Deshadri Hosmane
Those who came to journalism with a fighting background. Hew has over 20 years of experience as a journalist and has worked in a variety of fields including politics, crime and agriculture. He is also a film journalist by accident and has been awarded the prestigious Aragini Award by the Karnataka Media Academy. He has worked in evening newspapers like sanjevani, karunaadu Sanje. Also work in tv Chanel. ETV, Udaya TV, Janashree, Vijaya Karnataka and Kannada newspapers.
ದೇಶಾದ್ರಿ ಹೊಸ್ಮನೆ
ಹೋರಾಟದ ಹಿನ್ನೆಲೆಯೊಂದಿಗೆ ಪತ್ರಿಕೋದ್ಯಮ ಕ್ಕೆ ಬಂದವರು. ಪತ್ರಕರ್ತನಾಗಿ 20 ವರ್ಷಗಳಿಗೂ ಹೆಚ್ವು ಕಾಲ ಅನುಭವ ಹೊಂದಿದ್ದು, ರಾಜಕೀಯ, ಅಪರಾಧ, ಕೃಷಿ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವಿ. ಹಾಗೆಯೇ ಆಕಸ್ಮಿಕ ಎಂಬಂತೆ ಸಿನಿಮಾ ಪತ್ರಕರ್ತರಾಗಿ ಬಂದ ಅವರು, ಕರ್ನಾಟಕ ಮಾಧ್ಯಮ ಅಕಾಡೆಮಿ ನೀಡುವ ಪ್ರತಿಷ್ಟಿತ ಅರಗಿಣಿ ಪ್ರಶಸ್ತಿ ಗೆ ಪಾತ್ರವಾಗಿದ್ದಾರೆ. ಸಂಜೆ ವಾಣಿ, ಈಟಿವಿ, ಉದಯ ಟಿವಿ, ಜನಶ್ರೀ, ವಿಜಯ ಕರ್ನಾಟಕ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದು, ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ, ನ್ಯೂಸ್ ಮೀಡಿಯಾ ವಿಶೇಷ ಪ್ರಶಸ್ತಿ ಗಳಿಗೆ ಭಾಜನರಾಗಿದ್ದಾರೆ.ಈಗ ಸಿನಿ ಲಹರಿ ವೆಬ್ ಸೈಟ್ ಹಾಗೂ ಯುಟ್ಯೂಬ್ ಚಾನೆಲ್ ರೂವಾರಿ ಆಗಿದ್ದಾರೆ.
ಸಿನಿಮಾ ರಂಗಕ್ಕೆ ಬರುವ ಹೊಸಬರಿಗೆ ಹೊಸತಾಗಿ ಗುರುತಿಸಿಕೊಳ್ಳುವ ಹಂಬಲ. ಅದು ಚಿತ್ರಕಥೆ ಮಾತ್ರವಲ್ಲದೆ ಚಿತ್ರ ಟೈಟಲ್ ಕೂಡ ಡಿಫೆರೆಂಟ್ ಆಗಿರಲಿ ಅನ್ನೋ ಹಂಬಲ. ಅಂತಹ ಹೊಸಬರ ಅನೇಕ ಸಿನಿಮಾಗಳ ಸಾಲಿಗೆ ಈಗ ಮತ್ತೊಂದು ಸಿನಿಮಾ ಸೇರ್ಪಡೆ. ಆ ಚಿತ್ರದ ಹೆಸರು ʼಕಾನ್ಸೀಲಿಯಂʼ. ತಕ್ಷಣಕ್ಕೆ ಇಲ್ಲಿ ನಿಮಗೆ ಎದುರಾಗುವ ಪ್ರಶ್ನೆ, ಕನ್ನಡದಲ್ಲೊಂದು ಇಂತಹ ಪದ ಇದೀಯಾ ಅನ್ನೋದು. ಅಸಲಿಗೆ ಕನ್ನಡದಲ್ಲಿ ಇಂತಹದೊಂದು ಪದವೇ ಕನ್ನಡದಲ್ಲಿ ಇಲ್ಲ, ಬದಲಿಗೆ ಇದು ಲ್ಯಾಟಿನ್ ಭಾಷೆಯ ಪದ. ಅದನ್ನೇ ಇಲ್ಲಿ ಚಿತ್ರದ ಶೀರ್ಷಿಕೆಯಾಗಿಸಿಕೊಂಡು ಸಿನಿಮಾ ಮುಗಿಸಿಕೊಂಡು ಬಂದಿದೆ ಹೊಸಬರ ಒಂದು ತಂಡ
ಲ್ಯಾಟಿನ್ ಭಾಷೆಯಲ್ಲಿ ಕಾನ್ಸೀಲಿಯಂ ಅಂದ್ರೆ ಅಡ್ವೈಜ್ ಅಂತಲೂ ಹೌದು. ಅಂದ್ರೆ ಕನ್ನಡದಲ್ಲಿ ಸಲಹೆ ಅಂತ. ಐಟಿ ಉದ್ಯೋಗಿಗಳು ನಿರ್ಮಿಸಿರುವ ಈ ಚಿತ್ರದಲ್ಲಿ ಡಿಎನ್ ಎ, ಸ್ಪೇಸ್, ಟೆಕ್ನಾಲಜಿ ಇತ್ಯಾದಿ ವಿಷಯಗಳನ್ನಿಟ್ಟು ಸೈನ್ಸ್ ಫಿಕ್ಷನ್ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಕಥೆ ಹೇಳೋದಿಕ್ಕೆ ರೆಡಿಯಾಗಿದ್ದಾರೆ ಯುವ ನಿರ್ದೇಶಕ ಸಮರ್ಥ್. ಈ ಸಿನಿಮಾದ ಟ್ರೇಲರ್ ಆನಂದ್ ಆಡಿಯೋದಲ್ಲಿ ರಿಲೀಸ್ ಆಗಿದ್ದು, ಸಖತ್ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ. ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವ ಅನುಭವ ಇರುವ ಮಂಡ್ಯದ ಪ್ರತಿಭೆ ಸಮರ್ಥ್,ಈ ಚಿತ್ರದ ನಿರ್ದೇಶನ ಮಾಡುವುದರ ಜೊತೆಗೆ ಮೇನ್ ಲೀಡ್ ರೋಲ್ ಪ್ಲೇ ಮಾಡಿದ್ದಾರೆ.
ಸೀತಾರಾಮ್ ಶಾಸ್ತ್ರೀ ಪ್ರೊಡಕ್ಷನ್ ನಡಿ ತಯಾರಾಗಿರುವ ಕಾನ್ಸೀಲಿಯಂ ಸಿನಿಮಾದಲ್ಲಿ ಪ್ರೀತಂ, ಮನೆದೇವ್ರು ಸೀರಿಯಲ್ ಖ್ಯಾತಿಯ ಅರ್ಚನಾ ಲಕ್ಷ್ಮೀ ನರಸಿಂಹ ಸ್ವಾಮಿ, ಲವ್ ಮಾಕ್ಟೇಲ್ ಖ್ಯಾತಿಯ ಖುಷಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಶಂಕರ್ ನಾಗ್ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿದ್ದ ಜಗದೀಶ್ ಮಲ್ನಾಡ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಬೆಂಗಳೂರು, ಸಕಲೇಶಪುರ ಸುತ್ತಮುತ್ತ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರೋ ಕಾನ್ಸೀಲಿಯಂ ಸಿನಿಮಾ ಬಳಗದಲ್ಲಿ ರೇಷ್ಮಾ ರಾವ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಫಸ್ಟ್ ಲುಕ್, ಟೀಸರ್ ಮೂಲಕ ಸೌಂಡ್ ಮಾಡ್ತಿರುವ ಕಾನ್ಸೀಲಿಯಂ ಸಿನಿಮಾ ಮುಂದಿನ ತಿಂಗಳು ತೆರೆಗೆ ಬರಲಿದೆ.
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟಸಾರ್ವಭೌಮ ಹಾಗೂ ಅಪ್ಪಟ ದೈವಭಕ್ತ. ಅಭಿಮಾನಿ ದೇವರುಗಳಲ್ಲಿ ದೇವರನ್ನು ಕಾಣುವ ದೊಡ್ಮನೆಯ ರಾಜಕುಮಾರ, ರಾಯರ ಪರಮಭಕ್ತನಾಗಿದ್ದರು ಕೂಡ ದೇವಾನುದೇವತೆಗಳನ್ನು ಆರಾಧಿಸುತ್ತಿದ್ದರು ಮತ್ತು ದೈವಿಶಕ್ತಿಗಳನ್ನು ನಂಬುತ್ತಿದ್ದರು. ಅಷ್ಟಕ್ಕೂ, ದೈವಿಕತೆ ಬಗ್ಗೆ ಈಗ ಮಾತನಾಡೋದಕ್ಕೆ ಕಾರಣ ಮಲೆಮಾದಪ್ಪನ ಮೇಲಿದ್ದ ಶ್ರದ್ಧೆ ಹಾಗೂ ಭಕ್ತಿಗೋಸ್ಕರ ಹೊಸ ಸಾಹಸಕ್ಕೆ ಅಪ್ಪು ಒಂದು ಹೆಜ್ಜೆ ಮುಂದೆ ಇಟ್ಟಿದ್ದರು. ಸಿಂಗರ್ ಕಮ್ ಮ್ಯೂಸಿಕ್ ಕಂಪೋಸರ್ ನವೀನ್ ಸಜ್ಜು ನಯಾ ಕನಸಿಗೆ ಜೀವ ತುಂಬುವುದಕ್ಕೆ ಮುಂದಾಗಿದ್ದರು. ಈ ಕುರಿತಾಗಿ ಒಂದು ಸುತ್ತಿನ ಮಾತುಕಥೆ ಕೂಡ ನಡೆದಿದ್ದು, ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನದಂದು ಮನೆಗೆ ಬರುವಂತೆ ನವೀನ್ ಸಜ್ಜುಗೆ ಹೇಳಿದ್ದರಂತೆ. ಆದರೆ, ಸೋಮವಾರ ಬರುವ ಹೊತ್ತಿಗೆ ದೊಡ್ಮನೆಯ ರಾಜಕುಮಾರ ವಿಧಿಯಾಟಕ್ಕೆ ಬಲಿಯಾಗಿಬಿಟ್ಟರು. ತನ್ನ ಕನಸು ಕಮರಿಹೋಯ್ತು ಎನ್ನುವುದಕ್ಕಿಂತ ಕನ್ನಡ ಚಿತ್ರರಂಗದ ಮಾಣಿಕ್ಯನನ್ನು ಕಳೆದುಕೊಂಡ ದುಃಖದಲ್ಲಿ ನವೀನ್ ಸಜ್ಜು ಕೂಡ ಕಣ್ಣೀರಾಗುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿಯಾದ ಸಂದರ್ಭ, ಅವರೊಂದಿಗಿನ ಮಾತುಕತೆ, ಮಾದಪ್ಪನ ಆಲ್ಬಂ ಕಥೆ, ಹೀಗೆ ಎಲ್ಲವನ್ನೂ ಸುಧೀರ್ಘವಾಗಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಅಪ್ಪು ಸರ್ ಕೊನೆಯ ಭೇಟಿ :ಮಲೆ ಮಹದೇಶ್ವರ ಕುರಿತು ಒಂದು ಆಲ್ಬಮ್ ಸಾಂಗ್ ಪಿಆರ್‌ಕೆ ಬ್ಯಾನರ್‌ನಲ್ಲಿ ಮಾಡಲು ಅಪ್ಪು ಸರ್ ಕೆಲ ತಿಂಗಳ ಹಿಂದೆ ಒಪ್ಪಿಕೊಂಡಿದ್ದರು. ಅದೇ ವಿಷಯವಾಗಿ ಮಾತನಾಡಲು ಕಳೆದ ಬುಧವಾರ ಸಂಜೆ ಅವರ ಮನೆಗೆ ಹೋಗಿದ್ದೆ. ಸುಮಾರು ಒಂದೂವರೆ ತಾಸು ಅವರೊಂದಿಗೆ ಮಾತನಾಡಿದ್ದೆ. ಅವರ ಸರಳತೆ, ಬೇರೆಯವರಿಗೆ ಕೊಡುತ್ತಿದ್ದ ಬೆಲೆ, ಹೇಳುತ್ತಿದ್ದ ಆತ್ಮವಿಶ್ವಾಸದ ಮಾತುಗಳ ಬಗ್ಗೆ ನಾನು ವಿಶೇಷವಾಗಿ ಹೇಳಬೇಕಾದ್ದಿಲ್ಲ.. ಅದು ಎಲ್ಲರಿಗೂ ಗೊತ್ತಿರುವಂತಹದ್ದೆ. ಸಂಪೂರ್ಣವಾಗಿ ಕಂಪೋಸಿಷನ್ ಮುಗಿದ ಹಾಡನ್ನು ಹೇಗೆ ಶೂಟಿಂಗ್ ಮಾಡಬೇಕು, ಯಾವೆಲ್ಲಕ್ಯಾಮೆರಾ ಬಳಸಬೇಕು ಎಂಬುದನ್ನು ಪಿನ್ ಟು ಪಿನ್ ಹೇಳಿದರು. ಅದರ ಜೊತೆಗೆ ಐದಾರು ರೆಫ್ರರೆನ್ಸ್ ವಿಡಿಯೋಗಳನ್ನು ತೋರಿಸಿದರು. ಮಹದೇಶ್ವರ ಬೆಟ್ಟವನ್ನು ತೋರಿಸುವ ಅವರ ಕಲ್ಪನೆಯನ್ನು ನೋಡಿ ಬೆರಗಾಗಿದ್ದೆ. ಅಪ್ಪು ಸರ್ ಕಂಟೆAಟ್‌ನಿAದ ಹಿಡಿದು ಟೆಕ್ನಿಕಲಿಯಾಗಿಯೂ ಅವರು ಎಷ್ಟೊಂದು ತಿಳಿದುಕೊಂಡಿದ್ದರು ಎಂಬುದನ್ನು ನೋಡಿ ಆಶ್ಚರ್ಯವಾಯ್ತು. ಏಕೆಂದರೆ ಅವರು ಐದಾರು ಕ್ಯಾಮೆರಾಗಳ ಹೆಸರನ್ನು ಹೇಳಿ ಇಂತಹ ಶಾಟ್‌ಗೆ ಇಂತಹ ಕ್ಯಾಮರಾ ಬಳಸಬೇಕು ಎಂದು ವಿವರವಾಗಿ ಹೇಳಿದ್ದರು. ಇದೇ ವಿಷಯವಾಗಿ ಮಾತನಾಡಲು ನಾಳೆ (ಸೋಮವಾರ) ಬರಲು ಹೇಳಿದ್ದರು. ಬಹುಷಃ ಮುಂದಿನ ವಾರ ಮಲೆ ಮಹದೇಶ್ವರ ಹಾಡಿಗೆ ನಾವಿಬ್ಬರು ರಾಗವಾಗಬೇಕಿತ್ತು. ನೃತ್ಯಕ್ಕೆ ಹೆಜ್ಜೆ ಹಾಕಬೇಕಿತ್ತು. ಆದರೆ ಅವರು ಇನ್ನು ಯಾರಿಗೂ ಸಿಗದ ಹಾಗೇ ಬಹುದೂರ ಹೋಗಿಬಿಟ್ಟರು. ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಎಂದೆಂದಿಗೂ ಜನಮಾನಸದಲ್ಲಿ ಅಜರಾಮರ.. ಅವರೊಂದಿಗೆ ಕೆಲವು ಸಮಯ ಕಳೆದಿದ್ದೆ ಎಂಬುದೇ ನನ್ನ ಸಾರ್ಥಕ ಗಳಿಕೆ.. ಹೋಗಿ ಬನ್ನಿ ಸಾರ್.. ಕ್ರೂರ ವಿಧಿಯೆ ನಿನಗೆ ಧಿಕ್ಕಾರ
ಹೊಸಪ್ರತಿಭೆಗಳನ್ನು ಪ್ರೋತ್ಸಾಹಿಸ್ಬೇಕು ಹಾಗೂ ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಪಿ.ಆರ್.ಕೆ ಪ್ರೊಡಕ್ಷನ್ ಹೌಸ್‌ನ ಪ್ರಾರಂಭ ಮಾಡಿದರು. ಹೊಸತನಕ್ಕಾಗಿ ತುಡಿಯುವ, ಅಪಾರ ಪಾಂಡಿತ್ಯವುಳ್ಳ, ಸಿನಿಮಾನ ಪ್ರೀತ್ಸೋ ಹಾಗೂ ಆರಾಧಿಸೋ ಮಂದಿಗೆ ಕಾಲ್‌ಶೀಟ್ ಕೊಟ್ಟರು ಹಾಗೂ ಕೋಟಿಗಟ್ಟಲ್ಲೇ ಹಣವನ್ನು ಹೂಡಿಕೆ ಮಾಡಿದರು. ಅದರಂತೇ, ತಮ್ಮ ವಿಶಿಷ್ಟ ಕಂಠಸಿರಿಯಿAದಲೇ ಗಂಧದಗುಡಿಯಲ್ಲಿ ಗುರ್ತಿಸಿಕೊಂಡು, ಲಕ್ಷಾಂತರ ಅಭಿಮಾನಿಗಳನ್ನು ಸಂಪಾದನೆ ಮಾಡಿರುವ ನವೀನ್ ಸಜ್ಜು ನ್ಯೂ ಆಲ್ಬಂಗ್‌ನ ನಿರ್ಮಾಣಕ್ಕೆ ಹಣಹೂಡಿಕೆ ಮಾಡೋದಾಗಿ ಮಾತುಕೊಟ್ಟಿದ್ದರು. ಮಾತ್ರವಲ್ಲ ಮಲೆಮಹಾದೇಶ್ವರ ಸಾಮಿಯ ಪವಾಡದ ಹಾಡಿಗೆ ಕಂಠಕುಣಿಸಿ-ಅಭಿನಯಿಸುವುದಕ್ಕೂ ಒಪ್ಪಿಕೊಂಡಿದ್ದರAತೆ. ಮಾದಪ್ಪನಿಗೆ ನಮ್ಮ ಪ್ರೊಡಕ್ಷನ್ ಹೌಸ್‌ನಿಂದ ಚಿಕ್ಕ ಕಾಣಿಕೆ ಕೊಟ್ಟಂತಾಗುತ್ತೆ ಎಂದು ಖೂಷಿಯಾಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದರಂತೆ. ಆದ್ರೀಗ ಅಪ್ಪುನೇ ಇಲ್ಲ. ಮುಂದಿನ ದಿನಗಳಲ್ಲಿ ಈ ಹಾಡನ್ನ ನವೀನ್ ಸಜ್ಜು ಟೇಕಾಫ್ ಮಾಡ್ಬೋದು ಅಥವಾ ಬಿಡ್ಬೋದು. ಆದರೆ, ನಟಸಾರ್ವಭೌಮ ಹೆಜ್ಜೆಹಾಕಿದ್ಹಂತೆ ಆಗೋದಿಲ್ಲ, ಯುವರತ್ನ ಕಂಠಕುಣಿಸಿದ ಹಾಗೇ ಆಗಲ್ಲವಲ್ಲ ಎನ್ನುವ ಕೊರಗು ಸ್ವತಃ ನವೀನ್ ಸಜ್ಜುಗೂ ಇದೆ. ಹೀಗಾಗಿಯೇ, ಅಪ್ಪು ಕಳೆದುಕೊಂಡ ದುಃಖವನ್ನ ಸೋಷಿಯಲ್ ಮೀಡಿಯಾದಲ್ಲಿ ತೋಡಿಕೊಂಡಿದ್ದಾರೆ. ಕ್ರೂರಿ ಜವರಾಯನಿಗೆ ಹಿಡಿಶಾಪ ಹಾಕಿದ್ದಾರೆ.
ಕನ್ನಡದ ಪ್ರತಿಭಾವಂತ ನಟ ಪುನೀತ್ ರಾಜಕುಮಾರ್ ಈಗ ನೆನಪು ಮಾತ್ರ. ಆದರೆ ಅವರಿಗೆ ಮರಣೋತ್ತರವಾಗಿ ʼರಾಜರತ್ನʼ ಪ್ರಶಸ್ತಿ ನೀಡಬೇಕೆನ್ನುವ ಕೂಗು ಅವರ ಅಭಿಮಾನಿಗಳಿಂದ ಕೇಳಿ ಬರುತ್ತಿದೆ. ಕಳೆದ ಎರಡು ದಿನಗಳಿಂದ ಸೋಷಲ್ ಮೀಡಿಯಾದಲ್ಲಿ ಅಪ್ಪು ಅಭಿಮಾನಿಗಳು ಹಾಗೊಂದು ಒತ್ತಾಯದ ಕೂಗು ಆರಂಭಿಸಿದ್ದಾರೆ. ಈ ಮಧ್ಯೆ ಸೋಮವಾರ ಕನ್ನಡ ರಾಜ್ಯೋತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈ ವಿಚಾರಕ್ಕೆ ಪ್ರತಿ ಕ್ರಿಯೆ ನೀಡಿದ್ದಾರೆ.
ರಾಜ್ಯೋತ್ಸವ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಅಪ್ಪು ಅವರಿಗೆ ರಾಜರತ್ನ ಪ್ರಶಸ್ತಿ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರಮುಖರ ಜತೆಗೆ ಈ ಸಂಬಂಧ ಚರ್ಚೆ ನಡೆಸಿ, ಅಭಿಪ್ರಾಯ ಪಡೆಯಬೇಕಿದೆ. ಸರ್ಕಾರಕ್ಕೂ ಈ ಬಗ್ಗೆ ಮನಸಿದೆ. ಮುಂದಿನ ದಿನಗಳಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದರು. ನಟ ಪುನೀತ್ ರಾಜಕುಮಾರ್ ಅವರು ಬಾಲ್ಯದಲ್ಲಿಯೇ ರಾಷ್ಟ್ರ ಪ್ರಶಸ್ತಿಗೆ ಪಾತ್ರರಾದವರು. ಹಾಗೆಯೇ ಬೇಕಾದಷ್ಟು ರಾಜ್ಯ ಪ್ರಶಸ್ತಿಗಳಿಗೂ ಪಾತ್ರರಾದವರು. ಉಳಿದಂತೆ ಮಾನ-ಸನ್ಮಾನಗಳಿಗೆ ಲೆಕ್ಕವೇ ಇಲ್ಲ. ಆದರೂ, ಅವರಿಗೆ ಮರಣೋತ್ತರವಾಗಿ ರಾಜರತ್ನ ನೀಡಬೇಕೆನ್ನುವುದು ಅಭಿಮಾನಿಗಳ ಕೂಗು. ಸರ್ಕಾರ ಇದಕ್ಕೆ ಸ್ಪಂದಿಸುತ್ತಾ ಎನ್ನುವುದು ಕುತೂಹಲಕರ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಗಲಿಕೆಯನ್ನು ಯಾರಿಗೂ ಕೂಡ ಅರಗಿಸಿಕೊಳ್ಳಲಾಗುತ್ತಿಲ್ಲ. ಅವರ ನಿಧನ ಚಿತ್ರರಂಗದಲ್ಲಿ ಆಗಾದವಾದ ಶೂನ್ಯ ಆವರಿಸಿಕೊಳ್ಳುವಂತೆ ಮಾಡಿದೆ. ಇಡೀ ಕರುನಾಡೇ ಕಣ್ಣೀರಾಗಿದೆ. ಅದರಲ್ಲೂ ಅವರೊಂದಿಗೆ ನಿರ್ದೇಶಕರಾಗಿ, ನಟರಾಗಿ, ಹೀಗೆ ಸಿನಿಮಾ ಇನ್ನಾವುದೋ ವಿಭಾಗದಲ್ಲಿ ಕೆಲಸ ಮಾಡಿದವರಂತೂ ಅಕ್ಷರಶ: ಅವರ ಅಗಲಿಕೆಯಿಂದ ನೊಂದು ಹೋಗಿದ್ದಾರೆ. ಅಂತಹದೇ ದು:ಖ ತುಂಬಿಕೊಂಡು ಕುಳಿತಿರುವ ಜೇಮ್ಸ್ ಚಿತ್ರದ ನಿರ್ದೇಶಕ ಬಹದ್ದೂರ್ ಚೇತನ್ ಸೋಮವಾರ ಪುನೀತ್ ರಾಜ ಕುಮಾರ್ ಅವರ ವ್ಯಕ್ತಿತ್ವದ ಕುರಿತು ಭಾವುಕವಾದ ನುಡಿನಮನವೊಂದನ್ನು ಹಂಚಿಕೊಂಡಿದ್ದಾರೆ. ಆ ಪತ್ರದ ಸಾಲುಗಳು ಇಂತಿವೆ.
ದೊಡ್ಮನೆಯ ದೊರೆ, ನಿಮ್ಮಿಂದ ಕಲಿತದ್ದು ಒಂದೆರಡಲ್ಲ… ನಿಮ್ಮ ವ್ಯಕ್ತಿತ್ವ ಬಣ್ಣಿಸಲು ಅಕ್ಷರ ಸಾಲುತ್ತಿಲ್ಲ… ಸದಾ ಹಸನ್ಮುಖಿತನ , ತಾಳ್ಮೆಯ ಪ್ರತಿರೂಪ , ಎಲ್ಲರೂ ನಮ್ಮವರೆಂದು ಭಾವಿಸುವ ವಿಶೇಷಗುಣ…ಎಲ್ಲರನ್ನು ಸಮಾನರಾಗಿ ಕಾಣುವ ಮಗು ಮನಸ್ಸು… ಚಿತ್ರರಂಗವೇ ಕುಟುಂಬವೆಂದು ಭಾವಿಸುವ ಸಂಸ್ಕಾರ… ಮಹಾಸಂತನ ಸೌಮ್ಯತೆ … ಭೂಮಿ ತೂಕದ ಘನತೆ… ಕಷ್ಟಕ್ಕೆ ಮಿಡಿಯುವ ಹೃದಯ, ಕೈಲಾದಷ್ಟು ಸಹಾಯ ಮಾಡುವ ಉದಾರತೆ, ಬಲಗೈಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದೆಂಬ ನೀತಿ…. ತಂದೆಯ ಹಿರಿಮೆ,ಮನೆತನದ ಗೌರವ ಎರಡಕ್ಕೂ ಗರಿಮೆಯಾಗಿ ಬದುಕಿದ ರೀತಿ ಅಮೋಘ …
ದೊಡ್ಮನೆಯ ದೊರೆ ನಿಮ್ಮಿಂದ ಕಲಿತದ್ದು ಒಂದೆರಡಲ್ಲ… ನಿಮ್ಮ ವ್ಯಕ್ತಿತ್ವ ಬಣ್ಣಿಸಲು ಅಕ್ಷರ ಸಾಲುತ್ತಿಲ್ಲ… ಕನ್ನಡ ಪ್ರೇಮ ನೆಲ ಜಲದ ಮೇಲೆ ಇದ್ದ ಅಪಾರ ಗೌರವ … ಯುವಪೀಳಿಗೆಗೆ ಸದಾ ಮಾದರಿಯಾಗಿದ್ದ ಹುರುಪು… ಅಭಿಮಾನಿಗಳನ್ನ ಅಭಿಮಾನದಿಂದ ಅಭಿಮಾನಿಯಂತೆಯೇ ಪ್ರೀತಿಸಿದ ಅಜಾತಶತ್ರು… ದಿನನಿತ್ಯ ಶಿಸ್ತಿನ ವ್ಯಾಯಾಮ, ಆರೋಗ್ಯದ ಮೇಲೆ ಕಾಳಜಿ, ಆಹಾರವನ್ನು ಪ್ರೀತಿಸುವ ಗುಣ, ಸದಾ ಹೊಸತನವನ್ನು ಹಿಂಬಾಲಿಸುವ,ಅನ್ವೇಷಿಸುವ, ವಿಶ್ಲೇಷಿಸುವ ಮನೋಭಾವ.. ಸಮಯಪ್ರಜ್ಞೆ ಹಾಗೂ ಸಮಯದ ಮೇಲಿಟ್ಟಿದ್ದ ಗೌರವ… ಸದಾ ಒಂದಲ್ಲ ಒ೦ದು ಕೆಲಸದಲ್ಲಿ ಮಗ್ನರಾಗುತ್ತಿದ್ದ ರೀತಿ… ಎಲ್ಲ ಕ್ಷೇತ್ರಗಳ ಬಗ್ಗೆಯೂ ಮಾಹಿತಿ ತಿಳಿಯುವ ಹಂಬಲ ಹಾಗೂ ಕುತೂಹಲ.. ಅಪಾರವಾದ ವ್ಯವಹಾರಜ್ಞಾನದ ಪಾಂಡಿತ್ಯ… ಕುಟುಂಬಕ್ಕೆ ಮೊದಲ ಆದ್ಯತೆ, ಸ್ನೇಹಕ್ಕೆ ನೀಡುತ್ತಿದ್ದ ಮನ್ನಣೆ… ಸಂಬಂಧಗಳಿಗೆ ತೋರುತ್ತಿದ್ದ ಪ್ರೀತಿ… ಕಲೆಯನ್ನು ಪ್ರೋತ್ಸಾಹಿಸಿ, ಕಲಾವಿದರನ್ನು ಗೌರವಿಸುತ್ತಿದ್ದ ಸದ್ಗುಣ, ಬರಹಗಾರರನ್ನು ಶಾರದೆ ಮಕ್ಕಳೆಂದು ಭಾವಿಸುತ್ತಿದ್ದ ಶ್ರೇಷ್ಠತೆ … ನಿರ್ದೇಶಕರ ಕನಸಿಗೆ ತಮ್ಮನ್ನು ತಾವು ಸಂಪೂರ್ಣವಾಗಿ ಸಮರ್ಪಿಸಿ ಕೊಳ್ಳುವ ಕರ್ತವ್ಯನಿಷ್ಠೆ.. ವಿನಯ,ವಿಧೇಯತೆ ಸಹಕಾರಮೂರ್ತಿ…
ಸದಾ ಹಾಡು ಗುನುಗುವ ಸಂಗೀತ ಪ್ರೇಮಿ.. ಸಿನಿಮಾ ತಂತ್ರಜ್ಞಾನದ ವಿಚಾರದಲ್ಲಿ ಸದಾ 1ಹೆಜ್ಜೆ ಮುಂದೆ… ಎಲ್ಲವನ್ನೂ ದಕ್ಕಿಸಿಕೊಳ್ಳುವ ಧೈರ್ಯ ಹಾಗೂ ಛಲ… ಎಲ್ಲರಲ್ಲಿಯೂ ಒಂದೊಂದು ವಿಶೇಷತೆಯನ್ನು ಗುರುತಿಸಿ ಶ್ಲಾಘಿಸುವ ಜಾಣ್ಮೆ, ಸರಳತೆಯ ಸಾಹುಕಾರ ನಿಮಗೆ ಸದಾ ಚಿರರುಣಿ ನಿಮ್ಮವನಾಗಿ ಸ್ವೀಕರಿಸಿದ್ದಕ್ಕೆ … ನಿಮ್ಮ ಒಡನಾಟ ನೀಡಿದ್ದಕ್ಕೆ … ಸದಾ ಪ್ರೋತ್ಸಾಹಿಸಿ ಬೆನ್ನು ತಟ್ಟಿದ್ದಕ್ಕೆ… ನಿಮ್ಮ ಜೀವನದ ಪುಟಗಳಲ್ಲಿ ಒಂದೆರಡು ಸಾಲುಗಳನ್ನು ನೀಡಿದಕ್ಕೆ… ನಿಮ್ಮೊಡನೆ ಕಳೆದ ಪ್ರತಿ ಕ್ಷಣವೂ ದೇವರು ಕೊಟ್ಟ ವರವೆಂದೇ ಭಾವಿಸುತ್ತೇನೆ … ನಿಮ್ಮಂತಹ ಮಹಾನ್ ಚೇತನಗಳಿಗೆ ಆ ದೇವರು ಎಂದೆಂದೊ ದೀರ್ಘ ಆಯುಷ್ಯ ನೀಡುವಂತಾಗಲಿ .. ನಿಮ್ಮ ಅಭಿಮಾನಿಗಳಿಗೆ , ಇಡೀ ಚಿತ್ರರಂಗಕ್ಕೆ ಹಾಗೂ ನಿಮ್ಮ ಕುಟುಂಬಕ್ಕೆ ನಿಮ್ಮ ಅಗಲಿಕೆಯ ನೋವನ್ನು ಭರಿಸುವ೦ತಹ ಶಕ್ತಿ ನೀಡಲಿ … ಮತ್ತೆ ಹುಟ್ಟಿ ಬನ್ನಿ ಅಪ್ಪು ಸರ್ ನಿಮಗೆ ನನ್ನ “ನುಡಿ ನಮನ”
ನಟ ಕಿಚ್ಚ ಸುದೀಪ್ ಕನಲಿ ಹೋಗಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ಸಾವು ಅವರನ್ನು ತೀವ್ರವಾಗಿ ಘಾಸಿಗೊಳಿಸಿದೆ. ಚಿತ್ರೀಕರಣದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹೊರಗಿದ್ದ ಸುದೀಪ್ ವಿಷಯ ಗೊತ್ತಾಗಿ ಶುಕ್ರವಾರವೇ ಬೆಂಗಳೂರಿಗೆ ವಾಪಾಸ್ ಆಗಿ ಪುನೀತ್ ರಾಜಕುಮಾರ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಇದೀಗ ಅಂದ್ರೆ ಶನಿವಾರ ಕಿರಿಯ ಗೆಳೆಯ ಅಪ್ಪು ನೆನಪಿಸಿಕೊಂಡು ಭಾವುಕ ಪತ್ರವೊಂದನ್ನು ಸೋಷಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಪ್ಪು ಬಿಟ್ಟು ಹೋದ ಜಾಗವನ್ನು ಯಾರಿಂದಲೂ ತುಂಬಲು ಸಾಧ್ಯವೇ ಇಲ್ಲ ಎಂದು ದು:ಖ ವ್ಯಕ್ತಪಡಿಸಿದ್ದಾರೆ. ಅವರು ಹಂಚಿಕೊಂಡ ಪತ್ರದ ವಿವರ ಇಂತಿದೆ….
‘ ಇದು ಬಾಲ್ಯದಿಂದಲೂ ಬಂದ ಪ್ರಯಾಣ. ನಾವು ಅವರನ್ನು ಶಿವಮೊಗ್ಗದಲ್ಲಿ ಮೊದಲು ಭೇಟಿಯದಾಗ ಅವರು ಆಗಲೇ ಸ್ಟಾರ್ ಆಗಿದ್ದರು. ಅವರು ಭಾಗ್ಯವಂತ ಚಿತ್ರದ ಯಶಸ್ವಿ ಪ್ರವಾಸದಲ್ಲಿದ್ದರು.ಅದು ದೈತ್ಯಾಕಾರದ ಹಿಟ್ ಆಗಿತ್ತು.ನನ್ನ ತಂದೆ ಚಿತ್ರರಂಗದವರಿಗೆ ಚಿರಪರಿಚಿತ ಹೆಸರಾಗಿದ್ದರಿಂದ ಪುನೀತ್ ಅವರನ್ನು ಅವರ ಥಿಯೇಟರ್ ಭೇಟಿಯ ನಂತರ ಮಧ್ಯಾಹ್ನ ಊಟಕ್ಕೆ ಅವರ ಜನರು ಮನೆಗೆ ಕರೆತಂದರು.ಆಗ ಅವರನ್ನು ನಾನು ಮೊದಲ ಬಾರಿಗೆ ಭೇಟಿಯಾದೆ ಮತ್ತು ಪ್ರಾಯಶ: ವಯಸ್ಸಿನ ಅಂಶವು ನಮ್ಮನ್ನು ತಕ್ಷಣವೇ ಬೆರೆಯುವಂತೆ ಮಾಡಿತು.ಅವರು ಊಟದ ಉಪಚಾರಕ್ಕಿಂತ ನನ್ನ ಆಟಿಕೆಗಳ ಬಗ್ಗೆ ಹೆಚ್ಚು ಕುತೂಹಲ ಹೊಂದಿದ್ದರು.ಅಪ್ಪು ಮತ್ತು ನಾನು ಆಟದಲ್ಲಿ ನಿರತರಾಗಿದ್ದಾಗ ಒಬ್ಬರು ಪುನೀತ್‌ಗೆ ಊಟ ಮಾಡಿಸಲು ಮಹಿಳೆಯೊಬ್ಬರು ಅವರ ಹಿಂದೆಯೇ ಸುತ್ತುತ್ತಿದ್ದು ನನಗಿನ್ನೂ ನೆನಪಿದೆ.
ಅವರು ಖುಷಿಯಾಗಿದ್ದಿದ್ದನ್ನ ಕಂಡು ನಾನೂ ಖುಷಿಯಾಗಿದ್ದೆ. ಪುನೀತ್ ಅವರನ್ನ ನೋಡಲು ನಮ್ಮ ಅಕ್ಕ-ಪಕ್ಕದ ಮನೆಯವರೆಲ್ಲಾ ನಮ್ಮ ಮನೆಯ ಮುಂದೆಯೇ ನೆರೆದಿದ್ದರು. ಯಾಕಂದ್ರೆ, ಪುನೀತ್ ಅದಾಗಲೇ ಸ್ಟಾರ್ ಆಗಿದ್ದವರು. ಹೇಳಿ ಕೇಳಿ ಅವರು ಲೆಜೆಂಡ್ ಡಾ.ರಾಜ್‌ಕುಮಾರ್ ಅವರ ಪುತ್ರ’ ಅಂದಿನಿಂದ ನಾವು ಕೆಲ ಬಾರಿ ಭೇಟಿಯಾಗಿದ್ದೇವೆ ಮತ್ತು ಇದೇ ಬಾತೃತ್ವದ ಸಹದ್ಯೋಗಿಗಳಾಗಿ ಹೋದೆವು. ಬಳಿಕ ನಾವಿಬ್ಬರೂ ಸಿನಿಮಾ ರಂಗಕ್ಕೆ ಸೇರಿದ್ವಿ. ಅವರು ಒಳ್ಳೆಯ ನಟ, ಅತ್ಯುತ್ತಮ ಡ್ಯಾನ್ಸರ್ ಹಾಗೂ ಫೈಟರ್. ಇಂದು ಚಿತ್ರರಂಗ ಅವರಿಲ್ಲದೆ ಅಪೂರ್ಣವಾಗಿದೆ. ಕಾಲ ಬಹಳ ಕ್ರೂರಿ. ನಿನ್ನೆ ನಾನು ಬೆಂಗಳೂರಿಗೆ ಬಂದಿಳಿದು, ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಹೋದಾಗ ನನ್ನ ಉಸಿರು ಭಾರವಾಗ ತೊಡಗಿತು. ಅವರು ಮಲಗಿರುವುದನ್ನ ನೋಡಿ ಅನೇಕ ಪ್ರಶ್ನೆಗಳು ತಲೆಯಲ್ಲಿ ಮೂಡಿದವು. ಯಾಕೆ? ಹೇಗೆ? ಇದೇ ಮೊದಲ ಬಾರಿಗೆ ನನಗೆ ಸರಿಯಾಗಿ ಉಸಿರಾಡಲು ಸಾಧ್ಯವಾಗಲಿಲ್ಲ. ಅವರನ್ನ ಹೆಚ್ಚು ಹೊತ್ತು ನನ್ನಿಂದ ನೋಡಲು ಸಾಧ್ಯವಾಗಲಿಲ್ಲ. ಆ ನೋಟ ನನಗಿನ್ನೂ ಕಾಡುತ್ತಲೇ ಇದೆ. ಶಿವಣ್ಣ ಅವರ ಪರಿಸ್ಥಿತಿಯನ್ನ ಕಂಡು ನೋವಾಗುತ್ತಿದೆ. ‘’ಪುನೀತ್ ನನಗಿಂತ 13 ವರ್ಷ ಚಿಕ್ಕವನು. ಇದೇ ತೋಳಲ್ಲಿ ಅವನನ್ನ ಎತ್ತಿ ಆಡಿಸಿದ್ದೇನೆ. ನಾನು ಇಲ್ಲಿಯವರೆಗೂ ಸಾಕಷ್ಟು ನೋಡಿದ್ದೇನೆ. ನಾನು ಇನ್ನೇನು ನೋಡೋಕೆ ಇದೆ’’ ಅಂತ ಶಿವಣ್ಣ ನನಗೆ ಹೇಳಿದರು. ಆ ಮಾತು ಈಗಲೂ ನನ್ನನ್ನ ಕಾಡುತ್ತಿದೆ. ಎಲ್ಲರೂ ಆಘಾತಗೊಂಡಿದ್ದಾರೆ, ಜರ್ಜರಿತಗೊಂಡಿದ್ದಾರೆ. ಈ ವಾಸ್ತವವನ್ನು ಅರಗಿಸಿಕೊಳ್ಳಲು ಬಹಳ ಸಮಯ ಬೇಕು. ಅವರು ಬಿಟ್ಟು ಹೋದ ಜಾಗವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಆ ಜಾಗ ಯಾವತ್ತಿದ್ದರೂ ನಮ್ಮೆಲ್ಲರ ಪ್ರೀತಿಯ ಅಪ್ಪು ಅವರಿಗೆ ಸೇರಿದ್ದು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಗೆಳೆಯ’’ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. – ಎಂಟರ್ ಟೈನ್ ಮೆಂಟ್ ಬ್ಯೂರೋ ಸಿನಿಲಹರಿ
ನನ್ನ ನೆಚ್ಚಿನ ನಟನೇ ಇನ್ನಿಲ್ಲ ಅಂದ್ಮೇಲೆ, ನಾನೇಕೆ ಇರಲಿ ಅಂತ ಶನಿವಾರ ರಾತ್ರಿ ಆತ್ಮಹತ್ಯೆಗೆ ಶರಣಾದ ಯುವಕನ ಹೆಸರು ರಾಹುಲ್ ಬಾಬು ಗಾಡಿವಡ್ಡರ್. ಊರು ಅಥಣಿ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಸಾವು ಇಡೀ ರಾಜ್ಯಕ್ಕೆ ಬರಸಿಡಿಲಿನಂತೆ ಬಂದೆರೆಗಿದ ಬಹುದೊಡ್ಡ ಆಘಾತ. ಅದರಲ್ಲೂ ಅವರ ಅಪ್ಪಟ್ಟ ಅಭಿಮಾನಿಗಳಿಗೆ ಬಹುದೊಡ್ಡ ಮೈಂಡ್ ಸ್ಟ್ರೋಕ್. ಈಗಾಗಲೇ ಈ ಸುದ್ದಿಯ ಶಾಕ್ ನಿಂದ ರಾಜ್ಯದಲ್ಲಿ ಇಬ್ಬರು ಪವರ್ ಸ್ಟಾರ್ ಅಭಿಮಾನಿಗಳು ಮೃತಪಟ್ಟಿದ್ದಾರೆ. ಇದೀಗ ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಮತ್ತೋರ್ವ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದಿದೆ. ಆತನ ಹೆಸರೇ ರಾಹುಲ್ ಬಾಬು ಗಾಡಿವಡ್ಡರ್. ಈತ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅಥಣಿ ಪಟ್ಟಣದ ವಡ್ಡರ ಗಲ್ಲಿ ನಿವಾಸಿ. ಆತನಿಗೀಗ ವಯಸ್ಸು ೨೪. ಕಾಲೇಜು ವಿದ್ಯಾರ್ಥಿ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ. ಇತ್ತೀಚೆಗೆ ತೆರೆ ಕಂಡ ಪುನೀತ್ ಅಭಿನಯದ ಯಾವುದೇ ಸಿನಿಮಾವನ್ನು ಆತ ನೋಡದೆ ಬಿಟ್ಟಿಲ್ಲ. ಪುನೀತ್ ರಾಜಕುಮಾರ್ ಅಂದ್ರೆ ಆತನಿಗೆ ಪ್ರಾಣ. ಅವರ ಯಾವುದೇ ಸಿನಿಮಾ ರಿಲೀಸ್ ಅಂದ್ರೆ ಸಾಕು, ಅಲ್ಲಿನ ಥಿಯೇಟರ್ ನಲ್ಲಿ ತನ್ನದೇ ಸ್ವಂತ ಖರ್ಚಿನಲ್ಲಿ ಪೋಸ್ಟರ್, ಕಟೌಟ್ ಹಾಕಿಸಿ, ಸ್ಟಾರ್ ಮೇಲಿನ ಅಭಿಮಾನ ಮರೆಯುತ್ತಾ ಬಂದಿದ ಹುಡುಗ. ಶುಕ್ರವಾರ ದಿಢೀರ್ ಅಂತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದಿಗ್ಬ್ರಮೆಗೆ ಒಳಗಾಗಿದ್ದ. ಕೊನೆಗೆ ಸಂಜೆಯೇ ಸ್ನೇಹಿತರನ್ನೆಲ್ಲ ಸೇರಿಸಿ, ತನ್ನ ನೆಚ್ಚಿನ ನಟನ ಸಾವಿಗೆ ಸಂತಾಪ ಸೂಚಿಸಿ ಶದ್ರ್ದಾಂಜಲಿ ಸಲ್ಲಿಸಿದ್ದ.
ಅಲ್ಲಿಂದ ಸಂಜೆ ಸ್ನೇಹಿತರೆಲ್ಲ ಮನೆಗೆ ಹೋದ ಬಳಿಕ, ನನ್ನ ನೆಚ್ಚಿನ ನಟನೇ ಇನ್ನಿಲ್ಲ ಅಂದ್ಮೇಲೆ ನಾನೇಕೆ ಇರಲಿ ಅಂತ ಗೆಳೆಯರಿಗೆಲ್ಲ ಮೊಬೈಲ್ ಮೂಲಕ ಮೆಸೇಜ್ ರವಾನಿಸಿ, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗಿದೆ. ಈ ಕುರಿತು ಆತನ ಸ್ನೇಹಿತ ಅಥಣಿಯ ಜಗದೀಶ್ ಗೆಳೆಯನ ಅಗಲಿಕೆಗೆ ಅತೀವ ನೋವು ವ್ಯಕ್ತಪಡಿಸಿದ್ದು, ಯಾರಿಗೂ ಗೊತ್ತಾಗದ್ದಂತೆ ಈ ಅಚಾತುರ್ಯ ನಡೆದುಹೋಗಿದೆ ಎಂದು ಕಣ್ಣೇರಿಟ್ಟಿದ್ದಾರೆ. ʼ ರಾಹುಲ್ ತುಂಬಾ ಚುರುಕಿನ ಹುಡುಗ. ನಟ ಪುನೀತ್ ಅಂದ್ರೆ ಆತನಿಗೆ ಪಂಚ ಪ್ರಾಣ. ಅವರ ಸಿನಿಮಾ ರಿಲೀಸ್ ಆದ್ರೆ ಸಾಕು ಆತನಿಗೆ ಹಬ್ಬವೇ ಇದ್ದಂತೆ ಇರುತ್ತಿದ್ದ. ಆ ಸಿನಿಮಾ ಬೆಳಗಾವಿ, ಹುಬ್ಬಳಿ ಎಲ್ಲಿಯೇ ಸನಿಹ ಇದ್ದರೂ ಸರಿ ಅಲ್ಲಿಗೇ ಹೋಗಿ ನೋಡಿಕೊಂಡು ಬರುತ್ತಿದೆ. ಈಗ ಅವರ ಸಾವಿನ ಸುದ್ದಿ ಕೇಳಇ ಆತನೂ ಸಾವಿಗೆ ಶರಣಾಗಿರುವುದು ನಮಗೆಲ್ಲ ಅತೀವ ದು:ಖ ತಂದಿದೆ ಎಂದು ಜಗದೀಶ್ ಹೇಳಿಕೊಂಡಿದ್ದಾರೆ.
ದುನಿಯಾ ವಿಜಯ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಸಲಗ. ನಾಡಹಬ್ಬ ದಸರಾದಂದು ಬೆಳ್ಳಿತೆರೆ ಅಂಗಳದಲ್ಲಿ ಸಲಗ ಘೀಳಿಡಲಿದೆ. ನಡೆದಿದ್ದೇ ದಾರಿ ಎನ್ನುತ್ತಾ ಗ್ರ್ಯಾಂಡ್ ಎಂಟ್ರಿಕೊಡ್ತಿರುವ ಒಂಟಿಸಲಗಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಥ್ ಕೊಡ್ತಿದ್ದಾರೆ. ಅಕ್ಟೋಬರ್ 10 ರಂದು ಅದ್ದೂರಿಯಾಗಿ ನಡೆಯಲಿರುವ ಸಲಗ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ದೊಡ್ಮನೆ ರಾಜಕುಮಾರ ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ.
ಬ್ಲ್ಯಾಕ್‌ಕೋಬ್ರಾ ದುನಿಯಾ ವಿಜಯ್ ಅಭಿಮಾನಿಗಳಿಗೆ ಮಾತ್ರವಲ್ಲ ಎಲ್ಲಾ ಸೂಪರ್ ಸ್ಟಾರ್ ಗಳ ಫ್ಯಾನ್ಸ್ ಗೂ ಕೂಡ ಸಲಗ ಸ್ಟ್ಯಾಮಿನಾ ಎಂತಹದ್ದು ಅನ್ನೋದು ಗೊತ್ತಾಗಿದೆ. ಇಲ್ಲಿವರೆಗೂ ಸಲಗನ ಸಿನಿಮಾ ಸಾಮ್ರಾಜ್ಯದಿಂದ ಹೊರಬಂದಿರುವ ಒಂದೊಂದು ಪೋಸ್ಟರ್, ಟೀಸರ್, ಸಾಂಗ್ಸ್ ಹಾಗೂ ಮೇಕಿಂಗ್ ಝಲಕ್ ಒಂಟಿಸಲಗ ಮೇಲಿರುವ ನಿರೀಕ್ಷೆಯನ್ನು ತಾರಕಕ್ಕೇರಿಸಿದೆ. ಅಷ್ಟಕ್ಕೂ, ಇಲ್ಲಿವರೆಗೂ ನೀವು ನೋಡಿರುವುದು ಜಸ್ಟ್ ಟ್ರೈಲರ್ ಅಷ್ಟೇ ಪಿಕ್ಚರ್ ಅಭಿ ಬಾಕಿಹೈ..
ಸಲಗ ಸಿನಿಮಾವನ್ನು ಫಸ್ಟ್ ಡೇ ಫಸ್ಟ್ ಶೋ ಯಾಕೇ ಚಿತ್ರಮಂದಿರಕ್ಕೆ ಬಂದು ನೋಡಬೇಕು ? ಔಟ್ ಅಂಡ್ ಔಟ್ ಮಾಸ್ ಎಲಿಮೆಂಟ್ಸ್ ಇರುವ ಸಲಗದಲ್ಲಿ ಮತ್ತೆ ಏನೆಲ್ಲಾ ಇದೆ. ಅಂಡರ್ ವಲ್ಡ್ ಸಬ್ಜೆಕ್ಟ್ ಗೆ ಒಂದು ಕ್ಯೂಟ್ ಲವ್ ಸ್ಟೋರಿ ಹೇಗೆ ಬೆಸೆದುಕೊಂಡಿದೆ ಇದೆಲ್ಲದಕ್ಕೂ ಆನ್ಸರ್ ಸಿಗಬೇಕು ಅಂದರೆ ಚಿತ್ರಮಂದಿರಕ್ಕೆ ಬರ್ಲೆಬೇಕು. ಅದಕ್ಕೂ, ಮುನ್ನ ಸಲಗ ಫಿಲ್ಮ್ ಟೀಮ್ ಟ್ರೈಲರ್ ತೋರ್ಸೋಕೆ ಮುಂದಾಗಿದ್ದಾರೆ.
ಪವರ್ ಸ್ಟಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ. ಅಲ್ಲಿಂದಲೇ ಕಿಕ್ ಸ್ಟಾರ್ಟ್ ಪಡೆದುಕೊಂಡು ಯೂಟ್ಯೂಬ್ ಲೋಕದಲ್ಲಿ ಮೆರವಣಿಗೆ ಹೊರಡಲಿರುವ ಸಲಗ ಚಿತ್ರಪ್ರೇಮಿಗಳನ್ನು ಹುಚ್ಚೆಬ್ಬಿಸಿ ಥಿಯೇಟರ್ ಗೆ ಬರುವಂತೆ ಮಾಡೋದು ಸತ್ಯ ಎನ್ನುತ್ತೆ ಸಲಗ ಸಾಮ್ರಾಜ್ಯ. ಹಿಂಗಾಗಿದ್ದಲ್ಲಿ ಒಂಟಿಸಲಗನ ಅಬ್ಬರ ಆರ್ಭಟ ಮುಗಿಲನ್ನು ಸೀಳಿಕೊಂಡು ಹೋಗೋದು ಖರ್ರೇ. ನೋಡೋಣ ಅದೇನಾಗಲಿದೆ ಅಂತ.
ದೊಡ್ಮನೆಯ ಮತ್ತೊಂದು ಕುಡಿ ಬೆಳ್ಳಿತೆರೆಗೆ ಎಂಟ್ರಿ ಆಗ್ತಿದೆ. ಅಣ್ಣಾವ್ರ ಮಗಳು ಪೂರ್ಣಿಮಾ ಹಾಗೂ ನಟ ರಾಮ್ ಕುಮಾರ್ ದಂಪತಿಗಳ ಪುತ್ರಿ ಧನ್ಯ ರಾಮ್ ಕುಮಾರ್ ಇದೇ ಮೊದಲು ಬಣ್ಣ ಹಚ್ಚಿ ಬೆಳ್ಳಿ ತೆರೆಗೆ ಎಂಟ್ರಿಯಾಗಿರುವ ʼನಿನ್ನ ಸನಿಹಕೆʼ ಚಿತ್ರ ಇದೇ ವಾರ ತೆರೆ ಕಾಣುತ್ತಿದೆ. ಧನ್ಯ ರಾಮ ಕುಮಾರ್ ನಾಯಕಿ ಆಗಿಯಾಗಿ ಅಭಿನಯಿಸಿದ ಮೊದಲ ಚಿತ್ರ ಇದು. ಯುವ ಪ್ರತಿಭೆ ಸೂರಜ್ ಗೌಡ ಈ ಚಿತ್ರದ ನಾಯಕ ನಟ. ಇದೇ ಶುಕ್ರವಾರ ಈ ಚಿತ್ರ ರಾಜ್ಯಾದ್ಯಂತ ತೆರೆಕಾಣುತ್ತಿದೆ.
ವೈಟ್ ಅಂಡ್ ಗ್ರೇ ಪಿಕ್ಚರ್ಸ್ ಲಾಂಛನದಲ್ಲಿ ಅಕ್ಷಯ್ ರಾಜಶೇಖರ್ ಹಾಗೂ ರಂಗನಾಥ ಈ ಚಿತ್ರ ನಿರ್ಮಿಸಿ, ತೆರೆಗೆ ತರುತ್ತಿದ್ದಾರೆ. ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು ಮುದ್ದಾದ ಪ್ರೇಮ ಕಥೆಯ ಚಿತ್ರ. ಚಿತ್ರದ ನಾಯಕ ಆದಿತ್ಯ ಹಾಗೂ ನಾಯಕಿ ಅಮೃತಾ ಲಿವಿಂಗ್ ರಿಲೇಷನ್ ಶಿಫ್ ನಲ್ಲಿರುವ ಕಥೆಯನ್ನು ರೋಮ್ಯಾಂಟಿಕ್ ಕಾಮಿಡಿಯಾಗಿ ಹೇಳಲಾಗಿದೆಯಂತೆ. ಚಿತ್ರಕ್ಕೆ ನಟ ಸೂರಜ್ ಗೌಡ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಅಲ್ಲದೆ ಚಿತ್ರದ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅಭಿಲಾಷ್ ಕಲತಿ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ರಘು ದೀಕ್ಷಿತ್ ಅವರ ಸಂಗೀತ ಸಂಯೋಜನೆ, ವಾಸುಕಿ ವೈಭವ್ ಅವರ ಸಾಹಿತ್ಯ ಚಿತ್ರಕ್ಕಿದೆ.
ಈಗಾಗಲೇ ಸುಮಧುರ ಹಾಡುಗಳು ಹಾಗೂ ಕುತೂಹಲಭರಿತ ಟ್ರೇಲರ್ ಮೂಲಕ ಸಾಕಷ್ಟು ಕೂತೂಹಲ ಮೂಡಿಸಿದೆ. ಚಿತ್ರ ಪ್ರೇಮಿಗಳಲ್ಲಿ ಇದೇ ಕಾರಣಕ್ಕೆ ದೊಡ್ಡ ನಿರೀಕ್ಷೆ ಮೂಡಿಸಿದೆ.ಉಳಿದಂತೆ ತಾರಾಗಣದಲ್ಲಿ ಮಂಜುನಾಥ್ ಗೌಡ, ಅರುಣಾ ಬಾಲರಾಜ್, ಚಿತ್ಕಲಾ ಬಿರಾದಾರ್, ಕರಿಸುಬ್ಬು, ರಜನಿಕಾಂತ್, ಸೌಮ್ಯ ಭಟ್, ನಂದಗೋಪಾಲ್ ಇದ್ದಾರೆ. ಸುರೇಶ್ ಆರ್ಮಗಂ ಅವರ ಸಂಕಲನ, ವರದರಾಜ ಕಾಮತ್ ಅವರ ಕಲಾನಿರ್ದೇಶನ, ಮೋಹನ್ ನ್ರತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ನಾಳೆಯಿಂದ ದಸರಾ ಶುರುವಾಗುತ್ತಿದೆ. ದಸರಾ ಮೊದಲ ದಿನವೇ ನಾಳೆ ಮನು ರಂಜನ್ ಅಭಿನಯದ ʼಮುಗಿಲ್ ಪೇಟೆʼ ಚಿತ್ರದ ವಿಡಿಯೋ ಸಾಂಗ್ ರಿಲೀಸ್ ಆಗುತ್ತಿದೆ. ನಾಡಹಬ್ಬದ ಸಂಭ್ರಮಕ್ಕಾಗಿ ಚಿತ್ರಪ್ರೇಮಿಗಳಿಗೆ ಚಿತ್ರತಂಡದ ಉಡುಗೊರೆ ಇದು. ದೀಪಾವಳಿಗೆ ಈ ಚಿತ್ರ ತೆರೆ ಕಾಣುತ್ತಿದೆ. ಸದ್ಯಕ್ಕೆ ರಿಲೀಸ್ ಸಿದ್ದತೆಯಲ್ಲಿರುವ ಚಿತ್ರ ತಂಡ ಪಬ್ಲಿಸಿಟಿ ಕಾರ್ಯಕ್ಕೆ ಮುಂದಾಗಿದೆ. ಈಗ ದಸರಾ ಪ್ರಯುಕ್ತ ನಾಳೆ ಅಂದರೆ, ಗುರುವಾರ ಚಿತ್ರದ ವಿಡಿಯೋ ಸಾಂಗ್ ವೊದನ್ನು ರಿಲೀಸ್ ಮಾಡುತ್ತಿದೆ. ಈ ಚಿತ್ರಕ್ಕೆ ಸಂಗೀತ ನೀಡಿದವರು ಯಶಸ್ವಿ ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್.
ಅಂದಹಾಗೆ, ʼಮುಗಿಲ್ ಪೇಟೆʼ ಹೆಸರೇ ಕುತೂಹಲ ಹುಟ್ಟಿಸುವಂತೆ ಇದೊಂದು ಪಕ್ಕಾ ಪ್ರೇಮ ಕಥಾ ಹಂದರ ಚಿತ್ರ. ಮನುರಂಜನ್ ಹಾಗೂ ಕಯಾದು ಲೋಹರ್ ಪ್ರಮುಖ ತಾರಾಗಣದ ಚಿತ್ರ. ದಸರಾ ಅಂಗವಾಗಿ ಚಿತ್ರ ತಂಡ ಬಿಡುಗಡೆ ಮಾಡುತ್ತಿರುವ ಬಿಡುಗಡೆ ಮಾಡುತ್ತಿರುವ ಹಾಡಿಗೆ ನಿರ್ದೇಶಕ ಭರತ್ ನಾವುಂದ ಗೀತೆ ರಚನೆ ಮಾಡಿದ್ದಾರೆ. ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ. ನಕುಲ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಈ ಹಾಡು ನಾಡ ಹಬ್ಬದ ಸಂಭ್ರಮಕ್ಕಾಗಿ ಚಿತ್ರಪ್ರೇಮಿಗಳಿಗೆ ಚಿತ್ರತಂಡದ ಉಡುಗೊರೆ ಆಗಿ ಹೊರ ಬರುತ್ತಿದೆ. ಈಗಾಗಲೇ ಈ ಚಿತ್ರದ ಟ್ರೇಲರ್ ಹೊರ ಬಂದು, ಸಾಕಷ್ಟು ಮೆಚ್ಚುಗೆ ಪಡೆದಿದೆ. ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ದೊಡ್ಡ ಕುತೂಹಲವೂ ಇದೆ.
ಮೋತಿ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ ಕುಮಾರ್ ಅವರು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ನಿರ್ದೇಶಕ ಭರತ್ ನಾವುಂದ ಅವರೇ ಚಿತ್ರಕತೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಕತೆಗೆ ತಕ್ಕಂತೆ ಈ ಚಿತ್ರಕ್ಕೆ ವಿಶೇಷವಾದ ತಾಣಗಳಲ್ಲಿಯೇ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಮನುರಂಜನೆ ಹಾಗೂ ಕಯಾದು ಲೋಹರ್ ಅವರೊಂದಿಗೆ ರಿಷಿ, ಅವಿನಾಶ್, ತಾರಾ ಅನುರಾಧ, ಸಾಧುಕೋಕಿಲ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಗಣವೇ ಇದೆ. ರವಿವರ್ಮ (ಗಂಗು)ಅವರ ಛಾಯಾಗ್ರಹಣ “ಮುಗಿಲ್ ಪೇಟೆ” ಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಅರ್ಜುನ್ ಕಿಟ್ಟು ಸಂಕಲನ, ಡಾ. ರವಿವರ್ಮ, ವಿಜಯ್ ಸಾಹಸ ನಿರ್ದೇಶನ, ಹರ್ಷ, ಮುರಳಿ , ಮೋಹನ್ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಹನುಮಂತು ಅವರ ನಿರ್ಮಾಣ ನಿರ್ವಹಣೆಯಿದೆ.
ನಟರಾಕ್ಷಸನಿಗೆ ಥಿಯೇಟರ್ ಸಿಗ್ತಿಲ್ಲವಾ? ಏನ್ ಹೇಳ್ತಿದ್ದೀರಿ ನೀವು? ಸರ್ಕಾರ ಹಂಡ್ರೆಡ್ ಪರ್ಸೆಂಟ್ ಅನುಮತಿ ಕೊಟ್ಟಿದ್ದೆ ತಾನೇ? ಮತ್ಯಾಕೆ ನಮ್ಮ ಡಾಲಿಗೆ ಥಿಯೇಟರ್ ಕೊಡ್ತಿಲ್ಲ? ಕರುನಾಡಿನಲ್ಲಿ ನಮ್ಮ ಮಿಠಾಯಿ ಸೂರಿ ಅಣ್ಣಂದು ಹವಾ ಹೆಂಗೈತಿ ಅನ್ನೋದು ಅವರಿಗೆ ಗೊತ್ತಿಲ್ಲವಾ? ಹೀಗಂತ ಕೇಳ್ತಿರೋದು ಒನ್ ಅಂಡ್ ಓನ್ಲಿ ಡಾಲಿಬಾಸ್ ಅಭಿಮಾನಿಗಳು. ಫ್ಯಾನ್ಸ್ ಕೇಳ್ತಿರೋದ್ರಲ್ಲಿ ಅರ್ಥ ಇದೆ. ಹಾಗಾದ್ರೆ, ಡಾಲಿ ದರ್ಬಾರ್ ಚಿತ್ರಮಂದಿರಲ್ಲಿ ಯಾಕಿಲ್ಲ? ರತ್ನನ್ ಪ್ರಪಂಚ ಓಟಿಟಿಯಲ್ಲಿ ಬಿಡುಗಡೆಯಾಗ್ತಿರುವುದಕ್ಕೆ ಕಾರಣ ಏನು? ನೋಡೋಣ ಬನ್ನಿ
ಡಾಲಿ ಬಜಾರ್‌ನಲ್ಲಿ ಈ ಹೆಸರಿಗಿರುವ ಬೆಲೆನೇ ಬೇರೆ ಬಿಡಿ. ಡೈರೆಕ್ಟರ್ ಸೂರಿಯವರು ಅದ್ಯಾವ್ ಗಳಿಗೆಯಲ್ಲಿ ಡಾಲಿ ಕ್ಯಾರೆಕ್ಟರ್‌ನ ಸ್ಕೆಚ್ ಮಾಡಿದ್ರೋ ಏನೋ ಗೊತ್ತಿಲ್ಲ.? ಕೇವಲ ಎರಡೇ ಎರಡು ಅಕ್ಷರದ ಡಾಲಿ ಪಾತ್ರ ಧನಂಜಯ್ ಬದುಕುನ್ನೇ ಬದಲಾಯಿಸಿಬಿಡ್ತು. ಗಾಂಧಿನಗರದಲ್ಲಿ ಡಾಲಿಯ ಹೊಸ ಅಲೆ ಆರಂಭವಾಯ್ತು, ಧನಂಜಯ್ ನಟನೆಗೆ ನಟರಾಕ್ಷಸ' ಪಟ್ಟ ಸಿಗ್ತು. ಅಭಿಮಾನಿ ಸಂಘಗಳು ಹುಟ್ಟಿಕೊಂಡವು, ಲಕ್ಷಾಂತರ ಫ್ಯಾನ್-ಫಾಲೋಯರ್ಸ್ ಸಿಕ್ಕರು. ನಿರ್ದೇಶಕರು-ನಿರ್ಮಾಪಕರು ಡಾಲಿ ಕಾಲ್‌ಶೀಟ್‌ಗೆ ಕ್ಯೂ ನಿಂತರು. ಪರಭಾಷೆಯವರು ರೆಡ್‌ಕಾರ್ಪೆಟ್ ಹಾಕಿಕೊಂಡು ರ‍್ಕೊಂಡು ಹೋದರು. ಇವತ್ತು, ಧನಂಜಯ್ ಅಕೌಂಟ್‌ನಲ್ಲಿ ಪಿಂಕ್‌ನೋಟ್ ಕೇಕೆಹಾಕ್ತಿದೆ ಅಂದರೆ, ಮನೆಮುಂದೆ ದುಬಾರಿ ಕಾರು ನಿಂತಿದೆ ಅಂದರೆ, ಕೈಯಲ್ಲಿ ಹತ್ತಾರು ಸಿನಿಮಾಗಳು ಇವೆ ಅಂದರೆ, ಅದಕ್ಕೆ ಮೊದಲ ಕಾರಣಡಾಲಿ’ ಪಾತ್ರ ಮತ್ತು ಆ ಪಾತ್ರದ ಸೃಷ್ಟಿಕರ್ತ ಸೂರಿಯವರು. ಅಂತಿಮವಾಗಿ ಸಿನಿಮಾ ಮೇಲೆ ಧನಂಜಯ್‌ಗಿರುವ ಶ್ರದ್ದೆ-ಭಕ್ತಿ-ನಿಯತ್ತು ಮತ್ತು ಕಲಾಪ್ರೀತಿಯೇ ಡಾಲಿ ಬೇಡಿಕೆಗೆ ಸಾಕ್ಷಿ ಅಲ್ಲವೇ.
ಎಲ್ಲಾ ಓಕೆ ರತ್ನನ್ ಪ್ರಪಂಚ' ಚಿತ್ರ ಓಟಿಟಿನಲ್ಲಿ ಯಾಕೇ ಬಿಡುಗಡೆಯಾಗ್ತಿದೆ? ಥಿಯೇಟರ್ ಯಾಕೇ ಸಿಗ್ತಿಲ್ಲ ಹೇಳ್ರಿ ಫಸ್ಟ್? ನಿಜವಾಗ್ಲೂ ಈ ಪ್ರಶ್ನೆಗೆ ಅಂತಿಮ ಉತ್ತರ ಕೊಡುವುದಕ್ಕೆ ಸಾಧ್ಯವಿಲ್ಲ. ಆದರೆ,ರತ್ನನ್ ಪ್ರಪಂಚ’ ಚಿತ್ರದ ಅನ್ನದಾತರು ಅಮೇಜಾನ್ ಪ್ರೆöÊಮ್‌ನಲ್ಲೇ ಮೊದಲು ರಿಲೀಸ್ ಮಾಡೋದಕ್ಕೆ ನಿರ್ಧಾರ ಮಾಡಿರೋದ್ರಿಂದ ಒಂದೊಳ್ಳೆ ರೇಟ್‌ಗೆ ಚಿತ್ರ ಮಾರಾಟವಾಗಿರಬಹುದು. ನಿರ್ಮಾಪಕರಾದ ಕಾರ್ತಿಕ್ ಗೌಡ ಹಾಗೂ ಯೋಗಿ. ಜಿ. ರಾಜ್ ಇಬ್ಬರು ಖುಷಿಯಾಗಿರಬಹುದು. ಹೀಗಾಗಿಯೇ, ಸ್ಟಾರ್‌ನಟರುಗಳಿಬ್ಬರ ಸಿನಿಮಾದ ಅಬ್ಬರ ಆರ್ಭಟದ ನಡುವೆ `ರತ್ನನ್ ಪ್ರಪಂಚ’ ಬೇಡವೆಂದು ತೀರ್ಮಾನಿಸಿ ಓಟಿಟಿ ಮೊರೆ ಹೋಗಿರಬಹುದು ಎನ್ನುತ್ತೆ ಮೂಲ ಮತ್ತು ವಾಸ್ತವ
ಅಕ್ಟೋಬರ್ ೧೪ರಂದು ಸಲಗ-ಕೋಟಿಗೊಬ್ಬ-೩ ಚಿತ್ರ ತೆರೆಗೆ ಅಪ್ಪಳಿಸ್ತಿರುವುದು ನಿಮಗೆಲ್ಲಾ ಗೊತ್ತೆಯಿದೆ. ದುನಿಯಾ ವಿಜಯ್ ಹಾಗೂ ಅಭಿನಯ ಚಕ್ರವರ್ತಿ ಇಬ್ಬರು ಮುಖಾಮುಖಿಯಾಗ್ತಿರೋದ್ರಿಂದ ಸಣ್ಣಪುಟ್ಟ ಸಿನಿಮಾಗಳು ತಮ್ಮ ರಿಲೀಸ್ ಡೇಟ್‌ನ ಮುಂದಕ್ಕೆ ಹಾಕುತ್ತಿದ್ದಾರೆ. ಆದರೆ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕದ ರತ್ನನ್ ಪ್ರಪಂಚ' ಟೀಮ್ ಅಮೇಜಾನ್ ಪ್ರೆöÊಮ್‌ನಲ್ಲಿ ಅಕ್ಟೋಬರ್ ೨೨ರಂದು ರಿಲೀಸ್ ಮಾಡೋದಕ್ಕೆ ಮುಂದಾಗಿದ್ದಾರೆ. ಓಟಿಟಿಯಲ್ಲಿ ಬಿಡುಗಡೆ ಗೊಂಡ ನಂತರ ಎಷ್ಟೋ ಸಿನಿಮಾಗಳು ಬೆಳ್ಳಿತೆರೆಯಲ್ಲೂ ಪ್ರದರ್ಶನ ಕಾಣುತ್ತಿವೆ, ಅದರಂತೇ, ಡಾಲಿ ಧನಂಜಯ್ ಅಭಿನಯದರತ್ನನ್ ಪ್ರಪಂಚ’ ಚಿತ್ರ ಕೂಡ ಅಮೇಜಾನ್‌ನಲ್ಲಿ ವೀಕ್ಷಕರನ್ನು ತಲುಪಿ ನಂತರ ಗಾಂಧಿನಗರದಲ್ಲಿ ಚಿತ್ರಪ್ರೇಮಿಗಳನ್ನು ಕೈಬೀಸಿ ಕರೆಯಬಹುದು.
ರತ್ನನ್ ಪ್ರಪಂಚ' ಬಹಳಷ್ಟು ಕೂತೂಹಲ ಮೂಡಿಸಿದ್ದ ಚಿತ್ರ. ಇದು ಬರೀ ಸ್ಯಾಂಪಲ್ ಅಷ್ಟೇ ಇನ್ನೂ ಏನೆನೋ ಐತಿ. ಈ ನನ್ನ ಬೊಂಬಾಟ್ ಆಗಿರೋ ಪ್ರಪಂಚಾನ ನೋಡ್ಬೇಕು ನೀವು. ನಮ್ಮ ಮದರ್ ಸರೋಜಾ, ಮಯೂರಿ, ತಬಸುಮು, ಅಹಮ್ಮದ್ ಅಲಿ, ಯಲ್ಲವ್ವ, ಉಡಾಳ್ ಬಾಬುರಾವ್, ಬಸಪ್ಪ, ಬೆಣ್ಣಿ ನಾನು ರತ್ನಾಕರ ಹೀಗಂತ ಹೇಳಿ ಕೊನೆಗೆ ನಿಮ್ಮಮ್ಮ ನಿಮ್ಮಮ್ಮ ಅಲ್ಲ... ನಮ್ಮಮ್ಮ ನಮ್ಮಮ್ಮ ಅಲ್ಲ... ನಮ್ಮಮ್ಮ ನಮ್ಮಮ್ಮ...ನಿಮ್ಮಮ್ಮ ನಿಮ್ಮಮ್ಮ... ಅಂತ ಡಾಲಿ ಡೈಲಾಗ್ ಬಿಟ್ಟಿದ್ದರಿಂದ ಸಿನಿರಸಿಕರ ಮನಸ್ಸು ಅರಳಿತ್ತು. ಪ್ರೇಮ್ ಅವರ ಜೋಗಿ ಪಿಕ್ಚರ್‌ನಲ್ಲಿ ಯಾವ್ ರೇಂಜ್ಗೆ ಮದರ್ ಸೆಂಟಿಮೆAಟೋ ಇತ್ತೋ ಅಂತಹದ್ದೇ ಸೆಂಟಿಮೆAಟ್ ಇಲ್ಲೂ ಇದೆ ಅಂತ ಹೇಳಿದಾಗರತ್ನಾಕರನ ಪ್ರಪಂಚ’ ಎರಡನೇ ಜೋಗಿಯಾಗ್ಬೋದಾ ಗುರು ಅಂತ ಪ್ರೇಕ್ಷಕರು ಪ್ರಶ್ನೆ ಮಾಡಿಕೊಂಡಿದ್ದುAಟು.
ದಯವಿಟ್ಟು ಗಮನಿಸಿ' ಹೆಸರಿನ ಚಿತ್ರ ಮಾಡಿ ಕನ್ನಡ ಸಿನಿಮಾಪ್ರೇಕ್ಷಕರ ಹೃದಯ ಗೆದ್ದಿದ್ದ ನಿರ್ದೇಶಕ ರೋಹಿತ್ ಪದಕಿ,ರತ್ನನ್ ಪ್ರಪಂಚ’ ಎನ್ನುವ ಕೂತೂಹಲಭರಿತ ಚಿತ್ರದೊಂದಿಗೆ ಮರಳಿದ್ದಾರೆ. ರತ್ನಾಕರನಾಗಿ ಡಾಲಿ ಅಭಿನಯಿಸಿದ್ದು ಮಿಡಲ್ ಕ್ಲಾಸ್ ಹುಡುಗನಾಗಿ ಮಿಂಚಿದ್ದಾರೆ. ಉಮಾಶ್ರೀ ರತ್ನಾಕರನಿಗೆ ತಾಯಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ರೆಬಾ ಜಾನ್ ಹೀರೋಯಿನ್ನಾಗಿ ಕಂಗೊಳಿಸಿದ್ದಾರೆ. ಹಿರಿಯ ನಟಿ ಶ್ರುತಿ, ಅನುಪ್ರಭಾಕರ್, ರವಿಶಂಕರ್‌ಗೌಡ, ಪ್ರಮೋದ್, ವೈನಿಧಿ, ಅಚ್ಯುತ್ ಕುಮಾರ್, ರಾಜೇಶ್ ನಟರಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂಭತ್ತು ಪಾತ್ರಗಳು ಒಂದು ಕೂತೂಹಲಭರಿತ ಕಥೆಯನ್ನು ಪ್ರೇಕ್ಷಕ ಮಹಾಷಯರಿಗೆ ಉಣಬಡಿಸೋದಕ್ಕೆ ಫಿಲ್ಮ್ಟೀಮ್ ಜೊತೆ ಅಮೇಜಾನ್ ಕೂಡ ರೆಡಿಯಾಗಿದೆ.
ನಗು-ತಿರುವು-ಪ್ರೀತಿಯ ಹೂರಣವೇ ರತ್ನನ್ ಪ್ರಪಂಚ' ಎಂದು ಟ್ವೀಟ್ ಮಾಡಿರುವ ಡಾಲಿ ಸಿನಿಮಾದತ್ತ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ರತ್ನನ್ ಪ್ರಪಂಚ’ಕ್ಕಿದ್ದು ಹಾಡುಗಳು ಅದ್ಬುತವಾಗಿ ಮೂಡಿಬಂದಿದೆ. ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್ ಅಡಿಯ ಚಿತ್ರ ಇದಾಗಿದೆ. ಮನರಂಜನೆಗೆ ಬರವಿಲ್ಲದ `ರತ್ನನ್ ಪ್ರಪಂಚ’ವನ್ನು ಸಿನಿಮಾಪ್ರೇಮಿಗಳು ಯಾವ್ ರೀತಿ ಸ್ವೀಕರಿಸುತ್ತಾರೆ ಅನ್ನೋದನ್ನು ಕಾದುನೋಡಬೇಕಿದೆ. ಲಾಂಗ್, ಪಿಸ್ತೂಲ್ ಬಿಟ್ಟು ಕೈಯಲ್ಲಿ ಮಲ್ಲಿಗೆ ಹೂವು, ನಿಂಬೆಹುಳಿ ಪ್ಲೇವರ್ ಪೆಪ್ಪರ್ ಮೆಂಟ್ ಇಟ್ಕೊಂಡು ಸ್ಕಿçÃನ್‌ಮೇಲೆ ಬರುತ್ತಿರುವ ಮಿಠಾಯಿ ಸೂರಿ ಮನಸೂರೆಗೊಳ್ತಾರಾ ಜಸ್ಟ್ ವೇಯ್ಟ್ ಅಂಡ್ ವಾಚ್