ಹೊರಬಂತು ಕರುನಾಡ ಯಜಮಾನ ಡಾ.ವಿಷ್ಣುವರ್ಧನ್‌ ಪುಸ್ತಕ ; ಮಕ್ಕಳಿಗಾಗಿಯೇ ಡಾ.ಶರಣು ಹುಲ್ಲೂರು ಬರೆದ ಕೃತಿ ಇದು

ವಿಷ್ಣುವರ್ಧನ್ ಅವರ 71ನೇ ಜನ್ಮದಿನದ ಅಂಗವಾಗಿ ಡಾ.ವಿಷ್ಣುಸೇನಾ ಸಮಿ ಈ ಕಿರುಹೊತ್ತಿಗೆಯನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸುವ ದೃಷ್ಠಿಯಿಂದ ಹೊರತಂದಿದ್ದು, ಸುಮಾರು ಒಂದು ಲಕ್ಷ ಮಕ್ಕಳಿಗೆ ವಿತರಿಸುವ ಯೋಜನೆ ಸಮಿತಿಗಿದೆ. ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಅವರು ಪಠ್ಯದಲ್ಲಿ ಕರುನಾಡ ಯಜಮಾನನ ಪಠ್ಯ ಸೇರಿಸಲು ಮಾಡಿದ ಮನವಿಗೆ ಶಿಕ್ಷಣ ಸಚಿವ ನಾಗೇಶ್‌ ಪಠ್ಯಪುಸ್ತಕ ಸಮಿತಿಗೆ ಶಿಫಾರಸ್ಸುಗೊಳಿಸುವುದಾಗಿ ಹೇಳಿದ್ದಾರೆ…

ಡಾ.ವಿಷ್ಣುವರ್ಧನ್‌ ಅವರ ಕುರಿತತಂತೆ ಈಗಾಗಲೇ ಸಾಕಷ್ಟು ಪುಸ್ತಕಗಳು ಕಿರು ಹೊತ್ತಿಗೆ ಹೊರಬಂದಿವೆ. ಆ ಸಾಲಿಗೆ ಈಗ ಡಾ.ಶರಣು ಹುಲ್ಲೂರು ಅವರು ಬರೆದಂತಹ ಕಿರುಹೊತ್ತಿಗೆಯೂ ಬಿಡುಗಡೆಯಾಗಿದೆ. ಹೌದು, “ಕರುನಾಡ ಯಜಮಾನ ಡಾ.ವಿಷ್ಣುವರ್ಧನ್‌” ಎಂಬ ಕಿರುಹೊತ್ತಿಗೆ ಹೊರಬಂದಿದ್ದು, ಆ ಪುಸ್ತಕವನ್ನು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ತಮ್ಮ ಕಚೇರಿಯಲ್ಲಿ ಬುಧವಾರ ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ.


ಈ ಪುಸ್ತಕದ ವಿಶೇಷವೆಂದರೆ ಡಾ.ವಿಷ್ಣು ಸೇನಾ ಸಮಿತಿ ಪ್ರೀತಿಯಿಂದಲೇ ಈ ಪುಸ್ತಕವನ್ನು ಹೊರತಂದಿದೆ. ಡಾ. ವಿಷ್ಣುವರ್ಧನ್ ಅವರ 71ನೇ ಜನ್ಮದಿನದ ಅಂಗವಾಗಿ ಡಾ.ವಿಷ್ಣುಸೇನಾ ಸಮಿತಿಯು “ಕರುನಾಡ ಯಜಮಾನ ಡಾ.ವಿಷ್ಣುವರ್ಧನ್” ಎಂಬ ಕಿರುಹೊತ್ತಿಗೆಯನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸುವ ದೃಷ್ಠಿಯಿಂದ ಹೊರತಂದಿದೆ. ಈ ಕೃತಿಯನ್ನು ಸುಮಾರು ಒಂದು ಲಕ್ಷ ಮಕ್ಕಳಿಗೆ ವಿತರಿಸುವ ಯೋಜನೆ ಸಮಿತಿಗಿದೆ. ಇದೇ ವೇಳೆ ಸಚಿವ ನಾಗೇಶ್‌ ಅವರಿಗೆ ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌ ಅವರು, ಪಠ್ಯದಲ್ಲಿ ಕರುನಾಡ ಯಜಮಾನನ ಪಠ್ಯ ಸೇರಿಸಲು ಮನವಿ ಮಾಡಿದರು. ಅವರ ಮನವಿಗೆ ಸ್ಪಂದಿಸಿದ ಸಚಿವರು ಪಠ್ಯಪುಸ್ತಕ ಸಮಿತಿಗೆ ಮನವಿಯನ್ನು ಶಿಫಾರಸ್ಸುಗೊಳಿಸುವುದಾಗಿ ತಿಳಿಸಿದರು.


ಸಿನಿಮಾ, ಜನಪರ ಕಾರ್ಯಗಳ ಮೂಲಕ ಡಾ.ವಿಷ್ಣುವರ್ಧನ್ ಅವರು ಯಾವತ್ತಿಗೂ ನಮ್ಮೊಂದಿಗೆ ಇರುತ್ತಾರೆ. ಅವರ ಆದರ್ಶ ಬದುಕು, ನಾಡು, ನುಡಿಯ ಬಗೆಗಿನ ಅಭಿಮಾನ ಮತ್ತು ಜೀವಪರ ಕಾಳಜಿ ನಮಗೆಲ್ಲ ಮಾದರಿಯಾಗಿದೆ. ಅವರು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದರೂ, ಕೊನೆಗೂ ಗೆದ್ದದ್ದು ಅವರ ಶ್ರಮ. ಹಾಗಾಗಿ ಮಕ್ಕಳಿಗೆ ಡಾ.ವಿಷ್ಣು ಬದುಕಿನ ಕುರಿತು ಪರಿಚಯ ಆಗಬೇಕಿದೆ. ಆ ಕಾರಣದಿಂದ ಡಾ.ವಿಷ್ಣು ಅವರ ಬದುಕು ಸಾಧನೆಗಳನ್ನು ಪಠ್ಯದಲ್ಲಿ ಸೇರಿಸಲು ಡಾ.ವಿಷ್ಣು ಸೇನಾ ಸಮಿತಿ ಮನವಿ ಮಾಡಿಕೊಂಡಿದೆ. ಈ ಸಂದರ್ಭದಲ್ಲಿ ಲೇಖಕರಾದ ಡಾ. ಶರಣು ಹುಲ್ಲೂರು, ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ, ಗುರುನಾಥ ರಾಜಗೀರ ಸೇರಿದಂತೆ ಇತರರು ಇದ್ದರು.

Related Posts

error: Content is protected !!