ಇಲ್ಲಿ ಯಾರು ಹೀರೋ ಮಾಡಲ್ಲ ನಮಗೆ ನಾವೇ ಹೀರೋ ಆಗ್ಬೇಕ್… ಇದು ರಾಕಿಂಗ್ ಸ್ಟಾರ್ ಯಶ್ ಅವರ ಎವರ್‌ಗ್ರೀನ್ ಡೈಲಾಗ್. ಡೈಲಾಗ್ ಹೊಡೆದಂತೆ ಗಂಧದ ಗುಡಿಯಲ್ಲಿ ನಾಯಕನ ಪಟ್ಟಕ್ಕೇರಿದರು. ತಮ್ಮ ವಿಶಿಷ್ಟ ಹಾಗೂ ವಿಭಿನ್ನ ಮ್ಯಾನರಿಸಂನಿಂದ ಸೂಪರ್‌ಸ್ಟಾರ್ ಎನಿಸಿಕೊಂಡರು “ಕೆಜಿಎಫ್” ಮೂಲಕ ನ್ಯಾಷನಲ್ ಸ್ಟಾರ್ ಆದರು. ಇದೀಗ “ಕೆಜಿಎಫ್ ಚಾಪ್ಟರ್-2ʼ ಮೂಲಕ ಇಂಟರ್‌ನ್ಯಾಷನಲ್ ಸ್ಟಾರ್ ಆಗೋದಕ್ಕೆ ಹೊರಟಿದ್ದಾರೆ. ಅಷ್ಟಕ್ಕೂ, ಅಣ್ತಮ್ಮನ ಎವರ್‌ಗ್ರೀನ್ ಡೈಲಾಗ್‌ನ ನೆನಪು ಮಾಡಿಕೊಳ್ಳೋದಕ್ಕೆ ಕಾರಣ ಗಾಯಕ ನವೀನ್ ಸಜ್ಜು .
ಸ್ವರಮಾಧುರ್ಯದಿಂದಲೇ ಬ್ರ್ಯಾಂಡ್ ಆದವರು ನವೀನ್ ಸಜ್ಜು!
ನವೀನ್ ಸಜ್ಜು ಸ್ಯಾಂಡಲ್‌ವುಡ್‌ನ ಸಿಂಗರ್ ಕಮ್ ಮ್ಯೂಸಿಕ್ ಕಂಪೋಸರ್. ತಮ್ಮ ವಿಶಿಷ್ಟ ಹಾಗೂ ವಿಭಿನ್ನ ಕಂಠಸಿರಿಯಿಂದಲೇ ಸ್ವಂತ ಬ್ರ್ಯಾಂಡ್ ಆಗಿರೋ ನವೀನ್ ಸಜ್ಜು, ಈಗ ನಮಗೆ ನಾವೇ ಹೀರೋ ಆಗ್ಬೇಕ್ ಅಂತಿದ್ದಾರೆ. ನವೀನ್ ಹೀರೋ ಆಗ್ತಿದ್ದಾರೆ ಅನ್ನೋ ಸುದ್ದಿ ಇವತ್ತು ನಿನ್ನೆಯದಲ್ಲ. “ಬಿಗ್‌ಬಾಸ್” ರನ್ನರ್ ಅಪ್ ಪಟ್ಟಕ್ಕೇರಿದಾಗಿನಿಂದಲೂ ಮುಖಕ್ಕೆ ಬಣ್ಣ ಹಚ್ಚುತ್ತಾರೆ, ಹೀರೋ ಆಗಿ ಗಾಂಧಿನಗರದಲ್ಲಿ ಕಟೌಟ್ ಹಾಕಿಸಿಕೊಳ್ತಾರೆ ಅನ್ನೋ ಸುದ್ದಿ ಇತ್ತು. ಆದ್ರೆ, ಎಲ್ಲಾ ಅಂದುಕೊಂಡಂತೆ ಆಗಲಿಲ್ಲ ಹೀಗಾಗಿ ಸಿಂಗಿಂಗ್ ಕರಿಯರ್‌ನ ಕಂಟಿನ್ಯೂ ಮಾಡಿದರು. ಈ ನಡುವೆ “ದುನಿಯಾ” ವಿಜಯ್ ತಮ್ಮ ಕನಕ' ಚಿತ್ರದಲ್ಲಿ ನವೀನ್‌ರನ್ನ ಸಂಗೀತ ನಿರ್ದೇಶಕನ ಪಟ್ಟಕ್ಕೇರಿಸಿದರು.
ಮ್ಯೂಸಿಕ್ ಕಂಪೋಸರ್ ಆಗಿ ನವೀನ್ ಸೈ ಎನಿಸಿಕೊಂಡರು. "ಎಣ್ಣೆ ನಮ್ದು ಊಟ ನಿಮ್ದು" ಹಾಡಿನ ಮೂಲಕ ಮ್ಯೂಸಿಕ್ ಲೋಕದಲ್ಲಿ ಬ್ರ್ಯಾಂಡ್ ಆದರು.
ಕನಕ’ ನಂತರ “ದುನಿಯಾ” ವಿಜಯ್ ನಿರ್ದೇಶನದ ಸಲಗ' ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
ಸಂಜನ ಐ ಲವ್ ಯೂ ಸಂಜನ’ ಹಾಡಿಗೆ ಕ್ಯಾಚಿ ಟ್ಯೂನ್ ಹಾಕಿ ಕುಣಿಸಿದ್ದಾರೆ. ಈಗಾಗಲೇ ಆ ಸಾಂಗ್ ಬಜಾರ್‌ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ವಿಜಯ್ ಹಾಗೂ ಸಂಜನಾ ಆನಂದ್ ಕಾಂಬಿನೇಷನ್ ಸಾಂಗ್ ಕಿಕ್ಕೇರಿಸ್ತಿದೆ. ಬಹದ್ದೂರ್ ಚೇತನ್ ಸಾಹಿತ್ಯವಿರುವ ಈ ಹಾಡು ಲವ್‌ಬರ್ಡ್ಸ್ ಹಾರ್ಟ್ನ ಮೆಲ್ಟ್ ಮಾಡ್ತಿದೆ.
ನವೀನ್ ಸಜ್ಜು ಈ ಹಾಡು ನಿಮ್ಮೆಲ್ಲರ ಹೃದಯ ತಟ್ಟುತ್ತೆ !
ಹೀಗೆ ಸಿಂಗರ್ ಆಗಿ ಮ್ಯೂಸಿಕ್ ಕಂಪೋಸರ್ ಆಗಿ ಹಲ್‌ಚಲ್ ಎಬ್ಬಿಸುತ್ತಿರುವ ನವೀನ್ ಸಜ್ಜು ಎಮೋಷನಲ್ ಹಾಡಿಗೆ ಧ್ವನಿಯಾಗಿ ಎಲ್ಲರ ಹಾರ್ಟ್ನ ಟಚ್ ಮಾಡಿದ್ದಾರೆ. “ಸೌದೆಯ ಮರೆಯಲ್ಲಿ ಸುಟ್ಟು ಕರುಕಾಗೋ ಜೀವಕ್ಕೆ.. ಬಯಕೆಗಳೆಷ್ಟೋ ಜೀವ ಕಂಡುಂಡ ಆಸೆಗಳೆಷ್ಟೋ…” ಲಿಂಗದೇವರ ಹಳೆಮನೆಯವರ ಸಾಹಿತ್ಯ ಜನಾರ್ಧನ್ ಜನ್ನಿಯವರ ಸಂಗೀತವಿರುವ ಈ ಹಾಡನ್ನು ನಾಟಕದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಇದೀಗ ಈ ಹಾಡನ್ನ ತಮ್ಮದೇ ಶೈಲಿಯಲ್ಲಿ ನವೀನ್ ಹಾಡಿದ್ದಾರೆ.
ಮೆರವಣಿಗೆ ಹೊರಡುವ ಮೊದಲೇ ಮೂರ‍್ಮೂರು ಸಿನಿಮಾ !
ಇಷ್ಟೆಲ್ಲಾ ಹೇಳಿದ್ಮೇಲೆ `ಇಲ್ಲಿ ಯಾರು ಹೀರೋ ಮಾಡಲ್ಲ ನಮಗೆ ನಾವೇ ಹೀರೋ ಆಗ್ಬೇಕ್’ ಹೀಗಂತಿರೋ ನವೀನ್ ಸಜ್ಜು ಅವರ ನಯಾ ಕಥೆಯನ್ನ ನಿಮಗೆ ಹೇಳಲೆಬೇಕು. ಯಸ್, ಸಿಂಗರ್ ಕಮ್ ಮ್ಯೂಸಿಕ್ ಕಂಪೋಸರ್ ನವೀನ್ ಹೀರೋ ಆಗ್ತಿದ್ದಾರೆ. ನಾಯಕನಾಗಿ ಬೆಳ್ಳಿತೆರೆ ಮೇಲೆ ದಿಬ್ಬಣ ಹೊರಡುವುದಕ್ಕೆ ಮೊದಲೇ ನವೀನ್‌ಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಅರಸಿಕೊಂಡು ಬರುತ್ತಿವೆಯಂತೆ. ಮ್ಯಾನ್ಶನ್ ಹೌಸ್ ನವೀನ್ ಸಜ್ಜು ನಾಯಕರಾಗುತ್ತಿರುವ ಮೊದಲ ಚಿತ್ರ. ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ನಿರ್ದೇಶಕ ಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.
ಆದಿಚುಂಚನಗಿರಿಯಲ್ಲಿ ಮುಹೂರ್ತ ನೆರವೇರಿದೆ. ಪ್ರಕೃತಿ ಪ್ರೇಮಿಯಾಗಿ ನವೀನ್ ಇಲ್ಲಿ ಕಾಣಿಸಿಕೊಳ್ತಾರೆ. ಚಿತ್ರದ ತಾರಾಬಳಗ ನಾಯಕಿ ಆಯ್ಕೆ ಇನ್ನಷ್ಟೇ ಹೊರ ಬೀಳಬೇಕಿದೆ.
“ಮ್ಯಾನ್ಶನ್ ಹೌಸ್” ಜೊತೆ ಇನ್ನೂ ಎರಡು ಚಿತ್ರಗಳು ನವೀನ್ ಕೈಯಲ್ಲಿವೆ. ನಟನೆ ಜೊತೆಗೆ ಸಂಗೀತ ನಿರ್ದೇಶನ ಹಾಗೂ ಗಾಯಕರಾಗಿಯೂ ನವೀನ್ ಕೆಲಸ ಮಾಡೋದಕ್ಕೆ ಸಿದ್ದರಾಗಿದ್ದಾರೆ. ಇಲ್ಲಿವರೆಗೂ ೨೦೦ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಕನಕ ಹಾಗೂ ಸಲಗ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಈಗ ನಾಯಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡ್ತಿದ್ದಾರೆ. ಬೆಳ್ಳಿಪರದೆ ಮೇಲೆ ಸ್ವಂತ ಬ್ರ್ಯಾಂಡ್ ನವೀನ್ ಸಜ್ಜು ಅಬ್ಬರ ಆರ್ಭಟ ಹೇಗಿರುತ್ತೆ ? ವೇಯ್ಟ್ ಅಂಡ್ ಸೀ