ನಾಳೆಯಿಂದ ದಸರಾ ಶುರುವಾಗುತ್ತಿದೆ. ದಸರಾ ಮೊದಲ ದಿನವೇ ನಾಳೆ ಮನು ರಂಜನ್ ಅಭಿನಯದ ʼಮುಗಿಲ್ ಪೇಟೆʼ ಚಿತ್ರದ ವಿಡಿಯೋ ಸಾಂಗ್ ರಿಲೀಸ್ ಆಗುತ್ತಿದೆ. ನಾಡಹಬ್ಬದ ಸಂಭ್ರಮಕ್ಕಾಗಿ ಚಿತ್ರಪ್ರೇಮಿಗಳಿಗೆ ಚಿತ್ರತಂಡದ ಉಡುಗೊರೆ ಇದು. ದೀಪಾವಳಿಗೆ ಈ ಚಿತ್ರ ತೆರೆ ಕಾಣುತ್ತಿದೆ. ಸದ್ಯಕ್ಕೆ ರಿಲೀಸ್ ಸಿದ್ದತೆಯಲ್ಲಿರುವ ಚಿತ್ರ ತಂಡ ಪಬ್ಲಿಸಿಟಿ ಕಾರ್ಯಕ್ಕೆ ಮುಂದಾಗಿದೆ. ಈಗ ದಸರಾ ಪ್ರಯುಕ್ತ ನಾಳೆ ಅಂದರೆ, ಗುರುವಾರ ಚಿತ್ರದ ವಿಡಿಯೋ ಸಾಂಗ್ ವೊದನ್ನು ರಿಲೀಸ್ ಮಾಡುತ್ತಿದೆ. ಈ ಚಿತ್ರಕ್ಕೆ ಸಂಗೀತ ನೀಡಿದವರು ಯಶಸ್ವಿ ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್.
ಅಂದಹಾಗೆ, ʼಮುಗಿಲ್ ಪೇಟೆʼ ಹೆಸರೇ ಕುತೂಹಲ ಹುಟ್ಟಿಸುವಂತೆ ಇದೊಂದು ಪಕ್ಕಾ ಪ್ರೇಮ ಕಥಾ ಹಂದರ ಚಿತ್ರ. ಮನುರಂಜನ್ ಹಾಗೂ ಕಯಾದು ಲೋಹರ್ ಪ್ರಮುಖ ತಾರಾಗಣದ ಚಿತ್ರ. ದಸರಾ ಅಂಗವಾಗಿ ಚಿತ್ರ ತಂಡ ಬಿಡುಗಡೆ ಮಾಡುತ್ತಿರುವ ಬಿಡುಗಡೆ ಮಾಡುತ್ತಿರುವ ಹಾಡಿಗೆ ನಿರ್ದೇಶಕ ಭರತ್ ನಾವುಂದ ಗೀತೆ ರಚನೆ ಮಾಡಿದ್ದಾರೆ. ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ. ನಕುಲ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಈ ಹಾಡು ನಾಡ ಹಬ್ಬದ ಸಂಭ್ರಮಕ್ಕಾಗಿ ಚಿತ್ರಪ್ರೇಮಿಗಳಿಗೆ ಚಿತ್ರತಂಡದ ಉಡುಗೊರೆ ಆಗಿ ಹೊರ ಬರುತ್ತಿದೆ. ಈಗಾಗಲೇ ಈ ಚಿತ್ರದ ಟ್ರೇಲರ್ ಹೊರ ಬಂದು, ಸಾಕಷ್ಟು ಮೆಚ್ಚುಗೆ ಪಡೆದಿದೆ. ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ದೊಡ್ಡ ಕುತೂಹಲವೂ ಇದೆ.
ಮೋತಿ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ ಕುಮಾರ್ ಅವರು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ನಿರ್ದೇಶಕ ಭರತ್ ನಾವುಂದ ಅವರೇ ಚಿತ್ರಕತೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಕತೆಗೆ ತಕ್ಕಂತೆ ಈ ಚಿತ್ರಕ್ಕೆ ವಿಶೇಷವಾದ ತಾಣಗಳಲ್ಲಿಯೇ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಮನುರಂಜನೆ ಹಾಗೂ ಕಯಾದು ಲೋಹರ್ ಅವರೊಂದಿಗೆ ರಿಷಿ, ಅವಿನಾಶ್, ತಾರಾ ಅನುರಾಧ, ಸಾಧುಕೋಕಿಲ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಗಣವೇ ಇದೆ. ರವಿವರ್ಮ (ಗಂಗು)ಅವರ ಛಾಯಾಗ್ರಹಣ “ಮುಗಿಲ್ ಪೇಟೆ” ಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಅರ್ಜುನ್ ಕಿಟ್ಟು ಸಂಕಲನ, ಡಾ. ರವಿವರ್ಮ, ವಿಜಯ್ ಸಾಹಸ ನಿರ್ದೇಶನ, ಹರ್ಷ, ಮುರಳಿ , ಮೋಹನ್ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಹನುಮಂತು ಅವರ ನಿರ್ಮಾಣ ನಿರ್ವಹಣೆಯಿದೆ.
- ಎಂಟರ್‌ಟೈನ್ ಮೆಂಟ್ ಬ್ಯೂರೋ ಸಿನಿಲಹರಿ