Categories
ಸಿನಿ ಸುದ್ದಿ

ಶೂಟಿಂಗ್‌ ಕ್ಲೈಮ್ಯಾಕ್ಸ್‌ ನಲ್ಲಿ ರಾಕ್‌ ಸ್ಟಾರ್‌ ರೆಮೋ, ಅದ್ದೂರಿ ವೆಚ್ಚದ ಸೆಟ್‌ನಲ್ಲಿ ಹೀರೋ ಇಂಟ್ರೊಡುಕ್ಷನ್‌ ಸಾಂಗ್‌ ಶೂಟ್‌

ಇಮ್ರಾನ್‌ ಸರ್ದಾರಿಯಾ ನಿರ್ದೇಶನದಲ್ಲಿ ಹಾಡಿ ಕುಣಿಯಲಿದೆ ಇಶಾನ್‌- ಆಶಿಕಾ ಜೋಡಿ

ಪವನ್‌ ಒಡೆಯರ್‌ ನಿರ್ದೇಶನ ಹಾಗೂ ನಿರ್ಮಾಪಕ ಸಿ.ಆರ್.‌ ಮನೋಹರ್‌ ನಿರ್ಮಾಣದ ಅದ್ದೂರಿ ವೆಚ್ಚದ ಚಿತ್ರ ” ರೆಮೋʼ ಚಿತ್ರೀಕರಣ ಬಹುತೇಕ ಕ್ಲೈಮಾಕ್ಸ್‌ ತಲುಪಿದೆ. ಸದ್ಯಕ್ಕೆ ಹಾಡುಗಳ ಚಿತ್ರೀಕರಣ ಬಾಕಿಯಿದೆ. ಅದರಲ್ಲೂ ಚಿತ್ರದಲ್ಲಿ ಹೀರೋ ಇಂಟ್ರೋಡಕ್ಷನ್‌ ಸಾಂಗ್‌ ಅನ್ನು ಅದ್ದೂರಿ ಸೆಟ್‌ ನಲ್ಲಿಯೇ ಶೂಟ್‌ ಮಾಡಲು ಚಿತ್ರ ತಂಡ ಪ್ಲಾನ್‌ ಹಾಕಿಕೊಂಡಿದೆ.

ಚಿತ್ರ ತಂಡ ರಿವೀಲ್‌ ಮಾಡಿರುವ ತಾಜಾ ನ್ಯೂಸ್‌ ಪ್ರಕಾರ, ಚಿತ್ರದಲ್ಲಿನ ಹೀರೋ ಇಂಟ್ರೂಡುಕ್ಷನ್‌ ಸಾಂಗ್‌ ನ ಚಿತ್ರೀಕರಣಕ್ಕೆ ಬೆಂಗಳೂರಿನ ಕಂಗೇರಿ ಉಲ್ಲಾಳ ಬಳಿಯಿರುವ ಸನ್‌ ಸೆಟ್‌ ಪಾಯಿಂಟ್‌ನ ಬೃಹತ್ ಗ್ರೌಂಡ್‌ ನಲ್ಲಿ ಅಂದಾಜು ೧.೫ ಕೋಟಿ ರೂ. ವೆಚ್ಚದಲ್ಲಿ ಅದ್ದೂರಿ ಸೆಟ್‌ ಹಾಕಲು ಚಿತ್ರ ತಂಡ ಮುಂದಾಗಿದೆ. ಸೆಟ್‌ ನಿರ್ಮಾಣಕ್ಕೂ ಈಗ ಚಾಲನೆ ಸಿಕ್ಕಿದೆ.‌ ಆರ್ಟ್‌ ಡೈರೆಕ್ಟರ್‌ ಗುಣಶೇಖರನ್‌ ಸೆಟ್‌ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದು, ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ತುಂಬಾ ಹೊಸತೆನಿಸುವ ಹಾಗೆ ಹೊಸ ತಾಂತ್ರಿಕತೆ ಮೂಲಕ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ. ಅದ್ದೂರಿಯ ಈ ಸೆಟ್‌ ನಲ್ಲಿ ೨೦ಕ್ಕೂ ಹೆಚ್ಚು ಕ್ಯಾಮೆರಾ ಹಾಗೂ ಅಷ್ಟೇ ಸಂಖ್ಯೆಯ ಛಾಯಾಗ್ರಾಹಕರ ಮೂಲಕ ಇಂಟ್ರೋಡಕ್ಷನ್‌ ಸಾಂಗ್‌ ಶೂಟಿಂಗ್‌ ನಡೆಯುತ್ತಿದೆ ಎನ್ನುತ್ತಿದೆ ಚಿತ್ರತಂಡ.

ಈಗಾಗಲೇ ರೆಮೋ ಚಿತ್ರಕ್ಕೆ ವಿಶೇಷವಾದ ಸಂಗೀತ ನೀಡಿರುವ ಮೆಲೋಡಿ ಮಾಂತ್ರಿಕ ಅರ್ಜುನ್‌ ಜನ್ಯಾ, ಚಿತ್ರದ ಇಂಟ್ರೋಡಕ್ಷನ್‌ ಸಾಂಗ್‌ ಮೂಲಕವೂ ದೊಡ್ಡ ಸಂಚಲನ ಮೂಡಿಸುವುದು ಖಾತರಿ. ಕರ್ನಾಟಕ ಮಾತ್ರವಲ್ಲ ಭಾರತೀಯ ಚಿತ್ರರಂಗವೇ ಕಿವಿ ಆಲಿಸಿ ಕೇಳುವಂತಹ ಸಂಗೀತ ಈ ಚಿತ್ರದಲ್ಲಿದೆ. ವೇದಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮಾತಿನ ಭಾಗದ ಚಿತ್ರೀಕರಣದ ಹಾಗೆಯೇ ಹಾಡುಗಳ ಚಿತ್ರೀಕರಣಕ್ಕೂ ಹೆಚ್ಚಿನ ಅದ್ಯತೆ ತೆಗೆದುಕೊಂಡೇ ಕ್ಯಾಮೆರಾ ವರ್ಕ್‌ ಮಾಡಿದ್ದಾರೆ ವೈದಿ.

ಹಾಡುಗಳು ಕೇಳುವುದಕ್ಕೆ ಇಂಪೆನಿಸುವ ಹಾಗೆ ಮೂಡಿ ಬಂದಿರುವುದು ಒಂದೆಡೆಯಾದರೆ, ಅವುಗಳಿಗೆ ಅಷ್ಟೇ ಸೊಗಸಾಗಿ ನೃತ್ಯ ಸಂಯೋಜನೆ ಮಾಡಿದ್ದಾರೆ ಕೊರಿಯೋಗ್ರಾಫರ್‌ ಇಮ್ರಾನ್‌ ಸರ್ದಾರಿಯಾ. ಹಾಗೆಯೇ ಇಂಟ್ರೋಡಕ್ಷನ್‌ ಸಾಂಗ್‌ ಕೂಡ ಅಷ್ಟೇ ವಿಶೇಷವಾಗಿ ಮೂಡಿ ಬರುತ್ತಿದೆ. ನಾಯಕ ನಟ ಇಶಾನ್‌ ಹಾಗೂ ನಾಯಕಿ ಆಶಿಕಾ ಚಿತ್ರದ ಹಾಡುಗಳಲ್ಲಿ ಭರ್ಜರಿಯಾಗಿಯೇ ಕುಣಿದಿದ್ದಾರೆರ. ಅದರ ಅಷ್ಟು ಕ್ರೆಡಿಟ್‌ ಇಮ್ರಾನ್‌ ಅವರಿಗೆ ಸಲ್ಲುತ್ತದೆ .

ಅಷ್ಟೇ ಆಲ್ಲ, ಕಲೆ, ಸಂಕಲನ, ಸಂಗೀತದ ಜತೆಗೆ ಅದ್ದೂರಿ ವೆಚ್ಚದಲ್ಲಿಯೇ ನಿರ್ಮಾಣವಾಗಿರುವ ರೆಮೋ ಚಿತ್ರ ಕಾಲಕ್ಕೆ ತಕ್ಕಂತೆ ಟ್ರೆಂಡ್‌ಶೆಟ್‌ ಮಾಡುವಂತೆ ಸಿನಿ ಪ್ರಿಯರಿಗೆ ರಸದೌತಣ ನೀಡುವುದು ಗ್ಯಾರಂಟಿ ಎನ್ನುವ ವಿಶ್ವಾಸ ಚಿತ್ರದ ತಂಡದ್ದು. ನಿರ್ದೇಶನ ಪವನ್‌ ಒಡೆಯರ್‌ ಅವರ ಮಾತಿನಲ್ಲಿ ಹೇಳೋದಾದ್ರೆ, ಹಲವು ವಿಭಿನ್ನತೆ, ವಿಶಿಷ್ಟತೆ ಹೊಂದಿದ ಚಿತ್ರ ಇದಾಗಿದ್ದು, ಗೂಗ್ಲಿ ತರಹದ ಮತ್ತೊಂದು ಲವ್‌ ಸ್ಟೋರಿ ಗಿಫ್ಟ್‌ ಸಿನಿಮಾ ಪ್ರೇಕ್ಷಕರಿಗೆ ಖಚಿತ.

Categories
ಸಿನಿ ಸುದ್ದಿ

” ನಿರ್ಮಾಪಕನಾಗುವಾಗ ನನ್ನ ಬಳಿ ಒಂದು ರೂಪಾಯಿ ಕೂಡ ಇರಲಿಲ್ಲ”

ಕಾರ್ಟೂನಿಸ್ಟ್‌ ಮೇಲೆಯೇ ಒಂದು ಸಿನಿಮಾ, ಫೆ. 12 ಕ್ಕೆ ತೆರೆ ಮೇಲೆ ಕಲಾವಿದ

ಸಿನಿಮಾ ಮಟ್ಟಿಗೆ ಕಲಾವಿದ ಅಂದ್ರೆ ನೆನಪಾಗುವುದೇ ಕ್ರೇಜಿಸ್ಟಾರ್ ರವಿಚಂದ್ರನ್.‌ ಯಾಕಂದ್ರೆ, ಅವರು ಅದೇ ಹೆಸರಲ್ಲೊಂದು ಸಿನಿಮಾ ಮಾಡಿದ್ದರು. ಆ ಹೊತ್ತಿಗೆ ಆ ಸಿನಿಮಾ ಸಾಕಷ್ಟು ಸದ್ದು ಮಾಡಿದ್ದು ನಿಮಗೆ ಗೊತ್ತು. ಈಗ ಅದೇ ಹೆಸರಲ್ಲೊಂದು ಸಿನಿಮಾ ಬರುತ್ತಿದೆ. ಇದು ಹೊಸಬರ ಸಿನಿಮಾ.

ರವಿಚಂದ್ರನ್‌ ಅವರ ಸಿನಿಮಾಕ್ಕೂ ಇದಕ್ಕೂ ಯಾವುದೇ ಕನೆಕ್ಷನ್‌ ಇಲ್ಲ. ಇದು ಒಬ್ಬ ವ್ಯಂಗ್ಯ ಚಿತ್ರಕಾರನ ಕುರಿತ ಸಿನಿಮಾ. ಪದ್ಮರಾಜ್‌ ಫಿಲಂಸ್‌ ಮೂಲಕ ಪ್ರದೀಪ್‌ ಕುಮಾರ್‌ ನಿರ್ಮಾಣಮಾಡಿದ ಚಿತ್ರ. ಶಿವಾನಂದ್‌ ಇದರ ನಿರ್ದೇಶಕ. ಫೆ. 12  ಕ್ಕೆ ತೆರೆಗೆ ಬರುತ್ತಿರುವ ಈ ಚಿತ್ರ ಇದೀಗ ಟ್ರೇಲರ್‌ ಲಾಂಚ್‌ ಮೂಲಕ ಸದ್ದು ಮಾಡಿದೆ. ಟ್ರೇಲರ್‌ ಲಾಂಚ್‌ ಮೂಲಕ ಸೋಮವಾರ ಚಿತ್ರ ತಂಡ ಮಾಧ್ಯಮದ ಮುಂದೆ ಬಂದಿತ್ತು.

” ನಾನು ಈ ಮೈಕ್ ಹಿಡಿಯಬೇಕೆಂದು ತುಂಬಾ ದಿನಗಳ ಹಿಂದೆ‌ ಕನಸು ಕಂಡವನು. ಆ ಕನಸು ಈಗ ನನಸಾಗಿದೆ.‌ ನನ್ನ ಕನಸಿಗೆ ಜೀವ ತುಂಬಿದ್ದು ನಿರ್ಮಾಪಕ ಕಮ್ ನಾಯಕ‌ ‌ನಟ ಪ್ರದೀಪ್ ಕುಮಾರ್. ಅವರಿಗೆ ನಾನು ಚಿರಕಾಲ ಅಭಾರಿʼ ಎನ್ನುವ ಮೂಲಕ ಸಿನಿಮಾದ ಹಿಂದಿನ ಕನಸು ತೆರೆದಿಟ್ಟರು ನಿರ್ದೇಶಕ ಶಿವಾನಂದ್.‌ನಿರ್ದೇಶಕ ಶಿವಾನಂದ್‌ ಅವರ ಕತೆ ಇದಾದರೆ, ಇನ್ನು ನಿರ್ಮಾಪಕ ಹಾಗೂ ನಾಯಕ ನಟ ಪ್ರದೀಪ್‌ ಕುಮಾರ್‌ ಅವರದ್ದು ಮತ್ತೊಂದು ಕಥೆ. ಯಾಕಂದ್ರೆ ಇವರು ವೃತ್ತಿಯಲ್ಲಿ ಇಂಜಿನಿಯರ್.‌ ಅಲ್ಲಿಂದ ” ರಂಗ್ ದೇ ಬಸಂತಿʼ ಎನ್ನುವ ಹೆಸರಲ್ಲಿ ಹೋಟೆಲ್ ತೆಗೆದು ಹೋಟೆಲ್ ಉದ್ಯಮಕ್ಕೂ ಬಂದವರು. ಅಲ್ಲಿಂದೀಗ ಸಿನಿಮಾ ರಂಗಕ್ಕೂ ಕಾಲಿಟ್ಟಿದ್ದಾರೆ.


” ನಾನಿನ್ನು ಇಂಜಿಯರಿಂಗ್‌ ವೃತ್ತಿ ಬಿಟ್ಟಿಲ್ಲ. ಸಿನಿಮಾ ನನಗೆ ಹವ್ಯಾಸ. ಬಾಲ್ಯದಿಂದಲೂ ಅಂತಹದೊಂದು ಆಸೆ ಇತ್ತು. ಅದಕ್ಕಾಗಿ ಇಲ್ಲಿಗೆ ಬಂದೆ. ವಿಚಿತ್ರ ಅಂದ್ರೆ ನಿರ್ಮಾಪಕನಾಗುವ ನನ್ನ ಬಳಿ ನೂರು ರೂಪಾಯಿ ಕೂಡ ಇರಲಿಲ್ಲ. ಮೊದಲು ಹೊಟೇಲ್‌ ಶುರು ಮಾಡಿದೆ. ಅಲ್ಲಿಂದ ಬಂದ ನಂತರ ಈ ಚಿತ್ರ ನಿರ್ಮಾಣ ಮಾಡಿದೆ ʼ ಎನ್ನುವ ಮೂಲಕ ತಾವು ಚಿತ್ರ ನಿರ್ಮಾಣಕ್ಕೆ ಬಂದ ಬಗೆಯನ್ನು ವಿವರಿಸುತ್ತಾರೆ ಪ್ರದೀಪ್‌ ಕುಮಾರ್.‌

ಈ ಚಿತ್ರಕ್ಕೆ ನಾಯಕಿ ಸಂಭ್ರಮ. ಈ ಹಿಂದೆ ರಣಕಣಕ ಚಿತ್ರಕ್ಕೆ ನಾಯಕಿ ಆಗಿದ್ದರು. ಉಳಿದಂತೆ ಮಂಜುನಾಥ್ ಹೆಗ್ಡೆ, ಅರುಣಾ ಬಾಲರಾಜ್, ಮೂ ಗು ಸುರೇಶ್, ವರ್ಷ ಮಲ್ಲೇಶ್ ಮತ್ತಿತರರು ಚಿತ್ರದಲ್ಲಿದ್ದಾರೆ.ವಿವೇಕ್ ಚಕ್ರವರ್ತಿ ಹಾಗೂ ಪೂರ್ಣ ಚಂದ್ರ ತೇಜಸ್ವಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.ಮೂರು ಹಾಡುಗಳಿಗೆ ಸಂಗೀತ ನೀಡಿರುವ ವಿವೇಕ್ ಚಕ್ರವರ್ತಿ ಅವರು ಸಹ ಸಂಗೀತದ ಬಗ್ಗೆ ತಮ್ಮ‌ ಮಾತುಗಳನಾಡಿದರು.‌ ಯುವ ಗಾಯಕ ರುಮಿತ್ ಅವರು ಹಾಡಿರುವ ಹಾಡಿನ ಲಿರಿಕಲ್ ವಿಡಿಯೋ ಪ್ರದರ್ಶಿಸಲಾಯಿತು.

Categories
ಸಿನಿ ಸುದ್ದಿ

ನಾಗೇಂದ್ರ ಶಾ, ಬಿಂಬಶ್ರೀ ಗೆ ಪ್ರಗುಣಿ ಅತ್ಯುತ್ತಮ ನಟ-ನಟಿ ಪ್ರಶಸ್ತಿ

ಸಾಹಿತ್ಯದಲ್ಲಿ ಕಾವ್ಯ ಇದ್ದಂತೆ ಕಿರುಚಿತ್ರ, ಪ್ರಗುಣಿ ಕಿರುಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರ್ದೇಶಕ ಪಿ. ಶೇಷಾದ್ರಿ ಅಭಿಪ್ರಾಯ

ಪ್ರಗುಣಿ ವೆಂಚರ್ ಕಿರುಚಿತ್ರ ‌ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ವರ್ಣರಂಜಿತವಾಗಿ ನಡೆಯಿತು.‌ ನಗರದ ಚೌಡಯ್ಯ ಮೆಮೋರಿಯಲ್ ಹಾಲ್‌ ನಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭ ಪ್ರಶಸ್ತಿ ವಿತರಣೆ ಮೂಲಕ ವಿಭಿನ್ನವಾಗಿ ಕಂಡಿತು.‌ಪ್ರಗುಣಿ ಒಟಿಟಿ ವೆಂಚರ್ ಆಯೋಜಿಸಿದ್ದ ಕಿರುಚಿತ್ರ ಸ್ಪರ್ಧೆಗೆ ಸಾಕಷ್ಟು ಕಿರುಚಿತ್ರ ಗಳು ಬಂದಿದ್ದವು.‌ಅದರಲ್ಲಿ ಪ್ರೇಕ್ಷಕರ ಆಯ್ಕೆಯಾಗಿ ಆಕಾಂಕ್ಷ. ಕಿರುಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು‌.

ಅತ್ಯುತ್ತಮ ನಟಿಯಾಗಿ ಬಿಂಬಶ್ರೀ ಅವರು ಪ್ರಶಸ್ತಿ ಸ್ವೀಕರಿಸಿದರೆ, ನಟ ನಾಗೇಂದ್ರ ಶಾ ಪ್ರಗುಣಿ ಅತ್ಯುತ್ತಮ ನಟ ಪ್ರಶಸ್ತಿ ಗೆ ಪಾತ್ರರಾದರು. ‌ನಿರ್ದೇಶಕ ಟಿ. ಎನ್. ಸೀತಾರಾಂ ಸಮಾರಂಭ ಉದ್ಘಾಟಿಸಿದರೆ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಮತ್ತು ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ಅವರು ಪ್ರಶಸ್ತಿ ವಿಜೇತ ರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.

ಪ್ರಶಸ್ತಿ ವಿತರಣೆಗೂ ಮುನ್ನ ಸಮಾರಂಭವನ್ಜು ಉದ್ದೇಶಿಸಿ ಮಾತನಾಡಿದ ಕನ್ನಡದ ಹೆಸರಾಂತ ನಿರ್ದೇಶಕ ಪಿ. ಶೇಷಾದ್ರಿ, ಸಿನಿಮಾ ಕೂಡ ಸಾಹಿತ್ಯವೇ. ಸಾಹಿತ್ಯದಲ್ಲಿ ಹೇಗೆ ಕಾದಂಬರಿ, ಕಾವ್ಯ, ಗದ್ಯ ಅಂತೆಲ್ಲ ವಿಭಾಗಗಳಿವೆಯೋ ಹಾಗೆಯೇ ಸಿನಿಮಾ ಕೂಡ. ನನ್ನ ಪ್ರಕಾರ ಕಿರುಚಿತ್ರ ಅಂದರೆ ಕಾವ್ಯ ಇದ್ದ ಹಾಗೆ. ಕಡಿಮೆ ಅವದಿಯ ಕಾವ್ಯದಲ್ಲಿ ಹೇಗೆ ವಿಶಾಲ ಅರ್ಥವನ್ನು ಕಟ್ಟಿಕೊಡಲು ಸಾಧ್ಯವೋ ಹಾಗೆಯೇ ಕಿರುಚಿತ್ರ ವೊಂದು ಕಡಿಮೆ ಅವದಿಯಲ್ಲಿ ತನ್ನ ಕತೆಯನ್ನು ಜನರಿಗೆ ಮನಸಿಗೆ ನಾಟುವಂತೆ ಕಟ್ಟಿಕೊಡಬಲ್ಲದು ಎಂದು ಅಭಿಪ್ರಾಯ ಪಟ್ಟರು.

ಸಮಾರಂಭ ಉದ್ಘಾಟಿಸಿದ ಹಿರಿಯ ನಿರ್ದೇಶಕ ಟಿ. ಎನ್. ಸೀತಾರಾಂ ಕೂಡ ಇದೇ ಅಭಿಪ್ರಾಯ ಪಟ್ಟರು. ಸಾಹಿತ್ಯದೊಳಗಿನ ಕಾವ್ಯದ ರೂಪವೇ ಕಿರುಚಿತ್ರ ಎಂದರು. ಕಿರುಚಿತ್ರ ಸ್ಪರ್ಧೆಯ ತೀರ್ಪು ಗಾರರೂ ಆಗಿದ್ದ ಸಾಹಿತಿ ಹಾಗೂ ಪತ್ರಕರ್ತ ಜೋಗಿ ಮಾತನಾಡಿ, ಕಿರುಚಿತ್ರ ಅಂದ್ರೆ, ಕಡಿಮೆ ಸಮಯದಲ್ಲಿ ಹೆಚ್ಚು ವಿಷಯ ಹೇಳುವ ಪರಿ.‌ ಒಂದು ದೃಶ್ಯದಿಂದ ಇನ್ನೊಂದು ದೃಶ್ಯಕ್ಕೆ ಅದರ ವೇಗ ಕೂಡ ಅಷ್ಟೇ ವೇಗವಾಗಿರಬೇಕು. ಆದರೆ ಇಲ್ಲಿ ನಾನಿಗೆ ಗೊತ್ತಾಗಿದ್ದು ಬಹಳಷ್ಟು ಚಿತ್ರಗಳಲ್ಲಿ ಕತೆಯೇ ಇರಲಿಲ್ಲ.ಕತೆ ಕೂಡಮುಖ್ಯ ಎನ್ನುವುದು ಕಿರುಚಿತ್ರ ನಿರ್ದೇಶಿಸಿರುವವರು ಅರ್ಥಮಾಡಿಕೊಳ್ಳಬೇಕಿದೆ. ಯಾಕಂದ್ರೆ, ಕಿರುಚಿತ್ರ ನಿರ್ದೇಶನ ದೊಡ್ಡ ಚಿತ್ರಗಳ ನಿರ್ದೆಶನದ ಮೊದಲ ಮೆಟ್ಟಿಲು ಎಂದು ಅಲ್ಲಿ ನೆರೆದಿದ್ದ‌ ಕಿರುಚಿತ್ರ ನಿರ್ದೇಶಕರು, ನಿರ್ಮಾಪಕರಿಗೆ ಕಿವಿ‌ಮಾತು ಹೇಳಿದರು.
ಕನ್ನಡ ಪ್ರಭ ಸಂಪಾದಕ ರವಿ ಹೆಗಡೆ ಮಾತನಾಡಿ, ಕಲೆ‌ಮತ್ತು ವಾಣಿಜ್ಯದ‌ ನಡುವೆ ಅಂತರ ಮುಖ್ಯ. ಆದರೆ ಇತ್ತೀಚೆಗೆ ಅವರೆಡು ಬೆಸೆದುಕೊಂಡ ಪರಿಣಾಮ ಕಲಾಕ್ಷೇತ್ರದಲ್ಲಿನ ಸಣ್ಣಪುಟ್ಟವರನ್ನು ಪ್ರಶಸ್ತಿಗೆ ಗುರುತಿಸಲಾಗದಂತೆ ಆಗಿದೆ ಎಂದರು. ಸಂಗೀತ ನಿರ್ದೆಶಕ ವಿ.ಮನೋಹರ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಹಾಡು, ನೃತ್ಯಗಳ ಮೂಲಕ ಪ್ರಗುಣಿ ಪ್ರಶಸ್ತಿ ಪ್ರದಾನಸಮಾರಂಭ ವರ್ಣರಂಜಿತವಾಗಿ ನಡೆಯಿತು.

Categories
ಸಿನಿ ಸುದ್ದಿ

ಅಥಿರಾ ಈಕೆ ಮಲಯಾಳಿ ಹುಡುಗಿ

ಆದ್ರೂ ಅಪ್ಪಟ ಕನ್ನಡತಿ ಕಣ್ರೀ ಈ ಬೆಡಗಿ

 

ದಿನ ಕಳೆದಂತೆ ಕನ್ನಡಕ್ಕೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ ಅಥಿರಾ ಎಂಬ ನವನಟಿ ಕೂಡ ಸೇರಿದ್ದಾರೆ. ಹೌದು, ಅಥಿರಾ ಈಗಷ್ಟೇ ಕನ್ನಡ ಚಿತ್ರರಂಗದ ಬಾಗಿಲ ಬಳಿ ಬಂದು ನಿಂತಿದ್ದಾರೆ. ಇದಕ್ಕೂ ಮುನ್ನ, ಮಲಯಾಳಂ ಚಿತ್ರರಂಗದಲ್ಲಿ ಕಾಲಿಟ್ಟು, ಸೈ ಎನಿಸಿಕೊಂಡಿದ್ದಾರೆ. ಅಂದಹಾಗೆ, ಅಥಿರಾ “ಹಾಫ್‌” ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಸ್ಪರ್ಶಿಸಿದ್ದಾರೆ. ಹೌದು, ಅಥಿರಾ ಈಗಷ್ಟೇ ಕನ್ನಡಕ್ಕೆ ಎಂಟ್ರಿಕೊಟ್ಟಿದ್ದಾರೆ. ಮೊದಲ ಬಾರಿಗೆ ಕನ್ನಡ ಸಿನಿಮಾರಂಗಕ್ಕೆ ಬಂದಿರುವ ಅಥಿರಾ ತಮ್ಮ ಸಿನಿಜರ್ನಿ ಕುರಿತು “ಸಿನಿಲಹರಿ” ಜೊತೆ ಹಂಚಿಕೊಂಡಿದ್ದಾರೆ.

ಓವರ್‌ ಟು ಅಥಿರಾ
ನಾನು ಈಗಷ್ಟೇ ಕಾಲೇಜು ಓದುತ್ತಿದ್ದೇನೆ. ಸಿನಿಮಾ ನನ್ನ ಪ್ಯಾಷನ್.‌ ಇಲ್ಲಿ ಒಳ್ಳೆಯ ಕಥೆ, ಪಾತ್ರಗಳ ಮೂಲಕ ಕಾಣಿಸಿಕೊಂಡು ಭದ್ರ ನೆಲೆಕಂಡುಕೊಳ್ಳು ಆಸೆ ನನ್ನದು. ಹಾಗಾಗಿಯೇ, ನಾನು ಸಿನಿಮಾರಂಗವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಸದ್ಯಕ್ಕೆ ನಾನು ನಟನೆ ಕೋರ್ಸ್‌ ಅನ್ನುವುದೇನೂ ಮಾಡಿಲ್ಲ. ಆಡಿಷನ್‌ ಮೂಲಕ ಆಯ್ಕೆಯಾಗಿದ್ದು, ಈಗಾಗಲೇ ಮಲಯಾಳಂ ಭಾಷೆಯ “ಲಾಲ್‌ ಜೋಸ್‌” ಸಿನಿಮಾದಲ್ಲಿ ನಟಿಸಿದ್ದೇನೆ. ಈಗ ಕನ್ನಡ ಸಿನಿಮಾಗೂ ಆಯ್ಕೆಯಾಗಿ ನಟಿಸಿದ್ದೇನೆ.

“ಹಾಫ್‌” ನನ್ನ ಮೊದಲ ಕನ್ನಡ ಚಿತ್ರ. ಒಳ್ಳೆಯ ಕಥೆ, ಪಾತ್ರ ಇದ್ದುದರಿಂದ ನಾನು ಆ ಚಿತ್ರ ಮಾಡಲು ಒಪ್ಪಿದ್ದೇನೆ. ಸದ್ಯಕ್ಕೆ ಇನ್ನೂ ಎರಡು ಸಿನಿಮಾಗಳ ಮಾತುಕತೆ ನಡೆಯುತ್ತಿದೆ. ನನ್ನ ಬಗ್ಗೆ ಹೇಳುವುದಾದರೆ, ಕಳೆದ ಒಂಭತ್ತು ವರ್ಷಗಳಿಂದ ಕಥಕ್‌ ಮತ್ತು ಭರತನಾಟ್ಯ ಅಭ್ಯಾಸ ಮಾಡಿದ್ದೇನೆ. ನಟನೆ ಬಗ್ಗೆ ಪ್ಯಾಷನ್‌ ಇತ್ತು. ಹಾಗಾಗಿ ಒಳ್ಳೆಯ ಅವಕಾಶ ಎದುರು ನೋಡುತ್ತಿದ್ದೆ. “ಹಾಫ್”‌ ಒಳ್ಳೆಯ ಅವಕಾಶ ಒದಗಿಸಿಕೊಟ್ಟಿದೆ. ಇನ್ನು, ಇಲ್ಲಿ ನನಗೆ ಎಲ್ಲಾ ರೀತಿಯ ಪಾತ್ರ ಮಾಡಲು ಇಷ್ಟ. ಇನ್ನು, ನನಗೆ ಯಶ್‌ ಹಾಗೂ ರಾಧಿಕಾ ಪಂಡಿತ್‌ ರೋಲ್‌ ಮಾಡೆಲ್.‌ ನನಗೆ ಕಮರ್ಷಿಯಲ್‌ ಮತ್ತು ಕಲಾತ್ಮಕ ಸಿನಿಮಾಗಳು ಎಂಬುದಿಲ್ಲ. ಯಾವುದೇ ಸಿನಿಮಾ ಇದ್ದರೂ, ಒಳ್ಳೆಯ ಕಥೆ ಮತ್ತು ಪಾತ್ರ ಇದ್ದರೆ, ಖಂಡಿತ ಒಪ್ಪಿಕೊಂಡು ಕೆಲಸ ಮಾಡುತ್ತೇನೆ. ಒಟ್ಟಲ್ಲಿ ಆ ಪಾತ್ರ ಜನರಿಗೆ ತಲುವಂತಿರಬೇಕಷ್ಟೇ ಎಂಬುದು ಅಥಿರಾ ಮಾತು.‌

ಗ್ಲಾಮರಸ್‌ಗೆ ತಕರಾರಿಲ್ಲ…
ಇನ್ನು, “ಹಾಫ್‌” ಚಿತ್ರದ ಬಗ್ಗೆ ಹೇಳುವುದಾದರೆ, ಚಿತ್ರದಲ್ಲಿ ಒಂದೊಳ್ಳೆಯ ಪಾತ್ರವೇ ಸಿಕ್ಕಿದೆ. ಅದೊಂದು ರೀತಿ ನನಗೆ ಹೊಸ ರೀತಿಯ ಪಾತ್ರ. ಚಿತ್ರದ ಚಿತ್ರೀಕರಣ ಈಗಾಗಲೇ ಬಹುತೇಕ ಮುಗಿಯುವ ಹಂತ ತಲುಪಿದೆ. ಸಾಂಗ್‌ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ ಎಂದು ಹೇಳಿಕೊಳ್ಳುವ ಅಥಿರಾ, ನನಗೆ ಎಲ್ಲಾ ಭಾಷೆಯ ಸಮಸ್ಯೆ ಇಲ್ಲ. ಮಲಯಾಳಂ, ಕನ್ನಡ, ತೆಲುಗು ಭಾಷೆ ಬರುತ್ತೆ. ಯಾಕೆಂದರೆ, ನಾನು ಇಲ್ಲಿಯವಳಾಗಿದ್ದರೂ, ಮೂಲತಃ ಕೇರಳದವಳು.

ಅಪ್ಪ ಅರುಣ್‌ ಕನ್ನಡದವರು. ಅಮ್ಮ ಶ್ರೀಜಾ ಕೇರಳದವರು. ಹಾಗಾಗಿ ಎರಡೂ ಭಾಷೆ ನನಗೆ ಸುಲಲಿತ. “ಹಾಫ್” ಬಗ್ಗೆ ಹೇಳುವುದಾದರೆ, ಈ ಚಿತ್ರ ಸಿಕ್ಕಿದ್ದು ನನ್ನ ಪಾಲಿನ ಅದೃಷ್ಟ. ನಿರ್ದೇಶಕ ಲೋಕೇಂದ್ರ ಸೂರ್ಯ ಪ್ರತಿ ಸೀನ್‌ ಮುನ್ನ ತಾವೇ ನಟಿಸಿ ತೋರಿಸುತ್ತಿದ್ದರು. ಒಂದೊಳ್ಳೆಯ ಚಿತ್ರ ಮಾಡಿದ ಹೆಮ್ಮೆ ನನಗಿದೆ. ಮುಂದೆ ಯಾವುದೇ ಸಿನಿಮಾಗಳಿರಲಿ, ಕಥೆ ಹಾಗೂ ಪಾತ್ರಕ್ಕೆ ಅಗತ್ಯವಿದ್ದರೆ, ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಯಾವ ತಕರಾರೂ ಇಲ್ಲ ಎಂಬುದು ಅಥಿರಾ ಮಾತು.

ಮೊದಲ ಪೋಸ್ಟರ್‌ ರಿಲೀಸ್
ಲೋಕೇಂದ್ರ ಸೂರ್ಯ ನಟಿಸಿ, ನಿರ್ದೇಶಿಸಿರುವ “ಹಾಫ್” ಚಿತ್ರದ ಪೋಸ್ಟರ್ ಅನಾವರಣಗೊಂಡಿದೆ. “ಹಾಫ್” ಚಿತ್ರಕ್ಕೆ ಆಡಿಷನ್ ಮೂಲಕ ಸೆಲೆಕ್ಟ್ ಆದ ಅಥಿರಾ ನಟನೆ ಬಗ್ಗೆ ನಿರ್ದೇಶಕ ಲೋಕೇಂದ್ರ ಸೂರ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʻʻನಮ್ಮ ಸಿನಿಮಾಗೆ ಸ್ಕೂಲ್ ಸ್ಟೂಡೆಂಟ್ ಕ್ಯಾರೆಕ್ಟರಿನ ನಾಯಕನಟಿ ಬೇಕಿತ್ತು. ಆಡಷನ್‌ನಲ್ಲಿ ಅಥಿರಾ ಭಾವಾಭಿವ್ಯಕ್ತಿ ನೋಡಿ ಸೆಲೆಕ್ಟ್ ಮಾಡಿಕೊಂಡೆ.

ಸದ್ಯ ಅಥಿರಾ ಅವರ ಭಾವಚಿತ್ರ ಇರುವ ಪೋಸ್ಟರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. “ವರ್ಲ್ಡ್‌ ಬುಕ್ ಆಫ್ ರೆಕಾರ್ಡ್”ನಲ್ಲಿ ʻರೆಡ್ ಅಂಡ್ ವೈಟ್ ಮ್ಯಾನ್ʼ ಎಂದು ಕರೆಸಿಕೊಳ್ಳುವ ರೆಡ್ ಅಂಡ್ ವೈಟ್ ಸವೆನ್ ರಾಜ್ ಮತ್ತು ರಾಜು ಕಲ್ಕುಣಿ ಖಳನಟರಾಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆರ್.ಡಿ. ಎಂಟರ್ ಪ್ರೈಸಸ್, ರಾಜು ಕಲ್ಕುಣಿ ಅವರ ಬ್ಯಾನರ್ ಅಡಿಯಲ್ಲಿ ಡಾ. ಪವಿತ್ರ ಆರ್. ಪ್ರಭಾಕರ್ ರೆಡ್ಡಿ ನಿರ್ಮಾಣವಿದೆ. ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ನಾಯಕರಾಗಿಯೂ ಅಭಿನಯಿಸುತ್ತಿದ್ದಾರೆ. ಮಲ್ಲಿಕಾರ್ಜುನ್ ಬಿ.ಆರ್. ಛಾಯಾಗ್ರಹಣವಿದೆ. ಯುಡಿವಿ ವೆಂಕಿ ಸಂಕಲನ ಮಾಡಿದರೆ, ರಾಕಿ ಸೋನು ಸಂಗೀತವಿದೆ. ಥ್ರಿಲ್ಲರ್ ಮಂಜು ಸಾಹಸವಿದೆ.

Categories
ಸಿನಿ ಸುದ್ದಿ

ರಾಬರ್ಟ್‌ ತೆಲುಗು ಟೀಸರ್‌ ಲಾಂಚ್‌ ಡೇಟ್‌ ಫಿಕ್ಸ್‌, ಫೆ. 3 ಕ್ಕೆ ಹೊರ ಬರಲಿದೆ ʼರಾಬರ್ಟ್‌ʼ ತೆಲುಗು ಫಸ್ಟ್‌ ಲುಕ್‌

ಆನಂದ್‌ ಆಡಿಯೋ ಮೂಲಕ ಗ್ರಾಂಡ್‌ ಆಗಿ ಲಾಂಚ್‌ ಆಗುತ್ತಿದೆ ‌ ಟೀಸರ್‌

ನಟ ದರ್ಶನ್‌ ಅಭಿನಯದ ಬಹು ನಿರಿಕ್ಷೀತ ʼರಾಬರ್ಟ್‌ʼ ಎಂಟ್ರಿಗೆ ಟಾಲಿವುಡ್‌ ಓಕೆ ಅಂದಿದೆ. ಅದರ ಬೆನ್ನಲೇ ಚಿತ್ರ ತಂಡ ಫೆ. ೩ ಕ್ಕೆ ಫಸ್ಟ್‌ ಲುಕ್‌ ತೆಲುಗು ಟೀಸರ್‌ ಲಾಂಚ್‌ ಮಾಡಲು ರೆಡಿ ಆಗಿದೆ. ಅಂದು ಸಂಜೆ ೪.೧೫ಕ್ಕೆ ಆನಂದ್‌ ಅಡಿಯೋ ಮೂಲಕ ಟೀಸರ್‌ ಲಾಂಚ್‌ ಆಗಲಿದೆ ಅಂತ ಚಿತ್ರ ತಂಡ ಅನೌನ್ಸ್‌ ಮಾಡಿದೆ. ತೆಲುಗು ಟೀಸರ್‌ ಹೇಗಿರುತ್ತೆ ಅನ್ನೋದು ಕೇವಲ ಕನ್ನಡದವರಿಗೆ ಮಾತ್ರವಲ್ಲ, ತೆಲುಗು ಇಂಡಸ್ಟ್ರಿ ನಲ್ಲೂ ಕುತೂಹಲ ಮೂಡಿಸಿದೆ.

ತೆಲುಗು ನಿರ್ಮಾಪಕರು ” ರಾಬರ್ಟ್‌ʼ ರಿಲೀಸ್‌ ಗೆ ಅಡ್ಡಿಯಾಗಿದ್ದರ ವಿರುದ್ಧ ದರ್ಶನ್‌ ಗುಡುಗಿದ್ದು ಟಾಲಿವುಡ್‌ ನಲ್ಲೂ ದೊಡ್ಡ ಸುದ್ದಿ ಆಗಿತ್ತು. ಅದು ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆಯಲ್ಲಿ ಇತ್ಯರ್ಥವಾಗಿ, ಕೊನೆಗೂ ಟಾಲಿವುಡ್‌ ಎಂಟ್ರಿಗೆ ಅನುಮತಿ ಸಿಕ್ಕಿದ್ದು, ದರ್ಶನ್‌ ಗುಡುಗಿದ್ದಕ್ಕೆ ಸಿಕ್ಕ ಜಯವೇ ಆಗಿದೆ. ಅದೇ ರೀತಿ ರಾಬರ್ಟ್‌ ಸಿನಿಮಾ ಹೇಗಿದೆ ಎನ್ನುವುದನ್ನ ಈಗ ಟಾಲಿವುಡ್‌ ಕೂಡ ಎದುರು ನೋಡುತ್ತಿದೆ.

ಬಹು ನಿರೀಕ್ಷಿತ ʼರಾಬರ್ಟ್‌ʼ ಮಾರ್ಚ್‌ ೧೧ ಕ್ಕೆ ಗ್ರಾಂಡ್‌ ಆಗಿ ತೆರೆಗೆ ಬರುತ್ತಿದೆ. ಕನ್ನಡದ ಜತೆಗೆ ತೆಲುಗಿನಲ್ಲೂ ಅಬ್ಬರಿಸಲು ರೆಡಿ ಆಗಿದೆ. ಅಂದು ಜಗತ್ತಿನಾದ್ಯಂತ ರಿಲೀಸ್‌ ಆಗುವುದು ಗ್ಯಾರಂಟಿ ಆಗಿದೆ. ದರ್ಶನ್‌ ಅಭಿಮಾನಿಗಳಂತೂ ತುದಿಗಾಲ ಮೇಲೆ ನಿಂತಿದ್ದಾರೆ. ತಮ್ಮ ನೆಚ್ಚಿನ ನಟ ಸಿನಿಮಾ ನೋಡದೆ ವರ್ಷ ಕಳೆದಿದೆ. ʼಒಡೆಯʼ ನಂತರದ ದೊಡ್ಡ ಗ್ಯಾಪ್‌ ನಂತರ ʼರಾಬರ್ಟ್‌ʼ ರಿಲೀಸ್‌ ಆಗುತ್ತಿದೆ. ಈ ಚಿತ್ರರ ದರ್ಶನ್‌ ಸಿನಿ ಕರಿಯರ್‌ ನಲ್ಲಿ ಮಹತ್ವದ ಚಿತ್ರ ಎನ್ನುವುದಕ್ಕೆ ಚಿತ್ರದಲ್ಲಿನ ಅವರ ಪಾತ್ರ ಗೆಟಪ್‌ ಕಾರಣ. ಮೂರು ವಿಭಿನ್ನ ಪಾತ್ರ ಮತ್ತು ಗೆಟಪ್‌ ನಲ್ಲಿ ದರ್ಶನ್‌ ಕಾಣಿಸಿಕೊಂಡಿದ್ದಾರೆ. ಇಲ್ಲಿ ಅವರಿಗೆ ಮಾಡೆಲ್‌ ಆಶಾಭಟ್‌ ನಾಯಕಿಯಾಗಿ ಅಭಿನಯಿಸಿದ್ದಾರೆ. ಹಾಗೆಯೇ ದೊಡ್ಡ ತಾರಗಣವೇ ಚಿತ್ರದಲ್ಲಿದೆ.

Categories
ಸಿನಿ ಸುದ್ದಿ

ಸಿನಿ ಹಬ್ಬ ಜೋರು

ಮಂಗಳವಾರ ಶ್ಯಾಡೊ ಜೊತೆ ಜೊತೆ ಇನ್ಸ್‌ಪೆಕ್ಟರ್‌ ಬರ್ತಾರೆ!

ಕನ್ನಡ ಸಿನಿಮಾರಂಗ ಮೆಲ್ಲನೆ ಬಿಝಿಯಾಗುತ್ತಿದೆ. ಇದೀಗ ಬಿಡುಗಡೆ ಚಿತ್ರಗಳ ಸಂಖ್ಯೆ ವಾರದಿಂದ ವಾರಕ್ಕೆ ಹೆಚ್ಚುತ್ತಲೇ ಇದೆ. ಈ ವಾರ (ಫೆಬ್ರವರಿ ೫) ವಿನೋದ್‌ ಪ್ರಭಾಕರ್‌ ಅಭಿನಯದ “ಶ್ಯಾಡೊ”, ಚಂದನ್‌ ಆಚಾರ್‌ ನಟಿಸಿರುವ “ಮಂಗಳವಾರ ರಜಾದಿನ”, ಪ್ರಜ್ವಲ್‌ ದೇವರಾಜ್‌ ಅಭಿನಯದ “ಇನ್ಸ್‌ಪೆಕ್ಟರ್‌ ವಿಕ್ರಂ” ಸಿನಿಮಾಗಳು ತೆರೆಗೆ ಬರುತ್ತಿವೆ.
ವಿನೋದ್ ಪ್ರಭಾಕರ್ ಅಭಿನಯದ “ಶ್ಯಾಡೊ” ನರ್ತಕಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ.

ರವಿ ಗೌಡ ನಿರ್ದೇಶನದ ಈ ಚಿತ್ರಕ್ಕೆ ಅಚ್ಚು ಸಂಗೀತ ನೀಡಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ ಮಾಡಿದ್ದಾರೆ. ಛೋಟಾ ಕೆ. ಪ್ರಸಾದ್ ಸಂಕಲನ ಮಾಡಿದರೆ, ವಿನೋದ್ ಅವರ ಸಾಹಸ ನಿರ್ದೇಶನವಿದೆ. ಶ್ರೀಕನಕದುರ್ಗ ಚಲನಚಿತ್ರ ಬ್ಯಾನರ್‌ನಲ್ಲಿ ಚಕ್ರವರ್ತಿ ಸಿ.ಹೆಚ್ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಶೋಭಿತಾ ರಾಣಾ ಅಭಿನಯಿಸಿದ್ದಾರೆ. ಶರತ್ ಲೋಹಿತಾಶ್ವ, ಶ್ರೀಗಿರಿ, ಶ್ರವಣ್, ಗಿರಿಶಾಮ್, ಸತ್ಯದೇವ್, ಸಿರಿ ಇತರರು ಇದ್ದಾರೆ.

ಇನ್ಸ್‌ಪೆಕ್ಟರ್‌ ವಿಕ್ರಂ
ಇನ್ನು ಪ್ರಜ್ವಲ್‌ ದೇವರಾಜ್‌ ಅಭಿನಯದ “ಇನ್ಸ್‌ಪೆಕ್ಟರ್‌ ವಿಕ್ರಂ” ಸಿನಿಮಾ ಕೂಡ ಈ ವಾರ ತೆರೆಗೆ ಅಪ್ಪಳಿಸುತ್ತಿದೆ. ಶಿವರಾಜಕುಮಾರ್‌ ಅವರು ಈ ಹಿಂದೆ ಇದೇ ಹೆಸರಿನ ಚಿತ್ರ ಮಾಡಿದ್ದರು. ಆಗ ಸೂಪರ್‌ ಹಿಟ್‌ ಆಗಿತ್ತು. ಈಗ ಪ್ರಜ್ವಲ್‌ ದೇವರಾಜ್‌ ಅಭಿನಯದ “ಇನ್ಸ್‌ಪೆಕ್ಟರ್‌ ವಿಕ್ರಂ” ಕೂಡ ಸಾಕಷ್ಟು ಸುದ್ದಿ ಮಾಡಿದೆ. ವಿಖ್ಯಾತ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಪ್ರಜ್ವಲ್‌ ವಿಭಿನ್ನ ಕಾಪ್‌ ಪಾತ್ರ ನಿರ್ವಹಿಸಿದ್ದಾರೆ.


ಮಂಗಳವಾರ ರಜಾದಿನ
“ಬಿಗ್‌ಬಾಸ್‌” ಹುಡುಗ ಚಂದನ್‌ ಆಚಾರ್‌ ಅವರು ಹೊಸ ಚಿತ್ರ ಮಾಡಿದ್ದು, ಈ ವಾರ ತೆರೆಗೆ ಬರುತ್ತಿದೆ. “ಮಂಗಳವಾರ ರಜಾದಿನ” ಹೆಸರಿನ ಈ ಸಿನಿಮಾ ವಿಭಿನ್ನ ಕಥಾಹಂದರ ಹೊಂದಿದೆ. ಕ್ಷೌರಿಕನೊಬ್ಬನಿಗೆ ನಟ ಸುದೀಪ್ ಅವರಿಗೆ ಕೇಶ ವಿನ್ಯಾಸ ಮಾಡಬೇಕೆಂದು ಆಸೆ ಇರುತ್ತದೆ. ಆ ಆಸೆ ಈಡೇರುತ್ತಾ ಇಲ್ಲವಾ ಅನ್ನೋದೇ ಕಥೆ. ಸ್ಟುಡಿಯೋ 18 ಸುಧೀರ್ ಕೆ.ಎಂ. ಈ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ತ್ರಿವರ್ಗ ಫಿಲಂಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಯವಿನ್ ನಿರ್ದೇಶಿಸಿದ್ದಾರೆ.

“ಬಿಗ್ ಬಾಸ್” ಖ್ಯಾತಿಯ ಚಂದನ್ ಆಚಾರ್ ಇಲ್ಲಿ ಹೀರೋ ಆಗಿದ್ದು, ಅವರು ಕ್ಷೌರಿಕನ ಪಾತ್ರ ಮಾಡಿದ್ದಾರೆ. ಲಾಸ್ಯ ನಾಗರಾಜ್ ಅವರಿಗೆ ನಾಯಕಿಯಾಗಿದ್ದಾರೆ. ಜಹಂಗೀರ್, ರಜನಿಕಾಂತ್, ಗೋಪಾಲ್ ದೇಶಪಾಂಡೆ, ನಂದನ್ ರಾಜ್ ಮುಂತಾದವರು ನಟಿಸಿದ್ದಾರೆ. ಪ್ರಜೋತ್ ಡೇಸಾ ಸಂಗೀತ ನೀಡಿದ್ದಾರೆ. ಋತ್ವಿಕ್‌ ಮುರಳೀಧರ್ ಹಿನ್ನೆಲೆ ಸಂಗೀತ ನೀಡಿದರೆ, ಉದಯ್ ಲೀಲಾ ಛಾಯಾಗ್ರಹಣವಿದೆ. ಮಧು ತುಂಬಕೆರೆ ಸಂಕಲನ ಮಾಡಿದ್ದಾರೆ.

Categories
ಸಿನಿ ಸುದ್ದಿ

ತೆಲುಗಲ್ಲೂ ದರ್ಶನ್ ನಟನೆಯ ರಾಬರ್ಟ್ ರಿಲೀಸ್ ಸಲೀಸು

ಸೌತ್ ಫಿಲಂ ಚೇಂಬರ್ ನಡೆಸಿದ ಸಭೆ ಸಕ್ಸಸ್

100 ಥಿಯೇಟರಲ್ಲಿ ಬಿಡುಗಡೆಗೆ ರೆಡಿ

ಬಹುನಿರೀಕ್ಷಿತ ” ರಾಬರ್ಟ್‌ʼ ಚಿತ್ರದ ಬಿಡುಗಡೆಗೆ ತೆಲಗು ಚಿತ್ರರಂಗ ಅಡ್ಡಿಯಾಗಿತ್ತು ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಭಾನುವಾರ ನಡೆದ ಸೌತ್ ಫಿಲಂ ಚೇಂಬರ್ ಸಭೆಯಲ್ಲಿ “ರಾಬರ್ಟ್” ಸಿನಿಮಾವನ್ನು ತೆಲುಗಿನ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ಸಮ್ಮತಿ ಸಿಕ್ಕಿದೆ. ತೆಲುಗು ಚಿತ್ರರಂಗದ ವಿತರಕರು “ರಾಬರ್ಟ್” ಸಿನಿಮಾದ ವಿತರಣೆಗೆ ನಿರಾಕರಿಸಿದ್ದರು.
ಈ ಕುರಿತಂತೆ, ದರ್ಶನ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು.

ತಕ್ಷಣವೇ ಮಂಡಳಿ ಈ ಸಂಬಂಧ ಸೌತ್ ಫಿಲಂ ಚೇಂಬರ್ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿತ್ತು. ಅದರಂತೆ ಈಗ ಸಭೆ‌ ನಡೆಸಿ, “ರಾಬರ್ಟ್” ಚಿತ್ರದ ಬಿಡುಗಡೆ ಸಮಸ್ಯೆ ಬಗೆಹರಿಸಿದೆ.
ತೆಲುಗು ಚಿತ್ರರಂಗದಲ್ಲಿ ಈ ವಿಚಾರ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ತೆಲುಗು ಚಿತ್ರರಂಗದ ಹೊಸ ನೀತಿ ವಿರುದ್ಧ ದರ್ಶನ್‌ ಗುಟುರು ಹಾಕಿದ್ದರು. ಇದರಿಂದ ಸೌತ್‌ ಸಿನಿಮಾ ಇಂಡಸ್ಟ್ರಿಯಲ್ಲೇ ತಲ್ಲಣ ಹುಟ್ಟಿದ್ಸು ನಿಜ. ಕೂಡಲೇ ಕರ್ನಾಟಕ ವಾಣಿಜ್ಯ ಮಂಡಳಿ ಎಚ್ಚೆತ್ತುಕೊಂಡು ಭಾನುವಾರ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ನಡೆಸಿ “ರಾಬರ್ಟ್‌‌” ಚಿತ್ರದ ಬಿಡುಗಡೆ ಬಿಕ್ಕಟ್ಟು ಬಗೆಹರಿಸಿದೆ.


ʼರಾಬರ್ಟ್‌ʼ ಚಿತ್ರವನ್ನು ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ತಂಡ ಸಜ್ಜಾಗಿದೆ.
ಒಂದು ಮೂಲದ‌ ಪ್ರಕಾರ ರಾಬರ್ಟ್‌ ಚಿತ್ರದ ಬಿಡುಗಡೆಗೆ ತೆಲುಗಿನಲ್ಲಿ ವಿರೋಧ ಅಗಿಲ್ಲ. ಆದರೆ ಮಾರ್ಚ್‌ 11 ರಂದೇ ತೆಲುಗಿನಲ್ಲೂ ಒಂದು ಅದ್ದೂರಿ ವೆಚ್ಚದ ಚಿತ್ರ ತೆರೆ ಕಾಣುತ್ತಿದೆ. ಹಾಗಾಗಿ ಒಂದಷ್ಟು ಗೊಂದಲ ನಿರ್ಮಾಣವಾಗಿದೆ ಎನ್ನಲಾಗಿತ್ತು. ಈಗ ಅದಕ್ಕೆಲ್ಲವೂ ಹಾದಿ ಸುಗಮವಾಗಿದೆ.

Categories
ಸಿನಿ ಸುದ್ದಿ

ಸುದೀಪ್ 25ರ ಸಂಭ್ರಮಕ್ಕೆ ಬೆಳ್ಳಿ ನಾಣ್ಯ ಬಿಡುಗಡೆ

ಸುದೀಪ್ ಸಾಂಸ್ಕೃತಿಕ ಪರಿಷತ್ ನಿಂದ ಒಂದು ಸಾವಿರ ಬೆಳ್ಳಿ ನಾಣ್ಯ

ಕನ್ನಡ ಚಿತ್ರರಂಗಕ್ಕೆ ಸುದೀಪ್ ಪಾದಾರ್ಪಣೆ ಮಾಡಿ 25 ವಸಂತಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ “ಸುದೀಪ್ ಸಾಂಸ್ಕೃತಿಕ ಪರಿಷತ್ತು ಆ ಸಂಭ್ರಮವನ್ನು ಅರ್ಥ ಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ.
ಚಿತ್ರರಂಗದಲ್ಲಿ ಅನೇಕ ಯಶಸದವಿ ಸಿನಿಮಾಗಳನ್ನು ನೀಡಿರುವ ಸುದೀಪ್ ಅವರ ವೃತ್ತಿ ಜೀವನದ ಅವಿಸ್ಮರಣೆಗಾಗಿ “ಸುದೀಪ್ ಸಾಂಸ್ಕೃತಿಕ ಪರಿಷತ್ತು ವಿಶೇಷ 25 ಗ್ರಾಮ್ ನ 1000 ಬೆಳ್ಳಿ ನಾಣ್ಯವನ್ನು ಬಿಡುಗಡೆ ಮಾಡಲಿದೆ.


ಈ ಸಂದರ್ಭದಲ್ಲಿ ಸುದೀಪ್ ರವರಿಗೆ ಉಡುಗೊರೆಯಾಗಿ 100 ಗ್ರಾಮ್ ಬೆಳ್ಳಿ ನಾಣ್ಯವನ್ನು ಕೊಡಲು ಪರಿಷತ್ ನಿರ್ಧರಿಸಿದೆ.
ಸುದೀಪ್ ಅವರ ವೃತ್ತಿ ಜೀವನದ 25 ವರ್ಷಗಳನ್ನು ಸ್ಮರಿಸುವ ಅವರ ಭಾವಚಿತ್ರವಿರುವ “25 ಗ್ರಾಮ್ ಬೆಳ್ಳಿ ನಾಣ್ಯಗಳನ್ನು ಅಭಿಮಾನಿಗಳಿಗಾಗಿಯೇ ರೆಡಿ ಮಾಡಲಾಗಿದೆ.

Categories
ಸಿನಿ ಸುದ್ದಿ

ಎಂಬಿಎ ಹುಡುಗರ ಪೋಲಿ ಪ್ರೇಮ ಪುರಾಣ – ಮಾರ್ಚ್‌ 4 ರಂದು ತೆರೆಗೆ ಬರುತ್ತಿದೆ ಎಂಬಿಎ ಭಾಗ್ಯ ಅನ್‌ ಲಿಮಿಟೆಡ್‌ ಚಿತ್ರ !.

ಹೆಚ್ ಪಿ  ನಿರ್ದೇಶನದ ಸಿನಿಮಾ, ಹೆಚ್ ಪಿ ಅಂದ್ರೇನು? ನಿರ್ದೇಶಕರು ಅದು ನಿಗೂಢ ಎನ್ನುವುದೇಕೆ?

ಎಂಬಿಎ ಅನ್ನೋದೊಂದು ಸಿನಿಮಾ ಹೆಸರು. ಎಂಬಿಎ ಅಂದ್ರೆ ನಿಮಗೆಲ್ಲ ಇದುವರೆಗೂ ಗೊತ್ತಿರೋದು ಇದೊಂದು ಸ್ಟಡಿ ಕೋರ್ಸ್‌ ಅಂತ. ಅದ್ರೆ ಹೊಸಬರ ಒಂದು ತಂಡ , ಈಗ ಅದೇ ಹೆಸರಲ್ಲಿ ಒಂದು ಸಿನಿಮಾ ಮಾಡಿ ರಿಲೀಸ್‌ ರೆಡಿ ಆಗಿದೆ. ಎಂಬಿಎ ಹೆಸರಿನ ಚಿತ್ರದ ಶೀರ್ಷಿಕೆಗೆ ” ಭಾಗ್ಯ ಅನ್ ಲಿಮಿಟೆಡ್‌..ʼ ಅನ್ನೋದು ಟ್ಯಾಗ್‌ ಲೈನ್ ಇದೆ. ಹೆಚ್‌ ಪಿ ಎನ್ನುವವರು ಇದರ ನಿರ್ದೇಶಕ.
ಎಸ್.‌ ನಾರಾಯಣ್‌ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರಂತೆ. ಈಗ ಅವರೇ ಸ್ವತಂತ್ರ ನಿರ್ದೇಶಕರಾಗಿ “ಎಂಬಿಎʼ ಹೆಸರಿನ ಚಿತ್ರದ ಮೂಲಕ ಆಕ್ಷನ್‌ ಕಟ್‌ ಹೇಳಿದ್ದಾರೆ. ನಿಮಗೆ ಗೊತ್ತಿರುವ ಹಾಗೆ ಎಂಬಿಎ ಅಂದ್ರೆ ಮಾಸ್ಟರ್‌ ಆಫ್‌ ಬಿಸಿನೆಸ್‌ ಆಡ್ಮಿನಿಸ್ಟ್ರೇಷನ್‌ ಅಂತ. ಆದ್ರೆ ಇಲ್ಲಿ ಎಂಬಿಎ ಎನ್ನುವ ಶೀರ್ಷಿಕೆಯ ಫುಲ್‌ ಫಾರ್ಮ್‌ ಬೇರೇನೆ ಇದೆಯಂತೆ. ಅದೇನು ಅಂತ ಗೊತ್ತಾಗಬೇಕಾದ್ರೆ, ಸಿನಿಮಾ ನೋಡ್ಬೇಕು ಅಂತಾರೆ ನಿರ್ದೇಶಕರು.


ಹಾಗಂತ ಇದೇನು ಕಾಲೇಜಿಗೆ ಸಂಬಂಧಿಸಿದ ಕಥಾ ಹಂದರ ಚಿತ್ರವಲ್ಲವೇ ಅಂತ ಭಾವಿಸಬೇಕಿಲ್ಲ. ಕಾಲೇಜಿನಲ್ಲಿ ನಡೆಯುವ ಸಸ್ಪೆನ್ಸ್‌, ಥ್ರಿಲ್ಲರ್‌ ಹಾಗೂ ಮರ್ಡರ್‌ ಮಿಸ್ಟರಿಯ ಕಥಾ ಹಂದರದ ಚಿತ್ರ ಇದು. ಅಲ್ಲಿ ಪ್ರೀತಿ ಇದೆ, ರೋಮಾನ್ಸ್‌ ಇದೆ, ಸೆಟಿಮೆಂಟ್‌ ಇದೆ, ಆಕ್ಷನ್‌ ಇದೆ ಎನ್ನುತ್ತಾರೆ ನಿರ್ದೇಶಕ ಹೆಚ್.ಪಿ.
ಚಿತ್ರದ ಶೀರ್ಷಿಕೆಯ ಹಾಗೆಯೇ ಇಲ್ಲಿ ಇನ್ನೊಂದು ಕುತೂಹಲ ನಿರ್ದೇಶಕರ ಹೆಸರಿಗೆ ಸಂಬಂಧಿಸಿದ್ದು. ಹೆಚ್‌ ಪಿ ಅನ್ನೋದು ಅವರ ಹೆಸರು. ಅದರ ಫುಲ್‌ ಫಾರ್ಮ್‌ ಏನು ಅಂತ ಪ್ರಶ್ನಿಸಿದರೆ, ಅದೆಲ್ಲ ಬೇಡ ಸರ್‌, ಆ ಕತೆ ಬೇರೆಯಿದೆ ಅಂತಾರೆ ನಿರ್ದೇಶಕ. ಹೊಸ ಪ್ರತಿಭೆಗಳಾದ ಪುನೀತ್‌ ಗೌಡ, ಗೂಳಿಸೋಮ, ಕಾವ್ಯ ಗೌಡ, ಸೌಮ್ಯ ಶಾನ್‌ಬೋಗ್‌ ಈ ಚಿತ್ರದ ಪ್ರಮುಖ ಕಲಾವಿದರು. ಸದ್ಯಕ್ಕೆ ಚಿತ್ರ ತಂಡ ಟ್ರೀಲರ್‌ ಲಾಂಚ್‌ ಮಾಡುವ ಮೂಲಕ ಸದ್ದು ಮಾಡಿದೆ. ಎರಡು ವರ್ಷಗಳ ಹಿಂದೆಯೇ ಶುರುವಾಗಿದ್ದ ಈ ಚಿತ್ರಕ್ಕೆ ಈಗ ಬಿಡುಗಡೆಯ ಕಾಲ ಕೂಡಿ ಬಂದಿದೆ. ಟ್ರೇಲರ್‌ ಲಾಂಚ್‌ ಗೆ ಹೆಸರಾಂತ ಸಂಭಾಷಣಾಕಾರ ಮಳ್ಳವಳ್ಳಿ ಸಾಯಿ ಕೃಷ್ಣ ಆಗಮಿಸಿದ್ದರು. ಟ್ರೇಲರ್‌ ಲಾಂಚ್‌ ಮಾಡಿ, ಚಿತ್ರ ತಂಡಕ್ಕೆ ಶುಭ ಹಾರೈಸಿದರು.


ಸರಿ ಸುಮಾರು ಎರಡು ನಿಮಿಷಗಳಷ್ಟು ಅವಧಿಯ ಟ್ರೇಲರ್‌ನಲ್ಲಿ ಬರೀ ಪೋಲಿ ಮಾತುಗಳೇ ತುಂಬಿಕೊಂಡಿವೆ.

ಸೆನ್ಸಾರ್‌ ನಿಂದ ಈ ಚಿತ್ರಕ್ಕೆ ಎ ಸರ್ಟಿಫಿಕೇಟ್‌ ಸಿಕ್ಕಿದೆ.  ಸಿನಿಮಾ ಮುಖ್ಯವಾಗಿ ಕಾಲೇಜು ಹುಡುಗರ ಪ್ರೀತಿ, ಪ್ರೇಮ, ಹೊರಳಾಟ, ತೊಳಲಾಟ, ಒದ್ದಾಟಗಳ ಕತೆ ಹೇಳುತ್ತದೆ. ಹಾಗೆಯೇ ಈಗಿನ ಯುವ ಜನತೆಗೆ ಒಂದು ಸಂದೇಶ ನೀಡುತ್ತದೆ. ಹಾಗಾಗಿಯೇ ಸೆನ್ಸಾರ್‌ ಕಡೆಯಿಂದ ಚಿತ್ರಕ್ಕೆ ಎ ಸರ್ಟಿಫಿಕೇಟ್‌ ಸಿಕ್ಕಿದೆ ಎನ್ನುವುದು ನಿರ್ದೇಶಕ ಹೆಚ್.ಪಿ. ನೀಡುವ ಸ್ಪಷ್ಟನೆ. ನಿರ್ದೇಶಕ ಹೆಚ್.ಪಿ ಅವರೇ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಹರ್ಷ ಕಾಗೋಡು ಸಂಗೀತ ನೀಡಿದ್ದು, ದರ್ಶನ್‌ ದೇವ್‌ ಛಾಯಾಗ್ರಹಣ ಮಾಡಿದ್ದಾರೆ. ಮರಿ ಸ್ವಾಮಿ ಸಂಕಲನ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ನಾನು ಅನುಭವಿಸಿದ ನೋವು, ಅವಮಾನ ಯಾರಿಗೂ ಬೇಡ

ನನ್ನ ಹಾಗೆ ನೀವೂ ಕಷ್ಟ ಪಟ್ಟಿದ್ದೀರಿ, ಗೆಲ್ತೀರಿ, ಮುನ್ನುಗ್ಗಿ ಅಂದ್ರು ವಿನೋದ್‌ಪ್ರಭಾಕರ್

“ನಾನು ಅನುಭವಿಸಿದ ನೋವು, ಅವಮಾನದ ಮುಂದೆ ನಿಮ್ಮದೇನೂ ಅಲ್ಲ. ಸಾಕಪ್ಪ ಸಾಕು, ಈ ಬಣ್ಣದ ಬದುಕು ಅಂದಾಗ ಜನರು ಆಶೀರ್ವಾದ ನೀಡಿದ್ರು. ನಿಮ್ಗೆ ಇದೆಲ್ಲ ಅನುಭವ ಆಗಿಲ್ಲ. ಆದ್ರೂ ನನ್ನ ಹಾಗೆಯೇ ನೀವೂ ಕೂಡ ಕಷ್ಟಪಟ್ಟಿದ್ದೀರಿ, ಅದೇ ನಿಮ್ಗೆ ಗೆಲುವು ತಂದುಕೊಡುತ್ತದೆ. ಇಂದಲ್ಲ ನಾಳೆ ಗೆಲುವು ನಿಮ್ಮದೇ, ಮುನ್ನುಗ್ಗಿ…” ನಟ ವಿನೋದ್‌ಪ್ರಭಾಕರ್‌ಸ್ಟಾರ್‌ಆದ ಹಿಂದಿನ ತಮ್ಮ ಕಠಿಣ ಪರಿಶ್ರಮದ ಅನುಭವವನ್ನು “ಸಿನಿಲಹರಿ” ಮುಂದೆ ಹೀಗೆ ತೆರೆದಿಟ್ಟು, ನೀವು ಗೆದ್ದೇ ಗೆಲ್ತೀರಿ ಅಂತ ಹರಿಸಿದರು.

ಅವರು ಈ ಪ್ರೀತಿಯ ಮಾತುಗಳನ್ನು ಹೇಳಿದ್ದು, “ಸಿನಿ ಲಹರಿ” ಕಚೇರಿಗೆ ಭೇಟೀ ನೀಡಿದ ಸಂದರ್ಭ. ವಿನೋದ್‌ಪ್ರಭಾಕರ್‌ಈಗ ಚಂದನವನದ ಬಹು ಬೇಡಿಕೆಯ ಸ್ಟಾರ್‌ನಟ. “ಮರಿ ಟೈಗರ್‌‌” ಅಂತಾನೇ ಜನಪ್ರಿಯತೆ ಪಡೆದ ನಟ. ಫೆ.೫ ರಂದು ತೆರೆ ಕಾಣುತ್ತಿರುವ “ಶ್ಯಾಡೋ” ಸೇರಿದಂತೆ ಸಾಲು ಸಾಲು ಸಿನಿಮಾಗಳಿಗೆ ಅವರು ಹೀರೋ. ಹಾಗೆಯೇ ಈಗವರು, ದೊಡ್ಡದೊಂದು ಬ್ರೇಕಿಂಗ್‌ಸುದ್ದಿ ಕೊಡುವುದಕ್ಕೂ ರೆಡಿ ಆಗಿದ್ದಾರೆ. ಒಂದು ಮೂಲದ ಪ್ರಕಾರ, ಮುಂಬೈನ ದೊಡ್ಡ ಪ್ರೊಡಕ್ಷನ್‌ಹೌಸ್‌ನಿರ್ಮಾಣ ಮಾಡುತ್ತಿರುವ ಅದ್ದೂರಿ ವೆಚ್ಚದ ಪ್ಯಾನ್‌ಇಂಡಿಯಾ ಸಿನಿಮಾಕ್ಕೆ ವಿನೋದ್‌ಪ್ರಭಾಕರ್‌ಹೀರೋ ಅಂತೆ. ಇದಿನ್ನೂ ಕನ್ಫರ್ಮ್‌ಆಗಿಲ್ಲ. ಆದರೆ, ಆ ನಿಟ್ಟಿನಲ್ಲಿ ಮಾತುಕತೆ ನಡೆದಿದೆ ಎನ್ನುವ ಸುದ್ದಿಯಂತೂ ಖಾತರಿ.

ಸ್ಯಾಂಡಲ್‌ವುಡ್‌ಗೆ ಇದಂತೂ ಸೆನ್ಸೇಷನ್‌ಸುದ್ದಿ. ಸದ್ಯಕ್ಕೆ ಹೀಗೆಲ್ಲ ಬ್ಯುಸಿ ಆಗಿರುವ ನಟ ವಿನೋದ್‌ಪ್ರಭಾಕರ್‌, ಇತ್ತೀಚೆಗೆ ಪತ್ನಿ ಸಮೇತ “ಸಿನಿ ಲಹರಿ” ಕಚೇರಿಗೆ ಬಂದಿದ್ದರು. ಇದೊಂದು ಔಪಚಾರಿಕ ಭೇಟಿ ಮಾತ್ರ. ನಮ್ಮ ಮೇಲಿನ ಪ್ರೀತಿ, ಅಭಿಮಾನದ ಮೇರೆಗೆ ತಮ್ಮ ಬ್ಯುಸಿ ಶೆಡ್ಯೂಲ್‌ನಡುವೆಯೂ ಕಚೇರಿಗೆ ಬಂದು ಸುಮಾರು ಅರ್ಧ ತಾಸು ಕಚೇರಿಯಲ್ಲಿದ್ದು ಒಂದಷ್ಟು ಹರಟಿದರು. “ಸಿನಿ ಲಹರಿ” ವೆಬ್‌ಸೈಟ್‌ವೀಕ್ಷಿಸಿ, ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. “ಸಿನಿಲಹರಿ”ಯಲ್ಲಿರುವ ಬರಹಗಳೇ ಅದ್ಭುತವಾಗಿವೆ. ಇಂತಹ ಗುಣಮಟ್ಟ ಮತ್ತು ನಿಖರವಾದ ವರದಿ, ಸುದ್ದಿಗಳು ಚಿತ್ರರಂಗಕ್ಕೆ ಬೇಕು” ಎಂದು ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆ ನಂತರ ಸಜ್ಜುಗೊಳ್ಳುತ್ತಿರುವ “ಸಿನಿಲಹರಿ” ಸ್ಟುಡಿಯೋ ವೀಕ್ಷಿಸಿ, ಖುಷಿಯ ಜೊತೆಗೆ ಅಚ್ಚರಿ ಪಟ್ಟರು. “ಏನೋ ಸಣ್ಣದಾಗಿ ಕಚೇರಿ ಮಾಡಿಕೊಂಡಿದ್ದೀರಿ ಅನ್ಕೊಂಡ್ರೆ, ತುಂಬಾನೆ ಕಷ್ಟಪಟ್ಟು ದೊಡ್ಡ ಸ್ಟುಡಿಯೋವನ್ನೇ ಮಾಡಿದ್ದೀರಿ. ತುಂಬಾ ವರ್ಷಗಳ ಕಾಲ ಪ್ರಾಮಾಣಿಕ ಪತ್ರಿಕೋದ್ಯಮವನ್ನೇ ನಂಬಿಕೊಂಡ ಬಂದ ನೀವು, ಇವತ್ತು ಅಷ್ಟೇ ಶ್ರದ್ದೆ ಮತ್ತು ನಂಬಿಕೆಯಿಂದ ಇಷ್ಟೇಲ್ಲ ಮಾಡಿದ್ದೀರಿ ಅಂತಂದ್ರೆ ಗೆದ್ದೇ ಗೆಲ್ಲುತ್ತೀರಿ, ಒಳ್ಳೆಯದಾಗಲಿʼ ಅಂತ ಹರಸಿದರು. ಕೆಲಸ ಕಳೆದುಕೊಂಡು ನಾವು ಅನುಭವಿಸಿದ ಕ್ಷಣಗಳು, ಆನಂತರ ನಮ್ಮದೇ ಬದುಕು ಕಟ್ಟಿಕೊಳ್ಳಬೇಕೆಂದು ಆರಂಭಿಸಿದ “ಸಿನಿ ಲಹರಿʼಯ ಶುರುವಿನ ದಿನಗಳು, ಆ ನಂತರದ ಜರ್ನಿಯ ಕ್ಷಣಗಳನ್ನು ತಾಳ್ಮೆಯಿಂದ ಕೇಳಿದ ವಿನೋದ್‌ಪ್ರಭಾಕರ್‌, ನಾನು ಅನುಭವಿಸಿದ ನೋವು, ಅವಮಾನ, ನಿಂದನೆಗಳ ಮುಂದೆ ನಿಮ್ದೇನು ಅಲ್ಲ ಅಂತೆನಿಸುತ್ತೆ. ನಟ ಪ್ರಭಾಕರ್‌ಅವರ ಮಗ ಎನ್ನುವ ಪರಿಚಯ ನನಗಿದ್ದರೂ, ಅದೆಲ್ಲ ಉದ್ಯಮದ ಮುಂದೆ ವರ್ಕೌಟ್‌ಆಗಲಿಲ್ಲ. ಅದರ ಪರಿಣಾಮ ಸೋಲು, ನೋವು ನನ್ನನ್ನೇ ಹೈರಾಣಾಗಿಸಿತುʼ ಅಂತ ಒಂದು ಕ್ಷಣ ಭಾವುಕರಾದರು ವಿನೋದ್‌ಪ್ರಭಾಕರ್.‌

ಮರಿ ಟೈಗರ್‌ವಿನೋದ್‌ಪ್ರಭಾಕರ್‌ಮಾತು ಮುಂದುವರೆಸಿದರು. ” ನಮ್ಮ-ನಿಮ್ಮಂತವರಿಗೆ ಸಕ್ಸಸ್‌ಸುಮ್ಮನೆ ಸಿಗೋದಿಲ್ಲ. ಕಷ್ಟಪಟ್ಟ ಮೇಲೆಯೇ ಗೆಲುವು. ನನಗೂ ಕೂಡ. ಸಾಕಪ್ಪ ಸಾಕು, ಈ ಸೋನು, ನೋವು ಅಂದಾಗ ಜನ ಕೈ ಹಿಡಿದರು. ಕೊನೆಗೂ ಸಕ್ಸಸ್‌ಕಂಡೆ. ಅಲ್ಲಿಂದ ನನ್ನದೇ ಒಂದು ಸೂತ್ರ ಇಟ್ಕೊಂಡು ಸಿನಿಮಾ ಮಾಡುತ್ತಾ ಬರುತ್ತಿದ್ದೇನೆ. ನಾನು ಯಾರನ್ನೂ ಮೋಸ ಮಾಡಲಾರೆ. ಯಾರಿಗೂ ಅನಗತ್ಯ ಬಂಡವಾಳ ಹಾಕುವಂತೆ ಹೇಳಲಾರೆ. ನನ್ನ ಸಿನಿಮಾದ ಬಜೆಟ್‌ಇಷ್ಟು, ಅದರಿಂದ ಬರುವ ಆದಾಯ ಇಷ್ಟು, ಬೇಕಾದ್ರೆ ಸಿನಿಮಾ ಮಾಡಿ, ಇಲ್ಲ ಅಂದ್ರೆ ಬೇರೆ ಯಾರನ್ನಾದರೂ ನೋಡಿಕೊಳ್ಳಿ ಅಂತ ಹೇಳಿ ಬಿಡುತ್ತೇನೆ. ಇಷ್ಟು ನಿಷ್ಟುರತೆಯಿಂದ ಯಾರು ಹೇಳುತ್ತಾರೋ ಗೊತ್ತಿಲ್ಲ. ಇದು ನನ್ನ ಪಾಲಿಸಿʼ ಎಂದು ಹೇಳುತ್ತಾ ಸಿನಿ ಲಹರಿಗೆ ಆಲ್‌ದಿ ಬೆಸ್ಟ್‌ಹೇಳಿ, ಶೂಟಿಂಗ್‌ಬ್ಯುಸಿ ಅಂತ ಕಾರು ಹತ್ತಿದರು.

error: Content is protected !!