`ಲಗಾಮ್’ ಹಾಕಲು ಉಪ್ಪಿ ಹಿಂದೆ ಹೊರಟ ಹರಿಪ್ರಿಯಾ !

ಸ್ಯಾಂಡಲ್‌ವುಡ್ ಅಂಗಳದಲ್ಲಿ ಲಗಾಮ್' ಟೈಟಲ್‌ನಿಂದಲೇ ಸಖತ್ ಸೌಂಡ್ ಮಾಡ್ತಿರುವ ಹಾಗೂ ಚರ್ಚೆಗೆ ಗ್ರಾಸವಾಗಿರುವ ಚಿತ್ರ. ರಿಯಲ್‌ಸ್ಟಾರ್ ಉಪೇಂದ್ರ ಬಣ್ಣಹಚ್ಚುತ್ತಿರುವ ಕಾರಣಕ್ಕೆ ಮತ್ತಷ್ಟು ಕ್ಯೂರಿಯಾಸಿಟಿ ಹಾಗೂ ನಿರೀಕ್ಷೆ ಹೆಚ್ಚಿದೆ. ಪ್ರಜಾಕೀಯವನ್ನು ಅಸ್ತಿತ್ವಕ್ಕೆ ತರಲು ಹೊರಟಿರುವ ಬುದ್ದಿವಂತ ಉಪ್ಪಿಯವರು ಯಾವುದಕ್ಕೆ ಲಗಾಮ್ ಹಾಕಲು ಹೊರಟರಪ್ಪ ಎನ್ನುವ ಪ್ರಶ್ನೆ ಉದ್ಭವವಾಗಿದೆ. ರಾಜಕೀಯ ವಿಡಂಭನೆ ಹಾಗೂ ಹಣ ವರ್ಗಾವಣೆ ಕುರಿತಾದ ಚಿತ್ರ ಎನ್ನುವ ಸುದ್ದಿ ಹರಿದಾಡುತ್ತಿದ್ದರೂ ಕೂಡ `ಲಗಾಮ್’ ತಿರುಳನ್ನ ಚಿತ್ರತಂಡ ಗೌಪ್ಯವಾಗಿಡುವ ಪ್ರಯತ್ನ ಪಡುತ್ತಿದೆ. ಇಡೀ ದೇಶವನ್ನೇ ಕಾಡುತ್ತಿರುವ ಸಮಸ್ಯೆಯ ಸುತ್ತ `ಲಗಾಮ್’ ಚಿತ್ರಕಥೆ ಎಣೆಯಲಾಗಿದೆ ಅನ್ನೋ ಸೀಕ್ರೇಟ್ ಚಿತ್ರತಂಡ ಬಿಟ್ಟುಕೊಟ್ಟಿದೆ.

ಪೊರ್ಕಿ-ರಾಮ್-ಪವರ್-ಬೃಂದಾವನ-ಹುಡುಗರು ಸೇರಿದಂತೆ ಹಲವು ಸೂಪರ್‌ಹಿಟ್ ಸಿನಿಮಾಗಳ ಸಾರಥಿ ಕೆ ಮಾದೇಶ್ ಲಗಾಮ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಯೂನಿವರ್ಸಲ್ ಸಬ್ಜೆಕ್ಟ್ ವುಳ್ಳ ಕಥೆ ಇದಾಗಿರೋದ್ರಿಂದ ಬಹುಭಾಷೆಯಲ್ಲಿ ತೆರೆಗೆ ತರ‍್ಬೇಕು ಎನ್ನುವ ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಕಳೆದ ಹತ್ತು ದಿನಗಳಿಂದ ಚಿತ್ರೀಕರಣ ಭರದಿಂದ ಸಾಗ್ತಿದ್ದು, ಸದ್ಯ ಬೆಂಗಳೂರಿನ ಹೆಬ್ಬಾಳದ ಬಳಿ ಇರುವ ವೈಟ್‌ಹೌಸ್‌ನಲ್ಲಿ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ನಡೆಯುತ್ತಿದೆ. ಫೇಮಸ್ಸ್ ಫೈಟ್ ಮಾಸ್ಟರ್ ರವಿವರ್ಮಾ ರಿಯಲ್‌ಸ್ಟಾರ್‌ಗೆ ಆಕ್ಷನ್ ಕೊರಿಯಾಗ್ರಫಿ ಮಾಡ್ತಿದ್ದಾರೆ. ಚಿತ್ರದಲ್ಲಿ ಒಟ್ಟು ನಾಲ್ಕು ಆಕ್ಷನ್ ಬ್ಲಾಕ್ ಸೀಕ್ವೆನ್ಸ್ ಗಳಿದ್ದು ರವಿವರ್ಮಾ ಕಂಪೋಸ್ ಮಾಡಲಿದ್ದಾರೆ. ಭರ್ತಿ 35 ದಿನಲಗಾಮ್’ ಚಿತ್ರಕ್ಕೆ ಕಾಲ್‌ಶೀಟ್ ಕೊಟ್ಟಿದ್ದಾರೆ.

ಲಗಾಮ್’ ಹಾಕಲಿಕ್ಕೆ ಹೊರಟಿರುವ ರಿಯಲ್‌ಸ್ಟಾರ್ ಉಪ್ಪಿಗೆ ಹರಿಪ್ರಿಯಾ ಸಾಥ್ ನೀಡಲಿದ್ದಾರೆ. ಮೊದಲ ಭಾರಿಗೆ ಸೂಪರ್‌ಸ್ಟಾರ್ ಉಪ್ಪಿಗೆ ಜೋಡಿಯಾಗ್ತಿರುವ ಹರಿಪ್ರಿಯಾ ಸಖತ್ ಎಕ್ಸೈಟ್ ಆಗಿದ್ದಾರೆ. ಲಗಾಮ್ ಚಿತ್ರದಲ್ಲಿ ನಂದು ಇನ್ವೆಸ್ಟಿಗೇಷನ್ ಜರ್ನಲಿಸ್ಟ್ ಪಾತ್ರ. ನನ್ನ ಸಿನಿಕರಿಯರ್‌ನಲ್ಲಿ ಫಸ್ಟ್ ಟೈಮ್ ಜರ್ನಲಿಸ್ಟ್ ಆಗಿ ಕಾಣಿಸಿಕೊಳ್ತಿದ್ದು ಈ ಪಾತ್ರ ಹೊಸ ಅನುಭವ ನೀಡ್ತಿದೆ ಅಂತಾರೇ. ರಂಗಾಯಣ ರಘು, ಸಾಧುಕೋಕಿಲ, ಅವಿನಾಶ್, ಜಾನಿ ಕುಟ್ಟಪ್ಪ, ಶೋಭರಾಜ್ ಸೇರಿದಂತೆ ಅದ್ದೂರಿ ತಾರಾಬಳಗವೇ ಈ ಚಿತ್ರದಲ್ಲಿದೆ.

ಮೈಸೂರು- ಬೆಂಗಳೂರು ಸುತ್ತಮುತ್ತ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಿರುವ ಚಿತ್ರತಂಡ ಸಾಂಗ್ ಶೂಟಿಂಗ್‌ಗಾಗಿ ವಿದೇಶಕ್ಕೆ ಹಾರುವ ಪ್ಲ್ಯಾನ್ ಹಾಕಿಕೊಂಡಿದೆ. ಸಾಧುಕೋಕಿಲ ಹಾಗೂ ಅವರ ಪುತ್ರ ಸುರಾಗ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ರಾಜೇಶ್ ಅರಸ್ ಕ್ಯಾಮೆರಾ ಕೈಚಳಕದಲ್ಲಿ `ಲಗಾಮ್’ ಚಿತ್ರೀಕರಣಗೊಳ್ಳುತ್ತಿದೆ. ಎಂ ಆರ್ ಗೌಡ ನಿರ್ಮಾಣದಲ್ಲಿ ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣಗೊಳ್ಳುತ್ತಿದೆ.ಹೈ ಬಜೆಟ್‌ನಲ್ಲಿ ಅದ್ದೂರಿಯಾಗಿ ನಿರ್ಮಾಣಗೊಳ್ತಿರುವ ಈ ಚಿತ್ರ ಕನ್ನಡದ ಲಗಾನ್ ಆಗಲಿದೆಯಂತೆ. ಎಲ್ಲಾ ಅಂದುಕೊಂಡಂತೆ ತಯ್ಯಾರಾದರೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಮಾಡ್ಬೇಕು ಅನ್ನೋದು ಚಿತ್ರತಂಡದ ಅಭಿಪ್ರಾಯ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!