ಫ್ರಾಕ್ ಹಾಕಿಕೊಂಡು ಮಾಸ್ಟರ್ ಪೀಸ್' ಜೊತೆ ವಾಕಿಂಗ್ ಬಂದ ನಾಗವಲ್ಲಿಯನ್ನು ನೀವೆಲ್ಲಾ ನೋಡಿದ್ದೀರಿ. ಆ ನಾಗವಲ್ಲಿ ಮೇಲೆ ರೀಲ್‌ನಲ್ಲಿ ಅಣ್ತಮ್ಮನಿಗೆ ಲವ್ವಾಗಿದ್ದನ್ನು ಕಂಡಿದ್ದೀರಿ, ಈಗ ಅದೇ ನಾಗವಲ್ಲಿ ನಾಗರಪಂಚಮಿ ದಿನದಂದು ಅಖಾಡಕ್ಕೆ ಇಳಿದಿದ್ದಾಳೆ. ಸೀರೆಯುಟ್ಕೊಂಡು ಫೀಲ್ಡಿಗಿಳಿದಿರುವ ಆಕೆ
ನಿನ್ನ ಕೆಲಸ ಮುಗಿತು ಕಿಟ್ಟಪ್ಪ, ಇನ್ಮೇಲೆ ನನ್ನ ಆಟ ಶುರು ಎನ್ನುತ್ತಿದ್ದಾಳೆ. ಇಷ್ಟೊತ್ತಿಗೆ ನಾವು ಯಾರ ಬಗ್ಗೆ ಹೇಳ್ತಿದ್ದೇವೆ ಅನ್ನೋದು ನಿಮಗೆ ಗೊತ್ತಾಗಿರುತ್ತೆ. ಆಕೆ ಬೇರ‍್ಯಾರು ಅಲ್ಲ ರಾಕಿಂಗ್ ಸ್ಟಾರ್, ಚಾಲೆಂಜಿಂಗ್ ಸ್ಟಾರ್, ಗೋಲ್ಡನ್ ಸ್ಟಾರ್, ರೋರಿಂಗ್ ಸ್ಟಾರ್ ರಂತಹ ಸೂಪರ್‌ಸ್ಟಾರ್‌ಗಳ ಜೊತೆ ಸ್ಕ್ರೀನ್ ಶೇರ್ ಮಾಡಿ ಸೈ ಎನಿಸಿಕೊಂಡಿರುವ ಶೈನಿಂಗ್ ಸುಂದರಿ ಶಾನ್ವಿ ಶ್ರೀವಾಸ್ತವ್.
ಶಾನ್ವಿ ಶ್ರೀವಾಸ್ತವ್ ವಾರಣಾಸಿಯ ಚೆಲುವೆ. ತೆಲುಗು ಇಂಡಸ್ಟ್ರಿ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದ ಶಾನ್ವಿ, ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅಭಿನಯದ ಚಂದ್ರಲೇಖ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. ಎರಡನೇ ಚಿತ್ರದಲ್ಲಿ ರಾಕಿಂಗ್‌ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ಗಿಟ್ಟಿಸಿಕೊಂಡರು. ಅದ್ಯಾವಾಗ,
ಮಾಸ್ಟರ್‌ಪೀಸ್’ ನಲ್ಲಿ ಅಣ್ತಮ್ಮನ ಜೊತೆ ಕುಣಿದರೋ ಫಿನಿಶ್ ಶಾನ್ವಿ ಸಿಕ್ಕಾಪಟ್ಟೆ ಶೈನ್ ಆದರು. ಸ್ಟಾರ್ ನಟರುಗಳು ಸೇರಿದಂತೆ ಹೊಸಬರ ಚಿತ್ರಗಳಲ್ಲೂ ಅಭಿನಯಿಸಿ ಮೋಡಿ ಮಾಡಿದರು. ಇದೀಗ ಲೇಡಿರೆಬಲ್‌ಸ್ಟಾರ್ ನಯನಾತಾರ ಥರ ಲೀಡಿಂಗ್ ಲೇಡಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ಫ್ರಾಕ್ ಬಿಚ್ಚಿಟ್ಟು ಸೀರೆಯು ಟ್ಟುಕೊಂಡು ಕಣಕ್ಕಿಳಿದಿರುವ ಶಾನ್ವಿ ಅಚ್ಚರಿಯ ನೋಟ ಬೀರುತ್ತಾ ಚಿತ್ರಪ್ರೇಮಿಗಳನ್ನು ಬೆಚ್ಚಿಬೀಳಿಸ್ತುತಾರೆ.
ನಾಗರಪಂಚಮಿಯ ದಿನದಂದು ಶಾನ್ವಿ ಶ್ರೀವಾಸ್ತವ್ ಮುಖ್ಯಭೂಮಿ ಕೆಯಲ್ಲಿರುವ ಕಸ್ತೂರಿ ಮಹಲ್' ಚಿತ್ರದ ಟ್ರೇಲರ್ ಹೊರಬಿದ್ದಿದೆ. ದಟ್ಟವಾದ ಕಾಡು, ಅಭಯಾರಣ್ಯದಲ್ಲಿರುವ ಭೂತಬಂಗಲೆಯಂತಹ ಮನೆ, ಆ ಮನೆಗೊಂದು ಮಣ್ಣಿನ ದಾರಿ, ಕಪ್ಪು ಸೀರೆಯುಟ್ಟು ಪ್ರತ್ಯಕ್ಷವಾಗುವ ಹೆಂಗಸು, ೮೦೦ ವರ್ಷ ಹಳೇ ಬುಕ್ ಹೀಗೆ ಹಲವು ಕೂತೂಹಲಕಾರಿ ಅಂಶಗಳನ್ನೊಳಗೊಂಡಿರುವ
ಕಸ್ತೂರಿ ಮಹಲ್’ ಟ್ರೇಲರ್ ಕೂತೂಹಲ ಕೆರಳಿಸುತ್ತೆ. `ಅವನೇ ಶ್ರೀಮನ್ನಾರಾಯಣನ’ ರಾಣಿ ಶಾನ್ವಿಯ ನೋಟ ಬೆರಗುಗೊಳಿಸುತ್ತೆ. ಚಂದ್ರಲೇಖ ನಂತರ ಮತ್ತೆ ಬೆಚ್ಚಿಬೀಳಿಸೋಕೆ ಬರುತ್ತಿರುವ ಶಾನ್ವಿಯ ಹಾರರ್ ಅವತಾರ ನೋಡಿದ್ಮೇಲೆ ನಿರೀಕ್ಷೆಗಳು ಗರಿಗೆದರುತ್ತಿವೆ.
ಸಸ್ಪೆನ್ಸ್-ಥ್ರಿಲ್ಲಿಂಗ್ ಆಗಿರುವ ಕಸ್ತೂರಿಮಹಲ್'ಗೆ ದಿನೇಶ್ ಬಾಬು ಆಕ್ಷನ್ ಕಟ್ ಹೇಳುತ್ತಿದ್ದಾರೆ. ʼಅಮೃತ ವರ್ಷಿಣಿʼ, ʼನಿಶ್ಯಬ್ದʼ, ʼಲಾಲಿʼ ಸೇರಿದಂತೆ ಹಲವು ಸೂಪರ್‌ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ ದಿನೇಶ್ ಬಾಬು ಇದೀಗ
ಕಸ್ತೂರಿ ಮಹಲ್’ ಡೈರೆಕ್ಟ್ ಮಾಡಿದ್ದಾರೆ. ಇದು ಅವರ ೫೦ನೇ ಚಿತ್ರವಾಗಿದ್ದು ಟ್ರೇಲರ್ ನಿಂದಲೇ ಸೌಂಡ್ ಮಾಡುತ್ತಿದೆ. ರವೀಶ್ ಆರ್ ಸಿ, ರುಬೀನ್ ರಾಜ್ ಕಸ್ತೂರಿ ಮಹಲ್'ಗೆ ಬಂಡವಾಳ ಹೂಡಿದ್ದಾರೆ. ಸ್ಕಂದ ಅಶೋಕ್, ಶ್ರುತಿ ಪ್ರಕಾಶ್, ರಂಗಾಯಣ ರಘು ಸೇರಿದಂತೆ ಹಲವರು ಪ್ರಮುಖ ಪಾತ್ರಕ್ಕೆ ಜೀವತುಂಬಿದ್ದಾರೆ. ʼಆಪ್ತರಕ್ಷಕʼ ಸಿನಿಮಾಗೆ ಕ್ಯಾಮೆರಾ ಕೈಚಳ ತೋರಿದ್ದ ಪಿ.ಕೆ.ಎಚ್ ದಾಸ್, ಸಸ್ಪೆನ್ಸ್ ಥ್ರಿಲ್ಲರ್
ಕಸ್ತೂರಿ ಮಹಲ್’ಗೆ ಕ್ಯಾಮೆರಾ ಹಿಡಿದಿದ್ದಾರೆ. ಗೌತಮ್ ಶ್ರೀವತ್ಸ ಸಂಗೀತ ಚಿತ್ರಕ್ಕಿದೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಬುಲ್‌ಬುಲ್ ಬೆಡಗಿ ರಚಿತರಾಮ್ ಕಸ್ತೂರಿ ಮಹಲ್'ನಲ್ಲಿ ಕಂಗೊಳಿಸಬೇಕಿತ್ತು. ಅದೇನಾಯ್ತೋ ಏನೋ ಗೊತ್ತಿಲ್ಲ
ಕಸ್ತೂರಿ ನಿವಾಸ’ ಟೈಟಲ್ ಚೇಂಜ್ ಆದ್ಹಂಗೆ ನಾಯಕಿ ರಚಿತಾ ರಾಮ್ ಕೂಡ ಬದಲಾದರು. ಡಿಂಪಲ್ ಬೆಡಗಿ ಜಾಗಕ್ಕೆ ಡಿಂಪಲ್ ಸುಂದರಿ ಶಾನ್ವಿಯೇ ಬಂದರು. `ಕಸ್ತೂರಿ ಮಹಲ್’ ಶಾನ್ವಿಗೆ ಚಾಲೆಂಜಿಂ ಗ್ ಆಗಿದೆ. ಕೇವಲ ೨೦ ದಿನದಲ್ಲಿ ತನ್ನ ಪಾತ್ರದ ಶೂಟಿಂಗ್ ಕಂಪ್ಲೀಟ್ ಮಾಡಿಕೊಟ್ಟು ಹೊಸ ಹಿಸ್ಟರಿ ಬರೆದಿರುವ ತಾರಕ್ ಬೆಡಗಿ ʼಕಸ್ತೂರಿ ಮಹಲ್’ ಮೂಲಕ ನಯಾ ಮೇನಿಯಾ ಸೃಷ್ಟಿಸಿಕೊಳ್ಳಲಿ. ಈ ಚಿತ್ರವೂ ಹೊಸ ರೆಕಾರ್ಡ್ ಬರೆಯಲಿ ಎನ್ನುವುದೇ ಸಿನಿಲಹರಿಯ ಹಾರೈಕೆ
- ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ