ಚಿತ್ರೀಕರಣ ದ ಕ್ಲೈಮ್ಯಾಕ್ಸ್ ನಲ್ಲಿ ‘ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರ ತಂಡ
ನಾನೂ ಕೂಡ ಮಲೆನಾಡಿನ ಹುಡುಗ.ಪಾತ್ರವೂ ಕೂಡ ಟಿಪಿಕಲ್ ಮಲೆ ನಾಡಿನ ಹುಡುಗನದ್ದು. ಹಳೇ ಮೋಟಾರ್ ಬೈಕು, 800 ಕಾರು, ಸೋನೆಮಳೆ, ಅಡಿಕೆ ಕೋಯ್ಲು….ಎಲ್ಲವೂ ನಿಜ ಜೀವನದ್ದೇ. ಮೇಲಾಗಿ ಐಂದ್ರಿತಾ ರೇ ಜತೆಗೆ ಏಳು ವರ್ಷದ ನಂತರ ಅಭಿನಯ. ಇದೊಂದು ತುಂಬಾ ಸೊಗಸಾದ ಜರ್ನಿ…..
ನಟ ದೂದ್ ಪೇಡಾ ಹೀಗೆ ಚಿತ್ರ ದಲ್ಲಿನ ತಮ್ಮ ಪಾತ್ರ, ಪತ್ನಿ ಐಂದ್ರಿತಾ ರೇ ಜತೆಗೆ ಮತ್ತೆ ಅಭಿನಯಿಸುತ್ತಿರುವ ಅನುಭವ ಬಿಚ್ಚಿಡುತ್ತಾ ಹೋದರು. ಅಂದ ಹಾಗೆ ಅವರು ಅಲ್ಲಿ ಹೇಳುತ್ತಾ ಹೋಗಿದ್ದು ’ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದ ಕುರಿತು. ಈ ಚಿತ್ರವೀಗ ಶೇಕಡಾ 90ರಷ್ಟು ಭಾಗದ ಚಿತ್ರೀಕರಣ ಮುಗಿಸಿದೆ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಜತೆಗೆ ಒಂದಷ್ಟು ಪ್ರಚಾರ ಕಾರ್ಯಕ್ಕೂ ಮುಂದಾಗಿದೆ. ಅದೇ ಸಲುವಾಗಿ ಇತ್ತೀಚೆಗೆ ಚಿತ್ರ ತಂಡ ಮಾಧ್ಯಮ ಮುಂದೆ ಬಂದಾಗ ಒಂದಷ್ಟು ಸಂಗತಿ ಹಂಚಿಕೊಂಡಿತು.
‘ನನ್ನ ಮಟ್ಟಿಗೆ ಇದೊಂದು ವಿಶೇಷವಾದ ಸಿನಿಮಾ. ಯಾಕಂದ್ರೆ ನಾನು ಕೂಡ ಮಲೆನಾಡಿನವನು.ಈಕತೆ ನಡೆಯುವುದು ಕೂಡ ಅಲೆಯೇ.ಹಾಗೆಯೇ ನನ್ನ ಪಾತ್ರವೂ ಕೂಡ .ಇದೆಲ್ಲ ನಂಗೆ ನಿಜ ಜೀವನದಲ್ಲೇ ಆದ ಅನುಭವ. ಹಾಗಾಗಿ ಈ ಸಿನಿಮಾವನ್ನು ಖುಷಿಯಿಂದಲೇ ಒಪ್ಪಿಕೊಂಡಿದ್ದೆ. ಅಷ್ಟೇ ಖುಷಿಯಲ್ಲೇ ಚಿತ್ರೀಕರದಲ್ಲಿ ಪಾಲ್ಗೊಂಡಿದ್ದೇನೆ ‘ಅಂತ ಹೇಳುತ್ತಾರೆ ದಿಗಂತ್.
‘ ಎರಡೂವರೆ ವರ್ಷದ ಪಯಣ ಇಲ್ಲಿಯತನಕ ತಂದು ನಿಲ್ಲಿಸಿದೆ. ಚಿತ್ರದಲ್ಲಿ ಮಲೆನಾಡಿನ ಜನಜೀವನವನ್ನು ಬಿಂಬಿಸಲಾಗಿದೆ. ದಿಗಂತ್‌ರವರು ಶಂಕರನಾಗಿ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಅವರ ಜೀವನದಲ್ಲಿ ನಡೆದ ಒಂದು ಘಟನೆಯಿಂದ ಏನೇನು ಅವಾಂತರಗಳು ಆಗುತ್ತದೆ. ಅದರಿಂದ ಹೇಗೆ ಹೊರಗೆ ಬರುತ್ತಾರೆ ಎಂಬುದನ್ನು ಹಾಸ್ಯದ ಮೂಲಕ ತೋರಿಸಲಾಗಿದೆ’ ಎಂದು ಹೇಳುವ ಮೂಲಕ ಚಿತ್ರದ ಕತೆಯ ಬಗ್ಗೆ ಕುತೂಹಲ ಮೂಡಿಸಿದರು ನಿರ್ದೇಶಕ. ವಿನಾಯಕ ಕೊಡ್ಸರ.
ಇದೊಂದು ದೊಡ್ಡ ತಾರಾಗಣವಿರುವ ಚಿತ್ರ. ಐಂದ್ರಿತಾರೈ, ರಂಜನಿರಾಘವನ್ ಚಿತ್ರದ ನಾಯಕಿ ಯರು.ಅವರಂತೆಯೇ ಉಮಾಶ್ರೀ, ವಿದ್ಯಾಮೂರ್ತಿ, ರವಿಕಿರಣ್, ಯಶ್‌ವಂತ್ ಸರ್‌ದೇಶಪಾಂಡೆ, ಕಾಸರಗೂಡುಚಿನ್ನ ಕೂಡ ಇದ್ದಾರೆ.ಚಿತ್ರಕ್ಕೀಗ ಸಾಗರ, ಸಿಗಂದೂರು ಮತ್ತು ಬೆಂಗಳೂರು ಕಡೆಗಳಲ್ಲಿ ಶೂಟಿಂಗ್ ನಡೆದಿದೆ. ಹಾಗೆಯೇ ಶೇಕಡ ಐವತ್ತರಷ್ಟು ಡಬ್ಬಿಂಗ್ ಮುಗಿದಿದೆ . ಚಿತ್ರಕ್ಕೆ ಬಂಡವಾಳ ಹಾಕಿದವರು ಸಿಲ್ಕ್ ಮಂಜು.
‘ ಒನ್ ಲೈನ್ ಕತೆ ಹೇಳಿದ್ದು ಕುತೂಹಲ ಮೂಡಿಸಿತು. ಅದರಿಂದಲೇ ದೀರ್ಘ ಕಾಲದ ನಂತರ ಬಂಡವಾಳ ಹೂಡಿರುವುದು ನೆಮ್ಮದಿ ಸಿಕ್ಕಿದೆ. ಸದ್ಯದಲ್ಲೆ ಮತ್ತೋಂದು ಚಿತ್ರವನ್ನು ಮಾಡುವುದಾಗಿ ಅವರು ಮಾಹಿತಿ ಕೊಟ್ಟರು.ನಟಿಯರಾದ ಐಂದ್ರಿತಾ ಹಾಗೂ ರಂಜನಿ ರಾಘವನ್ ಇಬ್ಬರು ಮಾತನಾಡಿ, ಚಿತ್ರ ಕತೆ ತುಂಬಾ ಚೆನ್ನಾಗಿದೆ ಎಂದರು.ಪ್ರಜ್ವಲ್ ಪೈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.ರವೀಂದ್ರ ಜೋಷಿ ಕಾರ್ಯಕಾರಿ ನಿರ್ಮಾಪಕರು. ಹಾಗೆಯೇ ನಂದ ಕಿಶೋರ್ ಛಾಯಾಗ್ರಹಣ, ವೇಣುಹಸ್ರಾಳಿ ಸಂಭಾಷಣೆ, ಸಂಕಲನಕಾರ ರಾಹುಲ್ ಸಂಕಲನ ಚಿತ್ರಕ್ಕಿದೆ. ಸದ್ಯಕ್ಕೆ ಇನ್ನಷ್ಟು ಚಿತ್ರೀಕರಣ ಬಾಕಿ ಉಳಿಸಿಕೊಂಡಿರುವ ಚಿತ್ರ ಅದೆಲ್ಲ ಮುಗಿಸಿಕೊಂಡು ಮೇ ತಿಂಗಳಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.