ರಿವೀಲ್‌ ಆಯ್ತು ಜುಲೈ 11 ರ ಸಸ್ಪೆನ್ಸ್‌;ಸಿಂಪಲ್‌ ಸ್ಟಾರ್‌ ಗೆ ಹೊಂಬಾಳೆ ಫಿಲಂಸ್‌ ಕೊಡ್ತು ಭರ್ಜರಿ ಗಿಫ್ಟ್ – ಹೊಸ ವರ್ಷಕ್ಕೆ ಹೊಸ ಸಿನಿಮಾ!

ಸಿಂಪಲ್ ಸ್ಟಾರ್‌ ರಕ್ಷಿತ್‌ ಶೆಟ್ಟಿ ಒಂದುಸುದ್ದಿ ಹೇಳ್ತೀನಿ ಅಂದಿದ್ರು. ಅದರಲ್ಲೂ ತಮ್ಮನ್ನು ಅವಮಾನಿಸಿದವರಿಗೆ ತಕ್ಕ ಉತ್ತರ ಕೊಡ್ತೀನಿ ಅಂತಾನೂ ಹೇಳಿದ್ದರು. ಅದಕ್ಕೆ ಜುಲೈ 11 ಅನ್ನು ನಿಗದಿ ಮಾಡಿದ್ರು. ವಿಷಯ ಏನು ಅನ್ನೋದನ್ನು ಸಸ್ಪೆನ್ಸ್‌ ಇಟ್ಟಿದ್ರು. ಸಹಜವಾಗಿಯೇ ಚಿತ್ರೋದ್ಯಮದಲ್ಲಿ ಇದು ದೊಡ್ಡ ಕುತೂಹಲ ಹುಟ್ಟಿಸಿತ್ತು. ಆ ದಿನಕ್ಕೆ ಕಾಯುತ್ತಿರುವಾಗಲೇ ಮೊನ್ನೆಯಿಂದ ಹೊಂಬಾಳೆ ಫಿಲಂಸ್‌ ಕೂಡ ಜುಲೈ 11 ಕ್ಕೆ ಅಂತಹದೇ ಒಂದು ಸಸ್ಪೆನ್ಸ್‌ ರಿಲೀವ್‌ ಗೆ ದಿನ ನಿಗದಿ ಮಾಡಿತ್ತು. ಅವರೆಡಕ್ಕೂ ಒಂದು ಹೋಲಿಕೆ ಇತ್ತು. ಹಾಗೊಂದು ಅಂದಾಜು ಮಾಡಿ, ಸಿನಿ ಲಹರಿ ಒಂದು ವರದಿ ಪ್ರಕಟಿಸಿತ್ತು. ಅದೀಗ ನಿಜವಾಗಿದೆ.

ಕೆಜಿಎಫ್‌ ಖ್ಯಾತಿಯ ಕನ್ನಡದ ಬಹು ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಹೊಂಬಾಳೆ ಫಿಲಂಸ್‌ ಈ ಮುಂಚೆಯೇ ಘೋಷಿಸಿದ ಹಾಗೆ ಜುಲೈ 11 ರಂದು ಮಧ್ಯಾಹ್ನ ತನ್ನ ನಿರ್ಮಾಣದ ಹತ್ತನೇ ಸಿನಿಮಾದ ಟೈಟಲ್‌ ಲಾಂಚ್‌ ಮಾಡಿದೆ. ರಿಚರ್ಡ್‌ ಆಂಟನಿ ಅಂತ ಈ ಚಿತ್ರಕ್ಕೆ ಹೆಸರಿಡಲಾಗಿದೆ.

ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಅವರೇ ಈ ಚಿತ್ರಕ್ಕೆ ನಾಯಕ ನಟ, ಜತೆಗೆ ಅವರೇ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇಷ್ಟು ವಿವರವನ್ನು ಹೊಂಬಾಳೆ ಫಿಲಂಸ್‌ ಅಧಿಕೃತವಾಗಿ ಅನೌನ್ಸ್‌ ಮಾಡಿದೆ. ಅಂದ ಹಾಗೆ, ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಅವರು ಜುಲೈ 11 ರಂದು ಹೇಳುವುದಾಗಿ ಸಸ್ಪೆನ್ಸ್‌ ಆಗಿಟ್ಟಿದ್ದ ಸಂಗತಿಯೂ ಇದೇ ಆಗಿದೆ ಅನ್ನೋದು ವಿಶೇಷ.

ಅಂದಹಾಗೆ ಹೊಂಬಾಳೆ ಫಿಲಂಸ್‌ ಬ್ಯಾನರ್‌ ನಿರ್ಮಾಣ ಸಿನಿಮಾ ಇದು ಅಂತಂದ್ರೆ ಹೆಚ್ಚೇನು ಹೇಳಬೇಕಿಲ್ಲ. ಕಥೆಗೆ ತಕ್ಕಂತೆ ಅದ್ದೂರಿ ವೆಚ್ಚದಲ್ಲಿಯೇ ನಿರ್ಮಾಣವಾಗುವುದು ಅಷ್ಟೇ ಗ್ಯಾರಂಟಿ. ರಿಚರ್ಡ್‌ ಆಂಟನಿ ಎನ್ನುವ ಚಿತ್ರದ ಟೈಟಲ್‌ ಗೆ ಲಾರ್ಡ್‌ ಆಫ್‌ ದಿ ಸೀ ಅಂತ ಟ್ಯಾಗ್‌ ಲೈನ್‌ ನೀಡಲಾಗಿದೆ. ಅಲ್ಲಿಗೆ ಇದೊಂದು ಸಮುದ್ರದ ಕಥೆ, ಅನ್ನೋದರ ಜತೆಗೆ ಅಲ್ಲಿ ಸಾಕಷ್ಟು ಕೌತುಕಗಳಿವೆ ಅನ್ನೋದು ಅಷ್ಟೇ ನಿಜವೇ. ಸದ್ಯಕ್ಕೆ ಚಿತ್ರದ ಕಥೆಯ ಬಗ್ಗೆ ನಿರ್ದೇಶಕ ರಕ್ಷಿತ್‌ ಶೆಟ್ಟಿ ಒಂದಷ್ಟ ಮಾಹಿತಿ ಹಂಚಿಕೊಂಡಿದ್ದಾರೆ. ʼ ಉಳಿದವರು ಕಂಡಂತೆ ಚಿತ್ರದ ನಂತರದ ಎರಡನೇ ಪ್ರಯತ್ನ. ಅಲ್ಲಿಗಿಂತ ತುಂಬಾನೆ ವಿಭಿನ್ನತೆ, ವಿಶೇಷತೆ ಇರುವಂತಹ ಸಿನಿಮಾ. ಸಾಮಾನ್ಯವಾಗಿ ಈ ಹೊತ್ತಿಗೆ ಅಂದರೆ ಕಾಲಕ್ಕೆ ತಕ್ಕಂತೆಯೂನಿವರ್ಷಲ್ ಆಗುವಂತ ಕಥೆ. ಈ ಕಥೆಯನ್ನು ತೆರೆ ಮೇಲೆ ತರಲು ನನಗೆ ಹೊಂಬಾಳೆ ಫಿಲಂಸ್‌ ಸಾಥ್‌ ನೀಡಿದ್ದು ಸಾಕಷ್ಟು ಖುಷಿ ಕೊಟ್ಟಿದೆ ಎನ್ನುತ್ತಾರೆ ರಕ್ಷಿತ್‌ ಶೆಟ್ಟಿ.

ಸದ್ಯಕ್ಕೆ ಹೊಂಬಾಳೆ ಫಿಲಂಸ್‌ ರಿವೀಲ್‌ ಮಾಡಿರುವ ಮಾಹಿತಿ ಪ್ರಕಾರ, ಅಜನೀಶ್‌ ಲೋಕನಾಥ್‌ ಸಂಗೀತ, ಕರಮ್‌ ಚಾವ್ಲಾ ಛಾಯಾಗ್ರಹಣ ಈನಚಿತ್ರಕ್ಕಿದೆ. ಕಲಾವಿದರ ಆಯ್ಕೆಗಳೆಲ್ಲವೂ ಸದ್ಯಕ್ಕೆ ಸಸ್ಪೆನ್ಸ್.‌೨೦೨೨ ರ ಹೊಸವರ್ಷದ ಆರಂಭದಿಂದಲೇ ಚಿತ್ರೀಕರಣ ಶುರುವಂತೆ. ಮುಂದೆ ಇದಕ್ಕೆ ಸಂಬಂಧಿಸಿದ ಒಂದಷ್ಟು ಮಾಹಿತಿಗಳು ಒಂದೊಂದೆ ಲಭ್ಯವಾಗಬೇಕಿದೆಯಷ್ಟೇ.

Related Posts

error: Content is protected !!