Categories
ಸಿನಿ ಸುದ್ದಿ

ಲವ್ ಯೂ ರಚ್ಚು ‘ದುರಂತ ; ಮೃತ ಫೈಟರ್ ವಿವೇಕ್ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಣೆ- ಸದ್ಯ 5 ಲಕ್ಷ ಚೆಕ್ ಹಸ್ತಾಂತರ !

‘ಲವ್ ಯೂ ರಚ್ಚು’ ಸಿನಿಮಾ ಸೆಟ್ ನಲ್ಲಿ ನಡೆದ ದುರಂತದ ಬಗ್ಗೆ ನಿಮ್ಮೆಲ್ಲರಿಗೂ ಗೊತ್ತೆಯಿದೆ. ಹೈ ಟೆನ್ಷನ್ ವಿದ್ಯುತ್ ತಂತಿ ತಗುಲಿ ಪ್ರಾಣಬಿಟ್ಟ ಫೈಟರ್ ವಿವೇಕ್ ಸಾವಿಗೆ ನೀವೆಲ್ಲರೂ ಕೂಡ ಕಂಬನಿ ಮಿಡಿದಿದ್ದೀರಾ, ಮರುಕ ಪಟ್ಟಿದ್ದೀರಾ ಅದೇ ರೀತಿ ಚಿತ್ರತಂಡ ಕೂಡ ಕೊರಗುತ್ತಿದೆ, ನಿರ್ಮಾಪಕ ಗುರು ದೇಶ್ ಪಾಂಡೆ ಕುಟುಂಬ ಕೂಡ ವಿಷಾದ ವ್ಯಕ್ತಪಡಿಸುತ್ತಿದೆ.‌

ನಮ್ಮ ಬ್ಯಾನರ್ ನ ಸಿನಿಮಾದಲ್ಲಿ ಇಂತಹದ್ದೊಂದು‌ ಅವಘಡ ಸಂಭವಿಸಿಬಾರದಿತ್ತು, ದುರದೃಷ್ಟವಶಾತ್ ದುರಂತ ಸಂಭವಿಸಿದೆ. ಈಗ ಮೃತ ವಿವೇಕ್ ನ ಜೀವಂತವಾಗಿ ತಂದು ಕೊಡುವುದಕ್ಕಂತೂ ಆಗೋದಿಲ್ಲ ಹಾಗಂತ ವಿವೇಕ್ ಕುಟುಂಬವನ್ನೂ ನಾವು ಕೈಬಿಡುವುದಿಲ್ಲ. ವಿವೇಕ್ ಅಂತಿಮ ಕಾರ್ಯಕ್ಕೂ ಹಣ ನೀಡಿದ್ದೇವೆ, ಗಾಯಗೊಂಡು ಆಸ್ಪತ್ರೆ ಸೇರಿರುವ ರಂಜಿತ್ ಚಿಕಿತ್ಸಾ ವೆಚ್ಚ ಕೂಡ ಭರಿಸಿದ್ದಾರೆ ಎಂದಿದ್ದಾರೆ.

ಸದ್ಯ ಗುರುದೇಶ್ ಪಾಂಡೆ ಎಲ್ಲಿದ್ದಾರೋ ಗೊತ್ತಿಲ್ಲ.
ಘಟನೆ ನಡೆದ ಕ್ಷಣದಿಂದ ಯಾರ ಕೈಗೂ ಕೂಡ ಸಿಗುತ್ತಿಲ್ಲ. ಅಜ್ಞಾತ ಸ್ಥಳದಿಂದಲೇ ಲಾಯರ್ ಗೆ ಮೇಲ್ ಮಾಡಿ ಮೃತ ವಿವೇಕ್ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿ ಎಂದು ಹೇಳಿದ್ದರಂತೆ. ಹೀಗಾಗಿ, ಗುರು ದೇಶ್ ಪಾಂಡೆಯವರ ಪತ್ನಿ ಪ್ರಿತಿಕಾ ದೇಶ್ ಪಾಂಡೆ
ಜಿ ಸಿನಿಮಾ ಅಕಾಡೆಮಿ ಪರ ವಕೀಲ ನಾಗಭೂಷಣ್, ಹಾಗೂ ಗುರು ದೇಶ್ ಪಾಂಡೆ ಪರ ವಕೀಲ ಕೆಂಪೇಗೌಡರ ಜೊತೆ ಸುದ್ದಿಗೋಷ್ಠಿ ನಡೆಸಿದರು.


10 ಲಕ್ಷ ಪರಿಹಾರ ಕೊಡುವುದಾಗಿ ಹೇಳಿದ್ದೇವೆ, ಸದ್ಯ 5 ಲಕ್ಷ ಚೆಕ್ ನ ಹಸ್ತಾಂತರಿಸುತ್ತೇವೆ. ವಿವೇಕ್ ಮನೆಗೆ ನಾವೇ ಖುದ್ದಾಗಿ ಹೋಗಿ ಅವರ ತಾಯಿ ಕೈಗೆ 5 ಲಕ್ಷ ಚೆಕ್ ಒಪ್ಪಿಸಲಿದ್ದೇವೆ ಅಂತ ಸುದ್ದಿ ಗೋಷ್ಟಿಯಲ್ಲಿ ತಿಳಿಸಿದರು.

ಪ್ರಕರಣ ತನಿಖೆಯ ಹಂತದಲ್ಲಿದೆ ಹೆಚ್ಚು ಮಾತನಾಡುವುದಿಲ್ಲ, ತಪ್ಪಿತಸ್ಥರು ನೀವೇ ಅಂತ ನಮ್ಮ ನಿರ್ಮಾಣ ಸಂಸ್ಥೆಯ ಮೇಲೆ ಬಂದರೆ ಅದರ ಹೊಣೆಯನ್ನ ನಾವೇ ಹೊರುತ್ತೇವೆ ಎಂದು
ಕ್ಯಾಮೆರಾ ಮುಂದೆ ಹೇಳಿದ್ದಾರೆ. ಪ್ರಕರಣ ಸಂಬಂಧ ಲವ್ ಯೂ ರಚ್ಚು ಚಿತ್ರದ ನಿರ್ದೇಶಕ ಶಶಾಂಕ್ ರಾಜ್, ನಿರ್ಮಾಪಕ ಗುರುದೇಶ್ ಪಾಂಡೆ, ಸಾಹಸ ನಿರ್ದೇಶಕ ವಿನೋದ್, ಸಿನಿಮಾ ಇನ್ ಚಾರ್ಜ್ ಫರ್ನಾಂಡೀಸ್, ಕ್ರೇನ್ ಆಪರೇಟರ್ ಮಹದೇವ್ ಸೇರಿದಂತೆ ಐವರ ಮೇಲೆ ಎಫ್ ಐ ಆರ್ ದಾಖಲಾಗಿದೆ.

ಈಗಾಗಲೇ ಮೂವರನ್ನು ಅರೆಸ್ಟ್ ಮಾಡಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕಾನೂನು ಯಾವ ರೀತಿಯ ತೀರ್ಪು ಕೊಡುತ್ತೆ ಕಾದುನೋಡಬೇಕಿದೆ.

Categories
ಸಿನಿ ಸುದ್ದಿ

ಶಿವಣ್ಣ ನಿಮ್ಮ ಆಶೀರ್ವಾದದಿಂದಲೇ ಈ‌ ಟ್ರೋಪಿ ನಂಗೆ ಸಿಕ್ತು! ದೊಡ್ಮನೆಗೆ ಬಿಗ್ ಬಾಸ್ ವಿನ್ನರ್ ಮಂಜಣ್ಣ ಎಂಟ್ರಿ…

ಬಿಗ್‌ ಬಾಸ್‌ ವಿನ್ನರ್‌ ಮಂಜು ಪಾವಗಡ ಬುಧವಾರ ನಟ ಶಿವರಾಜ್‌ ಕುಮಾರ್‌ ಅವರನ್ನು ಭೇಟಿ ಮಾಡಿದರು. ಅವರೊಂದಿಗೆ ಕೆಲ ಹೊತ್ತು ಮಾತನಾಡಿ ಅವರ ಆಶೀರ್ವಾದ ಪಡೆದರು. ಶಿವಣ್ಣ ಅವರ ಕಾಲಿಗೆ ನಮಸ್ಕರಿಸೀದ ಮಂಜು ಪಾವಗಡ, ಸಿಹಿ ತಿನಿಸಿ ಸಂಭ್ರಮಪಟ್ಟರು.

ಶಿವರಾಜ್‌ ಕುಮಾರ್‌ ಅವರೊಂದಿಗೆ ಮಾತನಾಡಬೇಕೆನ್ನುವ ಬಹುದೊಡ್ಡ ಆಸೆಯನ್ನು ಬಿಗ್‌ ಬಾಸ್‌ ಮನೆಯಲ್ಲಿದ್ದಾಗಲೇ ಈಡೇರಿಸಿಕೊಂಡಿದ್ದ ಮಂಜು, ಬುಧವಾರ ನಾಗವಾರದಲ್ಲಿರುವ ಶಿವರಾಜ್‌ ಕುಮಾರ್‌ ನಿವಾಸಕ್ಕೆ ತೆರಳಿ ತಮ್ಮ ಮತ್ತೊಂದು ಆಸೆಯನ್ನು ಈಡೇರಿಸಿಕೊಂಡಿದ್ದುವಿಶೇಷ.

ಬಿಗ್‌ ಬಾಸ್‌ ಟ್ರೋಪಿ ಸಮೇತ ತೆರಳಿದ್ದ ಮಂಜು ಪಾವಗಡ, ಟ್ರೋಪಿ ಹಿಡಿದುಕೊಂಡೇ ಶಿವರಾಜ್‌ ಕುಮಾರ್‌ ಜತೆಗೆ ಕ್ಯಾಮಾರಾಕ್ಕೆ ಪೋಸು ಕೊಟ್ಟರು.

Categories
ಸಿನಿ ಸುದ್ದಿ

ಗಂಧದಗುಡಿ ಅರಗಿಣಿ ಯಾವುದರಲ್ಲಿ ಕಮ್ಮಿ ಗುರು ; ಕಣ್ಣರಳಿಸಿ ನೋಡಿ- ಗಡಿದಾಟೋದು ಬಿಡಿ !?

ಕೋಟಿ ಕೋಟಿ ಸುರಿದು ಅದ್ಯಾಕೆ ಬೇರೆ ಭಾಷೆಯ ಬೆಡಗಿಯರನ್ನು ರತ್ನಗಂಬಳಿ ಹಾಕಿಕೊಂಡು ಕರೆತರುತ್ತೀರಿ? ನಮ್ಮಲ್ಲೇ ಗಿಲ್ಲಿಯಂಹ ಗರ್ಲ್ಸ್ ಇದ್ದಾರೆ, ಮಾದಕತೆ ತುಂಬಿರುವ ಅಭಿನಯದ ಮೂಲಕ ಕಿಕ್ಕೇರಿಸುವ ನಟಿಮಣಿಯರು ಇದ್ದಾರೆ. ಒಂದೇ ಒಂದು ಸೆಕೆಂಡ್ ಕಣ್ಣರಳಿಸಿ ನೋಡಿದ್ರೆ ನೀವ್ಯಾರು ಗಡಿದಾಟಲ್ಲ ಬರೆದಿಟ್ಟುಕೊಳ್ಳಿ!

ಗಂಧದಗುಡಿ ಅರಗಿಣಿ ಯಾವುದರಲ್ಲಿ ಕಮ್ಮಿ ಗುರು.. ಕಣ್ಣರಳಿಸಿ ನೋಡಿ- ಗಡಿದಾಟೋದು ಬಿಡಿ, ಹೀಗಂತ ನಾವು ಹೇಳ್ತಿಲ್ಲ ಅವರ ಫ್ಯಾನ್ಸ್ ಹೇಳ್ತಿದ್ದಾರೆ. ಗಿಣಿಯ ಫ್ಯಾನ್ಸ್ಫಾಲೋಯರ್ಸ್ ಈ ರೀತಿಯಾಗಿ ಗುಡುಗುತ್ತಿರುವುದಕ್ಕೂ ಕಾರಣ ಇದೆ ಅದೇನು ಅಂತ ಹೇಳ್ತೀವಿ. ಅದಕ್ಕೂ ಮುನ್ನ ಅರಗಿಣಿಯ ಹವಾ ಕಥೆ ಕೇಳಿ.ಗಿಣಿ ಅಂದಾಕ್ಷಣ ನಿಮ್ಮೆಲ್ಲರ ಕಣ್ಮುಂದೆ ನಟಿ ರಾಗಿಣಿ ಬಂದು ನಿಲ್ತಾರೆ ಅಪ್ ಕೋರ್ಸ್ ನಿಲ್ಲಬೇಕು. ಚಂದನವನಕ್ಕೆ ಊರಿಗೊಬ್ಳೆ ಪದ್ಮಾವತಿ ಹೇಗೋ ಸ್ಯಾಂಡಲ್ ವುಡ್ ಗೆ ಒಬ್ಬರೇ ಗಿಣಿ ಅವರೇ ನಟಿ ರಾಗಿಣಿಯವರು. ಸೌಂದರ್ಯದ ಕಣಿಯಂ ತಿರುವ ಅರಗಿಣಿ ಮಾದಕ ನೋಟ ಮಾತ್ರವಲ್ಲ ಮನಮೋಹಕ ಅಭಿನ ಯ ದ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಬೆಳ್ಳಿತೆರೆಯನ್ನೂ ಮೆಚ್ಚಿಸಿ ಬಿಗ್ ಸ್ಕ್ರೀನ್ ನಲ್ಲಿ ದಶಕ ಪೂರೈಸಿದ್ದಾರೆ.

ಈ ಹತ್ತು ವರ್ಷದ ಸಿನಿಜರ್ನಿಯಲ್ಲಿ ತಮ್ಮದೇ ಆದ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿದ್ದಾರೆ. ನಾಯಕನ ಜೊತೆ ಬರೀ ಮರಸುತ್ತು ವುದಲ್ಲದೇ ನಾಯಕಿ ಪ್ರಧಾನ ಸಿನಿಮಾ ಮೂಲಕ ಬೆಳ್ಳಿಪರದೆಯನ್ನು ಬೆಚ್ಚಿಸಿ, ಬಾಕ್ಸ್ ಆಫೀಸ್ ನ ಶೇಕ್ ಮಾಡಿದ್ದಾರೆ. ನಾಯಕಿಯಾಗಿ ತರಹೇವಾರಿ ಪಾತ್ರಗಳಿಗೆ ಜೀವತುಂಬಿ ಸಿಲ್ವರ್‌ಸ್ಕ್ರೀನ್ ಮೇಲೆ ದಿಬ್ಬಣ ಹೋಗಿ ಬಂದಿದ್ದಾರೆ. ಎಕ್ಸ್‌ ಪಿರಿಮೆಂಟ್ ಮಾಡುವ ಹೊತ್ತಲ್ಲಿ ಎಡವಿ ದ್ದಾರೆ, ಕೆಳಗೆ ಬಿದ್ದು ಮೇಲೇಳಲು ಒದ್ದಾಡಿದ್ದಾರೆ. ಚಾರ್ಮ್ ಉಳಿಸಿ ಕೊಳ್ಳೋದಕ್ಕೆ ಹಗಲು-ರಾತ್ರಿ ಕಷ್ಟಪಟ್ಟಿದ್ದಾರೆ.

ಯಾವುದೇ ಜರ್ನಿಯಲ್ಲಿ ಅಪ್ಸ್ ಅಂಡ್ ಡೌನ್ಸ್ ಇದ್ದೇ ಇರುತ್ತೆ. ಅಂತಹ ಜರ್ನಿಯ ಅನುಭವ ರಾಗಿಣಿಗೂ ಆಗಿದೆ. ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿರುವ ರಾಗಿಣಿ ಡ್ರಗ್ಸ್ ವಿಚಾರದಲ್ಲಿ ಜೈಲಿಗೆ ಹೋಗಬೇಕಾಗಿ ಬಂತು. ಅಲ್ಲಿಂದ ಬಂದ್ಮೇಲೆ ತಾವಾಯ್ತು ತಮ್ಮ ಕೆಲಸ ಆಯ್ತು ಅಂತ ಇರಬಹುದಾಗಿತ್ತು ಆದರೆ ಅದಕ್ಕೆ ರಾಗಿಣಿ ಮನಸ್ಸು ಒಪ್ಪಲಿಲ್ಲ. ಹೀಗಾಗಿ, ಮತ್ತೆ ಸಾಮಾಜಿಕ ಕೆಲಸಕ್ಕೆ ಅಣಿಯಾದರು. ಕೊರೊನಾ ಸಂಕಷ್ಟದಿಂದ ನರಳುತ್ತಿದ್ದವರಿಗೆ ನೆರವಿನ ಹಸ್ತ ಚಾಚಿದರು ಅನ್ನಪೂರ್ಣೇಶ್ವರಿ ಎನಿಸಿಕೊಂಡರು. ನಟಿ ರಾಗಿಣಿಯ ಹೃದಯವಂತಿಕೆ ಹಾಗೂ ಸಮಾಜಮುಖಿ ಕೆಲಸಕ್ಕೆ ಅತ್ಯದ್ಬುತ ಪ್ರಶಸ್ತಿ ಕೂಡ ಸಿಗ್ತು.

ಇಷ್ಟೆಲ್ಲಾ ಹೇಳಿದ್ಮೇಲೆ ನಟಿ ರಾಗಿಣಿಯ ಹೊಸ ವರಸೆ ಹಾಗೂ ಅವರ ಅಭಿಮಾನಿಗಳ ಒಕ್ಕೊರಲ ಅಭಿಪ್ರಾಯವನ್ನು ನಿಮ್ಮ ಮುಂದೆ ಇಡಲೆ ಬೇಕು. ನಟಿ ರಾಗಿಣಿ ದ್ವಿವೇದಿ ಬದಲಾಗಿದ್ದಾರೆ. ಎಷ್ಟರ ಮಟ್ಟಿಗೆ ಅಂದರೆ ಬಜಾರ್‌ನಲ್ಲಿ ನಾವೇ ಸ್ಲಿಮ್ ಸುಂದರಿಯರು ಅಂತ ಮೆರೆಯುತ್ತಿ ದ್ದವರು ಕೂಡ ಅರಗಿಣಿಯ ಜಿರೋ ಸೈಜ್ ಫಿಗರ್‌ನ ನೋಡಿ ಹೊಟ್ಟೆ ಉರಿದು ಕೊಳ್ಳುತ್ತಿದ್ದಾರೆ. ಹೌದು, ಮೊದಲೇ ಸ್ಲಿಮ್ ಆಗಿದ್ದ ರಾಗಿಣಿ ಮೊಗದಷ್ಟು ಸ್ಲಿಮ್ ಆಗಿದ್ದಾರೆ. ಜಿಮ್-ವರ್ಕೌಟ್‌ನ ಬದಿಗಿಟ್ಟು ಯೋಗದ ಮೊರೆ ಹೋದ ರಾಗಿಣಿ ಭರ್ತಿ ಐದು ಕೆ.ಜಿ ತೂಕ ಇಳಿಸಿಕೊಂ ಡಿದ್ದಾರೆ. ಯೋಗ ಮಾಡಿ ದೈಹಿಕವಾಗಿ ಮತ್ತು ಮಾನಸಿ ಕವಾಗಿ ಸ್ಟ್ರಾಂಗ್ ಆಗಿದ್ದೇನೆಂದು ಸಿನಿಲಹರಿ ಜೊತೆ ಹೇಳಿಕೊಂಡಿದ್ದಾರೆ.

ನಟಿ ರಾಗಿಣಿ ತೂಕ ಇಳಿಸಿಕೊಂಡಿರುವುದು ಯಾವುದೋ ಸಿನಿಮಾಗಾಗಿ ಅಲ್ಲ ಫಿಸಿಕಲಿ ಫಿಟ್ ಆಗರ‍್ಬೇಕು ಹಾಗೂ ಹೆಲ್ತಿಯಾಗರ‍್ಬೇಕು ಎನ್ನುವ ಕಾರಣಕ್ಕೆ ಯೋಗದ ಮೊರೆ ಹೋಗಿದ್ದಾರೆ. ತಮ್ಮ ನೆಚ್ಚಿನ ನಾಯಕಿಯ ನಯಾ ಲುಕ್‌ನ ನೋಡಿದ ಅವರ ಫ್ಯಾನ್ಸು ನಮ್ಮ ಅರಗಿಣಿಗೆ ಏನ್ ಕಮ್ಮಿಯಾಗಿದೆ ಹೇಳ್ರಪ್ಪಾ? ಆರಡಿ ಹೀರೋಗೆ ಹೈಟ್ ಮ್ಯಾಚ್ ಮಾಡ್ತಾರೆ? ಜಿರೋ ಸೈಜ್‌ನ ಮೆಂಟೇನ್ ಮಾಡಿದ್ದಾರೆ, ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿಯೂ ಇದ್ದಾರೆ. ಇಷ್ಟೆಲ್ಲಾ, ಇದ್ದರೂ ಕೂಡ ನಮಗೆ ಗಿಲ್ಲಿ ಗರ್ಲ್ ಬೇಕು, ಕಿಕ್ ಸುಂದರಿನೇ ಆಗ್ಬೇಕು, ಮಲೆಯಾಳಂ ಕುಟ್ಟಿನೇ ಬೇಕು ಅಂತ ಯಾಕೇ ಹಠ ಮಾಡ್ತೀರಿ? ನಮ್ಮ ಇಂಡಸ್ಟ್ರಿಯ ಹೆಣ್ಣುಮಕ್ಕಳನ್ನು ಅದ್ಯಾಕೆ ಕಡೆಗಣಿಸ್ತೀರಿ ?ಕೋಟಿ ಕೋಟಿ ಸುರಿದು ಅದ್ಯಾಕೆ ಬೇರೆ ಭಾಷೆಯ ಬೆಡಗಿಯರನ್ನು ರತ್ನಗಂಬಳಿ ಹಾಕಿಕೊಂಡು ಕರೆತರುತ್ತೀರಿ? ನಮ್ಮಲ್ಲೇ ಗಿಲ್ಲಿಯಂಹ ಗರ್ಲ್ಸ್ ಇದ್ದಾರೆ, ಮಾದಕತೆ ತುಂಬಿರುವ ಅಭಿನಯದ ಮೂಲಕ ಕಿಕ್ಕೇರಿಸುವ ನಟಿಮಣಿಯರು ಇದ್ದಾರೆ. ಒಂದೇ ಒಂದು ಸೆಕೆಂಡ್ ಕಣ್ಣರಳಿಸಿ ನೋಡಿದ್ರೆ ನೀವ್ಯಾರು ಗಡಿದಾಟಲ್ಲ ಬರೆದಿಟ್ಟುಕೊಳ್ಳಿ ಹೀಗಂತಾರೇ, ಸಕಲ ಕನ್ನಡ ನಟಿಮಣಿಯರ ಅಭಿಮಾನಿ ದೇವರುಗಳು.

-ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಲವ್ಲಿ ನ್ಯೂಸ್:‌ ನೆನಪಿರಲಿ ಪ್ರೇಮ್‌ ಅವರ ಚಿತ್ರ ಪೂಜೆಗೆ ರೆಡಿಯಾಗಿ- ಅಕ್ಟೋಬರ್‌ 29ಕ್ಕೆ ಪ್ರೇಮಂ ಪೂಜ್ಯಂ ವರ್ಲ್ಡ್‌ ವೈಡ್‌ ರಿಲೀಸ್!

ನಟ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ “ಪ್ರೇಮಂ ಪೂಜ್ಯಂ” ಚಿತ್ರ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಬಿಡುಗಡೆ ಮುನ್ನವೇ ಸಾಕಷ್ಟು ಸುದ್ದಿ ಮಾಡಿರುವ ಈ ಚಿತ್ರ ಅಷ್ಟೇ ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ ಚಿತ್ರದ ಟೈಟಲ್ ಲಿರಿಕಲ್ ಸಾಂಗ್ ವಿಡಿಯೋ ಬಿಡುಗಡೆಯಾಗಿ, ಎಲ್ಲೆಡೆಯಿಂದ ಭರ್ಜರಿ ಮೆಚ್ಚುಗೆ ಪಡೆದಿದೆ. ಈಗ ಈ ಚಿತ್ರದ ಹೊಸ ಸುದ್ದಿ ಅಂದರೆ, ಚಿತ್ರತಂಡ ಬಿಡುಗಡೆ ದಿನವನ್ನು ಘೋಷಿಸಿದೆ. ಹೌದು, “ಪ್ರೇಮಂ ಪೂಜ್ಯಂ” ಪ್ರೇಮ್ ಅವರ 25ನೇ ಸಿನಿಮಾ ಅನ್ನೋದು ವಿಶೇಷ. ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ ಕೂಡ. ಚಿತ್ರದ‌ ಟೈಟಲ್ಲೇ ಹೇಳುತ್ತೆ ಇದೊಂದು ಪಕ್ಕಾ ಇಂಟ್ರೆಸ್ಟಿಂಗ್‌ ಲವ್‌ಸ್ಟೋರಿ ಅಂತ. ಸಿನಿಮಾ ಯಾವಾಗ ಅಂತ ಪ್ರೇಮ್‌ ಫ್ಯಾನ್ಸ್‌ ಕೇಳುತ್ತಲೇ ಇದ್ದರು. ಅವರಿಗೆ ಇಲ್ಲೊಂದು ಸಂತಸದ ಸುದ್ದಿ ಇದೆ. ಅದೇ ಚಿತ್ರ ಬಿಡುಗಡೆ ಆಗುತ್ತಿರುವ ಸುದ್ದಿ. ಅಕ್ಟೋಬರ್‌ 29 ರಂದು ಚಿತ್ರ ಬಿಡುಗಡೆಯಾಗುತ್ತಿದೆ.‌

ಈ ಬಿಡುಗಡೆ ಸುದ್ದಿಯನ್ನು ಚಿತ್ರತಂಡ ಅನೌನ್ಸ್‌ ಮಾಡಿದೆ. ಸಹಜವಾಗಿಯೇ ಇದು ಪ್ರೇಮ್‌ ಫ್ಯಾನ್ಸ್‌ಗೆ ಖುಷಿ ಹೆಚ್ಚಿಸಿದೆ.
ಅಂದಹಾಗೆ, ಈ ಚಿತ್ರವನ್ನು ಜಗತ್ತಿನಾದ್ಯಂತ ರಿಲೀಸ್‌ ಮಾಡಲು ಚಿತ್ರತಂಡ ತಯಾರು ಮಾಡಿಕೊಂಡಿದೆ. ಸದ್ಯದ ಸ್ಥಿತಿಯಲ್ಲಿ ಶೇ.50ರಷ್ಟು ಮಾತ್ರ ಚಿತ್ರಮಂದಿರಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್‌ ಹೊತ್ತಿಗೆ ಶೇ.100ರಷ್ಟು ಅನುಮತಿ ಸಿಗಬಹುದು. ಹಾಗಾಗಿ, ಚಿತ್ರತಂಡ ಎಲ್ಲವನ್ನೂ ಯೋಚಿಸಿಯೇ ಈ ನಿರ್ಧಾರ ಪ್ರಕಟಿಸಿದೆ.
ಆರಂಭದಿಂದಲೂ ಪೋಸ್ಟರ್ ಮೂಲಕವೇ ಸದ್ದು ಮಾಡಿದ್ದ “ಪ್ರೇಮಂ ಪೂಜ್ಯಂ”, ಈಗ ಬಿಡುಗಡೆಯ ದಿನಾಂಕ ಘೋಷಣೆ ಮಾಡಿ, ಎಲ್ಲರಲ್ಲೂ ಒಂದಷ್ಟು ನಿರಿಕ್ಷೆಯನ್ನು ಹೆಚ್ಚಿಸಿದೆ. ಕಳೆದ ಯುಗಾದಿಗೆ ಚಿತ್ರದ ಟೈಟಲ್‌ ಸಾಂಗ್‌ ಲಿರಿಕಲ್‌ ಸಾಂಗ್ ವಿಡಿಯೊ ಬಿಡುಗಡೆಯಾಗಿತ್ತು.

ಅದಕ್ಕೆ ಮಿಲಯನ್ಸ್‌ ವೀವ್ಸ್‌ ಬಂದಿತ್ತು. ಅದರ ಬೆನ್ನಲ್ಲೇ ಚಿತ್ರತಂಡ “ವೈದ್ಯೋ ನಾರಾಯಣ ಹರಿಹಿ.. ಎಂದು ಸಾಗುವ… ಸಾಗುವ ಲಿರಿಕಲ್‌ ಸಾಂಗ್ ವಿಡಿಯೋ ಕೂಡ ಬಿಡುಗಡೆ ಮಾಡಿತ್ತು. ಅದೊಂದು ಒಳ್ಳೆಯ ಪ್ರಯತ್ನವಾಗಿ ಹೊರಬಂದಿತ್ತು. ” ನನ್ನ ಜೀವನ ನಿನಗೆ ಸಮರ್ಪಣ ಕೈ ಮುಗಿವೆನು ಈ ನಾರಾಯಣ” ಎಂಬ ಹಾಡು ಅರ್ಥಪೂರ್ಣವಾಗಿದೆ. ಇನ್ನು, ಈ ಚಿತ್ರ ಕೆಡಂಬದಿ ಕ್ರಿಯೇಷನ್ಸ್‌ನಲ್ಲಿ ಮೂಡಿ ಬಂದಿದ್ದು, ಲವ್ಲಿ ಸ್ಟಾರ್‌ ಪ್ರೇಮ್‌ಗೆ ಜೋಡಿಯಾಗಿ ಬೃಂದಾ ಆಚಾರ್ಯ ಕಾಣಿಸಿಕೊಂಡಿದ್ದಾರೆ.

ಡಾ.ರಾಘವೇಂದ್ರ ಬಿ.ಎಸ್.‌ ಅವರು ಈ ಸಿನಿಮಾದ ನಿರ್ದೇಶನ ಮಾತ್ರವಲ್ಲ, ಸಂಗೀತ ಸಂಯೋಜನೆ ಜೊತೆ ಸಾಹಿತ್ಯವನ್ನೂ ಬರೆದಿರುವುದು ವಿಶೇಷ. ಈ ಚಿತ್ರದ ಪೋಸ್ಟರ್‌ಗಳು ಸಾಕಷ್ಟು ಸುದ್ದಿ ಮಾಡಿದ್ದಂತೂ ನಿಜ. ಅವೆಲ್ಲವನ್ನೂ ನೋಡಿದವರಿಗೆ ಪ್ರೇಮ್‌ ಮತ್ತಷ್ಟು ನ್ಯೂ ಲುಕ್‌ನಲ್ಲಿ ಆಕರ್ಷಿಸುತ್ತಾರೆ. ಫ್ರೆಶ್‌ ಲೊಕೇಷನ್‌ ಜೊತೆ ಅಷ್ಟೇ ಕ್ಯೂಟ್‌ ಜೋಡಿ ಕಾಣಿಸಿಕೊಂಡಿರುವುದನ್ನು ನೋಡಿದರೆ, ಸಿನಿಮಾ ನೋಡುವ ಕಾತುರ ಹೆಚ್ಚದೇ ಇರದು. ಚಿತ್ರಕ್ಕೆ ನವೀನ್‌ ಕುಮಾರ್‌ ಕ್ಯಾಮೆರಾ ಹಿಡಿದರೆ, ಹರೀಶ್‌ ಕೊಮ್ಮೆ ಸಂಕಲನವಿದೆ. ಇಂತಹ ನಿರೀಕ್ಷೆಯ ಸಿನಿಮಾಗೆ ಡಾ.ರಕ್ಷಿತ್‌ ಕೆಡಂಬದಿ, ಡಾ.ರಾಜಕುಮಾರ್‌ ಜಾನಕಿರಾಮನ್‌, ಡಾ.ರಾಘವೇಂದ್ರ ಎಸ್‌, ಮನೋಜ್‌ ಕೃಷ್ಣನ್‌ ನಿರ್ಮಾಪಕರು.


ಅದೇನೆ ಇರಲಿ, ಪ್ರತಿಯೊಬ್ಬ ನಟನಿಗೂ ತನ್ನ ಮೊದಲ ಚಿತ್ರ ಹೇಗೆ ವಿಶೇಷ ಆಗುತ್ತೋ, ಹಾಗೆಯೇ ಅವರ ಪ್ರತಿಯೊಂದು ಸಿನಿಮಾ ಕೂಡ ವಿಶೇಷವೇ. ಅದರಲ್ಲೂ 25 ನೇ ಸಿನಿಮಾ ಅಂದಾಕ್ಷಣ, ಅದೊಂದು ಮೈಲಿಗಲ್ಲು ಎನಿಸುವುದು ಸಹಜ. ಅಂತಹ 25ನೇ ಹೊಸ್ತಿಲಲ್ಲಿ ಇರುವ ಪ್ರೇಮ್‌, 25ನೇ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Categories
ಸಿನಿ ಸುದ್ದಿ

ಶೂಟಿಂಗ್‌ ಸೆಟ್‌ : ಕಳೆದುಕೊಂಡವರ ಮನೆಗಳಲ್ಲಿ ಬರೀ ನೋವು ಉಳಿಸಿ ಹೋಗುವ ಈ ಅವಘಡಗಳು ಆಗುತ್ತಿರುವುದಾದರೂ ಯಾಕೆ?

ಈಗಲೂ ಸಿನಿಮಾ ರಂಗ ಎಚ್ಚರಿಕೆ ವಹಿಸಿದಂತಿಲ್ಲ. ಆತುರವೋ, ಅಚಾತುರ್ಯವೋ, ಆವೇಶವೋ, ಅಬ್ಬರವೋ…. ಶೂಟಿಂಗ್‌ ಸೆಟ್‌ನಲ್ಲಿ ಅವಘಡಗಳು ನಡೆಯುತ್ತಲೇ ಇವೆ. ಎಚ್ಚರ ವಹಿಸಬೇಕಾದ ಕಡೆ ನಿರ್ಲಕ್ಷ್ಯ ತೋರುತ್ತಿರುವುದರ ಪರಿಣಾಮ ಅನಾಹುತಗಳು ನಡೆದು, ಅಮಾಯಕರು ಬಲಿಯಾಗುತ್ತಿರುವುದು ದುರಂತ. ಮೊನ್ನೆಯಷ್ಟೇ ಆಗಿರುವ ʼಲವ್‌ ಯು ರಚ್ಚುʼ ಚಿತ್ರದ ದುರಂತ ಕೂಡ ಇದರಿಂದ ಹೊರತಲ್ಲ. ಸಾಹಸ ದೃಶ್ಯದ ಸನ್ನಿವೇಶದಲ್ಲಿ ಒಬ್ಬ ಫೈಟರ್‌ ಸಾವನ್ನಪ್ಪಿದ್ದರೆ, ಇನ್ನೊಬ್ಬ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಮತ್ತೊಂದೆಡೆ ನಿರ್ಮಾಪಕ ಕೆ.ಮಂಜು ನಿರ್ಮಾಣದ ʼರಾಣಾʼ ಚಿತ್ರದ ಚಿತ್ರೀಕರಣದ ವೇಳೆಯೂ ಒಂದು ಅವಘಡ ನಡೆದು ಹೋಗಿದೆ. ಒಬ್ಬ ಛಾಯಾಗ್ರಾಹಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೆಲ್ಲ ಆಕಸ್ಮಿಕವಾಗಿಯೇ ನಡೆದು ಹೋದರೂ, ಚಿತ್ರೀಕರಣಕ್ಕೆ ವಹಿಸಬೇಕಾದ ಎಚ್ಚರ ತಪ್ಪಿದ್ದೇ ಇದಕ್ಕೆ ಕಾರಣ ಅನ್ನೋದು ಅಷ್ಟೇ ಸತ್ಯ.

ಯಾಕೆ ಹಾಗೆ ? ಹಾಗೆ ನೋಡಿದರೆ ಕನ್ನಡ ಚಿತ್ರೋದ್ಯಮಕ್ಕೆ ʼಮಾಸ್ತಿಗುಡಿʼ ದುರಂತ ದೊಡ್ಡ ಪಾಠ ಆಗಬೇಕಿತ್ತು. ಸಾಹಸ ನಿರ್ದೇಶಕ ತೋರಿದ ವೈಫ ಲ್ಯದ ಪರಿಣಾಮ ಇಬ್ಬರು ನಟರು ಕಣ್ಣೇದುರೆ ಸಾವು ಕಂಡರು. ಅಲ್ಲಿಂದ ಏನಾ ಯ್ತು ಅನ್ನೋದೆಲ್ಲ ಉದ್ಯಮಕ್ಕೆ ಗೊತ್ತೇ ಇದೆ. ಅಲ್ಲಿ ಸ್ಟಂಟ್‌ ಮಾಸ್ಟರ್‌ ತೋರಿದ ನಿರ್ಲಕ್ಷ್ಯಕ್ಕೆ ನಿರ್ಮಾಪಕರು, ನಿರ್ದೇಶಕರ ಜತೆಗೆ ಕಲವಿದರು ಕೂಡ ಅದರ ನೋವು ಅನುಭವಿಸಬೇಕಾಗಿ ಬಂತು. ಇಷ್ಟಾಗಿ ಯೂ ಚಿತ್ರೋದ್ಯಮ ಪಾಠ ಕಲಿತಿಲ್ಲ ಅಂದ್ರೆ ಏನನ್ನಬೇಕೋ ಗೊತ್ತಿಲ್ಲ. ಹಾಗಂತ ಯಾರೇನು ಇಲ್ಲಿ ಬೇಕಂತ ಮಾಡುತ್ತಿಲ್ಲ. ಯಾರಿಗೂ ಈ ಅವಘ ಡಗಳು ಬೇಕಾಗಿಲ್ಲ. ಸುಸೂತ್ರವಾಗಿ ನಡೆಯುವ ಚಿತ್ರೀಕರಣ ಗಳೆಲ್ಲಿ ಇನ್ನೇನು ತೊಂದರೆ ತಂದುಕೊಂಡು ವಿನಾಕರಣ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಪರಿಸ್ಥಿತಿ ಕೂಡ ಯಾರಿಗೂ ಬೇಕಿಲ್ಲ. ಇಷ್ಟಾಗಿಯೂ ಇಂತ ಹ ದುರಂತ ನಡೆದಾಗ ಯಾರನ್ನು ಹೊಣೆಗಾರರನ್ನಾಗಿ ಮಾಡ ಬೇಕು?

ʼಲವ್‌ ಯೂ ರಚ್ಚುʼ ದುರಂತದಲ್ಲೀಗ ಚಿತ್ರದ ನಿರ್ಮಾಪಕರು, ನಿರ್ದೇಶಕರು ಹಾಗೂ ಸಾಹಸ ನಿರ್ದೇಶಕರು ಹೊಣೆಗಾರರಾಗಿದ್ದಾರೆ. ಮಾಡಿದ ತಪ್ಪಿಗೆ ಅವರೇನೋ,ಮಡಿದ ವ್ಯಕ್ತಿಯ ಕುಟಂಬಕ್ಕೆ ಒಂದಷ್ಟು ಪರಿಹಾರ ನೀಡಬಹುದು, ಇಲ್ಲವೇ ಕಾನೂನಿನಡಿ ಒಂದಷ್ಟು ಶಿಕ್ಷಿಗೂ ಗುರಿಯಾಗಬಹುದು, ಆದರೆ ಯಾರದೋ ನಿರ್ಲಕ್ಷ್ಯ ವಿನಾಕಾರಣ ಸತ್ತು ಹೋದ ವ್ಯಕ್ತಿ ಮತ್ತೆ ಬರುತ್ತಾನೆಯೇ? ಸಿನಿಮಾ ಶೂಟಿಂಗ್‌ ಈಗ ತೀರಾ ಆತುರಕ್ಕೆ ನಡೆಯುತ್ತಿವೆ. ಎಷ್ಟೋ ನಿರ್ಮಾಪಕರು ನಿಗದಿ ಮಾಡಿಕೊಂಡ ಶೆಡ್ಯೂಲ್‌ ಗಿಂತ ಮುಂಚೆಯೇ ಶೂಟಿಂಗ್‌ ಮುಗಿಸಿ ಅಂತ ನಿರ್ದೇಶಕರ ಮೇಲೆ ಒತ್ತಡ ಹಾಕುವ ಕಾರಣಕ್ಕೆ ಹಗಲು-ರಾತ್ರಿ ಶೂಟಿಂಗ್‌ ನಡೆದ ಉದಾಹರಣೆಗಳು ಸಾಕಷ್ಟಿವೆ. ಈ ರೀತಿಯ ಅವಸರಗಳು ಕೂಡ ಶೂಟಿಂಗ್‌ ಸೆಟ್‌ ನಲ್ಲಿ ಅವಘಡ ಸಂಭವಿಸುವುದಕ್ಕೂ ಕಾರಣ.

Categories
ಸಿನಿ ಸುದ್ದಿ

ಮತ್ತೆ ರಂಗೇರಿತ್ತಲ್ಲ ದೊಡ್ಮನೆ ಅಖಾಡ; ಕಿರುತೆರೆ ಸೂಪರ್‌ ಸ್ಟಾರ್ಸ್ ಎಂಟ್ರಿಗೆ ಶಾಕ್ ಆಯ್ತು ಬಿಗ್ಬಾಸ್ !

ಶಾಕ್ ಆಯ್ತಾ…ಶಾಕ್ ಆಗ್ಲೆಬೇಕು ಅಂತ ತಾನೇ ಕಲರ್ಸ್ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಇಂತಹದ್ದೊಂದು ಪ್ಲ್ಯಾನ್ ಮಾಡಿದ್ದು. ಸೈಲೆಂಟಾಗಿ ಮಾಡಿದ ಆ ಮೆಗಾ ಪ್ಲ್ಯಾನ್ ಈ ಮಟ್ಟಿಗೆ ಸುದ್ದಿಸದ್ದು ಮಾಡ್ತಿರುವುದು. ಯಸ್, ಪರಂ ಮಾಡಿದ ಮಾಸ್ಟರ್‌ ಪ್ಲ್ಯಾನ್‌ಗೆ ಕಲರ್ಸ್ ಕನ್ನಡದ ಪ್ರೇಕ್ಷಕರು, ಬಿಗ್ಬಾಸ್ ರಿಯಾಲಿಟಿ ಶೋನ ವೀಕ್ಷಕರು ಮಾತ್ರವಲ್ಲ ಸ್ವತಃ ದೊಡ್ಮನೆ ಅಖಾಡವೇ ಶಾಕ್ ಆಗಿದೆ. ಸೀಸನ್ 8ರ ಗ್ರ್ಯಾಂಡ್ ಫಿನಾಲೆ ಮುಗೀತು ಇನ್ನೇನು ನನ್ನ ಅರಮನೆಗೆ ಬೀಗ ಹಾಕ್ತಾರೆ ಅಂತ ಬೇಸರದಲ್ಲಿದ್ದ ಬಿಗ್ಬಾಸ್ ಅರಮನೆ ಈಗ ಕೇಕೆ ಹಾಕಿಕೊಂಡು ಕುಣಿದಾಡ್ತಿದೆ. ಇಡೀ ಕರ್ನಾಟಕದ ಕಿರುತೆರೆಯ ಪ್ರೇಕ್ಷಕ ಮಹಾಷಯರು ಮತ್ತೆ ತನ್ನತ್ತ ತಿರುತಿರುಗಿ ನೋಡುತ್ತಾರಲ್ಲ ಅಷ್ಟು ಸಾಕು ಎನ್ನುತ್ತಿದೆ ಬಿಗ್ಬಾಸ್ ಮನೆ.

ಪ್ರತಿದಿನ ಒಂಭತ್ತು ಗಂಟೆ ಆದರೆ ಸಾಕು ಬಿಗ್ಬಾಸ್ ಬಿಗ್ಬಾಸ್' ಎನ್ನುವ ಜಿಂಗಲ್ ಮನೆಯ ಪಡಸಾಲೆಯಲ್ಲಿ ರಿಂಗಣಿಸುತ್ತಿತ್ತು. ಮದುವಣಗಿತ್ತಿಯಂತೆ ಸಿಂಗಾರಗೊಂಡ ಅರಮನೆಯನ್ನು ಕಿರುತೆರೆ ಪ್ರೇಕ್ಷಕರು ಕಣ್ಣರಳಿಸಿ ನೋಡ್ತಿದ್ದರು. ಸ್ಪರ್ಧಿಗಳ ನೀಡುವ ಮನರಂಜನೆಗೆ ಮನಸ್ಸು ಒಡ್ಡುತ್ತಿದ್ದರು. ವೀಕೆಂಡ್‌ನಲ್ಲಂತೂ ಬಿಗ್ಬಾಸ್ ಹವಾ ಜೋರಾಗಿರುತ್ತಿತ್ತು. ಅದಕ್ಕೆ ಕಾರಣ ಆಲ್ ಇಂಡಿಯಾ ಕಟೌಟ್ ಕಿಚ್ಚ ಎನ್ನುವುದು ಇಡೀ ಕರ್ನಾಟಕಕ್ಕೆ ಗೊತ್ತು. ಹೀಗೆ, ವೀಕೆಂಡ್‌ನಲ್ಲಿ ಹುಚ್ಚೆಬ್ಬಿಸುತ್ತಿದ್ದ ಬಿಗ್‌ಬಾಸ್ ಶೋ ಮುಗೀತು, ಮನರಂಜನೆಗೆ ಕೊರತೆಯಾಯ್ತು ಎನ್ನುವಷ್ಟರಲ್ಲಿ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಪ್ಲ್ಯಾನ್ ಮಾಡಿದ್ದಾರೆ. 100 ದಿನದ ಬದಲಾಗಿ ಆರು ದಿನದಬಿಗ್ಬಾಸ್ ಫ್ಯಾಮಿಲಿ’ ಕಿರುಸೀಸನ್ ಆರಂಭಿಸಿದ್ದಾರೆ. ಕಲರ್ಸ್ ಕುಟುಂಬದ ಹದಿನೈದು ಮಂದಿ ಕಲಾವಿದರು ದೊಡ್ಮನೆ ಪ್ರವೇಶಿಸಿದ್ದಾರೆ. ಈಗಾಗಲೇ ಇದರ ಪ್ರೋಮೋ ಕೂಡ ರಿಲೀಸ್ ಆಗಿದ್ದು ಕೂತೂಹಲ ಗರಿಗೆದರುವಂತೆ ಮಾಡಿದೆ.

ಕಲರ್ಸ್ ಕುಟುಂಬದ ಸೂಪರ್‌ ಸ್ಟಾರ್ಸ್ ಗಳನ್ನು ನೋಡಿ ಬಿಗ್ಬಾಸ್ ಮನೆ ಖುಷಿಯಾಗಿದೆ, ದೊಡ್ಮನೆ ಅಂಗಳಕ್ಕೆ ಕಾಲಿಡುವ ಸೌಭಾಗ್ಯ ಸಿಕ್ಕವರು ಸಂತೋಷದಲ್ಲಿದ್ದಾರೆ. ಬಿಗ್ಬಾಸ್ ಸೀಸನ್ ೮ ಅದ್ದೂರಿಯಾಗಿ ಅಂತ್ಯಗೊಂಡ ಬೆನ್ನಲ್ಲೇ `ಬಿಗ್ಬಾಸ್ ಫ್ಯಾಮಿಲಿ’ ಶೋ ಆರಂಭಗೊಂಡಿರುವುದನ್ನು ಕಂಡು ಟಿವಿ ವೀಕ್ಷಕರು ಕೂಡ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ಆರು ದಿನದ ಬಿಗ್ಬಾಸ್ ಫ್ಯಾಮಿಲಿ ಕಾರ್ಯಕ್ರಮ ಹೇಗಿರಬಹುದು ಅಂತ ಲೆಕ್ಕಚ್ಚಾರ ಶುರುವಿಟ್ಟುಕೊಂಡಿದ್ದಾರೆ. ದೊಡ್ಮನೆ ಅಖಾಡಕ್ಕೆ ಗ್ರ್ಯಾಂಡ್ ಎಂಟ್ರಿಕೊಟ್ಟಿರುವ ಕಿರುತೆರೆ ಸೂಪರ್‌ಸ್ಟರ‍್ಸ್ಗಳಿಗೆ ಉಘೇ ಉಘೇ ಎನ್ನುತ್ತಿರುವ ವೀಕ್ಷಕ ಮಹಾಪ್ರಭುಗಳು ಹದಿನೈದು ಮಂದಿ ಕಂಟೆಸ್ಟೆಂಟ್‌ಗೆ ಗುಡ್ ಲಕ್ ಹೇಳ್ತಿದ್ದಾರೆ.

ಬಿಗ್ಬಾಸ್ ಸೀಸನ್ 2ರ ವಿನ್ನರ್ ಅಕುಲ್ ಬಾಲಾಜಿ ಮತ್ತೆ ದೊಡ್ಮನೆಗೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾರೆ. ಕನ್ನಡತಿ ಧಾರಾವಾಹಿ ಖ್ಯಾತಿಯ ಕಿರಣ್ ರಾಜ್, ಗಿಣಿರಾಮ ಸೀರಿಯಲ್ ಕೋಸ್ಟಾರ್ಸ್ ಗೀತಾ ಸೀರಿಯಲ್ ಜೋಡಿ, ನನ್ನರಸಿ ರಾಧೆ ಧಾರಾವಾಹಿಯ ಅಗಸ್ತ್ಯ ಹಾಗೂ ಇಂಚರ, ಪದ್ಮಾವತಿಯ ಸೀರಿಯಲ್ ಹೀರೋ, ಮಂಗಳಗೌರಿ ಸೀರಿಯಲ್‌ನ ಕಥಾನಾಯಕ ರಾಜೀವ್, ಮಜಾಭಾರತದ ಸುಂದರಿ ಸೇರಿದಂತೆ ಈಗಾಗಲೇ ಬಿಗ್ಬಾಸ್ ಅಂಗಳಕ್ಕೆ ಬಂದುಹೋಗಿದ್ದ ನಿರಂಜನ್ ದೇಶ್‌ಪಾಂಡೆ ಕೂಡ ಈಗ ಬಿಗ್ಬಾಸ್ ಫ್ಯಾಮಿಲಿ'ಗೆ ಜೊತೆಯಾಗಿದ್ದಾರೆ. ಒಟ್ಟು ಹದಿನೈದು ಜನ ಕಲರ್ಸ್ ಕನ್ನಡದ ಸ್ಪರ್ಧಿಗಳು ದೊಡ್ಮನೆ ಅಖಾಡಕ್ಕೆ ಜಿಗಿದಿದ್ದಾರೆ.

ಒಂದು ವಾರದ ಮಟ್ಟಿಗೆ ನಡೆಯುವ ಶೋಗೆ ರಂಗುತುಂಬಿ ಕರುನಾಡ ಜನರನ್ನು ಮನರಂಜಿಸೋಕೆ ಮನಸ್ಸು ಮಾಡಿದ್ದಾರೆ. ವಿವಿಧ ರೀತಿಯ ಟಾಸ್ಕ್ ಗಳಿರಲಿದ್ದು, ಹದಿನೈದು ಜನ ಸ್ಪರ್ಧಿಗಳ ನಡುವೆ ಪೈಪೋಟಿ ನಡೆಯಲಿದೆ. ಗೆದ್ದವರಿಗೆಬಿಗ್‌ಬಾಸ್ ಫ್ಯಾಮಿಲಿ ಅವಾರ್ಡ್’ ಸಿಗಲಿದೆ. ಶನಿವಾರ ಹಾಗೂ ಭಾನುವಾರ ಸಂಜೆ ೪ಗಂಟೆಗೆ ಕಾರ್ಯಕ್ರಮ ಪ್ರಸಾರ ಆಗಲಿದೆ.
ವೀಕೆಂಡ್‌ನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿರುವುದರಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರೇ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆನ್ನುವ ಕೂತೂಹಲ ಮನೆಮಾಡಿದೆ. ಆ ಕೌತುಕಕ್ಕೆ ಹಾಗೂ
`ಬಿಗ್‌ಬಾಸ್ ಫ್ಯಾಮಿಲಿ ಅವಾರ್ಡ್’ ವಿನ್ನರ್ ಯಾರು ಎನ್ನುವ ಪ್ರಶ್ನೆಗೆ ವಾರಾಂತ್ಯದಲ್ಲಿ ಉತ್ತರ ಸಿಗಲಿದೆ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಮೂಕನಾಯಕ ಚಿತ್ರಕ್ಕೆ ದಶಕದ ಅತ್ಯುತ್ತಮ ಚಿತ್ರ ಪ್ರಶಸ್ತಿ; ಇದು ಬರಗೂರು ರಾಮಚಂದ್ರಪ್ಪ ನಿರ್ದೇಶನದ ಸಿನಿಮಾ

ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶನದ “ಮೂಕನಾಯಕ” ಸಿನಿಮಾಗೆ ಮತ್ತೊಂದು ಪ್ರಶಸ್ತಿ ಲಭಿಸಿದೆ. ನೋಯ್ಡಾದ ಅಂತರರಾಷ್ಟ್ರೀಯ ಸಿನಿಮಾ ಸ್ಪರ್ಧೆಯಲ್ಲಿ ದಶಕದ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ. ಹೌದು, ಕಳೆದ 2017 ರಲ್ಲಿ ಈ ಚಿತ್ರವನ್ನು ಮಾಡಲಾಗಿತ್ತು. ಬಾಲರಾಜ್‌ ಅವರ ನಿರ್ಮಾಣದ ಈ ಚಿತ್ರವನ್ನು ಬರಗೂರು ರಾಮಚಂದ್ರಪ್ಪ ಕಥೆ, ಚಿತ್ರಕಥೆ, ಸಂಭಾಷಣೆಯೊಂದಿಗೆ ನಿರ್ದೇಶಿಸಿದ್ದರು. ನೋಯ್ಡಾದ ಸಂಸ್ಥೆಯೊಂದು ಇನ್‌ಕ್ರೆಡಿಬಲ್‌ ಸಿನಿ ಅವಾರ್ಡ್ಸ್‌ಗಾಗಿ ಹತ್ತು ವರ್ಷಗಳ ಒಳಗೆ ನಿರ್ಮಾಣಗೊಂಡ ವಿಶ್ವದ ಎಲ್ಲಾ ಭಾಷೆಯ ಚಿತ್ರಗಳನ್ನೂ ಆಹ್ವಾನಿಸಿತ್ತು. “ಮೂಕ ನಾಯಕ” ಚಿತ್ರವನ್ನೂ ಸ್ಪರ್ಧೆಗೆ ಕಳಿಸಲಾಗಿತ್ತು. ಪ್ರವೇಶ ಪಡೆದ ಚಿತ್ರಗಳಲ್ಲಿ ಆಯ್ದ ಚಿತ್ರಗಳನ್ನು ವಿವಿಧ ವಿಭಾಗಗಳ ಸ್ಪರ್ಧೆಗೆ ನಾಮ ನಿರ್ದೇಶನ ಮಾಡಲಾಗಿತ್ತು. ಹೀಗೆ ನಾಮ ನಿರ್ದೇಶನಗೊಂಡ “ಮೂಕ ನಾಯಕ” ಚಿತ್ರವು ವಿಶ್ವದ ವಿವಿಧ ಭಾಷೆಗಳ ನಾಮ ನಿರ್ದೇಶಿತ ಚಿತ್ರಗಳೊಂದಿಗೆ ಸ್ಪರ್ಧಿಸಿ, ದಶಕದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜವಾಗಿದೆ.

ಮಾತು ಬಾರದ ಮೂಕ ಚಿತ್ರಕಲಾವಿದರ ಆಶಯ ಮತ್ತು ಅಭಿವ್ಯಕ್ತಿ ವಿನ್ಯಾಸವನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಚಿತ್ರವು ಚಿತ್ರಕಲೆಯ ವಿವಿಧ ಸಾಧ್ಯತೆಗಳನ್ನು ಸಾದರಪಡಿಸಿದೆ. ಸಮುದಾಯದತ್ತ ಸಿನಿಮಾ ಎಂಬ ಪರಿಕಲ್ಪನೆಯಡಿಯಲಿ ಚಿತ್ರಯಾತ್ರೆ ನಡೆಸಿ, ಈಗಾಗಲೇ ಅನೇಕ ಊರುಗಳಲ್ಲಿ ಈ ಚಿತ್ರ ಪ್ರದರ್ಶನ ಮಾಡಲಾಗಿದೆ. ಈ ಹಿಂದೆ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲೂ ಈ ಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು.

ಮೂಕ ಚಿತ್ರ ಕಲಾವಿದನ ಪಾತ್ರದಲ್ಲಿ ಗೋವಿಂದ್‌ ನಟಿಸಿದ್ದು, ಸೋದರಿ ಪಾತ್ರದಲ್ಲಿ “ಸ್ಪರ್ಶ” ರೇಖಾ ನಟಿಸಿದ್ದರು. ಅವರ ಪಾತ್ರಕ್ಕೆ ರಾಜ್ಯ ಸರ್ಕಾರದ ಉತ್ತಮ ಪೋಷಕ ನಟಿ ಪ್ರಶಸ್ತಿಯೂ ಸಿಕ್ಕಿತ್ತು. ಚಿತ್ರದಲ್ಲಿ ಸುಂದರರಾಜ್‌, ಯತಿರಾಜ್‌, ಶೀತಲ್‌ ಶೆಟ್ಟಿ, ವೆಂಕಟರಾಜ್‌ ಇತರರು ಇದ್ದಾರೆ. ನಾಗರಾಜ ಆದವಾನಿ ಛಾಯಾಗ್ರಹಣವಿದೆ. ಸುರೇಶ್‌ ಅರಸು ಸಂಕಲನವಿದೆ. ಶಮಿತಾ ಮಲ್ನಾಡ್‌ ಸಂಗೀತವಿದೆ.

Categories
ಸಿನಿ ಸುದ್ದಿ

ಕನ್ನಡ ಕಲರ್ಸ್‌ನಲ್ಲಿ ಮತ್ತೆ ಎದೆ ತುಂಬಿ ಹಾಡುವೆನು… ಇದೇ 14ರಿಂದ ಶುರು

ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಡುತ್ತಿದ್ದ ಜನಪ್ರಿಯ ಕಾರ್ಯಕ್ರಮ “ಎದೆ ತುಂಬಿ ಹಾಡುವೆನು” ಈಗ ಮತ್ತೆ ಅವರ ನೆನಪಲ್ಲಿ ಶುರುವಾಗುತ್ತಿದೆ.
ಈ ಕುರಿತಂತೆ ಕಲರ್ಸ್ ಕನ್ನಡದ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ಒಂದಷ್ಟು ಮಾಹಿತಿ ನೀಡಿದ್ದಾರೆ.
“ನಾನು ಮೂರು ವರ್ಷಗಳ ಹಿಂದೆ ಚೆನ್ನೈ ನಲ್ಲಿ ಎಸ್. ಪಿ. ಬಿ. ಅವರನ್ನು ಭೇಟಿ ಮಾಡಿ, “ಎದೆ ತುಂಬಿ ಹಾಡುವೆನು” ಕಾರ್ಯಕ್ರಮವನ್ನು ಪುನಃ ಆರಂಭಿಸೋಣ ಎಂದು ಕೇಳಿದ್ದೆ. ಆಗ ಅವರು ನನ್ನ ಶೆಡ್ಯುಲ್ ನೋಡಿ ತಿಳಿಸುತ್ತೀನಿ ಅಂದರು. ಆನಂತರ ಅವರಿಂದ ನನಗೊಂದು ಕಾಗದ ಬಂತು. ನನ್ನ ಬೇರೆ ಕಾರ್ಯಕ್ರಮಗಳು ಈಗಾಗಲೇ ನಿಗದಿಯಾಗಿರುವುದರಿಂದ 2019 ರಲ್ಲಿ “ಎದೆ ತುಂಬಿ ಹಾಡುವೆನು” ಕಾರ್ಯಕ್ರಮ ಆರಂಭಿಸೋಣ ಅಂತ ಬರೆದಿದ್ದರು.


ನಂತರ ಕಾರ್ಯಕ್ರಮದ ರೂಪುರೇಷೆ ಸಿದ್ದಗೊಂಡು, ಆರಂಭ ಮಾಡೋಣ ಅಂದುಕೊಳ್ಳುತ್ತಿರುವಾಗ “ಕೊರೊನಾ” ಶುರುವಾಯಿತು. ನಂತರದ ದಿನಗಳಲ್ಲಿ ಎಸ್ ಪಿ ಬಿ ನಮ್ಮಿಂದ ದೂರವಾದರು.
ಈಗ ಅವರ ನೆನಪಲ್ಲಿ ಈ ಕಾರ್ಯಕ್ರಮ ಇದೇ ಆಗಸ್ಟ್ 14 ರಿಂದ ಆರಂಭವಾಗಲಿದೆ. ರಾಜೇಶ್ ಕೃಷ್ಣನ್, ವಿ.ಹರಿಕೃಷ್ಣ ಹಾಗೂ ರಘು ದೀಕ್ಷಿತ್ ಈ ಕಾರ್ಯಕ್ರಮದ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ತೀರ್ಪುಗಾರರಾಗಿ ಎಸ್ ಪಿ ಬಿ ಅವರ ಪುತ್ರ ಎಸ್ ಪಿ ಚರಣ್ ಇರಲಿದ್ದಾರೆ.
ಈಗಾಗಲೇ ಆಡಿಷನ್ ಮೂಲಕ ಹದಿನಾರರಿಂದ, ಹದಿನೆಂಟು ಗಾಯಕರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ಕೊಟ್ಟರು ಪರಮೇಶ್ವರ ಗುಂಡ್ಕಲ್.

ತೀರ್ಪುಗಾರರಾಗಿರುವ ರಘು ದೀಕ್ಷಿತ್‌, “ನಾನು ಚಿಕ್ಕವನಾಗಿದಾಗ ನಮ್ಮಮ್ಮ ರೆಡಿಯೋ ಹಾಕಿದ ತಕ್ಷಣ ಎಸ್ ಪಿ ಬಿ ಅವರ ಹಾಡು ಬರುತಿತ್ತು. ಆಗಿನಿಂದ ಅವರ ಕಂಠಕ್ಕೆ ಅಭಿಮಾನಿ ನಾನು. ಅಂತಹ ಮಹಾನ್ ಗಾಯಕ ನಡೆಸುಕೊಡುತ್ತಿದ್ದ ಕಾರ್ಯಕ್ರಮಕ್ಕೆ ನೀವು ತೀರ್ಪುಗಾರರಾಗಬೇಕು ಎಂದು ಪರಮೇಶ್ವರ್ ಅವರು ಹೇಳಿದಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ ಎಂಬುದು ರಘು ದೀಕ್ಷಿತ್ ಮಾತು.

ಎಸ್ ಪಿ ಬಿ ಅವರ ಮಾನಸ ಪುತ್ರರೆಂದೇ ಖ್ಯಾತರಾಗಿರುವ ರಾಜೇಶ್ ಕೃಷ್ಣನ್, “ಈ ಕಾರ್ಯಕ್ರಮವನ್ನು ಎಸ್ ಪಿ ಬಿ ಅವರೆ ನಮ್ಮಲ್ಲಿ ನಿಂತು ನಡೆಸಿಕೊಡುತ್ತಾರೆ. ಅವರಿಂದ ನಾವು ತಿಳಿದುಕೊಂಡದ್ದನ್ನು, ಈಗಿನ ಗಾಯಕರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ.
ನಾನು ಹಂಸಲೇಖ ಅವರ ಬಳಿ ಟ್ರ್ಯಾಕ್ ಹಾಡುವ ಕಾಲದಲ್ಲಿ ನಾನು ಎಸ್ ಪಿ ಬಿ ಅವರು ಇಲ್ಲಿಗೆ ಬಂದಾಗ ತುಂಬಾ ಹತ್ತಿರದಿಂದ ನೋಡಿದವನು ನಾನು ಅವರು ನೀನು ಏಕೆ ನನ್ನ ಹಾಗೆ ಹಾಡುತ್ತೀಯಾ? ಎಂದು ಕೇಳಿದ್ದು ಉಂಟು..‌ ಅವರು ನನ್ನ ಮೇಲಿಟ್ಟಿದ ಪ್ರೀತಿ ಅಪಾರ. ಹೀಗೆ ಎಸ್ ಪಿ ಬಿ ಅವರೊಂದಿಗಿನ ಒಡನಾಟವನ್ನು ರಾಜೇಶ್ ಕೃಷ್ಣನ್ ನೆನಪಿಸಿಕೊಂಡರು.

ಕೆಲವು ವರ್ಷಗಳ ಹಿಂದೆ ಭಾನುವಾರ ರಾಮಾಯಣ ಹಾಗೂ ಮಹಾಭಾರತ ಎಂಬ ಎರಡು ಮಹಾನ್ ಧಾರಾವಾಹಿಗಳು ದೂರದರ್ಶನದಲ್ಲಿ ಬರುತ್ತಿದ್ದವು.‌ ಕೋಟ್ಯಾಂತರ ಜನ ಅದನ್ನು ವೀಕ್ಷಿಸುತ್ತಿದ್ದರು. ಆನಂತರ ಅಷ್ಟೇ ಜನಪ್ರಿಯವಾಗಿದ್ದು “ಎದೆ ತುಂಬಿ ಹಾಡುವೆನು”.‌ ನಾನು ಈಗ ಅವರು ನಡೆಸಿಕೊಡುತ್ತಿದ್ದ ಕಾರ್ಯಕ್ರಮದ ವಿಟಿ ನೋಡಿದಾಗ ಭಯವಾಗುತ್ತಿದೆ.
ಅಲ್ಲಿ ಬರುವ ಹೊಸ ಗಾಯಕರಿಗಿಂತ ನಾವು ತಿಳಿದುಕೊಳ್ಳುವುದು ಸಾಕಷ್ಟಿದೆ. ತೀರ್ಪುಗಾರರಾಗಿ ಎಸ್ ಪಿ ಬಿ ಅವರು ಕಾರ್ಯಕ್ರಮ ನಡೆಸಿಕೊಡುತ್ತಿದ್ದ ರೀತಿ ಅನುಕರಣೀಯ. ಅವರ ಹೆಸರಿಗೆ ತೊಂದರೆಯಾಗದಂತೆ ಕಾರ್ಯಕ್ರಮ ನಡೆಸಿಕೊಡುವುದು ನಮ್ಮ ಕರ್ತವ್ಯ ಎಂದರು ವಿ.ಹರಿಕೃಷ್ಣ.

ಅಪ್ಪನ ನೇತೃತ್ವದಲ್ಲಿ ಮೂಡಿಬರುತ್ತಿದ್ದ, ” ಎದೆ ತುಂಬಿ ಹಾಡುವೆನು” ಕಾರ್ಯಕ್ರಮವನ್ನು ಮತ್ತೆ ಆರಂಭಿಸುತ್ತಿರುವುದಕ್ಕೆ. ಕಲರ್ಸ್ ವಾಹಿನಿಗೆ ಧನ್ಯವಾದ ಎಂದರು ಎಸ್ ಪಿ ಬಿ ಪುತ್ರ ಎಸ್ ಪಿ ಚರಣ್.
ರಾಮೋಜಿರಾವ್ ಅವರು ತೆಲುಗಿನಲ್ಲಿ “ಪಾಡುತ ತಿಯಗ” ಎಂಬ ಕಾರ್ಯಕ್ರಮ ನಡೆಸುತ್ತಿದ್ದರು. ಆ‌ನಂತರ ಅಪ್ಪ ಈ ಕಾರ್ಯಕ್ರಮವನ್ನು ಕನ್ನಡದಲ್ಲಿ “ಎದೆ ತುಂಬಿ ಹಾಡುವೆನು” ಎಂಬ ಶೀರ್ಷಿಕೆಯಿಂದ ಆರಂಭಿಸಿದರು. ಕಾರ್ಯಕ್ರಮ ಅತ್ಯಂತ ಜನಪ್ರಿಯವೂ ಆಯಿತು.
ಈ ಟಿವಿ ಅವರು ಈ ಕಾರ್ಯಕ್ರಮ ನಿಲಿಸಿದಾಗ ಅಪ್ಪನಿಗೆ ಬೇಸರವಾಗಿದ್ದು ಉಂಟು. ತೆಲುಗು, ಕನ್ನಡದಲ್ಲಿ ಜನಪ್ರಿಯವಾಗಿದ್ದ ಈ ಕಾರ್ಯಕ್ರಮವನ್ನು ತಮಿಳಿನಲ್ಲಿ ಮಾಡಲಿಲ್ಲ ಎಂಬ ಕೊರಗು ಅಪ್ಪನಲ್ಲಿತ್ತು ಎಂದರು ಚರಣ್.


ನಮ್ಮ ಬಾಲ್ಯದಲ್ಲಿ ಅಪ್ಪನೊಂದಿಗೆ ಹೆಚ್ಚು ಸಮಯ ಕಳೆಯಲಿಲ್ಲ.. ಅಪ್ಪ ಯಾವಗಲೂ ಬ್ಯುಸಿ ಇರುತ್ತಿದ್ದರು.
ನನ್ನ ಕಿರಿಯ ಸಹೋದರನಂತಿರುವ ರಾಜೇಶ್ ಕೃಷ್ಣನ್ ಅಪ್ಪನೊಂದಿಗೆ ಸಾಕಷ್ಟು ಸಮಯ ಕಳೆದಿದ್ದಾರೆ ಎಂದು ಚರಣ್ ಹಿಂದಿನ ದಿನಗಳನ್ನು ಮೆಲಕು ಹಾಕಿದರು.

Categories
ಸಿನಿ ಸುದ್ದಿ

ಕೆಜಿಎಫ್ ಸುಂದರಿ ಅರೆಸ್ಟ್ ; ಸ್ವಿಮ್ ಸೂಟ್ ನಲ್ಲೇ ಸೀಜ್- ಬಂಧಿಸಿದ್ದು ಪೋಲಿಸರಲ್ಲ !

ಕೆಜಿಎಫ್ ಸುಂದರಿ ಅರೆಸ್ಟ್ ಅಂದಾಕ್ಷಣ ಅರೆಕ್ಷಣ ಶಾಕ್ ಆಗೋದು ಸತ್ಯ. ಚಿನ್ನದ ಸಾಮ್ರಾಜ್ಯದ ಯುವರಾಣಿ ಕಣ್ಮುಂದೆ ಬರೋದು ಖಚಿತ. ಆದರೆ ಇದು ಕಥಾನಾಯಕಿಯ ಕಥೆಯಲ್ಲ ಸೆಲ್ಫ್ ಮೇಡ್ ಷೆಹಜಾದ್ ಜೊತೆ ಕುಣಿದು ಕುಪ್ಪಳಿಸಿದ ಸೆಕ್ಸಿ ಗರ್ಲ್ ಸ್ಟೋರಿ.

ಯಾರಪ್ಪ ಆ ಮಾದಕ ಮದನಾರಿ ಅಂತೀರಾ? ಮತ್ಯಾರು ಅಲ್ಲಾರ್ರೀ ಕೆಜಿಎಫ್ ಚಾಪ್ಟರ್ 1 ಹಿಂದಿ ಅವತರಣಿಕೆಯ ‘ಗಲಿ‌ ಗಲಿ ಮೇ’ ಸ್ಪೆಷಲ್ ಸಾಂಗ್ ನಲ್ಲಿ ರಾಕಿಭಾಯ್ ಜೊತೆ ಲೆಗ್ ಶೇಕ್ ಮಾಡುತ್ತಾ, ಕಣ್ಣಲ್ಲೇ ಕಥಕ್ಕಳಿ ಆಡಿದ ಮನಮೋಹಕ ಬೆಡಗಿ ಮೌನಿರಾಯ್.

ಸರ್ರೀ ಎಲ್ಲಾ ಓಕೆ, ಕೆಜಿಎಫ್ ಸುಂದರಿ ಅರೆಸ್ಟ್ ಅಂದರಲ್ಲ ಅದರ ಬಗ್ಗೆ ಕ್ಲ್ಯಾರಿಟಿ‌ ಕೊಡಿ ಎನ್ನುವವರಿಗೆ ಉತ್ತರ ಕೊಡ್ಲೆಬೇಕು ಕೊಡ್ತೀವಿ. ಹೆಡ್ಡಿಂಗ್ ನಲ್ಲೇ ಕೆಜಿಎಫ್ ಸುಂದರಿನಾ ಅರೆಸ್ಟ್ ಮಾಡಿದ್ದು ಪೊಲೀಸರಲ್ಲ ಅಂತ ಹೇಳಿಬಿಟ್ಟಿದ್ದೇವೆ.ಹಾಗಾದ್ರೆ ಮತ್ತಿನ್ಯಾರು ಎನ್ನುವ ಕೌತುಕದ ಪ್ರಶ್ನೆಗೆ ಉತ್ತರ ಪಡ್ಡೆಹೈಕ್ಳು ಹಾಗೂ ಫ್ಯಾನ್ ಫಾಲೋಯರ್ಸ್.

ಬಿಟೌನ್ ಹಾಟ್ ಬ್ಯೂಟಿ, ಸ್ಟ್ರಾಬೆರಿಯಷ್ಟೇ ಸೊಗಸಾದ ಸ್ವೀಟಿ ಮೌನಿರಾಯ್ ಗೆ ಕೋಟಿಗಟ್ಟಲೇ ಫ್ಯಾನ್ಸ್ ಇದ್ದಾರೆ. ಮಾದಕ ಮೈಮಾಟದಿಂದ ಮಾತ್ರವಲ್ಲ ಮಜ್ಬೂತ್ ಅಭಿನಯದ ಮೂಲಕವೂ ಮೌನಿ ಚಿತ್ರ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. ಇತ್ತೀಚೆಗೆ ಟೂ ಪೀಸ್ ಹಾಕಿಕೊಂಡು, ಫೋಟೋಶೂಟ್ ಮಾಡಿಸೋಣವೆಂದು ಸ್ವಿಮ್ಮಿಂಗ್ ಫುಲ್ ಗಿಳಿದ ಮೌನಿ ಫ್ಯಾನ್ಸ್ ಫಾಲೋಯರ್ಸ್ ಹಾರ್ಟ್ನ ಬ್ರೇಕ್ ಮಾಡಿದರು. ಇದರ ಬೆನ್ನಲ್ಲೇ ಪಡ್ಡೆಹೈಕ್ಳು ಮೌನಿಯನ್ನ ಕೆಂಪಾದ ಹೃದಯದ ಲಾಕಪ್ ನಲ್ಲಿ ಬಂಧಿಸಿಬಿಟ್ಟರು. ಅರೆಸ್ಟ್ ಆದ ಮೌನಿ ಕೇಕೆಹಾಕಿದರು.

ನಟ- ನಟಿಯರನ್ನ ಅಭಿಮಾನಿ ದೇವರುಗಳು‌ ತಮ್ಮ ಹೃದಯ ಸಿಂಹಾಸನದಲ್ಲಿ ಬಂಧಿಸಿಕೊಂಡು ಪೂಜೆ ಮಾಡ್ತಾರೆ. ಅದರಂತೇ, ಮೌನಿರಾಯ್ ನ ಕೂಡ ಅವರ ಫ್ಯಾನ್ಸ್ ಫಾಲೋಯರ್ಸ್ ಅಭಿಮಾನಿಸುತ್ತಾರೆ. ಈ ಮಧ್ಯೆ ಪಡ್ಡೆಹೈಕ್ಳು ಆಗಾಗ ಮಾದಕ ನಟಿಯರನ್ನ ಅರೆಸ್ಟ್ ಮಾಡುತ್ತಲೇ ಇರುತ್ತಾರೆ. ವೆದರ್ ಕೈಕೊಟ್ಟಾಗ ಹಾಗೂ ಚಳಿಗಾಲ ಬಂದಾಗ ಸೆಕ್ಸಿಬೊಂಬೆಗಳನ್ನು ಕಣ್ತುಂಬಿಕೊಂಡು ಮೈಮನಸ್ಸನ್ನು ತಂಪುಮಾಡಿಕೊಳ್ತಾರೆ. ಹೀಗ್ ಮಾಡೋದು ಪಡ್ಡೆಹೈಕ್ಳ ತಪ್ಪಲ್ಲ ಸೃಷ್ಠಿಕರ್ತ ಬ್ರಹ್ಮನದ್ದೇ ತಪ್ಪು ತಪ್ಪು ತಪ್ಪು

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಚಿತ್ರೋತ್ಸವದ ಹಣ ದುರುಪಯೋಗದ ಆರೋಪ : ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ವಿರುದ್ಧ ದೂರು

ಸರ್ಕಾರದ ಹಣ ದುರುಪಯೋಗದ ಆರೋಪದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ವಿರುದ್ಧ ನಿರ್ಮಾಪಕ ಹಾಗೂ ನಿರ್ದೇಶಕ ಮದನ್‌ ಪಟೇಲ್‌ ಅವರು ಭ್ರಷ್ಟಚಾರ ನಿಗ್ರಹ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ತಗಲು ಖರ್ಚು ವೆಚ್ಚಗಳ ಕುರಿತು ವಿಧಾನ ಪರಿಷತ್‌ ಸದಸ್ಯ ಮೋಹನಗ ಕೊಂಡಜ್ಜಿ ಪರಿಷತ್‌ ಸಭೆ ಯಲ್ಲಿ ಪ್ರಸ್ತಾಪಿಸಿ, ಅದಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕಿನಡಿ ಪಡೆ ದಾಖಲೆಗಳನ್ನು ಉಲ್ಲೇಖಿಸಿ ಮದನ್‌ ಪಟೇಲ್‌ ದೂರು ನೀಡಿದ್ದು, ಹಾಲಿ ಅಧ್ಯಕ್ಷರಾದ ಸುನೀಲ್‌ ಪುರಾಣಿಕ್‌ ಅವರು ಭಾರೀ ಪ್ರಮಾಣದಲ್ಲಿ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಸಂಬಂಧ ಸರಿಯಾದ ತನಿಖೆ ನಡೆಯಬೇಕೆಂದು ಮನವಿ ಮಾಡಿದ್ದಾರೆ.

error: Content is protected !!