ಕಿಚ್ಚ ಸ್ವಾಮಿ! ಬಿಗ್‌ಬಾಸ್‌ ಭವಿಷ್ಯ ಹೇಳೋಕೆ ಸ್ವಾಮಿ ಗೆಟಪ್‌ನಲ್ಲಿ ಬಂದ್ರು


– ಇಲ್ಲಿರುವ ಫೋಟೋ ನೋಡಿದವರಿಗೆ ಒಂದು ರೀತಿ ಅಚ್ಚರಿಯಾಗಬಹುದು, ಹೊಸ ಸಿನಿಮಾದಲ್ಲೇನಾದರೂ ಪಾತ್ರ ಮಾಡುತ್ತಿದ್ದಾರಾ ಅಂತಾನೂ ಅನಿಸಬಹುದು. ಆದರೆ, ಸಿನಿಮಾ ವಿಷಯವಲ್ಲ. ಅವರು ಯಾವುದೋ ಸಿನಿಮಾದಲ್ಲಿ ಸ್ವಾಮೀಜಿ ಪಾತ್ರ ಮಾಡುತ್ತಿಲ್ಲ. ಬದಲಾಗಿ ಅವರು “ಬಿಗ್‌ಬಾಸ್‌” ಪ್ರೋಮೋಗಾಗಿ ಮಾಡಿರುವ ಪಾತ್ರದ ಒಂದು ಫೋಟೋವಷ್ಟೇ. ಸದ್ಯಕ್ಕೆ ಕಲರ್ಸ್‌ ಕನ್ನಡ ವಾಹಿನಿ ಸೋಶಿಯಲ್‌ ಮೀಡಿಯಾದಲ್ಲಿ ಈ ಫೋಟೋ ಹಂಚಿಕೊಂಡಿದೆ. “ಬಿಗ್‌ಬಾಸ್”‌ ೮ ನೇ ಆವೃತ್ತಿಗೆಂದೇ ಒಂದು ಫೋಟೋ ಹರಿಬಿಟ್ಟಿದೆ. ಆ ಫೋಟೋ ನೋಡಿದವರಿಗೆ ಜ್ಯೋತಿಷಿಗಳಂತೆಯೇ ಕಾಣುತ್ತಾರೆ.

ಅಭಿನಯ ಚಕ್ರವರ್ತಿಯ ಸ್ವಾಮೀಜಿ ಗೆಟಪ್‌ನ ಫೋಟೋ ಶೇರ್ ಮಾಡಿರುವ ಕಲರ್ಸ್ ಕನ್ನಡ ವಾಹಿನಿ, “ಲಾಕ್ ಡೌನ್ 8.0ಗೆ ಕಿಚ್ಚ ಜೋಯಿಸರು ಇಟ್ಟಿರೋ ಮುಹೂರ್ತ ಯಾವುದು? ಗೆಸ್ ಮಾಡಿ” ಎಂದು ಪೋಸ್ಟ್ ಮಾಡಿದೆ. “ಬಿಗ್‌ಬಾಸ್” ಹೊಸ ಆವೃತ್ತಿ ಯಾವಾಗ ಆರಂಭವಾಗುತ್ತದೆ ಎಂಬುದರ ಬಗ್ಗೆ ಅಧಿಕೃತವಾಗಿ ಘೋಷಿಸದ ವಾಹಿನಿ, ಪ್ರೇಕ್ಷಕರಲ್ಲಿ ಒಂದಷ್ಟು ಕುತೂಹಲ ಮೂಡಿಸಿರುವುದಂತೂ ನಿಜ. ಸದ್ಯದ ಮಾಹಿತಿ ಪ್ರಕಾರ, ಬಿಗ್‌ಬಾಸ್ ಕನ್ನಡ 8ನೇ ಆವೃತ್ತಿ ಫೆಬ್ರವರಿ 28 ರಂದು ಆರಂಭವಾಗಲಿದೆ. ಯಾರೆಲ್ಲಾ ಸ್ಪರ್ಧಿಗಳು ಇದ್ದಾರೆ ಅನ್ನೋದು ಗೌಪ್ಯ.

Related Posts

error: Content is protected !!