ಮತ್ತೆ ರಂಗೇರಿತ್ತಲ್ಲ ದೊಡ್ಮನೆ ಅಖಾಡ; ಕಿರುತೆರೆ ಸೂಪರ್‌ ಸ್ಟಾರ್ಸ್ ಎಂಟ್ರಿಗೆ ಶಾಕ್ ಆಯ್ತು ಬಿಗ್ಬಾಸ್ !

ಶಾಕ್ ಆಯ್ತಾ…ಶಾಕ್ ಆಗ್ಲೆಬೇಕು ಅಂತ ತಾನೇ ಕಲರ್ಸ್ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಇಂತಹದ್ದೊಂದು ಪ್ಲ್ಯಾನ್ ಮಾಡಿದ್ದು. ಸೈಲೆಂಟಾಗಿ ಮಾಡಿದ ಆ ಮೆಗಾ ಪ್ಲ್ಯಾನ್ ಈ ಮಟ್ಟಿಗೆ ಸುದ್ದಿಸದ್ದು ಮಾಡ್ತಿರುವುದು. ಯಸ್, ಪರಂ ಮಾಡಿದ ಮಾಸ್ಟರ್‌ ಪ್ಲ್ಯಾನ್‌ಗೆ ಕಲರ್ಸ್ ಕನ್ನಡದ ಪ್ರೇಕ್ಷಕರು, ಬಿಗ್ಬಾಸ್ ರಿಯಾಲಿಟಿ ಶೋನ ವೀಕ್ಷಕರು ಮಾತ್ರವಲ್ಲ ಸ್ವತಃ ದೊಡ್ಮನೆ ಅಖಾಡವೇ ಶಾಕ್ ಆಗಿದೆ. ಸೀಸನ್ 8ರ ಗ್ರ್ಯಾಂಡ್ ಫಿನಾಲೆ ಮುಗೀತು ಇನ್ನೇನು ನನ್ನ ಅರಮನೆಗೆ ಬೀಗ ಹಾಕ್ತಾರೆ ಅಂತ ಬೇಸರದಲ್ಲಿದ್ದ ಬಿಗ್ಬಾಸ್ ಅರಮನೆ ಈಗ ಕೇಕೆ ಹಾಕಿಕೊಂಡು ಕುಣಿದಾಡ್ತಿದೆ. ಇಡೀ ಕರ್ನಾಟಕದ ಕಿರುತೆರೆಯ ಪ್ರೇಕ್ಷಕ ಮಹಾಷಯರು ಮತ್ತೆ ತನ್ನತ್ತ ತಿರುತಿರುಗಿ ನೋಡುತ್ತಾರಲ್ಲ ಅಷ್ಟು ಸಾಕು ಎನ್ನುತ್ತಿದೆ ಬಿಗ್ಬಾಸ್ ಮನೆ.

ಪ್ರತಿದಿನ ಒಂಭತ್ತು ಗಂಟೆ ಆದರೆ ಸಾಕು ಬಿಗ್ಬಾಸ್ ಬಿಗ್ಬಾಸ್' ಎನ್ನುವ ಜಿಂಗಲ್ ಮನೆಯ ಪಡಸಾಲೆಯಲ್ಲಿ ರಿಂಗಣಿಸುತ್ತಿತ್ತು. ಮದುವಣಗಿತ್ತಿಯಂತೆ ಸಿಂಗಾರಗೊಂಡ ಅರಮನೆಯನ್ನು ಕಿರುತೆರೆ ಪ್ರೇಕ್ಷಕರು ಕಣ್ಣರಳಿಸಿ ನೋಡ್ತಿದ್ದರು. ಸ್ಪರ್ಧಿಗಳ ನೀಡುವ ಮನರಂಜನೆಗೆ ಮನಸ್ಸು ಒಡ್ಡುತ್ತಿದ್ದರು. ವೀಕೆಂಡ್‌ನಲ್ಲಂತೂ ಬಿಗ್ಬಾಸ್ ಹವಾ ಜೋರಾಗಿರುತ್ತಿತ್ತು. ಅದಕ್ಕೆ ಕಾರಣ ಆಲ್ ಇಂಡಿಯಾ ಕಟೌಟ್ ಕಿಚ್ಚ ಎನ್ನುವುದು ಇಡೀ ಕರ್ನಾಟಕಕ್ಕೆ ಗೊತ್ತು. ಹೀಗೆ, ವೀಕೆಂಡ್‌ನಲ್ಲಿ ಹುಚ್ಚೆಬ್ಬಿಸುತ್ತಿದ್ದ ಬಿಗ್‌ಬಾಸ್ ಶೋ ಮುಗೀತು, ಮನರಂಜನೆಗೆ ಕೊರತೆಯಾಯ್ತು ಎನ್ನುವಷ್ಟರಲ್ಲಿ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಪ್ಲ್ಯಾನ್ ಮಾಡಿದ್ದಾರೆ. 100 ದಿನದ ಬದಲಾಗಿ ಆರು ದಿನದಬಿಗ್ಬಾಸ್ ಫ್ಯಾಮಿಲಿ’ ಕಿರುಸೀಸನ್ ಆರಂಭಿಸಿದ್ದಾರೆ. ಕಲರ್ಸ್ ಕುಟುಂಬದ ಹದಿನೈದು ಮಂದಿ ಕಲಾವಿದರು ದೊಡ್ಮನೆ ಪ್ರವೇಶಿಸಿದ್ದಾರೆ. ಈಗಾಗಲೇ ಇದರ ಪ್ರೋಮೋ ಕೂಡ ರಿಲೀಸ್ ಆಗಿದ್ದು ಕೂತೂಹಲ ಗರಿಗೆದರುವಂತೆ ಮಾಡಿದೆ.

ಕಲರ್ಸ್ ಕುಟುಂಬದ ಸೂಪರ್‌ ಸ್ಟಾರ್ಸ್ ಗಳನ್ನು ನೋಡಿ ಬಿಗ್ಬಾಸ್ ಮನೆ ಖುಷಿಯಾಗಿದೆ, ದೊಡ್ಮನೆ ಅಂಗಳಕ್ಕೆ ಕಾಲಿಡುವ ಸೌಭಾಗ್ಯ ಸಿಕ್ಕವರು ಸಂತೋಷದಲ್ಲಿದ್ದಾರೆ. ಬಿಗ್ಬಾಸ್ ಸೀಸನ್ ೮ ಅದ್ದೂರಿಯಾಗಿ ಅಂತ್ಯಗೊಂಡ ಬೆನ್ನಲ್ಲೇ `ಬಿಗ್ಬಾಸ್ ಫ್ಯಾಮಿಲಿ’ ಶೋ ಆರಂಭಗೊಂಡಿರುವುದನ್ನು ಕಂಡು ಟಿವಿ ವೀಕ್ಷಕರು ಕೂಡ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ಆರು ದಿನದ ಬಿಗ್ಬಾಸ್ ಫ್ಯಾಮಿಲಿ ಕಾರ್ಯಕ್ರಮ ಹೇಗಿರಬಹುದು ಅಂತ ಲೆಕ್ಕಚ್ಚಾರ ಶುರುವಿಟ್ಟುಕೊಂಡಿದ್ದಾರೆ. ದೊಡ್ಮನೆ ಅಖಾಡಕ್ಕೆ ಗ್ರ್ಯಾಂಡ್ ಎಂಟ್ರಿಕೊಟ್ಟಿರುವ ಕಿರುತೆರೆ ಸೂಪರ್‌ಸ್ಟರ‍್ಸ್ಗಳಿಗೆ ಉಘೇ ಉಘೇ ಎನ್ನುತ್ತಿರುವ ವೀಕ್ಷಕ ಮಹಾಪ್ರಭುಗಳು ಹದಿನೈದು ಮಂದಿ ಕಂಟೆಸ್ಟೆಂಟ್‌ಗೆ ಗುಡ್ ಲಕ್ ಹೇಳ್ತಿದ್ದಾರೆ.

ಬಿಗ್ಬಾಸ್ ಸೀಸನ್ 2ರ ವಿನ್ನರ್ ಅಕುಲ್ ಬಾಲಾಜಿ ಮತ್ತೆ ದೊಡ್ಮನೆಗೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾರೆ. ಕನ್ನಡತಿ ಧಾರಾವಾಹಿ ಖ್ಯಾತಿಯ ಕಿರಣ್ ರಾಜ್, ಗಿಣಿರಾಮ ಸೀರಿಯಲ್ ಕೋಸ್ಟಾರ್ಸ್ ಗೀತಾ ಸೀರಿಯಲ್ ಜೋಡಿ, ನನ್ನರಸಿ ರಾಧೆ ಧಾರಾವಾಹಿಯ ಅಗಸ್ತ್ಯ ಹಾಗೂ ಇಂಚರ, ಪದ್ಮಾವತಿಯ ಸೀರಿಯಲ್ ಹೀರೋ, ಮಂಗಳಗೌರಿ ಸೀರಿಯಲ್‌ನ ಕಥಾನಾಯಕ ರಾಜೀವ್, ಮಜಾಭಾರತದ ಸುಂದರಿ ಸೇರಿದಂತೆ ಈಗಾಗಲೇ ಬಿಗ್ಬಾಸ್ ಅಂಗಳಕ್ಕೆ ಬಂದುಹೋಗಿದ್ದ ನಿರಂಜನ್ ದೇಶ್‌ಪಾಂಡೆ ಕೂಡ ಈಗ ಬಿಗ್ಬಾಸ್ ಫ್ಯಾಮಿಲಿ'ಗೆ ಜೊತೆಯಾಗಿದ್ದಾರೆ. ಒಟ್ಟು ಹದಿನೈದು ಜನ ಕಲರ್ಸ್ ಕನ್ನಡದ ಸ್ಪರ್ಧಿಗಳು ದೊಡ್ಮನೆ ಅಖಾಡಕ್ಕೆ ಜಿಗಿದಿದ್ದಾರೆ.

ಒಂದು ವಾರದ ಮಟ್ಟಿಗೆ ನಡೆಯುವ ಶೋಗೆ ರಂಗುತುಂಬಿ ಕರುನಾಡ ಜನರನ್ನು ಮನರಂಜಿಸೋಕೆ ಮನಸ್ಸು ಮಾಡಿದ್ದಾರೆ. ವಿವಿಧ ರೀತಿಯ ಟಾಸ್ಕ್ ಗಳಿರಲಿದ್ದು, ಹದಿನೈದು ಜನ ಸ್ಪರ್ಧಿಗಳ ನಡುವೆ ಪೈಪೋಟಿ ನಡೆಯಲಿದೆ. ಗೆದ್ದವರಿಗೆಬಿಗ್‌ಬಾಸ್ ಫ್ಯಾಮಿಲಿ ಅವಾರ್ಡ್’ ಸಿಗಲಿದೆ. ಶನಿವಾರ ಹಾಗೂ ಭಾನುವಾರ ಸಂಜೆ ೪ಗಂಟೆಗೆ ಕಾರ್ಯಕ್ರಮ ಪ್ರಸಾರ ಆಗಲಿದೆ.
ವೀಕೆಂಡ್‌ನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿರುವುದರಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರೇ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆನ್ನುವ ಕೂತೂಹಲ ಮನೆಮಾಡಿದೆ. ಆ ಕೌತುಕಕ್ಕೆ ಹಾಗೂ
`ಬಿಗ್‌ಬಾಸ್ ಫ್ಯಾಮಿಲಿ ಅವಾರ್ಡ್’ ವಿನ್ನರ್ ಯಾರು ಎನ್ನುವ ಪ್ರಶ್ನೆಗೆ ವಾರಾಂತ್ಯದಲ್ಲಿ ಉತ್ತರ ಸಿಗಲಿದೆ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!