ಲವ್ ಮಾಕ್ಟೇಲ್ ಮೂಲಕ ಜೋರು ಸುದ್ದಿ ಮಾಡಿದ್ದ ಬ್ಯೂಟಿಫುಲ್ ಸ್ಟಾರ್ ಕಪಲ್ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
ಹೌದು, ಅವರು ಮದ್ವೆಯಾಗಿದ್ದು ದೊಡ್ಡ ಸುದ್ದಿಯೂ ಗೊತ್ತು. ಹಾಗಾದರೆ, ಹೊಸ ಲೈಫಲ್ಲಿ ಸಿಹಿ ಸುದ್ದಿ ಏನಾದ್ರೂ ಕೊಡ್ತಾ ಇದಾರಾ? ಈ ಪ್ರಶ್ನೆ ಸಹಜ. ಯಾಕಂದರೆ, ಇತ್ತೀಚೆಗಷ್ಟೇ ಮದ್ವೆ ಆಗಿದ್ದ ಜೋಡಿ ಆಗಿದ್ದರಿಂದ ಸಿಹಿ ಸುದ್ದಿ ನಿರೀಕ್ಷೆ ಸಹಜವೇ. ಆದರೆ, ಅವರೀಗ ಹೊಸ ಸುದ್ದಿ ಹಂಚಿಕೊಂಡಿದ್ದಾರೆ.
ಅದು ‘ಲವ್ ಮಾಕ್ಟೇಲ್ 2’ ಸಿನಿಮಾ ಸುದ್ದಿ. ಈ ಚಿತ್ರವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಈ ವಿಷಯವನ್ನ ಸ್ವತಃ ಡಾರ್ಲಿಂಗ್ ಕೃಷ್ಣ ಅವರೇ ತಮ್ಮ ಮುಖಪುಟದಲ್ಲಿ ಹಂಚಿಕೊಂಡಿದ್ದಾರೆ.
‘ಲವ್ ಮಾಕ್‌ಟೇಲ್ 2′ ಚಿತ್ರದ ಶೂಟಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ, ನಿದ್ದೆಯಿಲ್ಲದ ರಾತ್ರಿಗಳಲ್ಲಿ ಹೋರಾಡಿಯೇ ನಾವು ಒಂದೊಳ್ಳೆಯ ಚಿತ್ರವನ್ನು ನೀಡಲು ಪ್ರಯತ್ನಿಸಿದ್ದೇವೆ. ಈ ವೇಳೆ ಮಿಲನ ನಾಗರಾಜ್ ಅವರೊಂದಿಗೆ ಅಂಥದ್ದೊಂದು ಅದ್ಭುತ ಜರ್ನಿ ಕೂಡ ಮಾಡಿದ್ದೇನೆ’ ಎಂದು ಡಾರ್ಲಿಂಗ್ ಕೃಷ್ಣ ಹೇಳಿಕೊಂಡಿದ್ದಾರೆ.
ಕಳೆದ ಲಾಕ್ಡೌನ್ ವೇಳೆ ಲವ್ ಮಾಕ್ಟೇಲ್ ಸಿನಿಮಾ ತೆರೆಕಂಡಿತ್ತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿತ್ತು. ಅದೇ ಯಶಸ್ಸಿನಲ್ಲಿದ್ದ ಜೋಡಿ ‘ ಲವ್ ಮಾಕ್ಟೇಲ್ 2’ ಶುರು ಮಾಡಿತ್ತು. ಈಗ ಸಿನಿಮಾವನ್ನು ಯಶಸ್ವಿಯಾಗಿ ಮುಗಿಸಿದ ಖುಷಿಯಲ್ಲಿದ್ದಾರೆ.
ಅದೇನೆ ಇರಲಿ, ಸಕ್ಸಸ್ ಸಿನಿಮಾ ಕೊಟ್ಟಿರುವ ಈ ಜೋಡಿ ಮತ್ತೆ ನಿರೀಕ್ಷೆ ಹುಟ್ಟಿಸಿದೆ. ಫ್ಯಾನ್ಸ್ ಕೂಡ ಸಿನಿಮಾ ಎದುರು ನೋಡುತ್ತಿದ್ದು, ಚಿತ್ರಕ್ಕೆ ಹಾಗೂ ಶ್ರಮದಿಂದ ಸಿನಿಮಾ ಮಾಡಿರೋ ಈ ಜೋಡಿಗೆ ಯಶಸ್ಸು ಸಿಗಲೆಂದು ಸಿನಿಲಹರಿ ಆಶಿಸುತ್ತದೆ.