ಬೆಳ್ಳಿತೆರೆಯ ಮೇಲೆ ಅಣ್ಣಾವ್ರ ಮೊಮ್ಮಗಳು – ಇದೇ ವಾರ ತೆರೆ ಕಾಣುತ್ತಿರುವ ʼನಿನ್ನ ಸನಿಹಕೆʼ ಚಿತ್ರದಲ್ಲಿ ಧನ್ಯ ರಾಮ್‌ಕುಮಾರ್‌ !

ದೊಡ್ಮನೆಯ ಮತ್ತೊಂದು ಕುಡಿ ಬೆಳ್ಳಿತೆರೆಗೆ ಎಂಟ್ರಿ ಆಗ್ತಿದೆ. ಅಣ್ಣಾವ್ರ ಮಗಳು ಪೂರ್ಣಿಮಾ ಹಾಗೂ ನಟ ರಾಮ್‌ ಕುಮಾರ್‌ ದಂಪತಿಗಳ ಪುತ್ರಿ ಧನ್ಯ ರಾಮ್‌ ಕುಮಾರ್‌ ಇದೇ ಮೊದಲು ಬಣ್ಣ ಹಚ್ಚಿ ಬೆಳ್ಳಿ ತೆರೆಗೆ ಎಂಟ್ರಿಯಾಗಿರುವ ʼನಿನ್ನ ಸನಿಹಕೆʼ ಚಿತ್ರ ಇದೇ ವಾರ ತೆರೆ ಕಾಣುತ್ತಿದೆ. ಧನ್ಯ ರಾಮ ಕುಮಾರ್‌ ನಾಯಕಿ ಆಗಿಯಾಗಿ ಅಭಿನಯಿಸಿದ ಮೊದಲ ಚಿತ್ರ ಇದು. ಯುವ ಪ್ರತಿಭೆ ಸೂರಜ್‌ ಗೌಡ ಈ ಚಿತ್ರದ ನಾಯಕ ನಟ. ಇದೇ ಶುಕ್ರವಾರ ಈ ಚಿತ್ರ ರಾಜ್ಯಾದ್ಯಂತ ‌ತೆರೆಕಾಣುತ್ತಿದೆ.

ವೈಟ್ ಅಂಡ್‌ ಗ್ರೇ ಪಿಕ್ಚರ್ಸ್ ಲಾಂಛನದಲ್ಲಿ ಅಕ್ಷಯ್ ರಾಜಶೇಖರ್ ಹಾಗೂ ರಂಗನಾಥ ಈ ಚಿತ್ರ ನಿರ್ಮಿಸಿ, ತೆರೆಗೆ ತರುತ್ತಿದ್ದಾರೆ. ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು ಮುದ್ದಾದ ಪ್ರೇಮ ಕಥೆಯ ಚಿತ್ರ. ಚಿತ್ರದ ನಾಯಕ ಆದಿತ್ಯ ಹಾಗೂ ನಾಯಕಿ ಅಮೃತಾ ಲಿವಿಂಗ್‌ ರಿಲೇಷನ್ ಶಿಫ್‌ ನಲ್ಲಿರುವ ಕಥೆಯನ್ನು ರೋಮ್ಯಾಂಟಿಕ್‌ ಕಾಮಿಡಿಯಾಗಿ ಹೇಳಲಾಗಿದೆಯಂತೆ. ಚಿತ್ರಕ್ಕೆ ನಟ ಸೂರಜ್ ಗೌಡ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಅಲ್ಲದೆ ಚಿತ್ರದ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅಭಿಲಾಷ್ ಕಲತಿ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ರಘು ದೀಕ್ಷಿತ್ ಅವರ ಸಂಗೀತ ಸಂಯೋಜನೆ, ವಾಸುಕಿ ವೈಭವ್ ಅವರ ಸಾಹಿತ್ಯ ಚಿತ್ರಕ್ಕಿದೆ.

ಈಗಾಗಲೇ ಸುಮಧುರ ಹಾಡುಗಳು ಹಾಗೂ ಕುತೂಹಲಭರಿತ ಟ್ರೇಲರ್‌ ಮೂಲಕ ಸಾಕಷ್ಟು ಕೂತೂಹಲ ಮೂಡಿಸಿದೆ. ಚಿತ್ರ ಪ್ರೇಮಿಗಳಲ್ಲಿ ಇದೇ ಕಾರಣಕ್ಕೆ ದೊಡ್ಡ ನಿರೀಕ್ಷೆ ಮೂಡಿಸಿದೆ.ಉಳಿದಂತೆ ತಾರಾಗಣದಲ್ಲಿ ಮಂಜುನಾಥ್ ಗೌಡ, ಅರುಣಾ ಬಾಲರಾಜ್, ಚಿತ್ಕಲಾ ಬಿರಾದಾರ್, ಕರಿಸುಬ್ಬು, ರಜನಿಕಾಂತ್, ಸೌಮ್ಯ ಭಟ್, ನಂದಗೋಪಾಲ್ ಇದ್ದಾರೆ. ಸುರೇಶ್ ಆರ್ಮಗಂ ಅವರ ಸಂಕಲನ, ವರದರಾಜ ಕಾಮತ್ ಅವರ ಕಲಾನಿರ್ದೇಶನ, ಮೋಹನ್ ನ್ರತ್ಯ ನಿರ್ದೇಶನ ಈ ಚಿತ್ರಕ್ಕಿದೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Related Posts

error: Content is protected !!