ನಟ, ನಿರ್ದೇಶಕ ಉಪೇಂದ್ರ ಅವರಿಗೆ ನಾಳೆ ಹುಟ್ಟು ಹಬ್ಬದ ಸಂಭ್ರಮ. ಕೊರೋನಾ ಕಾರಣ ಈ ಬಾರಿಯೂ ಅವರು ಗ್ರಾಂಡ್ ಆಗಿ ಬರ್ತ್ ಡೇ ಸೆಲೆಬ್ರೇಷನ್ ಮಾಡಿಕೊಳ್ತಿಲ್ಲ ಎನ್ನುವುದನ್ನು ಬಿಟ್ಟರೆ, ಈ ಬಾರಿಯ ಅವರು ಹುಟ್ಟು ಹಬ್ಬಕ್ಕೆ ಹಲವು ಕಾರಣಕ್ಕೆ ತುಂಬಾ ಸ್ಪೆಷಲ್. ಅದು ಯಾಕೆ ಅನ್ನೋದಿಕ್ಕೆ ಈ ವರದಿ ನೋಡಿ…
ನಟ ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ಇನ್ನೇನು ಕೇಲವೇ ಗಂಟೆಗಳು ಬಾಕಿ ಇದೆ. ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷವೂ ಕೂಡ ಅವರು ಅಭಿಮಾನಿಗಳ ಜತೆಗೆ ಅದ್ದೂರಿಯಾಗಿ ಬರ್ತ್ ಡೇ ಆಚರಿಸಿಕೊಳ್ಳುತ್ತಿಲ್ಲ ಎನ್ನುವುದನ್ನು ಬಿಟ್ಟರೆ, ಅವರು ಅಭಿನಯಿಸಿದ ಸಿನಿಮಾ ತಂಡಗಳು ತಮ್ಮ ನೆಚ್ಚಿನ ನಟನಿಗೆ ಸ್ಪೆಷಲ್ ಗಿಫ್ಟ್ ನೀಡೋದಿಕ್ಕೆ ರೆಡಿಯಾಗಿವೆ. ಅದಕ್ಕಿಂತ ಸ್ಪೆಷಲ್ ಏನಂದ್ರೆ ಈ ಸಲ ಉಪ್ಪಿ ಅವರು ತಮ್ಮ ಹುಟ್ಟು ಹಬ್ಬ ಕೊಡುಗೆಯಾಗಿ ಅಭಿಮಾನಿಗಳಿಗೆ ಡೈರೆಕ್ಷನ್ ಗಿಫ್ಟ್ ನೀಡುತ್ತಿದ್ದಾರೆ. ಅಂದ್ರೆ ಉಪ್ಪಿ ನಿರ್ದೇಶನದ ಸಿನಿಮಾ ಘೋಷಣೆಯಾಗುವುದು ಕಾತರಿ ಆಗಿದೆ.
ಈಗಾಗಲೇ ನಟ, ನಿರ್ದೇಶಕ ಉಪ್ಪಿ ಅವರು ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಲಿದ್ದಾರೆನ್ನೆಲಾದ ಪೋಸ್ಟರ್ ಲೀಕ್ ಆಗಿದೆ. ಇನ್ನು ವಿಶೇಷ ಅಂದ್ರೆ, `ಪಂಗನಾಮದ’ ಸಿಂಬಲ್ ಇರುವ, ನೀನು ಮತ್ತು ನಾನು ಕಥೆಯನ್ನು ಹೇಳುತ್ತಿರುವ ಫಸ್ಟ್ ಲುಕ್ ಪೋಸ್ಟರ್‌ಗೂ ಈಗಾಗಲೇ ದೊಡ್ಡದಾಗಿ ಸದ್ದು ಮಾಡುತ್ತಿರುವುದರ ನಡುವೆಯೇ, ನಟಿ ರಚಿತಾ ರಾಮ್ ತಮ್ಮ ಹಣೆಗೆ ಹಣೆಗೆ ನಾಮಹಾಕಿಸಿಕೊಂಡಿರುವ ಪೋಟೋಗೂ ಸಿಂಕ್ ಆಗುತ್ತಿರುವುದು ಭಾರೀ ಕುತೂಹಲ ಹುಟ್ಟುಸಿದೆ. ಅಂದ್ರೆ, ಉಪ್ಪಿ ನಿರ್ದೇಶನದ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿ ಆಗಿರಬಹುದಾ ಎನುವ ಕ್ಯೂರಿಯಾಸಿಟಿ ಮನೆ ಮಾಡಿದೆ. ಇದೆಲ್ಲದ್ದಕ್ಕೂ ನಾಳಿನ ತಮ್ಮ ಹುಟ್ಟು ಹಬ್ಬದ ದಿನ ಉಪ್ಪಿ ಉತ್ತರ ನೀಡಬಹುದು ಎಂದೇ ನಿರೀಕ್ಷಿಸಲಾಗಿದೆ. ಅದು ಬಿಟ್ಟರೆ, ಉಪ್ಪಿ ಅವರ ಬರ್ತ್ ಡೇ ಗೆ ಆರ್. ಚಂದ್ರು ನಿರ್ದೇಶನದ ʼಕಬ್ಜʼ ಚಿತ್ರದ ಗಿಫ್ಟ್ ಏನು ಅಂತ.
ಅದಕ್ಕೆ ದೊಡ್ಡ ಕಾರಣವೂ ಇದೆ. ಉಪ್ಪಿ ಸಿನಿಕೆರಿಯರ್ ನಲ್ಲಿಯೇ ʼಕಬ್ಜʼ ಒಂದು ಸ್ಪೆಷಲ್ ಮೂವೀ. ಬಿಗ್ ಬಜೆಟ್ ಸಿನಿಮಾ ಹಾಗೆಯೇ ಇದು ಪ್ಯಾನ್ ಇಂಡಿಯಾ ಸಿನಿಮಾ ಕೂಡ. ನಿರ್ದೇಶಕ ಆರ್. ಚಂದ್ರು ನಿರ್ದೇಶನದ ಜತೆಗೆ ನಿರ್ಮಾಣದಲ್ಲೂ ಇಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಅದು ಇಡಿಯಾ ಲೆವೆನ್ ನಲ್ಲಿಯೇ ಸದ್ದು ಮಾಡಿರುವುದನ್ನು ನೋಡಿದರೆ, ದೊಡ್ಡ ಹವಾ ಸೃಷಿಸುವುದು ಗ್ಯಾರಂಟಿ ಆಗಿದೆ. ಅದೇ ಕಾರಣಕ್ಕೆ ಉಪ್ಪಿ ಬರ್ತ್ ಡೇ ಅಂದಾಕ್ಷಣ ಕಬ್ಜ ಸಿನಿಮಾ ತಂಡದ ಸ್ಪೆಷಲ್ ಏನು ಅಂತ ಅಭಿಮಾನಿಗಳು ನಿರೀಕ್ಷೆ ಮಾಡುವುದು ಸಹಜ. ಅದೇ ಕಾರಣಕ್ಕೆ ನಿರ್ದೇಶಕ ಆರ್. ಚಂದ್ರು ಅವರು ಚಿತ್ರದ ನಾಯಕ ನಟ ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ಕಬ್ಜ ಚಿತ್ರದ ಸ್ಪೆಷಲ್ ಮೋಷಲ್ ಪೋಸ್ಟರ್ ಲಾಂಚ್ ಮಾಡಲು ರೆಡಿಯಾಗಿದ್ದಾರೆ. ಅದರ ಜತೆಗೆ ಕಬ್ಜ ಚಿತ್ರ ಟೀಸರ್ ಲಾಂಚ್ ದಿನವನ್ನು ನಿರ್ದೇಶಕ ಆರ್. ಚಂದ್ರು ಅವರು ನಾಳೆಯೇ ಅನೌನ್ಸ್ ಮಾಡಲಿದ್ದಾರಂತೆ. ಅದು ಈ ಬಾರಿಯ ಉಪೇಂದ್ರ ಅವರ ಬರ್ತ್ ಡೇ ಗೆ ಸ್ಪೆಷಲ್.
ʼ ನಂಗೊತ್ತು ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ಅವರ ಅಭಿಮಾನಿಗಳು ಕಬ್ಜ ಚಿತ್ರದ ಏನ್ ಬರುತ್ತೆ ಅಂತ ಕಾಯುತ್ತಾರೆ ಅನ್ನೋದು ನಂಗೊತ್ತು. ಅದೇ ಕಾರಣಕ್ಕೆ ನಾವೀಗ ಚಿತ್ರದ ನಾಯಕ ನಟ ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ನಮ್ಮ ಚಿತ್ರದ ಸ್ಪೆಷಲ್ ಮೋಷನ್ ಪೋಸ್ಟರ್ ಲಾಂಚ್ ಮಾಡುತ್ತಿದ್ದೇವೆ. ಈಗಾಗಲೇ ಒಂದೆರೆಡು ಪೋಸ್ಟರ್ ಲಾಂಚ್ ಮಾಡಿದ್ದೇವೆ. ಆದ್ರೆ ಇದು ತುಂಬಾ ಸ್ಪೆಷಲ್ . ಯಾಕಂದ್ರೆ ಚಿತ್ರದ ಸೆಟು. ಟಿಂಟು, ಕಲರು ಒಳಗೊಂಡಂತೆ ಚಿತ್ರದ ಒಟ್ಟಾರೆಯ ಒಂದು ಲುಕು ರಿವೀಲ್ ಆಗುವ ಹಾಗೆ ಈ ಪೋಸ್ಟರ್ ಇರಲಿದೆ. ಅದರ ಜತೆಗೆ ಚಿತ್ರದ ಟೀಸರ್ ಲಾಂಚ್ ದಿನಾಂಕವನ್ನು ನಾಳೆಯೇ ನಾವು ಅನೌನ್ಸ್ ಮಾಡುತ್ತೇವೆ. ಇದು ಉಪೇಂದ್ರ ಅವರ ಬರ್ತ್ ಡೇ ಗೆ ಕಬ್ಜ ಚಿತ್ರದ ತಂಡದಿಂದ ನೀಡುವ ಗಿಫ್ಟ್ʼ ಎನ್ನುತ್ತಾರೆ ನಿರ್ದೇಶಕ ಆರ್. ಚಂದ್ರು.
- ಎಂಟರ್ ಟೈನ್ ಮೆಂಟ್ ಬ್ಯೂರೋ ಸಿನಿ ಲಹರಿ