ನೀನು-ನಾನು ಸಿಂಬಲ್‌ ಸ್ಪೆಷಲ್‌ ; ಉಪ್ಪಿ ಮಾಡ್ತಾರೆ ಕಮಾಲ್! ಬರ್ತ್‌ ಡೇಗೆ ಕೊಡ್ತಾರೆ ಹೊಸ ಸುದ್ದಿ!!

ಉಪೇಂದ್ರ ಈ ಹಿಂದೆಯೇ, “ನೀನು” ಮತ್ತು “ನಾನು” ಅನ್ನೋದರ ಅರ್ಥ ಹುಡುಕುವ ಪ್ರಯತ್ನಕ್ಕೆ ಜನರನ್ನು ಬಿಟ್ಟಿದ್ದರು. ನೀನು, ನಾನು ಕುರಿತು ಅದೆಷ್ಟೋ ಬಾರಿ ಅವರ ಸಿನಿಮಾಗಳಲ್ಲಿ ಡೈಲಾಗ್‌ ಹೊಡೆದಿದ್ದರು. ಈಗ ಆಂಗ್ಲ ಭಾಷೆಯಲ್ಲಿ ಗಮನಿಸಿದರೆ, ಯು ಮತ್ತು ಐ ಅನ್ನುವ ಟೈಟಲ್‌ ಕೊಟ್ಟು ಆ ಅರ್ಥದಲ್ಲೇ ಈ ಸಿನಿಮಾ ಮಾಡುತ್ತಿದ್ದಾರೆ ಅನ್ನುವುದನ್ನು ಅವರ ಫ್ಯಾನ್ಸ್‌ ಮತ್ತು ಸಿನಿ ಪ್ರೇಮಿಗಳು ಪತ್ತೆ ಹಚ್ಚಿದ್ದಾರೆ. ಅಲ್ಲಿಗೆ ಉಪೇಂದ್ರ ಈ ಸಲವೂ ಫಿಲಾಸಫಿ ಜೊತೆ ಹೊಸದೇನನ್ನೋ ಹೇಳಲು ಹೊರಟಿದ್ದಾರೆ

ನಟ ಉಪೇಂದ್ರ ಅಂದಾಕ್ಷಣ ಥಟ್ಟನೆ ನೆನಪಾಗೋದೇ ವಿಶೇಷ ಮತ್ತು ವಿಭಿನ್ನ. ಅವರ ಮೊದಲ ನಿರ್ದೇಶನದ “ಎ” ಸಿನಿಮಾದಲ್ಲೇ ಕುತೂಹಲ ಮೂಡಿಸಿ, ನಿರೀಕ್ಷೆ ಹುಸಿಗೊಳಿಸದೆಯೇ ಗೆದ್ದು ತೋರಿಸಿದವರು. ಅವರ ನಿರ್ದೇಶನದ ಸಿನಿಮಾಗಳನ್ನು ಇಲ್ಲಿಯವರೆಗೆ ಸೂಕ್ಷ್ಮವಾಗಿ ಗಮನಿಸುತ್ತ ಬಂದವರಿಗೆ, ಅಲ್ಲೊಂದು ವಿಭಿನ್ನತೆ ಇರೋದು ಗೊತ್ತಾಗುತ್ತೆ. ಉಪೇಂದ್ರ ತಮ್ಮ ನಿರ್ದೇಶನದ ಸಿನಿಮಾಗಳಲ್ಲಿ ಕುತೂಹಲ ಮೂಡಿಸುವ ಮೂಲಕವೇ ಸುದ್ದಿಯಾಗುವುದುಂಟು. ಸಿಂಬಲ್‌ ತೋರಿಸುವ ಮೂಲಕವೇ ಚಿತ್ರವನ್ನು ಒಂದು ಹಂತಕ್ಕೆ ಕೊಂಡೊಯ್ಯುವ ಕಲೆ ಉಪ್ಪಿಗೆ ಸಿದ್ಧಿಸಿದೆ. ಇದುವರೆಗೆ ಅವರು ನಿರ್ದೇಶಿಸಿರುವ ಸಿನಿಮಾಗಳಲ್ಲಿ ವಾಸ್ತವ ಅಂಶಗಳಿವೆ. ಸಮಾಜಕ್ಕೆ ಕನ್ನಡಿ ಎನ್ನುವಂತಹ ಕಥೆಯೂ ಇದೆ. ಈಗ ಉಪೇಂದ್ರ ಮತ್ತೆ ಸುದ್ದಿಯಲ್ಲಿದ್ದಾರೆ. ಹಾಗಂತ, “ಕಬ್ಜ” ಸಿನಿಮಾ ಸುದ್ದಿ ಅಂದುಕೊಳ್ಳಬೇಡಿ. ಅವರೀಗ ಹೊಸ ಸಿನಿಮಾದ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ.‌

ಹೌದು, ಉಪೇಂದ್ರ ಅವರು ಇತ್ತೀಚೆಗಷ್ಟೇ, ಸದ್ಯಕ್ಕೆ ಎರಡು ಸ್ಕ್ರಿಪ್ಟ್‌ ರೆಡಿ ಇದೆ. ಸಮಯ ಸಿಕ್ಕಾಗಲೇ ನಿರ್ದೇಶನ ಮಾಡ್ತೀನಿ ಅಂತ ಹೇಳಿಕೊಂಡಿದ್ದರು. ಈಗ ಅವರ ಮುಂದಿನ ಸಿನಿಮಾದ ಪೋಸ್ಟರ್‌ವೊಂದು ಸೋಶಿಯಲ್‌ ಮೀಡಿಯಾದಲ್ಲಿ ಜೋರು ಸದ್ದು ಮಾಡುತ್ತಿದೆ. ಹೌದು, ಅವರು ಈ ಬಾರಿಯೂಸಿಂಬಲ್‌ ಇಟ್ಟುಕೊಂಡೇ ಆಟವಾಟಡುವ, ನಿರೀಕ್ಷೆ ಹೆಚ್ಚಿಸುವ ಮೂಲಕ ಮತ್ತೆ ಕುತೂಹಲ ಕೆರಳಿಸಿದ್ದಾರೆ. ಅವರ ಪೋಸ್ಟರ್‌ನಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನ ಉಪೇಂದ್ರ ಅಂತಿದೆ. ಅದರಲ್ಲೂ ಆ ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿದೆ. ಅಲ್ಲಿಗೆ ಅದೊಂದು ಪ್ಯಾನ್‌ ಇಂಡಿಯಾ ಸಿನಿಮಾನೇ ಅಂದುಕೊಳ್ಳಬೇಕು. ಅಷ್ಟಕ್ಕೂ ಉಪೇಂದ್ರ ಅವರು ಈ ಬಾರಿ ಇಟ್ಟ ಸಿಂಬಲ್‌ ಏನು?

ಅವರ ಹೊಸ ಚಿತ್ರದ ಸಿಂಬಲ್‌ ಅದೊಂದು ರೀತಿ ಕುತೂಹಲವಂತೂ ಹೌದು. ನೋಡಿದವರಿಗೆ ಈ ಬಾರಿ ತಿರುಮಲ ವೆಂಕಟಸ್ವಾಮಿಯ ನಾಮ ಸಿಂಬಲ್‌ ಇದ್ಹಾಗಿದೆಯಲ್ಲ ಅನಿಸುವುದು ನಿಜ. ಯಾಕೆಂದರೆ, ಎರಡು ಬಿಳಿ ಗೆರೆಯ ಮಧ್ಯೆ ಕೆಂಪು ಗೆರೆಯೂ ಇಲ್ಲಿದೆ. ವೆಂಕಟರಮಣ ಸ್ವಾಮಿಯ ಸಿಂಬಲ್‌ ಇಟ್ಟುಕೊಂಡು ಸಿನಿಮಾ ಮಾಡ್ತಾ ಇದ್ದಾರೆಯೇ ಎಂಬ ಪ್ರಶ್ನೆ ಎದುರಾದರೂ ಅಚ್ಚರಿಯಿಲ್ಲ. ಆದರೆ, ಅವರ ಪ್ರಕಾರ ಅದರ್ಥ ಬಿಳಿ ಬಣ್ಣದ ಎರಡು ಗೆರೆ ಗಮನಿಸಿದವರಿಗೆ “ಯು” ಅಂತಾನೂ, ಕೆಂಪು ಬಣ್ಣದ ಒಂದು ಗೆರೆ ಗಮನಿಸಿದವರಿಗೆ “ಐ” ಅಂತಾನೂ ಅನಿಸುತ್ತೆ. ಆದರೆ, ಅದನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ, ಅರ್ಥೈಸಿಕೊಂಡವರಿಗೆ ಮಾತ್ರ ಅದು ಗೊತ್ತಾಗಲಿದೆ.


ಉಪೇಂದ್ರ ಈ ಹಿಂದೆಯೇ, “ನೀನು” ಮತ್ತು “ನಾನು” ಅನ್ನೋದರ ಅರ್ಥ ಹುಡುಕುವ ಪ್ರಯತ್ನಕ್ಕೆ ಜನರನ್ನು ಬಿಟ್ಟಿದ್ದರು. ನೀನು, ನಾನು ಕುರಿತು ಅದೆಷ್ಟೋ ಬಾರಿ ಅವರ ಸಿನಿಮಾಗಳಲ್ಲಿ ಡೈಲಾಗ್‌ ಹೊಡೆದಿದ್ದರು. ಈಗ ಆಂಗ್ಲ ಭಾಷೆಯಲ್ಲಿ ಗಮನಿಸಿದರೆ, ಯು ಮತ್ತು ಐ ಅನ್ನುವ ಟೈಟಲ್‌ ಕೊಟ್ಟು ಆ ಅರ್ಥದಲ್ಲೇ ಈ ಸಿನಿಮಾ ಮಾಡುತ್ತಿದ್ದಾರೆ ಅನ್ನುವುದನ್ನು ಅವರ ಫ್ಯಾನ್ಸ್‌ ಮತ್ತು ಸಿನಿ ಪ್ರೇಮಿಗಳು ಪತ್ತೆ ಹಚ್ಚಿದ್ದಾರೆ. ಅಲ್ಲಿಗೆ ಉಪೇಂದ್ರ ಈ ಸಲವೂ ಫಿಲಾಸಫಿ ಜೊತೆ ಹೊಸದೇನನ್ನೋ ಹೇಳಲು ಹೊರಟಿದ್ದಾರೆ. “ಉಪ್ಪಿ 2” ಬಳಿಕ ಅವರು ಈ ಸಿನಿಮಾ ನಿರ್ದೇಶನಕ್ಕೆ ಹೊರಟಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಅಂದರೆ ಸೆಪ್ಟೆಂಬರ್‌ 18 ರಂದು ಅವರ ನಿರ್ದೇಶನದ ಹೊಸ ಚಿತ್ರದ ಬಗ್ಗೆ ಒಂದಷ್ಟು ಹೊಸ ಮಾಹಿತಿ ಸಿಗಲಿದೆ. ಉಪೇಂದ್ರ ಪ್ರೊಡಕ್ಷನ್ಸ್‌ ಅರ್ಪಿಸುತ್ತಿರುವ ಈ ಚಿತ್ರದಲ್ಲಿ ಅವರೇ ಹೀರೋನಾ? ಅಥವಾ ಬೇರೆ ಯಾರಾದರೂ ನಟಿಸ್ತಾರಾ, ಯಾರೆಲ್ಲಾ ಇರ್ತಾರೆ, ಇಲ್ಲಿ ತಾಂತ್ರಿಕ ವರ್ಗದಲ್ಲಿ ಯಾರೆಲ್ಲ ಇರುತ್ತಾರೆ ಎಂಬಿತ್ಯಾದಿ ಪ್ರಶ್ನೆಗೆ ಸಿನಿಮಾ ಬರೋವರೆಗೆ ಕಾಯಬೇಕು. ಅಂದಹಾಗೆ, ಉಪೇಂದ್ರ ಅವರ ಈ ಹೊಸ ಪೋಸ್ಟರ್‌ ಸಾಕಷ್ಟು ಸೌಂಡು ಮಾಡುತ್ತಿದೆ. ಸಿನಿಮಾ ಕೂಡ ಅಷ್ಟೇ ಸದ್ದು ಮಾಡಲಿ ಅನ್ನೋದು “ಸಿನಿಲಹರಿ” ಆಶಯ.

Related Posts

error: Content is protected !!