ಕಡ್ಡಿ ಅಲ್ಲಾಡಿಸಿ ಗೆದ್ದರಾ ಚಡ್ಡಿದೋಸ್ತ್ ; ವರ್ಕೌಟ್ ಆಯ್ತಾ ಸೆವೆನ್ ರಾಜ್ ‘7’ ಸೀಕ್ರೆಟ್‌!?

ಚಿತ್ರ: ಚಡ್ಡಿ ದೋಸ್ತ್‌ ಕಡ್ಡಿ ಅಲ್ಲಾಡಸ್ಬುಟ್ಟ

ನಿರ್ಮಾಪಕ: ಸೆವೆನ್‌ ರಾಜ್‌

ನಿರ್ದೇಶಕ : ಆಸ್ಕರ್‌ ಕೃಷ್ಣ

ತಾರಾಗಣ: ಲೋಕೇಂದ್ರ ಸೂರ್ಯ, ಗೌರಿ ನಾಯರ್‌ ಆಸ್ಕರ್ ಕೃಷ್ಣ, ಸೆವೆನ್‌ ರಾಜ್‌, ಹರ್ಷಿತಾ ಕಲ್ಲಿಂಗಲ್‌‌, ಮಾ.ರಾಕಿನ್ ಇತರರು

ಚಿತ್ರ ವಿಮರ್ಶೆ: ವಿಶಾಲಾಕ್ಷಿ

ಲಾಂಗು- ಮಚ್ಚು ಝಳಪಿಸಲ್ಲ, ಕತ್ತಿ-ಗುರಾಣಿ ಹಿಡಿದು ಬಡಿದಾಡಲ್ಲ ಗುರು ಬರೀ ಕಡ್ಡಿ ಅಲ್ಲಾಡಿಸಿ ಚಿತ್ರಪ್ರೇಮಿಗಳಿಂದ ಜೈಕಾರ ಹಾಕಿಸಿಕೊಳ್ತೀವಿ ಅಂತ ಚಡ್ಡಿದೋಸ್ತ್ ಗಳಿಬ್ಬರು ಡಿಸೈಡ್ ಮಾಡಿದ್ದರು. ಅದರಂತೇ, ಅಖಾಡಕ್ಕೆ ಇಳಿದಿದ್ದಾರೆ. ಕರ್ನಾಟಕದಾದ್ಯಂತ ಅಬ್ಬರ ಆರ್ಭಟ ಶುರುವಾಗಿದೆ. ಚಿತ್ರಮಂದಿರಕ್ಕೆ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಸಿನಿಮಾ ಗ್ರ್ಯಾಂಡ್ ಆಗಿಯೇ ಎಂಟ್ರಿಕೊಟ್ಟಿದೆ. ಹೇಗಿದೆ ಸಿನಿಮಾ? ಚಡ್ಡಿದೋಸ್ತ್ ಚಮಕ್ ಮಾಡಿದ್ರಾ? ಬೆಳ್ಳಿತೆರೆ ಹಾಗೂ ಬಾಕ್ಸ್ ಆಫೀಸ್ ಡಬ್ಬದಲ್ಲಿ ಸೆವೆನ್ ರಾಜ್ ‘7’ ಸಸ್ಪೆನ್ಸ್ ಸೀಕ್ರೇಟ್
ವರ್ಕೌಟ್ ಆಯ್ತಾ? ಗಾಂಧಿನಗರದಲ್ಲಿ ಫಸ್ಟ್ ಡೇ ಫಸ್ಟ್ ಶೋ ರೆಸ್ಪಾನ್ಸ್ ಹೇಗಿತ್ತು? ಅದರ ರಿವ್ಯೂ ಪ್ಲಸ್ ರಿಪೋರ್ಟ್ ಇಲ್ಲಿದೆ ನೋಡಿ

ಕೊರೊನಾ ಕಾರಣದಿಂದ ಕಳೆಗುಂದಿದ್ದ ಚಿತ್ರಮಂದಿರಗಳಿಗೆ ಮದುವಣಗಿತ್ತಿಯ ಕಳೆಬಂದಿದೆ. ಥಿಯೇಟರ್ ಮುಂಭಾಗದಲ್ಲಿ ಕಟೌಟ್ ಗಳು ತಲೆ ಎತ್ತಿವೆ, 50 ಪರ್ಸೆಂಟ್ ಅಕ್ಯೂಪೆನ್ಸಿಯಲ್ಲೂ ಹೌಸ್ ಫುಲ್ ಆಗುವಷ್ಟು ಜನ ಚಿತ್ರಮಂದಿರದ ಕಡೆ ಮುಖಮಾಡ್ತಿದ್ದಾರೆ. ಇದರಿಂದ ಬಿಗ್ ಸ್ಕ್ರೀನ್ ವಿಸಿಲ್ ಹೊಡೆಯುತ್ತಿದೆ, ಬಾಕ್ಸ್ ಆಫೀಸ್ ಹಣ ಬಾಚಿಕೊಳ್ಳೋಕೆ ಎದುರುನೋಡ್ತಿದೆ. ಇಂತಹ ಹೊತ್ತಲ್ಲಿ ಚಡ್ಡಿದೋಸ್ತ್ ಗಳು ಕಣಕ್ಕಿಳಿದಿದ್ದಾರೆ.‌

‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಸಿನಿಮಾ ಕರ್ನಾಟಕದಾದ್ಯಂತ ಅದ್ದೂರಿಯಾಗಿ ತೆರೆಕಂಡಿದೆ. ಸುಮಾರು 50 ಕ್ಕೂ ಹೆಚ್ಚು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಗಾಂಧಿನಗರದ ತ್ರಿವೇಣಿ ಮುಖ್ಯ ಚಿತ್ರಮಂದಿರವಾಗಿದ್ದು, ರೆಡ್ ಅಂಡ್ ವೈಟ್ ಕಾಂಬಿನೇಷನ್‌ ನಲ್ಲಿ ಅಲಂಕಾರಗೊಂಡಿತ್ತು. ಚಿತ್ರತಂಡದ ನಿರೀಕ್ಷೆಗೂ‌ ಮೀರಿದ ಜನ ಸೇರಿದ್ದರು. ಸಾಮಾಜಿಕ ಅಂತರ ಕಾಯ್ದುಕೊಂಡೇ ಫಸ್ಟ್ ಡೇ ಫಸ್ಟ್ ಶೋ ಮುಗೀತು. ಸಿನಿಮಾ ನೋಡಿ ಥಿಯೇಟರ್ ನಿಂದ ಹೊರಬಂದ ಫ್ಯಾನ್ಸ್ ಗಡಾರಿ ಗುಂಗಿನಲ್ಲಿದ್ದರು. ಕುಯ್ಯ ಎಲ್ಲಿ ಎನ್ನುತ್ತಾ? ಫ್ಯಾಷನ್ ರಾಜ್ ನ ಹುಡುಕಾಡುತ್ತಿದ್ದರು. ಅಷ್ಟಕ್ಕೂ , ಆ ಫ್ಯಾಷನ್ ರಾಜ್ ಬೇರಾರು ಅಲ್ಲ ನಿರ್ದೇಶಕ ಆಸ್ಕರ್ ಕೃಷ್ಣ. ಆಸ್ಕರ್ ಕೃಷ್ಣ ಅವರ ಸಿನಿಮಾ ಅಭಿರುಚಿ ಹೇಗೆ ಅಂತ ಗೊತ್ತಿದ್ದವರಿಗೆ ಚಡ್ಡಿದೋಸ್ತ್ ಗಳು ಕಡ್ಡಿ ಅಲ್ಲಾಡಿಸೋದು ಹೇಗೆ ಅಂತ ಗೊತ್ತಿತ್ತು.

ಆದರೆ, ನ್ಯೂ ಕಾಮರ್ಸ್ ಗೆ ಆಸ್ಕರ್ ಅಭಿರುಚಿ ಗೊತ್ತಿರಲಿಲ್ಲ. ಕ್ಯಾಚಿ ಟೈಟಲ್ ವೊತ್ತಿದ್ದ, ಕಿಕ್ಕೇರಿಸಿದ್ದ ಚಡ್ಡಿದೋಸ್ತ್ ಮೇಲೆ ಒಂದಿಷ್ಟು ನಿರೀಕ್ಷೆ ಇಟ್ಟುಕೊಂಡೇ ಚಿತ್ರಮಂದಿರ ಪ್ರವೇಶ ಮಾಡಿದರು. ಹಾಗೇ ಎಂಟ್ರಿಕೊಟ್ಟವರಿಗೆ ಫಸ್ಟ್ ಹಾಫ್‌ಕಿಕ್ ಕೊಡಲಿಲ್ಲ. ಚಡ್ಡಿದೋಸ್ತ್ ಅದ್ಯಾವ ಕಡ್ಡಿ ಅಲ್ಲಾಡಿಸುತ್ತಿದ್ದಾರೆನ್ನುವುದಕ್ಕೆ ಕ್ಲ್ಯಾರಿಟಿ ಸಿಗಲಿಲ್ಲ. ಆದರೆ, ಗಡಾರಿ ಪಾತ್ರಧಾರಿ ಲೋಕೇಂದ್ರ ಸೂರ್ಯ ಹುಡ್ಗೀರ್ ಜೊತೆ ಚೇಷ್ಟೆ ಮಾಡಿಕೊಂಡೇ ತುಂಡೈಕ್ಳಿಗೆ ಮಜಾ ಕೊಟ್ಟರು. ಫ್ಯಾಷನ್ ರಾಜ್ ಕ್ಯಾರೆಕ್ಟರ್ ಮಾಡಿದ್ದ ಆಸ್ಕರ್ ಕೃಷ್ಣ ಅವರು ನ್ಯಾಚುರಲ್ ಸ್ಟಾರ್ ಎನಿಸಿಕೊಳ್ಳುವಂತಹ ಆಕ್ಟಿಂಗ್ ಮಾಡ್ತಿದ್ದರು.
ಕೆಲವೇ ಕೆಲವು ಸೀನ್ ಗಳಲ್ಲಿ ಮಿಂಚಿದ ಕುಯ್ಯ ಪಾತ್ರಧಾರಿ ನೋಡುಗರ ಗಮನ ಸೆಳೆಯುತ್ತಾ ಹೋದ. ಪ್ರೇಕ್ಷಕರಿಗೆ ಪಾಪ್ ಕಾರ್ನ್ ಬೇಕಿತ್ತು‌ ಎನಿಸುವಷ್ಟರಲ್ಲಿ ಡಿ.ಸಿ‌ ಮರ್ಡರ್ ಮೂಲಕ ಇಂಟರ್ ವಲ್‌ಬಿಡ್ತು.

ಪಪ್ಸ್- ಜ್ಯೂಸ್ ತಗೊಂಡು ಬಂದು ಮತ್ತದೇ ಸೀಟ್ ಮೇಲೆ ಕುಳಿತವರಿಗೆ ಸೆಕೆಂಡ್ ಆಫ್‌ ಒಂದಿಷ್ಟು ಇಂಟ್ರೆಸ್ಟಿಂಗ್ ಎನಿಸಿಸ್ತು. ಡಿ.ಸಿ‌ ಕೊಲೆ, ಎಂ.ಎಲ್.ಎ ಸುಫಾರಿ, ದೋಸ್ತಿಗಳ ನಡುವೆ ಬರುವ ಹುಡ್ಗಿ, ಹುಡ್ಗೀರ್ ಶೋಕಿಯಿಂದ ಗೆಳೆಯ ಗಡಾರಿನಾ ಆಚೆ ತರಬೇಕು ಅಂತ ಟ್ರೈ ಮಾಡುವ ಫ್ಯಾಷನ್, ಗಡಾರಿಗೆ ದುಡ್ಡು ಕೊಟ್ಟು ಬೆನ್ನ ಹಿಂದೆ ಕತ್ತಿಮಸೆದ ಎಂಎಲ್‌ಎ, ಗಡಾರಿಗೆ ಲಾಠಿ ರುಚಿ, ಫ್ಯಾಷನ್ ಗೆ ದೀಪಾ ಜೊತೆ ಪ್ರೀತಿ, ಮಾತ್ ಎತ್ತಿದರೆ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಎನ್ನುವ ಗಡಾರಿಗೆ ಹುಡ್ಗೀರ್ ಶೋಕಿಯಿಂದ ಚಡ್ಡಿದೋಸ್ತ್ ಗಳ ಬುಡಕ್ಕೆ ಬರುತ್ತೆ. ಆಗ ದೋಸ್ತಿಗಳಿಬ್ಬರು ಏನ್ಮಾಡ್ತಾರೆ? ಹೊಡೆದಾಡ್ತಾರಾ ಅಥವಾ ಹೋರಾಡ್ತಾರಾ? ನಿಮ್ಮ ಈ ಕೂತೂಹಲದ ಪ್ರಶ್ನೆಗೆ ಉತ್ತರ ಸಿಗಬೇಕು ಅಂದರೆ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಬೇಕು.

ಚಡ್ಡಿದೋಸ್ತ್ ಗಳು ಏನೇ ಆಗಲೀ, ಎಂತಹದ್ದೇ ಸಂದರ್ಭ- ಸನ್ನಿವೇಶ ಎದುರಾಗಲಿ ಎದುರಿಸಿ ನಿಲ್ತಾರೆ. ಹಾಗೆಯೇ, ಒಬ್ಬರನ್ನೊಬ್ಬರು ಬಿಟ್ಟುಕೊಡಲ್ಲ. ಅದೇ ರೀತಿ ಚಡ್ಡಿದೋಸ್ತ್ ಗಳು ಕೂಡ. ಅದ್ಹೇಗೆ‌ ಎನ್ನುವದನ್ನ ನೀವು ಥಿಯೇಟರ್ ನಲ್ಲೇ ನೋಡಬೇಕು.‌ ಆಸ್ಕರ್ ಕೃಷ್ಣ ನಿರ್ದೇಶನ ಮಾಡಿ ಫ್ಯಾಷನ್ ರಾಜ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕಥೆ- ಚಿತ್ರಕಥೆ- ಸಂಭಾಷಣೆ ಬರೆದಿರುವ ಲೋಕೇಂದ್ರ ಸೂರ್ಯ ಗಡಾರಿ ಪಾತ್ರದ ಮೂಲಕ‌ ಕಿಕ್ಕೇರಿಸಿದ್ದಾರೆ. ಚಡ್ಡಿದೋಸ್ತ್ ಗಳಿಗೆ ಬಂಡವಾಳ‌ ಹೂಡಿರುವ ನಿರ್ಮಾಪಕ ಸೆವೆನ್ ರಾಜ್ ಖಳನಾಯಕನಾಗಿ ಮಿಂಚಿದ್ದಾರೆ. ಮನುಷ್ಯನಾಗಿ‌ ಹುಟ್ಟಿದ್ಮೇಲೆ ತಿಂದು ಸಾಯಬೇಕು, ಇಲ್ಲ ಕುಡಿದು ಸಾಯಬೇಕು‌ ಅಂತ ಐಟಂ ಹಾಡಿನಲ್ಲಿ ಹರ್ಷಿತಾ ಕಲ್ಲಿಂಗಲ್‌ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಅನಂತ್ ಆರ್ಯನ್ ಒಳ್ಳೆ ಮ್ಯೂಸಿಕ್ ಕೊಟ್ಟಿದ್ದಾರೆ. ಕ್ಯಾಮೆರಾ ಕೈಚಳಕ ತೋರ್ಸೋಕೆ ಒಳ್ಳೆ ಕ್ಯಾಮೆರಾ ಕೊಟ್ಟಿಲ್ಲ ಅನ್ಸುತ್ತೆ. ಕ್ವಾಲಿಟಿ ಕಣ್ಣಿಗೆ ಹೊಡೆಯಲ್ಲ. ಆದರೆ, ಸೆವೆನ್ ಸಂಖ್ಯಾಶಾಸ್ತ್ರದ ಮೇಲೆ ನಂಬಿಕೆ ಇಟ್ಟು 17 ರಂದು ಸೆವೆನ್ ರಾಜ್ ತೆರೆಗೆ ತಂದಿದ್ದಾರೆ. ಬೆಳ್ಳಿತೆರೆ ಹಾಗೂ ಬಾಕ್ಸ್ ಆಫೀಸ್ ನಲ್ಲಿ‌ ಸಂಖ್ಯಾ ಶಾಸ್ತ್ರ ವರ್ಕ್ ಆಗುತ್ತಾ ಕಾದುನೋಡಬೇಕು.

ಸೆವೆನ್ ರಾಜ್ ಅಂತ ಹೆಸರಿಟ್ಟುಕೊಂಡಿದ್ದೇನೆ, ಹೆಸರಿಗೆ ತಕ್ಕಂತೆ
ಕನ್ನಡ ಚಿತ್ರರಂಗಕ್ಕೆ ಏಳು‌ ಸಿನಿಮಾ ಕೊಡಬೇಕು‌ ಅಂತ
ನಿರ್ಧರಿಸಿದ್ದಾರೆ. ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರಾನಾ ಪ್ರೇಕ್ಷಕರು ಕೈಹಿಡಿದರೆ ಮುಂದೆ ಆರು ಸಿನಿಮಾ ಮಾಡ್ತಾರಂತೆ. ಇವತ್ತಿಗೆ ಫಸ್ಟ್ ಡೇ ಫಸ್ಟ್ ಶೋ ನೋಡಿ ಪ್ರೊಡ್ಯೂಸರ್ ಸೆವೆನ್ ರಾಜ್ ಖುಷಿಯಲ್ಲಿದ್ದಾರೆ. ಒಂದು ವಾರ ಕಳೆದ ಮೇಲೂ ಜನರಿಂದ ಚಿತ್ರಕ್ಕೆ ಇದೇ ರೀತಿ ಪ್ರತಿಕ್ರಿಯೆ ಸಿಕ್ಕರೆ ಹಂಡ್ರೆಡ್ ಪರ್ಸೆಂಟ್ ಸೆವೆನ್ ರಾಜ್ ಸಿನಿಮಾ ಇಂಡಸ್ಟ್ರಿಯಲ್ಲಿ ಉಳಿದುಕೊಳ್ತಾರೆ. ಅವರನ್ನ ಕನ್ನಡ ಪ್ರೇಕ್ಷಕರು ಉಳಿಸಿಕೊಳ್ಳಲಿ ಅನ್ನೋದೇ ಸಿನಿಲಹರಿ‌ ಆಶಯ

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!