ಪ್ರೀತಿಯ ಬಲೆಯಲ್ಲಿ ಅಮೀರ್‌ ಪುತ್ರಿ – ಟ್ವೀಟ್‌ ಮೂಲಕ ಪ್ರಿಯಕರನ ಫೋಟೋ ಹಂಚಿಕೊಂಡ ಇರಾ

ಇತ್ತೀಚೆಗೆ ಸ್ಟಾರ್ ನಟರ ಮಕ್ಕಳು ಸಿನಿಮಾರಂಗದಲ್ಲಿ ಮಿಂಚುತ್ತಿರೋದು ಗೊತ್ತೇ ಇದೆ. ಇದು ಹೊಸದಲ್ಲ. ಸ್ಯಾಂಡಲ್‌ವುಡ್, ಬಾಲಿವುಡ್, ಟಾಲಿವುಡ್ ಹೀಗೆ ಯಾವುದೇ ಭಾಷೆಯ ಚಿತ್ರರಂಗವನ್ನು ಗಮನಿಸಿದರೂ ಅಲ್ಲಿ ಒಂದಷ್ಟು ಸ್ಟಾರ್ ನಟ,ನಟಿಯರ ಮಕ್ಕಳೂ ಕೂಡ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಈಗ ಬಾಲಿವುಡ್ ನಟ ಅಮೀರ್‌ಖಾನ್ ಪುತ್ರಿ ಇರಾಖಾನ್‌ ಕೂಡ ಜೋರು ಸುದ್ದಿಯಲ್ಲಿದ್ದಾರೆ. ಅಂದಂತೆ, ಅವರೇನೂ ಹೊಸ ಸಿನಿಮಾ ಮಾಡುತ್ತಿಲ್ಲ.

ಆದರೆ, ತಾವು ಪ್ರೀತಿ ಮಾಡುತ್ತಿರುವ ಪ್ರಿಯಕರನ ಬಗ್ಗೆ ಹೇಳಿಕೊಂಡಿದ್ದಾರೆ. ಸ್ವತಃ ತಮ್ಮ ಟ್ವೀಟ್‌ ಮೂಲಕ ಈ ವಿಷಯವನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ಅದು ಫೋಟೋ ಸಮೇತ. ಇಷ್ಟಕ್ಕೂ ಅಮೀರ್‌ಖಾನ್‌ ಪುತ್ರಿ ಇರಾಖಾನ್‌ ಪ್ರೀತಿಯ ಬಲೆಗೆ ಬಿದ್ದಿರೋದು, ಆಕೆಗೆ ಫಿಟ್ನೆಸ್ ತರಬೇತಿ ಕೊಡುತ್ತಿರುವ ನೂಪುರ್ ಶಿಖರೆ ಅವರನ್ನು. ಇದನ್ನು ಇರಾಖಾನ್‌ ಅವರೇ ಸ್ಪಷ್ಟಪಡಿಸಿದ್ದಾರೆ. ನೂಪುರ್ ಶಿಖರೆ ಈಗಾಗಲೇ ಸಾಕಷ್ಟು ಹಿಂದಿ ನಟ, ನಟಿಯರಿಗೆ ಫಿಟ್ನೆಸ್ ತರಬೇತಿ ನೀಡಿದ್ದಾರೆ. ಇನ್ನೇನು ಪ್ರೇಮಿಗಳ ದಿನ ಕೂಡ ಬರುತ್ತಿರುವುದರಿಂದ ಇರಾಖಾನ್‌ ಈ ಪ್ರೀತಿಯ ವಿಷಯವನ್ನು ಹಂಚಿಕೊಂಡಿದ್ದಾರೆ.

Related Posts

error: Content is protected !!