ಕೆಜಿಎಫ್ ಚಾಪ್ಟರ್-2 ಗೆ ಓಟಿಟಿ ಬಿಗ್ ಆಫರ್; ನೋ ವೇ ಚಾನ್ಸೇ ಇಲ್ಲ ಅಂದ್ರಂತೆ ರಾಕಿಭಾಯ್!

ಚಿನ್ನದ ಸಾಮ್ರಾಜ್ಯದ ಅಧಿಪತಿಗಳಿಗೆ ಆಫರ್ ಕೊಡ್ತಿರಾ, ಕೋಟಿ ಆಸೆ ತೋರಿಸಿ ಕ್ಯಾಚ್ ಹಾಕಿಕೊಳ್ಳೋ ದುರಾಸೆ ಬುಟ್ಬುಡಿ…

ಇಡೀ ಜಗತ್ತೇ ಎದುರು ನೋಡ್ತಿರುವ ಕನ್ನಡದ ಹೆಮ್ಮೆಯ ಸಿನಿಮಾ ಅಂದರೆ ಅದು ಎಲ್ಲರಿಗೂ ಗೊತ್ತು
ಕೆಜಿಎಫ್ ಚಾಪ್ಟರ್ 2. ಪ್ರಶಾಂತ್ ನೀಲ್‌ ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಪಾರ್ಟ್ 1 ಬಿಡುಗಡೆಯಾಗಿ ಎರಡೂವರೆ ವರ್ಷಗಳು ಉರುಳಿವೆ. ಆದರೂ ಕೂಡ ಈ‌ ಸಿನಿಮಾದ ಕ್ರೇಜ್ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ದಿನಗಳು ಉರುಳಿದಂತೆ ಕೆಜಿಎಫ್ ಕ್ರೇಜ್‌ ಹೆಚ್ಚಾಗುತ್ತಲೇ ಇದೆ. ಆಲ್ ಓವರ್ ಇಂಡ್ಯಾ ಕೆಜಿಎಫ್ ಚಾಪ್ಟರ್ 2 ರಿಲೀಸ್ ಯಾವಾಗ ಅಂತ ಕೇಳ್ತಿದ್ದಾರೆ. ವಲ್ಡ್ ವೈಡ್ ಕನ್ನಡದ ಚಿತ್ರಕ್ಕಿರುವ ಬೇಡಿಕೆಯನ್ನು ಗಮನಿಸಿದ ಓಟಿಟಿ ಕೆಜಿಎಫ್ ಚಾಪ್ಟರ್ 2 ಮೇಲೆ ಕಣ್ಣಿಟ್ಟು ಬಿಗ್ ಆಫರ್ ಮಾಡಿದೆಯಂತೆ.

ಹೌದು, ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ಭಾರೀ ಬೇಡಿಕೆ ಇದೆ. ಆಚೆ-ಈಚೆ-ನೀಚೆ- ಪೀಚೆ ಮಾತ್ರವಲ್ಲ ದೇಶ- ವಿದೇಶದ ಸಿನಿಮಾ ಮಂದಿ ಕೂಡ ಕನ್ನಡದ‌ ಕೆಜಿಎಫ್ ನ ನಮ್ಮ ಅಂಗಳದಲ್ಲಿ‌ ರಿಲೀಸ್ ಮಾಡೋಕೆ ಅವಕಾಶ ಕೊಡಿ ಅಂತ ಹೊಂಬಾಳೆ ನಿರ್ಮಾಣ ಸಂಸ್ಥೆಯ ದುಂಬಾಲು ಬಿದ್ದಿದ್ದಾರೆ. ಈ ಮಧ್ಯೆ ಲೀಡಿಂಗ್ ನಲ್ಲಿರುವ ಜನಪ್ರಿಯ ಓಟಿಟಿ ಸಂಸ್ಥೆ ಕೆಜಿಎಫ್ ಚಾಪ್ಟರ್ ೨ ಗೆ 250 ಕೋಟಿ ಆಫರ್ ಮಾಡಿದೆಯಂತೆ. ಆದರೆ, ಈ ಆಫರ್ ನ ರಾಕಿಭಾಯ್ ಎಡಗೈ ನಲ್ಲಿ ಸರಿಸಿದ್ದಾರಂತೆ.

ಕೊರೊನಾ ಅಟ್ಟಹಾಸ ಮುಗಿಯುತ್ತಿಲ್ಲ, ಚಿತ್ರಮಂದಿರಗಳು‌ ಬಾಗಿಲು ತೆರೆಯುತ್ತಿಲ್ಲ.‌ ಶೇಕಡ 100 ರಷ್ಟು ಆಸನ ಭರ್ತಿಗೆ ಸರ್ಕಾರ ಇನ್ನೂ ಅನುಮತಿ ಕೊಟ್ಟಿಲ್ಲ. ಹೀಗಾಗಿ ಕೆಜಿಎಫ್ ಸೇರಿದಂತೆ ಬಹುತೇಕ ಎಲ್ಲಾ ದೊಡ್ಡ ಸಿನಿಮಾಗಳು ಹಾಗೂ ಕಡಿಮೆ ಬಜೆಟ್ ನ ಹೊಸಬರ ಚಿತ್ರಗಳು ತೆರೆಗೆ ತರುವುದಕ್ಕೆ ಚಿತ್ರತಂಡಗಳು ಹಿಂದೇಟು‌ ಹಾಕುತ್ತಿವೆ. ಇದೇ ಟೈಮ್ ನ‌ ಸದುಪಯೋಗ ಪಡಿಸಿಕೊಳ್ಳಬೇಕು ಅಂತ ಜನಪ್ರಿಯ ಓಟಿಟಿ ಸಂಸ್ಥೆ 250 ಕೋಟಿ ಕೊಡ್ತೀವಿ ನೇರವಾಗಿ ಕೆಜಿಎಫ್ ಚಾಪ್ಟರ್ 2 ನ ಓಟಿಟಿ ವೇದಿಕೆಯಲ್ಲಿ ‌ರಿಲೀಸ್ ಮಾಡ್ತೀರಾ ಅಂತ ಕೇಳಿಕೊಂಡಿದ್ದಾರೆ. ಇದಕ್ಕೆ ಹೊಂಬಾಳೆ ಬ್ಯಾನರ್ ನ ಓನರ್ ಏನಂದ್ರೋ ಗೊತ್ತಿಲ್ಲ ಆದರೆ, ರಾಕಿಭಾಯ್ ಮಾತ್ರ ನೋ‌ ವೇ ಚಾನ್ಸೇ ಇಲ್ಲ ಗುರು ಎಂದಿದ್ದಾರಂತೆ.

ಆಲ್ ಓವರ್ ಇಂಡ್ಯಾದಲ್ಲಿರುವ ನನ್ನ ಫ್ಯಾನ್ಸ್ ಹಾಗೂ ಕೆಜಿಎಫ್ ಸಿನಿಮಾಗಾಗಿ ಕಾದು ಕುಳಿತಿರುವ ಪ್ರೇಕ್ಷಕ ಮಹಾಷಯರು ಕೆಜಿಎಫ್ ಚಾಪ್ಟರ್-2 ನ ಥಿಯೇಟರ್ ನಲ್ಲೇ‌ ನೋಡಬೇಕು, ಬಿಗ್ ಸ್ಕ್ರೀನ್ ನಲ್ಲೇ ನಮ್ಮ ಸಿನಿಮಾನ‌ ಕಣ್ತುಂಬಿಕೊಳ್ಳಬೇಕು. ಇಂತಹದ್ದೊಂದು ಟೈಮ್ ಬರುವುವವರೆಗೂ ಕಾಯ್ತೇವೆ ಹೊರೆತು ಯಾವುದೇ ಕಾರಣಕ್ಕೂ ಓಟಿಟಿಯಲ್ಲಿ ರಿಲೀಸ್ ಮಾಡೋದಿಲ್ಲ‌ ಅಂತ ನ್ಯಾಷನಲ್‌ಸ್ಟಾರ್ ರಾಕಿಭಾಯ್ ತೀರ್ಮಾನ ಮಾಡಿದ್ದಾರಂತೆ.‌ ಹೀಗಂತ ತಮಿಳಿನ ಖ್ಯಾತ ಅಂಕಣಕಾರರು ಹಾಗೂ ಲೇಖಕರಾಗಿ ಗುರ್ತಿಸಿ ಕೊಂಡಿರುವ ಮನೋಬಾಲ ಅವರು ತಮ್ಮ ಟ್ವೀಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಈ‌ ಸುದ್ದಿ ಕೇಳಿ ರಾಕಿಂಗ್ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಥಿಯೇಟರ್ ನಲ್ಲಿ ಕೆಜಿಎಫ್ ರಿಲೀಸ್ ಆಗಬೇಕು ಎನ್ನುವ ರಾಕಿ ನಿರ್ಧಾರಕ್ಕೆ ಎಲ್ಲರೂ ಜೈಕಾರ ಹಾಕುತ್ತಿದ್ದಾರೆ. ಅಧೀರ ಹಾಗೂ ರಾಕಿ ಕಾಳಗ ಹೇಗಿರಬಹುದು ಅಂತ ಲೆಕ್ಕಚ್ಚಾರ ಹಾಕುತ್ತಾ ಕೆಜಿಎಫ್ ಸಾಮ್ರಾಜ್ಯನ ಕಣ್ಮುಂದೆ ತಂದುಕೊಳ್ತಿದ್ದಾರೆ. ಎನಿವೇ,
ಸಿನಿಮಾ ಬಿಡುಗಡೆ ಯಾವಾಗ ಎನ್ನುವ ಬಿಗ್ ಅಪ್ ಡೇಟ್ ಶೀಘ್ರದಲ್ಲೇ ರಿವೀಲ್ ಆಗಲಿದೆ. ಅಲ್ಲಿವರೆಗೂ ವೇಯ್ಟ್ ಅಂಡ್ ಸೀ

ವಿಶಾಲಾಕ್ಷಿ ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!