ಜನಪದ ಕಲಾವಿದರ ಪರ ಧ್ವನಿ ಎತ್ತಿದ ಚೇತನ್ !

“ಆ ದಿನಗಳು” ಖ್ಯಾತಿಯ ನಟ ಚೇತನ್ ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರ‍್ತಾರೆ. ಅನ್ಯಾಯ-ಅಕ್ರಮದ ವಿರುದ್ದ ಧ್ವನಿ ಎತ್ತುತ್ತಾ, ದಮನಿತರು, ಶ್ರಮಿಕರು, ಕಾರ್ಮಿಕರು ಸೇರಿದಂತೆ ನ್ಯಾಯದ ಪರವಾಗಿ ಹೋರಾಟ ಮಾಡುತ್ತಾರೆ. ಈಗ ಹಿಂದುಳಿದ ಜನಪದ ಕಲಾವಿದರ ಪರವಾಗಿ ಅಖಾಡಕ್ಕೆ ಇಳಿದಿದ್ದಾರೆ. ಇವತ್ತಿನ ಆಧುನಿಕ ಯುಗದಲ್ಲೂ ನೀರಿಲ್ಲದೆ, ವಿದ್ಯುತ್ ಸೌಲಭ್ಯ ಇಲ್ಲದೇ, ಎಲ್ಲದಕ್ಕಿಂತ ಮಿಗಿಲಾಗಿ ನೆಮ್ಮದಿಯ ನಿಟ್ಟುಸಿರು ಬಿಡೋದಕ್ಕೆ ಸೂರು ಕೂಡ ಇಲ್ಲದೇ ಟೆಂಟ್‌ಗಳಲ್ಲೇ ವಾಸಿಸುತ್ತಿರುವ ಜನಪದ ಕಲಾವಿದರಿಗೆ ಮೂಲ ಸೌಲಭ್ಯ ಒದಗಿಸಬೇಕು ಅಂತ ಚೇತನ್ ಫೀಲ್ಡಿಗಿಳಿದಿದ್ದಾರೆ.


ಹೌದು, ಕೆ ಆರ್ ಪುರಂ ವಡ್ಡರಪಾಳ್ಯದಲ್ಲಿ ಸುಮಾರು ೫೩ಕ್ಕೂ ಹೆಚ್ಚು ಕುಟುಂಬಗಳಿಗೆ ಸರ್ಕಾರದಿಂದ ಯಾವುದೇ ಮೂಲ ಸೌಲಭ್ಯ ಸಿಕ್ಕಿಲ್ಲ. ಒಂದಲ್ಲ.. ಎರಡಲ್ಲ.. ಭರ್ತಿ ಹದಿನೈದು ವರ್ಷಗಳಿಂದ ಈ ಜನಪದ ಕಲಾವಿದರು ಟೆಂಟ್‌ಗಳಲ್ಲಿ ಬದುಕು ಕಟ್ಟಿ ಕೊಟ್ಟಿದ್ದಾರೆ. ಭಾರತೀಯ ಕಲಾ ಸಂಸ್ಕೃತಿಯಲ್ಲಿ ಜನಪದ ಕಲೆಗೆ ವಿಶೇಷವಾದ ಸ್ಥಾನಮಾನವಿದೆ. ಆದರೆ, ಆ ಕಲಾಪರಂಪರೆಯನ್ನು ಉಳಿಸಿಕೊಂಡುವ ಹೋಗ್ತಿರುವ ಕಲಾವಿದರು ಮನೆಯಿಲ್ಲದೇ, ಮಠ ಇಲ್ಲದೇ ಬೀದಿಗೆ ಬಿದ್ದಿದ್ದಾರೆ.

ಇದೆಲ್ಲವನ್ನೂ ಗಮನಿಸಿದ ನಟ ಚೇತನ್, ಸಚಿವ ಭೈರತಿ ಬಸವರಾಜ್‌ಗೆ ಪತ್ರ ಬರೆದಿದ್ದಾರೆ. ಶೋಚನೀಯ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಕೆ ಆರ್ ಪುರಂ ಸಮೀಪದ ೫೩ ಜನಪದ ಕಲಾವಿದರ ಕುಟುಂಬಕ್ಕೆ ಆಶ್ರಯದ ಜೊತೆಗೆ ಜಾನುವಾರುಗಳಿಗೆ ಸ್ಥಳ ನೀಡುವ ಮೂಲಕ ಪುನರ್ವಸತಿ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Related Posts

error: Content is protected !!