ಒಂದು ಲಾರಿಯ ಬೆನ್ನೇರಿ ಪ್ರಪಂಚವನ್ನೇ ತನ್ನೆಡೆಗೆ ತಿರುಗಿಸಿಕೊಂಡ ಸಾಧಕನ ದಂತ ಕತೆ…
ವಿಆರ್‌ಎಲ್ ಫಿಲಂಸ್ ಪ್ರೊಡಕ್ಷನ್ ನಿರ್ಮಾಣದ ಮೊದಲ ಬಹುನಿ ರೀಕ್ಷಿತ ಚಿತ್ರ ʼವಿಜಯಾನಂದʼ ಈಗ ಮೋಷನ್ ಟೀಸರ್ ಮೂಲಕ ಸೌಂಡ್ ಮಾಡುತ್ತಿದೆ. ರಿಷಿಕಾ ಶರ್ಮಾ ನಿರ್ದೇಶನ ಹಾಗೂ ನಿಹಾಲ್ ರಜಪೂತ್ ಅಭಿನಯದ ʼವಿಜಯಾನಂದʼ ಚಿತ್ರದ ಮೋಷನ್ ಟೀಸರ್ ಗುರುವಾರ ಲಾಂಚ್ ಆಗಿದೆ. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ವಿಆರ್ ಎಲ್ ಸಂಸ್ಥೆಯ ಮಾಲೀಕ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ್ ಅವರ ಜೀವನ ಆಧರಿತ ಸಿನಿಮಾ , ಆಗಸ್ಟ್ ೨ ರಂದು ಇದರ ಟೈಟಲ್ ಲಾಂಚ್ ಜತೆಗೆ ಫಸ್ಟ್ ಲುಕ್ ಪೋಸ್ಟರ್ ಹೊರ ಬಂದಿತ್ತು. ವಿಜಯ್ ಸಂಕೇಶ್ವರ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ವಿಆರ್‌ಎಲ್ ಸಮೂ ಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಆನಂದ್ ಸಂಕೇಶ್ವರ ಅವರು ಈ ಚಿತ್ರದ ಫಸ್ಟ್ ಲುಕ್ ಲಾಂಚ್ ಮಾಡಿದ್ದರು. ಇದೀಗ ಮೋಷನ್ ಪೋಸ್ಟ ರ್ ಲಾಂಚ್ ಆಗಿದ್ದು, ಸಿನಿಮಾ ಪ್ರಿಯರಲ್ಲಿ ಹೊಸ ಭರವಸೆ ಮೂಡಿಸಿದೆ.
ಲಾಜಿಸ್ಟಿಕ್ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹೆಸರು ವಿಆರ್‌ಎಲ್. ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ಇಡೀ ಭಾರತದಲ್ಲಿಯೇ ವಿಆರ್ ಎಲ್ ಜನಜನಿತ. ಇಷ್ಟು ದೊಡ್ಡ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ವ್ಯಕ್ತಿ ವಿಜಯ್ ಸಂಕೇಶ್ವರ. ಅವರ ಸಾಧನೆಯ ಹಿಂದಿನ ರೋಚಕ ಕಥೆಯನ್ನು ಸಿನಿಮಾ ರೂಪದಲ್ಲಿ ತೆರೆಗೆ ತರುವ ಪ್ರಯತ್ನವೇ ʼವಿಜಯಾನಂದ ʼಸಿನಿಮಾ. ವಿಆರ್ ಎಲ್ ಫಿಲಂ ಪ್ರೊಡಕ್ಷನ್ ಲಾಂಛನದಲ್ಲಿ ವಿಜಯ್ ಸಂಕೇಶ್ವರ ಅವರ ಪುತ್ರ ಆನಂದ್ ಸಂಕೇಶ್ವರ ಇದರ ನಿರ್ಮಾಪಕರು.
ಅನಂದ್ ಸಂಕೇಶ್ವರ್, ನಿರ್ಮಾಪಕರು
ಯುವ ನಿರ್ದೇಶಕಿ ರಿಷಿಕಾ ಶರ್ಮಾ ಈ ಚಿತ್ರದ ನಿರ್ದೇಶಕರು. ಕಳೆದ ಎಂಟು ವರ್ಷಗಳಿಂದ ಸಿನಿಮಾ ರಂಗದಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭದ ಅವರಿಗಿದೆ. ಹಾಗೆಯೇ ʼಟ್ರಂಕ್ ʼ ಹೆಸರಿನ ಚಿತ್ರದ ಮೂಲಕ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದು, ಇದೀಗ ಅದೃಷ್ಟವೇ ಎನ್ನುವ ಹಾಗೆ ವಿಆರ್ ಎಲ್ ಸಂಸ್ಥೆಯ ಮಾಲೀಕ ವಿಜಯ್ ಸಂಕೇಶ್ವರ ಅವರ ಬಯೋಫಿಕ್ ಅನ್ನು ತೆರೆಗೆ ತರುವ ಅವಕಾಶ ಸಿಕ್ಕಿದೆ.
ಇನ್ನು ವಿಜಯಾನಂದ ಚಿತ್ರದಲ್ಲಿ ಕಥಾ ನಾಯಕ ವಿಜಯ್ ಸಂಕೇಶ್ವರ್ ಅವರ ಪಾತ್ರಕ್ಕೆ ಯುವ ನಟ ನಿಹಾನ್ ರಜಪೂತ್ ಬಣ್ಣ ಹಚ್ಚುತ್ತಿದ್ದಉ, ಇದೀಗ ಮೋಷನ್ ಪೋಸ್ಟರ್ ನಲ್ಲಿ ಅವರ ಮೊದಲ ಲುಕ್ ರಿವೀಲ್ ಆಗಿದೆ.
ರಿಶಿಕಾ ಶರ್ಮಾ, ನಿರ್ದೇಶಕಿ
ಮಲಯಾಳಂ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಇನ್ನು ಕಡಲ ತೀರದ ಭಾರ್ಗವ ಮತ್ತು ಮಹಿರ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ ಕೀರ್ತನ ಪೂಜಾರಿ ಈ ಚಿತ್ರಕ್ಕೂ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂ ಡಿದ್ದಾರೆ. ಹೇಮಂತ್ ಕುಮಾರ್ ಸಂಕಲನ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದ್ದು, ಸೆಪ್ಟೆಂಬರ್ ನಲ್ಲಿ ಚಿತ್ರೀಕರಣ ಶುರುವಾಗುವ ಸಾಧ್ಯತೆಗಳಿವೆ ಎನ್ನುತ್ತಿದೆ ಚಿತ್ರತಂಡ.