ಕನ್ನಡದಲ್ಲಿ ವಾಯ್ಸ್‌ ಡಬ್‌ ಮಾಡ್ತಾ‌ರಂತೆ ಶ್ರೀಲಂಕಾ ಚೆಲುವೆ! ಜಾಕ್ವೆಲಿನ್‌ ಡ್ಯಾನ್ಸ್‌ ನೋಡಿ ಸುದೀಪ್‌ಗೂ ಸ್ಟೆಪ್‌ ಹಾಕುವ ಮನಸ್ಸಾಯ್ತಂತೆ

ಇತ್ತೀಚೆಗೆ ಸುದೀಪ್‌ ನಟನೆಯ “ವಿಕ್ರಾಂತ್ ರೋಣ” ಚಿತ್ರದ ಸಾಂಗ್‌ ಶೂಟಿಂಗ್‌ಗೆ ಎಂಟ್ರಿಯಾಗಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್, ಇದೀಗ ಚಿತ್ರೀಕರಣ ಮುಗಿಸಿ ಹೊರಟಿದ್ದಾರೆ. ಇದರ ಜೊತೆಯಲ್ಲೇ ನಿರ್ದೇಶಕ ಅನೂಪ್‌ ಭಂಡಾರಿ ಅವರು, ಜಾಕ್ವೆಲಿನ್‌ ಫರ್ನಾಂಡೀಸ್‌ ಕುರಿತು ಇನ್ನೊಂದು ಸುದ್ದಿ ಹೊರಹಾಕಿದ್ದಾರೆ.

ಹೌದು, ಜಾಕ್ವೆಲಿನ್‌ ಫರ್ನಾಂಡೀಸ್‌ ಅವರು, ಕೇವಲ ಡ್ಯಾನ್ಸ್‌ ಮಾತ್ರವಲ್ಲ, ಆಕ್ಟಿಂಗ್‌ ಕೂಡ ಮಾಡಿದ್ದಾರೆ. ಜಾಕ್ವೆಲಿನ್ ಈ ಚಿತ್ರದಲ್ಲಿ ಹಾಡಲ್ಲಿ ಡ್ಯಾನ್ಸ್‌ ಮಾತ್ರವಲ್ಲ, ನಟನೆ ಕೂಡ ಮಾಡಿದ್ದಾರೆ ಎಂಬ ಸುದ್ದಿ ಹೊರಹಾಕಿದ್ದಾರೆ. ಜಾಕ್ವೆಲಿನ್ ಸುದೀಪ್ ಸಿನಿಮಾದಲ್ಲಿ ಪಾತ್ರವೊಂದರಲ್ಲಿ ಬಣ್ಣ ಹಚ್ಚಿದ್ದು, ಡ್ಯಾನ್ಸ್ ಮಾಡುವುದರ ಜೊತೆಗೆ ಕೆಲವು ಸೀನ್‌ಗಳಲ್ಲಿ ನಟಿಸಿದ್ದಾರಂತೆ.


ಇನ್ನು, ಈ ಚಿತ್ರದ ಮತ್ತೊಂದು ಸುದ್ದಿ ಅಂದೆ, ಇದು ಪ್ಯಾನ್ ಇಂಡಿಯಾ ಸಿನಿಮಾ. ಜಾಕ್ವೆಲಿನ್ ಫರ್ನಾಂಡೀಸ್ ಅವರು ಕನ್ನಡದಲ್ಲೇ ಡಬ್ಬಿಂಗ್ ಮಾಡಲಿದ್ದಾರೆ ಎಂಬ ಸುದ್ದಿಯೂ ಇದೆ. ಅವರು ಕನ್ನಡ ಕಲಿತು ವಾಯ್ಸ್ ಡಬ್ ಮಾಡಲು ನಿರ್ಧರಿಸಿದ್ದಾರೆ. ಇದು ನಿಜಕ್ಕೂ ಸ್ವಾಗತರ್ಹ ಮತ್ತು ಖುಷಿಯ ವಿಚಾರ. ಈ ಕುರಿತಂತೆ ನಿರ್ದೇಶಕ ಅನೂಪ್‌ ಭಂಡಾರಿ ಅವರು, “ನಿಮ್ಮೊಂದಿಗೆ ಕೆಲಸ ಮಾಡಿದ್ದು ನಿಜಕ್ಕೂ ಖುಷಿ ತಂದಿದೆ.

ಶೀಘ್ರದಲ್ಲಿ ನಿಮ್ಮ ಪಾತ್ರದ ಹೆಸರು ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡುತ್ತೇವೆ. ಡಬ್ಬಿಂಗ್ ವೇಳೆ ಮತ್ತೊಮ್ಮೆ ಸಿಗೋಣ” ಎಂದು ಟ್ವೀಟ್‌ ಮಾಡಿದ್ದಾರೆ. ಅತ್ತ, ಜಾಕ್ವೆಲಿನ್‌ಗೆ ಸುದೀಪ್‌ ಕೂಡ ಥ್ಯಾಂಕ್ಸ್ ಹೇಳಿದ್ದಾರೆ. ಅವರೂ ಟ್ವೀಟ್ ಮಾಡಿದ್ದು, ”ನಮ್ಮ ಸಿನಿಮಾದ ಹಾಡಿಗೆ ಜೋಶ್ ತುಂಬಿದ್ದಕ್ಕೆ ಧನ್ಯವಾದ ಜಾಕ್ವೆಲಿನ್ ಫರ್ನಾಂಡೀಸ್. ನಿಮ್ಮ ನೃತ್ಯ ನನ್ನನ್ನೂ ಒಂದೆರಡು ಸ್ಟೆಪ್ ಹಾಕುವಂತೆ ಪ್ರೇರೇಪಿಸಿತು. ನಿಮಗೆ ಶುಭವಾಗಲಿ” ಎಂದಿದ್ದಾರೆ.

Related Posts

error: Content is protected !!