ನೋಕೆ ಅವಕಾಶ ಇರುತ್ತೆ. ಆದರೆ, ಕಿತ್ತುಕೊಂಡು ತಿನ್ನೋರಿಗೆ ಹಂಚಿಕೊಂಡು ತಿನ್ನೋ ಗುಣ ಎಲ್ಲಿಂದ ಬರಬೇಕು. ಇದನ್ನಿಲ್ಲಿ ಹೇಳುವುದಕ್ಕೂ ಒಂದು ಕಾರಣವಿದೆ.
ಬೆವರು ಸುರಿಸಿ ದುಡಿದು ತಿನ್ನುವವರು ಎಷ್ಟು ಮಂದಿ ಇದ್ದಾರೋ‌ಅಷ್ಟೇ ಮಂದಿ ಬೇರೆಯವರ ಹೊಟ್ಟೆ ಮೇಲೆ ಹೊಡೆದು, ಬೇರೆಯವರ ತಟ್ಟೆಯ ಅನ್ನ ಕಿತ್ಕೊಂಡು ಬದುಕುವವರು ಇದ್ದಾರೆ. ಬೆಳೆಯುತ್ತಿದ್ದಾರೆ ಅಂದರೆ, ತುಳಿಯೋಕೆ‌ ನೋಡ್ತಾರೆ, ಹೆಸರು ಮಾಡ್ತಿದ್ದಾರೆ ಅಂದರೆ ತೇಜೋವಧೆ ಮಾಡುವ ಕಾರ್ಯಕ್ಕೆ ಚಾಲನೆ ಕೊಡ್ತಾರೆ. ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ಇಂತಹದ್ದೊಂದು ಸನ್ನಿವೇಶವನ್ನ‌ ಎದುರಿಸಿದ್ದಾರಂತೆ.‌


ಹೌದು, ವಿನೋದ್ ಪ್ರಭಾಕರ್ ತಮ್ಮ ಸ್ವಂತ ಪರಿಶ್ರಮದಿಂದ ಯಶಸ್ಸಿನ ಒಂದೊಂದೇ ಮೆಟ್ಟಿಲೇರಿದ್ದಾರೆ. ಅವಮಾನ, ಅಪಮಾನ, ನಿಂದನೆ ಎಲ್ಲವನ್ನೂ ಸಹಿಸಿಕೊಂಡು, ಅದೆಲ್ಲವನ್ನೂ ದಾಟಿಕೊಂಡು ಬಂದಿದ್ದಾರೆ. ಸ್ವಂತ ಬ್ರ್ಯಾಂಡ್ ಕಟ್ಟುವ ಹಾದಿಯಲ್ಲಿ ಎದುರಾಗುವ ಸವಾಲುಗಳಿಗೆ ಸೆಡ್ಡು ಹೊಡೆದು ಬೆವರು ಪ್ಲಸ್ ಬ್ಲಡ್ ಒಟ್ಟೊಟ್ಟಿಗೆ
ಸುರಿಸಿ ಗಂಧದಗುಡಿಯಲ್ಲಿ ತಮ್ಮ “ರಗಡ್” ಅವತಾರ ತೋರಿಸಿ ಎದ್ದು ನಿಂತಿದ್ದಾರೆ.

ಇವತ್ತಿಗೆ ಟೈಸನ್ ಬಹು ಬೇಡಿಕೆಯ ಯಶಸ್ವಿ ನಟರೂ ಆಗಿದ್ದಾರೆ. ವಿನೋದ್ ಪ್ರಭಾಕರ್ ಅವರ ಈ ಸಕ್ಸಸ್ ನ ಅದ್ಯಾರ ಕಣ್ಣಲ್ಲಿ ನೋಡೋದಕ್ಕೆ ಆಗ್ತಿಲ್ಲವೋ ಗೊತ್ತಿಲ್ಲ. ಟೈಗರ್ ಪುತ್ರನ ಹೊಟ್ಟೆ ಮೇಲೆ ಹೊಡೆಯುವ, ಟೈಸನ್ ತಟ್ಟೆಯಲ್ಲಿರುವ ಅನ್ನ ಕಿತ್ತು ಕೊಳ್ಳುವ ಪ್ರಯತ್ನಗಳಾಗಿವೆಯಂತೆ.


“ರಾಬರ್ಟ್” ನಂತರ ವಿನೋದ್ ಸಂಭಾವನೆ ಹೆಚ್ವಿಸಿಕೊಂಡಿದ್ದಾರೆ, ಒಂದು ಸಿನಿಮಾಗೆ ಒಂದು ಕೋಟಿ ‌ಡಿಮ್ಯಾಂಡ್ ಮಾಡ್ತಾರೆ ಎನ್ನುವ ಸುದ್ದಿ ಹಬ್ಬಿಸುವ ಮೂಲಕ ವಿನೋದ್ ಹೊಟ್ಟೆ ಮೇಲೆ ಹೊಡೆಯುವ, ವಿನೋದ್ ತಟ್ಟೆಯಲ್ಲಿರುವ ಅನ್ನ ಕಿತ್ತುಕೊಳ್ಳುವ‌ಕೆಲಸ ಮಾಡಿದ್ದಾರಂತೆ. ಈ ಬಗ್ಗೆ ತಮ್ಮ “ವರದ” ಚಿತ್ರದ‌ ಪ್ರಮೋಷನ್ ಪೋಸ್ಟರ್ ರಿಲೀಸ್ ಸಂದರ್ಭದಲ್ಲಿ ಮಾತನಾಡಿದ ವಿನೋದ್ ಪ್ರಭಾಕರ್, “ಯಾವತ್ತೂ ಯಾರ ಹತ್ತಿರ ರೆಮ್ಯೂನರೇಷನ್ ಡಿಮ್ಯಾಂಡ್ ಮಾಡಿಲ್ಲ. ನನ್ನ ಸ್ಟೇಟಸ್ ಏನು, ನನ್ನ ಸಿನಿಮಾಗೆ ಮಾರ್ಕೆಟ್ ನಲ್ಲಿ ಎಷ್ಟು ವ್ಯಾಲ್ಯೂ ಇದೆ ಅನ್ನೋದು ನನಗೆ ಚೆನ್ನಾಗಿ ಗೊತ್ತಿದೆ.

ನನ್ನಿಂದ ಅನ್ನದಾತನಿಗೆ ನಷ್ಟ ಆಗೋದಕ್ಕೆ ನಾನು ಬಿಡೋದಿಲ್ಲ. ಅಗತ್ಯಕ್ಕಿಂತ ಹೆಚ್ಚಾಗಿ ‌ಬಂಡವಾಳ‌ ಹಾಕಿಸೋದು ಇಲ್ಲ. ಹೀಗಿರುವಾಗ ಸುಖಾ ಸುಮ್ಮನೇ ಸಂಭಾವನೆ ಕೋಟಿ ಹೆಚ್ಚಿಸಿಕೊಂಡಿದ್ದಾರೆ ಅಂತ ಸುಳ್ಳು ಸುದ್ದಿ ಹಬ್ಬಿಸಿ ಬರುವ ಅವಕಾಶಗಳ ಕೈ ತಪ್ಪಿಸಬೇಡಿ, ನನ್ನ ಹೊಟ್ಟೆಯ ಮೇಲೆ ಹೊಡೆದು, ನನ್ನ ತಟ್ಟೆಯಲ್ಲಿರುವ ಕಿತ್ಕೊಬೇಡಿ ಅಂತ ವಿನೋದ್ ಕೇಳಿಕೊಂಡಿದ್ದಾರೆ. ಇಲ್ಲಿವರೆಗಿನ ಯಾವ ಸಕ್ಸಸ್ ಕೂಡ ನನ್ನ ನೆತ್ತಿಗೇರಿಲ್ಲ, ಏರೋದು ಇಲ್ಲ.‌ ಕಾಲನ್ನ ಭೂಮಿ ಮೇಲೆ ಬಿಟ್ಟು ಆಕಾಶದ ಮೇಲೆ ಇಡಲ್ಲ ಅಂತಾರೇ ಟೈಗರ್ ಸನ್.

Related Posts

error: Content is protected !!