ಸಪ್ಲೈಯರ್‌ ಮೇಲೆ ಸಾರಥಿ ಕೈ ಮಾಡಿದ್ದು ನಿಜಾನಾ? ಅದು ಸುಳ್ಳು ಅಂತಾರೇ ಸಂದೇಶ್ ! ಸಾರಥಿ ಹೇಳಿದ್ದೇನು ಗೊತ್ತಾ ?

ಸ್ಯಾಂಡಲ್‌ವುಡ್ ಸಾರಥಿ ಕೋಟ್ಯಾಂತರ ಅಭಿಮಾನಿಗಳ ಪಾಲಿನ ಚಕ್ರವರ್ತಿ. ತಮ್ಮ ಸ್ನೇಹಿತರ ಜೊತೆ ಸೇರಿಕೊಂಡು ಪ್ರಿನ್ಸ್ ಹೋಟೆಲ್‌ನ ಸಪ್ಲೈಯರ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್‌ನ ಮಾಲೀಕರಾದ ಸಂದೇಶ್ ಅವರು ಸಾರಥಿ ಅಂಡ್ ಸ್ನೇಹಿತರ ಮೇಲೆ ಕೇಳಿ ಬರುತ್ತಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ. ಹಾಗಾದ್ರೆ, ಇಂದ್ರಜಿತ್ ಲಂಕೇಶ್ ಮಾಡ್ತಿರುವ ಆರೋಪದಲ್ಲಿ ಹುರುಳಿಲ್ಲವಾ? ಪ್ರಿನ್ಸ್ ಮಾಲೀಕರು ಬಿಚ್ಚಿಟ್ಟ ಸತ್ಯವೇನು? ಅಷ್ಟಕ್ಕೂ, ಸಾರಥಿ ಸುತ್ತಾಮುತ್ತಾ ಏನಾಗ್ತಿದೆ ಆ ಸುದ್ದಿಯ ಡಿಟೈಲ್ಸ್ ಇಲ್ಲಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುತ್ತ‌ಮುತ್ತಾ ಏನೇನ್ ನಡೆಯುತ್ತಿದೆಯೋ ಒಂದಕ್ಕೂ ಕ್ಲಾರಿಟಿ ಸಿಗ್ತಿಲ್ಲ. ಸಾರಥಿ ಹೆಸರಲ್ಲಿ ೨೫ ಕೋಟಿ ಎಗರಿಸೋದಕ್ಕೆ ಸ್ಕೆಚ್ ಹಾಕಿರೋ ಗ್ಯಾಂಗ್ ಬಗ್ಗೆ ಅಸಲಿಯತ್ತು ಹೊರ ಬೀಳುವುದಕ್ಕಾಗಿ ಎಲ್ಲರೂ ಕಾಯ್ತಿರುವ ಹೊತ್ತಲ್ಲಿ, ಒಡೆಯನ ವಿರುದ್ದವೇ ಗಂಭೀರ ಆರೋಪ ಕೇಳಿಬರುತ್ತಿದೆ. ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್‌ನ ದಲಿತ ಸಪ್ಲೈಯರ್‌ಗೆ ಹೊಡೆದಿದ್ದಾರೆ ಅಂತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೊಸ ಬಾಂಬ್ ಸಿಡಿಸಿದ್ದಾರೆ. ಹರ್ಷ ಮೆಲೆಂಟಾ, ರಾಕೇಶ್ ಪಾಪಣ್ಣ ಸೇರಿದಂತೆ ತಮ್ಮ ಮೈಸೂರಿನ ಸ್ನೇಹಿತರ ಜೊತೆಗೆ ಸೇರಿಕೊಂಡು ವೇಯ್ಟರ್ ವಿರುದ್ದ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಸಪ್ಲೈಯರ್‌ಗೆ ಗಂಭೀರ ಗಾಯಗಳಾಗಿವೆ ಕಣ್ಣಿಗೆ ಬಲವಾಗಿ ಪೆಟ್ಟು ಬಿದ್ದಿದ್ದು, ಪ್ರಕರಣವನ್ನು ಮುಚ್ಚಿ ಹಾಕುವಂತಹ ಕೆಲಸ ಆಗಿದೆ. ಹೀಗಾಗಿ, ಸೂಕ್ತ ತನಿಖೆ ಆಗ್ಬೇಕು ಪ್ರಕರಣ ಸಾಬೀತಾದಲ್ಲಿ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಅಂತ ಇಂದ್ರಜಿತ್ ಲಂಕೇಶ್ ಗೃಹಸಚಿವರಿಗೆ ದೂರು ನೀಡಿದ್ದಾರೆ.

೨೫ ಕೋಟಿ ವಂಚನೆಗೆ ಸಂಬಂಧಿಸಿದಂತೆ ಸಾರಥಿ ಹಾಗೂ ಸ್ನೇಹಿತರು ದೂರು ಕೊಡುವ ನಾಲ್ಕೈದು ದಿನ ಮುಂಚೆ ಪ್ರಿನ್ಸ್ ಹೋಟೆಲ್‌ನಲ್ಲಿ ಸಪ್ಲೈಯರ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ಮಾಡ್ತಿದ್ದಾರೆ. ಹಲ್ಲೆಗೊಳಗಾದ ದಲಿತ ಸಪ್ಲೈಯರ್‌ ಯುವಕನ ಪತ್ನಿ ಪೊರಕೆ ಹಿಡಿದು ಪ್ರಿನ್ಸ್ ಹೋಟೆಲ್ ಬಳಿ ಹೋದಾಗ ದರ್ಶನ್ ಜೊತೆ ಪವಿತ್ರಾ ಗೌಡ, ಹರ್ಷಮೆಲೆಂಟಾ, ರಾಕೇಶ್ ಪಾಪಣ್ಣ ಸೇರಿದಂತೆ ಹಲವು ಸ್ನೇಹಿತರು ಇದ್ದರಂತೆ. ನ್ಯಾಯ ಕೇಳಿದ್ದಕ್ಕೆ ದುಡ್ಡು ಕೊಟ್ಟು ಸಮಾಧಾನ ಮಾಡುವಂತಹ ಹಾಗು ಪ್ರಕರಣವನ್ನು ಮುಚ್ಚಿ ಹಾಕುವಂತಹ ಕೆಲಸ ಮಾಡಿದ್ದಾರೆ. ಅದಕ್ಕೆ ಪೂರಕವಾದ ಸಾಕ್ಷಿಗಳು ನನ್ನ ಬಳಿ ಇವೆ ಮೈಸೂರಿನ ಪೊಲೀಸರು ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಮೈಸೂರು ಪೊಲೀಸರು ಯಾರದ್ದೋ ಕೈಗೊಂಬೆಯಾಗಿದ್ದಾರೋ ಅಥವಾ ಕೈಗೆ ಬಳೆತೊಟ್ಟುಕೊಂಡು ಕೂತಿದ್ದಾರೋ ನನಗಂತೂ ಅರ್ಥವಾಗ್ತಿಲ್ಲ ಸೂಕ್ತವಾದ ತನಿಖೆ ನಡೆಯಲಿಲ್ಲ ಅಂದರೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡೋದು ಸತ್ಯ ಎನ್ನುತ್ತಾರೆ ಇಂದ್ರಜಿತ್ ಲಂಕೇಶ್.

ಮೈಸೂರಿನ ಪ್ರಿನ್ಸ್ ಹೋಟೆಲ್ ಮಾಲೀಕರಾದ ಸಂದೇಶ್ ನಾಗರಾಜ್ ಇಂದ್ರಜಿತ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಸಪ್ಲೈಯರ್‌ ಮೇಲೆ ಹಲ್ಲೆ ನಡೆದಿಲ್ಲ, ನಮ್ಮ ಹೋಟೆಲ್‌ನಲ್ಲಿ ದಲಿತ ಸಪ್ಲೈಯರ್‌ಗಳೇ ಇಲ್ಲ. ಅಗತ್ಯವಿದ್ದಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಲಿ ತನಿಖೆ ನಡೆಸಲಿ ಎಂದಿದ್ದಾರೆ. ಸಂದೇಶ್‌ ನಾಗರಾಜ್ ಅವರ ಪುತ್ರ ಸಂದೇಶ್ ಮಾಧ್ಯಮಗಳ ಜೊತೆ ಮಾತನಾಡಿದ್ದು, ಸಪ್ಲೈಯರ್‌ ಹಾಗೂ ದರ್ಶನ್ ನಡುವೆ ಮಾತಿನ ಚಕಮಖಿ ನಡೆದಿದ್ದು ಸತ್ಯ. ಈ ವೇಳೆ ಮಧ್ಯ ಪ್ರವೇಶಿಸಿ ದರ್ಶನ್‌ಗೆ ತಿಳಿ ಹೇಳಿದೆ. ವೇಯ್ಟರ್ ಮಹಾರಾಷ್ಟ್ರದವರಾಗಿದ್ದು ಭಾಷೆಯ ಸಮಸ್ಯೆಯಿದೆ. ಹೀಗಾಗಿ ಸಪ್ಲೆ ಮಾಡುವಾಗ ಕೆಲವೊಮ್ಮೆ ಮಾತಿನ ಚಕಮಖಿ ಆಗುತ್ತೆ ಅದೇ ರೀತಿ ಆಗಿದೆ ಅಷ್ಟೇ. ಅಷ್ಟಕ್ಕೂ, ಈ ಪ್ರಕರಣವನ್ನು ಮುಚ್ಚಿ ಹಾಕೋದ್ರಿಂದ ನನಗೇನು ಲಾಭವಿಲ್ಲ. ಹೋಟೆಲ್ ನಮ್ಮ ಹೊಟ್ಟೆ ಪಾಡು, ನಾವು ನಮ್ಮದೇ ಆದ ಕಷ್ಟದಲ್ಲಿದ್ದೇವೆ. ಇಂತಹ ಸಮಯದಲ್ಲಿ ಪಬ್ಲಿಸಿಟಿಗೋಸ್ಕರ ಹೋಟೆಲ್ ಹೆಸರು ಹೇಳುವುದು, ಆರೋಪ ಮಾಡುವುದು ಸರಿಯಲ್ಲ ಎನ್ನುತ್ತಾರೆ ಸಂದೇಶ್.

ನಿರ್ದೇಶಕ ಇಂದ್ರಜಿತ್ ಗಂಭೀರ ಆರೋಪಕ್ಕೆ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಕೂಡ ರಿಯಾಕ್ಟ್ ಮಾಡಿದ್ದಾರೆ. ಊಟ ಸಪ್ಲೆ ಮಾಡುವಾಗ ಲೇಟಾಗಿರುತ್ತೆ. ಆ ಟೈಮ್‌ನಲ್ಲಿ ನಾನು ಏರು ಧ್ವನಿಯಲ್ಲಿ ಮಾತನಾಡಿರ್ತೇನೆ. ರೇಗಾಡಿರುತ್ತೇನೆ. ಹಲ್ಲೆ ನಡೆಸಿಲ್ಲ ಎಂದಿದ್ದಾರೆ. ನಂದು ಸಂದೇಶ ಅವ್ರದ್ದು ಸಾವಿರ ಗಲಾಟೆ ಇದೆ, ವಿಷಯ ಎಲ್ಲೆಲ್ಲಿಗೋ ಹೋಗ್ತಿದೆ. ಹೆಂಗೆಗೋ ತಿರುಗಿಸುತ್ತಿದ್ದಾರೆ ತಿರುಗಿಸಲಿ ನೋ ಪ್ರಾಬ್ಲಮ್. ಇಂದ್ರಜಿತ್ ಅವರು ತುಂಬಾ ದೊಡ್ಡ ಇನ್ವೆಸ್ಟಿಗೇಟರ್ ಮಾಡಲಿ ಅವರು. ನನಗೆ ಅವರ ಮೇಲೆ ಬೇಜಾರೇನಿಲ್ಲ. ನನಗೆ ಒಂದು ಸಿನಿಮಾ ಡೈರೆಕ್ಟ್ ಮಾಡಿದ್ದಾರೆ. ಈಗ ಆರೋಪ ಮಾಡ್ತಿದ್ದಾರೆ ಮಾಡಲಿ, ದೊಡ್ಡ ದೊಡ್ಡ ಕಾಂಟ್ಯಾಕ್ಟ್ಸ್‌ ಇದೆ ಅವರಿಗೆ ಮಾಡಿರುವ ಆರೋಪವನ್ನು ಪ್ರೂ ಮಾಡಲಿ ಎಂದಿದ್ದಾರೆ.

ಇತ್ತ ಇಂದ್ರಜಿತ್ ಲಂಕೇಶ್ ಅವರು ಪುನಃ ಮಾಧ್ಯಮಗಳ ಜೊತೆ ಮಾತನಾಡುತ್ತಾ, `ಆರ್ಡರ್ ಮಾಡಿದ್ದ ಊಟವನ್ನು ತಡವಾಗಿ ತಂದುಕೊಟ್ಟ ಎಂಬ ಕಾರಣಕ್ಕೆ ಪ್ರಿನ್ಸ್ ಹೋಟೆಲ್‌ನಲ್ಲಿ ದಲಿತ ವೇಯ್ಟರ್ ಮೇಲೆ ಹಲ್ಲೆ ನಡೆದಿರುವುದು ಸತ್ಯ. ಪ್ರಿನ್ಸ್ ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳ ತನಿಖೆ ಮಾಡಿದ್ರೆ ಗೊತ್ತಾಗುತ್ತೆ ವೇಯ್ಟರ್ ಮೇಲೆ ಹಲ್ಲೆ ನಡೆದಾಗ ಇತರೆ ಸಪ್ಲೈಯರ್‌ಗಳು ಪ್ರತಿಭಟನೆ ಮಾಡಿದ್ದಾರೆ. ಒಂದು ವೇಳೆ ಹಲ್ಲೆ ನಡೆದಿಲ್ಲವೆಂದು ಸಾಬೀತು ಮಾಡೋದಕ್ಕೆ ಹೊರಟರೆ, ಮೈಸೂರು ಪೊಲೀಸರು ಕ್ರಮ ಕೈಗೊಳ್ಳಲಿಲ್ಲ ಎಂದರೆ, ತನಿಖೆಯಾಗಲಿಲ್ಲ ಎಂದರೆ, ಪ್ರಕರಣದ ಸತ್ಯಾಸತ್ಯತೆ ಬೆಳಕಿಗೆ ಬರಲಿಲ್ಲ ಅಂದರೆ ನಾನು ನನ್ನ ಬಳಿ ಇರುವ ಸಾಕ್ಷಾಧಾರಗಳನ್ನು ಬಹಿರಂಗಗೊಳಿಸುತ್ತೇನೆ ಎಂದಿದ್ದಾರೆ ಇಂದ್ರಜಿತ್ ಅವರು

Related Posts

error: Content is protected !!