ಬರಹ: ವಿಶಾಲಾಕ್ಷಿ
ಮೋಹಕತಾರೆ ರಮ್ಯಾ ಚಂದನವನದ ಎವರ್‌ಗ್ರೀನ್ ಚೆಲುವೆ. ಹುಡುಗರ ಪಾಲಿನ ಹಾಟ್‌ಫೇವರಿಟ್ ಹಾಗೂ ಆಲ್ ಟೈಮ್ ಕ್ರಷ್. ಬಣ್ಣದ ಲೋಕದಿಂದ ದೂರ ಉಳಿದರೂ ಕೂಡ ಸ್ಯಾಂಡಲ್‌ವುಡ್ ಪಾಲಿಗೆ ಗೋಲ್ಡನ್ ಕ್ವೀನ್ ಈಕೆ. ಗಂಧದಗುಡಿಗೆ ಎಷ್ಟೇ ಗ್ಲಾಮರ್ ಬೊಂಬೆಗಳು ಜಿಗಿಜಗಿದು ಬಂದರೂ ಕೂಡ ಊರಿಗೊಬ್ಳೆ ಪದ್ಮಾವತಿಯ ಚಾರ್ಮ್ ಕಮ್ಮಿಯಾಗಿಯಿಲ್ಲ. ಅಷ್ಟರ ಮಟ್ಟಿಗೆ ಮೇನಿಯಾ ಸೃಷ್ಟಿಸಿಕೊಂಡಿರುವ ರಮ್ಯಾ ಮೇಡಂ `39 ವರ್ಷ ಆಯ್ತು-ಯಾವ ಪ್ಲ್ಯಾನ್ಸ್ ಇಲ್ಲ..ಯಾವ ಸೆಲಬ್ರೇಷನ್ನು ಇಲ್ಲ’ ಹೀಗನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ರಮ್ಯಾ ಮೇಡಂ ಹಿಂಗ್ಯಾಕ್ ಹೇಳಿದರು ಅನ್ನೋದು ನಿಮ್ಮೆಲ್ಲರ ಕೂತೂಹಲಕ್ಕೆ ಕಾರಣವಾಗಿರುತ್ತೆ. ಪ್ಲ್ಯಾನ್ಸ್ ಇಲ್ಲ ಸೆಲಬ್ರೇಷನ್ ಇಲ್ಲ ಅಂದ್ರೆ ಅದರ ಅರ್ಥ ಮದುವೆ ಆಗೋದು ಬೇಡ ಅಂತ ಏನಾದ್ರೂ ತೀರ್ಮಾನ ಮಾಡ್ಬಿಟ್ಟರಾ?
ಹೀಗೊಂದು ಪ್ರಶ್ನೆ ಕೂಡ ಮೂಡುತ್ತೆ. ಆದರೆ, ಬುಗಾಟಿ ಸ್ಪೀಡ್‌ನಲ್ಲಿ ನೀವು ಯೋಚನೆ ಮಾಡ್ಬೇಡಿ. ಯಾಕಂದ್ರೆ, ಮೋಹಕತಾರೆ ಯಾವ್ ಪ್ಲಾನ್ ಇಲ್ಲ…ಸೆಲಬ್ರೇಷನ್ ಇಲ್ಲ ಅಂತ ಹೇಳಿರುವುದು ಮುಂಬರುವ 39 ರ ಬರ್ತ್ ಡೇ ಬಗ್ಗೆ.
ಸ್ಟ್ಯಾಂಡಪ್ ಕಾಮಿಡಿಯನ್ ಸೋನು ವೇಣುಗೋಪಾಲ್ ಜೊತೆ ಲೈವ್ ಬಂದಾಗ ರಮ್ಯಾಗೆ ಸೋನು ಪ್ರಶ್ನೆ ಮಾಡಿದರು. ನಿಮ್ಮ ಬರ್ತ್ ಡೇ ಇನ್ನೂ ನಾಲ್ಕು ತಿಂಗಳು ಇದೆ ಆದರೂ
ನಿಮ್ಮ ಬರ್ತ್ಡೇ ಸೆಲಬ್ರೇಷನ್ ಬಗ್ಗೆ ಹೇಳಿ, ನಿಮ್ಮ ಫ್ಯಾನ್ಸ್ ಗೆ ಏನಾದರೂ ಸಪ್ರೈಸ್ ಕೊಡಿ ಅಂತ ಕೇಳಿದರು. ಇದಕ್ಕೆ ಉತ್ತರ ನೀಡಿದ ರಮ್ಯಾ ಮೇಡಂ, 39 ವರ್ಷ ವಯಸ್ಸಾಯ್ತು ಇನ್ನೇನ್ ಸೆಲಬ್ರೇಟ್ ಮಾಡ್ಲಿ ಬಿಡಿ. ಅಷ್ಟಕ್ಕೂ, ಬರ್ತ್ ಡೇ ಇನ್ನೂ ದೂರ ಇದೆ ನಾನಿನ್ನು ಯೋಚನೆ ಮಾಡಿಲ್ಲ ಬಿಡಿ ಎಂದುಬಿಟ್ಟರು.
ನವೆಂಬರ್ 29 ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಹುಟ್ಟುಹಬ್ಬ. 38 ವರ್ಷಗಳನ್ನ ಪೂರೈಸಿ 39ನೇ ವಸಂತಕ್ಕೆ ಕಾಲಿಡ್ತಿದ್ದಾರೆ. ಮೂವತ್ತೊಂಭತ್ತಾದರೂ 22 ರ ಹರೆಯದ ಚೆಲುವೆಯಂತಿರುವ ಮೋಹಕತಾರೆಯನ್ನ ಕಂಡ್ರೆ ಪಡ್ಡೆಹೈಕ್ಳು ಮಾತ್ರವಲ್ಲ ಬೆಳ್ಳಿತೆರೆ ಕೂಡ ಬೆವರುತ್ತೆ. ಫ್ಯಾನ್ಸ್ ಹೇಗೆ ರಮ್ಯಾನ ಬಿಗ್‌ಸ್ಕ್ರೀನ್‌ನಲ್ಲಿ ನೋಡೋದಕ್ಕೆ ಬಯಸ್ತಿದ್ದಾರೋ ಅದೇ ರೀತಿ ಬೆಳ್ಳಿಪರದೆ ಕೂಡ ಪದ್ಮಾವತಿಯನ್ನ ತಲೆಮೇಲೆ ಹೊತ್ತು ಮೆರೆಸೋದಕ್ಕೆ ಎದುರು ನೋಡ್ತಿದೆ. ಆ ದಿವ್ಯಕ್ಷಣಕ್ಕೆ ದಿವ್ಯ ಸ್ಪಂದನ ಯಾವಾಗ ಗ್ರೀನ್ ಸಿಗ್ನಲ್ ಕೊಡ್ತಾರೋ ಗೊತ್ತಿಲ್ಲ. ಆ ಕ್ಷಣ ಆದಷ್ಟು ಬೇಗ ಹೊರಡಲಿ ಗೌರಮ್ಮ ಸಿಲ್ವರ್‌ಸ್ಕ್ರೀನ್ ಮೇಲೆ ದಿಬ್ಬಣ ಹೊರಡಲಿ ಅಲ್ಲವೇ.