Categories
ಸಿನಿ ಸುದ್ದಿ

ಹ್ಯಾಟ್ರಿಕ್ ಹೀರೋ ಹುಟ್ಟು ಹಬ್ಬ-ಅಭಿಮಾನಿಗಳಿಗೆ ಹಬ್ಬದೂಟ – 123 ಟು 126 ರಹಸ್ಯ ಏನ್‌ ಗೊತ್ತಾ..!

ಬರಹ: ವಿಶಾಲಾಕ್ಷಿ

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ಗೆ ಇಂದು (ಜುಲೈ 12) ಹುಟ್ಟುಹಬ್ಬದ ಸಂಭ್ರಮ. 59ವರ್ಷಗಳನ್ನ ಪೂರೈಸಿ 60 ನೇ ವಸಂತಕ್ಕೆ ಕಾಲಿಟ್ಟಿರೋ ಶಿವಣ್ಣನಿಗೆ ಶುಭಾಷಯಗಳ ಮಹಾಪೂರವೇ ಹರಿದು ಬಂದಿದೆ. ಸ್ಯಾಂಡಲ್‌ವುಡ್ ಸೆಲಬ್ರಿಟಿಗಳು ಸೇರಿದಂತೆ ಕರುನಾಡಿನ ಕೋಟ್ಯಾಂತರ ಅಭಿಮಾನಿ ಬಳಗದವರು ಶುಭಕೋರಿದ್ದಾರೆ. ಪ್ರತಿವರ್ಷ ದೊಡ್ಮನೆ ಮುಂದೆ ಅಭಿಮಾನಿಗಳ ದಂಡೇ ಸೇರಿರುತ್ತಿತ್ತು. ಸಹಸ್ರಾರು ಅಭಿಮಾನಿ ದೇವರುಗಳೊಟ್ಟಿಗೆ ಹ್ಯಾಟ್ರಿಕ್ ಹೀರೋ ತಮ್ಮ ಬರ್ತ್ಡೇನಾ ಸೆಲಬ್ರೇಟ್ ಮಾಡಿಕೊಳ್ಳುತ್ತಿದ್ದರು. ಆದರೆ, ಕಳೆದ ಎರಡು ವರ್ಷಗಳಿಂದ ಕೊರೊನಾ ಕಾಡುತ್ತಿರುವುದರಿಂದ ಅದ್ದೂರಿ ಬರ್ತ್ಡೇಗೆ ಬ್ರೇಕ್ ಹಾಕಿದ್ದಾರೆ. ಹುಟ್ಟುಹಬ್ಬ ಆಚರಣೆಗಿಂತ ಎಲ್ಲರ ಆರೋಗ್ಯ ಮುಖ್ಯವೆಂದು ನಿರ್ಧರಿಸಿದ ಶಿವಣ್ಣ ,ಮನೆಯಲ್ಲೇ ಕುಟುಂಬಸ್ಥರ ಜೊತೆ ಕೇಕ್ ಮಾಡಿ ಸಂಭ್ರಮಿಸಿದ್ದಾರೆ. ದೊಡ್ಮನೆ ಭಕ್ತರು ಕೂಡ ಹಬ್ಬಮಾಡಿ ಸಂಭ್ರಮಿಸುವಂತೆ ಮಾಡಿದ್ದಾರೆ.

ದೊಡ್ಮನೆ ಭಕ್ತರಿಗೆ ಸಿಕ್ತಲ್ಲ ಭರ್ಜರಿ ಉಡುಗೊರೆ !
ಭಜರಂಗಿಗೆ ಉಘೇ ಉಘೇ ಎಂದರಲ್ಲ ಫ್ಯಾನ್ಸ್ !

ಶಿವಣ್ಣ ತಮ್ಮ ಬರ್ತ್ಡೇ ಬೇಡವೆಂದು ಹೇಳಿದಾಗ ಅಭಿಮಾನಿ ದೇವರುಗಳು ಅಪ್‌ಸೆಟ್ ಆದರು. ಕರುನಾಡ ಚಕ್ರವರ್ತಿಯ ದರ್ಶನ ಈ ವರ್ಷವೂ ಮಿಸ್ಸಾಯ್ತಲ್ಲ ಅಂತ ಬೇಸರಗೊಂಡರು. ಹೀಗೆ, ಅಪ್‌ಸೆಟ್ ಆದ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಡುವುದರ ಮೂಲಕ ಥ್ರಿಲ್ಲಾಗುವಂತೆ ಮಾಡಿದ್ದಾರೆ. ಭಜರಂಗಿ ಕೊಟ್ಟ ಕಾಣಿಕೆಗೆ ದೊಡ್ಮನೆ ಫ್ಯಾನ್ಸ್ ಉಘೇ ಉಘೇ ಎನ್ನುತ್ತಿದ್ದಾರೆ. ನಿರ್ದೇಶಕ ಹರ್ಷ ಅಂಡ್ ಟೀಮ್‌ಗೆ ಫ್ಯಾನ್ಸ್ ಹ್ಯಾಟ್ಸಾಫ್ ಹೇಳ್ತಿದ್ದಾರೆ.

ಸನ್ ಬಂಗಾರದ ಮನುಷ್ಯನ ಹುಟ್ಟುಹಬ್ಬಕ್ಕೆ ಭಜರಂಗಿ-2 ಟೀಮ್ ಟೀಸರ್‌ನ ಗಿಫ್ಟ್ ಮಾಡಿದೆ. `ಭಗವಂತನ ಸ್ವತ್ತನ್ನ ನಾಶಮಾಡ್ತೀನಿ ಅಂತ ಹೊರಟ್ರೆ ಅದನ್ನ ಕಾಪಾಡೋದಕ್ಕೆ ಭಗವಂತನೇ ಅವತಾರ ಎತ್ತಿ ಬರಬೇಕಾಗಿಲ್ಲ, ಅವನ ರೂಪದಲ್ಲಿ ಇನ್ನೊಬ್ಬ ರಕ್ಷಕ ಹುಟ್ಟಿರ‍್ತಾನೆ’. ಇದು ಭಜರಂಗಿ-2 ಚಿತ್ರದ ಡೈಲಾಗ್. ಈ ಡೈಲಾಗ್ ಕೇಳಿಸಿಕೊಂಡ್ಮೇಲೆ, ಹ್ಯಾಟ್ರಿಕ್ ಹೀರೋ ಶಿವಣ್ಣನ ಖದರ್ ತುಂಬಿರುವ ಅವತಾರ ಕಂಡ್ಮೇಲೆ ದೊಡ್ಮನೆ ಫ್ಯಾನ್ಸ್ ಕಾಲರ್‌ಪಟ್ಟಿ ಟೈಟ್ ಮಾಡಿಕೊಳ್ತಿದ್ದಾರೆ. ಭಜರಂಗಿಯ ದರ್ಶನ ಆದಷ್ಟು ಬೇಗ ಮಾಡ್ಸಿ ಸರ್ ಅಂತ ನಿರ್ದೇಶಕ ಹರ್ಷ ಅವರಲ್ಲಿ ಮನವಿ ಮಾಡಿಕೊಳ್ತಿದ್ದಾರೆ.

ಭಜರಂಗಿ ಡೈರೆಕ್ಟರ್‌ಗೆ ಶಿವಣ್ಣ ಮತ್ತೆ ಕಾಲ್‌ಶೀಟ್ !
ಸೆಂಚುರಿಸ್ಟಾರ್ ಸಿನಿಜರ್ನಿಯ 125ನೇ ಚಿತ್ರ ಹರ್ಷ ಪಾಲಾಯ್ತು !

ಭಜರಂಗಿಯ ಎರಡನೇ ಆಟ ಬೆಳ್ಳಿಪರದೆ ಮೇಲೆ ಶುರುವಾಗುವ ಮೊದಲೇ ನಿರ್ದೇಶಕ ಹರ್ಷಗೆ ಸೆಂಚುರಿಸ್ಟಾರ್ ಶಿವಣ್ಣರ ಕಾಲ್‌ಶೀಟ್ ಸಿಕ್ಕಿದೆ. ವಜ್ರಕಾಯ, ಭಜರಂಗಿ, ಭಜರಂಗಿ-2 ಹೀಗೆ ಬ್ಯಾಕ್ ಟು ಬ್ಯಾಕ್ ಮಾರುತಿ ಟೈಟಲ್ ಇಟ್ಟು ಹ್ಯಾಟ್ರಿಕ್ ಹೀರೋಗೆ ಆಕ್ಷನ್ ಕಟ್ ಹೇಳಿದ್ದರು. ಇದೀಗ, `ವೇದ’ ಶೀರ್ಷಿಕೆಯಲ್ಲಿ ಮತ್ತೊಮ್ಮೆ ಶಿವಣ್ಣರಿಗೆ ಆಕ್ಷನ್ ಕಟ್ ಹೇಳುವ ಅವಕಾಶ ಸಿಕ್ಕಿದೆ. ಸೆಂಚುರಿಸ್ಟಾರ್ ಸಿನಿಜರ್ನಿಯ ೧೨೫ನೇ ಸಿನಿಮಾನ ಡೈರೆಕ್ಟ್ ಮಾಡುವ ಅದೃಷ್ಟ ಭಜರಂಗಿ ಡೈರೆಕ್ಟರ್ ಪಾಲಾಗಿದೆ. ೧೨೫ನೇ ಸಿನಿಮಾವನ್ನು ಸನ್ ಬಂಗಾರದ ಮನುಷ್ಯನ ಸಿನಿಯಾನದ ಮೈಲ್‌ಸ್ಟೋನ್ ಆಗಿಸುವ ಜವಬ್ದಾರಿ ಹರ್ಷ ಮೇಲಿದೆ.

`123 ಟು 126′ ಸೆಂಚುರಿಸ್ಟಾರ್ ಸೂಪರ್ ಸೀಕ್ರೇಟ್ !
ವಿಜಯ್-ರಿಷಬ್-ಬಂಡಿಯಪ್ಪ-ಅನಿಲ್-ಆಕ್ಷನ್ ಕಟ್ !

ದೊಡ್ಮನೆ ಫ್ಯಾನ್ಸ್ಗೆ `123 ಟು 126′ ಸೀಕ್ರೇಟ್ ಏನು ಅನ್ನೋದು ಈಗಾಗಲೇ ಗೊತ್ತಾಗಿರುತ್ತೆ. ಎನಿವೇ, ನಾವು ಒಮ್ಮೆ ಅದನ್ನು ರೀಕಾಲ್ ಮಾಡ್ತೇವೆ. ಸೆಂಚುರಿಸ್ಟಾರ್ ಸಿನಿಖಾತೆಗೆ ಬಂದು ಡೆಪಾಸಿಟ್ ಆಗಿರುವ ಚಿತ್ರಗಳ ಕಥೆಯನ್ನ ನಿಮ್ಮ ಮುಂದೆ ಇಡ್ತೇವೆ. 60ನೇ ವಸಂತಕ್ಕೆ ಕಾಲಿಡುವಷ್ಟರಲ್ಲಿ ಶಿವಣ್ಣ 120 ಸಿನಿಮಾಗಳನ್ನ ಕನ್ನಡ ಚಿತ್ರರಂಗಕ್ಕೆ ಕಾಣಿಕೆಯಾಗಿ ಕೊಟ್ಟಿದ್ದಾರೆ. ಈಗ 123ನೇ ಚಿತ್ರದಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಔಟ್ ಅಂಡ್ ಔಟ್ ಆಕ್ಷನ್ ಸಿನಿಮಾವಾಗಿದ್ದು ವಿಜಯ್ ಮಿಲ್ಟನ್ ಅನ್ನೋರು ನಿರ್ದೇಶನ ಮಾಡ್ತಿದ್ದಾರೆ. ಶಿವಪ್ಪ ಅನ್ನೋ ಟೈಟಲ್‌ನಲ್ಲಿ ಸಿನಿಮಾ ಸೆಟ್ಟೇರಿತ್ತು ಇದೀಗ ಟೈಟಲ್ ಬದಲಾವಣೆಗೆ ಚಿತ್ರತಂಡ ನಿರ್ಧರಿಸಿದೆ. ಶಿವರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿರುವ ಮಾಸ್ ಪೋಸ್ಟರ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಟಗರು-ಡಾಲಿ ಕಾಂಬಿನೇಷನ್ ಕೂತೂಹಲ ಕೆರಳಿಸಿದೆ.

ಸೆಂಚುರಿಸ್ಟಾರ್ ಸಿನಿಮಾ ಖಾತೆ ಒಂದು ಥರ ಲೋಡೆಡ್ ಗನ್ನು ಇದ್ದಹಾಗೇ. ಪಿಸ್ತೂಲ್‌ನಲ್ಲಿರುವ ಬುಲೆಟ್ ಖಾಲಿಯಾದರೆ ಆಗಬಹುದು ಆದರೆ ಶಿವಣ್ಣನ ಸಿನಿಮಾ ಅಕೌಂಟ್‌ನಲ್ಲಿ ಚಿತ್ರಗಳಿಲ್ಲದೇ ಇರೋದಕ್ಕೆ ಸಾಧ್ಯನೇ ಇಲ್ಲ. ಸಂಡೇ ಹೊರತುಪಡಿಸಿದರೆ, ಹಬ್ಬ ಹರಿದಿನಗಳನ್ನು ಬದಿಗಿಟ್ಟರೆ ವರ್ಷದ ಉಳಿದೆಲ್ಲ ದಿನಗಳಲ್ಲೂ ಶಿವಣ್ಣ ಶೂಟಿಂಗ್ ಸ್ಪಾಟ್, ಡಬ್ಬಿಂಗ್ ಸ್ಟುಡಿಯೋ, ಸಿನಿಮಾ ಪ್ರಮೋಷನ್ ಹೀಗೆ ಮೂವೀ ಕಾರ್ಯಗಳಲ್ಲೇ ಬ್ಯುಸಿಯಾಗರ‍್ತಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಕೊಡ್ತಾನೆ ರ‍್ತಾರೆ. ಸದ್ಯ 123ನೇ ಚಿತ್ರದಲ್ಲಿ ಬ್ಯುಸಿಯಾಗಿರೋ ಶಿವಣ್ಣ 126ನೇ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಯುವರಾಜನ ಕಾಲ್‌ಶೀಟ್ ಪಡೆದುಕೊಂಡಿರುವ ಶೆಟ್ರು ಫುಲ್ ಖುಷಿಯಾಗಿದ್ದಾರೆ.

ಹೌದು, ಶಿವರಾಜ್‌ಕುಮಾರ್ ಅವರ 126ನೇ ಚಿತ್ರವನ್ನು ನಿರ್ದೇಶಿಸುವ ಅವಕಾಶ ರಿಷಬ್‌ಶೆಟ್ಟಿಗೆ ಸಿಕ್ಕಿದೆ. ಮೊದಲ ಭಾರಿಗೆ ದೊಡ್ಮನೆ ಆಕ್ಟರ್‌ಗೆ ಆಕ್ಷನ್ ಕಟ್ ಹೇಳೋದಕ್ಕೆ ಶೆಟ್ರು ಫುಲ್ ಎಕ್ಸೈಟ್ ಆಗಿದ್ದಾರೆ. ಜಯ್ಯಣ್ಣ-ಭೋಗೇಂದ್ರ ಅವರು ಅದ್ದೂರಿಯಾಗಿ ಸಿನಿಮಾ ಮಾಡುವ ಪ್ಲ್ಯಾನ್‌ನಲ್ಲಿದ್ದಾರೆ. ಶಿವಣ್ಣನ ಸಿನಿಕರಿಯರ್‌ನ 125ನೇ ಚಿತ್ರವನ್ನು ನಿರ್ದೇಶಕ ಹರ್ಷ ಮಾಡಿಮುಗಿಸಿದ್ಮೇಲೆ `ರಿಷಬ್ ಮತ್ತು ಸೆಂಚುರಿಸ್ಟಾರ್’ ಕಾಂಬಿನೇಷನ್ ಸಿನಿಮಾ ಸೆಟ್ಟೇರಲಿದೆ.

ಇನ್ನೂ 124 ನೇ ಚಿತ್ರ ಯಾವುದಾಗುತ್ತೆ ಅನ್ನೋದು ಶಿವಸೈನ್ಯದ ಕೂತೂಹಲಕ್ಕೆ ಕಾರಣವಾಗಿದೆ. ದೊಡ್ಮನೆಯ ಸಂಬಂಧಿಕರಾದ ಲಕ್ಕಿ ಗೋಪಾಲ್ ಶಿವಣ್ಣನಿಗೆ ಎಸ್ ಆರ್ ಕೆ' ಟೈಟಲ್‌ನಲ್ಲಿ ಸಿನಿಮಾ ಅನೌನ್ಸ್ ಮಾಡಿದ್ದರು. ಟೈಟಲ್‌ನಿಂದಲೇಎಸ್‌ಆರ್‌ಕೆ’ ಭಾರೀ ಹೈಪ್ ಕ್ರಿಯೇಟ್ ಮಾಡಿಕೊಂಡಿತ್ತು. ಈ ಚಿತ್ರವೇ ಶಿವರಾಜ್‌ಕುಮಾರ್ ಅವರ ೧೨೪ನೇ ಚಿತ್ರ ಆಗಬಹುದಾ ಅನ್ನೋದು ಫ್ಯಾನ್ಸ್ ಲೆಕ್ಕಚ್ಚಾರ. ಈ ನಡುವೆ, ಅನಿಲ್ ರವಿಪುಡಿ ಹಾಗೂ ಚಂದ್ರಶೇಖರ್ ಬಂಡಿಯಪ್ಪ ಅವರಿಗೆ `ಸನ್ ಆಫ್ ಬಂಗಾರದ ಮನುಷ್ಯ’ನ ಕಾಲ್‌ಶೀಟ್ ಸಿಕ್ಕಿರುವ ವಿಷ್ಯ ಹೊರಬಿದ್ದಿದೆ. ರಥಾವರ ಹಾಗೂ ತಾರಾಕಾಸುರದಂತಹ ಹಿಟ್ ಚಿತ್ರಗಳನ್ನು ಕೊಟ್ಟಿರುವಂತಹ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪನವರಿಗೆ ತಮ್ಮ ಹುಟ್ಟುಹಬ್ಬದ ದಿನದಂದು ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೀಗೆ ಒಂದರ ಹಿಂದೆ ಒಂದು ಸಿನಿಮಾಗಳನ್ನು ಶಿವಣ್ಣ ಒಪ್ಪಿಕೊಳ್ಳುತ್ತಿದ್ದಾರೆ. ಸಿನಿಮಾ ಲೇಟಾದ್ರೂ ಪರವಾಗಿಲ್ಲ ಸೆಂಚುರಿಸ್ಟಾರ್ ಕಾಲ್‌ಶೀಟ್ ಸಿಕ್ಕರೆ ಸಾಕು ಅಂತ ನಿರ್ದೇಶಕರು ನಾ ಮುಂದು ತಾ ಮುಂದು ಅಂತ ಕಾಲ್‌ಶೀಟ್ ಪಡೆಯೋದ್ರಲ್ಲಿ ಬ್ಯುಸಿಯಾಗಿದ್ದಾರೆ.

ಸ್ಯಾಂಡಲ್‌ವುಡ್‌ನ ಚಿರಯುವಕ ಅಂತ ಕರೆಸಿಕೊಳ್ಳುವ ಶಿವಣ್ಣ 60ರ ಹರೆಯದಲ್ಲೂ ಇವತ್ತಿನ ಯಂಗ್‌ಸ್ಟರ್‌ಗಳಿಗೆ ಸೆಡ್ಡುಹೊಡೆಯುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಅವರ ಸಿನಿಮಾ ಪ್ರೀತಿ ಹಾಗೂ ಭಕ್ತಿ. ಮೊದಲ ಸಿನಿಮಾದಲ್ಲಿದ್ದ ಉತ್ಸಾಹ-ಹುರುಪು-ಹುಮ್ಮಸ್ಸಿನ ಜೊತೆಗೆ ಅದೇ ಫೋರ್ಸ್ ಹಾಗೂ ಚಾರ್ಮ್ 123 ನೇ ಸಿನಿಮಾದಲ್ಲೂ ಇದೆ. 60ರಲ್ಲೂ 30ರ ಹರೆಯದ ಹುಡುಗನಂತೆ ಫಿಸಿಕ್ ಮೆಂಟೇನ್ ಮಾಡಿದ್ದಾರೆ. ಬೆಳ್ಳಿಪರದೆ ಬೆಚ್ಚಿಬೆರಗಾಗುವಂತಹ ನೋಟ ಹಾಗೂ ನಟನೆಯಿಂದ ಬಾಕ್ಸ್ಆಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿದ್ದಾರೆ. ಎನಿವೇ ಟಗರು ಆರ್ಭಟ ಹೀಗೆ ಮುಂದುವರೆಯಲಿ, ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಕೊಡುಗೆ ನೀಡುತ್ತಾ ಪ್ರೇಕ್ಷಕ ಮಹಾಷಯರನ್ನ ರಂಜಿಸುತ್ತಿರಲಿ.

Categories
ಸಿನಿ ಸುದ್ದಿ

ಸೆಟ್ಟೇರಿತು ಪಿ.ವಾಸು ನಿರ್ದೇಶನದ ದೃಶ್ಯ-2; ಈ ಬಾರಿ ಕ್ರೇಜಿಸ್ಟಾರ್‌ ಜೊತೆ ಅನಂತ್ ನಾಗ್‌ ನಟನೆ‌

2014 ರಲ್ಲಿ ತೆರೆಕಂಡು ಅಪಾರ ಮೆಚ್ಚುಗೆ ಪಡೆದುಕೊಂಡಿದ್ದ ಚಿತ್ರ “ದೃಶ್ಯ”. ಈಗ ಇದೇ ಚಿತ್ರದ ಮುಂದುವರೆದ ಭಾಗ ” ದೃಶ್ಯ 2″ ಎಂಬ ಹೆಸರಿನಿಂದ ನಿರ್ಮಾಣವಾಗುತ್ತಿದೆ.
“ದೃಶ್ಯ 2” ಮಲೆಯಾಳಂ ನಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದೆ. ಈಗ ನಿರ್ದೇಶಕ ಪಿ.ವಾಸು ಅವರ ಸಾರಥ್ಯದಲ್ಲಿ ಕನ್ನಡದಲ್ಲೂ ಚಿತ್ರೀಕರಣ ಆರಂಭವಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್. ವಿ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. ವಿಶೇಷವೆಂದರೆ ಹಿರಿಯನಟ ಅನಂತನಾಗ್ ಚಿತ್ರತಂಡ ಸೇರಿಕೊಂಡಿದ್ದಾರೆ.


ಈ ಚಿತ್ರದ ಮುಹೂರ್ತ ಸಮಾರಂಭ ಯಲಹಂಕದ ಬಳಿಯ ವೈಟ್ ಹೌಸ್ ನಲ್ಲಿ ಸರಳವಾಗಿ ನೆರವೇರಿದೆ.
ರವಿಚಂದ್ರನ್.ವಿ, ಅನಂತನಾಗ್, ಪಿ.ವಾಸು ಅವರು ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಪೂಜಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಇಂದಿನಿಂದಲೇ ಚಿತ್ರೀಕರಣ ನಿರಂತರವಾಗಿ ನಡೆಯಲಿದೆ.
“ದೃಶ್ಯ 2 ” ಚಿತ್ರತಂಡ ಸೇರಿಕೊಂಡಿರುವುದಕ್ಕೆ ನಟ ಅನಂತನಾಗ್ ಸಂತಸ ವ್ಯಕ್ತಪಡಿಸಿದ್ದಾರೆ. ನಾನು ಕಳೆದ ಒಂದುವರೆ ವರ್ಷದಿಂದ ಮನೆಬಿಟ್ಟು ಆಚೆ ಬಂದಿಲ್ಲ. ಬಹಳ ದಿನಗಳ ನಂತರ ಆಚೆ ಬಂದಿರುವುದು ನನಗೆ ಖುಷಿಯಾಗಿದೆ. ಎಲ್ಲರೂ ಲಾಕ್ ಡೌನ್ ಸಮಯದಲ್ಲಿ ದಪ್ಪ ಆಗುತ್ತಾರೆ. ನಾನು ನಾಲ್ಕು ಕೆಜಿ ಕಡಿಮೆಯಾಗಿದ್ದೇನೆ ಎಂದರು.


ನನಗೆ ಕಥೆ ಇಷ್ಟವಾಗಿ, ಕೇವಲ ನಾಲ್ಕೈದು ದಿನಗಳಲ್ಲಿ ಈ ಚಿತ್ರದಲ್ಲಿ ನಾನು ಅಭಿನಯಿಸುವುದು ಖಚಿತವಾಯಿತು.
ಸ್ವಲ್ಪ ಸಮಯದಲ್ಲಿ ಚಿತ್ರತಂಡ ಎಲ್ಲಾ ಸಿದ್ದತೆ ಮಾಡಿಕೊಂಡಿರುವುದು ಸಂತಸದ ವಿಷಯ. ಪಿ.ವಾಸು ಅವರ ನಿರ್ದೇಶನದಲ್ಲಿ ನಾನು ನಟಿಸುತ್ತಿರುವ ಎರಡನೇ ಚಿತ್ರವಿದು ಎನ್ನುತ್ತಾರೆ ಅನಂತನಾಗ್.
“ದೃಶ್ಯ” ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ, ನವ್ಯ ನಾಯರ್ ಈ ಚಿತ್ರದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ. ರವಿಚಂದ್ರನ್ ಅವರ ಪುತ್ರಿ ಪಾತ್ರದಲ್ಲಿ ಆರೋಹಿ ನಾರಾಯಣ್ ಕಾಣಿಸಿಕೊಳ್ಳುತ್ತಿದ್ದಾರೆ.


ಪ್ರಭು ಶಿವಾಜಿ, ಸಾಧುಕೋಕಿಲ, ನೀತು ರೈ, ಪ್ರಮೋದ್ ಶೆಟ್ಟಿ, ಅಶೋಕ್, ಶಿವರಾಂ, ಉನ್ನತಿ, ಕೃಷ್ಣ ಯಟರ್ನ್, ನಾರಾಯಣ್ ಸ್ವಾಮಿ, ಲಾಸ್ಯ ನಾಗರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಇ-4 ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಸಿ.ವಿ.ಸಾರಥಿ.
ಜೀತು ಜೋಸೆಫ್ ಕಥೆ ಬರೆದಿದ್ದು, ಪಿ.ವಾಸು ನಿರ್ದೇಶನ ಮಾಡುತ್ತಿದ್ದಾರೆ.
ಜಿ.ಎಸ್.ವಿ ಸೀತಾರಾಂ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ , ರವಿ ಸಂತೆಹುಕ್ಲು ಅವರ ಕಲಾ ನಿರ್ದೇಶನ ಹಾಗೂ ಲೋಕೇಶ್ ಬಿಕೆ ಗೌಡ , ಭರತ್ ಅವರ ನಿರ್ಮಾಣ ನಿರ್ವಹಣೆ ಇದೆ.

Categories
ಸಿನಿ ಸುದ್ದಿ

ಕಡಲಮುತ್ತು ಚಿತ್ರಕ್ಕೆ ಪೂಜೆ ; ಅಕ್ಟೋಬರ್‌ಗೆ ಚಾಲನೆ- ಇಲ್ಲಿ ನಿರ್ದೇಶಕರೇ ಹೀರೋ!

ಕನ್ನಡ ಚಿತ್ರರಂಗ ಈಗಷ್ಟೇ ಶುರುಗೊಂಡಿದೆ. ಕೊರೊನಾ ಬಳಿಕ ಒಂದೊಂದೇ ಸಿನಿಮಾಗಳು ಸೆಟ್ಟೇರುತ್ತಿವೆ. ಆ ಸಾಲಿಗೆ ಈಗ “ಕಡಲ ಮುತ್ತು” ಎಂಬ ಹೊಸಬರ ಸಿನಿಮಾ ಕೂಡ ಸೇರಿದೆ. ಈ ಚಿತ್ರವನ್ನು ದೇವರಾಜ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಅವರೇ ಹೀರೋ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಹಿಂದೆ ಇವರು “ಡೇಂಜರ್ ಜೋನ್” ಮತ್ತು” ನಿಶಬ್ದ 2″ ಹಾಗೂ “ಅನುಷ್ಕಾ” ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಸದ್ಯ ” ತಾಜ್ ಮಹಲ್ -2 ” ನಿರ್ದೇಶನದೊಂದಿಗೆ, ಹೀರೋ ಆಗಿಯೂ ಕಾಣಿಸಿಕೊಂಡಿದ್ದಾರೆ. “ಕಡಲ ಮುತ್ತು” ಚಿತ್ರದಲ್ಲೂ ನಾಯಕನಾಗಿ ಅಭಿನಯಿಸುತ್ತಿರುವ ದೇವರಾಜ್ ಕುಮಾರ್ ಅವರು‌ ನಿರ್ದೇಶನದ ಜೊತೆ ಕಥೆ, ಚಿತ್ರಕಥೆ ಜವಾಬ್ದಾರಿ ಹೊತ್ತಿದ್ದಾರೆ.

ದೇವರಾಜ್ ಕುಮಾರ್ ಅವರಿಗೆ ನಾಯಕಿಯ ಹುಡುಕಾಟ ನಡೆಯುತ್ತಿದೆ.
ಈ ಚಿತ್ರದ ಕಥಾವಸ್ತು ವಿಶೇಷವಾಗಿದ್ದು ಸಂಪೂರ್ಣ ಚಿತ್ರೀಕರಣ ಸಮುದ್ರ ದಂಡೆಯಲ್ಲಿ ನಡೆಯಲಿದೆ. ವೀನಸ್ ಮೂರ್ತಿ ಛಾಯಾಗ್ರಹಣವಿದೆ. ವಿಕ್ರಂ ಸೆಲ್ವ ಸಂಗೀತ ನಿರ್ದೇಶನ ಮಾಡಿದರೆ,
ರವೀಂದ್ರ ಮುದ್ದಿ ಸಾಹಿತ್ಯ ಬರೆದಿದ್ದಾರೆ. ಚಂದ್ರು ಬಂಡೆ ಸಾಹಸ ನಿರ್ದೇಶನವಿದೆ. ವಿಜಯ್ ಸಂಕಲನ ಹಾಗೂ ಬಿ.ಧನಂಜಯ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
45 ದಿನಗಳ ಕಾಲ ಮಂಗಳೂರು ಕುಂದಾಪುರ, ಉಡುಪಿ, ಕಾರವಾರ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.

Categories
ಸಿನಿ ಸುದ್ದಿ

ಚಂದ್ರಲೇಖ ರಿಟರ್ನ್ಸ್ ಚಿತ್ರಕ್ಕೆ ‌ಚಾಲನೆ; ಓಂಪ್ರಕಾಶ್ ರಾವ್ ನಿರ್ದೇಶನದ 49 ನೇ ಸಿನಿಮಾಗೆ ಡಾರ್ಲಿಂಗ್ ಕೃಷ್ಣ ಹೀರೋ!

ನಿರ್ದೇಶಕ ಓಂಪ್ರಕಾಶ್ ರಾವ್ ಬಹಳ ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ್ದಾರೆ. ಓಂಪ್ರಕಾಶ್ ರಾವ್ 49 ನೇ ಚಿತ್ರಕ್ಕೆ ಅಣಿಯಾಗಿದ್ದಾರೆ. ಆ ಚಿತ್ರದಲ್ಲಿ “ಡಾರ್ಲಿಂಗ್” ಕೃಷ್ಣ ನಾಯಕನಾಗಿ ನಟಿಸುತ್ತಿದ್ದಾರೆ. ಅಂದಹಾಗೆ, ಆ ಚಿತ್ರಕ್ಕೆ “ಚಂದ್ರಲೇಖ ರಿಟರ್ನ್ಸ್” ಎಂದು ನಾಮಕರಣ ಮಾಡಲಾಗಿದ್ದು, ಇತ್ತೀಚೆಗೆ ಚಿತ್ರದ ಮುಹೂರ್ತ ನಡೆದಿದೆ.

ಆನಂದರಾವ್ ಸರ್ಕಲ್ ನ‌ ಶ್ರೀವಿನಾಯಕ ದೇವಸ್ಥಾನದಲ್ಲಿ‌ ನೆರವೇರಿದೆ
ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಆಗಸ್ಟ್‌ನಲ್ಲಿ ಆರಂಭವಾಗಲಿದೆ. ಶ್ರೀ ಭವಾನಿ ಆರ್ಟ್ಸ್ ಬ್ಯಾನರ್‌ನಲ್ಲಿ ರವೀಶ್ ಆರ್. ಸಿ. ಈ ಚಿತ್ರ ನಿರ್ಮಿಸುತ್ತಿದ್ದಾರೆ. ಈ ಹಿಂದೆ ರವೀಶ್ ಅವರು ನಿರ್ಮಿಸಿರುವ “ಕಸ್ತೂರಿ ಮಹಲ್” ಚಿತ್ರ ಕೂಡ ತೆರೆಗೆ ಬರಲು ಸಿದ್ದವಾಗಿದೆ.

“ಡಾರ್ಲಿಂಗ್” ಕೃಷ್ಣ ಅವರೊಂದಿಗೆ ಸಾಧುಕೋಕಿಲ, ನಾಗಶೇಖರ್, ವಿವಿನ್ ಸೂರ್ಯ, ಅಚ್ಯುತರಾವ್, ಸುಧಾ ಬೆಳವಾಡಿ, ಪ್ರಶಾಂತ್ ಸಿದ್ದಿ ಮುಂತಾದವರು ಈ‌ ಚಿತ್ರದ ತಾರಾಬಳಗದಲ್ಲಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರು ಈ ಚಿತ್ರದಲ್ಲಿ ನಟಿಸಲಿದ್ದು, ಸದ್ಯದಲ್ಲೇ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ರವೀಶ್ ಆರ್ ಸಿ ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಪ್ರತಿಷ್ಠಿತ 74ನೇ ಕಾನ್ ಚಿತ್ರೋತ್ಸವದ ಮಾರುಕಟ್ಟೆ ವಿಭಾಗದಲ್ಲಿ ದೇವರ ಕನಸು

ಮಿಲೇನಿಯಮ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ದೇಶಕ ಸುರೇಶ್ ಲಕ್ಕೂರ್ ನಿರ್ದೇಶನದ “ದೇವರ ಕನಸು” ಸಿನಿಮಾ ಪ್ರತಿಷ್ಠಿತ 74ನೇ ಕಾನ್ ಸಿನಿಮೋತ್ಸದ ವೇಳೆ ಅದರ ಮಾರುಕಟ್ಟೆ ವಿಭಾಗದ ಮಾರ್ಷ್ ಡು ಫಿಲಂನಲ್ಲಿ ಪ್ರದರ್ಶನ ಕಂಡಿದೆ. ಸಾಮಾಜಿಕ ಸಂದೇಶ ಸಾರುವ ಈ ಸಿನಿಮಾದಲ್ಲಿ 12 ವರ್ಷದ ಬಾಲಕನ ಸೈಕಲ್ ಪಡೆದುಕೊಳ್ಳುವ ಕನಸಿನ ಸುತ್ತ ನಿರ್ದೇಶಕರು ಕಥೆ ಹೆಣೆದಿದ್ದಾರೆ. ಸ್ವಂತ ಸೈಕಲ್ ಖರೀದಿಸಿ ಊರ ಸೈಕಲ್ ರೇಸ್‌ನಲ್ಲಿ ಗೆಲುವು ಸಾಧಿಸುವುದು ಆತನ ಮುಖ್ಯ ಉದ್ದೇಶ. ಅದನ್ನು ಈಡೇರಿಸಿಕೊಳ್ಳಲು ಬಾಲಕ ಏನೆಲ್ಲ ಹರಸಾಹಸ ಮಾಡುತ್ತಾನೆ ಎಂಬುದೇ ದೇವರ ಕನಸು ಚಿತ್ರದ ಎಳೆ.


ಈ ಸಿನಿಮೋತ್ಸವದ ಮಾರುಕಟ್ಟೆ ವಿಭಾಗದಲ್ಲಿ ಚಿತ್ರತಂಡ ಪಾಲ್ಗೊಳ್ಳಲು ಅವಕಾಶ ಇದ್ದರೂ, ಕೋವಿಡ್ ಪ್ಯಾಂಡಮಿಕ್ ಹಿನ್ನೆಲೆಯಲ್ಲಿ ಅದು ಈಡೇರಿರಲಿಲ್ಲ. ಮಾರುಕಟ್ಟೆ ವಿಭಾಗದ ಚಿತ್ರಗಳು ಆನ್ಲೈನ್ ಮೂಲಕ ಪ್ರದರ್ಶನ ಕಾಣುತ್ತಿವೆ. 2019ರಲ್ಲಿ ಶೂಟಿಂಗ್ ಆರಂಭಿಸಿದ್ದ ಈ ಸಿನಿಮಾ, ಒಟ್ಟು 29 ದಿನಗಳಲ್ಲಿ ಸಂಪೂರ್ಣ ಶೂಟಿಂಗ್ ಮುಗಿಸಿಕೊಂಡು, ಇದೀಗ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಿಗೆ ಎಂಟ್ರಿಯಾಗಿತ್ತು.


ಇನ್ನು, ಈ ಸಿನಿಮಾದ ಮತ್ತೊಂದು ವಿಶೇಷ ಏನೆಂದರೆ, “ದೇವರ ಕನಸು” ಚಿತ್ರಕ್ಕೆ ಪ್ಯಾನ್ ಇಂಡಿಯಾ ತಂತ್ರಜ್ಞರು ಕೆಲಸ ಮಾಡಿರುವುದು. ರತ್ನಜಿತ್ ರಾಯ್ ಛಾಯಾಗ್ರಹಣ ಮಾಡಿದರೆ, ಅನಿರ್ಬನ್ ಗಂಗೂಲಿ ಸೌಂಡ್ ಡಿಸೈನಿಂಗ್ ಮಾಡಿದ್ದಾರೆ. ಜಿಸ್ನು ಸೇನ್ ಸಂಕಲನ ಮಾಡಿದ್ದಾರೆ. ಚೆನ್ನೈ ಮೂಲದ ನಿತ್ಯಾನಂದ ಸೌಂಡ್, ಸುಂದರ್ ಸಂಗೀತ ನೀಡಿದ್ದಾರೆ. ಕೇರಳ ಮೂಲದ ಜಿಷಾ ಮ್ಯಾಥ್ಯು ವಸ್ತ್ರ ವಿನ್ಯಾಸ ಮಾಡಿದ್ದು, ಮನೋಜ್ ಅಂಗಮಾಲಿ ಮೇಕಪ್ ಮಾಡಿದ್ದಾರೆ. ಲಿಂಗರಾಜ್ ಇತಿಹಾಸ್ ಸಂಭಾಷಣೆ ಮತ್ತು ಸಾಹಿತ್ಯ ಬರೆದರೆ, ಚನ್ನಬಸವ ಪ್ರೊಡಕ್ಷನ್ ಡಿಸೈನರ್ ಆಗಿ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.

ಈ ಸಿನಿಮಾಕ್ಕೆ ಸುನೀಲ್ ರಾಮ್ ಕಥೆ ಬರೆದಿದ್ದಾರೆ. ನಿರ್ದೇಶಕ ಸುರೇಶ್ ಲಕ್ಕೂರ್ ನ್ಯೂಯಾರ್ಕ್ ಸಿನಿಮಾ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ಮೊದಲ ಚಿತ್ರವಾಗಿ ದೇವರ ಕನಸು ಅವರ ಬತ್ತಳಿಕೆಯಿಂದ ಹೊರಬಂದಿದ್ದು, ಮಕ್ಕಳ ಸಿನಿಮಾ ಮೂಲಕ ಆಗಮಿಸಿದ್ದಾರೆ. ಚಿಂತಾಮಣಿಯ ಬಳಿಯ ಹಿರೇಪಳ್ಳಿ. ಕನಂಪಲ್ಲಿ, ಕೈವಾರ ಸುತ್ತಮುತ್ತ ಚಿತ್ರದ ಚಿತ್ರೀಕರಣವಾಗಿದೆ. ಈ ಮೊದಲು ಚಿತ್ರದಲ್ಲಿ ದೀಪಕ್, ಅಮೂಲ್ಯ, ಯುವರಾಜ್ ಕಿಣಿ, ಆರುಷಿ ವೇದಿಕಾ, ಮಣಿ, ರೂಪಾ, ವಿಜಯ್ ರಾಕೇಶ್ ನಟಿಸಿದ್ದಾರೆ. ಸಿ. ಜಯಕುಮಾರ್, ಸಿ ಶೇಖರ್ ನಿರ್ಮಾಣವಿದೆ. ಗಂಗಾಧರ್, ಶಂಕರ್, ಸಿ ಸುಬ್ಬಯ್ಯ ಅವರ ಸಹ ನಿರ್ಮಾಣವಿದೆ.

Categories
ಸಿನಿ ಸುದ್ದಿ

ತುಪ್ಪದ ಬೆಡಗಿ ರಾಗಿಣಿಗೆ ಅಷ್ಟು ದೊಡ್ಡ ಅವಾರ್ಡ್‌ ಹುಡುಕಿ ಬಂದಿದ್ದು ಹೇಗೆ ?

ಚಂದನವನದ ಚೆಂದದ ಚೆಲುವೆ, ತುಪ್ಪದ ಬೆಡಗಿ ಅಂತನೇ ಕರೆಸಿಕೊಳ್ಳುವ ನಟಿ ರಾಗಿಣಿಗೆ 2021 ‘ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ’ ಅವಾರ್ಡ್‌ ಲಭಿಸಿದೆ. ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ರಾಗಿಣಿ ಮಾಡಿಕೊಂಡು ಬಂದಂತಹ ಸಮಾಜಮುಖಿ‌ ಕಾರ್ಯವನ್ನು ಗುರುತಿಸಿದ ಮುಂಬೈ ಮೂಲದ ದಾದಾ ಸಾಹೇಬ್‌ ಫಾಲ್ಕೆ ಅಕಾಡೆಮಿಯು ನಟಿ ರಾಗಿಣಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದೆ. ಅಂದ ಹಾಗೆ, ದಾದಾ ಸಾಹೇಬ್‌ ಫಾಲ್ಕೆ ಅಕಾಡೆಮಿಯು ಲೆಜೆಂಡ್‌ ದಾದಾ ಸಾಹೇಬ್‌ ಫಾಲ್ಕೆ ಅವರ ಮೊಮ್ಮಗನ ನೇತೃತ್ವದ ಸಂಸ್ಥೆ.
ಸೌತ್ ಸಿನಿಮಾ‌ ಇಂಡಸ್ಟ್ರಿಯಲ್ಲೇ ಈ ಅವಾರ್ಡ್ ನ ಪಡೆದಿರುವುದು ಒನ್ ಅಂಡ್ ಓನ್ಲೀ ರಾಗಿಣಿ ಮಾತ್ರ. ಅದು ಸಮಾಜಮುಖಿ ಕೆಲಸಕ್ಕೆ ಎಂಬುದು ಗಮನಾರ್ಹದ ಸಂಗತಿ. ನಟಿ ರಾಗಿಣಿ ಸಮಾಜಮುಖಿ‌ ಕೆಲಸಗಳಲ್ಲಿ ಮೊದಲಿನಿಂದಲೂ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ, ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ರಾಗಿಣಿಯ ನೆರವಿನ ಹಸ್ತದ ಕಾರ್ಯ ಶ್ಲಾಘನೀಯವಾದದ್ದು.‌

ಹೌದು, ಮನೆಯಿಂದ ಕಾಲ್ತೆಗೆದರೆ ಎಲ್ಲಿ‌‌ ಕೊರೊನಾ ಅಟ್ಯಾಕ್ ಆಗುತ್ತೋ ಎಂಬ ಭಯದಲ್ಲಿ ಬದುಕಿದ್ದಂತಹ ಸಂದರ್ಭದಲ್ಲಿ ನಟಿ ರಾಗಿಣಿ ಬೀದಿಗಿಳಿದರು. ನಿರಾಶ್ರಿತರು, ನಿರ್ಗತಿಕರು,
ಅಸಹಾಯಕರು, ಬಡವರು ಸೇರಿದಂತೆ ಯಾರೆಲ್ಲಾ ಕೊರೊನಾ ಹೊಡೆತಕ್ಕೆ ಸಿಲುಕಿ ಒದ್ದಾಡುತ್ತಿದ್ದರೋ, ಯಾರೆಲ್ಲಾ ಒಪ್ಪೊತ್ತಿನ‌ ಊಟಕ್ಕಿಲ್ಲದೇ ಅಲೆಯುತ್ತಿದ್ದರೋ ಅವರೆಲ್ಲರಿಗೂ ತಮ್ಮ ಶಕ್ತಿ ಮೀರಿ ಸಹಾಯ ಹಸ್ತ ಚಾಚಿದರು. ಹಸಿವು ನೀಗಿಸುವ ಕೆಲಸವನ್ನು ನಿತ್ಯನಿರಂತರವಾಗಿ ಮಾಡಿಕೊಂಡು ಬಂದರು.

ಈ ನಡುವೆ ರಾಗಿಣಿ ಜೈಲಿಗೆ ಹೋಗಬೇಕಾದ ಸಂದರ್ಭ ಬಂತು. ಕಾನೂನಿಗೆ ತಲೆಬಾಗಿ ತಿಂಗಳುಗಟ್ಟಲೇ ಜೈಲುವಾಸ ಅನುಭವಿಸಿ ಬಂದ ರಾಗಿಣಿ ‘ ಕರ್ಮ ರಿಟರ್ನ್ ‘ ಇದನ್ನು ಯಾರೂ ತಪ್ಪಿಸೋದಕ್ಕೆ ಆಗಲ್ಲ. ನನ್ನನ್ನ ಸಂಕಷ್ಟಕ್ಕೆ ಸಿಲುಕಿಸಿ ಮುಸಿಮುಸಿ ನಕ್ಕವರು ಒಂದಲ್ಲ ಒಂದು ಅನುಭವಿಸ್ತಾರೆ ನಾನು ಅದನ್ನು ಕಣ್ಣಾರೇ ನೋಡ್ತೀನಿ ಅಂತ ಸವಾಲ್ ಎಸೆದುಕೊಂಡರು. ಮನೆಯಲ್ಲಿ ಪೂಜೆ ಹೋಮ ಹವನ ಮಾಡಿಸಿ ತಂದೆ ತಾಯಿ ಜೊತೆ ಖುಷಿಖುಷಿಯಾಗಿ ಜೀವನ ಕಳೆಯುತ್ತಿದ್ದರು ಈ‌ ನಡುವೆ ಕೊರೊನಾ ಎರಡನೇ ಅಲೆ ಶುರುವಾಯ್ತು. ಈ‌ಟೈಮ್ ನಲ್ಲಿ ರಾಗಿಣಿ‌ ಊರ ಉಸಾಬರಿ ನನಗ್ಯಾಕೆ ಬಿಡು, ನಾನೆಷ್ಟು ಸಹಾಯ ಮಾಡಿದರೂ ನನಗೆ ಒಳ್ಳೆದಾಗ್ತಿಲ್ಲ ಅಂತ ಸುಮ್ಮನೇ ಆಗಬಹುದಿತ್ತು. ಆದರೆ, ರಾಗಿಣಿ ಆ ಥರ ಯೋಚನೆ ಮಾಡಲಿಲ್ಲ ಬದಲಾಗಿ ಮತ್ತೆ ಫೀಲ್ಡಿಗಿಳಿದರು. ಹಗಲು ರಾತ್ರಿ ಎನ್ನದೇ ಸಂಕಷ್ಟಧಾರಿಗಳ ನೆರವಿಗೆ ಧಾವಿಸಿದರು. ದೇಹಿ ಎನ್ನುವ ಮೊದಲೇ ದಾನ ಮಾಡುತ್ತಾ, ಹಲವರ ಕಣ್ಣೀರು ಒರೆಸುತ್ತಾ, ಅದೆಷ್ಟೋ ಜನರ ಕಣ್ಣಲ್ಲಿ ದೇವತೆಯಾದರು.

ರಾಗಿಣಿಯ ಮಾನವೀಯ ಮುಖ ಹಾಗೂ ಸಮಾಜಮುಖಿ ಕೆಲಸವನ್ನು ಸೂಕ್ಷವಾಗಿ ಅವಲೋಕಿಸಿದ ದಾದಾ ಸಾಹೇಬ್ ಫಾಲ್ಕೆಯವರ ಮೊಮ್ಮಗನ ನೇತೃತ್ವದ ಸಂಸ್ಥೆ ನಟಿ ರಾಗಿಣಿಗೆ ‘ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಅವಾರ್ಡ್ ನೀಡಿ ಗೌರವಿಸಿದ್ದಾರೆ. ಪ್ರತಿಷ್ಠಿತ ಸಂಸ್ಥೆಯಿಂದ ಅವಾರ್ಡ್ ಗಿಟ್ಟಿಸಿಕೊಂಡಿರುವ ರಾಗಿಣಿ ಸಂತೋಷದ ಅಲೆಯಲ್ಲಿ ತೇಲುತ್ತಾ ಹೆಮ್ಮೆ ಪಡುತ್ತಿದ್ದಾರೆ. ಈ ಅವಾರ್ಡ್ ನನಗೆ ಮಾತ್ರವಲ್ಲ ನನ್ನೊಟ್ಟಿಗೆ ಹಗಲು ರಾತ್ರಿ ಎನ್ನದೇ ಸಮಾಜಮುಖಿ ಕೆಲಸ ಮಾಡಲಿಕ್ಕೆ ಶ್ರಮಿಸಿದ ತಂಡಕ್ಕೆ ಅರ್ಪಿಸುವುದಾಗಿ ಹೇಳಿಕೊಂಡಿದ್ದಾರೆ. ಇದೇ, ರೀತಿ ಸೊಸೈಟಿಯಲ್ಲಿ ತಮ್ಮ ಸೇವೆಯನ್ನು ಮುಂದುವರೆಸಿಕೊಂಡು ಹೋಗುವುದಕ್ಕೆ ನಿರ್ಧರಿಸಿದ್ದಾರೆ. ಎನಿವೇ ನಟಿ ರಾಗಿಣಿಯ ಸಮಾಜಸೇವೆ ಹೀಗೆ ನಿತ್ಯನಿರಂತರವಾಗಿ ನಡೆಯಲಿ, ಪ್ರತಿಷ್ಠಿತ ಹೆಮ್ಮೆಯ ಪ್ರಶಸ್ತಿಗಳು ರಾಗಿಣಿ ಮುಡಿಗೇರಲಿ. ಗಿಣಿ ಕಂಡ ಎಲ್ಲಾಕನಸು‌ ನನಸಾಗಲಿ ಅಲ್ಲವೇ.

Categories
ಸಿನಿ ಸುದ್ದಿ

ರಿವೀಲ್‌ ಆಯ್ತು ಜುಲೈ 11 ರ ಸಸ್ಪೆನ್ಸ್‌;ಸಿಂಪಲ್‌ ಸ್ಟಾರ್‌ ಗೆ ಹೊಂಬಾಳೆ ಫಿಲಂಸ್‌ ಕೊಡ್ತು ಭರ್ಜರಿ ಗಿಫ್ಟ್ – ಹೊಸ ವರ್ಷಕ್ಕೆ ಹೊಸ ಸಿನಿಮಾ!

ಸಿಂಪಲ್ ಸ್ಟಾರ್‌ ರಕ್ಷಿತ್‌ ಶೆಟ್ಟಿ ಒಂದುಸುದ್ದಿ ಹೇಳ್ತೀನಿ ಅಂದಿದ್ರು. ಅದರಲ್ಲೂ ತಮ್ಮನ್ನು ಅವಮಾನಿಸಿದವರಿಗೆ ತಕ್ಕ ಉತ್ತರ ಕೊಡ್ತೀನಿ ಅಂತಾನೂ ಹೇಳಿದ್ದರು. ಅದಕ್ಕೆ ಜುಲೈ 11 ಅನ್ನು ನಿಗದಿ ಮಾಡಿದ್ರು. ವಿಷಯ ಏನು ಅನ್ನೋದನ್ನು ಸಸ್ಪೆನ್ಸ್‌ ಇಟ್ಟಿದ್ರು. ಸಹಜವಾಗಿಯೇ ಚಿತ್ರೋದ್ಯಮದಲ್ಲಿ ಇದು ದೊಡ್ಡ ಕುತೂಹಲ ಹುಟ್ಟಿಸಿತ್ತು. ಆ ದಿನಕ್ಕೆ ಕಾಯುತ್ತಿರುವಾಗಲೇ ಮೊನ್ನೆಯಿಂದ ಹೊಂಬಾಳೆ ಫಿಲಂಸ್‌ ಕೂಡ ಜುಲೈ 11 ಕ್ಕೆ ಅಂತಹದೇ ಒಂದು ಸಸ್ಪೆನ್ಸ್‌ ರಿಲೀವ್‌ ಗೆ ದಿನ ನಿಗದಿ ಮಾಡಿತ್ತು. ಅವರೆಡಕ್ಕೂ ಒಂದು ಹೋಲಿಕೆ ಇತ್ತು. ಹಾಗೊಂದು ಅಂದಾಜು ಮಾಡಿ, ಸಿನಿ ಲಹರಿ ಒಂದು ವರದಿ ಪ್ರಕಟಿಸಿತ್ತು. ಅದೀಗ ನಿಜವಾಗಿದೆ.

ಕೆಜಿಎಫ್‌ ಖ್ಯಾತಿಯ ಕನ್ನಡದ ಬಹು ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಹೊಂಬಾಳೆ ಫಿಲಂಸ್‌ ಈ ಮುಂಚೆಯೇ ಘೋಷಿಸಿದ ಹಾಗೆ ಜುಲೈ 11 ರಂದು ಮಧ್ಯಾಹ್ನ ತನ್ನ ನಿರ್ಮಾಣದ ಹತ್ತನೇ ಸಿನಿಮಾದ ಟೈಟಲ್‌ ಲಾಂಚ್‌ ಮಾಡಿದೆ. ರಿಚರ್ಡ್‌ ಆಂಟನಿ ಅಂತ ಈ ಚಿತ್ರಕ್ಕೆ ಹೆಸರಿಡಲಾಗಿದೆ.

ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಅವರೇ ಈ ಚಿತ್ರಕ್ಕೆ ನಾಯಕ ನಟ, ಜತೆಗೆ ಅವರೇ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇಷ್ಟು ವಿವರವನ್ನು ಹೊಂಬಾಳೆ ಫಿಲಂಸ್‌ ಅಧಿಕೃತವಾಗಿ ಅನೌನ್ಸ್‌ ಮಾಡಿದೆ. ಅಂದ ಹಾಗೆ, ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಅವರು ಜುಲೈ 11 ರಂದು ಹೇಳುವುದಾಗಿ ಸಸ್ಪೆನ್ಸ್‌ ಆಗಿಟ್ಟಿದ್ದ ಸಂಗತಿಯೂ ಇದೇ ಆಗಿದೆ ಅನ್ನೋದು ವಿಶೇಷ.

ಅಂದಹಾಗೆ ಹೊಂಬಾಳೆ ಫಿಲಂಸ್‌ ಬ್ಯಾನರ್‌ ನಿರ್ಮಾಣ ಸಿನಿಮಾ ಇದು ಅಂತಂದ್ರೆ ಹೆಚ್ಚೇನು ಹೇಳಬೇಕಿಲ್ಲ. ಕಥೆಗೆ ತಕ್ಕಂತೆ ಅದ್ದೂರಿ ವೆಚ್ಚದಲ್ಲಿಯೇ ನಿರ್ಮಾಣವಾಗುವುದು ಅಷ್ಟೇ ಗ್ಯಾರಂಟಿ. ರಿಚರ್ಡ್‌ ಆಂಟನಿ ಎನ್ನುವ ಚಿತ್ರದ ಟೈಟಲ್‌ ಗೆ ಲಾರ್ಡ್‌ ಆಫ್‌ ದಿ ಸೀ ಅಂತ ಟ್ಯಾಗ್‌ ಲೈನ್‌ ನೀಡಲಾಗಿದೆ. ಅಲ್ಲಿಗೆ ಇದೊಂದು ಸಮುದ್ರದ ಕಥೆ, ಅನ್ನೋದರ ಜತೆಗೆ ಅಲ್ಲಿ ಸಾಕಷ್ಟು ಕೌತುಕಗಳಿವೆ ಅನ್ನೋದು ಅಷ್ಟೇ ನಿಜವೇ. ಸದ್ಯಕ್ಕೆ ಚಿತ್ರದ ಕಥೆಯ ಬಗ್ಗೆ ನಿರ್ದೇಶಕ ರಕ್ಷಿತ್‌ ಶೆಟ್ಟಿ ಒಂದಷ್ಟ ಮಾಹಿತಿ ಹಂಚಿಕೊಂಡಿದ್ದಾರೆ. ʼ ಉಳಿದವರು ಕಂಡಂತೆ ಚಿತ್ರದ ನಂತರದ ಎರಡನೇ ಪ್ರಯತ್ನ. ಅಲ್ಲಿಗಿಂತ ತುಂಬಾನೆ ವಿಭಿನ್ನತೆ, ವಿಶೇಷತೆ ಇರುವಂತಹ ಸಿನಿಮಾ. ಸಾಮಾನ್ಯವಾಗಿ ಈ ಹೊತ್ತಿಗೆ ಅಂದರೆ ಕಾಲಕ್ಕೆ ತಕ್ಕಂತೆಯೂನಿವರ್ಷಲ್ ಆಗುವಂತ ಕಥೆ. ಈ ಕಥೆಯನ್ನು ತೆರೆ ಮೇಲೆ ತರಲು ನನಗೆ ಹೊಂಬಾಳೆ ಫಿಲಂಸ್‌ ಸಾಥ್‌ ನೀಡಿದ್ದು ಸಾಕಷ್ಟು ಖುಷಿ ಕೊಟ್ಟಿದೆ ಎನ್ನುತ್ತಾರೆ ರಕ್ಷಿತ್‌ ಶೆಟ್ಟಿ.

ಸದ್ಯಕ್ಕೆ ಹೊಂಬಾಳೆ ಫಿಲಂಸ್‌ ರಿವೀಲ್‌ ಮಾಡಿರುವ ಮಾಹಿತಿ ಪ್ರಕಾರ, ಅಜನೀಶ್‌ ಲೋಕನಾಥ್‌ ಸಂಗೀತ, ಕರಮ್‌ ಚಾವ್ಲಾ ಛಾಯಾಗ್ರಹಣ ಈನಚಿತ್ರಕ್ಕಿದೆ. ಕಲಾವಿದರ ಆಯ್ಕೆಗಳೆಲ್ಲವೂ ಸದ್ಯಕ್ಕೆ ಸಸ್ಪೆನ್ಸ್.‌೨೦೨೨ ರ ಹೊಸವರ್ಷದ ಆರಂಭದಿಂದಲೇ ಚಿತ್ರೀಕರಣ ಶುರುವಂತೆ. ಮುಂದೆ ಇದಕ್ಕೆ ಸಂಬಂಧಿಸಿದ ಒಂದಷ್ಟು ಮಾಹಿತಿಗಳು ಒಂದೊಂದೆ ಲಭ್ಯವಾಗಬೇಕಿದೆಯಷ್ಟೇ.

Categories
ಸಿನಿ ಸುದ್ದಿ

ವಿಕ್ರಾಂತ್ ರೋಣನಿಗಾಗಿ ಫ್ಲೈಟ್ ಏರಿ‌ ಬಂದ ಶ್ರೀಲಂಕಾ‌‌‌ ಚೆಲುವೆ !

ಬರಹ: ವಿಶಾಲಾಕ್ಷಿ

ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ನಿಗೆ ಜೊತೆಯಾಗೋಕೆ ಶ್ರೀಲಂಕಾ ಸುಂದರಿ ಬರ್ತಾಳೆನ್ನುವ ಸುದ್ದಿ ಕಳೆದೊಂದು ವಾರದಿಂದ ಟೂಪೀಸ್ ಹಾಕಿಕೊಂಡು ಇಡೀ ಗಾಂಧಿನಗರದ ತುಂಬೆಲ್ಲಾ ಕುಣಿಯುತ್ತಿತ್ತು. ಹೀಗೆ ಟೂಪೀಸ್ ನಲ್ಲಿ ಡ್ಯಾನ್ಸ್ ಮಾಡಿದ ಸುದ್ದಿಗೆ ಮೈಲೇಜ್ ಸಿಕ್ಕಿದೆ. ವಿಕ್ರಾಂತ್ ರೋಣನ ಜೊತೆಯಾಗೋದಕ್ಕೆ ಬಿಟೌನ್ ಬ್ಯೂಟಿ ಫ್ಲೈಟ್ ಏರಿ ಬೆಂಗಳೂರಿಗೆ ಬಂದಿಳಿದಾಗಿದೆ.

ಮುಂಬೈನಲ್ಲಿ ಬ್ರೇಕ್ ಫಾಸ್ಟ್ ಮುಗಿಸಿಕೊಂಡು ಮಧ್ಯಾಹ್ನ ಲಂಚ್ ಟೈಮ್ ಅಷ್ಟರಲ್ಲಿ ಬಿಟೌನ್ ಬ್ಯೂಟಿ ಬೆಂಗಳೂರಿಗೆ ಬಂದಿಳಿದರು. ವಿಕ್ರಾಂತ್ ರೋಣ ಚಿತ್ರದ ನಿರ್ಮಾಪಕರಾದ ಜಾಕ್ ಮಂಜು ಅವರು ರೆಡ್ ರೋಸ್ ಬೊಕ್ಕೆ ಕೊಟ್ಟು
ಶ್ರೀಲಂಕಾ‌ ಚೆಲುವೆಯನ್ನ ವೆಲ್ ಕಮ್ ಮಾಡಿಕೊಂಡರು. ಕೂಲ್ ಡ್ರಿಂಕ್ಸ್ ಕುಡಿಯುತ್ತಾ ಒಂದಿಷ್ಟು ಮಾತುಕತೆ ನಡೆಸಿದ ಜಾಕ್ವೆಲಿನ್, ಲೈಟಾಗಿ ಮಧ್ಯಾಹ್ನ ಲಂಚ್ ಮುಗಿಸಿ ಡ್ಯಾನ್ಸ್ ಪ್ರಾಕ್ಟೀಸ್ ಮಾಡೋದಕ್ಕೆ ಫ್ಲೋರ್ ಗಿಳಿದರು.

ವಿಕ್ರಾಂತ್ ರೋಣ ಮೇಕಿಂಗ್ ಕಂಡು ಜಾಕ್ವೆಲಿನ್ ಕ್ಲೀನ್ ಬೋಲ್ಡ್!

ಶನಿವಾರ ಸಂಜೆ ಅಷ್ಟರಲ್ಲಿ ಡ್ಯಾನ್ಸ್ ಪ್ರಾಕ್ಟೀಸ್ ಪ್ರೋಗ್ರಾಂ ಮುಗಿಸಿದ ಜಾಕ್ವೆಲಿನ್, ವಿಲಿಯಂ ಡೇವಿಡ್ ಅವರ ಕ್ಯಾಮೆರಾ ಕೈಚಳಕದ ಮೇಕಿಂಗ್ ದೃಶ್ಯಗಳನ್ನು ಕಣ್ತುಂಬಿಕೊಂಡರು. ಕಣ್ಣು ಕುಕ್ಕುವಂತಿದ್ದ ದೃಶ್ಯಗಳನ್ನು ನೋಡಿ ಕಿಕ್ ಸುಂದರಿ ಕ್ಲೀನ್ ಬೋಲ್ಡ್ ಆಗಿಬಿಟ್ಟರು.

ಕಿಚ್ಚನ‌ ಜೊತೆ‌ ಕಿಕ್ಕೇರಿಸಲಿದ್ದಾಳೆ ಕಿಕ್‌ ಸುಂದರಿ !

ಅಂದ್ಹಾಗೇ ಇದೇ‌ ಮೊದಲ ಭಾರಿಗೆ ಜಾಕ್ವೆಲಿನ್ ಗಂಧದಗುಡಿಗೆ ಕಾಲಿಟ್ಟಿದ್ದಾರೆ. ಆರಡಿ ಕಟೌಟ್, ಬಾದ್ ಷಾ ಕಿಚ್ಚನ ಜೊತೆ ಲೆಗ್ ಶೇಕ್ ಮಾಡೋದಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ಕಿಚ್ಚ ಕೂಡ ಕಿಕ್ ಸುಂದರಿ‌ ಜೊತೆ ಕಿಕ್ಕೇರಿಸೋದಕ್ಕೆ ಕೊಂಚ ಎಕ್ಸೈಟ್ ಆಗಿದ್ದಾರೆ. ಇವರಿಬ್ಬರ ಕೆಮಿಸ್ಟ್ರಿಯನ್ನ ನೋಡೋದಕ್ಕೆ ಫ್ಯಾನ್ಸ್ ಕಣ್ಣರಳಿಸಿಕೊಂಡೇ ಕಾಯ್ತಿದ್ದಾರೆ.

ಸುದೀಪ್ ಹಾಗೂ ಜಾಕ್ವೆಲಿನ್
ಜೊತೆಯಾಗಿ ಕುಣಿಯೋ ಸ್ಪೆಷಲ್ ಹಾಡಿಗೆ ನಿರ್ಮಾಪಕರಾದ ಜಾಕ್ ಮಂಜು ಕೋಟಿ‌ ಕೋಟಿ ಬಂಡವಾಳ‌ ಹೂಡಿದ್ದಾರೆ.
ಎರಡು ಕೋಟಿ ವೆಚ್ಚದಲ್ಲಿ
ಕಲಾ ನಿರ್ದೇಶಕ ಶಿವಕುಮಾರ್ ಅದ್ದೂರಿ ಸೆಟ್ ನಿರ್ಮಿಸಿಕೊಟ್ಟಿದ್ದಾರೆ.
ಅಜನೀಶ್ ಲೋಕನಾಥ್ ಟ್ಯೂನ್ ಹಾಕಿಕೊಟ್ಟಿರುವ ಡ್ಯಾನ್ಸ್ ನಂಬರ್ ನ
ಜಾನಿ ಮಾಸ್ಟರ್ ಕೊರಿಯಾಗ್ರಫಿ ಮಾಡ್ತಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮೆರಾ ದಲ್ಲಿ ‘ವಿಕ್ರಾಂತ್ ರೋಣ’ ಚಿತ್ರದ ವಿಶೇಷ ಹಾಡು ಸೆರೆಯಾಗಲಿದೆ. ಐದು ದಿನಗಳ ಕಾಲ‌ ಬೆಂಗಳೂರಿನಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ.

ಕಿಚ್ಚನ‌ ಜೊತೆ ಕುಣಿದು ಕೋಟಿ ಪಡೆಯಲಿದ್ದಾಳೆ ಶ್ರೀಲಂಕಾ ಸುಂದರಿ ಜಾಕ್ವೆಲಿನ್ !

ಸ್ಯಾಂಡಲ್ ವುಡ್ ಬಾದ್ ಷಾ ಜೊತೆ ಕಾಸ್ಟ್ಲೀ ಸೆಟ್ ನಲ್ಲಿ ಕುಣಿಯಲು ಬಂದಿರುವ ಬಾಲಿವುಡ್ ಬೊಂಬೆ ಜಾಕ್ವೆಲಿನ್ ಗೆ ಒಂದು ಕೋಟಿ ಸಂಭಾವನೆ ಕೊಡಬೇಕಂತೆ. ಸನ್ನಿಲಿಯೋನ್ ಗೆ ಸೈಡಿಗೆ ತಳ್ಳಿ ಸುದೀಪ್ ಜೊತೆ
ಜಿರೋ ಸೈಜ್ ಸೊಂಟ ಬಳುಕಿಸೋಕೆ ಬಂದಿರುವ ಕಿಕ್ ಕಿನ್ನರಿ, ವಿಕ್ರಾಂತ್ ರೋಣ ಚಿತ್ರದ ಹೈಪ್ ನ ಒಂದು ತೂಕ ಜಾಸ್ತಿ ಮಾಡಲಿದ್ದಾರಂತೆ. ಹೈಟ್- ವೇಯ್ಟ್ ಎಲ್ಲದರಲ್ಲೂ ಕಿಚ್ಚನಿಗೆ ಪಕ್ಕಾ ಮ್ಯಾಚೋ ಆಗುವ ಜಾಕ್ವೆಲಿನ್ ಕಿಕ್ಕೇರಿಸೋದು ಖಚಿತ ಎನ್ನಲಾಗ್ತಿದೆ.

ವಿಕ್ರಾಂತ್ ರೋಣ ಟೈಟಲ್ ನಿಂದಲೇ ಹೈಪ್ ಕ್ರಿಯೇಟ್ ಮಾಡಿಕೊಂಡಿರುವ ಚಿತ್ರ. ಆಕ್ಷನ್ ಅಡ್ವೆಂಚರ್ಸ್ ಫ್ಯಾಂಟಸಿ ಲೋಕವನ್ನು ತ್ರೀಡಿಯಲ್ಲಿ ತೋರಿಸುವ ಸಾಹಸಕ್ಕೆ ಚಿತ್ರತಂಡ ಕೈಹಾಕಿರುವುದರಿಂದ, ‘ವಿಕ್ರಾಂತ್ ರೋಣ’ನ ಮೇಲಿನ ನಿರೀಕ್ಷೆ ಗರಿಗೆದರಿವೆ. ಅನೂಪ್ ಭಂಡಾರಿ ಹಾಗೂ‌ ಸುದೀಪ್ ಕಾಂಬಿನೇಷನ್ ಮೊದಲ ಸಲ ಒಟ್ಟಾಗಿದ್ದು ಕೂತೂಹಲ ಕೆರಳಿಸಿದೆ.

ಐದು ದಿನದ ಹಾಡಿನ‌ ಚಿತ್ರೀಕರಣ ಮುಗಿದರೆ ವಿಕ್ರಾಂತ್ ರೋಣ ಶೂಟಿಂಗ್ ಕಂಪ್ಲೀಟ್ ಆಗುತ್ತೆ. ಕೆಲವೇ ದಿನಗಳಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಕೂಡ ಅಂತಿಮವಾಗುತ್ತೆ.

ನಂತರ ಪ್ರಮೋಷನ್ ಮುಗಿಸಿ ‘ವಿಕ್ರಾಂತ್ ರೋಣ’ನನ್ನು ಪ್ರೇಕ್ಷಕ ಮಹಾಷಯರಿಗೆ ಒಪ್ಪಿಸಲಾಗುತ್ತೆ. ನ್ಯಾಷನಲ್ ಮಾತ್ರವಲ್ಲ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಸಿನಿಮಾ ಬಿಡುಗಡೆ ಪ್ಲ್ಯಾನ್ ಇದೆ.

Categories
ಸಿನಿ ಸುದ್ದಿ

ಸಂಚಾರಿ ವಿಜಯ್ ಕನಸಿಗೆ ಜೀವ ತುಂಬಿದ ಉಸಿರು ತಂಡ‌!

ಸಂಚಾರಿ ವಿಜಯ್ ಅರ್ಧಕ್ಕೆ ಬದುಕನ್ನ ಅಂತ್ಯಗೊಳಿಸಿ ಮರಳಿಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ. ಸಿನಿಮಾ ಪಾತ್ರಗಳ ಮೂಲಕ ಮಾತ್ರವಲ್ಲದೇ ,

https://m.facebook.com/story.php?story_fbid=4548656975168303&id=100000721371078

ಬದುಕಿದ್ದಷ್ಟು ದಿನ ಮಾಡಿದ ಸಮಾಜಮುಖಿ ಕೆಲಸಗಳ ಮೂಲಕ ವಿಜಯ್ ಜೀವಂತವಾಗಿದ್ದಾರೆ. ಇದೀಗ ಉಸಿರು ತಂಡ ವಿಜಯ್ ಕಂಡ ಕನಸಿಗೆ ಜೀವ ತುಂಬುವ ಕೆಲಸ ಮಾಡಿದ್ದಾರೆ.

ಕೊರೊನಾ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿ ನರಳುತ್ತಿದ್ದ ಕುಟುಂಬಗಳನ್ನ ರಕ್ಷಣೆ ಮಾಡುವಂತಹ ಕೆಲಸವನ್ನು ‘ ಉಸಿರು’ ತಂಡ ಮಾಡಿಕೊಂಡು ಬಂದಿದ್ದು ನಿಮ್ಮೆಲ್ಲರಿಗೂ ಗೊತ್ತಿರುವ ವಿಚಾರ ಈಗಲೂ ಉಸಿರು ತಂಡದ ಕಾರ್ಯ ಮುಂದುವರೆದಿದೆ.

ಸಂಚಾರಿ ವಿಜಯ್ ಅವರ ಆಸೆಯಂತೆ ,
ಅವರ ಸ್ಮರಣಾರ್ಥ ಉಸಿರು ಬಳಗದಿಂದ
ನಾಗರಹೊಳೆ ವಲಯದ ಬುಡಕಟ್ಟು ಜನಾಂಗದ ಮನೆಗಳ ಮೇಲ್ಚಾವಣಿಗೆ ಟಾರ್ಪಾಲಿನ್ ಹೊದಿಕೆ ಹೊದಿಸುವ ಕಾರ್ಯಕ್ರಮದ ಮೊದಲ ದಿನ ಯಶಸ್ವಿಯಾಗಿ ಮುಗಿದಿದೆ.

Categories
ಸಿನಿ ಸುದ್ದಿ

39 ವರ್ಷ ಆಯ್ತು-ಯಾವ ಪ್ಲಾನ್ ಇಲ್ಲ- ಸೆಲಬ್ರೇಷನ್ ಇಲ್ಲ ; ಹೀಗಂದರೇಕೆ ಮೋಹಕ ತಾರೆ ರಮ್ಯಾ !

ಬರಹ: ವಿಶಾಲಾಕ್ಷಿ

ಮೋಹಕತಾರೆ ರಮ್ಯಾ ಚಂದನವನದ ಎವರ್‌ಗ್ರೀನ್ ಚೆಲುವೆ. ಹುಡುಗರ ಪಾಲಿನ ಹಾಟ್‌ಫೇವರಿಟ್ ಹಾಗೂ ಆಲ್‌ ಟೈಮ್ ಕ್ರಷ್. ಬಣ್ಣದ ಲೋಕದಿಂದ ದೂರ ಉಳಿದರೂ ಕೂಡ ಸ್ಯಾಂಡಲ್‌ವುಡ್ ಪಾಲಿಗೆ ಗೋಲ್ಡನ್ ಕ್ವೀನ್ ಈಕೆ. ಗಂಧದಗುಡಿಗೆ ಎಷ್ಟೇ ಗ್ಲಾಮರ್‌ ಬೊಂಬೆಗಳು ಜಿಗಿಜಗಿದು ಬಂದರೂ ಕೂಡ ಊರಿಗೊಬ್ಳೆ ಪದ್ಮಾವತಿಯ ಚಾರ್ಮ್ ಕಮ್ಮಿಯಾಗಿಯಿಲ್ಲ. ಅಷ್ಟರ ಮಟ್ಟಿಗೆ ಮೇನಿಯಾ ಸೃಷ್ಟಿಸಿಕೊಂಡಿರುವ ರಮ್ಯಾ ಮೇಡಂ `39 ವರ್ಷ ಆಯ್ತು-ಯಾವ ಪ್ಲ್ಯಾನ್ಸ್ ಇಲ್ಲ..ಯಾವ ಸೆಲಬ್ರೇಷನ್ನು ಇಲ್ಲ’ ಹೀಗನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ರಮ್ಯಾ ಮೇಡಂ ಹಿಂಗ್ಯಾಕ್ ಹೇಳಿದರು ಅನ್ನೋದು ನಿಮ್ಮೆಲ್ಲರ ಕೂತೂಹಲಕ್ಕೆ ಕಾರಣವಾಗಿರುತ್ತೆ. ಪ್ಲ್ಯಾನ್ಸ್ ಇಲ್ಲ ಸೆಲಬ್ರೇಷನ್ ಇಲ್ಲ ಅಂದ್ರೆ ಅದರ ಅರ್ಥ ಮದುವೆ ಆಗೋದು ಬೇಡ ಅಂತ ಏನಾದ್ರೂ ತೀರ್ಮಾನ ಮಾಡ್ಬಿಟ್ಟರಾ?

ಹೀಗೊಂದು ಪ್ರಶ್ನೆ ಕೂಡ ಮೂಡುತ್ತೆ. ಆದರೆ, ಬುಗಾಟಿ ಸ್ಪೀಡ್‌ನಲ್ಲಿ ನೀವು ಯೋಚನೆ ಮಾಡ್ಬೇಡಿ. ಯಾಕಂದ್ರೆ, ಮೋಹಕತಾರೆ ಯಾವ್ ಪ್ಲಾನ್ ಇಲ್ಲ…ಸೆಲಬ್ರೇಷನ್ ಇಲ್ಲ ಅಂತ ಹೇಳಿರುವುದು ಮುಂಬರುವ 39 ರ ಬರ್ತ್ ಡೇ ಬಗ್ಗೆ.

ಸ್ಟ್ಯಾಂಡಪ್ ಕಾಮಿಡಿಯನ್ ಸೋನು ವೇಣುಗೋಪಾಲ್ ಜೊತೆ ಲೈವ್ ಬಂದಾಗ ರಮ್ಯಾಗೆ ಸೋನು ಪ್ರಶ್ನೆ ಮಾಡಿದರು. ನಿಮ್ಮ ಬರ್ತ್ ಡೇ ಇನ್ನೂ ನಾಲ್ಕು ತಿಂಗಳು ಇದೆ ಆದರೂ
ನಿಮ್ಮ ಬರ್ತ್ಡೇ ಸೆಲಬ್ರೇಷನ್ ಬಗ್ಗೆ ಹೇಳಿ, ನಿಮ್ಮ ಫ್ಯಾನ್ಸ್ ಗೆ ಏನಾದರೂ ಸಪ್ರೈಸ್ ಕೊಡಿ ಅಂತ ಕೇಳಿದರು. ಇದಕ್ಕೆ ಉತ್ತರ ನೀಡಿದ ರಮ್ಯಾ ಮೇಡಂ, 39 ವರ್ಷ ವಯಸ್ಸಾಯ್ತು ಇನ್ನೇನ್ ಸೆಲಬ್ರೇಟ್ ಮಾಡ್ಲಿ ಬಿಡಿ. ಅಷ್ಟಕ್ಕೂ, ಬರ್ತ್ ಡೇ ಇನ್ನೂ ದೂರ ಇದೆ ನಾನಿನ್ನು ಯೋಚನೆ ಮಾಡಿಲ್ಲ ಬಿಡಿ ಎಂದುಬಿಟ್ಟರು.

ನವೆಂಬರ್ 29 ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಹುಟ್ಟುಹಬ್ಬ. 38 ವರ್ಷಗಳನ್ನ ಪೂರೈಸಿ 39ನೇ ವಸಂತಕ್ಕೆ ಕಾಲಿಡ್ತಿದ್ದಾರೆ. ಮೂವತ್ತೊಂಭತ್ತಾದರೂ 22 ರ ಹರೆಯದ ಚೆಲುವೆಯಂತಿರುವ ಮೋಹಕತಾರೆಯನ್ನ ಕಂಡ್ರೆ ಪಡ್ಡೆಹೈಕ್ಳು ಮಾತ್ರವಲ್ಲ ಬೆಳ್ಳಿತೆರೆ ಕೂಡ ಬೆವರುತ್ತೆ. ಫ್ಯಾನ್ಸ್ ಹೇಗೆ ರಮ್ಯಾನ ಬಿಗ್‌ಸ್ಕ್ರೀನ್‌ನಲ್ಲಿ ನೋಡೋದಕ್ಕೆ ಬಯಸ್ತಿದ್ದಾರೋ ಅದೇ ರೀತಿ ಬೆಳ್ಳಿಪರದೆ ಕೂಡ ಪದ್ಮಾವತಿಯನ್ನ ತಲೆಮೇಲೆ ಹೊತ್ತು ಮೆರೆಸೋದಕ್ಕೆ ಎದುರು ನೋಡ್ತಿದೆ. ಆ ದಿವ್ಯಕ್ಷಣಕ್ಕೆ ದಿವ್ಯ ಸ್ಪಂದನ ಯಾವಾಗ ಗ್ರೀನ್ ಸಿಗ್ನಲ್ ಕೊಡ್ತಾರೋ ಗೊತ್ತಿಲ್ಲ. ಆ ಕ್ಷಣ ಆದಷ್ಟು ಬೇಗ ಹೊರಡಲಿ ಗೌರಮ್ಮ ಸಿಲ್ವರ್‌ಸ್ಕ್ರೀನ್ ಮೇಲೆ ದಿಬ್ಬಣ ಹೊರಡಲಿ ಅಲ್ಲವೇ.

error: Content is protected !!