Categories
ಸಿನಿ ಸುದ್ದಿ

ಸೀರೆಯುಟ್ಕೊಂಡು ಫೀಲ್ಡಿಗಿಳಿದ್ಲು ನಾಗವಲ್ಲಿ;`ಕಸ್ತೂರಿ ಮಹಲ್’ನಲ್ಲಿ ಬೆಚ್ಚಿ ಬೀಳಿಸ್ತಾಳೆ !

ಫ್ರಾಕ್ ಹಾಕಿಕೊಂಡು ಮಾಸ್ಟರ್ ಪೀಸ್' ಜೊತೆ ವಾಕಿಂಗ್ ಬಂದ ನಾಗವಲ್ಲಿಯನ್ನು ನೀವೆಲ್ಲಾ ನೋಡಿದ್ದೀರಿ. ಆ ನಾಗವಲ್ಲಿ ಮೇಲೆ ರೀಲ್‌ನಲ್ಲಿ ಅಣ್ತಮ್ಮನಿಗೆ ಲವ್ವಾಗಿದ್ದನ್ನು ಕಂಡಿದ್ದೀರಿ, ಈಗ ಅದೇ ನಾಗವಲ್ಲಿ ನಾಗರಪಂಚಮಿ ದಿನದಂದು ಅಖಾಡಕ್ಕೆ ಇಳಿದಿದ್ದಾಳೆ. ಸೀರೆಯುಟ್ಕೊಂಡು ಫೀಲ್ಡಿಗಿಳಿದಿರುವ ಆಕೆನಿನ್ನ ಕೆಲಸ ಮುಗಿತು ಕಿಟ್ಟಪ್ಪ, ಇನ್ಮೇಲೆ ನನ್ನ ಆಟ ಶುರು ಎನ್ನುತ್ತಿದ್ದಾಳೆ. ಇಷ್ಟೊತ್ತಿಗೆ ನಾವು ಯಾರ ಬಗ್ಗೆ ಹೇಳ್ತಿದ್ದೇವೆ ಅನ್ನೋದು ನಿಮಗೆ ಗೊತ್ತಾಗಿರುತ್ತೆ. ಆಕೆ ಬೇರ‍್ಯಾರು ಅಲ್ಲ ರಾಕಿಂಗ್ ಸ್ಟಾರ್, ಚಾಲೆಂಜಿಂಗ್ ಸ್ಟಾರ್, ಗೋಲ್ಡನ್‌ ಸ್ಟಾರ್, ರೋರಿಂಗ್ ಸ್ಟಾರ್ ರಂತಹ ಸೂಪರ್‌ಸ್ಟಾರ್‌ಗಳ ಜೊತೆ ಸ್ಕ್ರೀನ್ ಶೇರ್ ಮಾಡಿ ಸೈ ಎನಿಸಿಕೊಂಡಿರುವ ಶೈನಿಂಗ್ ಸುಂದರಿ ಶಾನ್ವಿ ಶ್ರೀವಾಸ್ತವ್‌.

ಶಾನ್ವಿ ಶ್ರೀವಾಸ್ತವ್ ವಾರಣಾಸಿಯ ಚೆಲುವೆ. ತೆಲುಗು ಇಂಡಸ್ಟ್ರಿ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದ ಶಾನ್ವಿ, ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅಭಿನಯದ ಚಂದ್ರಲೇಖ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. ಎರಡನೇ ಚಿತ್ರದಲ್ಲಿ ರಾಕಿಂಗ್‌ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ಗಿಟ್ಟಿಸಿಕೊಂಡರು. ಅದ್ಯಾವಾಗ,ಮಾಸ್ಟರ್‌ಪೀಸ್’ ನಲ್ಲಿ ಅಣ್ತಮ್ಮನ ಜೊತೆ ಕುಣಿದರೋ ಫಿನಿಶ್ ಶಾನ್ವಿ ಸಿಕ್ಕಾಪಟ್ಟೆ ಶೈನ್ ಆದರು. ಸ್ಟಾರ್ ನಟರುಗಳು ಸೇರಿದಂತೆ ಹೊಸಬರ ಚಿತ್ರಗಳಲ್ಲೂ ಅಭಿನಯಿಸಿ ಮೋಡಿ ಮಾಡಿದರು. ಇದೀಗ ಲೇಡಿರೆಬಲ್‌ಸ್ಟಾರ್ ನಯನಾತಾರ ಥರ ಲೀಡಿಂಗ್ ಲೇಡಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ಫ್ರಾಕ್ ಬಿಚ್ಚಿಟ್ಟು ಸೀರೆಯು ಟ್ಟುಕೊಂಡು ಕಣಕ್ಕಿಳಿದಿರುವ ಶಾನ್ವಿ ಅಚ್ಚರಿಯ ನೋಟ ಬೀರುತ್ತಾ ಚಿತ್ರಪ್ರೇಮಿಗಳನ್ನು ಬೆಚ್ಚಿಬೀಳಿಸ್ತುತಾರೆ.

ನಾಗರಪಂಚಮಿಯ ದಿನದಂದು ಶಾನ್ವಿ ಶ್ರೀವಾಸ್ತವ್ ಮುಖ್ಯಭೂಮಿ ಕೆಯಲ್ಲಿರುವ ಕಸ್ತೂರಿ ಮಹಲ್' ಚಿತ್ರದ ಟ್ರೇಲರ್ ಹೊರಬಿದ್ದಿದೆ. ದಟ್ಟವಾದ ಕಾಡು, ಅಭಯಾರಣ್ಯದಲ್ಲಿರುವ ಭೂತಬಂಗಲೆಯಂತಹ ಮನೆ, ಆ ಮನೆಗೊಂದು ಮಣ್ಣಿನ ದಾರಿ, ಕಪ್ಪು ಸೀರೆಯುಟ್ಟು ಪ್ರತ್ಯಕ್ಷವಾಗುವ ಹೆಂಗಸು, ೮೦೦ ವರ್ಷ ಹಳೇ ಬುಕ್ ಹೀಗೆ ಹಲವು ಕೂತೂಹಲಕಾರಿ ಅಂಶಗಳನ್ನೊಳಗೊಂಡಿರುವಕಸ್ತೂರಿ ಮಹಲ್’ ಟ್ರೇಲರ್ ಕೂತೂಹಲ ಕೆರಳಿಸುತ್ತೆ. `ಅವನೇ ಶ್ರೀಮನ್ನಾರಾಯಣನ’ ರಾಣಿ ಶಾನ್ವಿಯ ನೋಟ ಬೆರಗುಗೊಳಿಸುತ್ತೆ. ಚಂದ್ರಲೇಖ ನಂತರ ಮತ್ತೆ ಬೆಚ್ಚಿಬೀಳಿಸೋಕೆ ಬರುತ್ತಿರುವ ಶಾನ್ವಿಯ ಹಾರರ್ ಅವತಾರ ನೋಡಿದ್ಮೇಲೆ ನಿರೀಕ್ಷೆಗಳು ಗರಿಗೆದರುತ್ತಿವೆ.

ಸಸ್ಪೆನ್ಸ್-ಥ್ರಿಲ್ಲಿಂಗ್ ಆಗಿರುವ ಕಸ್ತೂರಿಮಹಲ್'ಗೆ ದಿನೇಶ್ ಬಾಬು ಆಕ್ಷನ್ ಕಟ್ ಹೇಳುತ್ತಿದ್ದಾರೆ. ʼಅಮೃತ ವರ್ಷಿಣಿʼ, ʼನಿಶ್ಯಬ್ದʼ, ʼಲಾಲಿ‌ʼ ಸೇರಿದಂತೆ ಹಲವು ಸೂಪರ್‌ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ ದಿನೇಶ್ ಬಾಬು ಇದೀಗಕಸ್ತೂರಿ ಮಹಲ್’ ಡೈರೆಕ್ಟ್ ಮಾಡಿದ್ದಾರೆ. ಇದು ಅವರ ೫೦ನೇ ಚಿತ್ರವಾಗಿದ್ದು ಟ್ರೇಲರ್‌ ನಿಂದಲೇ ಸೌಂಡ್ ಮಾಡುತ್ತಿದೆ. ರವೀಶ್ ಆರ್ ಸಿ, ರುಬೀನ್ ರಾಜ್ ಕಸ್ತೂರಿ ಮಹಲ್'ಗೆ ಬಂಡವಾಳ ಹೂಡಿದ್ದಾರೆ. ಸ್ಕಂದ ಅಶೋಕ್, ಶ್ರುತಿ ಪ್ರಕಾಶ್, ರಂಗಾಯಣ ರಘು ಸೇರಿದಂತೆ ಹಲವರು ಪ್ರಮುಖ ಪಾತ್ರಕ್ಕೆ ಜೀವತುಂಬಿದ್ದಾರೆ. ʼಆಪ್ತರಕ್ಷಕʼ ಸಿನಿಮಾಗೆ ಕ್ಯಾಮೆರಾ ಕೈಚಳ ತೋರಿದ್ದ ಪಿ.ಕೆ.ಎಚ್ ದಾಸ್, ಸಸ್ಪೆನ್ಸ್ ಥ್ರಿಲ್ಲರ್ಕಸ್ತೂರಿ ಮಹಲ್’ಗೆ ಕ್ಯಾಮೆರಾ ಹಿಡಿದಿದ್ದಾರೆ. ಗೌತಮ್ ಶ್ರೀವತ್ಸ ಸಂಗೀತ ಚಿತ್ರಕ್ಕಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಬುಲ್‌ಬುಲ್ ಬೆಡಗಿ ರಚಿತರಾಮ್ ಕಸ್ತೂರಿ ಮಹಲ್'ನಲ್ಲಿ ಕಂಗೊಳಿಸಬೇಕಿತ್ತು. ಅದೇನಾಯ್ತೋ ಏನೋ ಗೊತ್ತಿಲ್ಲಕಸ್ತೂರಿ ನಿವಾಸ’ ಟೈಟಲ್ ಚೇಂಜ್ ಆದ್ಹಂಗೆ ನಾಯಕಿ ರಚಿತಾ ರಾಮ್ ಕೂಡ ಬದಲಾದರು. ಡಿಂಪಲ್ ಬೆಡಗಿ ಜಾಗಕ್ಕೆ ಡಿಂಪಲ್ ಸುಂದರಿ ಶಾನ್ವಿಯೇ ಬಂದರು. `ಕಸ್ತೂರಿ ಮಹಲ್’ ಶಾನ್ವಿಗೆ ಚಾಲೆಂಜಿಂ ಗ್ ಆಗಿದೆ. ಕೇವಲ ೨೦ ದಿನದಲ್ಲಿ ತನ್ನ ಪಾತ್ರದ ಶೂಟಿಂಗ್ ಕಂಪ್ಲೀಟ್ ಮಾಡಿಕೊಟ್ಟು ಹೊಸ ಹಿಸ್ಟರಿ ಬರೆದಿರುವ ತಾರಕ್ ಬೆಡಗಿ ʼಕಸ್ತೂರಿ ಮಹಲ್’ ಮೂಲಕ ನಯಾ ಮೇನಿಯಾ ಸೃಷ್ಟಿಸಿಕೊಳ್ಳಲಿ. ಈ ಚಿತ್ರವೂ ಹೊಸ ರೆಕಾರ್ಡ್ ಬರೆಯಲಿ ಎನ್ನುವುದೇ ಸಿನಿಲಹರಿಯ ಹಾರೈಕೆ

  • ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಕುಲವಧು ವಚನಾಗೆ ಸೀಮಂತ ಶಾಸ್ತ್ರ; ಆನಂದ ಸಾಗರದಲ್ಲಿ ಮಿಸ್ಟರ್ & ಮಿಸಸ್ ರಂಗೇಗೌಡ ಕುಟುಂಬ!

“ಬರ್ತಾನವ್ವ ಭೂಪ.. ಬರ್ತಾನವ್ವ ಭೂಪ.. ಈ ಬಂಗಾರಿ ಮಡಿಲಿನಲಿ.. ಮುತ್ತು ರತ್ನದಂತೆ.. ಬೆಳ್ಳಿ ಬೊಂಬೆಯಂತೆ… ಮಿಸ್ಟರ್ & ಮಿಸಸ್ ರಂಗೇಗೌಡ ವಂಶದಲ್ಲಿ… ಯಸ್, ಮಿಸ್ಟರ್ & ಮಿಸಸ್ ರಂಗೇಗೌಡರ ಕುಟುಂಬದಲ್ಲಿ ಸಂತೋಷ-ಸಂಭ್ರಮ ಮನೆ ಮಾಡಿದೆ. ಆನಂದ ಸಾಗರದಲ್ಲಿ ಮಿಂದೇಳುತ್ತಿರುವ ಎರಡು ಮನೆಯ ಕುಟುಂಬಸ್ತರು ಕರುಳ ಕುಡಿಯನ್ನು ಸ್ವಾಗತಿಸುವುದಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ಕುಲವಧು ವಚನಾ ಖ್ಯಾತಿಯ ಅಮೃತಾಳ ಆಸೆಯಂತೆ ಸೀಮಂತ ಕಾರ್ಯವನ್ನು ನಮ್ಮನೆ ಯುವರಾಣಿ ಖ್ಯಾತಿಯ ಸಾಕೇತ್ ಅದ್ದೂರಿಯಾಗಿ ನೆರವೇರಿಸಿದ್ದಾರೆ.

ಖುಷಿ ಖುಷಿಯಾಗಿ-ಶಾಸ್ತ್ರೋಕ್ತವಾಗಿ ನಡೆದ ಅಮೃತಾಳ ಸೀಮಂತ ಕಾರ್ಯದ ಪೋಟೋವನ್ನು ನೀವು ಒಮ್ಮೆ ನೋಡ್ಲೆಬೇಕು. ಯಾಕಂದ್ರೆ, ಕುಲವಧು ವಚನಾ ದೃಷ್ಟಿ ಬೊಂಬೆಯಂತೆ ಕಂಗೊಳಿಸುತ್ತಿದ್ದಾರೆ. ರೆಡ್ ಅಂಡ್ ಗೋಲ್ಡನ್ ಕಲರ್ ಕಾಂಬಿನೇಷನ್ ಸೀರೆಯುಟ್ಟು ಸೀಮಂತಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಪತ್ನಿ ಅಮೃತಾ ಅಚ್ಚರಿಪಡುವಂತೆ ಸೀಮಂತದ ವೇದಿಕೆಯನ್ನ ರಾಘು ಡೆಕೋರೇಟ್ ಮಾಡಿಸಿದ್ದರು. ಮನೆ ಬೆಳಗಲು ಬಂದಿರುವ ಪತ್ನಿ ಅಮೃತಾಳ ಸೀಮಂತ ಕಾರ್ಯವನ್ನು ಗ್ರ್ಯಾಂಡ್ ಆಗಿ ಆಚರಿಸಿದರು. ಪತಿ ರಾಘವೇಂದ್ರ ಕೊಟ್ಟ ಸಪ್ರೈಸ್‌ಗೆ ಥ್ರಿಲ್ ಆದ ಅಮೃತಾ ಸೀಮಂತದ ಶುಭ ಕ್ಷಣವನ್ನು ಪದಗಳಲ್ಲಿ ಕಟ್ಟಿಕೊಟ್ಟರು.
“ಪ್ರತಿಯೊಬ್ಬ ಹೆಣ್ಣಿಗೂ ತಾಯ್ತನದ ಸಮಯದಲ್ಲಿ ವಿವಿಧ ಆಸೆಗಳು, ಕನಸುಗಳು ಇರುತ್ತದೆ. ಹಾಗೆ ನನ್ನ ಬಹುದೊಡ್ಡ ಕನಸು ಅಂದ್ರೆ ನನ್ನ ಸೀಮಂತ ಶಾಸ್ತ್ರವನ್ನು ಹಿರಿಯರ ಸಮ್ಮುಖದಲ್ಲಿ ಸಂತೋಷದಿಂದ ಮಾಡಿಸಿಕೊಳ್ಳಬೇಕು ಎಂದಿತ್ತು. ಆ ನನ್ನ ಕನಸು ಈಡೇರಿದೆ. ಇದಕ್ಕೆ ಮೊದಲ ಕಾರಣ ನನ್ನ ಜೀವ ಅಂದರೆ ಪತಿ ರಾಘವೇಂದ್ರ ಅವರು. ನಂತರ ಅತ್ತೆ, ಮಾವ, ಅತ್ತಿಗೆ, ಅಣ್ಣಾ, ಅಮ್ಮ, ಅಪ್ಪ, ಅಕ್ಕ, ಭಾವ, ಸ್ನೇಹಿತರು ಹಾಗೂ ನನ್ನ ಆತ್ಮೀಯರು” ಅಂತ ಅಮೃತಾ ತಮ್ಮ ಸೋಷಿಯಲ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.


ಕಿರುತೆರೆ ಪ್ರೇಕ್ಷಕರಿಗೆ ಮಿಸ್ಟರ್ & ಮಿಸಸ್ ರಂಗೇಗೌಡ ಖ್ಯಾತಿಯ ಜೋಡಿಯ ಬಗ್ಗೆ ಕಂಪ್ಲೀಟ್ ಡೀಟೈಲ್ಸ್ ಗೊತ್ತಿರುತ್ತೆ. ಸೀರಿಯಲ್ ನೋಡದೇ ಇರುವ ಪ್ರೇಕ್ಷಕರಿಗೆ ಈ ಜೋಡಿಯ ಬಗ್ಗೆ ಹೆಚ್ಚಿನ ಕಥೆ ಗೊತ್ತಿರುವುದಿಲ್ಲ. ಹೀಗಾಗಿ, ಮೊದಲು ಈ ಕ್ಯೂಟ್ ಕಪಲ್ಸ್ ಬಗ್ಗೆ ಶಾರ್ಟ್ ಅಂಡ್ ಸ್ವೀಟಾಗಿ ತಿಳಿದುಕೊಂಡು ಬಿಡೋಣ. ಬಿಗ್‌ಸ್ಕ್ರೀನ್ ನಲ್ಲಿ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಹೇಗೋ ಹಾಗೆಯೇ ಸ್ಮಾಲ್‌ಸ್ಕ್ರೀನ್ ನಲ್ಲಿ ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ್ರು ಭಾರೀ ಫೇಮಸ್.. ಇದೇ ಹೆಸರಿನ ಸೀರಿಯಲ್ ಮೂಲಕ ಗಂಡ-ಹೆಂಡತಿಯಾಗಿ ಸ್ಮಾಲ್‌ಸ್ಕ್ರೀನ್‌ನಲ್ಲಿ ಮಿಂಚಿದ ಅಮೃತ ಹಾಗೂ ರಾಘವೇಂದ್ರ ಗೌಡ ರಿಯಲ್ ಲೈಫ್‌ನಲ್ಲೂ ಜೋಡಿಯಾದರು. ೨೦೧೯ರ ಮೇ ೧೩ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.


ತಮ್ಮ ಎರಡನೇ ವರ್ಷದ ಆನಿವರ್ಸರಿಯಂದು ನಟಿ ಅಮೃತಾ ರಾಮಮೂರ್ತಿ ಹಾಗೂ ರಾಘವೇಂದ್ರ ಗೌಡ ಅವರು ಸಿಹಿಸುದ್ದಿ ಕೊಟ್ಟಿದ್ದರು. ಇಲ್ಲಿವರೆಗೂ ನಾವಿಬ್ಬರಿದ್ದೆವು ಈಗ ಮೂವರಾಗಿದ್ದೇವೆ ಎಂದು ಟ್ವೀಟ್ ಮೂಲಕ ತಿಳಿಸಿದ್ದರು. ಅಂದೇ ಈ ಜೋಡಿಗೆ ಭರಪೂರ ಶುಭಾಷಯಗಳು ಹರಿದು ಬಂದಿತ್ತು. ಪತ್ನಿ ಅಮೃತಾಳನ್ನು ಜೋಪಾನವಾಗಿ ನೋಡಿಕೊಳ್ಳಿ ರಂಗೇಗೌಡ್ರೇ ಅಂತ ಫ್ಯಾನ್ಸ್ ಟ್ವೀಟ್ ಮೇಲೆ ಟ್ವೀಟ್ ಮಾಡಿದ್ದರು. ಅದರಂತೇ, ತನ್ನ ಪಾಲಿನ ಹಾಗೂ ತನ್ನ ಮನೆಯ ಐಶ್ವರ್ಯ ಅಮೃತಾ ರಾಮಮೂರ್ತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ತಿದ್ದಾರೆ.

ಅದ್ದೂರಿಯಾಗಿ ಸೀಮಂತ ಮಾಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗಂಡಾಗಲೀ ಹೆಣ್ಣಾಗಲಿ ನನ್ನ ಮಗು ನನ್ನ ಹೆಂಡ್ತಿ ಆರೋಗ್ಯವಾಗಿರ‍್ಬೇಕು ಅಂತ ರಾಘು ಆಸೆ ಪಡ್ತಿದ್ದಾರೆ. ಅವರ ಆಸೆಯಂತೆ ಎಲ್ಲವೂ ನೆರವೇರಲಿ.
ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಡೇವಿಲ್‌ ಈಸ್‌ ಬ್ಯಾಕ್‌ – ವಿಕೃತ ಮನಸುಗಳಿಗೆ ನಟ ಪ್ರಕಾಶ್‌ ರೈ ಇಟ್ಟರು ಗುನ್ನ !

ಚಿತ್ರೀಕರಣದ ವೇಳೆ ಗಾಯಗೊಂಡಿದ್ದ ಬಹುಭಾಷಾ ನಟ ಪ್ರಕಾಶ್‌ ಚೇತರಿಸಿಕೊಂಡಿದ್ದಾರೆ. ಹೈದ್ರಾಬಾದ್‌ ಆಸ್ಪತ್ರೆಯಲ್ಲಿ ಅವರಿಗೆ ಸರ್ಜರಿ ಯಶಸ್ವಿ ಆಗಿ ನಡೆದಿದೆ. ಈ ಕುರಿತು ತಮ್ಮ ಟ್ವಿಟ್ಟರ್‌ ಅಕೌಂಟ್‌ ನಲ್ಲಿ ಪ್ರಕಾಶ್‌ ರೈ ಕುತೂಹಲದ ಸ್ಟೇಟಸ್‌ ಹಾಕಿಕೊಂಡಿದ್ದಾರೆ.ʼ ಡೇವಿಲ್‌ ಈಸ್‌ ಬ್ಯಾಕ್‌, ಶಸ್ತ್ರ ಚಿಕಿತ್ಸೆ ಯಶಸ್ವಿ ಆಗಿದೆ. ನನ್ನ ಆತ್ಮೀಯ ಗೆಳೆಯ ಡಾ.ಗುರು ರೆಡ್ಡಿ ಮತ್ತು ನಿಮ್ಮೆಲ್ಲರ ಪ್ರೀತಿ. ಪ್ರಾರ್ಥನೆಗೆ ಧನ್ಯವಾದಗಳು. ಶೀಘ್ರವೇ ಕೆಲಸಕ್ಕೆ ಹಾಜರಾಗುತ್ತೇನೆ ಅಂತ ಪ್ರಕಾಶ್‌ ರೈ ಟ್ವಿಟ್‌ ಮಾಡಿ ದ್ದಾರೆ. ಅವರ ಟ್ವಿಟ್ನಲ್ಲಿ ಕುತೂಹಲ ಮೂಡಿಸಿದ್ದು ಡೇವಿಲ್‌ ಈಸ್‌ ಬ್ಯಾಕ್‌ ಎನ್ನುವ ಪದ. ಕೈಗೆ ಬ್ಯಾಂಡೇಜ್‌ ಸುತ್ತಿಕೊಂಡು ಬೆಡ್‌ ಮೇಲೆ ಮಲಗಿ ಕಿರುನಗೆ ಬೀರುತ್ತಾ ಸ್ಪೆಲ್ಫಿಗೆ ಪೋಸು ನೀಡಿದ ಫೋಟೋ ದೊಂದಿಗೆ ಪ್ರಕಾಶ್‌ ರೈ ʼ ಡೇವಿಲ್‌ ಈಸ್‌ ಬ್ಯಾಕ್‌ʼ ಅಂತ ಯಾಕೆ ಹೇಳಿದ್ರು ಗೊತ್ತಾ ? ಅದಕ್ಕೆ ದೊಡ್ಡದಾದ ಕಾರಣವೊಂದಿದೆ. ಅದೇನು ಅಂತ ಹೇಳೋದಿಕ್ಕೂ ಮುನ್ನ ಪ್ರಕಾಶ್‌ ರೈ ಅಂದ್ರೆ ಉರಿದು ಬಿಳುವವರ ಬಗ್ಗೆ ಹೇಳ್ತೀವಿ ಕೇಳಿ.

ಪ್ರಕಾಶ್‌ ರೈ ಬರೀ ನಟ ಮಾತ್ರವೇ ಅಲ್ಲವೇ ಅಲ್ಲ, ಒಬ್ಬ ಆಕ್ಟಿವಿಸ್ಟ್‌ ಕೂಡ ಹೌದು. ನಟನಾಗಿ ಚಿತ್ರರಂಗದಲ್ಲಿ ಸಂಪಾದಿಸುವ ಸಂಭಾವನೆಯಲ್ಲಿ ಒಂದಷ್ಟು ಹಣವನ್ನು ಅರಂಭದಿಂದಲೂ ಸಾಮಾಜಿಕ ಸೇವೆಗಾಗಿ ಮೀಸ ಲಿಟ್ಟ ಹೃದಯವಂತ. ಅತಿವೃಷ್ಟಿ, ಅನಾವೃಷ್ಟಿ ಅಥವಾ ಇನ್ನಾವು ದೋ ಸಂಕಷ್ಟ ಅಂತ ರೈತರು, ಸಾಮಾನ್ಯ ಜನರು ಸಂಕಷ್ಟಗಳಲ್ಲಿ ಸಿಲುಕಿ ದಾಗ ಸದ್ದಿಲ್ಲದೆ, ಸುದ್ದಿಯೂ ಮಾಡದೆ ಅವರಿಗೆ ತಮ್ಮ ಕೈಲಾದ ಸೇವೆ ಮಾಡುತ್ತಾ ಬಂದ ನಟ. ಅದರಲ್ಲೂ ಕೊರೋನಾ ಮೊದಲ ಅಲೆಯ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ನೂರಾರು ಜನರಿಗೆ ಆಹಾರ ಧಾನ್ಯ ನೀಡಿದರು. ಊಟ ಹಾಕಿದರು. ಅದೆಷ್ಟೋ ಜನರಿಗೆ ಆರ್ಥಿಕ ನೆರವು ನೀಡಿ, ಅವರವರ ಊರುಗಳಿಗೆ ತೆರಳುವಂತೆ ಮಾಡಿದರು. ಅದರ ಜತೆಗೆ ಸಾಮಾಜಿಕ ಹಾಗೂ ರಾಜಕೀಯವಾಗಿಯೂ ಸದಾ ಕ್ರೀಯಾಶೀಲ ವಾಗಿರುವ ಮನಸು ಅವರದು. ಸರ್ಕಾರದ ಯಾವುದೇ ಜನವಿರೋಧಿ ನಿಲುವುಗಳನ್ನು ಖಂಡಾತುಂಡಾಗಿ ವಿರೋಧಿಸುತ್ತಲೇ ಬಂದಿದ್ದಾರೆ. ಅದರಲ್ಲೂ ಕೋಮುವಾದದ ವಿರುದ್ಧ ಪ್ರಬಲವಾದ ಧ್ವನಿ ಪ್ರಕಾಶ್‌ ರೈ ಅವರದ್ದು.

ಭಾರತೀಯ ಚಿತ್ರರಂಗದ ಮಟ್ಟಿಗೆ ಮೋದಿ ಅವರನ್ನು ಕಟುವಾಗಿ ಟೀಕಿಸಿದ ನಟರಾರು ಅಂತ ನೋಡಿದಾಗ ಮೊದಲ ಸಾಲಿಗೆ ನಿಲ್ಲುವ ಹೆಸರು ಪ್ರಕಾಶ್‌ ರೈ ಅವರದ್ದು. ಅದೇ ಕಾರಣಕ್ಕೆ ಬಿಜೆಪಿ ಬೆಂಬಲಿಗರು ಬಹುದೊಡ್ಡ ಪ್ರತಿರೋಧ ಹಾಗೂ ಟೀಕೆಗಳಿಗೆ ಗುರಿಯಾದರು ಪ್ರಕಾಶ್‌ ರೈ. ಅದು ಎಷ್ಟರ ಮಟ್ಟಿಗೆ ಅಂದ್ರೆ, ಪ್ರಕಾಶ್‌ ರೈ ಒಬ್ಬ ಹಿಂದೂ ವಿರೋಧಿ, ಅವರು ಪಾಕಿಸ್ತಾನಕ್ಕೆ ಹೋಗುವುದೇ ಸೂಕ್ತ ಅಂತಲೂ ಒಂದು ಸಿದ್ದಾಂತದ ಜನ ಅವರನ್ನು ಜರಿದರು. ಒಂದು ಹಂತದಲ್ಲಿ ಅವರು ಅಭಿನಯಿಸುವ ಸಿನಿಮಾ ನಿಷೇಧಿಸಿ ಅಂದವರು ಇದ್ದಾರೆ. ಹಾಗೆಯೇ ಅವರಿಗೆ ಕನ್ನಡದಲ್ಲಿ ಸಿನಿಮಾ ಅವಕಾಶ ಕೊಡ್ಬೇಡಿ ಅಂತ ನಿರ್ಮಾಪಕರಿಗೆ ಒತ್ತಡ ತಂದವರು ಇದ್ದಾರೆ. ಇದೆಲ್ಲ ಯಾಕಂದ್ರೆ ಪ್ರಕಾಶ್‌ ರೈ ಒಬ್ಬ ವಾಸ್ತವವಾದಿ ಅನ್ನೋದು. ಸರ್ಕಾರಗಳ ಸುಳ್ಳು ಭರವಸೆಗಳು, ಜನ ವಿರೋಧಿ ಧೋರಣೆಗಳನ್ನು ಅವರು ವಿರೋಧಿ ಸುತ್ತಾರೆ ಎನ್ನುವುದಕ್ಕೆ. ಅದಿರಲಿ ಅದೆಲ್ಲ ಹಳೇ ಕಥೆ. ಈಗ್ಯಾಕೆ ಪ್ರಕಾಶ್‌ ರೈ ಡೇವಿಲ್‌ ಈಸ್‌ ಬ್ಯಾಕ್‌ ಅಂತ ಶಾಕ್‌ ಕೊಟ್ಟರು ಗೊತ್ತಾ ?

ಕಳೆದ ನಾಲ್ಕೈದು ದಿನಗಳ ಹಿಂದೆ ಪ್ರಕಾಶ್‌ ರೈ ಹೈದ್ರಾಬಾದ್‌ ಹೊರವಲಯದಲ್ಲಿ ತೆಲುಗು ಚಿತ್ರವೊಂದರ ಚಿತ್ರೀಕರಣದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆನ್ನುವ ಸುದ್ದಿ ಬಂದಾಗ, ಅದೇ ಅವರ ವಿರೋಧಿ ಪಡೆ ಸಂಭ್ರಮ ಆಚರಿಸಿತು. ಜತೆಗೆ ಸೋಷಲ್‌ ಮೀಡಿಯಾ ದಲ್ಲಿ ಮಾನವೀಯತೆ ಇಲ್ಲದ ಮೃಗಗಳ ಹಾಗೆ ಕಾಮೆಂಟ್‌ ಆಗಿ ತಮ್ಮ ವಿಕೃತ ಮನಸ್ಥಿತಿಗಳನ್ನು ತೋರಿದ್ದರು. ಸಹಜವಾಗಿಯೇ ಇವೆಲ್ಲ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ದೊಡ್ಡ ಸುದ್ದಿಯೂ ಆಗಿದ್ದವು. ತುಂಬಾ ಜನರು ಈ ಕೆಟ್ಟ ಕಾಮೆಂಟ್‌ ಗಳಿಗೆ ತಿರುಗೇಟು ನೀಡಿ, ಇದು ವಿಕೃತ ಮನಸಿನ ಅತಿರೇಕ ಅಂದಿದ್ದರು. ಇನ್ನು ಕೆಲವರು ಸಮರ್ಥಿಸಿಕೊಂಡು, ಪ್ರಕಾಶ್‌ ರೈ ಒಬ್ಬ ಹಿಂದೂ ವಿರೋಧಿ ಎಂಬುದಾಗಿ ವಿಜೃಂಭಿಸಿದ್ದರು. ಅದಕ್ಕೆಲ್ಲ ಉತ್ತರವೇ ಎನ್ನುವ ಹಾಗೆ ಗುರುವಾರ ವಷ್ಟೇ ನಟ ಪ್ರಕಾಶ್‌ ರೈ ತಮ್ಮ ಟ್ವಿಟ್ಟರ್‌ ಅಕೌಂಟ್‌ ನಲ್ಲಿ ಡೇವಿಲ್‌ ಬ್ಯಾಕ್‌ ಅಂತ ಗುಡುಗು ಮೂಲಕ ಶಾಕ್‌ ನೀಡಿದ್ದು ವಿಶೇಷ. ಕೊನೆಯದಾಗಿ ಒಂದು ಮಾತು, ಭಾರತೀಯ ಚಿತ್ರರಂಗದಲ್ಲಿಯೇ ಇವತ್ತು ದೊಡ್ಡ ಹೆಸರು ಮಾಡಿರುವ ಪ್ರಕಾಶ್‌ ರೈ ಅವರಂತಹ ಬಹುಭಾಷಾ ನಟ ಕನ್ನಡದವರು ಅನ್ನೋದೇ ನಮಗೆಲ್ಲ ಹೆಮ್ಮೆ. ಅಷ್ಟು ಮಾತ್ರವೇ ಅಲ್ಲ, ಸದಾ ಕನ್ನಡ ಕನ್ನಡ ಎನ್ನುತ್ತಲೇ ಯಾರಿಗೂ ಉಪಯೋ ಗವೇ ಇಲ್ಲದಂತೆ ತಾವಾಯಿತು, ತಮ್ಮ ಪಾಡಾಯಿತು ಅಂತ ಇರುವ ಕನ್ನಡದ ಅದೆಷ್ಟೋ ನಟರ ನಡುವೆ ಪ್ರಕಾಶ್‌ ರೈ ಸದಾ ಕ್ರಿಯಾಶೀಲವಾಗಿದ್ದು ನಟನೆ, ಕೃಷಿ, ಸಮಾಜ ಸೇವೆ ಹಾಗೂ ರಾಜಕೀಯ ಅಂತ ಪಾದಾರಸದಂತೆ ಹರಿದಾಡುತ್ತಲೇ ಇದ್ದಾರೆನ್ನುವುದಕ್ಕಾದರೂ ನಾವು ಅವರನ್ನು ಮೆಚ್ಚಲೇಬೇಕು.

Categories
ಸಿನಿ ಸುದ್ದಿ

ಲವ್ ಮಾಕ್ಟೇಲ್ 2 ಶೂಟಿಂಗ್ ಮುಗಿಸಿದ ಖುಷಿಯಲ್ಲಿ ಕೃಷ್ಣ ಮಿಲನ

ಲವ್ ಮಾಕ್ಟೇಲ್ ಮೂಲಕ ಜೋರು ಸುದ್ದಿ ಮಾಡಿದ್ದ ಬ್ಯೂಟಿಫುಲ್ ಸ್ಟಾರ್ ಕಪಲ್ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
ಹೌದು, ಅವರು ಮದ್ವೆಯಾಗಿದ್ದು ದೊಡ್ಡ ಸುದ್ದಿಯೂ ಗೊತ್ತು. ಹಾಗಾದರೆ, ಹೊಸ ಲೈಫಲ್ಲಿ ಸಿಹಿ ಸುದ್ದಿ ಏನಾದ್ರೂ ಕೊಡ್ತಾ ಇದಾರಾ? ಈ ಪ್ರಶ್ನೆ ಸಹಜ. ಯಾಕಂದರೆ, ಇತ್ತೀಚೆಗಷ್ಟೇ ಮದ್ವೆ ಆಗಿದ್ದ ಜೋಡಿ ಆಗಿದ್ದರಿಂದ ಸಿಹಿ ಸುದ್ದಿ ನಿರೀಕ್ಷೆ ಸಹಜವೇ. ಆದರೆ, ಅವರೀಗ ಹೊಸ ಸುದ್ದಿ ಹಂಚಿಕೊಂಡಿದ್ದಾರೆ.


ಅದು ‘ಲವ್ ಮಾಕ್ಟೇಲ್ 2’ ಸಿನಿಮಾ ಸುದ್ದಿ. ಈ ಚಿತ್ರವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಈ ವಿಷಯವನ್ನ ಸ್ವತಃ ಡಾರ್ಲಿಂಗ್ ಕೃಷ್ಣ ಅವರೇ ತಮ್ಮ ಮುಖಪುಟದಲ್ಲಿ ಹಂಚಿಕೊಂಡಿದ್ದಾರೆ.

‘ಲವ್ ಮಾಕ್‌ಟೇಲ್ 2′ ಚಿತ್ರದ ಶೂಟಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ, ನಿದ್ದೆಯಿಲ್ಲದ ರಾತ್ರಿಗಳಲ್ಲಿ ಹೋರಾಡಿಯೇ ನಾವು ಒಂದೊಳ್ಳೆಯ ಚಿತ್ರವನ್ನು ನೀಡಲು ಪ್ರಯತ್ನಿಸಿದ್ದೇವೆ. ಈ ವೇಳೆ ಮಿಲನ ನಾಗರಾಜ್ ಅವರೊಂದಿಗೆ ಅಂಥದ್ದೊಂದು ಅದ್ಭುತ ಜರ್ನಿ ಕೂಡ ಮಾಡಿದ್ದೇನೆ’ ಎಂದು ಡಾರ್ಲಿಂಗ್ ಕೃಷ್ಣ ಹೇಳಿಕೊಂಡಿದ್ದಾರೆ.

ಕಳೆದ ಲಾಕ್ಡೌನ್ ವೇಳೆ ಲವ್ ಮಾಕ್ಟೇಲ್ ಸಿನಿಮಾ ತೆರೆಕಂಡಿತ್ತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿತ್ತು. ಅದೇ ಯಶಸ್ಸಿನಲ್ಲಿದ್ದ ಜೋಡಿ ‘ ಲವ್ ಮಾಕ್ಟೇಲ್ 2’ ಶುರು ಮಾಡಿತ್ತು. ಈಗ ಸಿನಿಮಾವನ್ನು ಯಶಸ್ವಿಯಾಗಿ ಮುಗಿಸಿದ ಖುಷಿಯಲ್ಲಿದ್ದಾರೆ.
ಅದೇನೆ ಇರಲಿ, ಸಕ್ಸಸ್ ಸಿನಿಮಾ ಕೊಟ್ಟಿರುವ ಈ ಜೋಡಿ ಮತ್ತೆ ನಿರೀಕ್ಷೆ ಹುಟ್ಟಿಸಿದೆ. ಫ್ಯಾನ್ಸ್ ಕೂಡ ಸಿನಿಮಾ ಎದುರು ನೋಡುತ್ತಿದ್ದು, ಚಿತ್ರಕ್ಕೆ ಹಾಗೂ ಶ್ರಮದಿಂದ ಸಿನಿಮಾ ಮಾಡಿರೋ ಈ ಜೋಡಿಗೆ ಯಶಸ್ಸು ಸಿಗಲೆಂದು ಸಿನಿಲಹರಿ ಆಶಿಸುತ್ತದೆ.

Categories
ಸಿನಿ ಸುದ್ದಿ

ನಾನ್‌ ಒಳ್ಳೇವ್ನೆ ನನ್‌ ಟೈಮೇ ಸರಿ ಇಲ್ಲ! ಅಪ್ಪು ಹಾಡಿದ್ರು, ಜನ ಮೆಚ್ಚಿದ್ರು!! ಗ್ಯಾಂಗ್‌ ಕಟ್ಟಿಕೊಂಡೋರ ಹಾಡಿಗೆ ಭರಪೂರ ಮೆಚ್ಚುಗೆ…

ಏನ್ಮಾಡ್ಲಿ ಹೇಳಿ ಈಗ, ನನಗಿಲ್ಲ ಚೂರು ಮೂಡು… ಯಾಕೆ ಹೀಗೆ ಬದುಕು ಆಯ್ತು. ಕಾಣದೇ ಹೋದೆನಾ… ಬದುಕಿನಲ್ಲಿ ಖುಷಿಯೇ ಇಲ್ಲ. ಹೇಗೋ ಈ ಜೀವನ… ಹಿಂಗೆಲ್ಲಾ ಯಾಕಾಯ್ತೋ, ಈ ದುನಿಯಾ… ಅದೇಕೋ ನಮಗಿಲ್ಲ.. ಇದು ಖಾಲಿ ಹಾಳೆ ಜೀವನ…ʼ ಎನ್ನುವ ಪದಗಳಲ್ಲಿ ಅರ್ಥವಿದೆ. ಕಾಲೇಜ್‌ ಸ್ಟುಡೆಂಟ್ಸ್‌ಗೆ ಪಡ್ಡೆ ಹುಡುಗರಿಗೆ ಹೇಳಿ ಮಾಡಿಸಿದ ಗೀತೆ ಇದು.

ಯಾರ್‌ ಏನಾರ ಅಂದ್‌ಕೊಳ್ಲಿ. ಒಮ್ಮೊಮ್ಮೆ ಸ್ಟಾರ್‌ ಸಿನಿಮಾದ ಹಾಡು ಕೂಡ ಗುನುಗೋ ಥರಾ ಇರಲ್ಲ. ಅಷ್ಟೇ ಅಲ್ಲ, ಒಮ್ಮೊಮ್ಮೆ ಸ್ಟಾರ್‌ ಅಲ್ಲದವರ ಸಿನಿಮಾ ಹಾಡಂತೂ ಗುನುಗಲೇಬೇಕು ಅಂತೆನಿಸದೇ ಇರಲ್ಲ…! ಇದೇನಪ್ಪಾ ಹೊಸಬರ ಸಿನಿಮಾದ ಹಾಡು ಅಷ್ಟೊಂದ್‌ ಚೆಂದಾಗೈತಾ? ಹೀಗೊಂದು ಪ್ರಶ್ನೆ ಕಾಡಬಹುದು. ನಿಜ ಹೇಳೋದಾದರೆ, ಹೊಸಬರ ಸಿನಿಮಾದ ಹಾಡು ಚೆನ್ನಾಗೈತೆ. ಬರೆದಿರೋ ಸಾಹಿತ್ಯವೂ ಈಗಿನ ಟ್ರೆಂಡ್‌ಗೆ ತಕ್ಕಂತೆ ಐತೆ. ಅದರಲ್ಲೂ ಅಂತದ್ದೊಂದು ಹಾಡಿಗೆ ಧ್ವನಿಯಾಗಿರೋರ ಹಾಡು ಇಷ್ಟವಾಗದೇ ಇರುತ್ತಾ? ಹೌದು, ಹೊಸಬರ “ಗಜಾನನ ಗ್ಯಾಂಗ್‌” ಸಿನಿಮಾದ ವಿಡಿಯೊ ಸಾಂಗ್‌ವೊಂದು ಆನಂದ್‌ ಆಡಿಯೊ ಯುಟ್ಯೂಬ್‌ ಚಾನೆಲ್‌ನಲ್ಲಿ ರಿಲೀಸ್‌ ಆಗಿದೆ. ಅ ಹಾಡಿಗೆ ಧ್ವನಿಯಾಗಿರೋದು ಪವರ್‌ ಸ್ಟಾರ್‌ ಪುನೀತ್‌ರಾಜಕುಮಾರ್.‌ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಒಳ್ಳೆಯ ವೀಕ್ಷಣೆ ಪಡೆದಿದ್ದು, ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ನಿರ್ದೇಶ ಅಭಿಷೇಕ್‌ ಶೆಟ್ಟಿ ಬರೆದ ” ನಾನ್‌ ಒಳ್ಳೇವ್ನೆ… ನನ್‌ ಟೈಮೇ ಸರಿ ಇಲ್ಲ… ಟೈಮ್‌ ಸರಿ ಐತೆ.. ಜೊತೆಗಿರೋರೇ ನೆಟ್ಟಗಿಲ್ಲ…” ಎಂದು ಶುರುವಾಗುವ ಈ ಹಾಡು ಸದ್ಯ ವೈರಲ್‌ ಆಗುತ್ತಿದೆ. ಈ ಹಾಡು ಕೇಳಿದವರಿಗೆ ಮತ್ತೆ ಮತ್ತೆ ಕೇಳಬೇಕು ಎನಿಸುವುದು ನಿಜ. ಇದೊಂದು ಪಕ್ಕಾ ಕಾಲೇಜ್‌ ಹುಡುಗರ ಸಾಂಗು. ಅಷ್ಟೇ ಅಲ್ಲ, ಪಡ್ಡೆ ಹೈಕ್ಳು ಕೂಡ ಒಂದೊಮ್ಮೆ ಕೇಳಿದಂರಂತೂ ಗುನುಗೋದು ದಿಟ. ಪುನೀತ್‌ ಅವರಿಂದಲೇ ಹಾಡಿಸಿರುವುದರಿಂದ ಹಾಡಿಗೊಂದು ಮೆರುಗು ಸಿಕ್ಕಿದೆ. “ಯಾಕೆ ಹೀಗೆ ಬದುಕು ಆಯ್ತು. ಕಾಣದೇ ಹೋದೆನಾ… ಬದುಕಿನಲ್ಲಿ ಖುಷಿಯೇ ಇಲ್ಲ. ಹೇಗೋ ಈ ಜೀವನ… ಹಿಂಗೆಲ್ಲಾ ಯಾಕಾಯ್ತೋ, ಈ ದುನಿಯಾ… ಅದೇಕೋ ನಮಗಿಲ್ಲ.. ಇದು ಖಾಲಿ ಹಾಳೆ ಜೀವನ…ʼ ಎನ್ನುವ ಪದಗಳಲ್ಲಿ ಅರ್ಥವಿದೆ. ಕಾಲೇಜ್‌ ಸ್ಟುಡೆಂಟ್ಸ್‌ಗೆ ಪಡ್ಡೆ ಹುಡುಗರಿಗೆ ಹೇಳಿ ಮಾಡಿಸಿದ ಗೀತೆ ಇದು.

ಈ ಗೀತೆಗೆ ರಾಗ ಸಂಯೋಜನೆ ಕೂಡ ಸೊಗಸಾಗಿದೆ. ಅಷ್ಟೇ ಅಂದವಾಗಿಯೇ ಚಿತ್ರೀಕರಿಸಲಾಗಿದೆ. ಒಂದು ಕಾಲೇಜ್‌ ಹುಡುಗನ ಲೈಫ್‌ ಸ್ಟೋರಿಯನ್ನು ಹೇಳುವಂತಹ ಗೀತೆ ಇದಾಗಿದ್ದು, ಸದ್ಯ ಜೋರು ಸದ್ದು ಮಾಡುತ್ತಿದೆ.
ಬೃಂದಾವನ್‌ ಎಂಟರ್‌ಪ್ರೈಸಸ್‌ ಮತ್ತು ಅದ್ವಿ ಕ್ರಿಯೇಶನ್ಸ್‌ ಬ್ಯಾನರ್‌ನಲ್ಲಿ ಮೂಡಿಬಂದಿರುವ ಈ ಸಿನಿಮಾ ಸದ್ಯ ರಿಲೀಸ್‌ಗೆ ಸಜ್ಜಾಗಿದೆ. ಈಗಾಗಲೇ “ನಮ್‌ ಗಣಿ ಬಿಕಾಂ ಪಾಸ್‌” ಸಿನಿಮಾ ನಿರ್ಮಿಸಿದ್ದ ನಿರ್ಮಾಪಕ ನಾಗೇಶ್‌ ಕುಮಾರ್. ಯು.ಎಸ್.‌ ಅವರು ಆ ಚಿತ್ರತಂಡದ ಮೇಲೆ ಭರವಸೆ ಇಟ್ಟು ಪುನಃ “ಗಜಾನನ ಗ್ಯಾಂಗ್‌” ಸಿನಿಮಾ ಮಾಡಿದ್ದಾರೆ.

ಇವರೊಂದಿಗೆ ಪ್ರಶಾಂತ್ ಕುಮಾರ್ ಶೆಟ್ಟಿ ಕೂಡ ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ. ಅದೇ ತಂಡ ಕಟ್ಟಿಕೊಂಡು ಕೆಲಸ ಮಾಡಿರುವ ಅಭಿಷೇಕ್‌ ಶೆಟ್ಟಿ, ಒಂದೊಳ್ಳೆಯ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

ನಟನೆ ಹಾಗೂ ನಿರ್ದೇಶನ‌ ಈ ಎರಡರಲ್ಲೂ ಅದ್ಭುತ ಕೆಲಸಗಾರ ಎಂಬ ನಂಬಿಕೆ ಉಳಿಸಿಕೊಂಡಿರುವ ನಿರ್ದೇಶಕ ಅಭಿಷೇಕ್ ಶೆಟ್ಟಿ “ಗಜಾನನ ಗ್ಯಾಂಗ್‌” ಸಿನಿಮಾವನ್ನು ತುಂಬಾ ಸೊಗಸಾಗಿಯೇ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಚಿತ್ರದಲ್ಲಿ ಶ್ರೀ ಹೀರೋ ಆಗಿದ್ದರೆ, ಅವರಿಗೆ ಅದಿತಿ ಪ್ರಭುದೇವ ನಾಯಕಿ. ಇನ್ನು, ಅಪ್ಪು ಹಾಡಿರುವ ಗೀತೆಗೆ ಪ್ರದ್ಯೋತ್ನ ರಾಗ ಸಂಯೋಜನೆ ಇದೆ.
ಈ ಹಿಂದೆ “ನಮ್‌ ಗಣಿ ಬಿಕಾಂ ಪಾಸ್” ಸಿನಿಮಾ ಒಂದೊಳ್ಳೆಯ ಸಂದೇಶ ಹೊತ್ತು ಬಂದಿತ್ತು. ಒಳ್ಳೇ ಹೆಸರು ತಂದು ಕೊಟ್ಟಿದ್ದರಿಂದ ನಿರ್ಮಾಪಕ ನಾಗೇಶ್‌ ಕುಮಾರ್‌ ಅವರಿಗೂ ಆ ಚಿತ್ರತಂಡದ ಮೇಲೆ ಪ್ರೀತಿ ಮತ್ತು ನಂಬಿಕೆ ಇತ್ತು. ಹಾಗಾಗಿ, ಅದೇ ತಂಡದೊಂದಿಗೆ “ಗಜಾನನ ಗ್ಯಾಂಗ್‌” ಸಿನಿಮಾ ಮಾಡಿದ್ದಾರೆ. ಆರಂಭದಿಂದಲೂ ಕ್ರೇಜ್‌ ಹುಟ್ಟಿಸಿದ್ದ ”ಗಜಾನನ ಅಂಡ್‌ ಗ್ಯಾಂಗ್‌” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು.

ಅಷ್ಟೇ ಒಳ್ಳೆಯ ತಂಡ ಕಟ್ಟಿಕೊಂಡ ನಿರ್ದೇಶಕ ಅಭಿಷೇಕ್‌ ಶೆಟ್ಟಿ, ಚಿತ್ರದ ಮೊದಲ ಲುಕ್‌ನಲ್ಲೇ ಮಜಾ ಎನಿಸುವ ಸಿನಿಮಾ ಇದು ಎಂಬ ಕುತೂಹಲ ಮೂಡಿಸಿದ್ದರು. ಈಗ “ನಾನ್‌ ಒಳೇವ್ನೇ, ನನ್‌ ಟೈಮೇ ಸರಿ ಇಲ್ಲ…” ಹಾಡೊಂದನ್ನು ಹೊರಬಿಟ್ಟು ಆ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದ್ದಾರೆ. ಈ ಹೊಸಬರ “ಗ್ಯಾಂಗ್‌” ಈಗ ಕಂಪ್ಲೀಟ್‌ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗುತ್ತಿದೆ. ಈಗಿನ ಟ್ರೆಂಡ್‌ಗೆ ತಕ್ಕಂತಹ ಸಿನಿಮಾ ಮಾಡಿರುವ ನಿರ್ದೇಶಕರು, ಯೂಥ್‌ ಟಾರ್ಗೆಟ್‌ ಮಾಡಿಯೇ ಸಿನಿಮಾ ಮಾಡಿದ್ದಾರೆ. ಎಲ್ಲಾ ವರ್ಗಕ್ಕೂ ಈ ಚಿತ್ರ ಇಷ್ಟವಾಗುತ್ತೆ ಎಂಬ ನಂಬಿಕೆಯೂ ಚಿತ್ರತಂಡಕ್ಕಿದೆ. ಅಂದಹಾಗೆ, ಈ ಹಿಂದೆ ಪ್ರೇಮಿಗಳ ದಿನದಂದು ಬಿಡುಗಡೆಯಾದ “ಲವ್ ಡೇ ” ಸಾಂಗ್ ಕೂಡ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಸದ್ಯ ಅಭಿಷೇಕ್‌ ಅವರ ಗ್ಯಾಂಗ್‌ ಹೇಗಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. “ಬಿಕಾಂ ಪಾಸ್‌” ಮಾಡಿರುವ ಹುಡುಗರು ಈಗ “ಗ್ಯಾಂಗ್‌” ಮೂಲಕವೇ ರ್ಯಾಂಕ್‌ ಬರಲಿ ಅನ್ನೋದು “ಸಿನಿಲಹರಿ” ಆಶಯ.

Categories
ಸಿನಿ ಸುದ್ದಿ

ಡಿಬಾಸ್‌ 24! ದರ್ಶನ್‌ ಗಾಂಧಿನಗರಕ್ಕೆ ಕಾಲಿಟ್ಟು ‌ಯಶಸ್ವಿ ಇಪ್ಪತ್ನಾಲ್ಕು ವರ್ಷ- ಗೆಳೆಯರಿಂದ ಹರಿದು ಬಂದ ಶುಭಹಾರೈಕೆ

ಸಿನಿಮಾ ರಂಗದಲ್ಲಿ ಅವಕಾಶ ಸಿಗೋದೇ ಕಷ್ಟ. ಸಿಕ್ಕರೂ ಅದನ್ನು ಉಳಿಸಿಕೊಂಡು ಹೋಗೋದು ಇನ್ನೂ ಕಷ್ಟ. ಅರೇ ಇದೇನಪ್ಪಾ ಕಷ್ಟದ ಬಗ್ಗೆ ಮಾತಾಡ್ತಾ ಇದಾರಲ್ಲ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ. ಹೌದು, ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವುದು ತುಂಬಾನೇ ಸವಾಲು. ಅಂತಹ ಹಲವಾರು ಸವಾಲು-ಕಷ್ಟಗಳನ್ನು ಎದುರಿಸಿ ನಿಂತವರು ಸಾಕಷ್ಟು ಮಂದಿ ಇಲ್ಲಿದ್ದಾರೆ. ಆ ಸಾಲಿಗೆ ಚಾಲೆಂಜಿಂಗ್‌ ದರ್ಶನ್‌ ಕೂಡ ಮೊದಲ ಸಾಲಲ್ಲಿ ಕಾಣುತ್ತಾರೆ. ಇಲ್ಲೀಗ ದರ್ಶನ್‌ ಅವರ ಬಗ್ಗೆ ಹೇಳುವುದಕ್ಕೂ ಕಾರಣವಿದೆ. ದರ್ಶನ್‌ ಅವರು ಕನ್ನಡ ಸಿನಿಮಾರಂಗಕ್ಕೆ ಎಂಟ್ರಿಯಾಗಿ ಇಂದಿಗೆ ಬರೋಬ್ಬರಿ 24 ವರ್ಷಗಳು ಕಳೆದಿವೆ. ಇನ್ನೊಂದು ವರ್ಷ ಪೂರೈಸಿದರೆ, ಅವರ ಸಿನಿಮಾ ರಂಗದ ಪಾದಾರ್ಪಣೆಗೆ ಬೆಳ್ಳಿಹಬ್ಬದ ಸಂಭ್ರಮ ಆಚರಿಸುತ್ತಾರೆ. ಸದ್ಯ 24 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ದರ್ಶನ್‌ ಅವರಿಗೆ ಅಪಾರ ಮೆಚ್ಚುಗೆಯ ಮಾತುಗಳೇ ಕೇಳಿಬರುತ್ತಿವೆ.


ಆರಂಭದಲ್ಲಿ ಕೇವಲ ಲೈಟ್‌ಬಾಯ್‌ ಆಗಿ ಕಾರ್ಯನಿರ್ವಹಿಸುತ್ತಲೇ ಇಂದು, ಬಹು ಬೇಡಿಕೆಯ ನಟ ಎನಿಸಿಕೊಂಡಿರುವ ದರ್ಶನ್‌, ನಿಜಕ್ಕೂ ಅವರು ಕನ್ನಡ ಚಿತ್ರರಂಗದ ಮಟ್ಟಿಗೆ ಬಾಕ್ಸಾಫೀಸ್ ಸುಲ್ತಾನ್!‌ ಆರಂಭದ ದಿನಗಳಲ್ಲಿ ಸಾಕಷ್ಟು ಕಷ್ಟಪಟ್ಟಿರುವ ದರ್ಶನ್‌, ಹಗಲಿರುಳು ಶ್ರಮಿಸಿದ್ದುಂಟು. ಖಳನಟರೆಂದೇ ಖ್ಯಾತಿ ಪಡೆದ ತೂಗದೀಪ ಶ್ರೀನಿವಾಸ್‌ ಅವರ ಪುತ್ರರಾಗಿ, ಅವರು ಇಲ್ಲಿ ಅನೇಕ ಏಳು-ಬೀಳು ಕಂಡಿದ್ದುಂಟು. ಒಂದೊಂದೇ ಯಶಸ್ಸಿನ ಮೆಟ್ಟಿಲು ಏರಿ ಬಂದ ದರ್ಶನ್, ಇಂದು ಸ್ಟಾರ್‌ ನಟ ಎನಿಸಿಕೊಂಡಿದ್ದಾರೆ. ಇದರ ಹಿಂದೆ ನೂರೆಂಟು, ನೋವು-ಅವಮಾನಗಳೂ ಇವೆ. ಅವರ ಹಠ ಮತ್ತು ಛಲದಿಂದಲೇ ಇಲ್ಲಿಯವರೆಗೆ 24 ವರ್ಷಗಳನ್ನು ಪೂರೈಸಿರುವ ದರ್ಶನ್‌, ತಾನು ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ ಕೂಡ.


ಸದ್ಯ ಗಾಂಧಿನಗರಕ್ಕೆ ಕಾಲಿಟ್ಟು ೨೪ ವರ್ಷ [ಪೂರೈಸಿರುವ ಸಂತಸ ದರ್ಶನ್‌ ಅವರದು. ಅವರ ಫ್ಯಾನ್ಸ್‌ ಕೂಡ ಈ ಸಂಭ್ರಮವನ್ನು ದೊಡ್ಡ ಮಟ್ಟದಲ್ಲೇ ಆಚರಿಸಿಕೊಳ್ಳುತ್ತಿದ್ದಾರೆ. ದರ್ಶನ್ ತಮ್ಮ ಗೆಳೆಯರ ಜೊತೆ ಸೇರಿ 24 ವರ್ಷದ ಸಂತಸವನ್ನು ಹಂಚಿಕೊಂಡಿದ್ದಾರೆ.

ಡಿ ಬಾಸ್ 24 ವರ್ಷದ ಪಯಣವನ್ನು ಅವರ ‌ ಸ್ನೇಹಿತರು ಅದ್ದೂರಿಯಾಗಿ ಆಚರಿಸಿದ್ದಾರೆ. ಕೇಕ್ ಕತ್ತರಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ವಿನೋದ್‌ ಪ್ರಭಾಕರ್‌, ರಾಕ್ ಲೈನ್ ವೆಂಕಟೇಶ್, ಸೌಂದರ್ಯ ಜಗದೀಶ್ ಸೇರಿದಂತೆ ಸಂಭ್ರಮಾಚರಣೆಯಲ್ಲಿ ದರ್ಶನ್ ಆಪ್ತರು ಭಾಗಿಯಾಗಿ ಶುಭಕೋರಿದ್ದಾರೆ.

Categories
ಸಿನಿ ಸುದ್ದಿ

ವಿಜಯಾನಂದ ಮೋಷನ್‌ ಪೋಸ್ಟರ್‌ ಲಾಂಚ್‌ ; ಕುತೂಹಲ ಮೂಡಿಸುತ್ತಿದೆ ವಿಆರ್‌ ಎಲ್‌ ಸಾಮ್ರಾಜ್ಯದ ರೋಚಕ ಕಥೆ!

ಒಂದು ಲಾರಿಯ ಬೆನ್ನೇರಿ ಪ್ರಪಂಚವನ್ನೇ ತನ್ನೆಡೆಗೆ ತಿರುಗಿಸಿಕೊಂಡ ಸಾಧಕನ ದಂತ ಕತೆ…

ವಿಆರ್‌ಎಲ್‌ ಫಿಲಂಸ್‌ ಪ್ರೊಡಕ್ಷನ್‌ ನಿರ್ಮಾಣದ ಮೊದಲ ಬಹುನಿ ರೀಕ್ಷಿತ ಚಿತ್ರ ʼವಿಜಯಾನಂದʼ ಈಗ ಮೋಷನ್‌ ಟೀಸರ್‌ ಮೂಲಕ ಸೌಂಡ್‌ ಮಾಡುತ್ತಿದೆ. ರಿಷಿಕಾ ಶರ್ಮಾ ನಿರ್ದೇಶನ ಹಾಗೂ ನಿಹಾಲ್‌ ರಜಪೂತ್‌ ಅಭಿನಯದ ʼವಿಜಯಾನಂದʼ ಚಿತ್ರದ ಮೋಷನ್‌ ಟೀಸರ್‌ ಗುರುವಾರ ಲಾಂಚ್‌ ಆಗಿದೆ. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ವಿಆರ್‌ ಎಲ್‌ ಸಂಸ್ಥೆಯ ಮಾಲೀಕ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ್‌ ಅವರ ಜೀವನ ಆಧರಿತ ಸಿನಿಮಾ , ಆಗಸ್ಟ್‌ ೨ ರಂದು ಇದರ ಟೈಟಲ್‌ ಲಾಂಚ್‌ ಜತೆಗೆ ಫಸ್ಟ್‌ ಲುಕ್‌ ಪೋಸ್ಟರ್‌ ಹೊರ ಬಂದಿತ್ತು. ವಿಜಯ್‌ ಸಂಕೇಶ್ವರ್‌ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ವಿಆರ್‌ಎಲ್‌ ಸಮೂ ಹ ಸಂಸ್ಥೆಗಳ ಮ್ಯಾನೇಜಿಂಗ್‌ ಡೈರೆಕ್ಟರ್‌ ಆನಂದ್‌ ಸಂಕೇಶ್ವರ ಅವರು ಈ ಚಿತ್ರದ ಫಸ್ಟ್‌ ಲುಕ್‌ ಲಾಂಚ್‌ ಮಾಡಿದ್ದರು. ಇದೀಗ ಮೋಷನ್‌ ಪೋಸ್ಟ ರ್‌ ಲಾಂಚ್‌ ಆಗಿದ್ದು, ಸಿನಿಮಾ ಪ್ರಿಯರಲ್ಲಿ ಹೊಸ ಭರವಸೆ ಮೂಡಿಸಿದೆ.

ಲಾಜಿಸ್ಟಿಕ್‌ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹೆಸರು ವಿಆರ್‌ಎಲ್. ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ಇಡೀ ಭಾರತದಲ್ಲಿಯೇ ವಿಆರ್‌ ಎಲ್‌ ಜನಜನಿತ. ಇಷ್ಟು ದೊಡ್ಡ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ವ್ಯಕ್ತಿ ವಿಜಯ್ ಸಂಕೇಶ್ವರ.‌ ಅವರ ಸಾಧನೆಯ ಹಿಂದಿನ ರೋಚಕ ಕಥೆಯನ್ನು ಸಿನಿಮಾ ರೂಪದಲ್ಲಿ ತೆರೆಗೆ ತರುವ ಪ್ರಯತ್ನವೇ ʼವಿಜಯಾನಂದ ʼಸಿನಿಮಾ. ವಿಆರ್‌ ಎಲ್‌ ಫಿಲಂ ಪ್ರೊಡಕ್ಷನ್‌ ಲಾಂಛನದಲ್ಲಿ ವಿಜಯ್‌ ಸಂಕೇಶ್ವರ ಅವರ ಪುತ್ರ ಆನಂದ್‌ ಸಂಕೇಶ್ವರ ಇದರ ನಿರ್ಮಾಪಕರು.

ಯುವ ನಿರ್ದೇಶಕಿ ರಿಷಿಕಾ ಶರ್ಮಾ ಈ ಚಿತ್ರದ ನಿರ್ದೇಶಕರು. ಕಳೆದ ಎಂಟು ವರ್ಷಗಳಿಂದ ಸಿನಿಮಾ ರಂಗದಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭದ ಅವರಿಗಿದೆ. ಹಾಗೆಯೇ ʼಟ್ರಂಕ್‌ ʼ ಹೆಸರಿನ ಚಿತ್ರದ ಮೂಲಕ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದು, ಇದೀಗ ಅದೃಷ್ಟವೇ ಎನ್ನುವ ಹಾಗೆ ವಿಆರ್‌ ಎಲ್‌ ಸಂಸ್ಥೆಯ ಮಾಲೀಕ ವಿಜಯ್‌ ಸಂಕೇಶ್ವರ ಅವರ ಬಯೋಫಿಕ್‌ ಅನ್ನು ತೆರೆಗೆ ತರುವ ಅವಕಾಶ ಸಿಕ್ಕಿದೆ.

https://www.youtube.com/watch?v=jfTVhiwGhFY

ಇನ್ನು ವಿಜಯಾನಂದ ಚಿತ್ರದಲ್ಲಿ ಕಥಾ ನಾಯಕ ವಿಜಯ್‌ ಸಂಕೇಶ್ವರ್‌ ಅವರ ಪಾತ್ರಕ್ಕೆ ಯುವ ನಟ ನಿಹಾನ್‌ ರಜಪೂತ್‌ ಬಣ್ಣ ಹಚ್ಚುತ್ತಿದ್ದಉ, ಇದೀಗ ಮೋಷನ್‌ ಪೋಸ್ಟರ್‌ ನಲ್ಲಿ ಅವರ ಮೊದಲ ಲುಕ್‌ ರಿವೀಲ್‌ ಆಗಿದೆ.


ಮಲಯಾಳಂ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕ ಗೋಪಿ ಸುಂದರ್‌ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಇನ್ನು ಕಡಲ ತೀರದ ಭಾರ್ಗವ ಮತ್ತು ಮಹಿರ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ ಕೀರ್ತನ ಪೂಜಾರಿ ಈ ಚಿತ್ರಕ್ಕೂ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂ ಡಿದ್ದಾರೆ. ಹೇಮಂತ್‌ ಕುಮಾರ್‌ ಸಂಕಲನ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದ್ದು, ಸೆಪ್ಟೆಂಬರ್‌ ನಲ್ಲಿ ಚಿತ್ರೀಕರಣ ಶುರುವಾಗುವ ಸಾಧ್ಯತೆಗಳಿವೆ ಎನ್ನುತ್ತಿದೆ ಚಿತ್ರತಂಡ.

Categories
ಸಿನಿ ಸುದ್ದಿ

ಅಮರ ಪ್ರೇಮಿ ಅರುಣ್‌! ಮೊದಲ ಹಂತ ಮುಗಿಸಿದ ಖುಷಿಯಲ್ಲಿ ಹೊಸಬರು…

ಅಮರ ಪ್ರೇಮಿ ಅರುಣ್ ಸಿನಿಮಾದ ವಿಶೇಷ ಪಾತ್ರದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿರುವ ಪದ್ಮಶ್ರೀ ಜೋಗತಿ ಮಂಜಮ್ಮ ನಟಿಸಿದ್ದಾರೆ…

ಒಲವು ಸಿನಿಮಾ ಸಂಸ್ಥೆಯು ನಿರ್ಮಿಸುತ್ತಿರುವ ʼಅಮರ ಪ್ರೇಮಿ ಅರುಣ್ʼ ಸಿನಿಮಾ, ತನ್ನ ಮೊದಲ ಸುತ್ತಿನ ಚಿತ್ರೀಕರಣವನ್ನು ಬಳ್ಳಾರಿ ನಗರದಲ್ಲಿ ಮುಗಿಸಿದ್ದು, ಈಗ ಮತ್ತೆ ಬಳ್ಳಾರಿಯಲ್ಲಿಯೇ ನಡೆಯಲಿರುವ ಎರಡನೇ ಸುತ್ತಿನ ಚಿತ್ರೀಕರಣಕ್ಕೆ ತಂಡ ತಯಾರಾಗುತ್ತಿದೆ.

ಬಳ್ಳಾರಿ ನಗರದ ಪ್ರಮುಖ ಜಾಗಗಳಲ್ಲಿ ನಾಯಕ ಹರಿಶರ್ವಾ, ನಾಯಕಿ ದೀಪಿಕಾ ಆರಾಧ್ಯ ಸೇರಿದಂತೆ ಧರ್ಮಣ್ಣ, ಭೂಮಿಕಾ ಭಟ್, ಮಹೇಶ್ ಬಂಗ್, ಬಲರಾಜ್ವಾಡಿ, ರೋಹಿಣಿ, ವಿಜಯಲಕ್ಷ್ಮಿ ಮತ್ತು ಅನೇಕ ಕಲಾವಿದರ ನಟನೆಯಲ್ಲಿ ದೃಶ್ಯಗಳನ್ನು ಚಿತ್ರಿಸಲಾಗಿದೆ.

ʼಅಮರ ಪ್ರೇಮಿ ಅರುಣ್ʼ ಸಿನಿಮಾ ವಿಶೇಷ ಪಾತ್ರಗಳಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿರುವ ಪದ್ಮಶ್ರೀ ಜೋಗತಿ ಮಂಜಮ್ಮನವರು ಮತ್ತು ಖ್ಯಾತ ರಂಗಕರ್ಮಿ ಹುಲಿಗೆಪ್ಪ ಕಟ್ಟಿಮನಿ ಅವರು ನಟಿಸಿದ್ದಾರೆ.

ಚಿತ್ರಕ್ಕೆ ಪ್ರವೀಣ್ ಕುಮಾರ್ ಜಿ ಅವರ ರಚನೆ-ನಿರ್ದೇಶನ, ಪ್ರವೀಣ್ ಎಸ್ ಅವರ ಛಾಯಾಗ್ರಹಣ, ಕಿರಣ್ ರವೀಂದ್ರನಾಥ್ ಅವರ ಸಂಗೀತ, ನಿರಂಜನ್ ದೇವರ ಮನೆಯವರ ಸಂಕಲನ, ಮಂಡ್ಯ ಮಂಜು ಅವರ ಕಾರ್ಯಕಾರಿ ನಿರ್ಮಾಣವಿದೆ. ಜಯಂತ ಕಾಯ್ಕಿಣಿ ಮತ್ತು ಯೋಗರಾಜ್ ಭಟ್ ಅವರ ಸಾಹಿತ್ಯವಿದೆ.

Categories
ಸಿನಿ ಸುದ್ದಿ

ಜೋಗಿ ಪ್ರೇಮ್ ಚಿತ್ರದಲ್ಲಿ ಹಳ್ಳಿ ಹೈದ ಹನುಮಂತ ಗಾನ; ಕೊಟ್ಟ ಮಾತು ಉಳಿಸಿಕೊಂಡ್ರು ಅರ್ಜುನ್ ಜನ್ಯಾ !

ಹೊತ್ತಿಲ್ಲದ ಹೊತ್ತು, ತುತ್ತಿಲ್ಲದೇ ನಿಂತು,ಕಾದಿದ್ದೆ ನಿನಗಾಗಿ ಯಾಕೇ, ಹೇಳು ಯಾಕೇ, ಹೇಳು ಯಾಕೇ.ಆಣೆಯ ಇಟ್ಟು ಭಾಷೆಯ ಕೊಟ್ಟು, ಹಿಂದಿಂದೆ ಬಂದಿದ್ದು ಯಾಕೇ,ಹೇಳು ಯಾಕೇ, ಹೇಳು ಯಾಕೇ, ಈ ರೀತಿ ಸಾಗುವ ಏಕ್ ಲವ್ ಯಾ’ ಚಿತ್ರದ ಹಾಡು ಸುನೀಲ್ ಹಾಗೂ ಹನುಮನ ಕಂಠಸಿರಿಯಲ್ಲಿ ಮೂಡಿ ಬರಲಿದೆ…

  • ವಿಶಾಲಾಕ್ಷಿ

ಹೊಡಿರೀ ಹಲಗಿ.. ಹಚ್ಚಿ ಪಟಾಕಿ… ಹಳ್ಳಿಹೈದ ಹನುಮಂತಣ್ಣ ಮತ್ತೆ ಅಖಾಡಕ್ಕೆ ಇಳಿದಿದ್ದಾನೆ. ಮ್ಯೂಸಿಕ್ ಲೋಕದಲ್ಲಿ ಮ್ಯಾಜಿಕ್ ಮಾಡೋದಕ್ಕೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾನೆ. ಅಂದ್ಹಾಗೇ, ಚಿಲ್ಲೂರು ಚಿಂಗಾರಿಯನ್ನು ಮತ್ತೆ ಕಣಕ್ಕೆ ಇಳಿಸಿರುವುದು ಡೈರೆಕ್ಟರ್ ಜೋಗಿ ಪ್ರೇಮ್ ಹಾಗೂ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ . ಹಾವೇರಿ ಜಿಲ್ಲೆ ಸವಣೂರ್ ತಾಲೂಕ್ ಬಡ್ನಿ ತಾಂಡಾದಲ್ಲಿ ಮತ್ತೆ ಕುರಿ ಕಾಯುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಹನುಮನನ್ನು ಮತ್ತೆ ಬೆಂಗಳೂರಿಗೆ ಕರೆತಂದಿದ್ದಾರೆ. ಜನ್ಯಾಜೀ ಫೋನ್ ಹೋಗಿದ್ದೇ ತಡ ಬಡ್ನಿ ಹೈದ ಹನುಮ ಅಂಗಿ-ಲುಂಗಿ ತೊಟ್ಟು ಹೆಗಲಿಗೊಂದು ಟವಲ್ ಹಾಕಿಕೊಂಡು ಬೆಂಗಳೂರಿಗೆ ಬಂದಿಳಿದಿದ್ದಾನೆ.

ಸವಣೂರ್ ಸೂಪರ್‌ಸ್ಟಾರ್ ಎನಿಸಿಕೊಂಡಿದ್ದ ಹನುಮಂತನಿಗೆ ಅರ್ಜುನ್ ಜನ್ಯಾ ತಮ್ಮ ಸಿನಿಮಾದಲ್ಲಿ ಒಂದು ಅವಕಾಶ ಕೊಡ್ತೀನಿ ಅಂತ ಸಾರೆಗಾಮ' ಅಂಗಳದಲ್ಲೇ ಅನೌನ್ಸ್ ಮಾಡಿದ್ದರು. ಪ್ರೇಮ್ ನಿರ್ದೇಶನದ ಸಿನೆಮಾದಲ್ಲಿ ಸಾರೆಗಾಮ ರನ್ನರ್ ಅಪ್ ಹನುಮನಿಗೆ ಹಾಡುವ ಅವಕಾಶ ಸಿಗಲಿದೆ ಎನ್ನುವ ಸುದ್ದಿಯೊಂದು ಈ ಹಿಂದೆ ಗಾಂಧಿನಗರದಲ್ಲಿ ಗುಲ್ಲೆದ್ದಿತ್ತು. ಇದೀಗ, ಆ ಸುದ್ದಿ ನಿಜವಾಗಿದೆ. ಹಳ್ಳಿಹಕ್ಕಿ ಹನುಮನಿಗೆ ಜೋಗಿ ಪ್ರೇಮ್ ನಿರ್ದೇಶನದಏಕ್ ಲವ್’ ಯಾ’ ಚಿತ್ರದಲ್ಲಿ ಹಾಡುವ ಚಾನ್ಸ್ ಸಿಕ್ಕಿದೆ. ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸ್ ಮಾಡಿದ್ದು, `ಸಾರೆಗಾಮ’ ಸೀಸನ್ 13ರ ವಿನ್ನರ್ ಸುನೀಲ್ ಜೊತೆ ಚಿಲ್ಲೂರು ಚಿಂಗಾರಿ ಹನುಮಂತ ಕಂಠಕುಣಿಸಿದ್ದಾರೆ.

ಹೊತ್ತಿಲ್ಲದ ಹೊತ್ತು, ತುತ್ತಿಲ್ಲದೇ ನಿಂತು.. ಕಾದಿದ್ದೆ ನಿನಗಾಗಿ ಯಾಕೇ.. ಹೇಳು ಯಾಕೇ.. ಹೇಳು ಯಾಕೇ.. ಆಣೆಯ ಇಟ್ಟು ಭಾಷೆಯ ಕೊಟ್ಟು.. ಹಿಂದಿಂದೆ ಬಂದಿದ್ದು ಯಾಕೇ.. ಹೇಳು ಯಾಕೇ.. ಹೇಳು ಯಾಕೇ.. ಈ ರೀತಿಯಾಗಿ ಸಾಗುವ ಏಕ್ ಲವ್ ಯಾ’ ಚಿತ್ರದ ಹಾಡು ಸುನೀಲ್ ಹಾಗೂ ಹನುಮನ ಕಂಠಸಿರಿಯಲ್ಲಿ ಮೂಡಿಬರಲಿದೆ. ಇತ್ತೀಚೆಗೆ ಅರ್ಜುನ್ ಜನ್ಯಾ ಸ್ಟುಡಿಯೋದಲ್ಲಿ ಈ ಹಾಡಿನ ರೆಕಾರ್ಡಿಂಗ್ ಕಾರ್ಯ ಮುಗಿದಿದೆ. ಅದರ ಝಲಕ್‌ನ ಡೈರೆಕ್ಟರ್ ಪ್ರೇಮ್ ಹಾಗೂ ಜನ್ಯಾಜೀಯವರು ತಮ್ಮ ಸೋಷಿಯಲ್ ಪೇಜ್‌ಗಳಲ್ಲಿ ಹಂಚಿಕೊಂಡಿದ್ದಾರೆ.

ಇದನ್ನು ನೋಡಿ ಬಡ್ನಿಭೀಮನ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಂಡಂತಹ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾಗೆ ಉಘೇ ಉಘೇ ಎನ್ನುತ್ತಿದ್ದಾರೆ. ಸೆನ್ಸೇಷನಲ್ ಡೈರೆಕ್ಟರ್ ಸಿನಿಮಾದಲ್ಲಿ ಹನುಮ ಹಾಡಿದ್ದಾಯ್ತು ಈ ಹಾಡಿನಿಂದ ಹಳ್ಳಿ ಹೈದನ ಸಂಗೀತ ಪಯಣಕ್ಕೆ ಕಿಕ್‌ಸ್ಟಾರ್ಟ್ ಸಿಗುವಂತಾಗಲಿ, ಬಣ್ಣದ ಲೋಕದಲ್ಲಿ ಬಡ್ನಿಭೀಮನ ಜವಾರಿ ಬಂಡಿ ಸಾಗಲಿ ಅನ್ನೋದೇ ಸಿನಿಲಹರಿ ಆಶಯ

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕೆಜಿಎಫ್ ಚಾಪ್ಟರ್-2 ಗೆ ಓಟಿಟಿ ಬಿಗ್ ಆಫರ್; ನೋ ವೇ ಚಾನ್ಸೇ ಇಲ್ಲ ಅಂದ್ರಂತೆ ರಾಕಿಭಾಯ್!

ಚಿನ್ನದ ಸಾಮ್ರಾಜ್ಯದ ಅಧಿಪತಿಗಳಿಗೆ ಆಫರ್ ಕೊಡ್ತಿರಾ, ಕೋಟಿ ಆಸೆ ತೋರಿಸಿ ಕ್ಯಾಚ್ ಹಾಕಿಕೊಳ್ಳೋ ದುರಾಸೆ ಬುಟ್ಬುಡಿ…

ಇಡೀ ಜಗತ್ತೇ ಎದುರು ನೋಡ್ತಿರುವ ಕನ್ನಡದ ಹೆಮ್ಮೆಯ ಸಿನಿಮಾ ಅಂದರೆ ಅದು ಎಲ್ಲರಿಗೂ ಗೊತ್ತು
ಕೆಜಿಎಫ್ ಚಾಪ್ಟರ್ 2. ಪ್ರಶಾಂತ್ ನೀಲ್‌ ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಪಾರ್ಟ್ 1 ಬಿಡುಗಡೆಯಾಗಿ ಎರಡೂವರೆ ವರ್ಷಗಳು ಉರುಳಿವೆ. ಆದರೂ ಕೂಡ ಈ‌ ಸಿನಿಮಾದ ಕ್ರೇಜ್ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ದಿನಗಳು ಉರುಳಿದಂತೆ ಕೆಜಿಎಫ್ ಕ್ರೇಜ್‌ ಹೆಚ್ಚಾಗುತ್ತಲೇ ಇದೆ. ಆಲ್ ಓವರ್ ಇಂಡ್ಯಾ ಕೆಜಿಎಫ್ ಚಾಪ್ಟರ್ 2 ರಿಲೀಸ್ ಯಾವಾಗ ಅಂತ ಕೇಳ್ತಿದ್ದಾರೆ. ವಲ್ಡ್ ವೈಡ್ ಕನ್ನಡದ ಚಿತ್ರಕ್ಕಿರುವ ಬೇಡಿಕೆಯನ್ನು ಗಮನಿಸಿದ ಓಟಿಟಿ ಕೆಜಿಎಫ್ ಚಾಪ್ಟರ್ 2 ಮೇಲೆ ಕಣ್ಣಿಟ್ಟು ಬಿಗ್ ಆಫರ್ ಮಾಡಿದೆಯಂತೆ.

ಹೌದು, ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ಭಾರೀ ಬೇಡಿಕೆ ಇದೆ. ಆಚೆ-ಈಚೆ-ನೀಚೆ- ಪೀಚೆ ಮಾತ್ರವಲ್ಲ ದೇಶ- ವಿದೇಶದ ಸಿನಿಮಾ ಮಂದಿ ಕೂಡ ಕನ್ನಡದ‌ ಕೆಜಿಎಫ್ ನ ನಮ್ಮ ಅಂಗಳದಲ್ಲಿ‌ ರಿಲೀಸ್ ಮಾಡೋಕೆ ಅವಕಾಶ ಕೊಡಿ ಅಂತ ಹೊಂಬಾಳೆ ನಿರ್ಮಾಣ ಸಂಸ್ಥೆಯ ದುಂಬಾಲು ಬಿದ್ದಿದ್ದಾರೆ. ಈ ಮಧ್ಯೆ ಲೀಡಿಂಗ್ ನಲ್ಲಿರುವ ಜನಪ್ರಿಯ ಓಟಿಟಿ ಸಂಸ್ಥೆ ಕೆಜಿಎಫ್ ಚಾಪ್ಟರ್ ೨ ಗೆ 250 ಕೋಟಿ ಆಫರ್ ಮಾಡಿದೆಯಂತೆ. ಆದರೆ, ಈ ಆಫರ್ ನ ರಾಕಿಭಾಯ್ ಎಡಗೈ ನಲ್ಲಿ ಸರಿಸಿದ್ದಾರಂತೆ.

ಕೊರೊನಾ ಅಟ್ಟಹಾಸ ಮುಗಿಯುತ್ತಿಲ್ಲ, ಚಿತ್ರಮಂದಿರಗಳು‌ ಬಾಗಿಲು ತೆರೆಯುತ್ತಿಲ್ಲ.‌ ಶೇಕಡ 100 ರಷ್ಟು ಆಸನ ಭರ್ತಿಗೆ ಸರ್ಕಾರ ಇನ್ನೂ ಅನುಮತಿ ಕೊಟ್ಟಿಲ್ಲ. ಹೀಗಾಗಿ ಕೆಜಿಎಫ್ ಸೇರಿದಂತೆ ಬಹುತೇಕ ಎಲ್ಲಾ ದೊಡ್ಡ ಸಿನಿಮಾಗಳು ಹಾಗೂ ಕಡಿಮೆ ಬಜೆಟ್ ನ ಹೊಸಬರ ಚಿತ್ರಗಳು ತೆರೆಗೆ ತರುವುದಕ್ಕೆ ಚಿತ್ರತಂಡಗಳು ಹಿಂದೇಟು‌ ಹಾಕುತ್ತಿವೆ. ಇದೇ ಟೈಮ್ ನ‌ ಸದುಪಯೋಗ ಪಡಿಸಿಕೊಳ್ಳಬೇಕು ಅಂತ ಜನಪ್ರಿಯ ಓಟಿಟಿ ಸಂಸ್ಥೆ 250 ಕೋಟಿ ಕೊಡ್ತೀವಿ ನೇರವಾಗಿ ಕೆಜಿಎಫ್ ಚಾಪ್ಟರ್ 2 ನ ಓಟಿಟಿ ವೇದಿಕೆಯಲ್ಲಿ ‌ರಿಲೀಸ್ ಮಾಡ್ತೀರಾ ಅಂತ ಕೇಳಿಕೊಂಡಿದ್ದಾರೆ. ಇದಕ್ಕೆ ಹೊಂಬಾಳೆ ಬ್ಯಾನರ್ ನ ಓನರ್ ಏನಂದ್ರೋ ಗೊತ್ತಿಲ್ಲ ಆದರೆ, ರಾಕಿಭಾಯ್ ಮಾತ್ರ ನೋ‌ ವೇ ಚಾನ್ಸೇ ಇಲ್ಲ ಗುರು ಎಂದಿದ್ದಾರಂತೆ.

ಆಲ್ ಓವರ್ ಇಂಡ್ಯಾದಲ್ಲಿರುವ ನನ್ನ ಫ್ಯಾನ್ಸ್ ಹಾಗೂ ಕೆಜಿಎಫ್ ಸಿನಿಮಾಗಾಗಿ ಕಾದು ಕುಳಿತಿರುವ ಪ್ರೇಕ್ಷಕ ಮಹಾಷಯರು ಕೆಜಿಎಫ್ ಚಾಪ್ಟರ್-2 ನ ಥಿಯೇಟರ್ ನಲ್ಲೇ‌ ನೋಡಬೇಕು, ಬಿಗ್ ಸ್ಕ್ರೀನ್ ನಲ್ಲೇ ನಮ್ಮ ಸಿನಿಮಾನ‌ ಕಣ್ತುಂಬಿಕೊಳ್ಳಬೇಕು. ಇಂತಹದ್ದೊಂದು ಟೈಮ್ ಬರುವುವವರೆಗೂ ಕಾಯ್ತೇವೆ ಹೊರೆತು ಯಾವುದೇ ಕಾರಣಕ್ಕೂ ಓಟಿಟಿಯಲ್ಲಿ ರಿಲೀಸ್ ಮಾಡೋದಿಲ್ಲ‌ ಅಂತ ನ್ಯಾಷನಲ್‌ಸ್ಟಾರ್ ರಾಕಿಭಾಯ್ ತೀರ್ಮಾನ ಮಾಡಿದ್ದಾರಂತೆ.‌ ಹೀಗಂತ ತಮಿಳಿನ ಖ್ಯಾತ ಅಂಕಣಕಾರರು ಹಾಗೂ ಲೇಖಕರಾಗಿ ಗುರ್ತಿಸಿ ಕೊಂಡಿರುವ ಮನೋಬಾಲ ಅವರು ತಮ್ಮ ಟ್ವೀಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಈ‌ ಸುದ್ದಿ ಕೇಳಿ ರಾಕಿಂಗ್ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಥಿಯೇಟರ್ ನಲ್ಲಿ ಕೆಜಿಎಫ್ ರಿಲೀಸ್ ಆಗಬೇಕು ಎನ್ನುವ ರಾಕಿ ನಿರ್ಧಾರಕ್ಕೆ ಎಲ್ಲರೂ ಜೈಕಾರ ಹಾಕುತ್ತಿದ್ದಾರೆ. ಅಧೀರ ಹಾಗೂ ರಾಕಿ ಕಾಳಗ ಹೇಗಿರಬಹುದು ಅಂತ ಲೆಕ್ಕಚ್ಚಾರ ಹಾಕುತ್ತಾ ಕೆಜಿಎಫ್ ಸಾಮ್ರಾಜ್ಯನ ಕಣ್ಮುಂದೆ ತಂದುಕೊಳ್ತಿದ್ದಾರೆ. ಎನಿವೇ,
ಸಿನಿಮಾ ಬಿಡುಗಡೆ ಯಾವಾಗ ಎನ್ನುವ ಬಿಗ್ ಅಪ್ ಡೇಟ್ ಶೀಘ್ರದಲ್ಲೇ ರಿವೀಲ್ ಆಗಲಿದೆ. ಅಲ್ಲಿವರೆಗೂ ವೇಯ್ಟ್ ಅಂಡ್ ಸೀ

ವಿಶಾಲಾಕ್ಷಿ ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!