ಟ್ರೇ ಲರ್‌ ಮೂಲಕ ಸೌಂಡ್‌ ಮಾಡುತ್ತಿದೆ ಟೆಕ್ಕಿಗಳ ಕಾನ್ಸೀಲಿಯಂ-ಕನ್ನಡಕ್ಕೊಂದು ಸೈನ್ಸ್‌, ಫಿಕ್ಷನ್ , ಥ್ರಿಲ್ಲರ್‌ ಸಿನಿಮಾ !

ಸಿನಿಮಾ ರಂಗಕ್ಕೆ ಬರುವ ಹೊಸಬರಿಗೆ ಹೊಸತಾಗಿ ಗುರುತಿಸಿಕೊಳ್ಳುವ ಹಂಬಲ. ಅದು ಚಿತ್ರಕಥೆ ಮಾತ್ರವಲ್ಲದೆ ಚಿತ್ರ ಟೈಟಲ್‌ ಕೂಡ ಡಿಫೆರೆಂಟ್‌ ಆಗಿರಲಿ ಅನ್ನೋ ಹಂಬಲ. ಅಂತಹ ಹೊಸಬರ ಅನೇಕ ಸಿನಿಮಾಗಳ ಸಾಲಿಗೆ ಈಗ ಮತ್ತೊಂದು ಸಿನಿಮಾ ಸೇರ್ಪಡೆ. ಆ ಚಿತ್ರದ ಹೆಸರು ʼಕಾನ್ಸೀಲಿಯಂʼ. ತಕ್ಷಣಕ್ಕೆ ಇಲ್ಲಿ ನಿಮಗೆ ಎದುರಾಗುವ ಪ್ರಶ್ನೆ, ಕನ್ನಡದಲ್ಲೊಂದು ಇಂತಹ ಪದ ಇದೀಯಾ ಅನ್ನೋದು. ಅಸಲಿಗೆ ಕನ್ನಡದಲ್ಲಿ ಇಂತಹದೊಂದು ಪದವೇ ಕನ್ನಡದಲ್ಲಿ ಇಲ್ಲ, ಬದಲಿಗೆ ಇದು ಲ್ಯಾಟಿನ್‌ ಭಾಷೆಯ ಪದ. ಅದನ್ನೇ ಇಲ್ಲಿ ಚಿತ್ರದ ಶೀರ್ಷಿಕೆಯಾಗಿಸಿಕೊಂಡು ಸಿನಿಮಾ ಮುಗಿಸಿಕೊಂಡು ಬಂದಿದೆ ಹೊಸಬರ ಒಂದು ತಂಡ

ಲ್ಯಾಟಿನ್‌ ಭಾಷೆಯಲ್ಲಿ ಕಾನ್ಸೀಲಿಯಂ ಅಂದ್ರೆ ಅಡ್ವೈಜ್‌ ಅಂತಲೂ ಹೌದು. ಅಂದ್ರೆ ಕನ್ನಡದಲ್ಲಿ ಸಲಹೆ ಅಂತ. ಐಟಿ ಉದ್ಯೋಗಿಗಳು ನಿರ್ಮಿಸಿರುವ ಈ ಚಿತ್ರದಲ್ಲಿ ಡಿಎನ್ ಎ, ಸ್ಪೇಸ್, ಟೆಕ್ನಾಲಜಿ ಇತ್ಯಾದಿ ವಿಷಯಗಳನ್ನಿಟ್ಟು ಸೈನ್ಸ್ ಫಿಕ್ಷನ್ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಕಥೆ ಹೇಳೋದಿಕ್ಕೆ ರೆಡಿಯಾಗಿದ್ದಾರೆ ಯುವ ನಿರ್ದೇಶಕ ಸಮರ್ಥ್. ಈ ಸಿನಿಮಾದ ಟ್ರೇಲರ್ ಆನಂದ್ ಆಡಿಯೋದಲ್ಲಿ ರಿಲೀಸ್ ಆಗಿದ್ದು, ಸಖತ್ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ. ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವ ಅನುಭವ ಇರುವ ಮಂಡ್ಯದ ಪ್ರತಿಭೆ ಸಮರ್ಥ್‌,ಈ ಚಿತ್ರದ ನಿರ್ದೇಶನ ಮಾಡುವುದರ ಜೊತೆಗೆ ಮೇನ್ ಲೀಡ್ ರೋಲ್ ಪ್ಲೇ ಮಾಡಿದ್ದಾರೆ.

ಸೀತಾರಾಮ್ ಶಾಸ್ತ್ರೀ ಪ್ರೊಡಕ್ಷನ್ ನಡಿ ತಯಾರಾಗಿರುವ ಕಾನ್ಸೀಲಿಯಂ ಸಿನಿಮಾದಲ್ಲಿ ಪ್ರೀತಂ, ಮನೆದೇವ್ರು ಸೀರಿಯಲ್ ಖ್ಯಾತಿಯ ಅರ್ಚನಾ ಲಕ್ಷ್ಮೀ ನರಸಿಂಹ ಸ್ವಾಮಿ, ಲವ್ ಮಾಕ್ಟೇಲ್ ಖ್ಯಾತಿಯ ಖುಷಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಶಂಕರ್ ನಾಗ್ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿದ್ದ ಜಗದೀಶ್ ಮಲ್ನಾಡ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಬೆಂಗಳೂರು, ಸಕಲೇಶಪುರ ಸುತ್ತಮುತ್ತ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರೋ ಕಾನ್ಸೀಲಿಯಂ ಸಿನಿಮಾ ಬಳಗದಲ್ಲಿ ರೇಷ್ಮಾ ರಾವ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಫಸ್ಟ್ ಲುಕ್, ಟೀಸರ್ ಮೂಲಕ ಸೌಂಡ್ ಮಾಡ್ತಿರುವ ಕಾನ್ಸೀಲಿಯಂ ಸಿನಿಮಾ ಮುಂದಿನ ತಿಂಗಳು ತೆರೆಗೆ ಬರಲಿದೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿಲಹರಿ

Related Posts

error: Content is protected !!