Categories
ಸಿನಿ ಸುದ್ದಿ

ಕಡ್ಡಿ ಅಲ್ಲಾಡಿಸಿ ಗೆದ್ದರಾ ಚಡ್ಡಿದೋಸ್ತ್ ; ವರ್ಕೌಟ್ ಆಯ್ತಾ ಸೆವೆನ್ ರಾಜ್ ‘7’ ಸೀಕ್ರೆಟ್‌!?

ಚಿತ್ರ: ಚಡ್ಡಿ ದೋಸ್ತ್‌ ಕಡ್ಡಿ ಅಲ್ಲಾಡಸ್ಬುಟ್ಟ

ನಿರ್ಮಾಪಕ: ಸೆವೆನ್‌ ರಾಜ್‌

ನಿರ್ದೇಶಕ : ಆಸ್ಕರ್‌ ಕೃಷ್ಣ

ತಾರಾಗಣ: ಲೋಕೇಂದ್ರ ಸೂರ್ಯ, ಗೌರಿ ನಾಯರ್‌ ಆಸ್ಕರ್ ಕೃಷ್ಣ, ಸೆವೆನ್‌ ರಾಜ್‌, ಹರ್ಷಿತಾ ಕಲ್ಲಿಂಗಲ್‌‌, ಮಾ.ರಾಕಿನ್ ಇತರರು

ಚಿತ್ರ ವಿಮರ್ಶೆ: ವಿಶಾಲಾಕ್ಷಿ

ಲಾಂಗು- ಮಚ್ಚು ಝಳಪಿಸಲ್ಲ, ಕತ್ತಿ-ಗುರಾಣಿ ಹಿಡಿದು ಬಡಿದಾಡಲ್ಲ ಗುರು ಬರೀ ಕಡ್ಡಿ ಅಲ್ಲಾಡಿಸಿ ಚಿತ್ರಪ್ರೇಮಿಗಳಿಂದ ಜೈಕಾರ ಹಾಕಿಸಿಕೊಳ್ತೀವಿ ಅಂತ ಚಡ್ಡಿದೋಸ್ತ್ ಗಳಿಬ್ಬರು ಡಿಸೈಡ್ ಮಾಡಿದ್ದರು. ಅದರಂತೇ, ಅಖಾಡಕ್ಕೆ ಇಳಿದಿದ್ದಾರೆ. ಕರ್ನಾಟಕದಾದ್ಯಂತ ಅಬ್ಬರ ಆರ್ಭಟ ಶುರುವಾಗಿದೆ. ಚಿತ್ರಮಂದಿರಕ್ಕೆ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಸಿನಿಮಾ ಗ್ರ್ಯಾಂಡ್ ಆಗಿಯೇ ಎಂಟ್ರಿಕೊಟ್ಟಿದೆ. ಹೇಗಿದೆ ಸಿನಿಮಾ? ಚಡ್ಡಿದೋಸ್ತ್ ಚಮಕ್ ಮಾಡಿದ್ರಾ? ಬೆಳ್ಳಿತೆರೆ ಹಾಗೂ ಬಾಕ್ಸ್ ಆಫೀಸ್ ಡಬ್ಬದಲ್ಲಿ ಸೆವೆನ್ ರಾಜ್ ‘7’ ಸಸ್ಪೆನ್ಸ್ ಸೀಕ್ರೇಟ್
ವರ್ಕೌಟ್ ಆಯ್ತಾ? ಗಾಂಧಿನಗರದಲ್ಲಿ ಫಸ್ಟ್ ಡೇ ಫಸ್ಟ್ ಶೋ ರೆಸ್ಪಾನ್ಸ್ ಹೇಗಿತ್ತು? ಅದರ ರಿವ್ಯೂ ಪ್ಲಸ್ ರಿಪೋರ್ಟ್ ಇಲ್ಲಿದೆ ನೋಡಿ

ಕೊರೊನಾ ಕಾರಣದಿಂದ ಕಳೆಗುಂದಿದ್ದ ಚಿತ್ರಮಂದಿರಗಳಿಗೆ ಮದುವಣಗಿತ್ತಿಯ ಕಳೆಬಂದಿದೆ. ಥಿಯೇಟರ್ ಮುಂಭಾಗದಲ್ಲಿ ಕಟೌಟ್ ಗಳು ತಲೆ ಎತ್ತಿವೆ, 50 ಪರ್ಸೆಂಟ್ ಅಕ್ಯೂಪೆನ್ಸಿಯಲ್ಲೂ ಹೌಸ್ ಫುಲ್ ಆಗುವಷ್ಟು ಜನ ಚಿತ್ರಮಂದಿರದ ಕಡೆ ಮುಖಮಾಡ್ತಿದ್ದಾರೆ. ಇದರಿಂದ ಬಿಗ್ ಸ್ಕ್ರೀನ್ ವಿಸಿಲ್ ಹೊಡೆಯುತ್ತಿದೆ, ಬಾಕ್ಸ್ ಆಫೀಸ್ ಹಣ ಬಾಚಿಕೊಳ್ಳೋಕೆ ಎದುರುನೋಡ್ತಿದೆ. ಇಂತಹ ಹೊತ್ತಲ್ಲಿ ಚಡ್ಡಿದೋಸ್ತ್ ಗಳು ಕಣಕ್ಕಿಳಿದಿದ್ದಾರೆ.‌

‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಸಿನಿಮಾ ಕರ್ನಾಟಕದಾದ್ಯಂತ ಅದ್ದೂರಿಯಾಗಿ ತೆರೆಕಂಡಿದೆ. ಸುಮಾರು 50 ಕ್ಕೂ ಹೆಚ್ಚು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಗಾಂಧಿನಗರದ ತ್ರಿವೇಣಿ ಮುಖ್ಯ ಚಿತ್ರಮಂದಿರವಾಗಿದ್ದು, ರೆಡ್ ಅಂಡ್ ವೈಟ್ ಕಾಂಬಿನೇಷನ್‌ ನಲ್ಲಿ ಅಲಂಕಾರಗೊಂಡಿತ್ತು. ಚಿತ್ರತಂಡದ ನಿರೀಕ್ಷೆಗೂ‌ ಮೀರಿದ ಜನ ಸೇರಿದ್ದರು. ಸಾಮಾಜಿಕ ಅಂತರ ಕಾಯ್ದುಕೊಂಡೇ ಫಸ್ಟ್ ಡೇ ಫಸ್ಟ್ ಶೋ ಮುಗೀತು. ಸಿನಿಮಾ ನೋಡಿ ಥಿಯೇಟರ್ ನಿಂದ ಹೊರಬಂದ ಫ್ಯಾನ್ಸ್ ಗಡಾರಿ ಗುಂಗಿನಲ್ಲಿದ್ದರು. ಕುಯ್ಯ ಎಲ್ಲಿ ಎನ್ನುತ್ತಾ? ಫ್ಯಾಷನ್ ರಾಜ್ ನ ಹುಡುಕಾಡುತ್ತಿದ್ದರು. ಅಷ್ಟಕ್ಕೂ , ಆ ಫ್ಯಾಷನ್ ರಾಜ್ ಬೇರಾರು ಅಲ್ಲ ನಿರ್ದೇಶಕ ಆಸ್ಕರ್ ಕೃಷ್ಣ. ಆಸ್ಕರ್ ಕೃಷ್ಣ ಅವರ ಸಿನಿಮಾ ಅಭಿರುಚಿ ಹೇಗೆ ಅಂತ ಗೊತ್ತಿದ್ದವರಿಗೆ ಚಡ್ಡಿದೋಸ್ತ್ ಗಳು ಕಡ್ಡಿ ಅಲ್ಲಾಡಿಸೋದು ಹೇಗೆ ಅಂತ ಗೊತ್ತಿತ್ತು.

ಆದರೆ, ನ್ಯೂ ಕಾಮರ್ಸ್ ಗೆ ಆಸ್ಕರ್ ಅಭಿರುಚಿ ಗೊತ್ತಿರಲಿಲ್ಲ. ಕ್ಯಾಚಿ ಟೈಟಲ್ ವೊತ್ತಿದ್ದ, ಕಿಕ್ಕೇರಿಸಿದ್ದ ಚಡ್ಡಿದೋಸ್ತ್ ಮೇಲೆ ಒಂದಿಷ್ಟು ನಿರೀಕ್ಷೆ ಇಟ್ಟುಕೊಂಡೇ ಚಿತ್ರಮಂದಿರ ಪ್ರವೇಶ ಮಾಡಿದರು. ಹಾಗೇ ಎಂಟ್ರಿಕೊಟ್ಟವರಿಗೆ ಫಸ್ಟ್ ಹಾಫ್‌ಕಿಕ್ ಕೊಡಲಿಲ್ಲ. ಚಡ್ಡಿದೋಸ್ತ್ ಅದ್ಯಾವ ಕಡ್ಡಿ ಅಲ್ಲಾಡಿಸುತ್ತಿದ್ದಾರೆನ್ನುವುದಕ್ಕೆ ಕ್ಲ್ಯಾರಿಟಿ ಸಿಗಲಿಲ್ಲ. ಆದರೆ, ಗಡಾರಿ ಪಾತ್ರಧಾರಿ ಲೋಕೇಂದ್ರ ಸೂರ್ಯ ಹುಡ್ಗೀರ್ ಜೊತೆ ಚೇಷ್ಟೆ ಮಾಡಿಕೊಂಡೇ ತುಂಡೈಕ್ಳಿಗೆ ಮಜಾ ಕೊಟ್ಟರು. ಫ್ಯಾಷನ್ ರಾಜ್ ಕ್ಯಾರೆಕ್ಟರ್ ಮಾಡಿದ್ದ ಆಸ್ಕರ್ ಕೃಷ್ಣ ಅವರು ನ್ಯಾಚುರಲ್ ಸ್ಟಾರ್ ಎನಿಸಿಕೊಳ್ಳುವಂತಹ ಆಕ್ಟಿಂಗ್ ಮಾಡ್ತಿದ್ದರು.
ಕೆಲವೇ ಕೆಲವು ಸೀನ್ ಗಳಲ್ಲಿ ಮಿಂಚಿದ ಕುಯ್ಯ ಪಾತ್ರಧಾರಿ ನೋಡುಗರ ಗಮನ ಸೆಳೆಯುತ್ತಾ ಹೋದ. ಪ್ರೇಕ್ಷಕರಿಗೆ ಪಾಪ್ ಕಾರ್ನ್ ಬೇಕಿತ್ತು‌ ಎನಿಸುವಷ್ಟರಲ್ಲಿ ಡಿ.ಸಿ‌ ಮರ್ಡರ್ ಮೂಲಕ ಇಂಟರ್ ವಲ್‌ಬಿಡ್ತು.

ಪಪ್ಸ್- ಜ್ಯೂಸ್ ತಗೊಂಡು ಬಂದು ಮತ್ತದೇ ಸೀಟ್ ಮೇಲೆ ಕುಳಿತವರಿಗೆ ಸೆಕೆಂಡ್ ಆಫ್‌ ಒಂದಿಷ್ಟು ಇಂಟ್ರೆಸ್ಟಿಂಗ್ ಎನಿಸಿಸ್ತು. ಡಿ.ಸಿ‌ ಕೊಲೆ, ಎಂ.ಎಲ್.ಎ ಸುಫಾರಿ, ದೋಸ್ತಿಗಳ ನಡುವೆ ಬರುವ ಹುಡ್ಗಿ, ಹುಡ್ಗೀರ್ ಶೋಕಿಯಿಂದ ಗೆಳೆಯ ಗಡಾರಿನಾ ಆಚೆ ತರಬೇಕು ಅಂತ ಟ್ರೈ ಮಾಡುವ ಫ್ಯಾಷನ್, ಗಡಾರಿಗೆ ದುಡ್ಡು ಕೊಟ್ಟು ಬೆನ್ನ ಹಿಂದೆ ಕತ್ತಿಮಸೆದ ಎಂಎಲ್‌ಎ, ಗಡಾರಿಗೆ ಲಾಠಿ ರುಚಿ, ಫ್ಯಾಷನ್ ಗೆ ದೀಪಾ ಜೊತೆ ಪ್ರೀತಿ, ಮಾತ್ ಎತ್ತಿದರೆ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಎನ್ನುವ ಗಡಾರಿಗೆ ಹುಡ್ಗೀರ್ ಶೋಕಿಯಿಂದ ಚಡ್ಡಿದೋಸ್ತ್ ಗಳ ಬುಡಕ್ಕೆ ಬರುತ್ತೆ. ಆಗ ದೋಸ್ತಿಗಳಿಬ್ಬರು ಏನ್ಮಾಡ್ತಾರೆ? ಹೊಡೆದಾಡ್ತಾರಾ ಅಥವಾ ಹೋರಾಡ್ತಾರಾ? ನಿಮ್ಮ ಈ ಕೂತೂಹಲದ ಪ್ರಶ್ನೆಗೆ ಉತ್ತರ ಸಿಗಬೇಕು ಅಂದರೆ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಬೇಕು.

ಚಡ್ಡಿದೋಸ್ತ್ ಗಳು ಏನೇ ಆಗಲೀ, ಎಂತಹದ್ದೇ ಸಂದರ್ಭ- ಸನ್ನಿವೇಶ ಎದುರಾಗಲಿ ಎದುರಿಸಿ ನಿಲ್ತಾರೆ. ಹಾಗೆಯೇ, ಒಬ್ಬರನ್ನೊಬ್ಬರು ಬಿಟ್ಟುಕೊಡಲ್ಲ. ಅದೇ ರೀತಿ ಚಡ್ಡಿದೋಸ್ತ್ ಗಳು ಕೂಡ. ಅದ್ಹೇಗೆ‌ ಎನ್ನುವದನ್ನ ನೀವು ಥಿಯೇಟರ್ ನಲ್ಲೇ ನೋಡಬೇಕು.‌ ಆಸ್ಕರ್ ಕೃಷ್ಣ ನಿರ್ದೇಶನ ಮಾಡಿ ಫ್ಯಾಷನ್ ರಾಜ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕಥೆ- ಚಿತ್ರಕಥೆ- ಸಂಭಾಷಣೆ ಬರೆದಿರುವ ಲೋಕೇಂದ್ರ ಸೂರ್ಯ ಗಡಾರಿ ಪಾತ್ರದ ಮೂಲಕ‌ ಕಿಕ್ಕೇರಿಸಿದ್ದಾರೆ. ಚಡ್ಡಿದೋಸ್ತ್ ಗಳಿಗೆ ಬಂಡವಾಳ‌ ಹೂಡಿರುವ ನಿರ್ಮಾಪಕ ಸೆವೆನ್ ರಾಜ್ ಖಳನಾಯಕನಾಗಿ ಮಿಂಚಿದ್ದಾರೆ. ಮನುಷ್ಯನಾಗಿ‌ ಹುಟ್ಟಿದ್ಮೇಲೆ ತಿಂದು ಸಾಯಬೇಕು, ಇಲ್ಲ ಕುಡಿದು ಸಾಯಬೇಕು‌ ಅಂತ ಐಟಂ ಹಾಡಿನಲ್ಲಿ ಹರ್ಷಿತಾ ಕಲ್ಲಿಂಗಲ್‌ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಅನಂತ್ ಆರ್ಯನ್ ಒಳ್ಳೆ ಮ್ಯೂಸಿಕ್ ಕೊಟ್ಟಿದ್ದಾರೆ. ಕ್ಯಾಮೆರಾ ಕೈಚಳಕ ತೋರ್ಸೋಕೆ ಒಳ್ಳೆ ಕ್ಯಾಮೆರಾ ಕೊಟ್ಟಿಲ್ಲ ಅನ್ಸುತ್ತೆ. ಕ್ವಾಲಿಟಿ ಕಣ್ಣಿಗೆ ಹೊಡೆಯಲ್ಲ. ಆದರೆ, ಸೆವೆನ್ ಸಂಖ್ಯಾಶಾಸ್ತ್ರದ ಮೇಲೆ ನಂಬಿಕೆ ಇಟ್ಟು 17 ರಂದು ಸೆವೆನ್ ರಾಜ್ ತೆರೆಗೆ ತಂದಿದ್ದಾರೆ. ಬೆಳ್ಳಿತೆರೆ ಹಾಗೂ ಬಾಕ್ಸ್ ಆಫೀಸ್ ನಲ್ಲಿ‌ ಸಂಖ್ಯಾ ಶಾಸ್ತ್ರ ವರ್ಕ್ ಆಗುತ್ತಾ ಕಾದುನೋಡಬೇಕು.

ಸೆವೆನ್ ರಾಜ್ ಅಂತ ಹೆಸರಿಟ್ಟುಕೊಂಡಿದ್ದೇನೆ, ಹೆಸರಿಗೆ ತಕ್ಕಂತೆ
ಕನ್ನಡ ಚಿತ್ರರಂಗಕ್ಕೆ ಏಳು‌ ಸಿನಿಮಾ ಕೊಡಬೇಕು‌ ಅಂತ
ನಿರ್ಧರಿಸಿದ್ದಾರೆ. ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರಾನಾ ಪ್ರೇಕ್ಷಕರು ಕೈಹಿಡಿದರೆ ಮುಂದೆ ಆರು ಸಿನಿಮಾ ಮಾಡ್ತಾರಂತೆ. ಇವತ್ತಿಗೆ ಫಸ್ಟ್ ಡೇ ಫಸ್ಟ್ ಶೋ ನೋಡಿ ಪ್ರೊಡ್ಯೂಸರ್ ಸೆವೆನ್ ರಾಜ್ ಖುಷಿಯಲ್ಲಿದ್ದಾರೆ. ಒಂದು ವಾರ ಕಳೆದ ಮೇಲೂ ಜನರಿಂದ ಚಿತ್ರಕ್ಕೆ ಇದೇ ರೀತಿ ಪ್ರತಿಕ್ರಿಯೆ ಸಿಕ್ಕರೆ ಹಂಡ್ರೆಡ್ ಪರ್ಸೆಂಟ್ ಸೆವೆನ್ ರಾಜ್ ಸಿನಿಮಾ ಇಂಡಸ್ಟ್ರಿಯಲ್ಲಿ ಉಳಿದುಕೊಳ್ತಾರೆ. ಅವರನ್ನ ಕನ್ನಡ ಪ್ರೇಕ್ಷಕರು ಉಳಿಸಿಕೊಳ್ಳಲಿ ಅನ್ನೋದೇ ಸಿನಿಲಹರಿ‌ ಆಶಯ

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಉಪ್ಪಿ ಬರ್ತ್‌ಡೇ ಗೆ ಅನೌನ್ಸ್‌ ಆಗುತ್ತೆ ʼಕಬ್ಜʼ ಚಿತ್ರದ ಟೀಸರ್‌ ರಿಲೀಸ್‌ ಡೇಟ್‌ : ಮೋಷನ್‌ ಪೋಸ್ಟರ್‌ ಮೂಲಕ ಚಿತ್ರ ಸ್ಪೆಷಲ್‌ ಏನು ಅಂತ ತೋರಿಸುತ್ತಾರಂತೆ ನಿರ್ದೇಶಕ ಆರ್.‌ ಚಂದ್ರು !

ನಟ, ನಿರ್ದೇಶಕ ಉಪೇಂದ್ರ ಅವರಿಗೆ ನಾಳೆ ಹುಟ್ಟು ಹಬ್ಬದ ಸಂಭ್ರಮ. ಕೊರೋನಾ ಕಾರಣ ಈ ಬಾರಿಯೂ ಅವರು ಗ್ರಾಂಡ್‌ ಆಗಿ ಬರ್ತ್‌ ಡೇ ಸೆಲೆಬ್ರೇಷನ್‌ ಮಾಡಿಕೊಳ್ತಿಲ್ಲ ಎನ್ನುವುದನ್ನು ಬಿಟ್ಟರೆ, ಈ ಬಾರಿಯ ಅವರು ಹುಟ್ಟು ಹಬ್ಬಕ್ಕೆ ಹಲವು ಕಾರಣಕ್ಕೆ ತುಂಬಾ ಸ್ಪೆಷಲ್.‌ ಅದು ಯಾಕೆ ಅನ್ನೋದಿಕ್ಕೆ ಈ ವರದಿ ನೋಡಿ…

ನಟ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ಇನ್ನೇನು ಕೇಲವೇ ಗಂಟೆಗಳು ಬಾಕಿ ಇದೆ. ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷವೂ ಕೂಡ ಅವರು ಅಭಿಮಾನಿಗಳ ಜತೆಗೆ ಅದ್ದೂರಿಯಾಗಿ ಬರ್ತ್‌ ಡೇ ಆಚರಿಸಿಕೊಳ್ಳುತ್ತಿಲ್ಲ ಎನ್ನುವುದನ್ನು ಬಿಟ್ಟರೆ, ಅವರು ಅಭಿನಯಿಸಿದ ಸಿನಿಮಾ ತಂಡಗಳು ತಮ್ಮ ನೆಚ್ಚಿನ ನಟನಿಗೆ ಸ್ಪೆಷಲ್‌ ಗಿಫ್ಟ್‌ ನೀಡೋದಿಕ್ಕೆ ರೆಡಿಯಾಗಿವೆ. ಅದಕ್ಕಿಂತ ಸ್ಪೆಷಲ್‌ ಏನಂದ್ರೆ ಈ ಸಲ ಉಪ್ಪಿ ಅವರು ತಮ್ಮ ಹುಟ್ಟು ಹಬ್ಬ ಕೊಡುಗೆಯಾಗಿ ಅಭಿಮಾನಿಗಳಿಗೆ ಡೈರೆಕ್ಷನ್‌ ಗಿಫ್ಟ್‌ ನೀಡುತ್ತಿದ್ದಾರೆ. ಅಂದ್ರೆ ಉಪ್ಪಿ ನಿರ್ದೇಶನದ ಸಿನಿಮಾ ಘೋಷಣೆಯಾಗುವುದು ಕಾತರಿ ಆಗಿದೆ.

ಈಗಾಗಲೇ ನಟ, ನಿರ್ದೇಶಕ ಉಪ್ಪಿ ಅವರು ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಲಿದ್ದಾರೆನ್ನೆಲಾದ ಪೋಸ್ಟರ್ ಲೀಕ್ ಆಗಿದೆ. ಇನ್ನು ವಿಶೇಷ ಅಂದ್ರೆ, `ಪಂಗನಾಮದ’ ಸಿಂಬಲ್ ಇರುವ, ನೀನು ಮತ್ತು ನಾನು ಕಥೆಯನ್ನು ಹೇಳುತ್ತಿರುವ ಫಸ್ಟ್ ಲುಕ್ ಪೋಸ್ಟರ್‌ಗೂ ಈಗಾಗಲೇ ದೊಡ್ಡದಾಗಿ ಸದ್ದು ಮಾಡುತ್ತಿರುವುದರ ನಡುವೆಯೇ, ನಟಿ ರಚಿತಾ ರಾಮ್‌ ತಮ್ಮ ಹಣೆಗೆ ಹಣೆಗೆ ನಾಮಹಾಕಿಸಿಕೊಂಡಿರುವ ಪೋಟೋಗೂ ಸಿಂಕ್ ಆಗುತ್ತಿರುವುದು ಭಾರೀ ಕುತೂಹಲ ಹುಟ್ಟುಸಿದೆ. ಅಂದ್ರೆ, ಉಪ್ಪಿ ನಿರ್ದೇಶನದ ಸಿನಿಮಾದಲ್ಲಿ ರಚಿತಾ ರಾಮ್‌ ನಾಯಕಿ ಆಗಿರಬಹುದಾ ಎನುವ ಕ್ಯೂರಿಯಾಸಿಟಿ ಮನೆ ಮಾಡಿದೆ. ಇದೆಲ್ಲದ್ದಕ್ಕೂ ನಾಳಿನ ತಮ್ಮ ಹುಟ್ಟು ಹಬ್ಬದ ದಿನ ಉಪ್ಪಿ ಉತ್ತರ ನೀಡಬಹುದು ಎಂದೇ ನಿರೀಕ್ಷಿಸಲಾಗಿದೆ. ಅದು ಬಿಟ್ಟರೆ, ಉಪ್ಪಿ ಅವರ ಬರ್ತ್‌ ಡೇ ಗೆ ಆರ್.‌ ಚಂದ್ರು ನಿರ್ದೇಶನದ ʼಕಬ್ಜʼ ಚಿತ್ರದ ಗಿಫ್ಟ್‌ ಏನು ಅಂತ.

ಅದಕ್ಕೆ ದೊಡ್ಡ ಕಾರಣವೂ ಇದೆ. ಉಪ್ಪಿ ಸಿನಿಕೆರಿಯರ್‌ ನಲ್ಲಿಯೇ ʼಕಬ್ಜʼ ಒಂದು ಸ್ಪೆಷಲ್‌ ಮೂವೀ. ಬಿಗ್‌ ಬಜೆಟ್‌ ಸಿನಿಮಾ ಹಾಗೆಯೇ ಇದು ಪ್ಯಾನ್‌ ಇಂಡಿಯಾ ಸಿನಿಮಾ ಕೂಡ. ನಿರ್ದೇಶಕ ಆರ್.‌ ಚಂದ್ರು ನಿರ್ದೇಶನದ ಜತೆಗೆ ನಿರ್ಮಾಣದಲ್ಲೂ ಇಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಅದು ಇಡಿಯಾ ಲೆವೆನ್‌ ನಲ್ಲಿಯೇ ಸದ್ದು ಮಾಡಿರುವುದನ್ನು ನೋಡಿದರೆ, ದೊಡ್ಡ ಹವಾ ಸೃಷಿಸುವುದು ಗ್ಯಾರಂಟಿ ಆಗಿದೆ. ಅದೇ ಕಾರಣಕ್ಕೆ ಉಪ್ಪಿ ಬರ್ತ್‌ ಡೇ ಅಂದಾಕ್ಷಣ ಕಬ್ಜ ಸಿನಿಮಾ ತಂಡದ ಸ್ಪೆಷಲ್‌ ಏನು ಅಂತ ಅಭಿಮಾನಿಗಳು ನಿರೀಕ್ಷೆ ಮಾಡುವುದು ಸಹಜ. ಅದೇ ಕಾರಣಕ್ಕೆ ನಿರ್ದೇಶಕ ಆರ್.‌ ಚಂದ್ರು ಅವರು ಚಿತ್ರದ ನಾಯಕ ನಟ ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ಕಬ್ಜ ಚಿತ್ರದ ಸ್ಪೆಷಲ್‌ ಮೋಷಲ್‌ ಪೋಸ್ಟರ್‌ ಲಾಂಚ್‌ ಮಾಡಲು ರೆಡಿಯಾಗಿದ್ದಾರೆ. ಅದರ ಜತೆಗೆ ಕಬ್ಜ ಚಿತ್ರ ಟೀಸರ್‌ ಲಾಂಚ್‌ ದಿನವನ್ನು ನಿರ್ದೇಶಕ ಆರ್.‌ ಚಂದ್ರು ಅವರು ನಾಳೆಯೇ ಅನೌನ್ಸ್‌ ಮಾಡಲಿದ್ದಾರಂತೆ. ಅದು ಈ ಬಾರಿಯ ಉಪೇಂದ್ರ ಅವರ ಬರ್ತ್‌ ಡೇ ಗೆ ಸ್ಪೆಷಲ್.

ʼ ನಂಗೊತ್ತು ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ಅವರ ಅಭಿಮಾನಿಗಳು ಕಬ್ಜ ಚಿತ್ರದ ಏನ್‌ ಬರುತ್ತೆ ಅಂತ ಕಾಯುತ್ತಾರೆ ಅನ್ನೋದು ನಂಗೊತ್ತು. ಅದೇ ಕಾರಣಕ್ಕೆ ನಾವೀಗ ಚಿತ್ರದ ನಾಯಕ ನಟ ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ನಮ್ಮ ಚಿತ್ರದ ಸ್ಪೆಷಲ್‌ ಮೋಷನ್‌ ಪೋಸ್ಟರ್‌ ಲಾಂಚ್‌ ಮಾಡುತ್ತಿದ್ದೇವೆ. ಈಗಾಗಲೇ ಒಂದೆರೆಡು ಪೋಸ್ಟರ್‌ ಲಾಂಚ್‌ ಮಾಡಿದ್ದೇವೆ. ಆದ್ರೆ ಇದು ತುಂಬಾ ಸ್ಪೆಷಲ್‌ . ಯಾಕಂದ್ರೆ ಚಿತ್ರದ ಸೆಟು. ಟಿಂಟು, ಕಲರು ಒಳಗೊಂಡಂತೆ ಚಿತ್ರದ ಒಟ್ಟಾರೆಯ ಒಂದು ಲುಕು ರಿವೀಲ್‌ ಆಗುವ ಹಾಗೆ ಈ ಪೋಸ್ಟರ್‌ ಇರಲಿದೆ. ಅದರ ಜತೆಗೆ ಚಿತ್ರದ ಟೀಸರ್‌ ಲಾಂಚ್‌ ದಿನಾಂಕವನ್ನು ನಾಳೆಯೇ ನಾವು ಅನೌನ್ಸ್‌ ಮಾಡುತ್ತೇವೆ. ಇದು ಉಪೇಂದ್ರ ಅವರ ಬರ್ತ್‌ ಡೇ ಗೆ ಕಬ್ಜ ಚಿತ್ರದ ತಂಡದಿಂದ ನೀಡುವ ಗಿಫ್ಟ್‌ʼ ಎನ್ನುತ್ತಾರೆ ನಿರ್ದೇಶಕ ಆರ್.‌ ಚಂದ್ರು.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿ ಲಹರಿ

Categories
ಸಿನಿ ಸುದ್ದಿ

ಒರಿಸ್ಸಾದ ಸಮುದ್ರ ತೀರದಲ್ಲಿ ಅರಳಿದ ಡಾ.ವಿಷ್ಣುವರ್ಧನ್ ಅವರ ಮರಳು ಶಿಲ್ಪ!

ಸೆಪ್ಟೆಂಬರ್ 18ರಂದು ಡಾ.ವಿಷ್ಣು ಅವರ 71ನೇ ಜನ್ಮದಿನ. ಆ ಪ್ರಯುಕ್ತ ಮರಳು ಶಿಲ್ಪ ಕಲೆಯ ತವರೂರಾದ ಒರಿಸ್ಸಾದಲ್ಲಿ ಡಾ.ವಿಷ್ಣುವರ್ಧನ್ ಅವರ 6 ಅಡಿ ಎತ್ತರ ಮತ್ತು 15 ಅಡಿ ಅಗಲದ ಮರಳು ಶಿಲ್ಪ ಅರಳಿದೆ

ಒರಿಸ್ಸಾದ ಪುರಿಯ ಮೆರೀನ್ ಡ್ರೈವ್ ಬೀಚ್ ನಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಕಲಾವಿದರೊಬ್ಬರ ಮರಳು ಶಿಲ್ಪ ಅರಳಿದೆ.

ಆ ಶಿಲ್ಪ ಕನ್ನಡದ ಮೇರು ನಟರಾದ ಡಾ.ವಿಷ್ಣುವರ್ಧನ್ ಅವರದ್ದು. ಇದೇ ಸೆಪ್ಟೆಂಬರ್ 18ರಂದು ಡಾ.ವಿಷ್ಣು ಅವರ 71ನೇ ಜನ್ಮದಿನ. ಆ ಪ್ರಯುಕ್ತ ಮರಳು ಶಿಲ್ಪ ಕಲೆಯ ತವರೂರಾದ ಒರಿಸ್ಸಾದಲ್ಲಿ ಡಾ.ವಿಷ್ಣುವರ್ಧನ್ ಅವರ 6 ಅಡಿ ಎತ್ತರ ಮತ್ತು 15 ಅಡಿ ಅಗಲದ ಮರಳು ಶಿಲ್ಪ ಅರಳಿದೆ.

ಹೆಸರಾಂತ ಶಿಲ್ಪಿ ಮನೀಶ್ ಕುಮಾರ್ ಅವರು ಈ ಶಿಲ್ಪವನ್ನು ರಚಿಸಿದ್ದಾರೆ. ಅದಕ್ಕೆ ಅಗತ್ಯವಾದ ಹಣಕಾಸು ವ್ಯವಸ್ಥೆಯನ್ನು ವೀರಕಪುತ್ರ ಶ್ರೀನಿವಾಸ ಅವರು ಒದಗಿಸಿದ್ದಾರೆ.

Categories
ಸಿನಿ ಸುದ್ದಿ

ರಿಯಲ್‌ಸ್ಟಾರ್‌ಗೆ ರಚ್ಚು ಮತ್ತೆ ಜೊತೆಯಾಗುತ್ತಾರಾ? ಇಬ್ಬರು ಕೂಡಿ`ನಾನು-ನೀನು’ ಕಥೆ ಹೇಳ್ತಾರಾ ?

ಸ್ಟಾರ್ ಸಿನಿಮಾಗಳು ಅನೌನ್ಸ್ ಆದಾಗ ಸಹಜವಾಗಿ ಹೀರೋಯಿನ್ ಯಾರಿರಬಹುದು ಅಂತ ಚರ್ಚೆಯಾಗುತ್ತೆ.ಅವರು ಬರ್ತಾರೆ, ಇವರು ಇರ್ತಾರೆ ಅಂತ ಗಾಸಿಪ್ ಟೋಪಿ ಹಾಕಿಕೊಂಡಿರುವ ಸುದ್ದಿ, ಇಡೀ ಗಾಂಧಿನಗರದ ತುಂಬೆಲ್ಲಾ ಡಂಕಣಕ ಡಂಕಣಕ ಅಂತ ನಾಲ್ಕು ಸ್ಟೆಪ್ ಹಾಕಿಕೊಂಡು ಓಡಾಡಿಕೊಂಡು ಬರುತ್ತೆ. ಆದರೆ, ಉಪ್ಪಿಯ ಹೊಸ ಚಿತ್ರ ಎನ್ನಲಾದ, ನಾಮದ ಸಿಂಬಲ್‌ನಿಂದಲೇ ಕರ್ನಾಟಕ ರೌಂಡ್ ಹೊಡೆಯುತ್ತಿರುವ ಸೂಪರ್‌ಸ್ಟಾರ್ ಚಿತ್ರಕ್ಕೆ, ಗುಳಿಕೆನ್ನೆ ಸುಂದರಿ ರಚಿತರಾಮ್ ಹೀರೋಯಿನ್ ಆಗ್ಬೋದು ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮೂಲಕ ಧೂಳೆಬ್ಬಿಸುತ್ತಿದೆ.

ರಿಯಲ್‌ಸ್ಟಾರ್ ಹೊಸ ಚಿತ್ರಕ್ಕೆ ರಚ್ಚುನೇ ಹೀರೋಯಿನ್ನ್ ಎನ್ನುವುದಕ್ಕೆ ಏಕೈಕ ಕಾರಣ ನಾಮದ ಸಿಂಬಲ್. ಬುದ್ದಿವಂತ ಉಪ್ಪಿಯವರು ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡ್ತಾರೆ ಎನ್ನಲಾದ ಪೋಸ್ಟರ್ ಲೀಕ್ ಆಗಿದೆ. `ಪಂಗನಾಮದ’ ಸಿಂಬಲ್ ಇರುವ, ನೀನು ಮತ್ತು ನಾನು ಕಥೆಯನ್ನ ಹೇಳುತ್ತಿರುವ ಫಸ್ಟ್ ಲುಕ್ ಪೋಸ್ಟರ್‌ಗೂ, ರಚ್ಚು ಮೇಡಂ ಹಣೆಗೆ ನಾಮಹಾಕಿಸಿಕೊಂಡಿರುವ ಪೋಟೋಗೂ ಸಿಂಕ್ ಆಗ್ತಿರೋದ್ರಿಂದ ಟ್ರೋಲ್‌ಹೈಕ್ಳು ಉಪ್ಪಿದಾದನ ಮಹಾಮೂವೀಗೆ ಬುಲ್‌ಬುಲ್‌ಬೆಡಗಿ ಜೊತೆಯಾಗಬಹುದು ಅಂತ ಟ್ರೋಲ್ ಮಾಡ್ತಿದ್ದಾರೆ.

ಇತ್ತೀಚೆಗೆ ಡಿಂಪಲ್ ಬೆಡಗಿ ರಚಿತ ಮನೆದೇವರ ದರ್ಶನ ಪಡೆದಿದ್ದರು. ಮೇಲುಕೋಟೆ ಚೆಲುವ ನಾರಾಯಣಸ್ವಾಮಿ ಸನ್ನಿಧಿಗೆ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದ ರಚಿತಾ, ಹಣೆಗೆ ನಾಮ ಹಾಕಿಸಿಕೊಂಡು ಬಂದಿದ್ದರು. ಫೋಟೋ ಸಮೇತ ಸೋಷಿಯಲ್ ಪೇಜ್‌ಗೆ ಅಪ್‌ಲೋಡ್ ಮಾಡಿದ್ರು. ಅದೇ ಫೋಟೋನಾ ಇಟ್ಕೊಂಡು ಟ್ರೋಲ್ ಎಕ್ಸ್ ಪರ್ಟ್ ಗಳು ಈಗ ರಿಯಲ್‌ಸ್ಟಾರ್ ಅಪ್‌ಕಮ್ಮಿಂಗ್ ಡೈರೆಕ್ಷನ್ ಸಿನಿಮಾಗೆ ರಚ್ಚು ನಾಯಕಿಯಾಗ್ತಾರೆ ಅಂತ ಸುದ್ದಿ ಹಬ್ಬಿಸುತ್ತಿದ್ದಾರೆ. ಇತ್ತ, ಸೂಪರ್‌ರಂಗನ ಫ್ಯಾನ್ಸ್ ಟ್ರೋಲ್ ನಿಜ ಆಗಲಿ ಬಿಡಿ, ಮತ್ತೆ ನಮ್ಮ ಬಾಸ್ ಜೊತೆ ರಚ್ಚು ಕುಣಿಯಲಿ ಎನ್ನುತ್ತಿದ್ದಾರೆ.

ಈಗಾಗಲೇ ಉಪ್ಪಿ ಹಾಗೂ ರಚ್ಚು ಜೋಡಿ ಕಿಕ್ಕೇರಿಸಿದೆ. ಇವರಿಬ್ಬರ ಕೆಮಿಸ್ಟ್ರಿ ಎಕ್ಕಾಮಕ್ಕಾ ವರ್ಕೌಟ್ ಆಗಿದೆ. ಐ ಲವ್ ಯೂ' ಸಿನಿಮಾದ ಮೂಲಕ ಬೆಳ್ಳಿತೆರೆ ಮೇಲೆ ದಿಬ್ಬಣ ಹೊರಟ ಈ ಜೋಡಿಗೆ ಫ್ಯಾನ್ಸ್ ಮುತ್ತಿನಹಾರ ಹಾಕಿದ್ದರು.ಬಂಗಾರದಲ್ಲಿ ಬೊಂಬೆ ಮಾಡಿದ, ಆ ರಂಭೆಗಿಂತ ರಂಗು ನೀಡಿದ, ಭೂಮಿಗೆ ತಂದು ನಿನ್ನ ನಂಗೆ ನೀಡಿದ’. ಸೌಂದರ್ಯವೆಲ್ಲಾ ಒಟ್ಟುಗೂಡಿಸಿ, ಶೃಂಗಾರದಲ್ಲಿ ನಿನ್ನ ರೂಪಿಸಿ, ಆ ಬ್ರಹ್ಮ ಭಾರೀ ರಸಿಕ ನಿನ್ನ ಮಾಡಿದ.. ಹೀಗೆ ಬುಲ್‌ಬುಲ್ ಬ್ಯೂಟಿನಾ ಉಪ್ಪಿ ವರ್ಣಿಸುತ್ತಾ ಪಡ್ಡೆಹೈಕ್ಳಿಗೆ ನಶೆಯೇರಿಸಿದ್ದಲ್ಲದೇ, ಬಾಕ್ಸ್ಆಫೀಸ್ ಹೆಡ್‌ಆಫೀಸ್ನೇ ಶೇಕ್ ಶೇಕ್ ಮಾಡಿದ್ದರು. ಈಗ ಮತ್ತೆ ಇವರಿಬ್ಬರು ಒಂದಾಗಿ `ನಾನು-ನೀನು’ ಕಥೆ ಹೇಳಿದರೆ ಸುನಾಮಿ-ಸುಂಟರಗಾಳಿ ಎಲ್ಲಾ ಒಟ್ಟೊಟ್ಟಿಗೆ ಏಳುತ್ತೆ

ಸೂಪರ್‌ಸ್ಟಾರ್ ಉಪ್ಪಿ ಸಿನಿಮಾಗೆ ರಚಿತಾ ಜೊತೆಯಾಗುವ ಚಾನ್ಸನ್ ಕೊಂಚ ಕಮ್ಮಿನೇ. ಯಾಕಂದ್ರೆ, `ಐ ಲವ್ ಯೂ’ ಚಿತ್ರದಲ್ಲಿ ಉಪೇಂದ್ರರ ಜೊತೆ ರಚಿತಾ ಮೇಡಂ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಹಿಂದೆಂದೂ ಕಾಣದ ಹಸಿಬಿಸಿ ದೃಶ್ಯಗಳಲ್ಲಿ ಮಿಂದೆದ್ದ ಮೇಲೆ ನಾನು ಅಷ್ಟೊಂದು ಹಾಟ್ ಆಗಿ ಕಾಣಿಸಿಕೊಳ್ಳಬಾರದಿತ್ತು ಎಂದು ರಚಿತಾ ಬೇಸರಪಟ್ಟುಕೊಂಡಿದ್ದರು ಮಾತ್ರವಲ್ಲ ಕಣ್ಣೀರಾಕಿದ್ದರು. ಮಾಧ್ಯಮಗಳ ಜೊತೆ ಮಾತನಾಡಿದ ಪ್ರಿಯಾಂಕ ಮೇಡಂ ಆಕ್ಟ್ ಮಾಡಬೇಕಾದರೆ ಗೊತ್ತಿರಲಿಲ್ಲವಾ? ಉಪ್ಪಿ ಮೇಲೆ ಬ್ಲೇಮ್ ಮಾಡ್ತಾರಲ್ಲ ಇದು ಸರೀನಾ ಅಂತ ಕೊಂಚ ಗರಂ ಆಗಿದ್ದರು. ಹೀಗಾಗಿ, ದುಬೈ ಬಾಬುಗೆ ಜಗ್ಗುದಾದನ ಸುಂದರ ಜೊತೆಯಾಗೋದು ಡೌಟೇಯಾ.

ಹಾಗಾದ್ರೆ, ಉಪ್ಪಿಯ ಮೋಸ್ಟ್ ಎಕ್ಸ್ ಪೆಕ್ಟೆಡ್ ಅಪ್‌ಕಮ್ಮಿಂಗ್ ಚಿತ್ರಕ್ಕೆ ನಾಯಕಿ ಯಾರಾಗಬಹುದಾ? ಪ್ಯಾನ್ ಇಂಡಿಯಾ ಲೆವೆಲ್ ಪ್ರಾಜೆಕ್ಟ್ ಗೆ ಕೈಹಾಕಿರುವ ಸಿನಿಮಾಗೆ ಪರಭಾಷೆಯ ನಾಯಕಿ ಬರಬಹುದಾ ಅಥವಾ ಹೋಮ್‌ಮಿನಿಸ್ಟರ್ ಪ್ರಿಯಾಂಕ ಅವರೇ ಬಣ್ಣ ಹಚ್ಚಬಹುದಾ? ಈ ಕೂತೂಹಲದ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ‘ಪಂಗನಾಮದ'ಪೋಸ್ಟರ್‌ಗೆ ಬುದ್ದಿವಂತ ಇನ್ನೂ ಅಧಿಕೃತ ಮುದ್ರೆ ಹೊತ್ತಿಲ್ಲ.ಇನ್ನೆರಡು ದಿನದಲ್ಲಿ ಉಪ್ಪಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ತಾರೆ.ಬಹುಷಃ ಅದೇ ದಿನ ಅದ್ಧೂರಿಯಾಗಿ ತಮ್ಮ ಮುಂದಿನ ಚಿತ್ರದ ಬಗ್ಗೆ ಕಂಪ್ಲೀಟ್ ಅಪ್‌ಡೇಟ್ ಕೊಡಬಹುದು.ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ನಿರ್ಮಾಣದ ಜೊತೆಗೆ ಅವರೇ ನಾಯಕನಾಗುತ್ತಾರಾ ಅಥವಾ ಅಣ್ಣನ ಮಗ ನಿರಂಜನ್‌ಗೆ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ಕೂತೂಹಲವೂ ಮೂಡಿದೆ.ಜಸ್ಟ್ ಒಂದೇ ಒಂದು ಸಿಂಬಲ್ ಇಷ್ಟೆಲ್ಲಾ ಕೌತುಕಕ್ಕೆ ಕಾರಣವಾಗಿದೆ.ದೇವನೊಬ್ಬ ನಾಮಹಲವು ಎನ್ನುವಂತೆ ಎರಡು ವೈಟ್ ಒಂದು ರೆಡ್ಡು ಇರುವ ಸಿಂಬಲ್’ ಹಲವು ಸುದ್ದಿಮಾಡುವಂತೆ ಮಾಡಿದೆ. ಎಲ್ಲದಕ್ಕೂ ೧೮ರಂದು ಬ್ರೇಕ್ ಬೀಳಲಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕುತೂಹಲ ಕೆರಳಿಸಿತು ಕ್ರೇಜಿಸ್ಟಾರ್-ಕಿಚ್ಚ ಭೇಟಿ; ಸ್ಪೆಷಲ್ ಸಮಾಚಾರ ಕೊಡ್ತಾರಾ ಅಪ್ಪ-ಮಗ !

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ದಿಲ್ಲದೇ ಕ್ರೇಜಿ ಸ್ಟಾರ್ ರವಿಚಂದ್ರನ್ ರನ್ನ ಭೇಟಿ‌ ಮಾಡಿದ್ದಾರೆ. ಈ ವೇಳೆ ವಿಕ್ರಾಂತ್‌ ರೋಣ ನಿರ್ಮಾಪಕ ಜಾಕ್‌ ಮಂಜು ಕೂಡ ಇದ್ದರು. ಇವರಿಬ್ಬರ ಭೇಟಿ ನಿಜಕ್ಕೂ ಕುತೂಹಲ ಕೆರಳಿಸಿದೆ. ಅವರವರ ಫ್ಯಾನ್ಸ್‌ಗೆ ಸಣ್ಣದ್ದೊಂದು ಖುಷಿಯೂ ಮೂಡಿದೆ. ಮತ್ತೆ ಬೆಳ್ಳಿತೆರೆ ಮೇಲೆ ಒಂದಾಗ್ತಾರಾ? ಅಥವಾ ಈಗಾಗಲೇ ತೆರೆಗೆ ಬರಲು ರೆಡಿಯಾಗಿರುವ “ವಿಕ್ರಾಂತ್ ರೋಣ” ಹಾಗೂ “ಕೋಟಿಗೊಬ್ಬ 3” ಚಿತ್ರದಲ್ಲೇನಾದರೂ ಕ್ರೇಜಿಯ ಕ್ರೇಜ್‌ ಇದೆಯಾ? ಈ‌ ಸಸ್ಪೆನ್ಸ್‌ ಅನ್ನು ಚಿತ್ರತಂಡ ಗುಟ್ಟಾಗಿಟ್ಟಿದೆಯಾ ? ಹೀಗೆ ಹಲವು ರೀತಿಯಾಗಿ ಫ್ಯಾನ್ಸ್ ಲೆಕ್ಕಚ್ಚಾರ ಹಾಕುತ್ತಿದ್ದಾರೆ.


ಈಗಾಗಲೇ, ಕ್ರೇಜಿ ಹಾಗೂ ಕಿಚ್ಚ ಕಾಂಬೋ ಒಂದಾಗಿರುವುದನ್ನ ನೀವೆಲ್ಲರೂ‌ ನೋಡಿದ್ದೀರಾ. ಸುದೀಪ್ ಮೇಲಿನ ಅಭಿಮಾನಕ್ಕೆ, ಪ್ರೀತಿಗೆ ರವಿಚಂದ್ರನ್‌ ಅವರು “ಮಾಣಿಕ್ಯ” ಹಾಗೂ “ಹೆಬ್ಬುಲಿ” ಚಿತ್ರದಲ್ಲಿ ನಟಿಸಿದ್ದರು. ತಂದೆಯಾಗಿ, ಅಣ್ಣನಾಗಿ ಕೋಟಿಗೊಬ್ಬನ ಜೊತೆ ನಿಂತಿದ್ದರು. ಅದರಂತೇ, ಸುದೀಪ್ ಕೂಡ ಲವ್ ಯೂ ಆಲಿಯಾ ಮತ್ತು ಅಪೂರ್ವ ಸಿನಿಮಾದಲ್ಲಿ ಪ್ರೇಮಲೋಕದ ರಣಧೀರನಿಗೆ ಸಾಥ್ ಕೊಟ್ಟರು. ಸಿಂಗಲ್ ಫ್ರೇಮ್ ನಲ್ಲಿ ಕನಸುಗಾರ ಹಾಗೂ ಕಿಚ್ಚನನ್ನು ನೋಡಿ ಫ್ಯಾನ್ಸ್ ಕೂಡ ಅಷ್ಟೇ ಖುಷಿಪಟ್ಟಿದ್ದರು.


ಅಂದ್ಹಾಗೇ, “ರಾಮಾಚಾರಿ” ಹಾಗೂ “ರನ್ನ” ಸ್ಯಾಂಡಲ್‌ವುಡ್‌ನ ಸೀನಿಯರ್ ಹಾಗೂ ಜೂನಿಯರ್ ಸ್ಟಾರ್ಸ್ ಗಳಾಗಿ ಉಳಿದಿಲ್ಲ. ಬದಲಾಗಿ ಈ ಇಬ್ಬರು ಧ್ರುವ ತಾರೆಗಳ ಮಧ್ಯೆ ತಂದೆ-ಮಗನ ಬಾಂಧವ್ಯವಿದೆ, ಮಮತೆ-ಮಮಕಾರದ ಕಕ್ಕುಲಾತಿಯ ಪ್ರೀತಿಯಿದೆ.‌ ಆ ಪ್ರೀತಿಯನ್ನ ಅಷ್ಟೇ ಜತನದಿಂದ ಕಾಯ್ದುಕೊಂಡಿದ್ದಾರೆ.

ರವಿಮಾಮ ಅಂತೂ ಸುದೀಪ್ ನನ್ನ ದೊಡ್ಡಮಗ ಅಂತಾರೇ. ಕ್ರೇಜಿ ಪ್ರೀತಿಗೆ, ಆತಿಥ್ಯಕ್ಕೆ, ಅಭಿಮಾನಕ್ಕೆ, ಪ್ರೋತ್ಸಾಹಕ್ಕೆ ಕಿಚ್ಚ ಶರಣಾಗ್ತಾರೆ. ಇದೀಗ ಸೈಲೆಂಟಾಗಿ ಇಬ್ಬರು ಭೇಟಿಯಾಗುವುದರ ಮೂಲಕ ಸುದ್ದಿಯಾಗಿದ್ದಾರೆ. ಇಬ್ಬರ ಭೇಟಿ ಕುಶಲೋಪರಿ ವಿಚಾರಣೆಯೋ ಅಥವಾ ಸಿನಿಮಾ ಚರ್ಚೆಯೋ ಕಾದುನೋಡಬೇಕು.

Categories
ಸಿನಿ ಸುದ್ದಿ

ಟಾಮ್‌ ಬಾಯ್‌ ಲುಕ್‌ನಲ್ಲಿ ಗಿರಿಜಾ ಲೋಕೇಶ್‌ ; ಬೆಟ್‌ ಕಟ್ಟಿದ್ರು ಪೈಲ್ವಾನ್‌ ನಿರ್ಮಾಪಕಿ !

ಏಜ್ ಈಸ್ ಜಸ್ಟ್ ಎ ನಂಬರ್' ಅನ್ನೋದನ್ನ ಸಾಕಷ್ಟು ಹಿರಿಯ ಕಲಾವಿದರು ಪ್ರೂ ಮಾಡಿ ತೋರಿಸಿದ್ದಾರೆ. ಈಗಾಗಲೇ ಸಾಕಷ್ಟು ಭಾರಿಏಜ್ ಈಸ್ ಜಸ್ಟ್ ಎ ನಂಬರ್’ ಎಂದು ಸಾಬೀತುಪಡಿಸಿರುವ ಧ್ರುವತಾರೆ ಗಿರಿಜಾ ಲೋಕೇಶ್. ಅವರು ಮತ್ತೊಮ್ಮೆ `ಕಲೆಗೆ ವಯಸ್ಸಿನ ಹಂಗಿಲ್ಲ’ ಎನ್ನುವುದನ್ನ ತೋರಿಸಿಕೊಟ್ಟಿದ್ದಾರೆ. ೭೦ರ ಇಳಿವಯಸ್ಸಲ್ಲಿ ಟಾಮ್‌ಬಾಯ್ ಲುಕ್‌ನಲ್ಲಿ ಮಿಂಚಿದ್ದಾರೆ. ಇತ್ತ ಪೈಲ್ವಾನ್ ನಿರ್ಮಾಪಕಿ ಸ್ವಪ್ನಾ ಕೃಷ್ಣ ಬೆಟ್ ಕಟ್ಟಿದ್ದಾರೆ. ಗಿರಿಜಾ ಅಮ್ಮನವರ ನ್ಯೂ ಲುಕ್‌ಗೂ-ಸ್ವಪ್ನಾ ಕೃಷ್ಣರ ಬೆಟ್ಟಿಂಗ್‌ಗೂ ಲಿಂಕ್ ಇದೆ. ಅದೇನು ಗೊತ್ತಾ? ಹಾಗೊಮ್ಮೆ ಓದಿಬಿಡಿ.

ಗಿರಿಜಾಲೋಕೇಶ್ ಕನ್ನಡ ಕಿರುತೆರೆ, ಬೆಳ್ಳಿತೆರೆ, ರಂಗಭೂಮಿ ಕಂಡ ಅಪರೂಪದ ನಟಿ. ಅಬಚೂರಿನ ಪೋಸ್ಟ್ ಆಫೀಸ್' ಸಿನಿಮಾದಿಂದ ಶುರುವಾದ ಬೆಳ್ಳಿತೆರೆ ಪಯಣ,ಸೆಲ್ಫೀ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರದವರೆಗೂ ಸಾಗಿ ಬಂದಿದೆ. “ಕಾಕನ ಕೋಟೆ”, “ಭುಜಂಗಯ್ಯನ ದಶಾವತಾರ”, “ಯಾರಿಗೂ ಹೇಳ್ಬೇಡಿ”, ಯಂತಹ ಸೂಪರ್‌ ಹಿಟ್ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಸುಮಾರು ೨೦೦ಕ್ಕೂ ಹೆಚ್ಚು ಸಿನಿಮಾಗಳು, ೩೦೦ಕ್ಕೂ ಹೆಚ್ಚು ನಾಟಕಗಳಿಗೆ ಜೀವ ತುಂಬಿದ್ದಾರೆ. `ಮುತ್ತಿನ ತೋರಣ’ ಮೂಲಕ ಕಿರುತೆರೆಯಲ್ಲಿ ಹಂಗಾಮ ಸೃಷ್ಟಿಸಿದ ಗಿರಿಜಮ್ಮನವರು ಈಗಲೂ ತಮ್ಮ ಚಾರ್ಮ್ ಕಳೆದುಕೊಂಡಿಲ್ಲ.

ಕಲೆಗೆ ಬೆಲೆ ಕಟ್ಟಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಕಲೆಗೆ ವಯಸ್ಸಿನ ಹಂಗಿಲ್ಲ ಎನ್ನುವುದು ಸತ್ಯ. ಈ ಮಾತು ಇಲ್ಲಿ ಹೇಳೋದಕ್ಕೆ ಕಾರಣ, ಖ್ಯಾತ ಕಲಾವಿದೆ ಗಿರಿಜಮ್ಮನವರಿಗೆ ಇಳಿವಯಸ್ಸಲ್ಲೂ ಬತ್ತದ ಉತ್ಸಾಹ. 70ರ ವಸಂತದಲ್ಲೂ ಅವರಿಗಿರುವ ಜೀವಾನೋತ್ಸಾಹ ಮತ್ತು ಕಲೆಯ ಮೇಲಿರುವ ಪ್ರೀತಿ-ಭಕ್ತಿ ಹಾಗೂ ಶ್ರದ್ಧೆಯನ್ನ ನೋಡಿದರೆ ಬರೀ ಚಪ್ಪಾಳೆ ತಟ್ಟುವುದಲ್ಲ, ಎದ್ದುನಿಂತು ಸೆಲ್ಯೂಟ್ ಹೊಡಿಬೇಕು ಅನ್ಸುತ್ತೆ.

ಬರೋಬ್ಬರಿ 50 ವರ್ಷಗಳಿಂದ ರಂಗಭೂಮಿ, ಕಿರುತೆರೆ ಹಾಗೂ ಬೆಳ್ಳಿತೆರೆ ಪಾತ್ರಗಳಿಗೆ ಜೀವತುಂಬಿ ಪ್ರೇಕ್ಷಕ ಮಹಾಷಯರನ್ನ ರಂಜಿಸುತ್ತಾ ಬರುತ್ತಿರುವ ಗಿರಿಜಾ ಲೋಕೇಶ್ ಅವರು 70ರ ಹರೆಯದಲ್ಲೂ ತರಹೇವಾರಿ ಪಾತ್ರಗಳಿಗೆ ಉಸಿರು ತುಂಬಿ ನಟಿಸುತ್ತಿದ್ದಾರೆ. ಪೋಷಕ ನಟಿಯಾಗಿ ಬಣ್ಣದ ಲೋಕದಲ್ಲಿ ಸಿನಿಜರ್ನಿ ಮುಂದುವರೆಸಿರುವ ಗಿರಿಜಮ್ಮನವರು ಈಗ ಏಕ್ದಮ್ ತಮ್ಮ ಲುಕ್-ಗೆಟಪ್‌ನ ಚೇಂಜ್ ಮಾಡಿಕೊಂಡಿದ್ದಾರೆ. ಟಾಮ್‌ ಬಾಯ್ ಅವತಾರದಲ್ಲಿ ಮಿಂಚಿ ಇವತ್ತಿನ ನಟಿಮಣಿಯರು ಬೆಕ್ಕಸ‌ ಬೆರಗಾಗುವಂತೆ, ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ.

ಕಲಾವಿದರಂದ್ರೆ ಹಾಗೇನೇ. ಸಿನಿಮಾದಿಂದ ಸಿನಿಮಾಗೆ, ಪಾತ್ರದಿಂದ ಪಾತ್ರಕ್ಕೆ ಬದಲಾವಣೆ ಬಯಸ್ತಾರೆ. ಭಿನ್ನ-ವಿಭಿನ್ನ ಪಾತ್ರಗಳಿಗೆ ಜೀವ ತುಂಬುವುದಕ್ಕೆ ಹಪಹಪಿಸುತ್ತಾರೆ. ಅದರಂತೇ, ಹಿರಿಯ ನಟಿ ಗಿರಿಜಮ್ಮನವರು ಕೂಡ ಪಾತ್ರವೇ ತಾವಾಗಲು ಬಯಸ್ತಾರೆ, ಜೀವತುಂಬಿ ಅಭಿನಯಿಸ್ತಾರೆ. ಇದೀಗ ರೌಡಿಬೇಬಿ ಸತ್ಯಾಳ ಜೊತೆ ಟಾಮ್‌ಬಾಯ್ ಆಗಿ ಕಿರುತೆರೆ ಲೋಕದಲ್ಲಿ ದಿಬ್ಬಣ ಹೊರಟಿದ್ದಾರೆ. ಸತ್ಯ' ಕಿರುತೆರೆ ಲೋಕದಲ್ಲಿ ಸಂಚಲನ ಸೃಷ್ಟಿಸಿರುವ ಧಾರಾವಾಹಿ. ಪೈಲ್ವಾನ್ ಚಿತ್ರ ನಿರ್ಮಾಪಕಿ ಸ್ವಪ್ನಕೃಷ್ಣ ನಿರ್ದೇಶನವಿರುವಸತ್ಯ’ ಕಿರುತೆರೆ ಪ್ರೇಕ್ಷಕರ ಮನಸೂರೆಗೊಂಡಿದೆ. ಸ್ಮಾಲ್‌ ಸ್ಕ್ರೀನ್‌ನ್‌ನಲ್ಲಿ ಸೂಪರ್‌ಹಿಟ್ ಸೀರಿಯಲ್ ಆಗಿ ಹೊರ ಹೊಮ್ಮಿದೆ. ಮಾತ್ರವಲ್ಲ, ಈ ಧಾರಾವಾಹಿ ಹಲವು ಪ್ರತಿಭೆಗಳಿಗೆ ಬಂಗಾರದಂತಹ ಅವಕಾಶ ಕೊಟ್ಟಿದೆ ಮತ್ತು ಅವರ ಬದುಕನ್ನ ಬದಲಾಯಿಸಿಬಿಟ್ಟಿದೆ. ಲೀಡ್‌ರೋಲ್‌ನಲ್ಲಿರುವ ಗೌತಮಿ ಜಾದವ್ ಕರುನಾಡಿನ ಮನೆಮನದಲ್ಲಿ ಮೆರೆಯೋದಕ್ಕೆ `ಸತ್ಯ’ ಸೀರಿಯಲ್ ಕಾರಣ. ರೌಡಿ ಬೇಬಿಯಾಗಿ ಕಮಾಲ್ ಮಾಡ್ತಿರುವ ಸತ್ಯಾಗೆ ಟಾಮ್‌ಬಾಯ್ ಪಾತ್ರಧಾರಿಯಾಗಿರುವ ಗಿರಿಜಾ ಲೋಕೇಶ್ ಅವರು ಸಾಥ್ ನೀಡಿದ್ದಾರೆ.

ಪ್ಯಾಂಟು-ಶರ್ಟ್ ಹಾಕಿಕೊಂಡು, ಕೈಗೆ ಬ್ಯಾಂಡ್ ಧರಿಸಿಕೊಂಡು, ಬಾಬ್‌ಕಟ್ ಹೇರ್‌ಸ್ಟೈಲ್‌ನಲ್ಲಿ ಗಿರಿಜಾ ಲೋಕೇಶ್ ಅವರು ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಹಿಂದೆಂದೂ ನೋಡದ ಅವತಾರದಲ್ಲಿ ಗಿರಿಜಮ್ಮನವರನ್ನ ನೋಡಿದ ವೀಕ್ಷಕರು ವಾರೆವ್ಹಾ ಎನ್ನುತ್ತಿದ್ದಾರೆ. ಅಂದ್ಹಾಗೇ, ಈ ಬದಲಾದ ಲುಕ್‌ಗೆ ಏಕೈಕ ಕಾರಣ ಪೈಲ್ವಾನ್ ನಿರ್ಮಾಪಕಿ ಸ್ವಪ್ನ ಕೃಷ್ಣ ಅವರು. ಈ ರೀತಿಯಾದ ಪಾತ್ರವನ್ನ ಗಿರಿಜಮ್ಮನವರಿಂದ ಮಾಡಿಸಬೇಕು ಎಂದುಕೊಂಡ ಸ್ವಪ್ನಕೃಷ್ಣ, ಗಿರಿಜಮ್ಮನವರನ್ನ ಒಪ್ಪಿಸಿ ಸತ್ಯ ಸೀರಿಯಲ್‌ಗೆ ಕರೆತಂದಿದ್ದಾರೆ. ಶೂಟಿಂಗ್ ಸಮಯದಲ್ಲಿ ಸತ್ಯ ಪಾತ್ರಧಾರಿ ಗೌತಮಿ ಜಾದವ್ ಹಾಗೂ ಗಿರಿಜಾ ಲೋಕೇಶ್ ಅವರೊಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಂಡಿರುವ ನಿರ್ಮಾಪಕಿ ಸ್ವಪ್ನ ಮೇಡಂ, `ಇವತ್ತಿನ ಯಂಗ್ ಜನರೇಷನ್ ಆರ್ಟಿಸ್ಟ್‌ಗಳಿಗೆ ನೀವು ಪ್ರೇರಣೆ. ನಾನು ಬೆಟ್ ಕಟ್ಟುತ್ತೀನಿ ಗಿರಿಜಮ್ಮನವರೇ, ನಿಮ್ಮ ಥರ ಯಾರು ಕೂಡ ಎನರ್ಜಿನಾ ಕ್ಯಾರಿ ಮಾಡೋದಕ್ಕೆ ಆಗಲ್ಲ’. ನಿಮ್ಮ ಜೊತೆ ವರ್ಕ್ ಮಾಡ್ತಿರುವುದು ಖುಷಿ ಕೊಡುತ್ತಿದೆ ಎಂದಿದ್ದಾರೆ. ಹಂಡ್ರೆಡ್ ಪರ್ಸೆಂಟ್ ನಿಜ. ಹಿಂದಿನ ಕಲಾವಿದರ ಯಂಗ್ ಅಂಡ್ ಎನರ್ಜಿಗೆ ಇವತ್ತಿನ ಆರ್ಟಿಸ್ಟ್‌ಗಳು ಸೆಡ್ಡು ಹೊಡೆಯೋದಕ್ಕೆ ಆಗಲ್ಲ. ಎನಿವೇ ಟಾಮ್‌ಬಾಯ್ ಗಿರಿಜಮ್ಮನವರಿಗೆ ಶುಭವಾಗಲಿ, ಇದೇ ರೀತಿ ಎಕ್ಸ್ಪಿರಿಮೆಂಟ್ ಪಾತ್ರಗಳ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಹಾಜರಾಗಲಿ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ನೀನು-ನಾನು ಸಿಂಬಲ್‌ ಸ್ಪೆಷಲ್‌ ; ಉಪ್ಪಿ ಮಾಡ್ತಾರೆ ಕಮಾಲ್! ಬರ್ತ್‌ ಡೇಗೆ ಕೊಡ್ತಾರೆ ಹೊಸ ಸುದ್ದಿ!!

ಉಪೇಂದ್ರ ಈ ಹಿಂದೆಯೇ, “ನೀನು” ಮತ್ತು “ನಾನು” ಅನ್ನೋದರ ಅರ್ಥ ಹುಡುಕುವ ಪ್ರಯತ್ನಕ್ಕೆ ಜನರನ್ನು ಬಿಟ್ಟಿದ್ದರು. ನೀನು, ನಾನು ಕುರಿತು ಅದೆಷ್ಟೋ ಬಾರಿ ಅವರ ಸಿನಿಮಾಗಳಲ್ಲಿ ಡೈಲಾಗ್‌ ಹೊಡೆದಿದ್ದರು. ಈಗ ಆಂಗ್ಲ ಭಾಷೆಯಲ್ಲಿ ಗಮನಿಸಿದರೆ, ಯು ಮತ್ತು ಐ ಅನ್ನುವ ಟೈಟಲ್‌ ಕೊಟ್ಟು ಆ ಅರ್ಥದಲ್ಲೇ ಈ ಸಿನಿಮಾ ಮಾಡುತ್ತಿದ್ದಾರೆ ಅನ್ನುವುದನ್ನು ಅವರ ಫ್ಯಾನ್ಸ್‌ ಮತ್ತು ಸಿನಿ ಪ್ರೇಮಿಗಳು ಪತ್ತೆ ಹಚ್ಚಿದ್ದಾರೆ. ಅಲ್ಲಿಗೆ ಉಪೇಂದ್ರ ಈ ಸಲವೂ ಫಿಲಾಸಫಿ ಜೊತೆ ಹೊಸದೇನನ್ನೋ ಹೇಳಲು ಹೊರಟಿದ್ದಾರೆ

ನಟ ಉಪೇಂದ್ರ ಅಂದಾಕ್ಷಣ ಥಟ್ಟನೆ ನೆನಪಾಗೋದೇ ವಿಶೇಷ ಮತ್ತು ವಿಭಿನ್ನ. ಅವರ ಮೊದಲ ನಿರ್ದೇಶನದ “ಎ” ಸಿನಿಮಾದಲ್ಲೇ ಕುತೂಹಲ ಮೂಡಿಸಿ, ನಿರೀಕ್ಷೆ ಹುಸಿಗೊಳಿಸದೆಯೇ ಗೆದ್ದು ತೋರಿಸಿದವರು. ಅವರ ನಿರ್ದೇಶನದ ಸಿನಿಮಾಗಳನ್ನು ಇಲ್ಲಿಯವರೆಗೆ ಸೂಕ್ಷ್ಮವಾಗಿ ಗಮನಿಸುತ್ತ ಬಂದವರಿಗೆ, ಅಲ್ಲೊಂದು ವಿಭಿನ್ನತೆ ಇರೋದು ಗೊತ್ತಾಗುತ್ತೆ. ಉಪೇಂದ್ರ ತಮ್ಮ ನಿರ್ದೇಶನದ ಸಿನಿಮಾಗಳಲ್ಲಿ ಕುತೂಹಲ ಮೂಡಿಸುವ ಮೂಲಕವೇ ಸುದ್ದಿಯಾಗುವುದುಂಟು. ಸಿಂಬಲ್‌ ತೋರಿಸುವ ಮೂಲಕವೇ ಚಿತ್ರವನ್ನು ಒಂದು ಹಂತಕ್ಕೆ ಕೊಂಡೊಯ್ಯುವ ಕಲೆ ಉಪ್ಪಿಗೆ ಸಿದ್ಧಿಸಿದೆ. ಇದುವರೆಗೆ ಅವರು ನಿರ್ದೇಶಿಸಿರುವ ಸಿನಿಮಾಗಳಲ್ಲಿ ವಾಸ್ತವ ಅಂಶಗಳಿವೆ. ಸಮಾಜಕ್ಕೆ ಕನ್ನಡಿ ಎನ್ನುವಂತಹ ಕಥೆಯೂ ಇದೆ. ಈಗ ಉಪೇಂದ್ರ ಮತ್ತೆ ಸುದ್ದಿಯಲ್ಲಿದ್ದಾರೆ. ಹಾಗಂತ, “ಕಬ್ಜ” ಸಿನಿಮಾ ಸುದ್ದಿ ಅಂದುಕೊಳ್ಳಬೇಡಿ. ಅವರೀಗ ಹೊಸ ಸಿನಿಮಾದ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ.‌

ಹೌದು, ಉಪೇಂದ್ರ ಅವರು ಇತ್ತೀಚೆಗಷ್ಟೇ, ಸದ್ಯಕ್ಕೆ ಎರಡು ಸ್ಕ್ರಿಪ್ಟ್‌ ರೆಡಿ ಇದೆ. ಸಮಯ ಸಿಕ್ಕಾಗಲೇ ನಿರ್ದೇಶನ ಮಾಡ್ತೀನಿ ಅಂತ ಹೇಳಿಕೊಂಡಿದ್ದರು. ಈಗ ಅವರ ಮುಂದಿನ ಸಿನಿಮಾದ ಪೋಸ್ಟರ್‌ವೊಂದು ಸೋಶಿಯಲ್‌ ಮೀಡಿಯಾದಲ್ಲಿ ಜೋರು ಸದ್ದು ಮಾಡುತ್ತಿದೆ. ಹೌದು, ಅವರು ಈ ಬಾರಿಯೂಸಿಂಬಲ್‌ ಇಟ್ಟುಕೊಂಡೇ ಆಟವಾಟಡುವ, ನಿರೀಕ್ಷೆ ಹೆಚ್ಚಿಸುವ ಮೂಲಕ ಮತ್ತೆ ಕುತೂಹಲ ಕೆರಳಿಸಿದ್ದಾರೆ. ಅವರ ಪೋಸ್ಟರ್‌ನಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನ ಉಪೇಂದ್ರ ಅಂತಿದೆ. ಅದರಲ್ಲೂ ಆ ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿದೆ. ಅಲ್ಲಿಗೆ ಅದೊಂದು ಪ್ಯಾನ್‌ ಇಂಡಿಯಾ ಸಿನಿಮಾನೇ ಅಂದುಕೊಳ್ಳಬೇಕು. ಅಷ್ಟಕ್ಕೂ ಉಪೇಂದ್ರ ಅವರು ಈ ಬಾರಿ ಇಟ್ಟ ಸಿಂಬಲ್‌ ಏನು?

ಅವರ ಹೊಸ ಚಿತ್ರದ ಸಿಂಬಲ್‌ ಅದೊಂದು ರೀತಿ ಕುತೂಹಲವಂತೂ ಹೌದು. ನೋಡಿದವರಿಗೆ ಈ ಬಾರಿ ತಿರುಮಲ ವೆಂಕಟಸ್ವಾಮಿಯ ನಾಮ ಸಿಂಬಲ್‌ ಇದ್ಹಾಗಿದೆಯಲ್ಲ ಅನಿಸುವುದು ನಿಜ. ಯಾಕೆಂದರೆ, ಎರಡು ಬಿಳಿ ಗೆರೆಯ ಮಧ್ಯೆ ಕೆಂಪು ಗೆರೆಯೂ ಇಲ್ಲಿದೆ. ವೆಂಕಟರಮಣ ಸ್ವಾಮಿಯ ಸಿಂಬಲ್‌ ಇಟ್ಟುಕೊಂಡು ಸಿನಿಮಾ ಮಾಡ್ತಾ ಇದ್ದಾರೆಯೇ ಎಂಬ ಪ್ರಶ್ನೆ ಎದುರಾದರೂ ಅಚ್ಚರಿಯಿಲ್ಲ. ಆದರೆ, ಅವರ ಪ್ರಕಾರ ಅದರ್ಥ ಬಿಳಿ ಬಣ್ಣದ ಎರಡು ಗೆರೆ ಗಮನಿಸಿದವರಿಗೆ “ಯು” ಅಂತಾನೂ, ಕೆಂಪು ಬಣ್ಣದ ಒಂದು ಗೆರೆ ಗಮನಿಸಿದವರಿಗೆ “ಐ” ಅಂತಾನೂ ಅನಿಸುತ್ತೆ. ಆದರೆ, ಅದನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ, ಅರ್ಥೈಸಿಕೊಂಡವರಿಗೆ ಮಾತ್ರ ಅದು ಗೊತ್ತಾಗಲಿದೆ.


ಉಪೇಂದ್ರ ಈ ಹಿಂದೆಯೇ, “ನೀನು” ಮತ್ತು “ನಾನು” ಅನ್ನೋದರ ಅರ್ಥ ಹುಡುಕುವ ಪ್ರಯತ್ನಕ್ಕೆ ಜನರನ್ನು ಬಿಟ್ಟಿದ್ದರು. ನೀನು, ನಾನು ಕುರಿತು ಅದೆಷ್ಟೋ ಬಾರಿ ಅವರ ಸಿನಿಮಾಗಳಲ್ಲಿ ಡೈಲಾಗ್‌ ಹೊಡೆದಿದ್ದರು. ಈಗ ಆಂಗ್ಲ ಭಾಷೆಯಲ್ಲಿ ಗಮನಿಸಿದರೆ, ಯು ಮತ್ತು ಐ ಅನ್ನುವ ಟೈಟಲ್‌ ಕೊಟ್ಟು ಆ ಅರ್ಥದಲ್ಲೇ ಈ ಸಿನಿಮಾ ಮಾಡುತ್ತಿದ್ದಾರೆ ಅನ್ನುವುದನ್ನು ಅವರ ಫ್ಯಾನ್ಸ್‌ ಮತ್ತು ಸಿನಿ ಪ್ರೇಮಿಗಳು ಪತ್ತೆ ಹಚ್ಚಿದ್ದಾರೆ. ಅಲ್ಲಿಗೆ ಉಪೇಂದ್ರ ಈ ಸಲವೂ ಫಿಲಾಸಫಿ ಜೊತೆ ಹೊಸದೇನನ್ನೋ ಹೇಳಲು ಹೊರಟಿದ್ದಾರೆ. “ಉಪ್ಪಿ 2” ಬಳಿಕ ಅವರು ಈ ಸಿನಿಮಾ ನಿರ್ದೇಶನಕ್ಕೆ ಹೊರಟಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಅಂದರೆ ಸೆಪ್ಟೆಂಬರ್‌ 18 ರಂದು ಅವರ ನಿರ್ದೇಶನದ ಹೊಸ ಚಿತ್ರದ ಬಗ್ಗೆ ಒಂದಷ್ಟು ಹೊಸ ಮಾಹಿತಿ ಸಿಗಲಿದೆ. ಉಪೇಂದ್ರ ಪ್ರೊಡಕ್ಷನ್ಸ್‌ ಅರ್ಪಿಸುತ್ತಿರುವ ಈ ಚಿತ್ರದಲ್ಲಿ ಅವರೇ ಹೀರೋನಾ? ಅಥವಾ ಬೇರೆ ಯಾರಾದರೂ ನಟಿಸ್ತಾರಾ, ಯಾರೆಲ್ಲಾ ಇರ್ತಾರೆ, ಇಲ್ಲಿ ತಾಂತ್ರಿಕ ವರ್ಗದಲ್ಲಿ ಯಾರೆಲ್ಲ ಇರುತ್ತಾರೆ ಎಂಬಿತ್ಯಾದಿ ಪ್ರಶ್ನೆಗೆ ಸಿನಿಮಾ ಬರೋವರೆಗೆ ಕಾಯಬೇಕು. ಅಂದಹಾಗೆ, ಉಪೇಂದ್ರ ಅವರ ಈ ಹೊಸ ಪೋಸ್ಟರ್‌ ಸಾಕಷ್ಟು ಸೌಂಡು ಮಾಡುತ್ತಿದೆ. ಸಿನಿಮಾ ಕೂಡ ಅಷ್ಟೇ ಸದ್ದು ಮಾಡಲಿ ಅನ್ನೋದು “ಸಿನಿಲಹರಿ” ಆಶಯ.

Categories
ಸಿನಿ ಸುದ್ದಿ

ಹೊರಬಂತು ಕರುನಾಡ ಯಜಮಾನ ಡಾ.ವಿಷ್ಣುವರ್ಧನ್‌ ಪುಸ್ತಕ ; ಮಕ್ಕಳಿಗಾಗಿಯೇ ಡಾ.ಶರಣು ಹುಲ್ಲೂರು ಬರೆದ ಕೃತಿ ಇದು

ವಿಷ್ಣುವರ್ಧನ್ ಅವರ 71ನೇ ಜನ್ಮದಿನದ ಅಂಗವಾಗಿ ಡಾ.ವಿಷ್ಣುಸೇನಾ ಸಮಿ ಈ ಕಿರುಹೊತ್ತಿಗೆಯನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸುವ ದೃಷ್ಠಿಯಿಂದ ಹೊರತಂದಿದ್ದು, ಸುಮಾರು ಒಂದು ಲಕ್ಷ ಮಕ್ಕಳಿಗೆ ವಿತರಿಸುವ ಯೋಜನೆ ಸಮಿತಿಗಿದೆ. ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಅವರು ಪಠ್ಯದಲ್ಲಿ ಕರುನಾಡ ಯಜಮಾನನ ಪಠ್ಯ ಸೇರಿಸಲು ಮಾಡಿದ ಮನವಿಗೆ ಶಿಕ್ಷಣ ಸಚಿವ ನಾಗೇಶ್‌ ಪಠ್ಯಪುಸ್ತಕ ಸಮಿತಿಗೆ ಶಿಫಾರಸ್ಸುಗೊಳಿಸುವುದಾಗಿ ಹೇಳಿದ್ದಾರೆ…

ಡಾ.ವಿಷ್ಣುವರ್ಧನ್‌ ಅವರ ಕುರಿತತಂತೆ ಈಗಾಗಲೇ ಸಾಕಷ್ಟು ಪುಸ್ತಕಗಳು ಕಿರು ಹೊತ್ತಿಗೆ ಹೊರಬಂದಿವೆ. ಆ ಸಾಲಿಗೆ ಈಗ ಡಾ.ಶರಣು ಹುಲ್ಲೂರು ಅವರು ಬರೆದಂತಹ ಕಿರುಹೊತ್ತಿಗೆಯೂ ಬಿಡುಗಡೆಯಾಗಿದೆ. ಹೌದು, “ಕರುನಾಡ ಯಜಮಾನ ಡಾ.ವಿಷ್ಣುವರ್ಧನ್‌” ಎಂಬ ಕಿರುಹೊತ್ತಿಗೆ ಹೊರಬಂದಿದ್ದು, ಆ ಪುಸ್ತಕವನ್ನು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ತಮ್ಮ ಕಚೇರಿಯಲ್ಲಿ ಬುಧವಾರ ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ.


ಈ ಪುಸ್ತಕದ ವಿಶೇಷವೆಂದರೆ ಡಾ.ವಿಷ್ಣು ಸೇನಾ ಸಮಿತಿ ಪ್ರೀತಿಯಿಂದಲೇ ಈ ಪುಸ್ತಕವನ್ನು ಹೊರತಂದಿದೆ. ಡಾ. ವಿಷ್ಣುವರ್ಧನ್ ಅವರ 71ನೇ ಜನ್ಮದಿನದ ಅಂಗವಾಗಿ ಡಾ.ವಿಷ್ಣುಸೇನಾ ಸಮಿತಿಯು “ಕರುನಾಡ ಯಜಮಾನ ಡಾ.ವಿಷ್ಣುವರ್ಧನ್” ಎಂಬ ಕಿರುಹೊತ್ತಿಗೆಯನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸುವ ದೃಷ್ಠಿಯಿಂದ ಹೊರತಂದಿದೆ. ಈ ಕೃತಿಯನ್ನು ಸುಮಾರು ಒಂದು ಲಕ್ಷ ಮಕ್ಕಳಿಗೆ ವಿತರಿಸುವ ಯೋಜನೆ ಸಮಿತಿಗಿದೆ. ಇದೇ ವೇಳೆ ಸಚಿವ ನಾಗೇಶ್‌ ಅವರಿಗೆ ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌ ಅವರು, ಪಠ್ಯದಲ್ಲಿ ಕರುನಾಡ ಯಜಮಾನನ ಪಠ್ಯ ಸೇರಿಸಲು ಮನವಿ ಮಾಡಿದರು. ಅವರ ಮನವಿಗೆ ಸ್ಪಂದಿಸಿದ ಸಚಿವರು ಪಠ್ಯಪುಸ್ತಕ ಸಮಿತಿಗೆ ಮನವಿಯನ್ನು ಶಿಫಾರಸ್ಸುಗೊಳಿಸುವುದಾಗಿ ತಿಳಿಸಿದರು.


ಸಿನಿಮಾ, ಜನಪರ ಕಾರ್ಯಗಳ ಮೂಲಕ ಡಾ.ವಿಷ್ಣುವರ್ಧನ್ ಅವರು ಯಾವತ್ತಿಗೂ ನಮ್ಮೊಂದಿಗೆ ಇರುತ್ತಾರೆ. ಅವರ ಆದರ್ಶ ಬದುಕು, ನಾಡು, ನುಡಿಯ ಬಗೆಗಿನ ಅಭಿಮಾನ ಮತ್ತು ಜೀವಪರ ಕಾಳಜಿ ನಮಗೆಲ್ಲ ಮಾದರಿಯಾಗಿದೆ. ಅವರು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದರೂ, ಕೊನೆಗೂ ಗೆದ್ದದ್ದು ಅವರ ಶ್ರಮ. ಹಾಗಾಗಿ ಮಕ್ಕಳಿಗೆ ಡಾ.ವಿಷ್ಣು ಬದುಕಿನ ಕುರಿತು ಪರಿಚಯ ಆಗಬೇಕಿದೆ. ಆ ಕಾರಣದಿಂದ ಡಾ.ವಿಷ್ಣು ಅವರ ಬದುಕು ಸಾಧನೆಗಳನ್ನು ಪಠ್ಯದಲ್ಲಿ ಸೇರಿಸಲು ಡಾ.ವಿಷ್ಣು ಸೇನಾ ಸಮಿತಿ ಮನವಿ ಮಾಡಿಕೊಂಡಿದೆ. ಈ ಸಂದರ್ಭದಲ್ಲಿ ಲೇಖಕರಾದ ಡಾ. ಶರಣು ಹುಲ್ಲೂರು, ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ, ಗುರುನಾಥ ರಾಜಗೀರ ಸೇರಿದಂತೆ ಇತರರು ಇದ್ದರು.

Categories
ಸಿನಿ ಸುದ್ದಿ

ಲಕ್ಕಿಮ್ಯಾನ್‌ಗೆ ಅಪ್ಪು ಡ್ಯಾನ್ಸ್!‌ ಸಹೋದರ ನಾಗೇಂದ್ರ ಪ್ರಸಾದ್‌ ನಿರ್ದೇಶನದ ಸಿನಿಮಾದಲ್ಲಿ ಪ್ರಭುದೇವ ಕೂಡ ಸ್ಟೆಪ್ಪು


ಪುನೀತ್‌ ರಾಜಕುಮಾರ್‌ ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಅದು ಪ್ರೀತಿಗೆ ಮಾತ್ರ. ಈಗ ಮತ್ತೊಂದು ಸಿನಿಮಾದಲ್ಲಿ ಅದೇ ಪ್ರೀತಿ ವಿಶ್ವಾಸಕ್ಕೆ ಡ್ಯಾನ್ಸ್‌ ಮಾಡಲು ಒಪ್ಪಿದ್ದಾರೆ ಎಂಬ ಸುದ್ದಿ ಇದೆ. ಹೌದು, ಪ್ರಭುದೇವ ಅವರ ಸಹೋದರ ನಾಗೇಂದ್ರ ಪ್ರಸಾದ್‌ ಅವರು ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿದ್ದು, ಆ ಸಿನಿಮಾದಲ್ಲಿ ಪುನೀತ್‌ ರಾಜಕುಮಾರ್‌ ಮತ್ತು ಪ್ರಭುದೇವ ಇಬ್ಬರೂ ಒಂದು ಹಾಡಲ್ಲಿ ಹೆಜ್ಜೆ ಹಾಕಲಿದ್ದಾರಂತೆ. ಅಂದಹಾಗೆ, ಆ ಸಿನಿಮಾದ ಹೆಸರು. “ಲಕ್ಕಿ ಮ್ಯಾನ್”‌ ಇದು ಕನ್ನಡದಲ್ಲಿ ತಯಾರಾಗುತ್ತಿರುವ ಸಿನಿಮಾ. ತಮಿಳಿನ “ಓ ಮೈ ಕಡುವಲೇ” ಸಿನಿಮಾದ ಪ್ರೇರಣೆಯಿಂದ ಶುರುವಾಗುತ್ತಿರುವ ಸಿನಿಮಾ ಇದು.

ಈ “ಲಕ್ಕಿ ಮ್ಯಾನ್” ಸಿನಿಮಾದ ಸ್ಪೆಷಲ್‌ ಹಾಡಲ್ಲಿ ಪ್ರಭುದೇವ ಮತ್ತು ಪುನೀತ್ ಸ್ಟೆಪ್‌ ಹಾಕಲಿದ್ದು, ಆ ಹಾಡಿಗೆ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಲಿದ್ದಾರೆ. ಅಂದಹಾಗೆ, ಬೆಂಗಳೂರಲ್ಲಿ ಶೂಟಿಂಗ್‌ ಶುರುವಾಗಿದೆ.
ಈ ಸಿನಿಮಾಗೆ ಕೃಷ್ಣ ಹೀರೋ. ಅವರ ಜೊತೆ ಸಂಗೀತ ಶೃಂಗೇರಿ, ರೋಷನಿ ಪ್ರಕಾಶ್ ಇಬ್ಬರು ನಾಯಕಿಯರು. ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಈ ಹಾಡಿನೊಂದಿಗೆ ಕುಂಬಳಕಾಯಿ ಹೊಡೆಯುವ ಯೋಜನೆ ಚಿತ್ರತಂಡಕ್ಕಿದೆ. ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ಈ ಹಿಂದೆ ಕನ್ನಡದಲ್ಲಿ “ಮನಸೆಲ್ಲಾ ನೀನೇ” ಚಿತ್ರದಲ್ಲಿ ನಾಯಕರಾಗಿದ್ದರು. ಪ್ರಭುದೇವ ನಿರ್ದೇಶನದ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಉಪೇಂದ್ರ ಅವರ “ಎಚ್‌2ಓ” ಚಿತ್ರದೊಂದಿಗೆ ಕನ್ನಡಕ್ಕೆ ಬಂದಿದ್ದಋು. ಆ ನಂತರ “ಮನಸೆಲ್ಲಾ ನೀನೆ” ಮತ್ತು “ಪ್ರಾರಂಭ” “1 2 3” ಚಿತ್ರಗಳಲ್ಲಿ ನಟಿಸಿದ್ದರು. ಬಹಳ ವರ್ಷಗಳ ನಂತರ ಕನ್ನಡ ಸಿನಿಮರಂಗಕ್ಕೆ ಎಂಟ್ರಿಯಾಗಿದ್ದಾರೆ.

Categories
ಸಿನಿ ಸುದ್ದಿ

ನೂರು ವರ್ಷಗಳ ಚಲನಚಿತ್ರ ಸಂಗೀತ ಸಂಶೋಧನೆಗೆ ಡಾಕ್ಟರೇಟ್ ಪಡೆದ ಗಾಯಕಿ ; ಭಾರತದ ಮೊದಲ ಹಿನ್ನೆಲೆ ಗಾಯಕಿ ಪ್ರಿಯದರ್ಶಿನಿ ಮಾಡಿದ ಸಾಧನೆ ಇದು

ಭಾರತೀಯ ಚಿತ್ರರಂಗದ ಇತಿಹಾಸ ದೊಡ್ಡದು. ಈಗಾಗಲೇ ಹಲವು ಸಾಧಕರು ಕಲಾವಿದರ ಕುರಿತು ಸಂಶೋಧನೆ ನಡೆಸಿ, ಪ್ರಬಂಧ ಮಂಡಿಸಿ ಡಾಕ್ಟರೇಟ್‌ ಪಡೆದಿರುವುದುಂಟು. ಈಗ ಹೊಸ ಸುದ್ದಿ ಅಂದರೆ, ಇದೇ ಮೊದಲ ಬಾರಿಗೆ ಭಾರತದ ಮೊದಲ ಹಿನ್ನೆಲೆ ಗಾಯಕಿಯೊಬ್ಬರು ನೂರು ವರ್ಷಗಳ ಚಲನಚಿತ್ರ ಸಂಗೀತ ಸಂಶೋಧನೆಗೆ ಡಾಕ್ಟರೇಟ್‌ ಪಡೆದಿದ್ದಾರೆ. ಬಹುಭಾಷಾ ಹಿನ್ನೆಲೆ ಗಾಯಕಿ ಎನಿಸಿಕೊಂಡಿರುವ ಪ್ರಿಯದರ್ಶಿನಿ ಅವರು ಈ ಸಾಧನೆ ಮಾಡಿದ್ದು, ಇತ್ತೀಚಿಗೆ ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಆಶ್ವತ್ಥ್ ನಾರಾಯಣ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ. ಹೇಮಂತ ಕುಮಾರ್ ಪ್ರದಾನಮಾಡಿದ್ದಾರೆ.

ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಅನೇಕ ಹೆಸರಾಂತ ಸಂಗೀತ ನಿರ್ದೇಶಕರಿಗೆ 130 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಹಿನ್ನಲೆ ಗಾಯಕಿಯಾಗಿ ಕೆಲಸ ಮಾಡಿರುವ ಪ್ರಿಯದರ್ಶಿನಿ ಹಲವಾರು ಭಕ್ತಿ ಗೀತೆಗಳು, ಆಲ್ಬಂಗಳಿಗೆ ಹಾಡಿದ್ದಾರೆ. ಪ್ರಿಯದರ್ಶಿನಿ ಅವರು ಸಿಂಗಾಪುರ್ ನಲ್ಲಿ ಎಂಜಿನಿಯರಿಂಗ್ ಓದುವ ವೇಳೆ ಭಾರದ್ವಾಜ್ ಸಂಗೀತ ನಿರ್ದೇಶನದ “ಕಾದಲ್ ಡಾಟ್ ಕಾಮ್” ಎಂಬ ತಮಿಳು ಚಲನ ಚಿತ್ರದಲ್ಲಿ ಗಾಯಕ ಹರಿಹರನ್ ಜೊತೆ ಯುಗಳಗೀತೆ ಹಾಡುವ ಮೂಲಕ ಅವರು ಚಿತ್ರರಂಗ ಪ್ರವೇಶಿಸಿದ್ದಾರೆ. ನಂತರ ಹಲವು ಸಂಗೀತ ದಿಗ್ಗಜರ ಜೊತೆ ಕೆಲಸ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ. “ಚೆಲುವಿನ ಚಿತ್ತಾರ”, “ಜ್ಯೂಲಿ” , “ನನ್ನೆದೆಯ ಹಾಡು”, “ಕುಸ್ತಿ” , “ನಂದಿ”, “ಸಿಂಹಬಲುಡು”, “ಮಾಣಿಕ್ಯಮ್ 420”, “ಗಿರಿ”, “ಮುತ್ತಿನ ಮಳೆಯಲಿ”, “ಪ್ರೀತಿಯಿಂದ ರಮೇಶ್” “ನ್ಯೂಸ್” ಹಾಗು ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್ ನಟಿನೆಯ “ಗರಂ ಮಸಾಲ” ಚಿತ್ರದಲ್ಲಿ ಹಾಡಿದ್ದಾರೆ. ಯಶ್ ಅಭಿನಯದ “ರಾಕಿ” ಚಿತ್ರದಲ್ಲಿ ಎಸ್. ಪಿ. ಬಾಲಸುಬ್ರಹ್ಮಣ್ಯಂ ಜೊತೆ ಹಾಡಿದ ಹೆಮ್ಮೆ ಇವರದು. ಮುಂತಾದ ಚಿತ್ರಗಳಲ್ಲಿ ಹಾಡಿದ್ದೇನೆ, ಕನ್ನಡದಲ್ಲಿ ರಾಜೇಶ್ ರಾಮನಾಥ್ ಸಂಗೀತ ನಿರ್ದೇಶನದ “ಅಜ್ಜು” ಇವರ ಮೊದಲ ಹಾಡಿನ ಸಿನಿಮಾ.

ಪ್ರಿಯದರ್ಶಿನಿ ಅವರು, ನಾಲ್ಕನೇ ವಯಸ್ಸಲ್ಲೇ ಗುರು ಶಾರದಾ ಸ್ವಾಮಿನಾಥನ್ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ನಡೆಸಿ, 9ನೆೇ ವಯಸ್ಸಿಗೆ ಮೊದಲ ಸಂಗೀತ ಕಛೇರಿ ನೀಡಿದ್ದಾರೆ. ನಂತರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ಗಝಲ್ ಪಂಡಿತ್ ಶ್ರೀ ಚರಣ್ ಬಳಿ ಕಲಿತು, ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪಾಶ್ಚಾತ್ಯ ಸಂಗೀತವನ್ನು – ಲಂಡನ್ ನ ದಿ ರಾಯಲ್ ಸ್ಕೂಲ್ ಆಫ್ ಮ್ಯೂಸಿಕ್ ನಲ್ಲಿ ಕಲಿತು ಈಗ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಿನಿಮಾ ಸಂಗೀತದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.

ಹಿನ್ನಲೆ ಗಾಯಕಿಯಾದ ಇವರು ಭಾರತೀಯ ಚಲನಚಿತ್ರ ಸಂಗೀತ ಬಹು ಆಯಾಮವನ್ನು ಹೊಂದಿದೆ ಅಂದುಕೊಂಡವರು. ಈವರಗೆ ಅವರು ಕಂಡಂತೆ ಸಿನಿಮಾ ಬಗ್ಗೆ ಹಲವಾರು ಗ್ರಂಥಗಳು ಪುಸ್ತಕಗಳಿವೆ. ಆದರೆ, ಸಿನಿಮಾ ಸಂಗೀತದ ಬಗ್ಗೆ ಬೆರಳೆಣಿಕೆಯೆಷ್ಟು ಮಾತ್ರ ಪುಸ್ತಕಳಲ್ಲಿ ಮಾಹಿತಿ ಇದೆ.

ಹೀಗಾಗಿ ಅವರು ಚಲನಚಿತ್ರ ರಂಗಕ್ಕೆ ಚಲನಚಿತ್ರ ಸಂಗೀತದ ಬಗ್ಗೆ ಒಂದು ಮೂಲ ಗ್ರಂಥವನ್ನು ಕೊಡುಗೆಯಾಗಿ ನೀಡುವ ಮಹದಾಸೆಯಿಂದ ಈ ಸಂಶೋಧನ ವಿಷಯವನ್ನು ಆಯ್ಕೆ ಮಾಡಿದ್ದಾರೆ. ಇದು ಖಂಡಿತವಾಗಿಯೂ ಭವಿಷ್ಯದ ಪೀಳಿಗೆಗೆ, ಸಂಗೀತಗಾರರಿಗೆ, ಗಾಯಕರಿಗೆ, ಕಲಾವಿದರಿಗೆ, ತಂತ್ರಜ್ಞರಿಗೆ ಮತ್ತು ಅನೇಕರಿಗೆ ಜ್ಞಾನದ ಮೂಲವಾಗಿದೆ ಎನ್ನುತ್ತಾರೆ ಅವರು.

ಡಾ.ಸಿ.ಎ. ಶ್ರೀಧರ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಅಧ್ಯಯನ ನಡೆಸಿದ್ದು “ಮ್ಯೂಸಿಕ್ ಇನ್ ಕನ್ನಡ ಅಂಡ್ ತಮಿಳ್ ಸಿನಿಮಾ- ಸ್ಟಡಿ” ಎಂಬ ವಿಷಯದಲ್ಲಿ ಇವರು ಸಂಶೋಧನೆ ಮಾಡಿದ್ದಾರೆ. ಇವರ ಮಹಾ ಪ್ರಬಂಧವು (1917-2020) ಸರಿಸುಮಾರು 100 ವರ್ಷಗಳ ಕನ್ನಡ ಹಾಗೂ ತಮಿಳು ಸಿನಿಮಾದಲ್ಲಿನ ಸಂಗೀತಕ್ಕೆ ಸಂಬಂಧಪಟ್ಟಿದ್ದು , ಚಿತ್ರಗೀತೆಯ ಹುಟ್ಟು, ಮೂಕಿ ಹಾಗೂ ಟಾಕಿ ಚಿತ್ರಗಳಲ್ಲಿನ ಸಂಗೀತ, ಹಿನ್ನಲೆ ಗಾಯನ, ಹಿನ್ನಲೆ ಸಂಗೀತ, ಆಯ್ದ ಗೀತೆಗಳ ವಿವಿಧ ದೃಷ್ಟಿಕೋನದಲ್ಲಿ ವಿಶ್ಲೇಷಣೆ, ಚಿತ್ರ ಸಂಗೀತದಲ್ಲಿನ ಶಾಸ್ತ್ರೀಯತೆ ಹಾಗೂ ಜಟಿಲತೆಗಳು, ರೆಕಾರ್ಡಿಂಗ್ ಮತ್ತು ರೆಕಾರ್ಡಿಂಗ್ ತಂತ್ರಜ್ಞಾನ ಹಾಗೂ ಅನೇಕ ವಿಚಾರಗಳನ್ನೊಳಗೊಂಡಿದೆ.

ಇನ್ನು, ಈ ಸಂಶೋಧನೆಯ ಅಧ್ಯಯನಕ್ಕೆ ಇವರು ಅನೇಕ ಸಂಗೀತ ದಿಗ್ಗಜರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಸಂದರ್ಶನ ಮಾಡಿದ್ದಾರೆ. ಎ.ಆರ್. ರೆಹಮಾನ್, ಎಸ್. ಜಾನಕಿ, ಇಳಯರಾಜ, ಎಂ. ಬಾಲಮುರಳಿಕೃಷ್ಣ, ವಾಣಿ ಜಯರಾಮ್, ರಾಮಕುಮಾರ್ ಗಣೇಶನ್, ಧೀನ, ರಾಜನ್ (ರಾಜನ್-ನಾಗೇಂದ್ರ), ಪಿ. ಸುಶೀಲ, ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರ, ಆರ್. ರತ್ನ, ಬಿ. ಕೆ. ಸುಮಿತ್ರ, ವಿ. ಮನೋಹರ್, ಭಾರದ್ವಾಜ್ ಸೇರಿದಂತೆ ಹಲವರ ಜೊತೆ ವಿಷಯ ಹಂಚಿಕೊಂಡಿದ್ದಾರೆ.

ಸದ್ಯ ಡಾಕ್ಟರೇಟ್‌ ಪಡೆದಿರುವ ಇವರು, ಮುಂದೆಯೂ ಹಿನ್ನಲೆ ಗಾಯನ ಮುಂದುವರಿಸುವುದರ ಜೊತೆಯಲ್ಲಿ ಈ ಮಹಾ ಪ್ರಬಂಧವನ್ನು ಪುಸ್ತಕವಾಗಿ ಪ್ರಕಟಿಸುವ ಉದ್ದೇಶ ಹೊಂದಿದ್ದಾರೆ. ಇಂಗ್ಲಿಷ್‌ನಿಂದ ಇತರ ಭಾಷೆಗಳಿಗೆ ಅನುವಾದಿಸುವ ಬಗ್ಗೆಯೂ ಯೋಚಿಸಿದ್ದಾರೆ. ಇದು ಚಲನಚಿತ್ರ ಸಂಗೀತದಲ್ಲಿ 1080 ಪುಟಗಳ ಸುದೀರ್ಘವಾದ ಪ್ರಬಂಧವಾದ್ದರಿಂದ ಇದನ್ನು “ಗಿನ್ನೆಸ್ ವಿಶ್ವ ದಾಖಲೆಗಳು” ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ಕಳುಹಿಸಲು ಯೋಜಿಸಿದ್ದಾರೆ.

error: Content is protected !!