ಒಂಟಿ ‘ಸಲಗ’ಕ್ಕೆ ಪವರ್ ಸ್ಟಾರ್ ಸಾಥ್; ಟ್ರೈಲರ್ ಬಿಡುಗಡೆಗೆ ಅಪ್ಪು ಸ್ಪೆಷಲ್ ಗೆಸ್ಟ್ !

ದುನಿಯಾ ವಿಜಯ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಸಲಗ. ನಾಡಹಬ್ಬ ದಸರಾದಂದು ಬೆಳ್ಳಿತೆರೆ ಅಂಗಳದಲ್ಲಿ ಸಲಗ ಘೀಳಿಡಲಿದೆ. ನಡೆದಿದ್ದೇ ದಾರಿ ಎನ್ನುತ್ತಾ ಗ್ರ್ಯಾಂಡ್ ಎಂಟ್ರಿಕೊಡ್ತಿರುವ ಒಂಟಿಸಲಗಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಥ್ ಕೊಡ್ತಿದ್ದಾರೆ. ಅಕ್ಟೋಬರ್ 10 ರಂದು ಅದ್ದೂರಿಯಾಗಿ ನಡೆಯಲಿರುವ ಸಲಗ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ದೊಡ್ಮನೆ ರಾಜಕುಮಾರ ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ.

ಬ್ಲ್ಯಾಕ್‌ಕೋಬ್ರಾ ದುನಿಯಾ ವಿಜಯ್ ಅಭಿಮಾನಿಗಳಿಗೆ ಮಾತ್ರವಲ್ಲ ಎಲ್ಲಾ ಸೂಪರ್ ಸ್ಟಾರ್ ಗಳ ಫ್ಯಾನ್ಸ್ ಗೂ ಕೂಡ ಸಲಗ ಸ್ಟ್ಯಾಮಿನಾ ಎಂತಹದ್ದು ಅನ್ನೋದು ಗೊತ್ತಾಗಿದೆ. ಇಲ್ಲಿವರೆಗೂ ಸಲಗನ ಸಿನಿಮಾ ಸಾಮ್ರಾಜ್ಯದಿಂದ ಹೊರಬಂದಿರುವ ಒಂದೊಂದು ಪೋಸ್ಟರ್, ಟೀಸರ್, ಸಾಂಗ್ಸ್ ಹಾಗೂ ಮೇಕಿಂಗ್ ಝಲಕ್ ಒಂಟಿಸಲಗ ಮೇಲಿರುವ ನಿರೀಕ್ಷೆಯನ್ನು ತಾರಕಕ್ಕೇರಿಸಿದೆ. ಅಷ್ಟಕ್ಕೂ, ಇಲ್ಲಿವರೆಗೂ ನೀವು ನೋಡಿರುವುದು ಜಸ್ಟ್ ಟ್ರೈಲರ್ ಅಷ್ಟೇ ಪಿಕ್ಚರ್ ಅಭಿ ಬಾಕಿ‌ಹೈ..

ಸಲಗ ಸಿನಿಮಾವನ್ನು ಫಸ್ಟ್ ಡೇ ಫಸ್ಟ್ ಶೋ ಯಾಕೇ ಚಿತ್ರಮಂದಿರಕ್ಕೆ ಬಂದು‌ ನೋಡಬೇಕು ? ಔಟ್ ಅಂಡ್ ಔಟ್ ಮಾಸ್ ಎಲಿಮೆಂಟ್ಸ್ ಇರುವ ಸಲಗದಲ್ಲಿ ಮತ್ತೆ ಏನೆಲ್ಲಾ ಇದೆ. ಅಂಡರ್ ವಲ್ಡ್ ಸಬ್ಜೆಕ್ಟ್ ಗೆ ಒಂದು ಕ್ಯೂಟ್ ಲವ್ ಸ್ಟೋರಿ ಹೇಗೆ ಬೆಸೆದುಕೊಂಡಿದೆ ಇದೆಲ್ಲದಕ್ಕೂ ಆನ್ಸರ್ ಸಿಗಬೇಕು ಅಂದರೆ ಚಿತ್ರಮಂದಿರಕ್ಕೆ ಬರ್ಲೆಬೇಕು. ಅದಕ್ಕೂ, ಮುನ್ನ ಸಲಗ ಫಿಲ್ಮ್ ಟೀಮ್ ಟ್ರೈಲರ್ ತೋರ್ಸೋಕೆ‌ ಮುಂದಾಗಿದ್ದಾರೆ.

ಪವರ್ ಸ್ಟಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ. ಅಲ್ಲಿಂದಲೇ ಕಿಕ್ ಸ್ಟಾರ್ಟ್ ಪಡೆದುಕೊಂಡು ಯೂಟ್ಯೂಬ್ ಲೋಕದಲ್ಲಿ ಮೆರವಣಿಗೆ ಹೊರಡಲಿರುವ ಸಲಗ ಚಿತ್ರಪ್ರೇಮಿಗಳನ್ನು ಹುಚ್ಚೆಬ್ಬಿಸಿ ಥಿಯೇಟರ್ ಗೆ ಬರುವಂತೆ ಮಾಡೋದು ಸತ್ಯ‌ ಎನ್ನುತ್ತೆ‌ ಸಲಗ ಸಾಮ್ರಾಜ್ಯ. ಹಿಂಗಾಗಿದ್ದಲ್ಲಿ ಒಂಟಿಸಲಗನ ಅಬ್ಬರ ಆರ್ಭಟ ಮುಗಿಲನ್ನು ಸೀಳಿಕೊಂಡು ಹೋಗೋದು ಖರ್ರೇ. ನೋಡೋಣ‌ ಅದೇನಾಗಲಿದೆ ಅಂತ.

  • ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!