Categories
ಸಿನಿ ಸುದ್ದಿ

ರಾಬರ್ಟ್ ಪ್ರೊಡ್ಯೂಸರ್ ಮಾತು ಕೇಳಿ ಬಿರಿಯಾನಿ ಸವಿದವರು ಈ‌ ಸುದ್ದಿನಾ ನೋಡ್ಲೆಬೇಕು !?

  • ವಿಶಾಲಾಕ್ಷಿ

ದೊಡ್ಮನೆ ಆಸ್ತಿಯ ಬಗ್ಗೆ ನಿರ್ಮಾಪಕ ಉಮಾಪತಿಯವರು ಮಾಹಿತಿ ಹೊರ ಹಾಕಿದ್ದೇ ತಡ ಕೆಲವರಿಗೆ ಸುಕ್ಕಾ ಹೊಡೆದಷ್ಟು, ಹೈದ್ರಬಾದ್ ಬಿರಿಯಾನಿ ತಿಂದಷ್ಟು ಖುಷಿಯಾಯ್ತು.
ನೋಡ ನೋಡ ಎನ್ನುತ್ತಲೇ
ಕೆಲವರು ಒಳಗೊಳಗೆ ಖುಷಿಪಟ್ಟರು. ಹತ್ತಿಕೊಂಡ್ತು ನೋಡು ಬೆಂಕಿ ಎನ್ನುತ್ತಾ ಸಿಗರೇಟ್ ಹಚ್ಚಿಕೊಂಡು ಲಂಗ್ಸ್ ನ‌ ಬೆಚ್ಚಗೆ ಮಾಡಿಕೊಳ್ಳೋದ್ರಲ್ಲಿ ಕೆಲವರು ಬ್ಯುಸಿಯಾದರು. ಎನಿ ಅಪ್ ಡೇಟ್ ಅಂತ ಮಾಧ್ಯಮ ಮಿತ್ರರಿಗೆ‌ ಕೆಲವರು‌ ಕಾಲ್ ಮಾಡಿದರು. ಇನ್ನೂ ಕೆಲವರು ಪ್ರತಿ ಚಾನೆಲ್ ನ ಚೇಂಜ್ ಮಾಡಿಕೊಂಡು ಡೀಟೈಲ್ಸ್ ಪಡೆದುಕೊಂಡರು. ಆದರೆ, ಅವರಿಗೆ ಯಾರೂ ಗೊತ್ತಿರಲಿಲ್ಲ ಹೀರೋ ದರ್ಶನ್ ಸಂಜೆ ಪ್ರೆಸ್ಮೀಟ್ ಮಾಡ್ತಾರೆ, ಅಸಲಿ ಸತ್ಯದ ಬಾಂಬ್ ಸ್ಪೋಟಿಸ್ತಾರೆ ಅಂತ.

ನಾನು ದೊಡ್ಮನೆ ಪ್ರಾಪರ್ಟಿ ಕೊಡ್ತೀರಾ ಅಂತ ಕೇಳಿಲ್ಲ ಕೊಡುವ ಐಡಿಯಾ ಇದೆಯಾ ಅಂತ ಕೇಳಿದ್ದೀನಿ. ಅಷ್ಟಕ್ಕೂ ದೊಡ್ಮನೆ ಪ್ರಾಪರ್ಟಿ ಬಗ್ಗೆ ನನಗೆ ಗೊತ್ತಿರಲಿಲ್ಲ. ನಿರ್ಮಾಪಕ ಉಮಾಪತಿಯವರೇ ನನ್ನ ಬಳಿ ಬಂದು ಕನ್ನಿಂಗ್ ಹ್ಯಾಮ್ ರೋಡ್ ನಲ್ಲಿ‌ರುವ
ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಸೇರಿದಂತಹ ಪ್ರಾಪರ್ಟಿಯನ್ನ ಖರೀದಿ ಮಾಡಿದ್ದೇನೆ ಸರ್ ಅಂತ ಹೇಳಿದರು. ಒಳ್ಳೆಯದಾಗಲಿ ಅಂದೆ ವಿಷ್ ಮಾಡಿದ್ದೆ

ಕೇಸ್ ಕೋರ್ಟ್ ನಲ್ಲಿದೆ ಸತ್ಯ ಹೊರ ಬರಲಿ ಅಂತ ದಚ್ಚು ಸುಮ್ನೆ ಇದ್ದರೆ ಬಜಾರ್ ನಲ್ಲಿ ಮ್ಯಾಟರ್ ಬೇರೆನೇ ಓಡುತ್ತಿತ್ತು. ದೊಡ್ಮನೆಯ ಆಸ್ತಿಗೆ ದಚ್ಚು ಕಣ್ಣುಹಾಕಿದ್ದಾರೆ ಅದನ್ನು ಕೊನೆಗೆ ದಕ್ಕಿಸಿಕೊಳ್ಳೋದಕ್ಕೆ ಆಗಲಿಲ್ಲ ಹಾಗೂ ನಿರ್ಮಾಪಕ ಉಮಾಪತಿಯವರು ಕೊಡಲಿಲ್ಲ ಎನ್ನುವ ಕಾರಣಕ್ಕೆ ಉಮಾಪತಿಯವರ ಮೇಲೆ ದರ್ಶನ್ ಜಿದ್ದು ಸಾಧಿಸ್ತಿದ್ದಾರೆ ಹಾಗೇ ಹೀಗೆ ಕಾಗೇ ಗೂಬೆ ಅಂತೆಲ್ಲಾ ಮಾತನಾಡೋದಕ್ಕೆ ಶುರುಮಾಡಿದರು. ಇದನ್ನೆಲ್ಲಾ ನೋಡಿಕೊಂಡು ಸುಮ್ಮನೇ ಇರೋದು ಸರಿಯಲ್ಲ ಇದಕ್ಕೊಂದು ಕ್ಯಾರಿಟಿ‌ ಕೊಡೋಣ ಅಂತ ಮೈಸೂರಿನ‌ ಫಾರ್ಮ್ ಹೌಸ್ ನಲ್ಲಿ ದರ್ಶನ್ ಸುದ್ದಿಗೋಷ್ಟಿ ನಡೆಸಿದರು.


ದರ್ಶನ್ ಏನ್ ಹೇಳಿದರು ಅನ್ನೋದಕ್ಕೂ ಮೊದಲು ಉಮಾಪತಿ ಏನ್ ಹೇಳಿದರು ನೋಡಿ

ಪ್ರಾಪರ್ಟಿ ವಿಚಾರವಾಗಿ ದರ್ಶನ್ ಸಾರ್ ಹಾಗೂ ನನ್ನ ನಡುವೆ ಭಿನ್ನಾಭಿಪ್ರಾಯ ಬಂದಿಲ್ಲ ಆದರೆ ದೊಡ್ಮನೆ ಆಸ್ತಿಯನ್ನ ದರ್ಶನ್ ಕೇಳಿದ್ದರು. ದೊಡ್ಮನೆ ಆಸ್ತಿಯನ್ನ ಮಾರಾಟ ಮಾಡುವುದು ನನಗೆ ಶೋಭೆ ತರುವಂತಹದ್ದು ಅಲ್ಲವೆಂದು ನಿರ್ಧರಿಸಿ ಡಿಬಾಸ್ ಗೆ ಕೊಡೋಕೆ ಆಗಲ್ಲ ಅಂತ ನೇರವಾಗಿ ಹೇಳಿದ್ದೆ ದೊಡ್ಮನೆ ಆಸ್ತಿ ಬದಲಾಗಿ ಬೇರೊಂದು ಪ್ರಾಪರ್ಟಿ‌ ಕೊಡ್ತೀನಿ ಅಂತಲೂ ಹೇಳಿದ್ದೇನೆ ಅಂತ ಮಾಧ್ಯಮದ ಮುಂದೆ ನಿರ್ಮಾಪಕ ಉಮಾಪತಿ ಹೇಳಿಕೊಂಡಿದ್ದರು‌.

ಇದಕ್ಕೆ ದರ್ಶನ್ ಪ್ರತಿಕ್ರಿಯೆ ನೀಡಿದ್ದು ನಾನು ದೊಡ್ಮನೆ ಪ್ರಾಪರ್ಟಿ ಕೊಡ್ತೀರಾ ಅಂತ ಕೇಳಿಲ್ಲ ಕೊಡುವ ಐಡಿಯಾ ಇದೆಯಾ ಅಂತ ಕೇಳಿದ್ದೀನಿ. ಅಷ್ಟಕ್ಕೂ ದೊಡ್ಮನೆ ಪ್ರಾಪರ್ಟಿ ಬಗ್ಗೆ ನನಗೆ ಗೊತ್ತಿರಲಿಲ್ಲ. ನಿರ್ಮಾಪಕ ಉಮಾಪತಿಯವರೇ ನನ್ನ ಬಳಿ ಬಂದು ಕನ್ನಿಂಗ್ ಹ್ಯಾಮ್ ರೋಡ್ ನಲ್ಲಿ‌ರುವ
ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಸೇರಿದಂತಹ ಪ್ರಾಪರ್ಟಿಯನ್ನ ಖರೀದಿ ಮಾಡಿದ್ದೇನೆ ಸರ್ ಅಂತ ಹೇಳಿದರು. ಒಳ್ಳೆಯದಾಗಲಿ ಅಂದೆ ವಿಷ್ ಮಾಡಿದ್ದೆ.

ಇದೇ ವೇಳೆ ನಿಮಗೇನಾದರೂ ಆ ಪ್ರಾಪರ್ಟಿನಾ ಮಾರುವ ಐಡಿಯಾ ಇದೆ ಅಂತ ಕೇಳಿದ್ದೆ ಅದಕ್ಕೆ ನಿಮಗೇನಾದರೂ ಬೇಕಾದರೆ ತಗೊಳಿ ಅಂದರು ಅದಕ್ಕೆ ನಾನು ನಿಮ್ಮ ಹತ್ತಿರ ನನ್ನ ಹಣ ಇದೆಯಲ್ಲ‌ ಅದರಲ್ಲಿ ಪ್ರಾಪರ್ಟಿದು ಕಟ್ ಮಾಡಿಕೊಂಡು ಬಾಕಿ ಹಣ ಕೊಡಿ ಅಂದೆ ಆಯ್ತು ಅಂತ ಒಪ್ಪಿಕೊಂಡರು. ಅಲ್ಲಿಂದ ಇಲ್ಲಿವರೆಗೆ ಆ ಪ್ರಾಪರ್ಟಿಯ ಬಾಡಿಗೆ ಹಣವನ್ನ ನನ್ನ ಕೈಗೆ ತಂದು ಕೊಡ್ತಿದ್ದಾರೆ. ಇದಕ್ಕೆ ಏನ್ ಹೇಳಬೇಕು ಸ್ವಾಮಿ ಅಷ್ಟಕ್ಕೂ ಉಮಾಪತಿಯವರು ಯಾಕೇ ಹೀಗೆ ಹೇಳಿಕೆ‌ ಕೊಡ್ತಿದ್ದಾರೋ ಗೊತ್ತಿಲ್ಲ ನೀವು ಹೋಗಿ ಮತ್ತೆ ಅವರನ್ನೇ ಕೇಳಿಕೊಳ್ಳಿ ಎಂದಿದ್ದಾರೆ. ಅಷ್ಟಕ್ಕೂ, ದಾಸ ನನ್ನ ಬ್ರದರ್ ಎನ್ನುವ ನಿರ್ಮಾಪಕ ಉಮಾಪತಿಯವರು ಅದ್ಯಾಕೇ ಈ ರೀತಿ ಹೇಳಿಕೆಗಳನ್ನು‌ ಕೊಡುತ್ತಿದ್ದಾರೋ ಆ ತಾಯಿ ಬನಶಂಕರಿ ದೇವಿಗೆ ಗೊತ್ತು.

Categories
ಸಿನಿ ಸುದ್ದಿ

ದರ್ಶನ್ ಮೇಲೆ ಇದೆಂತಾ ಅಪವಾದ- ಒಡೆಯನಿಗೆ ಕೊಟ್ಟು ಅಭ್ಯಾಸ, ಕಿತ್ಕೊಂಡಲ್ಲ – ಕಣ್ಣಿಡೋದು ಬೇರೆ , ಕೇಳಿ ಪಡೆಯೋದು ಬೇರೆ !

ನಾವು ಯಾರ ಪರನೂ ಅಲ್ಲ ಯಾರ ವಿರೋಧವೂ ಅಲ್ಲ’ ಯಾಕೀ ಮಾತು ಹೇಳ್ತಿದ್ದೀವಿ ಅನ್ನೋದು ಕಂಪ್ಲೀಟ್ ಸ್ಟೋರಿನಾ ಓದಿದ್ಮೇಲೆ ನಿಮಗೆ ಗೊತ್ತಾಗುತ್ತೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಒಂದಾದ್ಮೇಲೊಂದು ಆರೋಪಗಳು ಕೇಳಿ ಬರುತ್ತಲೇ ಇವೆ. ಅಸಲಿಯತ್ತು ಬಯಲಾಗುವ ಮುನ್ನವೇ ಬಣ್ಣಕಟ್ಟಿ ಪುಂಕಾನುಪುಂಕವಾಗಿ ಪುಂಗುವ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದಾರೆ. ಯಾವುದೋ ವಿಷ್ಯವನ್ನು ತೆಗೆದುಕೊಂಡು ಇನ್ಯಾವುದಕ್ಕೋ ಲಿಂಕ್ ಮಾಡಿ ಸ್ಯಾಂಡಲ್‌ವುಡ್ ಚಕ್ರವರ್ತಿಯನ್ನು ತೇಜೋವಧೆ ಮಾಡುವಂತಹ ಕೆಲಸ ನಡೆಯುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಪ್ರಿನ್ಸ್ ಹೋಟೆಲ್‌ನ ಸಪ್ಲೈಯರ್ ಮೇಲೆ ಸಾರಥಿ ಹಾಗೂ ಅವರ ಸ್ನೇಹಿತರು ಹಲ್ಲೆ ನಡೆಸಿದ್ದಾರೆನ್ನುವ ಆರೋಪದಲ್ಲಿ ಹುರುಳಿದಿಯೋ ಇಲ್ಲವೋ ಗೊತ್ತಿಲ್ಲ. ಸದ್ಯಕ್ಕೆ ಪ್ರಕರಣ ತನಿಖಾ ಹಂತದಲ್ಲಿದೆ. ಅಷ್ಟಕ್ಕೂ, `ಸತ್ಯಾನಾ ದಫನ್ ಮಾಡುವ ಖಫನ್ನಾ’ ಯಾರೂ ಇನ್ನೂ ಕಂಡುಹಿಡಿದಿಲ್ಲ ಹೀಗಾಗಿ ಸತ್ಯದ ಕೊರಳಿಗೆ ಕುಣಿಕೆ ಬಿಗಿದರೂ ಅದೂ ನುಸುಳಾಡಿಕೊಂಡು ಹೊರಬರಲೆಬೇಕು ಹೊರಬರುತ್ತೆ ಬಿಡಿ. ಆದರೆ ದಾಸನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಾ, ಅಖಾಡದಲ್ಲಿ ಗೊಂದಲ ಸೃಷ್ಟಿಸುತ್ತಾ, ವಿವಾದ ಎಬ್ಬಿಸುವ ಘಟನೆಗಳನ್ನ ಡಿಬಾಸ್ ಭಕ್ತರ ಕೈಯಲ್ಲಿ ನೋಡೋದಕ್ಕೆ ಆಗ್ತಿಲ್ಲ ಹೀಗಾಗಿ ಭಕ್ತಬಳಗ ಕೆಂಡಾಮಂಡಲಗೊಂಡಿದೆ.

ಶನಿವಾರ ಬೆಳಗ್ಗೆಯಿಂದ ದೊಡ್ಮನೆ ಆಸ್ತಿ ಮೇಲೆ ದರ್ಶನ್ ಕಣ್ಣಿಟ್ಟಿದ್ದರಂತೆ ಎಂಬುದೇ ದೊಡ್ಡ ಚರ್ಚೆ. ಒಡಹುಟ್ಟಿದವರಿಗಿಂತ ಒಂದು ಕೈ ಮೇಲಾಗಿದ್ದ ಸಾರಥಿ ಹಾಗೂ ಉಮಾಪತಿ ನಡುವೆ ಮನಸ್ಥಾಪ ಮೂಡೋದಕ್ಕೆ, ಬಿರುಕು ಕಾಣಿಸಿಕೊಳ್ಳೋದಕ್ಕೆ, ಇಬ್ಬರು ಸ್ಟೇಷನ್ ಮೆಟ್ಟಿಲೇರೋದಕ್ಕೆ, ೨೫ ಕೋಟಿ ವಂಚನೆ ಪ್ರಕರಣ ಬೆಳಕಿಗೆ ಬರುವುದಕ್ಕೆ, ದೋಖಾ ಪ್ರಕರಣದಲ್ಲಿ ಒಂದು ವೇಳೆ ಉಮಾಪತಿಯವರ ಕೈವಾಡ ಇದೆ ಅಂತಾದರೆ ನಾನು ಅವರನ್ನೂ ಬಿಡೋದಿಲ್ಲ ಅಂತ ದಾಸ ಹೇಳಿದ್ದಕ್ಕೆ, ಸ್ನೇಹಿತರ ಜೊತೆ ಕುಳಿತು ಮೈಸೂರಿನಲ್ಲಿ ಪ್ರೆಸ್ಮೀಟ್ ಮಾಡಿದ್ದಕ್ಕೆ, ಇತ್ತ ಉಮಾಪತಿ ನಾನು ಬಾಯ್ಬಿಟ್ಟು ಆ ಮೂರು ವಿಷ್ಯ ಹೇಳಿದರೆ ಮಂಡ್ಯಗಿಂತ ಜಾಸ್ತಿ ವೈಬ್ರೇಷನ್ ಆಗುತ್ತೆ ಅಂತ ಹೇಳಿದ್ದಕ್ಕೆ, ಹೀಗೆ ಎಲ್ಲದಕ್ಕೂ ದೊಡ್ಮನೆ ಆಸ್ತಿ ಕೈತಪ್ಪಿರುವುದೇ ಎನ್ನುವುದು ಚರ್ಚೆಯಲ್ಲಿರುವ ವಿಷ್ಯ. ಆದರೆ, ಸತ್ಯಾಸತ್ಯತೆಯನ್ನು ಪರಾಮರ್ಶಿಸುವ ಮೊದಲೇ ಅಂತಿಮ ತೀರ್ಮಾನಕ್ಕೆ ಬರುವುದು ಅಕ್ಷಮ್ಯ ಅಪರಾದ ಅಲ್ಲದೇ ಮತ್ತೇನು ಅಲ್ಲ ಬಿಡಿ.

ದಾಸನಿಗೆ ೨೫ ಕೋಟಿ ದೋಖಾ ಪ್ರಕರಣ ಬೆಳಕಿಗೆ ಬಂದಾಗ, ದರ್ಶನ್‌ಗೆ ಅರುಣಕುಮಾರಿಯವರನ್ನು ಪರಿಚಯ ಮಾಡಿದ್ದು ನಿರ್ಮಾಪಕ ಉಮಾಪತಿಯವರು ಎನ್ನುವ ಸುದ್ದಿ ಹೊರಬಿದ್ದಾಗ ನೇರವಾಗಿ ಉಮಾಪತಿಯವರ ಕಡೆ ಎಲ್ಲರೂ ಬೊಟ್ಟುಮಾಡಿ ತೋರಿಸಿದ್ರು. ಚಕ್ರವರ್ತಿಯ ಆಸ್ತಿ ಹೊಡೆಯೋಕೆ ಅಥವಾ ದಚ್ಚುನಾ ಮೈಸೂರು ಸ್ನೇಹಿತರಿಂದ ದೂರ ಇಡೋದಕ್ಕೆ ನಿರ್ಮಾಪಕ ಉಮಾಪತಿಯವರು ಈ ರೀತಿ ಪ್ಲ್ಯಾನ್ ಮಾಡಿರ‍್ಬೋದು ಅಂತ ಎಲ್ಲರೂ ಮಾತನಾಡಿಕೊಂಡರು. ಇದೀಗ, ಉಮಾಪತಿಯವರು ಬಿಚ್ಚಿಟ್ಟ ದೊಡ್ಮನೆ ಆಸ್ತಿ ವಿಷ್ಯ ಕೇಳಿದ್ಮೇಲೆ ಬಹುತೇಕರು ಮಾತನಾಡ್ತಿರುವುದು ಹಾಗೂ ಬಜಾರ್‌ನಲ್ಲಿ ಚರ್ಚೆಯಾಗ್ತಿರೋದು ದೊಡ್ಮನೆ ಆಸ್ತಿ ತನ್ನ ಕೈ ಸೇರಲಿಲ್ಲ ಎನ್ನುವ ಕಾರಣಕ್ಕೆ ದಾಸದರ್ಶನ್ ರಾಬರ್ಟ್ ಪ್ರೊಡ್ಯೂಸರ್ ಮೇಲೆ ಹಗೆತನ ಸಾಧಿಸೋದಕ್ಕೆ ಹೊರಟರಾ? ತಮ್ಮನಂತಿದ್ದ ಉಮಾಪತಿ ವಿರುದ್ದ ದುಷ್ಮನಿಗೆ ನಿಂತ್ರಾ? ಹೀಗೆ ಏನೇನೋ ಚರ್ಚೆಗಳು ಆಗ್ತಿವೆ.

ಅಂದ್ಹಾಗೇ, ರಾಬರ್ಟ್ ಪ್ರೊಡ್ಯೂಸರ್ ಉಮಾಪತಿಯವರು ದೊಡ್ಮನೆ ಆಸ್ತಿ ವಿಷಯವನ್ನು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರ ಹೆಸರಲ್ಲಿದ್ದ ಪ್ರಾಪರ್ಟಿಯನ್ನ ನಾನು ಕೊಂಡುಕೊಂಡಿದ್ದೆ. ಈ ವಿಚಾರ ತಿಳಿದ ದರ್ಶನ್ ಅವರು ಆ ಪ್ರಾಪರ್ಟಿಯನ್ನು ತನಗೆ ಕೊಡಿ ಅಂತ ಕೇಳಿದರು. ಆದರೆ, ದೊಡ್ಮನೆ ಆಸ್ತಿಯನ್ನು ಬಿಟ್ಟುಕೊಡುವುದಕ್ಕೆ ನನಗೆ ಮನಸ್ಸು ಒಪ್ಪಲಿಲ್ಲ. ಅಷ್ಟಕ್ಕೂ ಒಬ್ಬ ಸ್ಟಾರ್ ನಟರಿಂದ ಪ್ರಾಪರ್ಟಿಯನ್ನು ಖರೀದಿ ಮಾಡಿ ಮಗದೊಬ್ಬ ಸ್ಟಾರ್ ನಟರಿಗೆ ಮಾರಿಕೊಳ್ಳುವುದು ಶೋಭೆ ತರುವಂತಹ ಕೆಲಸ ಅಲ್ಲ. ಹೀಗಾಗಿ ನಾನು ಕೊಡುವುದಕ್ಕೆ ಆಗಲ್ಲ ಬಾಸ್ ಎಂದೇ ಇದಕ್ಕೆ ಅವರು ಹೋಗಲಿ ಬಿಡಿ ನಿರ್ಮಾಪಕರೇ ಅಂತ ಸುಮ್ಮನಾದರು. ಇದಾದ್ಮೇಲೆ ಮತ್ತೆ ಯಾವತ್ತೂ ಕೂಡ ಆಸ್ತಿ ಬಗ್ಗೆ ಡಿಬಾಸ್ ನನ್ನ ಹತ್ತಿರ ಚರ್ಚೆ ಮಾಡಿಲ್ಲ, ನಾನೇ ಅವರಿಗೆ ದೊಡ್ಮನೆ ಪ್ರಾಪರ್ಟಿಯ ಬದಲಿಗೆ ಮಗದೊಂದು ಪ್ರಾಪರ್ಟಿಯನ್ನು ಕೊಡುತ್ತೇನೆ ಅಂತ ಹೇಳಿದ್ದೇನೆ. ಹೀಗಂತ ಖುದ್ದು ಉಮಾಪತಿಯವರು ಹೇಳಿದ್ಮೇಲೂ ಕೂಡ ದೊಡ್ಮನೆಯ ಆಸ್ತಿ ತನಗೆ ದಕ್ಕಲಿಲ್ಲ ಎನ್ನುವ ಕಾರಣಕ್ಕೆ ಉಮಾಪತಿಯವರ ವಿರುದ್ದ ಜಿದ್ದು ಸಾಧಿಸುತ್ತಿದ್ದಾರೆ ಅಂತೆಲ್ಲಾ ಕೆಲವರು ಸುದ್ದಿಮಾಡುತ್ತಿದ್ದಾರೆ.

ಅಷ್ಟಕ್ಕೂ, ದಾಸದರ್ಶನ್ ಸಣ್ಣಮನಸ್ಸಿನ ವ್ಯಕ್ತಿಯೂ ಅಲ್ಲ ಅಂತಹ ವ್ಯಕ್ತಿತ್ವವೂ ಅವರದ್ದಲ್ಲ. ಆಸ್ತಿ ಬೇಕು ಅಂದರೆ ಭೂಮಿ ಮೇಲೆ ಅಲ್ಲ ಆಕಾಶದಲ್ಲೂ ಖರೀದಿ ಮಾಡುವ ತಾಕತ್ತೂ ಜಗ್ಗುದಾದನಿಗಿದೆ. ಬೆಲೆಕಟ್ಟಲಾಗದ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಜಾಗ ಸಂಪಾದನೆ ಮಾಡಿರುವ ದಾಸ ಮಗದೊಬ್ಬ ಸ್ಟಾರ್ ನಟರ ಆಸ್ತಿಯ ಮೇಲೆ ಕಣ್ಣಾಕೋದು ಇರಲಿ ಬೇರೆ ಸ್ಟಾರ್‌ನಟರ ಫ್ಯಾನ್ಸ್ ಗಳನ್ನೂ ತನ್ನತ್ತ ಸೆಳಿಬೇಕು ಎನ್ನುವ ಕುತಂತ್ರವನ್ನ ಮಾಡೋದಿಲ್ಲ. ಹೀಗಿರುವಾಗ, ದೊಡ್ಮನೆ ಆಸ್ತಿ ತನಗೆ ದಕ್ಕಲಿಲ್ಲ ಎನ್ನುವ ಕಾರಣಕ್ಕೆ ಉಮಾಪತಿಯವರ ವಿರುದ್ದ ಜಿದ್ದು ಸಾಧಿಸ್ತಾರೆ, ಅವರ ವಿರುದ್ದ ಸಂಚು ರೂಪಿಸ್ತಾರೆ, ಅವರ ವಿರುದ್ದ ಇಲ್ಲಸಲ್ಲದ ಆರೋಪ ಮಾಡ್ತಾರೆ ಅಂತೆಲ್ಲಾ ಮಾತನಾಡಿಕೊಳ್ಳುವುದು ತಪ್ಪು.

ಒಂದ್ವೇಳೆ ದಾಸ ದೊಡ್ಮನೆಯ ಆಸ್ತಿ ಮೇಲೆ ಆಸೆಪಟ್ಟಿದ್ದು ನಿಜಾನೇ ಅಂತಾನೇ ತಿಳಿದುಕೊಳ್ಳೋಣ ಅದರಲ್ಲಿ ಏನ್ ತಪ್ಪು. ಅಷ್ಟಕ್ಕೂ, ಆಸ್ತಿ ಮೇಲೆ ಕಣ್ಣಿಡುವುದಕ್ಕೂ, ಆಸೆಪಟ್ಟು ಕೇಳಿ ಪಡೆಯುವುದಕ್ಕೂಅಜಗಜಾಂತರ ವ್ಯತ್ಯಾಸವಿದೆ. ಹೀಗಿರುವಾಗ ದರ್ಶನ್ ಆಸೆಪಟ್ಟು ನಿರ್ಮಾಪಕ ಉಮಾಪತಿಯವರ ಬಳಿ ಕೇಳಿದ್ದರಲ್ಲಿ ತಪ್ಪೇನಿದೆ. ಅಷ್ಟಕ್ಕೂ, ಅವರೇನು ಲಪಟಾಯಿಸೋಕೆ ನೋಡಿಲ್ಲವಲ್ಲ ದುಡ್ಡು ಕೊಟ್ಟು ಖರೀದಿ ಮಾಡೋದಕ್ಕೆ ಕೇಳಿದ್ದಾರೆ ಅವರು ಕೊಡಲ್ಲ ಅಂದಿದ್ದಾರೆ ಅಲ್ಲಿಗೆ ಮುಗೀತು. ಅದನ್ನು ಬಿಟ್ಟು ದೊಡ್ಮನೆಯವರನ್ನು ಹಾಗೂ ತೂಗುದೀಪ್ ಕುಟುಂಬವನ್ನು ಎತ್ತಿಕಟ್ಟುವ ಒಳಸಂಚು ರೂಪಿಸೋದ್ಯಾಕೆ.ಹೊಗೆಯಾಡದಿದ್ದರೂ ಕೂಡ ಕಡ್ಡಿಗೀರಿ ಚಳಿಕಾಯಿಸಿಕೊಳ್ಳುವ ಪ್ರಯತ್ನ ಮಾಡ್ತಿರೋದ್ಯಾಕೆ ಒಂದು ಗೊತ್ತಾಗ್ತಿಲ್ಲ.

ಎನಿವೇ, ಬೆಂಕಿಹಚ್ಚಿ ಮಜಾ ಉಡಾಯಿಸೋರ್ ಆಟ ಹೆಚ್ಚು ದಿನ ನಡೆಯಲ್ಲ ಒಂದಲ್ಲ ಒಂದು ದಿನ ತಾವೇ ಹೆಚ್ಚಿದ ಬೆಂಕಿಯ ಬಾಣಲೆಗೆ ಹಚ್ಚಿದವರೇ ಬೀಳಬೇಕು ಅಲ್ಲಿವರೆಗೂ ಕಾಯದೇ ಬೇರೆ ದಾರಿಯಿಲ್ಲ. ಆದರೆ ಒಂದಂತೂ ಸತ್ಯ ನೂರಾರು ಕೋಟಿಗೆ ಒಡೆಯನಾಗಿರುವ, ವರ್ಷಕ್ಕೆ ೩ ಕೋಟಿಯಂತೆ ಬಡಬಗ್ಗರಿಗೆ ದಾನ ಮಾಡುವ ಯಜಮಾನ ದೊಡ್ಮನೆ ಆಸ್ತಿ ಲಪಟಾಯಿಸಿಕೊಳ್ಳಬೇಕು ಎನ್ನುವ ಹಪಾಹಪಿ ಇರೋದಿಲ್ಲ ಬದಲಾಗಿ ಒಬ್ಬ ಅಭಿಮಾನಿಯಾಗಿ ಅಣ್ಣಾವ್ರ ಮೇಲಿನ ಅಭಿಮಾನ ಹಾಗೂ ದೊಡ್ಮನೆಯ ಸ್ಟಾರ್‌ಗಳ ಮೇಲಿರುವ ಪ್ರೀತಿಗೆ ಕಾಣಿಕೆಯಾಗಿ ಆ ಆಸ್ತಿಯನ್ನು ಖರೀದಿಸಿ ಜೋಪಾನ ಮಾಡ್ಬೇಕು ಎನ್ನುವ ಬಯಕೆ ಇದ್ದಿರಬಹುದು. ಅದನ್ನ ಅಪಾರ್ಥಮಾಡಿಕೊಂಡು ಇಲ್ಲಸಲ್ಲದ ಬಣ್ಣಕಟ್ಟಿ ಸಾರಥಿಯ ತೇಜೋವಧೆ ಮಾಡುವ ಕಾಯಕ ಒಳ್ಳೆಯದಲ್ಲ ಬಿಡಿ

Categories
ಸಿನಿ ಸುದ್ದಿ

ಕನ್ನಡದಲ್ಲಿ ವಾಯ್ಸ್‌ ಡಬ್‌ ಮಾಡ್ತಾ‌ರಂತೆ ಶ್ರೀಲಂಕಾ ಚೆಲುವೆ! ಜಾಕ್ವೆಲಿನ್‌ ಡ್ಯಾನ್ಸ್‌ ನೋಡಿ ಸುದೀಪ್‌ಗೂ ಸ್ಟೆಪ್‌ ಹಾಕುವ ಮನಸ್ಸಾಯ್ತಂತೆ

ಇತ್ತೀಚೆಗೆ ಸುದೀಪ್‌ ನಟನೆಯ “ವಿಕ್ರಾಂತ್ ರೋಣ” ಚಿತ್ರದ ಸಾಂಗ್‌ ಶೂಟಿಂಗ್‌ಗೆ ಎಂಟ್ರಿಯಾಗಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್, ಇದೀಗ ಚಿತ್ರೀಕರಣ ಮುಗಿಸಿ ಹೊರಟಿದ್ದಾರೆ. ಇದರ ಜೊತೆಯಲ್ಲೇ ನಿರ್ದೇಶಕ ಅನೂಪ್‌ ಭಂಡಾರಿ ಅವರು, ಜಾಕ್ವೆಲಿನ್‌ ಫರ್ನಾಂಡೀಸ್‌ ಕುರಿತು ಇನ್ನೊಂದು ಸುದ್ದಿ ಹೊರಹಾಕಿದ್ದಾರೆ.

ಹೌದು, ಜಾಕ್ವೆಲಿನ್‌ ಫರ್ನಾಂಡೀಸ್‌ ಅವರು, ಕೇವಲ ಡ್ಯಾನ್ಸ್‌ ಮಾತ್ರವಲ್ಲ, ಆಕ್ಟಿಂಗ್‌ ಕೂಡ ಮಾಡಿದ್ದಾರೆ. ಜಾಕ್ವೆಲಿನ್ ಈ ಚಿತ್ರದಲ್ಲಿ ಹಾಡಲ್ಲಿ ಡ್ಯಾನ್ಸ್‌ ಮಾತ್ರವಲ್ಲ, ನಟನೆ ಕೂಡ ಮಾಡಿದ್ದಾರೆ ಎಂಬ ಸುದ್ದಿ ಹೊರಹಾಕಿದ್ದಾರೆ. ಜಾಕ್ವೆಲಿನ್ ಸುದೀಪ್ ಸಿನಿಮಾದಲ್ಲಿ ಪಾತ್ರವೊಂದರಲ್ಲಿ ಬಣ್ಣ ಹಚ್ಚಿದ್ದು, ಡ್ಯಾನ್ಸ್ ಮಾಡುವುದರ ಜೊತೆಗೆ ಕೆಲವು ಸೀನ್‌ಗಳಲ್ಲಿ ನಟಿಸಿದ್ದಾರಂತೆ.


ಇನ್ನು, ಈ ಚಿತ್ರದ ಮತ್ತೊಂದು ಸುದ್ದಿ ಅಂದೆ, ಇದು ಪ್ಯಾನ್ ಇಂಡಿಯಾ ಸಿನಿಮಾ. ಜಾಕ್ವೆಲಿನ್ ಫರ್ನಾಂಡೀಸ್ ಅವರು ಕನ್ನಡದಲ್ಲೇ ಡಬ್ಬಿಂಗ್ ಮಾಡಲಿದ್ದಾರೆ ಎಂಬ ಸುದ್ದಿಯೂ ಇದೆ. ಅವರು ಕನ್ನಡ ಕಲಿತು ವಾಯ್ಸ್ ಡಬ್ ಮಾಡಲು ನಿರ್ಧರಿಸಿದ್ದಾರೆ. ಇದು ನಿಜಕ್ಕೂ ಸ್ವಾಗತರ್ಹ ಮತ್ತು ಖುಷಿಯ ವಿಚಾರ. ಈ ಕುರಿತಂತೆ ನಿರ್ದೇಶಕ ಅನೂಪ್‌ ಭಂಡಾರಿ ಅವರು, “ನಿಮ್ಮೊಂದಿಗೆ ಕೆಲಸ ಮಾಡಿದ್ದು ನಿಜಕ್ಕೂ ಖುಷಿ ತಂದಿದೆ.

ಶೀಘ್ರದಲ್ಲಿ ನಿಮ್ಮ ಪಾತ್ರದ ಹೆಸರು ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡುತ್ತೇವೆ. ಡಬ್ಬಿಂಗ್ ವೇಳೆ ಮತ್ತೊಮ್ಮೆ ಸಿಗೋಣ” ಎಂದು ಟ್ವೀಟ್‌ ಮಾಡಿದ್ದಾರೆ. ಅತ್ತ, ಜಾಕ್ವೆಲಿನ್‌ಗೆ ಸುದೀಪ್‌ ಕೂಡ ಥ್ಯಾಂಕ್ಸ್ ಹೇಳಿದ್ದಾರೆ. ಅವರೂ ಟ್ವೀಟ್ ಮಾಡಿದ್ದು, ”ನಮ್ಮ ಸಿನಿಮಾದ ಹಾಡಿಗೆ ಜೋಶ್ ತುಂಬಿದ್ದಕ್ಕೆ ಧನ್ಯವಾದ ಜಾಕ್ವೆಲಿನ್ ಫರ್ನಾಂಡೀಸ್. ನಿಮ್ಮ ನೃತ್ಯ ನನ್ನನ್ನೂ ಒಂದೆರಡು ಸ್ಟೆಪ್ ಹಾಕುವಂತೆ ಪ್ರೇರೇಪಿಸಿತು. ನಿಮಗೆ ಶುಭವಾಗಲಿ” ಎಂದಿದ್ದಾರೆ.

Categories
ಸಿನಿ ಸುದ್ದಿ

ಇಲ್ಲಿ ಯಾರು ಹೀರೋ ಮಾಡಲ್ಲ ನಮಗೆ ನಾವೇ ಹೀರೋ ಆಗ್ಬೇಕ್ ! ಹೀರೋ ಆಗೋಕೆ ನವೀನ ಸಜ್ಜು!!

ಇಲ್ಲಿ ಯಾರು ಹೀರೋ ಮಾಡಲ್ಲ ನಮಗೆ ನಾವೇ ಹೀರೋ ಆಗ್ಬೇಕ್… ಇದು ರಾಕಿಂಗ್ ಸ್ಟಾರ್ ಯಶ್ ಅವರ ಎವರ್‌ಗ್ರೀನ್ ಡೈಲಾಗ್. ಡೈಲಾಗ್ ಹೊಡೆದಂತೆ ಗಂಧದ ಗುಡಿಯಲ್ಲಿ ನಾಯಕನ ಪಟ್ಟಕ್ಕೇರಿದರು. ತಮ್ಮ ವಿಶಿಷ್ಟ ಹಾಗೂ ವಿಭಿನ್ನ ಮ್ಯಾನರಿಸಂನಿಂದ ಸೂಪರ್‌ಸ್ಟಾರ್ ಎನಿಸಿಕೊಂಡರು “ಕೆಜಿಎಫ್” ಮೂಲಕ ನ್ಯಾಷನಲ್ ಸ್ಟಾರ್ ಆದರು. ಇದೀಗ “ಕೆಜಿಎಫ್ ಚಾಪ್ಟರ್-2ʼ ಮೂಲಕ ಇಂಟರ್‌ನ್ಯಾಷನಲ್ ಸ್ಟಾರ್ ಆಗೋದಕ್ಕೆ ಹೊರಟಿದ್ದಾರೆ. ಅಷ್ಟಕ್ಕೂ, ಅಣ್ತಮ್ಮನ ಎವರ್‌ಗ್ರೀನ್ ಡೈಲಾಗ್‌ನ ನೆನಪು ಮಾಡಿಕೊಳ್ಳೋದಕ್ಕೆ ಕಾರಣ ಗಾಯಕ ನವೀನ್ ಸಜ್ಜು .

ಸ್ವರಮಾಧುರ್ಯದಿಂದಲೇ ಬ್ರ್ಯಾಂಡ್ ಆದವರು ನವೀನ್ ಸಜ್ಜು!

ನವೀನ್ ಸಜ್ಜು ಸ್ಯಾಂಡಲ್‌ವುಡ್‌ನ ಸಿಂಗರ್ ಕಮ್ ಮ್ಯೂಸಿಕ್ ಕಂಪೋಸರ್. ತಮ್ಮ ವಿಶಿಷ್ಟ ಹಾಗೂ ವಿಭಿನ್ನ ಕಂಠಸಿರಿಯಿಂದಲೇ ಸ್ವಂತ ಬ್ರ್ಯಾಂಡ್ ಆಗಿರೋ ನವೀನ್ ಸಜ್ಜು, ಈಗ ನಮಗೆ ನಾವೇ ಹೀರೋ ಆಗ್ಬೇಕ್ ಅಂತಿದ್ದಾರೆ. ನವೀನ್ ಹೀರೋ ಆಗ್ತಿದ್ದಾರೆ ಅನ್ನೋ ಸುದ್ದಿ ಇವತ್ತು ನಿನ್ನೆಯದಲ್ಲ. “ಬಿಗ್‌ಬಾಸ್” ರನ್ನರ್ ಅಪ್ ಪಟ್ಟಕ್ಕೇರಿದಾಗಿನಿಂದಲೂ ಮುಖಕ್ಕೆ ಬಣ್ಣ ಹಚ್ಚುತ್ತಾರೆ, ಹೀರೋ ಆಗಿ ಗಾಂಧಿನಗರದಲ್ಲಿ ಕಟೌಟ್ ಹಾಕಿಸಿಕೊಳ್ತಾರೆ ಅನ್ನೋ ಸುದ್ದಿ ಇತ್ತು. ಆದ್ರೆ, ಎಲ್ಲಾ ಅಂದುಕೊಂಡಂತೆ ಆಗಲಿಲ್ಲ ಹೀಗಾಗಿ ಸಿಂಗಿಂಗ್ ಕರಿಯರ್‌ನ ಕಂಟಿನ್ಯೂ ಮಾಡಿದರು. ಈ ನಡುವೆ “ದುನಿಯಾ” ವಿಜಯ್ ತಮ್ಮ ಕನಕ' ಚಿತ್ರದಲ್ಲಿ ನವೀನ್‌ರನ್ನ ಸಂಗೀತ ನಿರ್ದೇಶಕನ ಪಟ್ಟಕ್ಕೇರಿಸಿದರು.

ಮ್ಯೂಸಿಕ್ ಕಂಪೋಸರ್ ಆಗಿ ನವೀನ್ ಸೈ ಎನಿಸಿಕೊಂಡರು. "ಎಣ್ಣೆ ನಮ್ದು ಊಟ ನಿಮ್ದು" ಹಾಡಿನ ಮೂಲಕ ಮ್ಯೂಸಿಕ್ ಲೋಕದಲ್ಲಿ ಬ್ರ್ಯಾಂಡ್ ಆದರು. ಕನಕ’ ನಂತರ “ದುನಿಯಾ” ವಿಜಯ್ ನಿರ್ದೇಶನದ ಸಲಗ' ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.ಸಂಜನ ಐ ಲವ್ ಯೂ ಸಂಜನ’ ಹಾಡಿಗೆ ಕ್ಯಾಚಿ ಟ್ಯೂನ್ ಹಾಕಿ ಕುಣಿಸಿದ್ದಾರೆ. ಈಗಾಗಲೇ ಆ ಸಾಂಗ್ ಬಜಾರ್‌ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ವಿಜಯ್ ಹಾಗೂ ಸಂಜನಾ ಆನಂದ್ ಕಾಂಬಿನೇಷನ್ ಸಾಂಗ್ ಕಿಕ್ಕೇರಿಸ್ತಿದೆ. ಬಹದ್ದೂರ್ ಚೇತನ್ ಸಾಹಿತ್ಯವಿರುವ ಈ ಹಾಡು ಲವ್‌ಬರ್ಡ್ಸ್ ಹಾರ್ಟ್ನ ಮೆಲ್ಟ್ ಮಾಡ್ತಿದೆ.

ನವೀನ್ ಸಜ್ಜು ಈ ಹಾಡು ನಿಮ್ಮೆಲ್ಲರ ಹೃದಯ ತಟ್ಟುತ್ತೆ !

ಹೀಗೆ ಸಿಂಗರ್ ಆಗಿ ಮ್ಯೂಸಿಕ್ ಕಂಪೋಸರ್ ಆಗಿ ಹಲ್‌ಚಲ್ ಎಬ್ಬಿಸುತ್ತಿರುವ ನವೀನ್ ಸಜ್ಜು ಎಮೋಷನಲ್ ಹಾಡಿಗೆ ಧ್ವನಿಯಾಗಿ ಎಲ್ಲರ ಹಾರ್ಟ್ನ ಟಚ್ ಮಾಡಿದ್ದಾರೆ. “ಸೌದೆಯ ಮರೆಯಲ್ಲಿ ಸುಟ್ಟು ಕರುಕಾಗೋ ಜೀವಕ್ಕೆ.. ಬಯಕೆಗಳೆಷ್ಟೋ ಜೀವ ಕಂಡುಂಡ ಆಸೆಗಳೆಷ್ಟೋ…” ಲಿಂಗದೇವರ ಹಳೆಮನೆಯವರ ಸಾಹಿತ್ಯ ಜನಾರ್ಧನ್ ಜನ್ನಿಯವರ ಸಂಗೀತವಿರುವ ಈ ಹಾಡನ್ನು ನಾಟಕದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಇದೀಗ ಈ ಹಾಡನ್ನ ತಮ್ಮದೇ ಶೈಲಿಯಲ್ಲಿ ನವೀನ್ ಹಾಡಿದ್ದಾರೆ.

ಮೆರವಣಿಗೆ ಹೊರಡುವ ಮೊದಲೇ ಮೂರ‍್ಮೂರು ಸಿನಿಮಾ !

ಇಷ್ಟೆಲ್ಲಾ ಹೇಳಿದ್ಮೇಲೆ `ಇಲ್ಲಿ ಯಾರು ಹೀರೋ ಮಾಡಲ್ಲ ನಮಗೆ ನಾವೇ ಹೀರೋ ಆಗ್ಬೇಕ್’ ಹೀಗಂತಿರೋ ನವೀನ್ ಸಜ್ಜು ಅವರ ನಯಾ ಕಥೆಯನ್ನ ನಿಮಗೆ ಹೇಳಲೆಬೇಕು. ಯಸ್, ಸಿಂಗರ್ ಕಮ್ ಮ್ಯೂಸಿಕ್ ಕಂಪೋಸರ್ ನವೀನ್ ಹೀರೋ ಆಗ್ತಿದ್ದಾರೆ. ನಾಯಕನಾಗಿ ಬೆಳ್ಳಿತೆರೆ ಮೇಲೆ ದಿಬ್ಬಣ ಹೊರಡುವುದಕ್ಕೆ ಮೊದಲೇ ನವೀನ್‌ಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಅರಸಿಕೊಂಡು ಬರುತ್ತಿವೆಯಂತೆ. ಮ್ಯಾನ್ಶನ್ ಹೌಸ್ ನವೀನ್ ಸಜ್ಜು ನಾಯಕರಾಗುತ್ತಿರುವ ಮೊದಲ ಚಿತ್ರ. ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ನಿರ್ದೇಶಕ ಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.

ಆದಿಚುಂಚನಗಿರಿಯಲ್ಲಿ ಮುಹೂರ್ತ ನೆರವೇರಿದೆ. ಪ್ರಕೃತಿ ಪ್ರೇಮಿಯಾಗಿ ನವೀನ್ ಇಲ್ಲಿ ಕಾಣಿಸಿಕೊಳ್ತಾರೆ. ಚಿತ್ರದ ತಾರಾಬಳಗ ನಾಯಕಿ ಆಯ್ಕೆ ಇನ್ನಷ್ಟೇ ಹೊರ ಬೀಳಬೇಕಿದೆ.
“ಮ್ಯಾನ್ಶನ್ ಹೌಸ್” ಜೊತೆ ಇನ್ನೂ ಎರಡು ಚಿತ್ರಗಳು ನವೀನ್ ಕೈಯಲ್ಲಿವೆ. ನಟನೆ ಜೊತೆಗೆ ಸಂಗೀತ ನಿರ್ದೇಶನ ಹಾಗೂ ಗಾಯಕರಾಗಿಯೂ ನವೀನ್ ಕೆಲಸ ಮಾಡೋದಕ್ಕೆ ಸಿದ್ದರಾಗಿದ್ದಾರೆ. ಇಲ್ಲಿವರೆಗೂ ೨೦೦ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಕನಕ ಹಾಗೂ ಸಲಗ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಈಗ ನಾಯಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡ್ತಿದ್ದಾರೆ. ಬೆಳ್ಳಿಪರದೆ ಮೇಲೆ ಸ್ವಂತ ಬ್ರ್ಯಾಂಡ್ ನವೀನ್ ಸಜ್ಜು ಅಬ್ಬರ ಆರ್ಭಟ ಹೇಗಿರುತ್ತೆ ? ವೇಯ್ಟ್ ಅಂಡ್ ಸೀ

Categories
ಸಿನಿ ಸುದ್ದಿ

ಸಂಚಾರಿ ವಿಜಯ್ ಹುಟ್ಟುಹಬ್ಬಕ್ಕೆ ‘ಲಂಕೆ’ ಪೋಸ್ಟರ್ ಬಿಡುಗಡೆ

ಜುಲೈ 17 ನಟ ಸಂಚಾರಿ ವಿಜಯ್ ಅವರ ಹುಟ್ಟುಹಬ್ಬ. ಲೂಸ್ ಮಾದ ಯೋಗೇಶ್ ನಾಯಕನಾಗಿ ನಟಿಸಿರುವ “ಲಂಕೆ” ಚಿತ್ರದ ಪ್ರಮುಖಪಾತ್ರದಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ. ವಿಜಯ್ ಅವರ ಹುಟ್ಟುಹಬ್ಬದ ನೆನಪಿಗಾಗಿ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ “ಲಂಕೆ” ಚಿತ್ರದ ಮೋಷನ್ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.ಸರ್ಕಾರ ಚಿತ್ರಮಂದಿರಗಳ ಆರಂಭಕ್ಕೆ ಅನುಮತಿ ನೀಡಿದರೆ, ಸೆಪ್ಟೆಂಬರ್ ನಲ್ಲಿ “ಲಂಕೆ” ಚಿತ್ರ ತೆರೆಗೆ ಬರಲಿದೆ.

ಸಾಹಸ ಪ್ರಧಾನ ಈ ಚಿತ್ರವನ್ನು ರಾಮ್ ಪ್ರಸಾದ್ ಎಂ.ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ರಾಮ್ ಪ್ರಾಸಾದ್ ಹಾಗೂ ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ.

ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ಪಟೇಲ್ ಶ್ರೀನಿವಾಸ್(ನಾಗವಾರ) ಹಾಗೂ ಸುರೇಖ ರಾಮಪ್ರಸಾದ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.ಕಾರ್ತಿಕ್ ಶರ್ಮಾ ಸಂಗೀತ ನೀಡಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳು ಹಾಗೂ ಎರಡು ಬಿಟ್ಸ್ ಗಳಿವೆ.

ರಮೇಶ್ ಬಾಬು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ರವಿವರ್ಮ, ಪಳನಿರಾಜ್, ಅಶೋಕ್ ಸಾಹಸ ನಿರ್ದೇಶನ ಹಾಗೂ ಧನಂಜಯ್, ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಲೂಸ್ ಮಾದ ಯೋಗೇಶ್ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ಇತ್ತೀಚೆಗೆ ನಿಧನರಾದ ಸಂಚಾರಿ ವಿಜಯ್ ಸಹ ಈ‌ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.ಕೃಷಿ ತಾಪಂಡ, ಕಾವ್ಯ ಶೆಟ್ಟಿ, ಶರತ್ ಲೋಹಿತಾಶ್ವ, ಶೋಭ್ ರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್, ವಾಣಿಶ್ರೀ, ಗಾಯಿತ್ರಿ ಜಯರಾಂ, ಎಸ್ಟರ್ ನರೋನ, ಪ್ರಶಾಂತ್ ಸಿದ್ದಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

`ಲಗಾಮ್’ ಹಾಕಲು ಉಪ್ಪಿ ಹಿಂದೆ ಹೊರಟ ಹರಿಪ್ರಿಯಾ !

ಸ್ಯಾಂಡಲ್‌ವುಡ್ ಅಂಗಳದಲ್ಲಿ ಲಗಾಮ್' ಟೈಟಲ್‌ನಿಂದಲೇ ಸಖತ್ ಸೌಂಡ್ ಮಾಡ್ತಿರುವ ಹಾಗೂ ಚರ್ಚೆಗೆ ಗ್ರಾಸವಾಗಿರುವ ಚಿತ್ರ. ರಿಯಲ್‌ಸ್ಟಾರ್ ಉಪೇಂದ್ರ ಬಣ್ಣಹಚ್ಚುತ್ತಿರುವ ಕಾರಣಕ್ಕೆ ಮತ್ತಷ್ಟು ಕ್ಯೂರಿಯಾಸಿಟಿ ಹಾಗೂ ನಿರೀಕ್ಷೆ ಹೆಚ್ಚಿದೆ. ಪ್ರಜಾಕೀಯವನ್ನು ಅಸ್ತಿತ್ವಕ್ಕೆ ತರಲು ಹೊರಟಿರುವ ಬುದ್ದಿವಂತ ಉಪ್ಪಿಯವರು ಯಾವುದಕ್ಕೆ ಲಗಾಮ್ ಹಾಕಲು ಹೊರಟರಪ್ಪ ಎನ್ನುವ ಪ್ರಶ್ನೆ ಉದ್ಭವವಾಗಿದೆ. ರಾಜಕೀಯ ವಿಡಂಭನೆ ಹಾಗೂ ಹಣ ವರ್ಗಾವಣೆ ಕುರಿತಾದ ಚಿತ್ರ ಎನ್ನುವ ಸುದ್ದಿ ಹರಿದಾಡುತ್ತಿದ್ದರೂ ಕೂಡ `ಲಗಾಮ್’ ತಿರುಳನ್ನ ಚಿತ್ರತಂಡ ಗೌಪ್ಯವಾಗಿಡುವ ಪ್ರಯತ್ನ ಪಡುತ್ತಿದೆ. ಇಡೀ ದೇಶವನ್ನೇ ಕಾಡುತ್ತಿರುವ ಸಮಸ್ಯೆಯ ಸುತ್ತ `ಲಗಾಮ್’ ಚಿತ್ರಕಥೆ ಎಣೆಯಲಾಗಿದೆ ಅನ್ನೋ ಸೀಕ್ರೇಟ್ ಚಿತ್ರತಂಡ ಬಿಟ್ಟುಕೊಟ್ಟಿದೆ.

ಪೊರ್ಕಿ-ರಾಮ್-ಪವರ್-ಬೃಂದಾವನ-ಹುಡುಗರು ಸೇರಿದಂತೆ ಹಲವು ಸೂಪರ್‌ಹಿಟ್ ಸಿನಿಮಾಗಳ ಸಾರಥಿ ಕೆ ಮಾದೇಶ್ ಲಗಾಮ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಯೂನಿವರ್ಸಲ್ ಸಬ್ಜೆಕ್ಟ್ ವುಳ್ಳ ಕಥೆ ಇದಾಗಿರೋದ್ರಿಂದ ಬಹುಭಾಷೆಯಲ್ಲಿ ತೆರೆಗೆ ತರ‍್ಬೇಕು ಎನ್ನುವ ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಕಳೆದ ಹತ್ತು ದಿನಗಳಿಂದ ಚಿತ್ರೀಕರಣ ಭರದಿಂದ ಸಾಗ್ತಿದ್ದು, ಸದ್ಯ ಬೆಂಗಳೂರಿನ ಹೆಬ್ಬಾಳದ ಬಳಿ ಇರುವ ವೈಟ್‌ಹೌಸ್‌ನಲ್ಲಿ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ನಡೆಯುತ್ತಿದೆ. ಫೇಮಸ್ಸ್ ಫೈಟ್ ಮಾಸ್ಟರ್ ರವಿವರ್ಮಾ ರಿಯಲ್‌ಸ್ಟಾರ್‌ಗೆ ಆಕ್ಷನ್ ಕೊರಿಯಾಗ್ರಫಿ ಮಾಡ್ತಿದ್ದಾರೆ. ಚಿತ್ರದಲ್ಲಿ ಒಟ್ಟು ನಾಲ್ಕು ಆಕ್ಷನ್ ಬ್ಲಾಕ್ ಸೀಕ್ವೆನ್ಸ್ ಗಳಿದ್ದು ರವಿವರ್ಮಾ ಕಂಪೋಸ್ ಮಾಡಲಿದ್ದಾರೆ. ಭರ್ತಿ 35 ದಿನಲಗಾಮ್’ ಚಿತ್ರಕ್ಕೆ ಕಾಲ್‌ಶೀಟ್ ಕೊಟ್ಟಿದ್ದಾರೆ.

ಲಗಾಮ್’ ಹಾಕಲಿಕ್ಕೆ ಹೊರಟಿರುವ ರಿಯಲ್‌ಸ್ಟಾರ್ ಉಪ್ಪಿಗೆ ಹರಿಪ್ರಿಯಾ ಸಾಥ್ ನೀಡಲಿದ್ದಾರೆ. ಮೊದಲ ಭಾರಿಗೆ ಸೂಪರ್‌ಸ್ಟಾರ್ ಉಪ್ಪಿಗೆ ಜೋಡಿಯಾಗ್ತಿರುವ ಹರಿಪ್ರಿಯಾ ಸಖತ್ ಎಕ್ಸೈಟ್ ಆಗಿದ್ದಾರೆ. ಲಗಾಮ್ ಚಿತ್ರದಲ್ಲಿ ನಂದು ಇನ್ವೆಸ್ಟಿಗೇಷನ್ ಜರ್ನಲಿಸ್ಟ್ ಪಾತ್ರ. ನನ್ನ ಸಿನಿಕರಿಯರ್‌ನಲ್ಲಿ ಫಸ್ಟ್ ಟೈಮ್ ಜರ್ನಲಿಸ್ಟ್ ಆಗಿ ಕಾಣಿಸಿಕೊಳ್ತಿದ್ದು ಈ ಪಾತ್ರ ಹೊಸ ಅನುಭವ ನೀಡ್ತಿದೆ ಅಂತಾರೇ. ರಂಗಾಯಣ ರಘು, ಸಾಧುಕೋಕಿಲ, ಅವಿನಾಶ್, ಜಾನಿ ಕುಟ್ಟಪ್ಪ, ಶೋಭರಾಜ್ ಸೇರಿದಂತೆ ಅದ್ದೂರಿ ತಾರಾಬಳಗವೇ ಈ ಚಿತ್ರದಲ್ಲಿದೆ.

ಮೈಸೂರು- ಬೆಂಗಳೂರು ಸುತ್ತಮುತ್ತ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಿರುವ ಚಿತ್ರತಂಡ ಸಾಂಗ್ ಶೂಟಿಂಗ್‌ಗಾಗಿ ವಿದೇಶಕ್ಕೆ ಹಾರುವ ಪ್ಲ್ಯಾನ್ ಹಾಕಿಕೊಂಡಿದೆ. ಸಾಧುಕೋಕಿಲ ಹಾಗೂ ಅವರ ಪುತ್ರ ಸುರಾಗ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ರಾಜೇಶ್ ಅರಸ್ ಕ್ಯಾಮೆರಾ ಕೈಚಳಕದಲ್ಲಿ `ಲಗಾಮ್’ ಚಿತ್ರೀಕರಣಗೊಳ್ಳುತ್ತಿದೆ. ಎಂ ಆರ್ ಗೌಡ ನಿರ್ಮಾಣದಲ್ಲಿ ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣಗೊಳ್ಳುತ್ತಿದೆ.ಹೈ ಬಜೆಟ್‌ನಲ್ಲಿ ಅದ್ದೂರಿಯಾಗಿ ನಿರ್ಮಾಣಗೊಳ್ತಿರುವ ಈ ಚಿತ್ರ ಕನ್ನಡದ ಲಗಾನ್ ಆಗಲಿದೆಯಂತೆ. ಎಲ್ಲಾ ಅಂದುಕೊಂಡಂತೆ ತಯ್ಯಾರಾದರೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಮಾಡ್ಬೇಕು ಅನ್ನೋದು ಚಿತ್ರತಂಡದ ಅಭಿಪ್ರಾಯ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಬುಕ್ ಮೈ ಶೋ ನಲ್ಲಿ ರಿವೈಂಡ್ ಶೋ ; ಇದನ್ನೇ ಅನುಸರಿಸಲು ನಿರ್ಮಾಪಕರ ಒಲವು

ಈಗಂತೂ ಓಟಿಟಿಗಳದ್ದೇ ಹವಾ. ಕನ್ನಡ ಸಿನಿಮಾಗಳಿಗೆ ಅದೊಂದು ರೀತಿ ನಿಟ್ಟುಸಿರಿನ ತಾಣ. ಹೌದು, ಕೆಲವು ಒಳ್ಳೆಯ ಚಿತ್ರಗಳು ಓಟಿಟಿಯಲ್ಲಿ ಬಿಡುಗಡೆಯಾಗಿವೆ. ಇನ್ನೂ ಕೆಲವು ಸಿನಿಮಾಗಳು ನೇರವಾಗಿಯೇ ಓಟಿಟಿ ಫ್ಲಾಟ್‌ಫಾರಂನಲ್ಲಿ ಯಶಸ್ವಿಯಾಗಿವೆ. ಈಗ “ರಿವೈಂಡ್”‌ ಕೂಡ ಸೇರಿದೆ.

ಹೌದು, ತೇಜ್ ನಿರ್ಮಿಸಿ, ನಿರ್ದೇಶನ ಮಾಡಿ ನಾಯಕರಾಗಿ ಅಭಿನಯಿಸಿದ್ದ, “ರಿವೈಂಡ್” ಚಿತ್ರ ಲಾಕ್ ಡೌನ್ ಗೂ ಕೆಲವೇ ದಿನಗಳ ಮುಂಚೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.
ಲಾಕ್ ಡೌನ್ ಜಾರಿಯಾದ ಕಾರಣ ಚಿತ್ರಮಂದಿರಗಳನ್ನು‌ ಮುಚ್ಚಲಾಯಿತು. ಇದರಿಂದ ಸಾಕಷ್ಟು ತೊಂದರೆಯಾಯಿತು.
ಇದಾದ ಕೆಲವು ದಿನಗಳಲ್ಲಿ ಬುಕ್ ಮೈ ಶೋ ಓಟಿಟಿ ಫ್ಲಾಟ್ ಫಾರಂ ತೆರೆದು ಅದರಲ್ಲಿ ‌ಚಿತ್ರ ಬಿಡುಗಡೆ ಮಾಡುವುದಕ್ಕೆ ಅವಕಾಶ ಕಲ್ಪಿಸಿದ್ದು ಗೊತ್ತೇ ಇದೆ.

ಅಲ್ಲಿ ಇಂತಿಷ್ಟು ಟಿಕೇಟ್ ದರ ನಿಗದಿ ಪಡಿಸಿದ್ದಾರೆ. ಅದರಂತೆಯೇ ಈಗ ಬುಕ್ ಮೈ ಶೋನಲ್ಲಿ “ರಿವೈಂಡ್” ಚಿತ್ರ‌ ಬಿಡುಗಡೆಯಾಗಿದೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುವರ್ಣ ವಾಹಿನಿಗೆ ಚಿತ್ರದ ಹಕ್ಕು ಮಾರಾಟವಾಯಿತು. ಈಗ ಚಿತ್ರ ಬಿಡುಗಡೆ ‌ಮಾಡಲು ನೆಟ್ ಫ್ಲಿಕ್ಸ್ ನಿಂದ ಆಫರ್ ಬಂದಿದೆ ಎಂಬುದು ತೇಜ ಅವರ ಮಾತು.


ಸೌದಿ ಹಾಗೂ ಅರಬ್ ರಾಷ್ಟಗಳಲ್ಲೂ “ರಿವೈಂಡ್” ರಿಲೀಸ್ ಆಗಲಿದೆ. ಈ ರೀತಿಯ ಬಿಡುಗಡೆ ವಿಷಯ ತಿಳಿದ ಸಾಕಷ್ಟು ಕನ್ನಡ ‌ ನಿರ್ಮಾಪಕರು‌ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ.
ರಿವೈಂಡ್ ಚಿತ್ರದ ಯಶಸ್ಸನ್ನು ಹಂಚಿಕೊಳಲು‌ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ “ಗಣಿ ಬಿ ಕಾಂ”, ” ಗಜಾನನ ಗ್ಯಾಂಗ್ ” ಚಿತ್ರಗಳ ನಿರ್ಮಾಪಕ ಕುಮಾರ್ ಸೇರಿದಂತೆ,

“ಶಾರ್ದೂಲ” ಚಿತ್ರ ನಿರ್ಮಾಪಕ ರೋಹಿತ್, ಸಂಕಲನಕಾರ – ನಿರ್ದೇಶಕ ನಾಗೇಂದ್ರ ಅರಸ್, ನಿರ್ದೇಶಕ ಪ್ರವೀಣ್ ನಾಯಕ್, ನಿರ್ದೇಶಕ ಜೆ.ಜಿ.ಶ್ರೀನಿವಾಸ್ ,ರಿವೈಂಡ್ ಚಿತ್ರವನ್ನು ದುಬೈನಲ್ಲಿ ಬಿಡುಗಡೆ ಮಾಡುತ್ತಿರುವ ಡಾ.ರಾಜನ್ ಅವರು ಹಾಜರಿದ್ದು, ತಮ್ಮ ಅಭಿಪ್ರಾಯ ಹಂಚಿಕೊಂಡರು. ತೇಜ್, ಚಂದನ, ಧರ್ಮ, ಸಂದೀಪ್ ಮಲಾನಿ “ರಿವೈಂಡ್” ಚಿತ್ರದ ಕುರಿತು ಹೇಳಿಕೊಂಡರು.

Categories
ಸಿನಿ ಸುದ್ದಿ

ಸಪ್ಲೈಯರ್‌ ಮೇಲೆ ಸಾರಥಿ ಕೈ ಮಾಡಿದ್ದು ನಿಜಾನಾ? ಅದು ಸುಳ್ಳು ಅಂತಾರೇ ಸಂದೇಶ್ ! ಸಾರಥಿ ಹೇಳಿದ್ದೇನು ಗೊತ್ತಾ ?

ಸ್ಯಾಂಡಲ್‌ವುಡ್ ಸಾರಥಿ ಕೋಟ್ಯಾಂತರ ಅಭಿಮಾನಿಗಳ ಪಾಲಿನ ಚಕ್ರವರ್ತಿ. ತಮ್ಮ ಸ್ನೇಹಿತರ ಜೊತೆ ಸೇರಿಕೊಂಡು ಪ್ರಿನ್ಸ್ ಹೋಟೆಲ್‌ನ ಸಪ್ಲೈಯರ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್‌ನ ಮಾಲೀಕರಾದ ಸಂದೇಶ್ ಅವರು ಸಾರಥಿ ಅಂಡ್ ಸ್ನೇಹಿತರ ಮೇಲೆ ಕೇಳಿ ಬರುತ್ತಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ. ಹಾಗಾದ್ರೆ, ಇಂದ್ರಜಿತ್ ಲಂಕೇಶ್ ಮಾಡ್ತಿರುವ ಆರೋಪದಲ್ಲಿ ಹುರುಳಿಲ್ಲವಾ? ಪ್ರಿನ್ಸ್ ಮಾಲೀಕರು ಬಿಚ್ಚಿಟ್ಟ ಸತ್ಯವೇನು? ಅಷ್ಟಕ್ಕೂ, ಸಾರಥಿ ಸುತ್ತಾಮುತ್ತಾ ಏನಾಗ್ತಿದೆ ಆ ಸುದ್ದಿಯ ಡಿಟೈಲ್ಸ್ ಇಲ್ಲಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುತ್ತ‌ಮುತ್ತಾ ಏನೇನ್ ನಡೆಯುತ್ತಿದೆಯೋ ಒಂದಕ್ಕೂ ಕ್ಲಾರಿಟಿ ಸಿಗ್ತಿಲ್ಲ. ಸಾರಥಿ ಹೆಸರಲ್ಲಿ ೨೫ ಕೋಟಿ ಎಗರಿಸೋದಕ್ಕೆ ಸ್ಕೆಚ್ ಹಾಕಿರೋ ಗ್ಯಾಂಗ್ ಬಗ್ಗೆ ಅಸಲಿಯತ್ತು ಹೊರ ಬೀಳುವುದಕ್ಕಾಗಿ ಎಲ್ಲರೂ ಕಾಯ್ತಿರುವ ಹೊತ್ತಲ್ಲಿ, ಒಡೆಯನ ವಿರುದ್ದವೇ ಗಂಭೀರ ಆರೋಪ ಕೇಳಿಬರುತ್ತಿದೆ. ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್‌ನ ದಲಿತ ಸಪ್ಲೈಯರ್‌ಗೆ ಹೊಡೆದಿದ್ದಾರೆ ಅಂತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೊಸ ಬಾಂಬ್ ಸಿಡಿಸಿದ್ದಾರೆ. ಹರ್ಷ ಮೆಲೆಂಟಾ, ರಾಕೇಶ್ ಪಾಪಣ್ಣ ಸೇರಿದಂತೆ ತಮ್ಮ ಮೈಸೂರಿನ ಸ್ನೇಹಿತರ ಜೊತೆಗೆ ಸೇರಿಕೊಂಡು ವೇಯ್ಟರ್ ವಿರುದ್ದ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಸಪ್ಲೈಯರ್‌ಗೆ ಗಂಭೀರ ಗಾಯಗಳಾಗಿವೆ ಕಣ್ಣಿಗೆ ಬಲವಾಗಿ ಪೆಟ್ಟು ಬಿದ್ದಿದ್ದು, ಪ್ರಕರಣವನ್ನು ಮುಚ್ಚಿ ಹಾಕುವಂತಹ ಕೆಲಸ ಆಗಿದೆ. ಹೀಗಾಗಿ, ಸೂಕ್ತ ತನಿಖೆ ಆಗ್ಬೇಕು ಪ್ರಕರಣ ಸಾಬೀತಾದಲ್ಲಿ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಅಂತ ಇಂದ್ರಜಿತ್ ಲಂಕೇಶ್ ಗೃಹಸಚಿವರಿಗೆ ದೂರು ನೀಡಿದ್ದಾರೆ.

೨೫ ಕೋಟಿ ವಂಚನೆಗೆ ಸಂಬಂಧಿಸಿದಂತೆ ಸಾರಥಿ ಹಾಗೂ ಸ್ನೇಹಿತರು ದೂರು ಕೊಡುವ ನಾಲ್ಕೈದು ದಿನ ಮುಂಚೆ ಪ್ರಿನ್ಸ್ ಹೋಟೆಲ್‌ನಲ್ಲಿ ಸಪ್ಲೈಯರ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ಮಾಡ್ತಿದ್ದಾರೆ. ಹಲ್ಲೆಗೊಳಗಾದ ದಲಿತ ಸಪ್ಲೈಯರ್‌ ಯುವಕನ ಪತ್ನಿ ಪೊರಕೆ ಹಿಡಿದು ಪ್ರಿನ್ಸ್ ಹೋಟೆಲ್ ಬಳಿ ಹೋದಾಗ ದರ್ಶನ್ ಜೊತೆ ಪವಿತ್ರಾ ಗೌಡ, ಹರ್ಷಮೆಲೆಂಟಾ, ರಾಕೇಶ್ ಪಾಪಣ್ಣ ಸೇರಿದಂತೆ ಹಲವು ಸ್ನೇಹಿತರು ಇದ್ದರಂತೆ. ನ್ಯಾಯ ಕೇಳಿದ್ದಕ್ಕೆ ದುಡ್ಡು ಕೊಟ್ಟು ಸಮಾಧಾನ ಮಾಡುವಂತಹ ಹಾಗು ಪ್ರಕರಣವನ್ನು ಮುಚ್ಚಿ ಹಾಕುವಂತಹ ಕೆಲಸ ಮಾಡಿದ್ದಾರೆ. ಅದಕ್ಕೆ ಪೂರಕವಾದ ಸಾಕ್ಷಿಗಳು ನನ್ನ ಬಳಿ ಇವೆ ಮೈಸೂರಿನ ಪೊಲೀಸರು ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಮೈಸೂರು ಪೊಲೀಸರು ಯಾರದ್ದೋ ಕೈಗೊಂಬೆಯಾಗಿದ್ದಾರೋ ಅಥವಾ ಕೈಗೆ ಬಳೆತೊಟ್ಟುಕೊಂಡು ಕೂತಿದ್ದಾರೋ ನನಗಂತೂ ಅರ್ಥವಾಗ್ತಿಲ್ಲ ಸೂಕ್ತವಾದ ತನಿಖೆ ನಡೆಯಲಿಲ್ಲ ಅಂದರೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡೋದು ಸತ್ಯ ಎನ್ನುತ್ತಾರೆ ಇಂದ್ರಜಿತ್ ಲಂಕೇಶ್.

ಮೈಸೂರಿನ ಪ್ರಿನ್ಸ್ ಹೋಟೆಲ್ ಮಾಲೀಕರಾದ ಸಂದೇಶ್ ನಾಗರಾಜ್ ಇಂದ್ರಜಿತ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಸಪ್ಲೈಯರ್‌ ಮೇಲೆ ಹಲ್ಲೆ ನಡೆದಿಲ್ಲ, ನಮ್ಮ ಹೋಟೆಲ್‌ನಲ್ಲಿ ದಲಿತ ಸಪ್ಲೈಯರ್‌ಗಳೇ ಇಲ್ಲ. ಅಗತ್ಯವಿದ್ದಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಲಿ ತನಿಖೆ ನಡೆಸಲಿ ಎಂದಿದ್ದಾರೆ. ಸಂದೇಶ್‌ ನಾಗರಾಜ್ ಅವರ ಪುತ್ರ ಸಂದೇಶ್ ಮಾಧ್ಯಮಗಳ ಜೊತೆ ಮಾತನಾಡಿದ್ದು, ಸಪ್ಲೈಯರ್‌ ಹಾಗೂ ದರ್ಶನ್ ನಡುವೆ ಮಾತಿನ ಚಕಮಖಿ ನಡೆದಿದ್ದು ಸತ್ಯ. ಈ ವೇಳೆ ಮಧ್ಯ ಪ್ರವೇಶಿಸಿ ದರ್ಶನ್‌ಗೆ ತಿಳಿ ಹೇಳಿದೆ. ವೇಯ್ಟರ್ ಮಹಾರಾಷ್ಟ್ರದವರಾಗಿದ್ದು ಭಾಷೆಯ ಸಮಸ್ಯೆಯಿದೆ. ಹೀಗಾಗಿ ಸಪ್ಲೆ ಮಾಡುವಾಗ ಕೆಲವೊಮ್ಮೆ ಮಾತಿನ ಚಕಮಖಿ ಆಗುತ್ತೆ ಅದೇ ರೀತಿ ಆಗಿದೆ ಅಷ್ಟೇ. ಅಷ್ಟಕ್ಕೂ, ಈ ಪ್ರಕರಣವನ್ನು ಮುಚ್ಚಿ ಹಾಕೋದ್ರಿಂದ ನನಗೇನು ಲಾಭವಿಲ್ಲ. ಹೋಟೆಲ್ ನಮ್ಮ ಹೊಟ್ಟೆ ಪಾಡು, ನಾವು ನಮ್ಮದೇ ಆದ ಕಷ್ಟದಲ್ಲಿದ್ದೇವೆ. ಇಂತಹ ಸಮಯದಲ್ಲಿ ಪಬ್ಲಿಸಿಟಿಗೋಸ್ಕರ ಹೋಟೆಲ್ ಹೆಸರು ಹೇಳುವುದು, ಆರೋಪ ಮಾಡುವುದು ಸರಿಯಲ್ಲ ಎನ್ನುತ್ತಾರೆ ಸಂದೇಶ್.

ನಿರ್ದೇಶಕ ಇಂದ್ರಜಿತ್ ಗಂಭೀರ ಆರೋಪಕ್ಕೆ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಕೂಡ ರಿಯಾಕ್ಟ್ ಮಾಡಿದ್ದಾರೆ. ಊಟ ಸಪ್ಲೆ ಮಾಡುವಾಗ ಲೇಟಾಗಿರುತ್ತೆ. ಆ ಟೈಮ್‌ನಲ್ಲಿ ನಾನು ಏರು ಧ್ವನಿಯಲ್ಲಿ ಮಾತನಾಡಿರ್ತೇನೆ. ರೇಗಾಡಿರುತ್ತೇನೆ. ಹಲ್ಲೆ ನಡೆಸಿಲ್ಲ ಎಂದಿದ್ದಾರೆ. ನಂದು ಸಂದೇಶ ಅವ್ರದ್ದು ಸಾವಿರ ಗಲಾಟೆ ಇದೆ, ವಿಷಯ ಎಲ್ಲೆಲ್ಲಿಗೋ ಹೋಗ್ತಿದೆ. ಹೆಂಗೆಗೋ ತಿರುಗಿಸುತ್ತಿದ್ದಾರೆ ತಿರುಗಿಸಲಿ ನೋ ಪ್ರಾಬ್ಲಮ್. ಇಂದ್ರಜಿತ್ ಅವರು ತುಂಬಾ ದೊಡ್ಡ ಇನ್ವೆಸ್ಟಿಗೇಟರ್ ಮಾಡಲಿ ಅವರು. ನನಗೆ ಅವರ ಮೇಲೆ ಬೇಜಾರೇನಿಲ್ಲ. ನನಗೆ ಒಂದು ಸಿನಿಮಾ ಡೈರೆಕ್ಟ್ ಮಾಡಿದ್ದಾರೆ. ಈಗ ಆರೋಪ ಮಾಡ್ತಿದ್ದಾರೆ ಮಾಡಲಿ, ದೊಡ್ಡ ದೊಡ್ಡ ಕಾಂಟ್ಯಾಕ್ಟ್ಸ್‌ ಇದೆ ಅವರಿಗೆ ಮಾಡಿರುವ ಆರೋಪವನ್ನು ಪ್ರೂ ಮಾಡಲಿ ಎಂದಿದ್ದಾರೆ.

ಇತ್ತ ಇಂದ್ರಜಿತ್ ಲಂಕೇಶ್ ಅವರು ಪುನಃ ಮಾಧ್ಯಮಗಳ ಜೊತೆ ಮಾತನಾಡುತ್ತಾ, `ಆರ್ಡರ್ ಮಾಡಿದ್ದ ಊಟವನ್ನು ತಡವಾಗಿ ತಂದುಕೊಟ್ಟ ಎಂಬ ಕಾರಣಕ್ಕೆ ಪ್ರಿನ್ಸ್ ಹೋಟೆಲ್‌ನಲ್ಲಿ ದಲಿತ ವೇಯ್ಟರ್ ಮೇಲೆ ಹಲ್ಲೆ ನಡೆದಿರುವುದು ಸತ್ಯ. ಪ್ರಿನ್ಸ್ ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳ ತನಿಖೆ ಮಾಡಿದ್ರೆ ಗೊತ್ತಾಗುತ್ತೆ ವೇಯ್ಟರ್ ಮೇಲೆ ಹಲ್ಲೆ ನಡೆದಾಗ ಇತರೆ ಸಪ್ಲೈಯರ್‌ಗಳು ಪ್ರತಿಭಟನೆ ಮಾಡಿದ್ದಾರೆ. ಒಂದು ವೇಳೆ ಹಲ್ಲೆ ನಡೆದಿಲ್ಲವೆಂದು ಸಾಬೀತು ಮಾಡೋದಕ್ಕೆ ಹೊರಟರೆ, ಮೈಸೂರು ಪೊಲೀಸರು ಕ್ರಮ ಕೈಗೊಳ್ಳಲಿಲ್ಲ ಎಂದರೆ, ತನಿಖೆಯಾಗಲಿಲ್ಲ ಎಂದರೆ, ಪ್ರಕರಣದ ಸತ್ಯಾಸತ್ಯತೆ ಬೆಳಕಿಗೆ ಬರಲಿಲ್ಲ ಅಂದರೆ ನಾನು ನನ್ನ ಬಳಿ ಇರುವ ಸಾಕ್ಷಾಧಾರಗಳನ್ನು ಬಹಿರಂಗಗೊಳಿಸುತ್ತೇನೆ ಎಂದಿದ್ದಾರೆ ಇಂದ್ರಜಿತ್ ಅವರು

Categories
ಸಿನಿ ಸುದ್ದಿ

ಜನಪದ ಕಲಾವಿದರ ಪರ ಧ್ವನಿ ಎತ್ತಿದ ಚೇತನ್ !

“ಆ ದಿನಗಳು” ಖ್ಯಾತಿಯ ನಟ ಚೇತನ್ ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರ‍್ತಾರೆ. ಅನ್ಯಾಯ-ಅಕ್ರಮದ ವಿರುದ್ದ ಧ್ವನಿ ಎತ್ತುತ್ತಾ, ದಮನಿತರು, ಶ್ರಮಿಕರು, ಕಾರ್ಮಿಕರು ಸೇರಿದಂತೆ ನ್ಯಾಯದ ಪರವಾಗಿ ಹೋರಾಟ ಮಾಡುತ್ತಾರೆ. ಈಗ ಹಿಂದುಳಿದ ಜನಪದ ಕಲಾವಿದರ ಪರವಾಗಿ ಅಖಾಡಕ್ಕೆ ಇಳಿದಿದ್ದಾರೆ. ಇವತ್ತಿನ ಆಧುನಿಕ ಯುಗದಲ್ಲೂ ನೀರಿಲ್ಲದೆ, ವಿದ್ಯುತ್ ಸೌಲಭ್ಯ ಇಲ್ಲದೇ, ಎಲ್ಲದಕ್ಕಿಂತ ಮಿಗಿಲಾಗಿ ನೆಮ್ಮದಿಯ ನಿಟ್ಟುಸಿರು ಬಿಡೋದಕ್ಕೆ ಸೂರು ಕೂಡ ಇಲ್ಲದೇ ಟೆಂಟ್‌ಗಳಲ್ಲೇ ವಾಸಿಸುತ್ತಿರುವ ಜನಪದ ಕಲಾವಿದರಿಗೆ ಮೂಲ ಸೌಲಭ್ಯ ಒದಗಿಸಬೇಕು ಅಂತ ಚೇತನ್ ಫೀಲ್ಡಿಗಿಳಿದಿದ್ದಾರೆ.


ಹೌದು, ಕೆ ಆರ್ ಪುರಂ ವಡ್ಡರಪಾಳ್ಯದಲ್ಲಿ ಸುಮಾರು ೫೩ಕ್ಕೂ ಹೆಚ್ಚು ಕುಟುಂಬಗಳಿಗೆ ಸರ್ಕಾರದಿಂದ ಯಾವುದೇ ಮೂಲ ಸೌಲಭ್ಯ ಸಿಕ್ಕಿಲ್ಲ. ಒಂದಲ್ಲ.. ಎರಡಲ್ಲ.. ಭರ್ತಿ ಹದಿನೈದು ವರ್ಷಗಳಿಂದ ಈ ಜನಪದ ಕಲಾವಿದರು ಟೆಂಟ್‌ಗಳಲ್ಲಿ ಬದುಕು ಕಟ್ಟಿ ಕೊಟ್ಟಿದ್ದಾರೆ. ಭಾರತೀಯ ಕಲಾ ಸಂಸ್ಕೃತಿಯಲ್ಲಿ ಜನಪದ ಕಲೆಗೆ ವಿಶೇಷವಾದ ಸ್ಥಾನಮಾನವಿದೆ. ಆದರೆ, ಆ ಕಲಾಪರಂಪರೆಯನ್ನು ಉಳಿಸಿಕೊಂಡುವ ಹೋಗ್ತಿರುವ ಕಲಾವಿದರು ಮನೆಯಿಲ್ಲದೇ, ಮಠ ಇಲ್ಲದೇ ಬೀದಿಗೆ ಬಿದ್ದಿದ್ದಾರೆ.

ಇದೆಲ್ಲವನ್ನೂ ಗಮನಿಸಿದ ನಟ ಚೇತನ್, ಸಚಿವ ಭೈರತಿ ಬಸವರಾಜ್‌ಗೆ ಪತ್ರ ಬರೆದಿದ್ದಾರೆ. ಶೋಚನೀಯ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಕೆ ಆರ್ ಪುರಂ ಸಮೀಪದ ೫೩ ಜನಪದ ಕಲಾವಿದರ ಕುಟುಂಬಕ್ಕೆ ಆಶ್ರಯದ ಜೊತೆಗೆ ಜಾನುವಾರುಗಳಿಗೆ ಸ್ಥಳ ನೀಡುವ ಮೂಲಕ ಪುನರ್ವಸತಿ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಪುಸ್ತಕ ರೂಪದಲ್ಲಿ ಸಂಚಾರಿ ವಿಜಯ್ ಜೀವನ ಕಥನ; ಅನಂತವಾಗಿರು…

ನಟ ಸಂಚಾರಿ ವಿಜಯ್‌ ಈಗಿಲ್ಲ. ಆದರೆ, ಅವರು ಅದ್ಭುತ ಸಿನಿಮಾಗಳ ಮೂಲಕ ಇಂದಿಗೂ ಜೀವಂತವಾಗಿದ್ದಾರೆ. ಅವರ ಗೆಳೆಯರು ಒಗ್ಗೂಡಿ ಇದೀಗ ಅವರ ಕುರಿತು ಗೊತ್ತಿರುವ ಒಂದಷ್ಟು ವಿಷಯಗಳನ್ನು ತಮ್ಮ ಬರಹಗಳ ಮೂಲಕ ಪುಸ್ತಕವೊಂದನ್ನು ಹೊರತರುವ ಪ್ರಯತ್ನ ಮಾಡಿದ್ದಾರೆ. ಆ ಪ್ರಯತ್ನಕ್ಕೆ ಪತ್ರಕರ್ತ, ಲೇಖಕ ಡಾ. ಶರಣುಹುಲ್ಲೂರು ಅವರು ಮುಂದಾಳತ್ವ ವಹಿಸಿದ್ದಾರೆ ಈ ಹಿಂದೆ ಅಂಬರೀಶ್, ಸುದೀಪ್ ಅವರ ಬಯೋಗ್ರಫಿ ಬರೆದು, ರಾಜ್ಯ ಪ್ರಶಸ್ತಿ ಪಡೆದ ಡಾ.ಶರಣು ಹುಲ್ಲೂರು ಅವರ ಸಂಪಾದಕತ್ವದಲ್ಲಿ ಈ ಕೃತಿ ಬರುತ್ತಿರುವುದು ವಿಶೇಷತೆಗಳಲ್ಲೊಂದು.

ಹೌದು, ವಿಜಯ್‌ ಅವರ ಜೀವನ ಕಥನ ಪುಸ್ತಕ ರೂಪದಲ್ಲಿ ಹೊರಬರುತ್ತಿದೆ. ಆ ಪುಸ್ತಕಕ್ಕೆ “ಅನಂತವಾಗಿರು” ಎಂದ ಹೆಸರಿಡಲಾಗಿದೆ. ಈ ಕುರಿತಂತೆ ಸ್ವತಃ ಲೇಖಕ ಡಾ.ಶರಣು ಹುಲ್ಲೂರು ಹೇಳೋದು ಹೀಗೆ.
“ನಮ್ಮ ನಿಮ್ಮೆಲ್ಲರ ನೆಚ್ಚಿನ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ ಹುಟ್ಟು ಹಬ್ಬವನ್ನು ಜುಲೈ 17 ಕ್ಕೆ ಅರ್ಥಪೂರ್ಣವಾಗಿ ಆಚರಿಸಲು ಹೊರಟಿದ್ದೇವೆ. ವಿಜಯ್ ಅವರು ಸಿನಿಮಾದಷ್ಟೇ ಪುಸ್ತಕವನ್ನು ಪ್ರೀತಿಸುತ್ತಿದ್ದರು. ಆ ಪುಸ್ತಕಗಳ ಕುರಿತು ಇತರರ ಜತೆ ಹಂಚಿಕೊಳ್ಳುತ್ತಿದ್ದರು. ಹಾಗಾಗಿ ಅವರ ಕುರಿತಾದ ಜೀವನ ಕಥನವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ, ಅದನ್ನು ಈ ಬಾರಿಯ ಹುಟ್ಟು ಹಬ್ಬಕ್ಕೆ ಉಡುಗೊರೆಯಾಗಿ ನೀಡುತ್ತಿದ್ದೇವೆ. ಇದೊಂದು ಬಯೋಗ್ರಫಿ ಮಾದರಿಯಲ್ಲೇ ರೂಪಗೊಂಡ ಪುಸ್ತಕ. ವಿಜಯ್ ಅವರ ಬಾಲ್ಯ ಮತ್ತು ಜೀವನದ ಬಗ್ಗೆ ವಿಜಯ್ ಸಹೋದರರು ಮತ್ತು ಕುಟುಂಬ ಮಾತನಾಡಿದ್ದಾರೆ.

ಅವರ ಬಾಲ್ಯದ ಗೆಳೆಯರು, ಶಾಲಾ ಗೆಳೆಯರು, ಜತೆಗಿದ್ದವರು ನೆನೆಪುಗಳನ್ನು ಹಂಚಿಕೊಂಡಿದ್ದಾರೆ. ರಂಗಭೂಮಿ, ಕಿರುತೆರೆ, ಸಿನಿಮಾ, ಸಂಗೀತ ಹೀಗೆ ವಿಜಯ್ ಅವರು ಸಾಗಿ ಬಂದ ನಾನಾ ಕ್ಷೇತ್ರಗಳ ಬಗ್ಗೆ ಅವರ ಒಡನಾಡಿಗಳು, ಸಿನಿಮಾ ನಿರ್ದೇಶಕರು, ರಂಗಭೂಮಿ ಗೆಳೆಯರು, ಸಂಗೀತದ ಸಹಪಾಠಿಗಳು, ಪತ್ರಕರ್ತರು ನೆನಪಿಸಿಕೊಂಡಿದ್ದಾರೆ. ವಿಜಯ್ ಅವರ ಮೊದಲುಗಳಿಗೆ ಸಾಕ್ಷಿಯಾದವರು ಕೂಡ ಈ ಪುಸ್ತಕದ ಜತೆಗಿರುವುದು ಮತ್ತೊಂದು ವಿಶೇಷ.


ಖ್ಯಾತ ಲೇಖಕರಾದ ವಸುಧೇಂದ್ರ, ಜೋಗಿ, ಸಂಧ್ಯಾರಾಣಿ, ನಿರ್ದೇಶಕರಾದ ಬಿ.ಎಸ್. ಲಿಂಗದೇವರು, ಮಂಸೋರೆ, ಅರವಿಂದ್ ಕುಪ್ಳಿಕರ್, ಎಂ.ಎಸ್ ರಮೇಶ್, ರಂಗ ನಿರ್ದೇಶಕಿ ಮಂಗಳಾ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, ರಾಷ್ಟ್ರ ಪ್ರಶಸ್ತಿ ವಿಜೇತ ಲೇಖಕ ಕೆ. ಪುಟ್ಟಸ್ವಾಮಿ ಹೀಗೆ ಸಿನಿಮಾ ರಂಗದ ಹಾಗೂ ವಿಜಯ್ ಅವರನ್ನು ಬಲ್ಲ 32 ಕ್ಕೂ ಹೆಚ್ಚು ಲೇಖಕರು ಬರೆದ ಬರಹಗಳು ಇದರಲ್ಲಿವೆ. ಅಂದಹಾಗೆ, ಜಿ.ಎನ್. ಮೋಹನ್ ಅವರು ಈ ಪುಸ್ತಕಕ್ಕೆ ಹಿನ್ನುಡಿ ಬರೆದಿದ್ದಾರೆ. ಬೆಂಗಳೂರಿನ ಕಾಯಕ ಪ್ರಕಾಶನದಿಂದ ಈ ಕೃತಿ ಹೊರಬರುತ್ತಿದೆ. ಜು.17 ರಂದು ಪುಸ್ತಕ ಬಿಡುಗಡೆ ಆಗಲಿದೆ.

error: Content is protected !!